ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೨೧೮
ನೀನೇ ಇಂದ್ರನಾಗೆಂದು ಶಕ್ರನು ಸ್ಕಂದನಿಗೆ ಹೇಳಲು ಅದಕ್ಕೆ ಒಪ್ಪಿಕೊಳ್ಳದೇ ತಾನು ಕಿಂಕರನೆಂದು ಸ್ಕಂದನು ಏನು ಮಾಡಬೇಕೆಂದು ಕೇಳಿದುದು (೧-೧೯). ಇಂದ್ರನು ಸ್ಕಂದನನ್ನು ದೇವಸೇನೆಯ ಅಧಿಪತಿಯನ್ನಾಗಿ ಅಭಿಷೇಕಿಸಿದ್ದುದು (೨೦-೪೯).
03218001 ಮಾರ್ಕಂಡೇಯ ಉವಾಚ|
03218001a ಉಪವಿಷ್ಟಂ ತತಃ ಸ್ಕಂದಂ ಹಿರಣ್ಯಕವಚಸ್ರಜಂ|
03218001c ಹಿರಣ್ಯಚೂಡಮುಕುಟಂ ಹಿರಣ್ಯಾಕ್ಷಂ ಮಹಾಪ್ರಭಂ||
03218002a ಲೋಹಿತಾಂಬರಸಂವೀತಂ ತೀಕ್ಷ್ಣದಂಷ್ಟ್ರಂ ಮನೋರಮಂ|
03218002c ಸರ್ವಲಕ್ಷಣಸಂಪನ್ನಂ ತ್ರೈಲೋಕ್ಯಸ್ಯಾಪಿ ಸುಪ್ರಿಯಂ||
ಮಾರ್ಕಂಡೇಯನು ಹೇಳಿದನು: “ಆಗ ಹಿರಣ್ಯಾಕ್ಷ, ಮಹಾಪ್ರಭ, ಕೆಂಪುವಸ್ತ್ರವನ್ನುಟ್ಟಿದ್ದ, ತೀಕ್ಷ್ಣದಂಷ್ಟ್ರ, ಮನೋರಮ, ಸರ್ವಲಕ್ಷಣಸಂಪನ್ನ, ತ್ರೈಲೋಕ್ಯಗಳಿಗೂ ಪ್ರಿಯನಾದ ಸ್ಕಂದನು ಬಂಗಾರದ ಕವಚವನ್ನು ಧರಿಸಿ, ಬಂಗಾರದ ಮುಕುಟವನ್ನು ಧರಿಸಿ ಕುಳಿತುಕೊಂಡನು.
03218003a ತತಸ್ತಂ ವರದಂ ಶೂರಂ ಯುವಾನಂ ಮೃಷ್ಟಕುಂಡಲಂ|
03218003c ಅಭಜತ್ಪದ್ಮರೂಪಾ ಶ್ರೀಃ ಸ್ವಯಮೇವ ಶರೀರಿಣೀ||
ಆಗ ಆ ವರದ, ಶೂರ, ಯುವಕ, ಮೃಷ್ಟಕುಂಡಲನನ್ನು ಪದ್ಮರೂಪಿ ಶ್ರೀಯು ಸ್ವಯಂ ಶರೀರವನ್ನು ತಳೆದು ಪ್ರೀತಿಸಿದಳು.
03218004a ಶ್ರಿಯಾ ಜುಷ್ಟಃ ಪೃಥುಯಶಾಃ ಸ ಕುಮಾರವರಸ್ತದಾ|
03218004c ನಿಷಣ್ಣೋ ದೃಶ್ಯತೇ ಭೂತೈಃ ಪೌರ್ಣಮಾಸ್ಯಾಂ ಯಥಾ ಶಶೀ||
ಶ್ರೀಯಿಂದ ಆರಿಸಲ್ಪಟ್ಟ ಆ ಯಶಸ್ವಿ ಕೋಮಲ ಕುಮಾರವರನು ಪೂರ್ಣಿಮೆಯ ಶಶಿಯಂತೆ ಭೂತಗಳಿಗೆ ಕಾಣಿಸಿದನು.
03218005a ಅಪೂಜಯನ್ಮಹಾತ್ಮಾನೋ ಬ್ರಾಹ್ಮಣಾಸ್ತಂ ಮಹಾಬಲಂ|
03218005c ಇದಮಾಹುಸ್ತದಾ ಚೈವ ಸ್ಕಂದಂ ತತ್ರ ಮಹರ್ಷಯಃ||
ಮಹಾತ್ಮ ಬ್ರಾಹ್ಮಣರು ಆ ಮಹಾಬಲನನ್ನು ಪೂಜಿಸಿದರು. ಅಲ್ಲಿದ್ದ ಮಹರ್ಷಿಗಳೂ ಕೂಡ ಸ್ಕಂದನನ್ನು ಈ ರೀತಿಯಲ್ಲಿ ಕರೆದರು:
03218006a ಹಿರಣ್ಯವರ್ಣ ಭದ್ರಂ ತೇ ಲೋಕಾನಾಂ ಶಂಕರೋ ಭವ|
03218006c ತ್ವಯಾ ಷಡ್ರಾತ್ರಜಾತೇನ ಸರ್ವೇ ಲೋಕಾ ವಶೀಕೃತಾಃ||
“ಹಿರಣ್ಯವರ್ಣ! ನಿನಗೆ ಮಂಗಳವಾಗಲಿ! ಲೋಕಗಳ ಶಂಕರನಾಗು. ಆರೇ ರಾತ್ರಿಗಳ ಹಿಂದೆ ಹುಟ್ಟಿದ್ದರೂ ಸರ್ವ ಲೋಕಗಳೂ ನಿನ್ನ ವಶವಾಗಿವೆ.
03218007a ಅಭಯಂ ಚ ಪುನರ್ದತ್ತಂ ತ್ವಯೈವೈಷಾಂ ಸುರೋತ್ತಮ|
03218007c ತಸ್ಮಾದಿಂದ್ರೋ ಭವಾನಸ್ತು ತ್ರೈಲೋಕ್ಯಸ್ಯಾಭಯಂಕರಃ||
ಆದುದರಿಂದ ನೀನು ಇಂದ್ರನಾಗಿ ಮೂರುಲೋಕಗಳಿಗೂ ಅಭಯವನ್ನು ನೀಡು. ಸುರೋತ್ತಮ! ಪುನಃ ಅಭಯವನ್ನಿತ್ತು ನಮ್ಮನ್ನು ಉಳಿಸು.”
03218008 ಸ್ಕಂದ ಉವಾಚ|
03218008a ಕಿಮಿಂದ್ರಃ ಸರ್ವಲೋಕಾನಾಂ ಕರೋತೀಹ ತಪೋಧನಾಃ|
03218008c ಕಥಂ ದೇವಗಣಾಂಶ್ಚೈವ ಪಾತಿ ನಿತ್ಯಂ ಸುರೇಶ್ವರಃ||
ಸ್ಕಂದನು ಹೇಳಿದನು: “ತಪೋಧನರೇ! ಇಂದ್ರನು ಸರ್ವಲೋಕಗಳಿಂದ ಏನು ಮಾಡುತ್ತಾನೆ? ಸುರೇಶ್ವರನು ದೇವಗಣಗಳನ್ನು ಹೇಗೆ ನಿತ್ಯವೂ ಪಾಲಿಸುತ್ತಾನೆ?”
03218009 ಋಷಯ ಊಚುಃ|
03218009a ಇಂದ್ರೋ ದಿಶತಿ ಭೂತಾನಾಂ ಬಲಂ ತೇಜಃ ಪ್ರಜಾಃ ಸುಖಂ|
03218009c ತುಷ್ಟಃ ಪ್ರಯಚ್ಚತಿ ತಥಾ ಸರ್ವಾನ್ದಾಯಾನ್ಸುರೇಶ್ವರಃ||
ಋಷಿಗಳು ಹೇಳಿದರು: “ಇಂದ್ರನು ಭೂತಗಳಿಗೆ ಬಲ, ತೇಜಸ್ಸು, ಮಕ್ಕಳು ಮತ್ತು ಸುಖವನ್ನು ನೀಡುತ್ತಾನೆ. ತೃಪ್ತಿಪಡಿಸಿದರೆ ಸುರೇಶ್ವರನು ಎಲ್ಲ ವರಗಳನ್ನೂ ನೀಡುತ್ತಾನೆ.
03218010a ದುರ್ವೃತ್ತಾನಾಂ ಸಂಹರತಿ ವೃತ್ತಸ್ಥಾನಾಂ ಪ್ರಯಚ್ಚತಿ|
03218010c ಅನುಶಾಸ್ತಿ ಚ ಭೂತಾನಿ ಕಾರ್ಯೇಷು ಬಲಸೂದನಃ||
ಕೆಟ್ಟಾಗಿ ನಡೆದುಕೊಳ್ಳುವವರನ್ನು ಸಂಹರಿಸುತ್ತಾನೆ; ಉತ್ತಮ ನಡತೆಯುಳ್ಳವರನ್ನು ಪಾಲಿಸುತ್ತಾನೆ. ಬಲಸೂದನನು ಇರುವವುಗಳಿಗೆ ಕಾರ್ಯವೇನೆಂದು ಅನುಶಾಸನ ಮಾಡುತ್ತಾನೆ.
03218011a ಅಸೂರ್ಯೇ ಚ ಭವೇತ್ಸೂರ್ಯಸ್ತಥಾಚಂದ್ರೇ ಚ ಚಂದ್ರಮಾಃ|
03218011c ಭವತ್ಯಗ್ನಿಶ್ಚ ವಾಯುಶ್ಚ ಪೃಥಿವ್ಯಾಪಶ್ಚ ಕಾರಣಿಃ|
ಸೂರ್ಯನಿಲ್ಲದಿರುವಾಗ ಸೂರ್ಯನಾಗುತ್ತಾನೆ; ಹಾಗೆಯೇ ಚಂದ್ರನಿಲ್ಲದಿರುವಾಗ ಚಂದ್ರನಾಗುತ್ತಾನೆ. ಅವನು ಅಗ್ನಿ, ವಾಯು, ಪೃಥ್ವಿ ಮತ್ತು ನೀರಿನ ಕಾರಣ.
03218012a ಏತದಿಂದ್ರೇಣ ಕರ್ತವ್ಯಮಿಂದ್ರೇ ಹಿ ವಿಪುಲಂ ಬಲಂ|
03218012c ತ್ವಂ ಚ ವೀರ ಬಲಶ್ರೇಷ್ಠಸ್ತಸ್ಮಾದಿಂದ್ರೋ ಭವಸ್ವ ನಃ||
ಇವು ಇಂದ್ರನ ಕರ್ತವ್ಯಗಳು. ಇಂದ್ರನು ವಿಪುಲ ಬಲಶಾಲಿ. ನೀನೂ ಕೂಡ ವೀರ, ಬಲಶ್ರೇಷ್ಠನಾಗಿದ್ದೀಯೆ. ಆದುದರಿಂದ ನೀನೇ ಇಂದ್ರನಾಗು.”
03218013 ಶಕ್ರ ಉವಾಚ|
03218013a ಭವಸ್ವೇಂದ್ರೋ ಮಹಾಬಾಹೋ ಸರ್ವೇಷಾಂ ನಃ ಸುಖಾವಹಃ|
03218013c ಅಭಿಷಿಚ್ಯಸ್ವ ಚೈವಾದ್ಯ ಪ್ರಾಪ್ತರೂಪೋಽಸಿ ಸತ್ತಮ||
ಶಕ್ರನು ಹೇಳಿದನು: “ಮಹಾಬಾಹೋ! ಇಂದ್ರನಾಗಿ ಎಲ್ಲರಿಗೂ ಸುಖವನ್ನು ನೀಡು. ಸತ್ತಮ! ಪ್ರಾಪ್ತರೂಪನಾಗಿದ್ದೀಯೆ! ಇಂದೇ ನಿನ್ನನ್ನು ಅಭಿಷೇಕಿಸುತ್ತೇವೆ.”
03218014 ಸ್ಕಂದ ಉವಾಚ|
03218014a ಶಾಧಿ ತ್ವಮೇವ ತ್ರೈಲೋಕ್ಯಮವ್ಯಗ್ರೋ ವಿಜಯೇ ರತಃ|
03218014c ಅಹಂ ತೇ ಕಿಂಕರಃ ಶಕ್ರ ನ ಮಮೇಂದ್ರತ್ವಮೀಪ್ಸಿತಂ||
ಸ್ಕಂದನು ಹೇಳಿದನು: “ಅವ್ಯಗ್ರನಾಗಿ ವಿಜಯರತನಾಗಿ ನೀನೇ ತ್ರೈಲೋಕ್ಯವನ್ನು ಶಾಸನಮಾಡು. ಶಕ್ರ! ನಾನು ನಿನ್ನ ಕಿಂಕರ. ನಿನ್ನ ಇಂದ್ರತ್ವವನ್ನು ನಾನು ಬಯಸುವುದಿಲ್ಲ.”
03218015 ಶಕ್ರ ಉವಾಚ|
03218015a ಬಲಂ ತವಾದ್ಭುತಂ ವೀರ ತ್ವಂ ದೇವಾನಾಮರೀಂ ಜಹಿ|
03218015c ಅವಜ್ಞಾಸ್ಯಂತಿ ಮಾಂ ಲೋಕಾ ವೀರ್ಯೇಣ ತವ ವಿಸ್ಮಿತಾಃ||
ಶಕ್ರನು ಹೇಳಿದನು: “ವೀರ! ನಿನ್ನ ಬಲವು ಅದ್ಭುತವಾದುದು. ನೀನು ದೇವತೆಗಳ ಶತ್ರುಗಳನ್ನು ಗೆಲ್ಲು. ನಿನ್ನ ವೀರ್ಯದಿಂದ ವಿಸ್ಮಿತರಾಗಿ ಲೋಕಗಳು ತಿಳಿಯದಂತಾಗಿವೆ.
03218016a ಇಂದ್ರತ್ವೇಽಪಿ ಸ್ಥಿತಂ ವೀರ ಬಲಹೀನಂ ಪರಾಜಿತಂ|
03218016c ಆವಯೋಶ್ಚ ಮಿಥೋ ಭೇದೇ ಪ್ರಯತಿಷ್ಯಂತ್ಯತಂದ್ರಿತಾಃ||
ನಾನು ಇಂದ್ರತ್ವವನ್ನು ಉಳಿಸಿಕೊಂಡಿದ್ದರೂ ವೀರ! ಬಲಹೀನನಾಗಿ ಸೋತಿದ್ದೇನೆ. ನನ್ನನ್ನು ಕೀಳಾಗಿ ಕಾಣುತ್ತಾರೆ ಮತ್ತು ನಮ್ಮೀರ್ವರಲ್ಲಿ ಭೇದಗಳನ್ನು ತರುತ್ತಾರೆ.
03218017a ಭೇದಿತೇ ಚ ತ್ವಯಿ ವಿಭೋ ಲೋಕೋ ದ್ವೈಧಮುಪೇಷ್ಯತಿ|
03218017c ದ್ವಿಧಾಭೂತೇಷು ಲೋಕೇಷು ನಿಶ್ಚಿತೇಷ್ವಾವಯೋಸ್ತಥಾ|
03218017e ವಿಗ್ರಹಃ ಸಂಪ್ರವರ್ತೇತ ಭೂತಭೇದಾನ್ಮಹಾಬಲ||
ವಿಭೋ! ನಮ್ಮನ್ನು ಬೇರ್ಪಡಿಸಿ ಲೋಕವು ಎರಡು ಪಂಗಡಗಳಾಗುತ್ತವೆ. ಮಹಾಬಲ! ಲೋಕಗಳು ಎರಡಾದಾಗ ಸ್ವಾಭಾವಿಕವಾಗಿಯೇ ಅವುಗಳ ಮಧ್ಯೆ ಮೊದಲಿನಂತೆ ಯುದ್ಧವು ನಿಶ್ಚಯವಾಗಿಯೂ ನಡೆಯುತ್ತದೆ.
03218018a ತತ್ರ ತ್ವಂ ಮಾಂ ರಣೇ ತಾತ ಯಥಾಶ್ರದ್ಧಂ ವಿಜೇಷ್ಯಸಿ|
03218018c ತಸ್ಮಾದಿಂದ್ರೋ ಭವಾನದ್ಯ ಭವಿತಾ ಮಾ ವಿಚಾರಯ||
ಮಗೂ! ಆಗ ಅಲ್ಲಿ ರಣದಲ್ಲಿ ನೀನು ನನ್ನನ್ನು ಯಥಾಶ್ರದ್ಧೆಯಿಂದ ಗೆಲ್ಲುತ್ತೀಯೆ ಮತ್ತು ನೀನೇ ಇಂದ್ರನಾಗುತ್ತೀಯೇ. ಆದುದರಿಂದ ವಿಚಾರಮಾಡದೇ ಇಂದೇ ನೀನು ಇಂದ್ರನಾಗು.”
03218019 ಸ್ಕಂದ ಉವಾಚ|
03218019a ತ್ವಮೇವ ರಾಜಾ ಭದ್ರಂ ತೇ ತ್ರೈಲೋಕ್ಯಸ್ಯ ಮಮೈವ ಚ|
03218019c ಕರೋಮಿ ಕಿಂ ಚ ತೇ ಶಕ್ರ ಶಾಸನಂ ತದ್ಬ್ರವೀಹಿ ಮೇ||
ಸ್ಕಂದನು ಹೇಳಿದನು: “ನೀನೇ ರಾಜ – ನನ್ನ ಮತ್ತು ತ್ರೈಲೋಕ್ಯದ! ನಿನಗೆ ಮಂಗಳವಾಗಲಿ! ಶಕ್ರ! ನಿನ್ನ ಶಾಸನದಂತೆ ನಾನೇನು ಮಾಡಬೇಕೆಂದು ನನಗೆ ಹೇಳು.”
03218020 ಶಕ್ರ ಉವಾಚ|
03218020a ಯದಿ ಸತ್ಯಮಿದಂ ವಾಕ್ಯಂ ನಿಶ್ಚಯಾದ್ಭಾಷಿತಂ ತ್ವಯಾ|
03218020c ಯದಿ ವಾ ಶಾಸನಂ ಸ್ಕಂದ ಕರ್ತುಮಿಚ್ಚಸಿ ಮೇ ಶೃಣು||
ಶಕ್ರನು ಹೇಳಿದನು: “ಒಂದುವೇಳೆ ನೀನು ನಿಶ್ಚಯದಿಂದ ಹೇಳಿದ ಈ ಮಾತುಗಳು ಸತ್ಯವಾದುದೇ ಆದರೆ ಮತ್ತು ಸ್ಕಂದ! ನನ್ನ ಆಜ್ಞೆಯಂತೆ ಮಾಡಬಯಸಿದರೆ ನನ್ನನ್ನು ಕೇಳು.
03218021a ಅಭಿಷಿಚ್ಯಸ್ವ ದೇವಾನಾಂ ಸೇನಾಪತ್ಯೇ ಮಹಾಬಲ|
03218021c ಅಹಮಿಂದ್ರೋ ಭವಿಷ್ಯಾಮಿ ತವ ವಾಕ್ಯಾನ್ಮಹಾಬಲ||
ಮಹಾಬಲ! ದೇವತೆಗಳ ಸೇನಾಪತಿಯಾಗಿ ಅಭಿಷಿಕ್ತನಾಗು! ಮಹಾಬಲ! ನಿನ್ನ ಮಾತಿನಂತೆ ನಾನೇ ಇಂದ್ರನಾಗಿರುತ್ತೇನೆ.”
03218022 ಸ್ಕಂದ ಉವಾಚ|
03218022a ದಾನವಾನಾಂ ವಿನಾಶಾಯ ದೇವಾನಾಮರ್ಥಸಿದ್ಧಯೇ|
03218022c ಗೋಬ್ರಾಹ್ಮಣಸ್ಯ ತ್ರಾಣಾರ್ಥಂ ಸೇನಾಪತ್ಯೇಽಭಿಷಿಂಚ ಮಾಂ||
ಸ್ಕಂದನು ಹೇಳಿದನು: “ದಾನವರ ವಿನಾಶಕ್ಕಾಗಿ, ದೇವತೆಗಳ ಕಾರ್ಯಸಿದ್ಧಿಗಾಗಿ, ಮತ್ತು ಗೋ-ಬ್ರಾಹ್ಮಣರ ರಕ್ಷಣೆಗಾಗಿ ನನ್ನನ್ನು ಸೇನಾಪತಿಯಾಗಿ ಅಭಿಷೇಕಿಸು.””
03218023 ಮಾರ್ಕಂಡೇಯ ಉವಾಚ|
03218023a ಸೋಽಭಿಷಿಕ್ತೋ ಮಘವತಾ ಸರ್ವೈರ್ದೇವಗಣೈಃ ಸಹ|
03218023c ಅತೀವ ಶುಶುಭೇ ತತ್ರ ಪೂಜ್ಯಮಾನೋ ಮಹರ್ಷಿಭಿಃ||
ಮಾರ್ಕಂಡೇಯನು ಹೇಳಿದನು: “ಅವನು ಸರ್ವದೇವಗಣಗಳೊಂದಿಗೆ ಮಘವತ ಮತ್ತು ಮಹರ್ಷಿಗಳಿಂದ ಪೂಜಿತನಾಗಿ ಅಭಿಷಿಕ್ತನಾಗಿ ಶೋಭಿಸಿದನು.
03218024a ತಸ್ಯ ತತ್ಕಾಂಚನಂ ಚತ್ರಂ ಧ್ರಿಯಮಾಣಂ ವ್ಯರೋಚತ|
03218024c ಯಥೈವ ಸುಸಮಿದ್ಧಸ್ಯ ಪಾವಕಸ್ಯಾತ್ಮಮಂಡಲಂ||
ಅವನಿಗೆ ಹಿಡಿದಿದ್ದ ಕಾಂಚನ ಛತ್ರವು ಚೆನ್ನಾಗಿ ಉರಿಯುತ್ತಿರುವ ಅಗ್ನಿಯ ಆತ್ಮ ಮಂಡಲದಂತೆ ಪ್ರಜ್ವಲಿಸುತ್ತಿತ್ತು.
03218025a ವಿಶ್ವಕರ್ಮಕೃತಾ ಚಾಸ್ಯ ದಿವ್ಯಾ ಮಾಲಾ ಹಿರಣ್ಮಯೀ|
03218025c ಆಬದ್ಧಾ ತ್ರಿಪುರಘ್ನೇನ ಸ್ವಯಮೇವ ಯಶಸ್ವಿನಾ||
ಸ್ವಯಂ ಯಶಸ್ವೀ ತ್ರಿಪುರಘ್ನನು ವಿಶ್ವಕರ್ಮನು ರಚಿಸಿದ್ದ ಹಿರಣ್ಮಯ ದಿವ್ಯ ಮಾಲೆಯನ್ನು ಅವನಿಗೆ ಕಟ್ಟಿದನು.
03218026a ಆಗಮ್ಯ ಮನುಜವ್ಯಾಘ್ರ ಸಹ ದೇವ್ಯಾ ಪರಂತಪ|
03218026c ಅರ್ಚಯಾಮಾಸ ಸುಪ್ರೀತೋ ಭಗವಾನ್ಗೋವೃಷಧ್ವಜಃ||
ಮನುಜವ್ಯಾಘ್ರ! ದೇವಿಯೊಂದಿಗೆ ಆ ಪರಂತಪ ಭಗವಾನ್ ಗೋವೃಷಧ್ವಜನು ಅಲ್ಲಿಗೆ ಬಂದು ಅವನನ್ನು ಸಂತೋಷದಿಂದ ಪೂಜಿಸಿದನು.
03218027a ರುದ್ರಮಗ್ನಿಂ ದ್ವಿಜಾಃ ಪ್ರಾಹೂ ರುದ್ರಸೂನುಸ್ತತಸ್ತು ಸಃ|
03218027c ರುದ್ರೇಣ ಶುಕ್ರಮುತ್ಸೃಷ್ಟಂ ತಚ್ಚ್ವೇತಃ ಪರ್ವತೋಽಭವತ್|
03218027e ಪಾವಕಸ್ಯೇಂದ್ರಿಯಂ ಶ್ವೇತೇ ಕೃತ್ತಿಕಾಭಿಃ ಕೃತಂ ನಗೇ||
ಅಗ್ನಿಯನ್ನು ರುದ್ರನೆಂದು ಮತ್ತು ಅದರಂತೆ ಸ್ಕಂದನನ್ನು ರುದ್ರಸೂನುವೆಂದು ದ್ವಿಜರು ಕರೆಯುತ್ತಾರೆ. ರುದ್ರನ ಶುಕ್ರವು ಬಿದ್ದು ಆ ಶ್ವೇತಪರ್ವತವಾಯಿತು. ಅದೇ ಶ್ವೇತಪರ್ವತದಲ್ಲಿ ಪಾವಕನ ಇಂದ್ರಿಯವು ಕೃತ್ತಿಕೆಯರೊಂದಿಗೆ ಸೇರಿತು.
03218028a ಪೂಜ್ಯಮಾನಂ ತು ರುದ್ರೇಣ ದೃಷ್ಟ್ವಾ ಸರ್ವೇ ದಿವೌಕಸಃ|
03218028c ರುದ್ರಸೂನುಂ ತತಃ ಪ್ರಾಹುರ್ಗುಹಂ ಗುಣವತಾಂ ವರಂ||
ರುದ್ರನಿಂದ ಪೂಜಿಸಲ್ಪಟ್ಟಿದ್ದುದನ್ನು ನೋಡಿ ಎಲ್ಲ ದಿವೌಕಸರೂ ಆ ಗುಣವಂತರಲ್ಲಿ ಶ್ರೇಷ್ಠ ಗುಹನನ್ನು ರುದ್ರಸೂನುವೆಂದು ಕರೆದರು.
03218029a ಅನುಪ್ರವಿಶ್ಯ ರುದ್ರೇಣ ವಹ್ನಿಂ ಜಾತೋ ಹ್ಯಯಂ ಶಿಶುಃ|
03218029c ತತ್ರ ಜಾತಸ್ತತಃ ಸ್ಕಂದೋ ರುದ್ರಸೂನುಸ್ತತೋಽಭವತ್||
ರುದ್ರನು ವಹ್ನಿಯನ್ನು ಅನುಪ್ರವೇಶಿಸಿ ಈ ಶಿಶುವು ಹುಟ್ಟಿದ್ದುದರಿಂದ ಅಲ್ಲಿ ಹುಟ್ಟಿದ ಸ್ಕಂದನು ರುದ್ರಸೂನುವಾದನು.
03218030a ರುದ್ರಸ್ಯ ವಹ್ನೇಃ ಸ್ವಾಹಾಯಾಃ ಷಣ್ಣಾಂ ಸ್ತ್ರೀಣಾಂ ಚ ತೇಜಸಾ|
03218030c ಜಾತಃ ಸ್ಕಂದಃ ಸುರಶ್ರೇಷ್ಠೋ ರುದ್ರಸೂನುಸ್ತತೋಽಭವತ್||
ರುದ್ರನ ವಹ್ನಿಯಲ್ಲಿ ಸ್ವಾಹಾಳಿಂದ ಆರು ಸ್ತ್ರೀಯರ ತೇಜಸ್ಸಿನಿಂದ ಹುಟ್ಟಿದ ಸ್ಕಂದ ಸುರಶ್ರೇಷ್ಠನು ರುದ್ರಸೂನುವಾದನು.
03218031a ಅರಜೇ ವಾಸಸೀ ರಕ್ತೇ ವಸಾನಃ ಪಾವಕಾತ್ಮಜಃ|
03218031c ಭಾತಿ ದೀಪ್ತವಪುಃ ಶ್ರೀಮಾನ್ರಕ್ತಾಭ್ರಾಭ್ಯಾಮಿವಾಂಶುಮಾನ್||
ಕೆಂಪುಬಣ್ಣದ ಶುಭ್ರವಸ್ತ್ರಗಳಲ್ಲಿದ್ದ ಪಾವಕಾತ್ಮಜನು ಕೆಂಪು ಮೋಡಗಳ ಮಧ್ಯದಿಂದ ಇಣುಕುತ್ತಿರುವ ಶ್ರೀಮಾನ್ ಸೂರ್ಯನು ಬೆಳಗುತ್ತಿರುವಂತೆ ಕಂಡನು.
03218032a ಕುಕ್ಕುಟಶ್ಚಾಗ್ನಿನಾ ದತ್ತಸ್ತಸ್ಯ ಕೇತುರಲಂಕೃತಃ|
03218032c ರಥೇ ಸಮುಚ್ಚ್ರಿತೋ ಭಾತಿ ಕಾಲಾಗ್ನಿರಿವ ಲೋಹಿತಃ||
ಅಗ್ನಿಯು ಕೊಟ್ಟಿದ್ದ ಕುಕ್ಕುಟವು ಧ್ವಜವನ್ನು ಅಲಂಕರಿಸಿ ರಥದ ಮೇಲೆ ಹಾರಿ ಕುಳಿತುಕೊಂಡು ಕಾಲಾಗ್ನಿಯಂತೆ ಕೆಂಪಾಗಿ ಹೊಳೆಯುತ್ತಿತ್ತು.
03218033a ವಿವೇಶ ಕವಚಂ ಚಾಸ್ಯ ಶರೀರಂ ಸಹಜಂ ತತಃ|
03218033c ಯುಧ್ಯಮಾನಸ್ಯ ದೇವಸ್ಯ ಪ್ರಾದುರ್ಭವತಿ ತತ್ಸದಾ||
ಅವನ ಶರೀರದೊಂದಿಗೇ ಹುಟ್ಟಿದ್ದ ಕವಚವನ್ನು ದೇವನಿಗೆ ಯುದ್ಧದಲ್ಲಿ ಸದಾ ಜಯವನ್ನು ತರುವ ಶಕ್ತಿಯು ಪ್ರವೇಶಿಸಿತು.
03218034a ಶಕ್ತಿರ್ವರ್ಮ ಬಲಂ ತೇಜಃ ಕಾಂತತ್ವಂ ಸತ್ಯಮಕ್ಷತಿಃ|
03218034c ಬ್ರಹ್ಮಣ್ಯತ್ವಮಸಮ್ಮೋಹೋ ಭಕ್ತಾನಾಂ ಪರಿರಕ್ಷಣಂ||
03218035a ನಿಕೃಂತನಂ ಚ ಶತ್ರೂಣಾಂ ಲೋಕಾನಾಂ ಚಾಭಿರಕ್ಷಣಂ|
03218035c ಸ್ಕಂದೇನ ಸಹ ಜಾತಾನಿ ಸರ್ವಾಣ್ಯೇವ ಜನಾಧಿಪ||
ಜನಾಧಿಪ! ಶಕ್ತಿ, ವರ್ಮ, ಬಲ, ತೇಜಸ್ಸು, ಕಾಂತತ್ವ, ಸತ್ಯ, ಅಕ್ಷತಿ, ಬ್ರಹ್ಮಣ್ಯತ್ಯ, ಅಸಮ್ಮೋಹ, ಭಕ್ತರ ಪರಿರಕ್ಷಣೆ, ಶತ್ರುಗಳ ನಾಶ ಮತ್ತು ಲೋಕಗಳ ರಕ್ಷಣೆ ಇವು ಎಲ್ಲವೂ ಸ್ಕಂದನ ಜೊತೆಗೇ ಹುಟ್ಟಿದವು.
03218036a ಏವಂ ದೇವಗಣೈಃ ಸರ್ವೈಃ ಸೋಽಭಿಷಿಕ್ತಃ ಸ್ವಲಂಕೃತಃ|
03218036c ಬಭೌ ಪ್ರತೀತಃ ಸುಮನಾಃ ಪರಿಪೂರ್ಣೇಂದುದರ್ಶನಃ||
ಹೀಗೆ ಎಲ್ಲ ದೇವಗಣಗಳಿಂದ ಅವನು ಅಭಿಷಿಕ್ತನಾಗಿ, ಸ್ವಲಂಕೃತನಾಗಿ, ಸುಮನಸ್ಕನೂ ಪ್ರತೀತನೂ ಆಗಿ ಪರಿಪೂರ್ಣ ಚಂದ್ರನಂತೆ ತೋರಿದನು.
03218037a ಇಷ್ಟೈಃ ಸ್ವಾಧ್ಯಾಯಘೋಷೈಶ್ಚ ದೇವತೂರ್ಯರವೈರಪಿ|
03218037c ದೇವಗಂಧರ್ವಗೀತೈಶ್ಚ ಸರ್ವೈರಪ್ಸರಸಾಂ ಗಣೈಃ||
03218038a ಏತೈಶ್ಚಾನ್ಯೈಶ್ಚ ವಿವಿಧೈರ್ಹೃಷ್ಟತುಷ್ಟೈರಲಂಕೃತೈಃ|
03218038c ಕ್ರೀಡನ್ನಿವ ತದಾ ದೇವೈರಭಿಷಿಕ್ತಃ ಸ ಪಾವಕಿಃ||
ಇಷ್ಟಿಗಳಿಂದ, ಸ್ವಾಧ್ಯಾಯಘೋಷಗಳಿಂದ, ದೇವತೂರ್ಯರವಗಳಿಂದ, ದೇವಗಂಧರ್ವಗೀತಗಳಿಂದ, ಎಲ್ಲ ಅಪ್ಸರ ಗಣಗಳಿಂದ, ಇವರು ಮತ್ತು ಇನ್ನೂ ಇತರ ವಿವಿಧ ಹೃಷ್ಟ-ತುಷ್ಟರಾದ, ಅಲಂಕೃತರಾದ, ಆಡುತ್ತಿದ್ದಾರೋ ಎಂದು ತೋರುತ್ತಿದ್ದ ದೇವತೆಗಳಿಂದ ಪಾವಕಿಯು ಅಭಿಷಿಕ್ತನಾದನು[1].
03218039a ಅಭಿಷಿಕ್ತಂ ಮಹಾಸೇನಮಪಶ್ಯಂತ ದಿವೌಕಸಃ|
03218039c ವಿನಿಹತ್ಯ ತಮಃ ಸೂರ್ಯಂ ಯಥೇಹಾಭ್ಯುದಿತಂ ತಥಾ||
ಅಭಿಷಿಕ್ತನಾದ ಮಹಾಸೇನನು ದಿವೌಕಸರಿಗೆ ಕತ್ತಲೆಯನ್ನು ಕೊಂದು ಉದಯಿಸುವ ಸೂರ್ಯನಂತೆ ತೋರಿದನು.
03218040a ಅಥೈನಮಭ್ಯಯುಃ ಸರ್ವಾ ದೇವಸೇನಾಃ ಸಹಸ್ರಶಃ|
03218040c ಅಸ್ಮಾಕಂ ತ್ವಂ ಪತಿರಿತಿ ಬ್ರುವಾಣಾಃ ಸರ್ವತೋದಿಶಂ||
ಆಗ ಸರ್ವ ದೇವಸೇನೆಯೂ ನೀನು ನಮ್ಮ ಒಡೆಯನೆಂದು ಹೇಳುತ್ತಾ ಸಹಸ್ರಾರು ಸಂಖ್ಯೆಗಳಲ್ಲಿ ಅವನನ್ನು ಸುತ್ತುವರೆದು ನಿಂತರು.
03218041a ತಾಃ ಸಮಾಸಾದ್ಯ ಭಗವಾನ್ಸರ್ವಭೂತಗಣೈರ್ವೃತಃ|
03218041c ಅರ್ಚಿತಶ್ಚ ಸ್ತುತಶ್ಚೈವ ಸಾಂತ್ವಯಾಮಾಸ ತಾ ಅಪಿ||
ಭಗವಾನನು ಸುತ್ತುವರೆದು ಅರ್ಚಿಸುತ್ತಿದ್ದ, ಸ್ತುತಿಸುತ್ತಿದ್ದ ಸರ್ವಭೂತಗಣಗಳ ಬಳಿಸಾರಿ ಅವರನ್ನು ಸಂತವಿಸತೊಡಗಿದನು.
03218042a ಶತಕ್ರತುಶ್ಚಾಭಿಷಿಚ್ಯ ಸ್ಕಂದಂ ಸೇನಾಪತಿಂ ತದಾ|
03218042c ಸಸ್ಮಾರ ತಾಂ ದೇವಸೇನಾಂ ಯಾ ಸಾ ತೇನ ವಿಮೋಕ್ಷಿತಾ||
ಸ್ಕಂದನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದ ಶತಕ್ರತುವು ತನ್ನಿಂದ ಬಿಡುಗಡೆಗೊಳಿಸಲ್ಪಟ್ಟಿದ್ದ ದೇವಸೇನೆಯನ್ನು ನೆನಪಿಸಿಕೊಂಡನು.
03218043a ಅಯಂ ತಸ್ಯಾಃ ಪತಿರ್ನೂನಂ ವಿಹಿತೋ ಬ್ರಹ್ಮಣಾ ಸ್ವಯಂ|
03218043c ಇತಿ ಚಿಂತ್ಯಾನಯಾಮಾಸ ದೇವಸೇನಾಂ ಸ್ವಲಂಕೃತಾಂ||
ಇವನೇ ಸ್ವಯಂ ಬ್ರಹ್ಮನು ಅವಳಿಗೆ ವಿಹಿಸಿದ ಪತಿಯೆಂದು ಆಲೋಚಿಸಿ ಸ್ವಲಂಕೃತಳಾದ ದೇವಸೇನೆಯನ್ನು ಕರೆಯಿಸಿದನು.
03218044a ಸ್ಕಂದಂ ಚೋವಾಚ ಬಲಭಿದಿಯಂ ಕನ್ಯಾ ಸುರೋತ್ತಮ|
03218044c ಅಜಾತೇ ತ್ವಯಿ ನಿರ್ದಿಷ್ಟಾ ತವ ಪತ್ನೀ ಸ್ವಯಂಭುವಾ||
ಆಗ ಬಲಭಿದಿಯು ಸ್ಕಂದನಿಗೆ ಹೇಳಿದನು: “ಸುರೋತ್ತಮ! ಈ ಕನ್ಯೆಯನ್ನು ನೀನು ಹುಟ್ಟುವ ಮೊದಲೇ ನಿನ್ನ ಪತ್ನಿಯೆಂದು ಸ್ವಯಂಭುವು ನಿರ್ಧಿಷ್ಟಗೊಳಿಸಿದ್ದನು.
03218045a ತಸ್ಮಾತ್ತ್ವಮಸ್ಯಾ ವಿಧಿವತ್ಪಾಣಿಂ ಮಂತ್ರಪುರಸ್ಕೃತಂ|
03218045c ಗೃಹಾಣ ದಕ್ಷಿಣಂ ದೇವ್ಯಾಃ ಪಾಣಿನಾ ಪದ್ಮವರ್ಚಸಂ||
ಆದುದರಿಂದ ಪದ್ಮವರ್ಚಸಳಾದ ಈ ದೇವಿಯ ಕೈಯನ್ನು ಮಂತ್ರಪುರಸ್ಕೃತವಾಗಿ ವಿಧಿವತ್ತಾಗಿ ನಿನ್ನ ಬಲಕೈಯಿಂದ ಹಿಡಿ.”
03218046a ಏವಮುಕ್ತಃ ಸ ಜಗ್ರಾಹ ತಸ್ಯಾಃ ಪಾಣಿಂ ಯಥಾವಿಧಿ|
03218046c ಬೃಹಸ್ಪತಿರ್ಮಂತ್ರವಿಧಿಂ ಜಜಾಪ ಚ ಜುಹಾವ ಚ||
ಹೀಗೆ ಹೇಳಲು ಅವನು ಯಥಾವಿಧಿಯಾಗಿ ಅವಳ ಪಾಣಿಗ್ರಹಣಮಾಡಿಕೊಂಡನು. ಮಂತ್ರಗಳನ್ನು ತಿಳಿದಿದ್ದ ಬೃಹಸ್ಪತಿಯು ಮಂತ್ರಗಳನ್ನು ಉಚ್ಚರಿಸಿ ಯಾಜಿಸಿದನು.
03218047a ಏವಂ ಸ್ಕಂದಸ್ಯ ಮಹಿಷೀಂ ದೇವಸೇನಾಂ ವಿದುರ್ಬುಧಾಃ|
03218047c ಷಷ್ಠೀಂ ಯಾಂ ಬ್ರಾಹ್ಮಣಾಃ ಪ್ರಾಹುರ್ಲಕ್ಷ್ಮೀಮಾಶಾಂ ಸುಖಪ್ರದಾಂ|
03218047e ಸಿನೀವಾಲೀಂ ಕುಹೂಂ ಚೈವ ಸದ್ವೃತ್ತಿಮಪರಾಜಿತಾಂ||
ಹೀಗೆ ದೇವಸೇನೆಯೆಂದು ಬುಧರಿಗೆ ತಿಳಿದವಳು, ಷಷ್ಠಿಯೆಂದು ಬ್ರಾಹ್ಮಣರು ಕರೆಯುವ, ಲಕ್ಷ್ಮೀ, ಆಶಾ, ಸುಖಪ್ರದಾ, ಸಿನೀವಾಲೀ, ಕುಹೂ, ಸದ್ವತ್ತಿ, ಅಪರಾಜಿತಳು ಸ್ಕಂದನ ರಾಣಿಯಾದಳು.
03218048a ಯದಾ ಸ್ಕಂದಃ ಪತಿರ್ಲಬ್ಧಃ ಶಾಶ್ವತೋ ದೇವಸೇನಯಾ|
03218048c ತದಾ ತಮಾಶ್ರಯಲ್ಲಕ್ಷ್ಮೀಃ ಸ್ವಯಂ ದೇವೀ ಶರೀರಿಣೀ||
ಸ್ಕಂದನನ್ನು ಶಾಶ್ವತ ಪತಿಯನ್ನಾಗಿ ಪಡೆದ ದೇವಸೇನೆ, ದೇವೀ ಲಕ್ಷ್ಮಿಯು ಸ್ವಯಂ ಶರೀರಿಣಿಯಾಗಿ ಅವನನ್ನು ಆಶ್ರಯಿಸಿದಳು.
03218049a ಶ್ರೀಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಚ್ರೀಪಂಚಮೀ ಸ್ಮೃತಾ|
03218049c ಷಷ್ಠ್ಯಾಂ ಕೃತಾರ್ಥೋಽಭೂದ್ಯಸ್ಮಾತ್ತಸ್ಮಾತ್ಷಷ್ಠೀ ಮಹಾತಿಥಿಃ||
ಪಂಚಮಿಯಂದು ಸ್ಕಂದನು ಶ್ರೀಮಂತನಾದುದರಿಂದ ಅದು ಶ್ರೀಪಂಚಮಿಯೆಂದು ನೆನಪಿನಲ್ಲಿದೆ. ಮತ್ತು ಷಷ್ಠಿಯಂದು ಅವನು ಕೃತಾರ್ಥನಾದುದರಿಂದ ಷಷ್ಠಿಯನ್ನು ಮಹಾತಿಥಿಯೆಂದು ಪರಿಗಣಿಸುತ್ತಾರೆ.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ಅಷ್ಟದಶಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿನೆಂಟನೆಯ ಅಧ್ಯಾಯವು.
[1] ಸ್ಕಂದನ ದೇವಸೇನಾಪತ್ಯಾಭಿಷೇಕದ ವರ್ಣನೆಯು ಮುಂದೆ ಶಲ್ಯ ಪರ್ವದ ಅಧ್ಯಾಯ ೪೪ರಲ್ಲಿಯೂ ಬರುತ್ತದೆ.