Ashvamedhika Parva: Chapter 37

ಅಶ್ವಮೇಧಿಕ ಪರ್ವ

೩೭

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೧೭).

14037001 ಬ್ರಹ್ಮೋವಾಚ

14037001a ರಜೋಽಹಂ ವಃ ಪ್ರವಕ್ಷ್ಯಾಮಿ ಯಾಥಾತಥ್ಯೇನ ಸತ್ತಮಾಃ|

14037001c ನಿಬೋಧತ ಮಹಾಭಾಗಾ ಗುಣವೃತ್ತಂ ಚ ಸರ್ವಶಃ||

ಬ್ರಹ್ಮನು ಹೇಳಿದನು: “ಸತ್ತಮರೇ! ಮಹಾಭಾಗರೇ! ಈಗ ನಾನು ಯಥಾತಥ್ಯವಾಗಿ ರಜೋಗುಣದ ಕುರಿತಾದ ಎಲ್ಲ ಗುಣ-ವರ್ತನೆಗಳನ್ನೂ ಹೇಳುತ್ತೇನೆ. ಕೇಳಿರಿ.

14037002a ಸಂಘಾತೋ ರೂಪಮಾಯಾಸಃ ಸುಖದುಃಖೇ ಹಿಮಾತಪೌ|

14037002c ಐಶ್ವರ್ಯಂ ವಿಗ್ರಹಃ ಸಂಧಿರ್ಹೇತುವಾದೋಽರತಿಃ ಕ್ಷಮಾ||

14037003a ಬಲಂ ಶೌರ್ಯಂ ಮದೋ ರೋಷೋ ವ್ಯಾಯಾಮಕಲಹಾವಪಿ|

14037003c ಈರ್ಷ್ಯೇಪ್ಸಾ ಪೈಶುನಂ ಯುದ್ಧಂ ಮಮತ್ವಂ ಪರಿಪಾಲನಮ್||

14037004a ವಧಬಂಧಪರಿಕ್ಲೇಶಾಃ ಕ್ರಯೋ ವಿಕ್ರಯ ಏವ ಚ|

14037004c ನಿಕೃಂತ ಚಿಂಧಿ ಭಿಂಧೀತಿ ಪರಮರ್ಮಾವಕರ್ತನಮ್||

14037005a ಉಗ್ರಂ ದಾರುಣಮಾಕ್ರೋಶಃ ಪರವಿತ್ತಾನುಶಾಸನಮ್|

14037005c ಲೋಕಚಿಂತಾ ವಿಚಿಂತಾ ಚ ಮತ್ಸರಃ ಪರಿಭಾಷಣಮ್||

14037006a ಮೃಷಾವಾದೋ ಮೃಷಾದಾನಂ ವಿಕಲ್ಪಃ ಪರಿಭಾಷಣಮ್|

14037006c ನಿಂದಾ ಸ್ತುತಿಃ ಪ್ರಶಂಸಾ ಚ ಪ್ರತಾಪಃ ಪರಿತರ್ಪಣಮ್||

14037007a ಪರಿಚರ್ಯಾ ಚ ಶುಶ್ರೂಷಾ ಸೇವಾ ತೃಷ್ಣಾ ವ್ಯಪಾಶ್ರಯಃ|

HG14037007c ವ್ಯೂಹೋಽನಯಃ ಪ್ರಮಾದಶ್ಚ ಪರಿತಾಪಃ ಪರಿಗ್ರಹಃ||

ಸಂಘರ್ಷ, ರೂಪ, ಆಯಾಸ, ಸುಖ-ದುಃಖಗಳು, ಛಳಿ-ಬಿಸಿಲು, ಐಶ್ವರ್ಯ, ಕಲಹ, ಸಂಧಿ, ತರ್ಕ, ಅಪ್ರಸನ್ನತೆ, ಕ್ಷಮೆ, ಬಲ, ಶೌರ್ಯ, ಮದ, ರೋಷ, ವ್ಯಾಯಾಮ, ಈರ್ಷೆ, ಇಚ್ಛೆ, ಚಾಡಿ, ಯುದ್ಧ, ಮಮತೆ, ಕುಟುಂಬಪಾಲನೆ, ವಧೆ, ಬಂಧನ, ಕ್ಲೇಶ, ಕ್ರಯ-ವಿಕ್ರಯ, ಕತ್ತರಿಸುವುದು-ಒಡೆಯುವುದು-ಸೀಳುವುದು ಇತ್ಯಾದಿಗಳಿಂದ ಇತರರ ಮರ್ಮಸ್ಥಳಗಳನ್ನು ಭೇದಿಸುವುದು, ಉಗ್ರತೆ, ನಿಷ್ಠುರತೆ, ಕೂಗಾಟ, ಇತರರ ಸಂಪತ್ತನ್ನು ಕಸಿದುಕೊಳ್ಳುವುದು, ಲೋಕಚಿಂತೆ, ಪಶ್ಚಾತ್ತಾಪ, ಮತ್ಸರ, ತಿರಸ್ಕಾರಪೂರ್ವಕವಾಗಿ ಮಾತನಾಡುವುದು, ಕಠೋರವಾಗಿ ಮಾತನಾಡುವುದು, ಕೆಟ್ಟದ್ದನ್ನು ದಾನಮಾಡುವುದು, ಸಂಶಯಪೂರ್ಣವಾಗಿ ವಿಚಾರಮಾಡುವುದು, ನಿಂದೆ, ಸ್ತುತಿ, ಪ್ರಶಂಸೆ, ಪ್ರತಾಪ, ಇನ್ನೊಬ್ಬರನ್ನು ಸಂತೋಷಗೊಳಿಸುವುದು, ಪರಿಚರ್ಯೆ, ಶುಶ್ರೂಷೆ, ಸೇವೆ, ತೃಷ್ಣೆ, ಇತರರಿಗೆ ಆಶ್ರಯವನ್ನು ಕೊಡುವುದು, ವ್ಯವಹಾರ ಕುಶಲತೆ, ನೀತಿ, ಪ್ರಮಾದ, ತೆಗಳಿಕೆ, ಪರಿಗ್ರಹ ಇವೆಲ್ಲವೂ ರಜೋಗುಣದ ಕಾರ್ಯಗಳು.

14037008a ಸಂಸ್ಕಾರಾ ಯೇ ಚ ಲೋಕೇಽಸ್ಮಿನ್ಪ್ರವರ್ತಂತೇ ಪೃಥಕ್ಪೃಥಕ್|

14037008c ನೃಷು ನಾರೀಷು ಭೂತೇಷು ದ್ರವ್ಯೇಷು ಶರಣೇಷು ಚ||

ಈ ಲೋಕದಲ್ಲಿ ಸ್ತ್ರೀಯರು, ಪುರುಷರು, ಪ್ರಾಣಿಗಳು, ದ್ರವ್ಯಗಳು ಮತ್ತು ಗೃಹಗಳು ಇವುಗಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ನಡೆಯುವ ಸಂಸ್ಕಾರಗಳೆಲ್ಲವೂ ರಜೋಗುಣದ ಪ್ರೇರಣೆಯಿಂದಲೇ ಆಗುತ್ತದೆ.

14037009a ಸಂತಾಪೋಽಪ್ರತ್ಯಯಶ್ಚೈವ ವ್ರತಾನಿ ನಿಯಮಾಶ್ಚ ಯೇ|

14037009c ಪ್ರದಾನಮಾಶೀರ್ಯುಕ್ತಂ ಚ ಸತತಂ ಮೇ ಭವತ್ವಿತಿ||

14037010a ಸ್ವಧಾಕಾರೋ ನಮಸ್ಕಾರಃ ಸ್ವಾಹಾಕಾರೋ ವಷಟ್ಕ್ರಿಯಾ|

14037010c ಯಾಜನಾಧ್ಯಾಪನೇ ಚೋಭೇ ತಥೈವಾಹುಃ ಪರಿಗ್ರಹಮ್||

ಸಂತಾಪ, ಅವಿಶ್ವಾಸ, ವ್ರತ-ನಿಯಮಾದಿಗಳು, ಕಾಮ್ಯಕರ್ಮಗಳು, ಇಷ್ಟಾಪೂರ್ತಕರ್ಮಗಳು (ಬಾವಿ-ತಟಾಕ-ಕೆರೆಕಟ್ಟೆಗಳನ್ನು ನಿರ್ಮಿಸುವುದು, ಸಾಲುಮರಗಳನ್ನು ನೆಡುವುದು, ಮುಂತಾದ ಕರ್ಮಗಳು), ಸ್ವಧಾಕಾರ (ಪಿತೃಗಳಿಗೆ ಮಾಡುವ ಶ್ರಾದ್ಧಗಳು), ನಮಸ್ಕಾರ (ಅತಿಥಿ-ಬ್ರಾಹ್ಮಣರಿಗೆ ಮಾಡುವ ನಮಸ್ಕಾರ), ಸ್ವಾಹಾಕಾರ (ದೇವತೆಗಳಿಗೆ ಮಾಡುವ ಪೂಜೆ), ವಷಟ್ಕಾರ (ಯಜ್ಞ-ಯಾಗಾದಿಗಳು), ಯಜ್ಞಗಳನ್ನು ಮಾಡುವುದು ಮತ್ತು ಮಾಡಿಸುವುದು, ಅಧ್ಯಾಪನವನ್ನು ಮಾಡುವುದು ಮತ್ತು ಮಾಡಿಸುವುದು, ದಾನವನ್ನು ಕೊಡುವುದು ಮತ್ತು ತೆಗೆದುಕೊಳ್ಳುವುದು ಇವೆಲ್ಲವೂ ರಾಜಸಗುಣಗಳಿಂದ ಪ್ರೇರಿತವಾಗಿವೆ ಎಂದು ಹೇಳುತ್ತಾರೆ.

14037011a ಇದಂ ಮೇ ಸ್ಯಾದಿದಂ ಮೇ ಸ್ಯಾತ್ಸ್ನೇಹೋ ಗುಣಸಮುದ್ಭವಃ|

14037011c ಅಭಿದ್ರೋಹಸ್ತಥಾ ಮಾಯಾ ನಿಕೃತಿರ್ಮಾನ ಏವ ಚ||

14037012a ಸ್ತೈನ್ಯಂ ಹಿಂಸಾ ಪರೀವಾದಃ ಪರಿತಾಪಃ ಪ್ರಜಾಗರಃ|

14037012c ಸ್ತಂಭೋ ದಂಭೋಽಥ ರಾಗಶ್ಚ ಭಕ್ತಿಃ ಪ್ರೀತಿಃ ಪ್ರಮೋದನಮ್||

14037013a ದ್ಯೂತಂ ಚ ಜನವಾದಶ್ಚ ಸಂಬಂಧಾಃ ಸ್ತ್ರೀಕೃತಾಶ್ಚ ಯೇ|

14037013c ನೃತ್ತವಾದಿತ್ರಗೀತಾನಿ ಪ್ರಸಂಗಾ ಯೇ ಚ ಕೇ ಚನ|

14037013e ಸರ್ವ ಏತೇ ಗುಣಾ ವಿಪ್ರಾ ರಾಜಸಾಃ ಸಂಪ್ರಕೀರ್ತಿತಾಃ||

“ಇದು ನನಗಿರಲಿ, ಇದು ನನ್ನದಾಗಲಿ” ಎನ್ನುವ ವಸ್ತುಗಳ ಮೇಲಿನ ಆಸಕ್ತಿಯು ರಜೋಗುಣದಿಂದ ಉಂಟಾಗುತ್ತದೆ. ವಿಪ್ರರೇ! ದ್ರೋಹ, ಮೋಸ, ತಿರಸ್ಕಾರ, ಅಭಿಮಾನ, ಚೌರ್ಯ, ಹಿಂಸೆ, ವಾದ, ಪರಿತಾಪ, ನಿದ್ದೆಗೆಡುವುದು, ದಂಭ, ದರ್ಪ, ಅನುರಾಗ, ಭಕ್ತಿ, ಪ್ರೀತಿ, ಪ್ರಮೋದ, ದ್ಯೂತ, ಜನವಾದ, ಸ್ತ್ರೀಯರೊಡನೆ ಸಂಬಂಧ, ನೃತ್ಯ-ವಾದ್ಯ-ಗೀತೆಗಳಲ್ಲಿ ಆಸಕ್ತಿ ಈ ಎಲ್ಲವೂ ರಾಜಸ ಗುಣಗಳೆಂದು ಹೇಳಲ್ಪಟ್ಟಿವೆ.

14037014a ಭೂತಭವ್ಯಭವಿಷ್ಯಾಣಾಂ ಭಾವಾನಾಂ ಭುವಿ ಭಾವನಾಃ|

14037014c ತ್ರಿವರ್ಗನಿರತಾ ನಿತ್ಯಂ ಧರ್ಮೋಽರ್ಥಃ ಕಾಮ ಇತ್ಯಪಿ||

14037015a ಕಾಮವೃತ್ತಾಃ ಪ್ರಮೋದಂತೇ ಸರ್ವಕಾಮಸಮೃದ್ಧಿಭಿಃ|

14037015c ಅರ್ವಾಕ್ಸ್ರೋತಸ ಇತ್ಯೇತೇ ತೈಜಸಾ ರಜಸಾವೃತಾಃ||

ಈ ಪ್ರಪಂಚದಲ್ಲಿ ಹಿಂದಿನದು, ಈಗಿನದು ಮತ್ತು ಮುಂದಿನದರ ಕುರಿತು ಯೋಚಿಸುವವರು, ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳಲ್ಲಿ ನಿತ್ಯವೂ ನಿರತರಾಗಿರುವವರು, ಸ್ವೇಚ್ಛಾಚಾರಿಗಳಾಗಿ ಸಮಸ್ತ ಭೋಗಸಮೃದ್ಧಿಗಳಿಂದ ಆನಂದಪಡುವವರು ರಜೋಗುಣದಿಂದ ಆವೃತರಾದವರು. ಇವರನ್ನು ಅರ್ವಾಕ್ಸ್ರೋತಸರೆಂದು ಕರೆಯುತ್ತಾರೆ.

14037016a ಅಸ್ಮಿಽಲ್ಲೋಕೇ ಪ್ರಮೋದಂತೇ ಜಾಯಮಾನಾಃ ಪುನಃ ಪುನಃ|

14037016c ಪ್ರೇತ್ಯಭಾವಿಕಮೀಹಂತ ಇಹ ಲೌಕಿಕಮೇವ ಚ|

14037016e ದದತಿ ಪ್ರತಿಗೃಹ್ಣಂತಿ ಜಪಂತ್ಯಥ ಚ ಜುಹ್ವತಿ||

ಇಂಥವರು ಈ ಭೂಲೋಕದಲ್ಲಿಯೇ ಪುನಃ ಪುನಃ ಹುಟ್ಟುತ್ತಾ ವಿಷಯಜನಿತ ಆನಂದದಲ್ಲಿಯೇ ಮಗ್ನರಾಗಿರುತ್ತಾರೆ. ಈಗ ಮತ್ತು ಮರಣದ ನಂತರ ಸುಖವನ್ನು ಪಡೆಯಲು ಅನೇಕ ಲೌಕಿಕ ಕರ್ಮಗಳನ್ನು ಮಾಡುತ್ತಿರುತ್ತಾರೆ – ದಾನಗಳನ್ನು ಕೊಡುತ್ತಾರೆ, ತೆಗೆದುಕೊಳ್ಳುತ್ತಾರೆ, ಜಪಗಳನ್ನು ಮಾಡುತ್ತಾರೆ ಮತ್ತು ಯಜ್ಞ-ಯಾಗಾದಿಗಳನ್ನು ಮಾಡುತ್ತಿರುತ್ತಾರೆ.

14037017a ರಜೋಗುಣಾ ವೋ ಬಹುಧಾನುಕೀರ್ತಿತಾ

ಯಥಾವದುಕ್ತಂ ಗುಣವೃತ್ತಮೇವ ಚ|

14037017c ನರೋ ಹಿ ಯೋ ವೇದ ಗುಣಾನಿಮಾನ್ಸದಾ

ಸ ರಾಜಸೈಃ ಸರ್ವಗುಣೈರ್ವಿಮುಚ್ಯತೇ||

ರಜೋಗುಣದ ಅನೇಕ ಪ್ರಕಾರಗಳನ್ನು ಹೇಳಿದ್ದೇನೆ. ಆ ಗುಣದಿಂದ ಉಂಟಾಗುವ ಕಾರ್ಯ-ವರ್ತನೆಗಳನ್ನೂ ಹೇಳಿದ್ದೇನೆ. ರಾಜಸ ಗುಣಕ್ಕೆ ಸಂಬಂಧಿಸಿದ ಇವುಗಳನ್ನು ಸದಾ ತಿಳಿದುಕೊಂಡಿರುವ ನರನು ಸಕಲ ವಿಧವಾದ ರಾಜಸ ಗುಣಗಳಿಂದ ಬಿಡುಗಡೆಹೊಂದುತ್ತಾನೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಸಪ್ತತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಮೂವತ್ತೇಳನೇ ಅಧ್ಯಾಯವು.

Comments are closed.