Anushasana Parva: Chapter 13

ಅನುಶಾಸನ ಪರ್ವ: ದಾನಧರ್ಮ ಪರ್ವ

೧೩

ಶುಭ-ಅಶುಭ ಕರ್ಮಗಳು

ಲೋಕಯಾತ್ರೆಯಲ್ಲಿ ಹಿತವನ್ನು ಬಯಸುವವರು ಏನು ಮಾಡಬೇಕು ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಶುಭ-ಅಶುಭ ಕರ್ಮಗಳ ಕುರಿತು ಹೇಳಿದುದು (೧-೬).

13013001 ಯುಧಿಷ್ಠಿರ ಉವಾಚ|

13013001a ಕಿಂ ಕರ್ತವ್ಯಂ ಮನುಷ್ಯೇಣ ಲೋಕಯಾತ್ರಾಹಿತಾರ್ಥಿನಾ|

13013001c ಕಥಂ ವೈ ಲೋಕಯಾತ್ರಾಂ ತು ಕಿಂಶೀಲಶ್ಚ ಸಮಾಚರೇತ್||

ಯುಧಿಷ್ಠಿರನು ಹೇಳಿದನು: “ಲೋಕಯಾತ್ರೆಯಲ್ಲಿ ಹಿತವನ್ನು ಬಯಸುವ ಮನುಷ್ಯನು ಏನನ್ನು ಮಾಡಬೇಕು? ಅಂಥವನು ಲೋಕಯಾತ್ರೆಯನ್ನು ಹೇಗೆ ನಡೆಸಬೇಕು ಮತ್ತು ಯಾವ ಶೀಲವನ್ನು ಆಚರಿಸಬೇಕು?”

13013002 ಭೀಷ್ಮ ಉವಾಚ|

13013002a ಕಾಯೇನ ತ್ರಿವಿಧಂ ಕರ್ಮ ವಾಚಾ ಚಾಪಿ ಚತುರ್ವಿಧಮ್|

13013002c ಮನಸಾ ತ್ರಿವಿಧಂ ಚೈವ ದಶ ಕರ್ಮಪಥಾಂಸ್ತ್ಯಜೇತ್||

ಭೀಷ್ಮನು ಹೇಳಿದನು: “ಶಾರೀರಿಕವಾದ ಮೂರು ವಿಧದ ಕರ್ಮಗಳನ್ನೂ, ಮಾತಿನ ನಾಲ್ಕು ವಿಧದ ಕರ್ಮಗಳನ್ನೂ, ಮತ್ತು ಮನಸ್ಸಿನ ಮೂರು ವಿಧದ ಕರ್ಮಗಳನ್ನೂ – ಒಟ್ಟು ಈ ಹತ್ತು ಕರ್ಮಗಳನ್ನು ತ್ಯಜಿಸಬೇಕು.

13013003a ಪ್ರಾಣಾತಿಪಾತಂ ಸ್ತೈನ್ಯಂ ಚ ಪರದಾರಮಥಾಪಿ ಚ|

13013003c ತ್ರೀಣಿ ಪಾಪಾನಿ ಕಾಯೇನ ಸರ್ವತಃ ಪರಿವರ್ಜಯೇತ್||

ಪ್ರಾಣಿಗಳನ್ನು ಕೊಲ್ಲುವುದು, ಕದಿಯುವುದು ಮತ್ತು ಪರರ ಪತ್ನಿಯರ ಸಂಗಮಾಡುವುದು – ಈ ಮೂರು ಶರೀರಕ್ಕೆ ಸಂಬಂಧಿಸಿದ ಪಾಪಗಳನ್ನು ಸಂಪೂರ್ಣವಾಗಿ ಪರಿತ್ಯಜಿಸಬೇಕು.

13013004a ಅಸತ್ಪ್ರಲಾಪಂ ಪಾರುಷ್ಯಂ ಪೈಶುನ್ಯಮನೃತಂ ತಥಾ|

13013004c ಚತ್ವಾರಿ ವಾಚಾ ರಾಜೇಂದ್ರ ನ ಜಲ್ಪೇನ್ನಾನುಚಿಂತಯೇತ್||

ರಾಜೇಂದ್ರ! ಕೆಟ್ಟ, ಕಠೋರ, ಸುಳ್ಳು ಮತ್ತು ಚಾಡಿಯ ಮಾತುಗಳನ್ನಾಡುವುದು - ಈ ನಾಲ್ಕು ವಿಧದ ಮಾತುಗಳಿಂದ ಪಾಪಸಂಘಟನೆಯಾಗುತ್ತದೆ.

13013005a ಅನಭಿಧ್ಯಾ ಪರಸ್ವೇಷು ಸರ್ವಸತ್ತ್ವೇಷು ಸೌಹೃದಮ್|

13013005c ಕರ್ಮಣಾಂ ಫಲಮಸ್ತೀತಿ ತ್ರಿವಿಧಂ ಮನಸಾ ಚರೇತ್||

ಇತರರ ಮೇಲೆ ಸಂಚನ್ನು ಹೂಡದೇ ಇರುವುದು, ಸರ್ವ ಜೀವಿಗಳ ಕುರಿತು ಸ್ನೇಹಭಾವದಿಂದಿರುವುದು ಮತ್ತು ಕರ್ಮಗಳಿಗೆ ಫಲವಿದೆ ಎನ್ನುವುದನ್ನು ನಂಬುವುದು – ಈ ಮೂರು ಕರ್ಮಗಳನ್ನು ಮನಸಾ ಆಚರಿಸುತ್ತಿರಬೇಕು.

13013006a ತಸ್ಮಾದ್ವಾಕ್ಕಾಯಮನಸಾ ನಾಚರೇದಶುಭಂ ನರಃ|

13013006c ಶುಭಾಶುಭಾನ್ಯಾಚರನ್ ಹಿ ತಸ್ಯ ತಸ್ಯಾಶ್ನುತೇ ಫಲಮ್||

ಆದುದರಿಂದ ನರನು ಮಾತು-ಶರೀರ-ಮನುಸ್ಸುಗಳಲ್ಲಿ ಅಶುಭವಾದುದನ್ನು ಆಚರಿಸಬಾರದು. ಶುಭ-ಅಶುಭ ಕರ್ಮಗಳನ್ನು ಆಚರಿಸಿ ಅವುಗಳಿಗೆ ತಕ್ಕಂತಹ ಶುಭ-ಅಶುಭ ಫಲಗಳನ್ನು ಅನುಭವಿಸುತ್ತಾನೆ.”

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಲೋಕಯಾತ್ರಾಕಥನೇ ತ್ರಯೋದಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಲೋಕಯಾತ್ರಾಕಥನ ಎನ್ನುವ ಹದಿಮೂರನೇ ಅಧ್ಯಾಯವು.

Related image

Comments are closed.