Aranyaka Parva: Chapter 72

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೭೨

ನಲ-ಕೇಶಿನಿ ಸಂವಾದ

ದೂತಿ ಕೇಶಿನಿಯು ಬಾಹುಕನಲ್ಲಿಗೆ ಹೋಗಿ ವಿಚಾರಿಸಿದ್ದುದು (೧-೨೨). ದುಃಖಿತನಾದ ಬಾಹುಕನು ದಮಯಂತಿಗೆ ಸಂದೇಶವನ್ನು ಕಳುಹಿಸುವುದು (೨೩-೩೦).

03072001 ದಮಯಂತ್ಯುವಾಚ|

03072001a ಗಚ್ಚ ಕೇಶಿನಿ ಜಾನೀಹಿ ಕ ಏಷ ರಥವಾಹಕಃ|

03072001c ಉಪವಿಷ್ಟೋ ರಥೋಪಸ್ಥೇ ವಿಕೃತೋ ಹ್ರಸ್ವಬಾಹುಕಃ||

ದಮಯಂತಿಯು ಹೇಳಿದಳು: “ಕೇಶಿನಿ! ಹೋಗಿ ರಥದಲ್ಲಿ ಕುಳಿತಿದ್ದ ವಿಕೃತ, ಹೃಸ್ವಬಾಹಿಕ ಆ ರಥವಾಹಕನು ಯಾರೆಂದು ತಿಳಿದುಕೋ.

03072002a ಅಭ್ಯೇತ್ಯ ಕುಶಲಂ ಭದ್ರೇ ಮೃದುಪೂರ್ವಂ ಸಮಾಹಿತಾ|

03072002c ಪೃಚ್ಚೇಥಾಃ ಪುರುಷಂ ಹ್ಯೇನಂ ಯಥಾತತ್ತ್ವಮನಿಂದಿತೇ||

ಭದ್ರೇ! ಅನಿಂದಿತೇ! ಅವನಲ್ಲಿಗೆ ಹೋಗಿ ಮೃದುವಾಗಿ ಅವನು ಕುಶಲದಿಂದ್ದಾನೆಯೇ ಕೇಳು. ಈ ಪುರುಷನು ಯಾರೆಂದು ಯಥಾವತ್ತಾಗಿ ಕೇಳಿ ತಿಳಿದುಕೋ.

03072003a ಅತ್ರ ಮೇ ಮಹತೀ ಶಂಕಾ ಭವೇದೇಷ ನಲೋ ನೃಪಃ|

03072003c ತಥಾ ಚ ಮೇ ಮನಸ್ತುಷ್ಟಿರ್ಹೃದಯಸ್ಯ ಚ ನಿರ್ವೃತಿಃ||

ಅವನೇ ನೃಪ ನಲನಿರಬಹುದೆಂದು ಮಹತ್ತರ ಶಂಕೆ ನನ್ನಲ್ಲಿದೆ. ಯಾಕೆಂದರೆ ನನ್ನ ಮನಸ್ಸು ಸಂತೃಪ್ತಿಯಿಂದಿದೆ ಮತ್ತು ಹೃದಯವು ಶಾಂತವಾಗಿದೆ.

03072004a ಬ್ರೂಯಾಶ್ಚೈನಂ ಕಥಾಂತೇ ತ್ವಂ ಪರ್ಣಾದವಚನಂ ಯಥಾ|

03072004c ಪ್ರತಿವಾಕ್ಯಂ ಚ ಸುಶ್ರೋಣಿ ಬುಧ್ಯೇಥಾಸ್ತ್ವಮನಿಂದಿತೇ||

ಅನಿಂದಿತೇ! ನೀನು ಮಾತನಾಡುವಾಗ ಪರ್ಣದನ ವಚನಗಳನ್ನೂ ಸೇರಿಸಿಕೋ ಮತ್ತು ಅವನಾಡಿದ ಪ್ರತಿಯೊಂದು ವಾಕ್ಯವನ್ನೂ ಸರಿಯಾಗಿ ಕೇಳಿ ತಿಳಿದುಕೋ.””

03072005 ಬೃಹದಶ್ವ ಉವಾಚ|

03072005a ಏವಂ ಸಮಾಹಿತಾ ಗತ್ವಾ ದೂತೀ ಬಾಹುಕಮಬ್ರವೀತ್|

03072005c ದಮಯಂತ್ಯಪಿ ಕಲ್ಯಾಣೀ ಪ್ರಾಸಾದಸ್ಥಾನ್ವವೈಕ್ಷತ||

ಬೃಹದಶ್ವನು ಹೇಳಿದನು: “ಈ ರೀತಿ ದೂತಿಯು ಬಾಹುಕನನ್ನು ಸಮೀಪಿಸಿ ಅವನಲ್ಲಿ ಮಾತನಾಡಿದಳು. ಕಲ್ಯಾಣಿ ದಮಯಂತಿಯು ಗಚ್ಚಿನಮೇಲೆ ನಿಂತು ನೋಡುತ್ತಿದ್ದಳು.

03072006 ಕೇಶಿನ್ಯುವಾಚ|

03072006a ಸ್ವಾಗತಂ ತೇ ಮನುಷ್ಯೇಂದ್ರ ಕುಶಲಂ ತೇ ಬ್ರವೀಮ್ಯಹಂ|

03072006c ದಮಯಂತ್ಯಾ ವಚಃ ಸಾಧು ನಿಬೋಧ ಪುರುಷರ್ಷಭ||

03072007a ಕದಾ ವೈ ಪ್ರಸ್ಥಿತಾ ಯೂಯಂ ಕಿಮರ್ಥಮಿಹ ಚಾಗತಾಃ|

03072007c ತತ್ತ್ವಂ ಬ್ರೂಹಿ ಯಥಾನ್ಯಾಯಂ ವೈದರ್ಭೀ ಶ್ರೋತುಮಿಚ್ಚತಿ||

ಕೇಶಿನಿಯು ಹೇಳಿದಳು: “ಮನುಷ್ಯೇಂದ್ರ! ಪುರುಷರ್ಷಭ! ನಿನಗೆ ಸ್ವಾಗತ. ನಿನ್ನ ಕುಶಲವನ್ನು ಕೇಳುತ್ತಿದ್ದೇನೆ. ದಮಯಂತಿಯು ಒಂದು ಮಾತನ್ನು ಹೇಳಿ ಕಳುಹಿಸಿದ್ದಾಳೆ. ಗಮನವಿಟ್ಟು ಕೇಳು. ನೀವೆಲ್ಲರೂ ಎಂದು ಹೊರಟಿದ್ದಿರಿ ಮತ್ತು ಇಲ್ಲಿಗೆ ಏಕೆ ಆಗಮಿಸಿದ್ದೀರಿ? ನ್ಯಾಯವೆನಿಸಿದರೆ ಸತ್ಯವನ್ನು ಹೇಳು. ವೈದರ್ಭಿಯು ಕೇಳಲು ಇಚ್ಚಿಸುತ್ತಾಳೆ.”

03072008 ಬಾಹುಕ ಉವಾಚ|

03072008a ಶ್ರುತಃ ಸ್ವಯಂವರೋ ರಾಜ್ಞಾ ಕೌಸಲ್ಯೇನ ಯಶಸ್ವಿನಾ|

03072008c ದ್ವಿತೀಯೋ ದಮಯಂತ್ಯಾ ವೈ ಶ್ವೋಭೂತ ಇತಿ ಭಾಮಿನಿ||

ಬಾಹುಕನು ಹೇಳಿದನು: “ಭಾಮಿನೀ! ಕೌಸಲದ ಯಶಸ್ವಿ ರಾಜನು ದಮಯಂತಿಯ ಎರಡನೆಯ ಸ್ವಯಂವರವು ನಡೆಯುತ್ತಿದೆ ಎಂದು ಕೇಳಿದನು.

03072009a ಶ್ರುತ್ವಾ ತಂ ಪ್ರಸ್ಥಿತೋ ರಾಜಾ ಶತಯೋಜನಯಾಯಿಭಿಃ|

03072009c ಹಯೈರ್ವಾತಜವೈರ್ಮುಖ್ಯೈರಹಮಸ್ಯ ಚ ಸಾರಥಿಃ||

ಅದನ್ನು ಕೇಳಿದ ರಾಜನು ಶತಯೋಜನದೂರವನ್ನು ದಾಟುವ ವಾಯುವೇಗಗಳನ್ನುಳ್ಳ ಹಯಗಳೊಂದಿಗೆ ಹೊರಟನು. ನಾನು ಅವನ ಸಾರಥಿ.”

03072010 ಕೇಶಿನ್ಯುವಾಚ|

03072010a ಅಥ ಯೋಽಸೌ ತೃತೀಯೋ ವಃ ಸ ಕುತಃ ಕಸ್ಯ ವಾ ಪುನಃ|

03072010c ತ್ವಂ ಚ ಕಸ್ಯ ಕಥಂ ಚೇದಂ ತ್ವಯಿ ಕರ್ಮ ಸಮಾಹಿತಂ||

ಕೇಶಿನಿಯು ಹೇಳಿದನು: “ನಿಮ್ಮಲ್ಲಿರುವ ಈ ಮೂರನೆಯವನು ಎಲ್ಲಿಯವನು ಮತ್ತು ಯಾರವನು? ಮತ್ತು ನೀನು ಯಾರು ಮತ್ತು ನಿನಗೆ ಈ ಕೆಲಸವು ಹೇಗೆ ಪ್ರಾಪ್ತವಾಯಿತು?”

03072011 ಬಾಹುಕ ಉವಾಚ|

03072011a ಪುಣ್ಯಶ್ಲೋಕಸ್ಯ ವೈ ಸೂತೋ ವಾರ್ಷ್ಣೇಯ ಇತಿ ವಿಶ್ರುತಃ|

03072011c ಸ ನಲೇ ವಿದ್ರುತೇ ಭದ್ರೇ ಭಾಂಗಸ್ವರಿಮುಪಸ್ಥಿತಃ||

ಬಾಹುಕನು ಹೇಳಿದನು: “ಭದ್ರೇ! ಅವನು ಪುಣ್ಯಶ್ಲೋಕನ ಸೂತ; ವಾರ್ಷ್ಣೇಯನೆಂದು ಹೆಸರು. ನಲನು ಹೊರಟು ಹೋದ ನಂತರ ಅವನು ಭಾಂಗಸ್ವರಿಯಲ್ಲಿ ವಾಸಿಸುತ್ತಿದ್ದಾನೆ.

03072012a ಅಹಮಪ್ಯಶ್ವಕುಶಲಃ ಸೂದತ್ವೇ ಚ ಸುನಿಷ್ಠಿತಃ|

03072012c ಋತುಪರ್ಣೇನ ಸಾರಥ್ಯೇ ಭೋಜನೇ ಚ ವೃತಃ ಸ್ವಯಂ||

ನಾನಾದರೂ ಓರ್ವ ಅಶ್ವಕುಶಲ ಮತ್ತು ಉತ್ತಮ ಅಡುಗೆಗಳನ್ನು ಮಾಡಬಲ್ಲವ. ಸ್ವಯಂ ಋತುಪರ್ಣನೇ ನನ್ನನ್ನು ಅವನ ಸಾರಥಿ ಮತ್ತು ಅಡುಗೆ ಭಟನನ್ನಾಗಿ ಇರಿಸಿಕೊಂಡಿದ್ದಾನೆ.”

03072013 ಕೇಶಿನ್ಯುವಾಚ|

03072013a ಅಥ ಜಾನಾತಿ ವಾರ್ಷ್ಣೇಯಃ ಕ್ವ ನು ರಾಜಾ ನಲೋ ಗತಃ|

03072013c ಕಥಂ ಚಿತ್ತ್ವಯಿ ವೈತೇನ ಕಥಿತಂ ಸ್ಯಾತ್ತು ಬಾಹುಕ||

ಕೇಶಿನಿಯು ಹೇಳಿದಳು: “ಬಾಹುಕ! ರಾಜ ನಲನು ಎಲ್ಲಿಗೆ ಹೋದನೆಂದು ವಾರ್ಷ್ಣೇಯನಿಗೆ ತಿಳಿದಿದೆಯೇ? ನಿನ್ನ ಸಮ್ಮುಖದಲ್ಲಿ ಅವನು ಎಂದಾದರೂ ಅವನ ಕುರಿತು ಹೇಳಿದ್ದುಂಟೇ?”

03072014 ಬಾಹುಕ ಉವಾಚ|

03072014a ಇಹೈವ ಪುತ್ರೌ ನಿಕ್ಷಿಪ್ಯ ನಲಸ್ಯಾಶುಭಕರ್ಮಣಃ|

03072014c ಗತಸ್ತತೋ ಯಥಾಕಾಮಂ ನೈಷ ಜಾನಾತಿ ನೈಷಧಂ||

ಬಾಹುಕನು ಹೇಳಿದನು: “ಆ ಅಶುಭಕರ್ಮಿ ನಲನ ಪುತ್ರರನ್ನು ಇಲ್ಲಿಯೇ ಇರಿಸಿ ಅವನು ಹೊರಟುಹೋದ. ನೈಷಧನು ಎಲ್ಲಿದ್ದಾನೆಂದು ಅವನಿಗೂ ಗೊತ್ತಿಲ್ಲ.

03072015a ನ ಚಾನ್ಯಃ ಪುರುಷಃ ಕಶ್ಚಿನ್ನಲಂ ವೇತ್ತಿ ಯಶಸ್ವಿನಿ|

03072015c ಗೂಢಶ್ಚರತಿ ಲೋಕೇಽಸ್ಮಿನ್ನಷ್ಟರೂಪೋ ಮಹೀಪತಿಃ||

ಯಶಸ್ವಿನಿ! ನಲನು ಎಲ್ಲಿದ್ದಾನೆ ಎಂದು ಬೇರೆ ಯಾರಿಗೂ ಗೊತ್ತಿಲ್ಲ. ಅವನು ಎಲ್ಲಿಯೋ ಗೂಢವಾಗಿ ವಾಸಿಸುತ್ತಿರಬಹುದು. ಆ ಮಹೀಪತಿಯು ಅದೃಶ್ಯನಾಗಿದ್ದಾನೆ.

03072016a ಆತ್ಮೈವ ಹಿ ನಲಂ ವೇತ್ತಿ ಯಾ ಚಾಸ್ಯ ತದನಂತರಾ|

03072016c ನ ಹಿ ವೈ ತಾನಿ ಲಿಂಗಾನಿ ನಲಂ ಶಂಸಂತಿ ಕರ್ಹಿ ಚಿತ್||

ತದನಂತರದಲ್ಲಿ ಇವನೇ ನಲನೆಂದು ಹೇಳುವ ಯಾವರೀತಿಯ ಲಕ್ಷಣಗಳೂ ಉಳಿಯಲಿಲ್ಲ. ಅವನಿಗೆ ಮತ್ತು ಅವನವಳಿಗೆ ಮಾತ್ರ ಅವನ ಲಕ್ಷಣಗಳು ಗೊತ್ತು.”

03072017 ಕೇಶಿನ್ಯುವಾಚ|

03072017a ಯೋಽಸಾವಯೋಧ್ಯಾಂ ಪ್ರಥಮಂ ಗತವಾನ್ಬ್ರಾಹ್ಮಣಸ್ತದಾ|

03072017c ಇಮಾನಿ ನಾರೀವಾಕ್ಯಾನಿ ಕಥಯಾನಃ ಪುನಃ ಪುನಃ||

ಕೇಶಿನಿಯು ಹೇಳಿದಳು: “ಮೊದಲು ಅಯೋಧ್ಯೆಗೆ ಬಂದಿದ್ದ ಬ್ರಾಹ್ಮಣನೊಬ್ಬನು ಓರ್ವ ನಾರಿಯ ಈ ಮಾತುಗಳನ್ನು ಪುನಃ ಪುನಃ ಹೇಳುತ್ತಿದ್ದನು:

03072018a ಕ್ವ ನು ತ್ವಂ ಕಿತವ ಚಿತ್ತ್ವಾ ವಸ್ತ್ರಾರ್ಧಂ ಪ್ರಸ್ಥಿತೋ ಮಮ|

03072018c ಉತ್ಸೃಜ್ಯ ವಿಪಿನೇ ಸುಪ್ತಾಮನುರಕ್ತಾಂ ಪ್ರಿಯಾಂ ಪ್ರಿಯ||

“ಜೂಜುಗಾರ! ನನ್ನ ವಸ್ತ್ರವನ್ನು ಕತ್ತರಿಸಿ ಹೊರಟುಹೋದ ನೀನು ಎಲ್ಲಿದ್ದೀಯೆ? ಪ್ರಿಯ! ಮಲಗಿ ನಿದ್ರಿಸುತ್ತಿದ್ದ ಪ್ರಿಯೆಯನ್ನು ವಿಪಿನದಲ್ಲಿಯೇ ಬಿಟ್ಟು ಹೋದೆಯಲ್ಲ?

03072019a ಸಾ ವೈ ಯಥಾ ಸಮಾದಿಷ್ಟಾ ತತ್ರಾಸ್ತೇ ತ್ವತ್ಪ್ರತೀಕ್ಷಿಣೀ|

03072019c ದಹ್ಯಮಾನಾ ದಿವಾರಾತ್ರಂ ವಸ್ತ್ರಾರ್ಧೇನಾಭಿಸಂವೃತಾ||

ನೀನು ತೋರಿಸಿದಲ್ಲಿಯೇ ಅವಳು ಹಗಲು ರಾತ್ರಿಯೂ ದಹಿಸುತ್ತಾ ಅರ್ಧವಸ್ತ್ರವನ್ನೇ ಧರಿಸಿ ನಿನ್ನನ್ನು ಪ್ರತೀಕ್ಷಿಸುತ್ತಾ ಇದ್ದಾಳೆ.

03072020a ತಸ್ಯಾ ರುದಂತ್ಯಾಃ ಸತತಂ ತೇನ ದುಃಖೇನ ಪಾರ್ಥಿವ|

03072020c ಪ್ರಸಾದಂ ಕುರು ವೈ ವೀರ ಪ್ರತಿವಾಕ್ಯಂ ಪ್ರಯಚ್ಚ ಚ||

ಪಾರ್ಥಿವ! ನಿನ್ನ ದುಃಖದಿಂದಲೇ ಅವಳು ಸತತವಾಗಿ ರೋದಿಸುತ್ತಿದ್ದಾಳೆ. ವೀರ! ಅವಳಲ್ಲಿ ದಯೆತೋರಿಸಿ ಪ್ರತಿವಾಕ್ಯವನ್ನು ನೀಡು.”

03072021a ತಸ್ಯಾಸ್ತತ್ಪ್ರಿಯಮಾಖ್ಯಾನಂ ಪ್ರಬ್ರವೀಹಿ ಮಹಾಮತೇ|

03072021c ತದೇವ ವಾಕ್ಯಂ ವೈದರ್ಭೀ ಶ್ರೋತುಮಿಚ್ಚತ್ಯನಿಂದಿತಾ||

ಮಹಾಮತೇ! ಅವಳಿಗೆ ಪ್ರಿಯವಾದ ಕಥೆಯನ್ನು ಪುನಃ ಹೇಳು. ಅದೇ ಮಾತುಗಳನ್ನು ಅನಿಂದಿತೆ ವೈದರ್ಭಿಯು ಕೇಳಲಿಚ್ಛಿಸುತ್ತಾಳೆ.

03072022a ಏತಚ್ಛೃತ್ವಾ ಪ್ರತಿವಚಸ್ತಸ್ಯ ದತ್ತಂ ತ್ವಯಾ ಕಿಲ|

03072022c ಯತ್ಪುರಾ ತತ್ಪುನಸ್ತ್ವತ್ತೋ ವೈದರ್ಭೀ ಶ್ರೋತುಮಿಚ್ಚತಿ||

ನೀನು ಕೊಟ್ಟ ಪ್ರತಿವಾಕ್ಯವನ್ನು ಕೇಳಿದಾಗಿನಿಂದ ಅದೇ ಹಿಂದಿನ ಮಾತುಗಳನ್ನು ಪುನಃ ಕೇಳಲು ವೈದರ್ಭಿಯು ಇಚ್ಚಿಸುತ್ತಾಳೆ.’’”

03072023 ಬೃಹದಶ್ವ ಉವಾಚ|

03072023a ಏವಮುಕ್ತಸ್ಯ ಕೇಶಿನ್ಯಾ ನಲಸ್ಯ ಕುರುನಂದನ|

03072023c ಹೃದಯಂ ವ್ಯಥಿತಂ ಚಾಸೀದಶ್ರುಪೂರ್ಣೇ ಚ ಲೋಚನೇ||

ಬೃಹದಶ್ವನು ಹೇಳಿದನು: “ಕುರುನಂದನ! ಈ ರೀತಿ ಕೇಶಿನಿಯು ಹೇಳಿದಾಗ ನಲನ ಹೃದಯವು ವ್ಯಥಿತಗೊಂದು ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿತು.

03072024a ಸ ನಿಗೃಹ್ಯಾತ್ಮನೋ ದುಃಖಂ ದಹ್ಯಮಾನೋ ಮಹೀಪತಿಃ|

03072024c ಬಾಷ್ಪಸಂದಿಗ್ಧಯಾ ವಾಚಾ ಪುನರೇವೇದಮಬ್ರವೀತ್||

ದಹಿಸುತ್ತಿರುವ ದುಃಖವನ್ನು ಅದುಮಿಟ್ಟು ಮಹೀಪತಿಯು ಕಣ್ಣೀರಿನಿಂದ ಕಟ್ಟಿದ ಕಂಠದಲ್ಲಿ ಆ ಮಾತುಗಳನ್ನು ಪುನಃ ಹೇಳಿದನು:

03072025a ವೈಷಮ್ಯಮಪಿ ಸಂಪ್ರಾಪ್ತಾ ಗೋಪಾಯಂತಿ ಕುಲಸ್ತ್ರಿಯಃ|

03072025c ಆತ್ಮಾನಮಾತ್ಮನಾ ಸತ್ಯೋ ಜಿತಸ್ವರ್ಗಾ ನ ಸಂಶಯಃ||

“ಕುಲಸ್ತ್ರೀಯರು ಕಷ್ಟಗಳು ಬಂದರೂ ತಮ್ಮನ್ನು ತಾವೇ ರಕ್ಷಿಸಿಕೊಳ್ಳುತ್ತಾರೆ. ನಿಜವಾಗಿಯೂ ಅವರು ಜಿತಸ್ವರ್ಗಿಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ. ಪತಿಯು ಇಲ್ಲದಿದ್ದರೂ ಇವರು ಎಂದೂ ಕೃದ್ಧರಾಗುವುದಿಲ್ಲ.

03072026a ರಹಿತಾ ಭರ್ತೃಭಿಶ್ಚೈವ ನ ಕ್ರುಧ್ಯಂತಿ ಕದಾ ಚನ|

03072026c ಪ್ರಾಣಾಂಶ್ಚಾರಿತ್ರಕವಚಾ ಧಾರಯಂತೀಹ ಸತ್ಸ್ತ್ರಿಯಃ||

ವಿಷಮ ಸ್ಥಿತಿಯಲ್ಲಿದ್ದ, ಸುಖದಿಂದ ಪರಿಭ್ರಷ್ಟನಾದ ಮೂಢನೊಬ್ಬನು ಅವಳನ್ನು ಪರಿತ್ಯಜಿಸಿರಬಹುದು. ಆದರೆ ಅಲ್ಲಿ ಕ್ರೋಧಿಸುವುದು ಸರಿಯಲ್ಲ.

03072027a ಪ್ರಾಣಯಾತ್ರಾಂ ಪರಿಪ್ರೇಪ್ಸೋಃ ಶಕುನೈರ್ಹೃತವಾಸಸಃ|

03072027c ಆಧಿಭಿರ್ದಹ್ಯಮಾನಸ್ಯ ಶ್ಯಾಮಾ ನ ಕ್ರೋದ್ಧುಮರ್ಹತಿ||

ಪಕ್ಷಿಗಳಿಂದ ವಸ್ತ್ರಗಳನ್ನು ಅಪಹರಿಸಲ್ಪಟ್ಟವನಾಗಿ, ಸುಡುತ್ತಿರುವ ಮನಸ್ಸುಳ್ಳವನಾಗಿದ್ದ ಅವನು ಬಿಟ್ಟು ಹೋಗಿದ್ದುದಕ್ಕೆ ಸುಂದರಿಯು ಕ್ರೋಧಿಸುವುದು ಸರಿಯಲ್ಲ.

03072028a ಸತ್ಕೃತಾಸತ್ಕೃತಾ ವಾಪಿ ಪತಿಂ ದೃಷ್ಟ್ವಾ ತಥಾಗತಂ|

03072028c ಭ್ರಷ್ಟರಾಜ್ಯಂ ಶ್ರಿಯಾ ಹೀನಂ ಕ್ಷುಧಿತಂ ವ್ಯಸನಾಪ್ಲುತಂ||

ಸತ್ಕೃತನಾಗಿರಲಿ ಅಥವಾ ಅಸತ್ಕೃತನಾಗಿರಲಿ, ತನ್ನ ಪತಿಯು ರಾಜ್ಯಭ್ರಷ್ಟನಾಗಿ, ಸಂಪತ್ತನ್ನು ಕಳೆದುಕೊಂಡಿದ್ದುದಕ್ಕೆ ಸುಂದರಿಯು ಕೋಪಿಸುವುದು ಸರಿಯಲ್ಲ.”

03072029a ಏವಂ ಬ್ರುವಾಣಸ್ತದ್ವಾಕ್ಯಂ ನಲಃ ಪರಮದುಃಖಿತಃ|

03072029c ನ ಬಾಷ್ಪಮಶಕತ್ಸೋಢುಂ ಪ್ರರುರೋದ ಚ ಭಾರತ||

ಭಾರತ! ಈ ರೀತಿ ನಲನು ಈ ವಾಕ್ಯಗಳನ್ನು ಹೇಳುತ್ತಿದ್ದಂತೆಯೇ ಪರಮ ದುಃಖಿತನಾಗಿ, ಕಣ್ಣೀರನ್ನು ತಡೆಹಿಡಿಯಲು ಅಶಕ್ತನಾಗಿ ಜೋರಾಗಿ ಅಳ ತೊಡಗಿದನು.

03072030a ತತಃ ಸಾ ಕೇಶಿನೀ ಗತ್ವಾ ದಮಯಂತ್ಯೈ ನ್ಯವೇದಯತ್|

03072030c ತತ್ಸರ್ವಂ ಕಥಿತಂ ಚೈವ ವಿಕಾರಂ ಚೈವ ತಸ್ಯ ತಂ||

ಕೇಶಿನಿಯು ದಮಯಂತಿಯ ಬಳಿ ಹೋಗಿ ನಡೆದಿದ್ದೆಲ್ಲವನ್ನೂ ಮತ್ತು ಅವನ ವಿಕಾರ ರೂಪವನ್ನೂ ವರದಿಮಾಡಿದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ನಲಕೇಶಿನೀಸಂವಾದೇ ದ್ವಿಸಪ್ತತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ನಲಕೇಶಿನೀಸಂವಾದ ಎನ್ನುವ ಎಪ್ಪತ್ತೆರಡನೆಯ ಅಧ್ಯಾಯವು.

Related image

Comments are closed.