ಶ್ರೀಪದ್ಮಮಹಾಪುರಾಣ: ಸೃಷ್ಟಿಖಂಡ ಅಧ್ಯಾಯ 1
ಪ್ರಯಾಗೇ ಷಟ್ಕುಲೀಯೈಶ್ಚ ಯಥಾ ಪೃಷ್ಟಸ್ಸ್ವಯಂ ಪ್ರಭುಃ । ಪೃಷ್ಟೇನ ಚಾರು ಶಾಸ್ತಾಸ್ತೇ ಮುನಯೋ ಧರ್ಮಕಾಂಕ್ಷಿಣಃ ।। 5 ।। ದೇಶಂ ಪುಣ್ಯಮಭೀಪ್ಸಂತೋ ವಿಭುನಾ ಚ ಹಿತೈಷಿಣಾ । ಸುನಾಭಂ ದಿವ್ಯರೂಪಂ ಚ ಸತ್ಯಗಂ ಶುಭವಿಕ್ರಮಮ್ ।। 6 ।। ಅನೌಪಮ್ಯಮಿದಂ ಚಕ್ರಂ ವರ್ತಮಾನಮತಂದ್ರಿತಾಃ । ಪೃಷ್ಠತೋ ಯಾತ ನಿಯಮಾತ್ಪದಂ ಪ್ರಾಪ್ಸ್ಯಥ ಯದ್ಧಿತಮ್ ।। 7 ।। ಗಚ್ಛತೋ ಧರ್ಮಚಕ್ರಸ್ಯ ಯತ್ರ ನೇಮಿರಶೀರ್ಯತ । ಪುಣ್ಯಸ್ಸ ದೇಶೋ ಮಂತವ್ಯ ಇತ್ಯುವಾಚ ಬೃಹಸ್ಪತಿಃ ।। 8 ।। ಉಕ್ತ್ವಾ ಚೈವಮೃಷೀನ್ಸರ್ವಾನದೃಶ್ಯತ್ವಮಗಾತ್ಪುನಃ । ಗಂಗಾವರ್ತಸಮಾಹಾರೋ ನೇಮಿರ್ಯತ್ರ ವ್ಯಶೀರ್ಯತ ।। 9 ।। ಈಜಿರೇ ದೀರ್ಘಸತ್ರೇಣ ಋಷಯೋ ನೈಮಿಷೇ ತದಾ ।
ಲೋಮಹರ್ಷಣನು ಹೇಳಿದನು: “ಪ್ರಯಾಗದಲ್ಲಿ ಷಟ್ಕುಲೀಯರು ಪ್ರಭು ಬೃಹಸ್ಪತಿಯನ್ನು ಕೇಳಿದರು. ಧರ್ಮಕಾಂಕ್ಷಿಗಳಾದ ಮುನಿಗಳು ಕೇಳಲು ಅವರಿಗೆ ಅವನು ಉಪದೇಶಿಸಿದನು. ಪುಣ್ಯಪ್ರದೇಶವನ್ನು ಬಯಸುತ್ತಿದ್ದ ಅವರಿಗೆ ಹಿತೈಷಿ ವಿಭುವು “ಗಟ್ಟಿಯಾದ ಅಚ್ಚುಳ್ಳ, ಚೆನ್ನಾಗಿರುವ, ಸತ್ಯ-ದಿಂದ ನಡೆಯುವ, ಒಳ್ಳೆಯ ಬಲವಿರುವ, ಅತ್ಯುತ್ತಮವಾದ ಚಕ್ರವನ್ನು ಜಾಗರೂಕತೆಯಿಂದ ಅನುಸರಿಸಿ ಹೋದರೆ ನಿಮಗೆ ಬೇಕಾದದ್ದು ಸಿಗುತ್ತದೆ. ಹೋಗುತ್ತಿರುವಾಗ ಈ ಧರ್ಮಚಕ್ರದ ಅಂಚು ಎಲ್ಲಿ ಹೂಳಿಕೊಳ್ಳುತ್ತದೆಯೋ ಆ ದೇಶವು ಪುಣ್ಯದೇಶವೆಂದು ತಿಳಿದುಕೊಳ್ಳಿ” ಎಂದು ಹೇಳಿ ಬೃಹಸ್ಪತಿಯು ಹೊರಟುಹೋದನು. ಗಂಗೆಯನ್ನೇ ಅನುಸರಿಸಿ ಬರುತ್ತ ಆ ಚಕ್ರದ ಅಂಚು ಅಲ್ಲೊಂದೆಡೆ ಹೂತುಕೊಂಡಿತು. ಅದೇ ನೈಮಿಷಾರಣ್ಯವು. ಆ ನೈಮಿಷಾರಣ್ಯದಲ್ಲಿ ಋಷಿಗಳು ಬಹುವರ್ಷಗಳ ಯಾಗವನ್ನು ಮಾಡಿದರು.”