ಆರಣ್ಯಕ ಪರ್ವ: ಯಕ್ಷಯುದ್ಧ ಪರ್ವ
Contents
Toggle೧೬೬
ನಿವಾತಕವಚರೊಡನೆ ಅರ್ಜುನನ ಘೋರ ಯುದ್ಧ (೧-೨೩).
03166001 ಅರ್ಜುನ ಉವಾಚ|
03166001a ತತೋಽಹಂ ಸ್ತೂಯಮಾನಸ್ತು ತತ್ರ ತತ್ರ ಮಹರ್ಷಿಭಿಃ|
03166001c ಅಪಶ್ಯಮುದಧಿಂ ಭೀಮಮಪಾಂಪತಿಮಥಾವ್ಯಯಂ||
ಅರ್ಜುನನು ಹೇಳಿದನು: “ಆಲ್ಲಲ್ಲಿ ಮಹರ್ಷಿಗಳು ಸ್ತುತಿಸುತ್ತಿರಲು ನಾನು ಅವ್ಯಯ ಅಪಾಂಪತಿಯ ಭಯಂಕರವಾದ ಮಹಾಸಾಗರವನ್ನು ಕಂಡೆನು.
03166002a ಫೇನವತ್ಯಃ ಪ್ರಕೀರ್ಣಾಶ್ಚ ಸಂಹತಾಶ್ಚ ಸಮುಚ್ಚ್ರಿತಾಃ|
03166002c ಊರ್ಮಯಶ್ಚಾತ್ರ ದೃಶ್ಯಂತೇ ಚಲಂತ ಇವ ಪರ್ವತಾಃ||
03166002e ನಾವಃ ಸಹಸ್ರಶಸ್ತತ್ರ ರತ್ನಪೂರ್ಣಾಃ ಸಮಂತತಃ||
03166003a ತಿಮಿಂಗಿಲಾಃ ಕಚ್ಚಪಾಶ್ಚ ತಥಾ ತಿಮಿತಿಮಿಂಗಿಲಾಃ|
03166003c ಮಕರಾಶ್ಚಾತ್ರ ದೃಶ್ಯಂತೇ ಜಲೇ ಮಗ್ನಾ ಇವಾದ್ರಯಃ||
ಚಲಿಸುತ್ತಿರುವ ಪರ್ವತಗಳಂತಿರುವ ಬಹು ಎತ್ತರಕ್ಕೆ ನೊರೆಯುಕ್ತವಾಗಿ, ಹರಡುತ್ತಾ, ಹೊಡೆಯುತ್ತ ಬರುವ ಅಲೆಗಳು, ರತ್ನಗಳಿಂದ ತುಂಬಿದ್ದ ಸಹಸ್ರಾರು ಹಡಗುಗಳು ಎಲ್ಲೆಡೆಯೂ ಕಾಣುತ್ತಿದ್ದವು. ನೀರಿನಲ್ಲಿ ಮುಳುಗಿದ ಬೆಟ್ಟಗಳಂತೆ ತಿಮಿಂಗಿಲಗಳು, ಆಮೆಗಳು, ತಿಮಿತಿಮಿಂಗಿಲಗಳು, ಮತ್ತು ಮೊಸಳೆಗಳು ಕಾಣುತ್ತಿದ್ದವು.
03166004a ಶಂಖಾನಾಂ ಚ ಸಹಸ್ರಾಣಿ ಮಗ್ನಾನ್ಯಪ್ಸು ಸಮಂತತಃ|
03166004c ದೃಶ್ಯಂತೇ ಸ್ಮ ಯಥಾ ರಾತ್ರೌ ತಾರಾಸ್ತನ್ವಭ್ರಸಂವೃತಾಃ||
ಎಲ್ಲೆಡೆಯೂ ನೀರಿನಲ್ಲಿ ಮುಳುಗಿದ್ದ ಸಹಸ್ರಾರು ಶಂಖಗಳು, ತೆಳುವಾಗಿ ಮೋಡಗಳು ಕವಿದ ರಾತ್ರಿಯಲ್ಲಿ ಕಾಣುವ ನಕ್ಷತ್ರಗಳಂತೆ ಕಂಡವು.
03166005a ತಥಾ ಸಹಸ್ರಶಸ್ತತ್ರ ರತ್ನಸಂಘಾಃ ಪ್ಲವಂತ್ಯುತ|
03166005c ವಾಯುಶ್ಚ ಘೂರ್ಣತೇ ಭೀಮಸ್ತದದ್ಭುತಮಿವಾಭವತ್||
ಹಾಗೆಯೇ ಸಹಸ್ರಾರು ಮುತ್ತುಗಳ ಗುಚ್ಚಗಳು ಅಲ್ಲಿ ತೇಲುತ್ತಿದ್ದವು. ಭಯಂಕರ ಭಿರುಗಾಳಿಯು ಅಲೆಗಳನ್ನು ಹೊಡೆಯಲು, ಅದು ಅದ್ಭುತವಾಗಿತ್ತು.
03166006a ತಮತೀತ್ಯ ಮಹಾವೇಗಂ ಸರ್ವಾಂಭೋನಿಧಿಮುತ್ತಮಂ|
03166006c ಅಪಶ್ಯಂ ದಾನವಾಕೀರ್ಣಂ ತದ್ದೈತ್ಯಪುರಮಂತಿಕಾತ್||
ಮಹಾವೇಗದಿಂದ ಎಲ್ಲ ಸಾಗರಗಳು ಸೇರುವ ಆ ಉತ್ತಮ ಪ್ರದೇಶವನ್ನು ದಾಟಿ ಹತ್ತಿರದಲ್ಲಿಯೇ ದಾನವರಿಂದ ತುಂಬಿದ್ದ ಆ ದೈತ್ಯಪುರವನ್ನು ನೋಡಿದೆನು.
03166007a ತತ್ರೈವ ಮಾತಲಿಸ್ತೂರ್ಣಂ ನಿಪತ್ಯ ಪೃಥಿವೀತಲೇ|
03166007c ನಾದಯನ್ರಥಘೋಷೇಣ ತತ್ಪುರಂ ಸಮುಪಾದ್ರವತ್||
ಮಾತಲಿಯು ಅಲ್ಲಿಯೇ ಭೂಮಿಯ ಮೇಲೆ ಇಳಿದು ರಥಘೋಷದಿಂದ ಮೊಳಗಿಸುತ್ತಾ ಆ ಪುರವನ್ನು ಸೇರಿದನು.
03166008a ರಥಘೋಷಂ ತು ತಂ ಶ್ರುತ್ವಾ ಸ್ತನಯಿತ್ನೋರಿವಾಂಬರೇ|
03166008c ಮನ್ವಾನಾ ದೇವರಾಜಂ ಮಾಂ ಸಂವಿಗ್ನಾ ದಾನವಾಭವನ್||
ಅಂಬರದಲ್ಲಿ ಸಿಡಿಲುಬಡಿಯಿತೋ ಎನ್ನುವಂತಿದ್ದ ಆ ರಥಘೋಷವನ್ನು ಕೇಳಿ ದೇವರಾಜನೇ ಬಂದನೆಂದು ಯೋಚಿಸಿ ಆ ದಾನವರು ಸಂವಿಗ್ನರಾದರು.
03166009a ಸರ್ವೇ ಸಂಭ್ರಾಂತಮನಸಃ ಶರಚಾಪಧರಾಃ ಸ್ಥಿತಾಃ|
03166009c ತಥಾ ಶೂಲಾಸಿಪರಶುಗದಾಮುಸಲಪಾಣಯಃ||
ಸಂಭ್ರಾಂತಮನಸ್ಕರಾದ ಅವರೆಲ್ಲರೂ ಬಿಲ್ಲುಬಾಣಗಳನ್ನು ಹಿಡಿದು, ಶೂಲ, ಖಡ್ಗ, ಕೊಡಲಿ, ದೊಣ್ಣೆ ಮತ್ತು ಮುಸಲಗಳನ್ನು ಹಿಡಿದು ನಿಂತರು.
03166010a ತತೋ ದ್ವಾರಾಣಿ ಪಿದಧುರ್ದಾನವಾಸ್ತ್ರಸ್ತಚೇತಸಃ|
03166010c ಸಂವಿಧಾಯ ಪುರೇ ರಕ್ಷಾಂ ನ ಸ್ಮ ಕಶ್ಚನ ದೃಶ್ಯತೇ||
ಅವರ ಚೇತನವು ಕಂಪಿಸುತ್ತಿರಲು ಆ ದಾನವರು ದ್ವಾರಗಳನ್ನು ಮುಚ್ಚಿ ಪುರವನ್ನು ರಕ್ಷಣೆಗೆ ತಂದರು. ಯಾರೂ ಕೂಡ ಅಲ್ಲಿ ಕಂಡುಬರಲಿಲ್ಲ.
03166011a ತತಃ ಶಂಖಮುಪಾದಾಯ ದೇವದತ್ತಂ ಮಹಾಸ್ವನಂ|
03166011c ಪುರಮಾಸುರಮಾಶ್ಲಿಷ್ಯ ಪ್ರಾಧಮಂ ತಂ ಶನೈರಹಂ||
ಆಗ ನಾನು ಮಹಾಸ್ವನಿ ದೇವದತ್ತ ಶಂಖವನ್ನು ಎತ್ತಿ ಮೆಲ್ಲಗೆ ಊದಿ, ಆ ಪುರಕ್ಕೆ ಸುತ್ತುಹಾಕಿದೆನು.
03166012a ಸ ತು ಶಬ್ಧೋ ದಿವಂ ಸ್ತಬ್ಧ್ವಾ ಪ್ರತಿಶಬ್ಧಮಜೀಜನತ್|
03166012c ವಿತ್ರೇಸುಶ್ಚ ನಿಲಿಲ್ಯುಶ್ಚ ಭೂತಾನಿ ಸುಮಹಾಂತ್ಯಪಿ||
ಆ ಶಬ್ಧವು ಆಕಾಶವನ್ನು ಸ್ತಬ್ಧಗೊಳಿಸಿತು. ಪ್ರತಿಧ್ವನಿಯನ್ನು ಹುಟ್ಟಿಸಿತು. ಮಹಾಕಾಯದ ಭೂತಗಳು ಕೂಡ ನಡುಗಿದವು ಮತ್ತು ಮೇಲೇಳಲಿಲ್ಲ.
03166013a ತತೋ ನಿವಾತಕವಚಾಃ ಸರ್ವ ಏವ ಸಮಂತತಃ|
03166013c ದಂಶಿತಾ ವಿವಿಧೈಸ್ತ್ರಾಣೈರ್ವಿವಿಧಾಯುಧಪಾಣಯಃ||
03166014a ಆಯಸೈಶ್ಚ ಮಹಾಶೂಲೈರ್ಗದಾಭಿರ್ಮುಸಲೈರಪಿ|
03166014c ಪಟ್ಟಿಶೈಃ ಕರವಾಲೈಶ್ಚ ರಥಚಕ್ರೈಶ್ಚ ಭಾರತ||
03166015a ಶತಘ್ನೀಭಿರ್ಭುಶುಂಡೀಭಿಃ ಖಡ್ಗೈಶ್ಚಿತ್ರೈಃ ಸ್ವಲಂಕೃತೈಃ|
03166015c ಪ್ರಗೃಹೀತೈರ್ದಿತೇಃ ಪುತ್ರಾಃ ಪ್ರಾದುರಾಸನ್ಸಹಸ್ರಶಃ||
ಭಾರತ! ಆಗ ದಿತಿಯ ಪುತ್ರ ನಿವಾತಕವಚರು ಎಲ್ಲರೂ ಎಲ್ಲೆಡೆಯಿಂದಲೂ ಸಾವಿರ ಸಂಖ್ಯೆಗಳಲ್ಲಿ ವಿವಿಧ ಅಸ್ತ್ರಗಳಿಂದ ರಕ್ಷಿತರಾಗಿ, ವಿವಿಧ ಆಯುಧಗಳನ್ನು ಹಿಡಿದು ಕಾಣಿಸಿಕೊಳ್ಳತೊಡಗಿದರು. ಮಹಾಶೂಲಗಳನ್ನು, ಗದೆಗಳನ್ನು, ಮುಸುಲಗಳನ್ನು, ಪಟ್ಟಿಷಗಳನ್ನು, ಕಲವಾಲಗಳನ್ನು ಮತ್ತು ರಥಚಕ್ರಗಳನ್ನು ಬೀಸುತ್ತಿದ್ದರು; ಸುಂದರವಾಗಿ ಅಲಂಕೃತಗೊಂಡಿದ್ದ ಖಡ್ಗಗಳನ್ನು, ಭುಷುಂಡಿಗಳನ್ನು, ಶತಗ್ನಿಗಳನ್ನು ಹಿಡಿದಿದ್ದರು.
03166016a ತತೋ ವಿಚಾರ್ಯ ಬಹುಧಾ ರಥಮಾರ್ಗೇಷು ತಾನ್ಹಯಾನ್|
03166016c ಪ್ರಾಚೋದಯತ್ಸಮೇ ದೇಶೇ ಮಾತಲಿರ್ಭರತರ್ಷಭ||
ಭರತರ್ಷಭ! ಮಾತಲಿಯು ಬಹುವಿಧದ ರಥಮಾರ್ಗಗಳನ್ನು ವಿಚಾರಿಸಿ ಹಯಗಳನ್ನು ಸಮಪ್ರದೇಶದ ಕಡೆಗೆ ಪ್ರಚೋದಿಸಿದನು.
03166017a ತೇನ ತೇಷಾಂ ಪ್ರಣುನ್ನಾನಾಮಾಶುತ್ವಾಚ್ಶೀಘ್ರಗಾಮಿನಾಂ|
03166017c ನಾನ್ವಪಶ್ಯಂ ತದಾ ಕಿಂ ಚಿತ್ತನ್ಮೇಽದ್ಭುತಮಿವಾಭವತ್||
ಅವನ ಕೈಚಳಕದಿಂದ ಕುದುರೆಗಳು ಎಷ್ಟೊಂದು ವೇಗವಾಗಿ ಹೋದವೆಂದರೆ ನನಗೆ ಏನಾಯಿತೆಂದೂ ತಿಳಿಯಲಿಲ್ಲ. ಅದೊಂದು ಅದ್ಭುತವಾಗಿತ್ತು.
03166018a ತತಸ್ತೇ ದಾನವಾಸ್ತತ್ರ ಯೋಧವ್ರಾತಾನ್ಯನೇಕಶಃ|
03166018c ವಿಕೃತಸ್ವರರೂಪಾಣಿ ಭೃಶಂ ಸರ್ವಾಣ್ಯಚೋದಯನ್||
ಆಗ ಆ ದಾನವರು ಅನೇಕ ಸಂಖ್ಯೆಗಳಲ್ಲಿ, ವಿಕೃತ ಸ್ವರೂಪಗಳ ಎಲ್ಲ ಯೋಧರನ್ನು ಒಟ್ಟುಹಾಕಿದರು.
03166019a ತೇನ ಶಬ್ಧೇನ ಮಹತಾ ಸಮುದ್ರೇ ಪರ್ವತೋಪಮಾಃ|
03166019c ಆಪ್ಲವಂತ ಗತೈಃ ಸತ್ತ್ವೈರ್ಮತ್ಸ್ಯಾಃ ಶತಸಹಸ್ರಶಃ||
ಅವರ ಮಹಾ ಶಬ್ಧದಿಂದ ಸಮುದ್ರದಲ್ಲಿ ಪರ್ವತದಂತಿದ್ದ ಮೀನುಗಳು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸತ್ವವನ್ನು ಕಳೆದುಕೊಂಡು ತೇಲುತ್ತಿದ್ದವು.
03166020a ತತೋ ವೇಗೇನ ಮಹತಾ ದಾನವಾ ಮಾಮುಪಾದ್ರವನ್|
03166020c ವಿಮುಂಚಂತಃ ಶಿತಾನ್ಬಾಣಾಂ ಶತಶೋಽಥ ಸಹಸ್ರಶಃ||
ಆಗ ಮಹಾವೇಗದಿಂದ ಆ ದಾನವರು ನೂರಾರು ಸಹಸ್ರಾರು ಹರಿತ ಬಾಣಗಳನ್ನು ಬಿಡುತ್ತಾ ನನ್ನೆಡೆಗೆ ಧಾವಿಸಿದರು.
03166021a ಸ ಸಂಪ್ರಹಾರಸ್ತುಮುಲಸ್ತೇಷಾಂ ಮಮ ಚ ಭಾರತ|
03166021c ಅವರ್ತತ ಮಹಾಘೋರೋ ನಿವಾತಕವಚಾಂತಕಃ||
ಭಾರತ! ಅವರು ಮತ್ತು ನನ್ನ ನಡುವೆ ಸಂಪ್ರಹಾರ ತುಮುಲಗಳು ನಡೆದವು. ಆ ಮಹಾಘೋರ ನಿವಾತಕವಚರ ಆಂತ್ಯವೆನಿಸಿತು.
03166022a ತತೋ ದೇವರ್ಷಯಶ್ಚೈವ ದಾನವರ್ಷಿಗಣಾಶ್ಚ ಯೇ|
03166022c ಬ್ರಹ್ಮರ್ಷಯಶ್ಚ ಸಿದ್ಧಾಶ್ಚ ಸಮಾಜಗ್ಮುರ್ಮಹಾಮೃಧೇ||
03166023a ತೇ ವೈ ಮಾಮನುರೂಪಾಭಿರ್ಮಧುರಾಭಿರ್ಜಯೈಷಿಣಃ|
03166023c ಅಸ್ತುವನ್ಮುನಯೋ ವಾಗ್ಭಿರ್ಯಥೇಂದ್ರಂ ತಾರಕಾಮಯೇ||
ಆಗ ದೇವರ್ಷಿಗಳು, ದಾನವರ್ಷಿಗಣಗಳು, ಬ್ರಹ್ಮರ್ಷಿಗಳು, ಸಿದ್ಧರು, ಆ ಮಹಾಯುದ್ಧದಲಿ ಒಟ್ಟುಸೇರಿದರು. ಮುನಿಗಳು ತಾರಕಾ ಯುದ್ಧದಲ್ಲಿ ಇಂದ್ರನನ್ನು ಹೇಗೋ ಹಾಗೆ ನನ್ನ ಜಯವನ್ನು ಬಯಸಿ ನನ್ನನ್ನು ಮಧುರವಾಗಿ ಹೊಗಳಿದರು ಮತ್ತು ಸ್ತುತಿಸಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಯಕ್ಷಯುದ್ಧಪರ್ವಣಿ ನಿವಾತಕವಚಯುದ್ಧೇ ಯುದ್ಧಾರಂಭೇ ಷಷ್ಟಷಷ್ಟ್ಯಧಿಕಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಯಕ್ಷಯುದ್ಧಪರ್ವದಲ್ಲಿ ನಿವಾತಕವಚಯುದ್ಧದಲ್ಲಿ ಯುದ್ಧಾರಂಭದಲ್ಲಿ ನೂರಾಅರವತ್ತಾರನೆಯ ಅಧ್ಯಾಯವು.
