Aranyaka Parva: Chapter 69

ಆರಣ್ಯಕ ಪರ್ವ: ಇಂದ್ರಲೋಕಾಭಿಗಮನ ಪರ್ವ

೬೯

ವಿದರ್ಭಕ್ಕೆ ಋತುಪರ್ಣನ ಪ್ರಯಾಣ

ದಮಯಂತಿಯ ಸ್ವಯಂವರಕ್ಕೆ ಹೋಗ ಬಯಸಿದ ಋತುಪರ್ಣನು ಬಾಹುಕನನ್ನು ಮರುದಿನ ಸೂರ್ಯೋದಯದೊಳಗೆ ಕುಂಡಿನಪುರಕ್ಕೆ ಕರೆದುಕೊಂಡು ಹೋಗಲು ಹೇಳಿ, ವಾರ್ಷ್ಣೇಯನೊಂದಿಗೆ ಹೊರಟಿದ್ದುದು (೧-೧೬). ಬಾಹುಕನ ಅಶ್ವಕುಶಲತೆಯನ್ನು ನೋಡಿ ಅವನು ನಲನಿರಬಹುದೇ ಎಂದು ವಾರ್ಷ್ಣೇಯನು ಶಂಕಿಸುವುದು (೧೭-೩೪).

Image result for nala damayanti03069001 ಬೃಹದಶ್ವ ಉವಾಚ|

03069001a ಶ್ರುತ್ವಾ ವಚಃ ಸುದೇವಸ್ಯ ಋತುಪರ್ಣೋ ನರಾಧಿಪಃ|

03069001c ಸಾಂತ್ವಯಂ ಶ್ಲಕ್ಷ್ಣಯಾ ವಾಚಾ ಬಾಹುಕಂ ಪ್ರತ್ಯಭಾಷತ||

ಬೃಹದಶ್ವನು ಹೇಳಿದನು: “ಸುದೇವನ ಮಾತುಗಳನ್ನು ಕೇಳಿದ ನರಾಧಿಪ ಋತುಪರ್ಣನು ಸಾಂತ್ವನ ಮತ್ತು ಶ್ಲಾಘನೀಯ ಮಾತುಗಳಿಂದ ಬಾಹುಕನಿಗೆ ಹೇಳಿದನು:

03069002a ವಿದರ್ಭಾನ್ಯಾತುಮಿಚ್ಚಾಮಿ ದಮದಂತ್ಯಾಃ ಸ್ವಯಂವರಂ|

03069002c ಏಕಾಹ್ನಾ ಹಯತತ್ತ್ವಜ್ಞ ಮನ್ಯಸೇ ಯದಿ ಬಾಹುಕ||

“ಬಾಹುಕ! ದಮಯಂತಿಯ ಸ್ವಯಂವರಕ್ಕೆ ವಿದರ್ಭಕ್ಕೆ ಹೋಗಲು ಇಚ್ಚಿಸುತ್ತೇನೆ. ನೀನು ಅಶ್ವ ತತ್ವಜ್ಞ. ಒಂದೇ ದಿನದಲ್ಲಿ ಅಲ್ಲಿಗೆ ಹೋಗಲಿಕ್ಕಾಗುವುದಾದರೆ ಹೇಳು.”

03069003a ಏವಮುಕ್ತಸ್ಯ ಕೌಂತೇಯ ತೇನ ರಾಜ್ಞಾ ನಲಸ್ಯ ಹ|

03069003c ವ್ಯದೀರ್ಯತ ಮನೋ ದುಃಖಾತ್ಪ್ರದಧ್ಯೌ ಚ ಮಹಾಮನಾಃ||

ಕೌಂತೇಯ! ರಾಜನ ಈ ಮಾತುಗಳನ್ನು ಕೇಳಿದ ನಲನ ಮನಸ್ಸು ದುಃಖದಿಂದ ಮುದುಡಿಕೊಂಡಿತು ಮತ್ತು ಆ ಮಹಾಮನಸ್ಕನು ಚಿಂತಿಸತೊಡಗಿದನು:

03069004a ದಮಯಂತೀ ಭವೇದೇತತ್ಕುರ್ಯಾದ್ದುಃಖೇನ ಮೋಹಿತಾ|

03069004c ಅಸ್ಮದರ್ಥೇ ಭವೇದ್ವಾಯಮುಪಾಯಶ್ಚಿಂತಿತೋ ಮಹಾನ್||

“ದಮಯಂತಿಯು ಈ ರೀತಿ ಮಾಡುತ್ತಿದ್ದಾಳೆ ಎಂದರೆ ಅವಳು ದುಃಖದಿಂದ ಮೋಹಿತಳಾಗಿರಬಹುದು ಅಥವಾ ಇದು ನನಗಾಗಿಯೇ ಅವಳು ಯೋಚಿಸಿರುವ ಒಂದು ಮಹಾ ಉಪಾಯವಿರಬಹುದು.

03069005a ನೃಶಂಸಂ ಬತ ವೈದರ್ಭೀ ಕರ್ತುಕಾಮಾ ತಪಸ್ವಿನೀ|

03069005c ಮಯಾ ಕ್ಷುದ್ರೇಣ ನಿಕೃತಾ ಪಾಪೇನಾಕೃತಬುದ್ಧಿನಾ||

ಕ್ಷುದ್ರ ಪಾಪಿ ಬುದ್ಧಿಯಿಲ್ಲದ ನಾನು ಅವಳಿಗೆ ಮೋಸ ಮಾಡಿದ್ದೇನೆ. ಆದುದರಿಂದಲೇ ಆ ತಪಸ್ವಿನಿ ವೈದರ್ಭಿಯು ಈ ಕ್ರೂರ ಕೃತ್ಯವನ್ನು ಮಾಡಲು ಬಯಸಿರಬಹುದು.

03069006a ಸ್ತ್ರೀಸ್ವಭಾವಶ್ಚಲೋ ಲೋಕೇ ಮಮ ದೋಷಶ್ಚ ದಾರುಣಃ|

03069006c ಸ್ಯಾದೇವಮಪಿ ಕುರ್ಯಾತ್ಸಾ ವಿವಶಾ ಗತಸೌಹೃದಾ|

03069006 ಮಮ ಶೋಕೇನ ಸಂವಿಗ್ನಾ ನೈರಾಶ್ಯಾತ್ತನುಮಧ್ಯಮಾ||

ಈ ಲೋಕದಲ್ಲಿ ಸ್ತ್ರೀ ಸ್ವಭಾವವು ಅಚಲ; ಆದರೆ ನನ್ನ ದೋಷವೂ ದಾರುಣವಾಗಿದೆ. ಇದೆಲ್ಲವೂ ಇರಲಿ. ಆದರೂ ಈ ತನುಮದ್ಯಮಳು, ಸೌಹಾರ್ದತೆಯನ್ನು ಮರೆತು, ನನ್ನ ಮೇಲಿನ ಶೋಕದಿಂದ ನಿರಾಶಳಾಗಿ, ಇಂತಹ ಕೆಲಸವನ್ನು ಮಾಡಬಹುದೇ?

03069007a ನ ಚೈವಂ ಕರ್ಹಿ ಚಿತ್ಕುರ್ಯಾತ್ಸಾಪತ್ಯಾ ಚ ವಿಶೇಷತಃ|

03069007c ಯದತ್ರ ತಥ್ಯಂ ಪಥ್ಯಂ ಚ ಗತ್ವಾ ವೇತ್ಸ್ಯಾಮಿ ನಿಶ್ಚಯಂ|

03069007 ಋತುಪರ್ಣಸ್ಯ ವೈ ಕಾಮಮಾತ್ಮಾರ್ಥಂ ಚ ಕರೋಮ್ಯಹಂ||

ಇಲ್ಲ ಅವಳು ಈ ರೀತಿ ಮಾಡುವವಳಲ್ಲ. ಅದರಲ್ಲೂ ವಿಶೇಷವಾಗಿ ಅವಳ ಮಕ್ಕಳಿದ್ದಾರೆ. ಆದ್ದರಿಂದ ನಾನೇ ಅಲ್ಲಿಗೆ ಹೋಗಿ ನಿಶ್ಚಯವಾಗಿ ತಿಳಿದುಕೊಳ್ಳುತ್ತೇನೆ. ನನಗೋಸ್ಕರ ಋತುಪರ್ಣನ ಇಚ್ಛೆಯಂತೆ ಮಾಡುತ್ತೇನೆ.”

03069008a ಇತಿ ನಿಶ್ಚಿತ್ಯ ಮನಸಾ ಬಾಹುಕೋ ದೀನಮಾನಸಃ|

03069008c ಕೃತಾಂಜಲಿರುವಾಚೇದಂ ಋತುಪರ್ಣಂ ನರಾಧಿಪಂ||

ಈ ರೀತಿ ಮನಸ್ಸಿನಲ್ಲಿ ನಿಶ್ಚಯಿಸಿ, ದೀನಮನಸ್ಕ ಬಾಹುಕನು ಅಂಜಲೀಬದ್ಧನಾಗಿ ನರಾಧಿಪ ಋತುಪರ್ಣನನ್ನುದ್ದೇಶಿಸಿ ಹೇಳಿದನು:

03069009a ಪ್ರತಿಜಾನಾಮಿ ತೇ ಸತ್ಯಂ ಗಮಿಷ್ಯಸಿ ನರಾಧಿಪ|

03069009c ಏಕಾಹ್ನಾ ಪುರುಷವ್ಯಾಘ್ರ ವಿದರ್ಭನಗರೀಂ ನೃಪ||

“ನರಾಧಿಪ! ಪುರುಷವ್ಯಾಘ್ರ! ನೃಪ! ನಿನಗೆ ನನ್ನ ನಿಜವಾದ ಮಾತುಗಳನ್ನು ಹೇಳುವುದಾದರೆ ಒಂದೇ ದಿನದಲ್ಲಿ ವಿದರ್ಭನಗರಿಯನ್ನು ತಲುಪಬಹುದು.”

03069010a ತತಃ ಪರೀಕ್ಷಾಂ ಅಶ್ವಾನಾಂ ಚಕ್ರೇ ರಾಜನ್ಸ ಬಾಹುಕಃ|

03069010c ಅಶ್ವಶಾಲಾಮುಪಾಗಮ್ಯ ಭಾಂಗಸ್ವರಿನೃಪಾಜ್ಞಯಾ||

ರಾಜನ್! ನೃಪ ಭಾಂಗಸ್ವರಿಯ ಆಜ್ಞೆಯಂತೆ ಬಾಹುಕನು ಅಶ್ವಶಾಲೆಗೆ ಹೋಗಿ ಅಶ್ವಗಳನ್ನು ಪರೀಕ್ಷಿಸಿದನು.

03069011a ಸ ತ್ವರ್ಯಮಾಣೋ ಬಹುಶ ಋತುಪರ್ಣೇನ ಬಾಹುಕಃ|

03069011c ಅಧ್ಯಗಚ್ಚತ್ಕೃಶಾನಶ್ವಾನ್ಸಮರ್ಥಾನಧ್ವನಿ ಕ್ಷಮಾನ್||

03069012a ತೇಜೋಬಲಸಮಾಯುಕ್ತಾನ್ಕುಲಶೀಲಸಮನ್ವಿತಾನ್|

03069012c ವರ್ಜಿತಾಽಲ್ಲಕ್ಷಣೈರ್ಹೀನೈಃ ಪೃಥುಪ್ರೋಥಾನ್ಮಹಾಹನೂನ್|

03069012 ಶುದ್ಧಾನ್ದಶಭಿರಾವರ್ತೈಃ ಸಿಂಧುಜಾನ್ವಾತರಂಹಸಃ||

ಋತುಪರ್ಣನು ಬಹಳಷ್ಟು ಅವಸರಮಾಡಲು, ಬಾಹುಕನು ನಾಲ್ಕು ತೆಳ್ಳಗಿನ, ಮಾರ್ಗದಲ್ಲಿ ಸಮರ್ಥ, ತೇಜೋಬಲಸಮಾಯುಕ್ತ, ಕುಲಶೀಲಸಮನ್ವಿತ ವಾಯುವೇಗಿ ಸಿಂಧುಜ ಅಶ್ವಗಳನ್ನು ಆರಿಸಿದನು. ವಿಶಾಲ ಹೊರಳೆ ಮತ್ತು ಬಾಯಿಗಳನ್ನು ಹೊಂದಿದ್ದ ಆ ಅಶ್ವಗಳು ಹೀನ ಲಕ್ಷಣಗಳಿಂದ ವರ್ಜಿತವಾಗಿದ್ದವು. ಹತ್ತು ಕುರುಳುಗಳಿಂದ ಶುದ್ಧವಾಗಿದ್ದವು.

03069013a ದೃಷ್ಟ್ವಾ ತಾನಬ್ರವೀದ್ರಾಜಾ ಕಿಂ ಚಿತ್ಕೋಪಸಮನ್ವಿತಃ|

03069013c ಕಿಮಿದಂ ಪ್ರಾರ್ಥಿತಂ ಕರ್ತುಂ ಪ್ರಲಬ್ಧವ್ಯಾ ಹಿ ತೇ ವಯಂ||

ಅವುಗಳನ್ನು ನೋಡಿದ ರಾಜನು ಸ್ವಲ್ಪ ಸಿಟ್ಟಿಗೆದ್ದು ಹೇಳಿದನು: “ಇದೇನು ನೀನು ಮಾಡುತ್ತಿರುವೆ? ನನ್ನನ್ನು ಮೋಸಗೊಳಿಸಲಿಕ್ಕೆಂದೇ ನೀನು ಈ ರೀತಿ ಮಾಡುತ್ತಿರಬಹುದು.

03069014a ಕಥಮಲ್ಪಬಲಪ್ರಾಣಾ ವಕ್ಷ್ಯಂತೀಮೇ ಹಯಾ ಮಮ|

03069014c ಮಹಾನಧ್ವಾ ಚ ತುರಗೈರ್ಗಂತವ್ಯಃ ಕಥಮೀದೃಶೈಃ||

ಈ ಅಲ್ಪಬಲಪ್ರಾಣ ಹಯಗಳು ನನ್ನ ರಥವನ್ನು ಎಳೆಯಬಲ್ಲವೇ? ಹೀಗೆ ಕಾಣುತ್ತಿರುವ ಈ ತುರಂಗಗಳು ಹೇಗೆ ಅ ಮಹಾ ದೂರವನ್ನು ಗಮಿಸಬಲ್ಲವು?”

03069015 ಬಾಹುಕ ಉವಾಚ|

03069015a ಏತೇ ಹಯಾ ಗಮಿಷ್ಯಂತಿ ವಿದರ್ಭಾನ್ನಾತ್ರ ಸಂಶಯಃ|

03069015c ಅಥಾನ್ಯಾನ್ಮನ್ಯಸೇ ರಾಜನ್ಬ್ರೂಹಿ ಕಾನ್ಯೋಜಯಾಮಿ ತೇ||

ಬಾಹುಕನು ಹೇಳಿದನು: “ಈ ಹಯಗಳು ವಿದರ್ಭಕ್ಕೆ ಹೋಗುವವು ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ರಾಜನ್! ಬೇಕೆಂದರೆ ನಿನಗಿಷ್ಟವಾದ ಯಾವ ಕುದುರೆಗಳನ್ನು ಕಟ್ಟಬೇಕೆಂದು ಹೇಳು. ಅವುಗಳನ್ನೇ ಕಟ್ಟುತ್ತೇನೆ.”

03069016 ಋತುಪರ್ಣ ಉವಾಚ|

03069016a ತ್ವಮೇವ ಹಯತತ್ತ್ವಜ್ಞಃ ಕುಶಲಶ್ಚಾಸಿ ಬಾಹುಕ|

03069016c ಯಾನ್ಮನ್ಯಸೇ ಸಮರ್ಥಾಂಸ್ತ್ವಂ ಕ್ಷಿಪ್ರಂ ತಾನೇವ ಯೋಜಯ||

ಋತುಪರ್ಣನು ಹೇಳಿದನು: “ಬಾಹುಕ! ನೀನೇ ಹಯ ತತ್ವಜ್ಞ ಮತ್ತು ಕುಶಲ. ಇವುಗಳು ಆಗುತ್ತವೆ ಎಂದು ನೀನೆಂದರೆ ಬೇಗ ಅವುಗಳನ್ನು ಕಟ್ಟು.””

03069017 ಬೃಹದಶ್ವ ಉವಾಚ|

03069017a ತತಃ ಸದಶ್ವಾಂಶ್ಚತುರಃ ಕುಲಶೀಲಸಮನ್ವಿತಾನ್|

03069017c ಯೋಜಯಾಮಾಸ ಕುಶಲೋ ಜವಯುಕ್ತಾನ್ರಥೇ ನರಃ||

03069018a ತತೋ ಯುಕ್ತಂ ರಥಂ ರಾಜಾ ಸಮಾರೋಹತ್ತ್ವರಾನ್ವಿತಃ|

03069018c ಅಥ ಪರ್ಯಪತನ್ಭೂಮೌ ಜಾನುಭಿಸ್ತೇ ಹಯೋತ್ತಮಾಃ||

ಬೃಹದಶ್ವನು ಹೇಳಿದನು: “ನಂತರ ನಲನು ಕುಶಲತೆಯಿಂದ ಆ ನಾಲ್ಕು ಕುಲಶೀಲಸಮನ್ವಿತ ಅಶ್ವಗಳನ್ನು ರಥಕ್ಕೆ ಕಟ್ಟಿದನು. ರಾಜನು ತಯಾರಿದ್ದ ರಥವನ್ನು ಬೇಗನೇ ಏರಿದನು ಮತ್ತು ಆ ಉತ್ತಮ ಹಯಗಳು ಭೂಮಿಯಮೇಲೆ ಕಾಲುಗಳನ್ನೂರಿದವು.

03069019a ತತೋ ನರವರಃ ಶ್ರೀಮಾನ್ನಲೋ ರಾಜಾ ವಿಶಾಂ ಪತೇ|

03069019c ಸಾಂತ್ವಯಾಮಾಸ ತಾನಶ್ವಾಂಸ್ತೇಜೋಬಲಸಮನ್ವಿತಾನ್||

03069020a ರಶ್ಮಿಭಿಶ್ಚ ಸಮುದ್ಯಮ್ಯ ನಲೋ ಯಾತುಮಿಯೇಷ ಸಃ|

03069020c ಸೂತಮಾರೋಪ್ಯ ವಾರ್ಷ್ಣೇಯಂ ಜವಮಾಸ್ಥಾಯ ವೈ ಪರಂ||

ವಿಶಾಂಪತೇ! ನರವರ ಶ್ರೀಮಾನ್ ನಲರಾಜನು ಸೂತ ವಾರ್ಷ್ಣೇಯನನ್ನು ರಥದಲ್ಲಿ ಕೂರಿಸಿಕೊಂಡು ತೇಜೋಬಲಸಮನ್ವಿತ ಆ ಅಶ್ವಗಳನ್ನು ಸಂತವಿಸಿ, ಹಗ್ಗಗಳಿಂದ ಅವುಗಳನ್ನು ನಿಯಂತ್ರಿಸುತ್ತಾ ಹೊರಟನು.

03069021a ತೇ ಚೋದ್ಯಮಾನಾ ವಿಧಿನಾ ಬಾಹುಕೇನ ಹಯೋತ್ತಮಾಃ|

03069021c ಸಮುತ್ಪೇತುರಿವಾಕಾಶಂ ರಥಿನಂ ಮೋಹಯನ್ನಿವ||

ಬಾಹುಕನಿಂದ ವಿಧಿವತ್ತಾಗಿ ಚೋದಿತಗೊಂಡ ಆ ಉತ್ತಮ ಹಯಗಳು ರಥದಲ್ಲಿ ಕುಳಿತವರನ್ನು ಮೂರ್ಛೆಗೊಳಿಸುವಂತೆ ಆಕಾಶದಲ್ಲಿ ಹಾರಿದವು.

03069022a ತಥಾ ತು ದೃಷ್ಟ್ವಾ ತಾನಶ್ವಾನ್ವಹತೋ ವಾತರಂಹಸಃ|

03069022c ಅಯೋಧ್ಯಾಧಿಪತಿರ್ಧೀಮಾನ್ವಿಸ್ಮಯಂ ಪರಮಂ ಯಯೌ||

ವಾಯುವೇಗದಲ್ಲಿ ಓಡುತ್ತಿದ್ದ ಆ ಅಶ್ವಗಳನ್ನು ನೋಡಿದ ಅಯೋಧ್ಯಾಧಿಪತಿ ಧೀಮಂತನು ಪರಮ ವಿಸ್ಮಿತನಾದನು.

03069023a ರಥಘೋಷಂ ತು ತಂ ಶ್ರುತ್ವಾ ಹಯಸಂಗ್ರಹಣಂ ಚ ತತ್|

03069023c ವಾರ್ಷ್ಣೇಯಶ್ಚಿಂತಯಾಮಾಸ ಬಾಹುಕಸ್ಯ ಹಯಜ್ಞತಾಂ||

ರಥಘೋಷವನ್ನು ಕೇಳಿ ಮತ್ತು ಹಯಗಳ ನಿಯಂತ್ರಣವನ್ನು ನೋಡಿ ವಾರ್ಷ್ಣೇಯನು ಬಾಹುಕನ ಹಯವಿದ್ಯೆಯ ಕುರಿತು ಯೋಚಿಸತೊಡಗಿದನು.

03069024a ಕಿಂ ನು ಸ್ಯಾನ್ಮಾತಲಿರಯಂ ದೇವರಾಜಸ್ಯ ಸಾರಥಿಃ|

03069024c ತಥಾ ಹಿ ಲಕ್ಷಣಂ ವೀರೇ ಬಾಹುಕೇ ದೃಶ್ಯತೇ ಮಹತ್||

“ಇವನು ದೇವರಾಜನ ಸಾರಥಿ ಮಾತಲಿಯಿರಬಹುದೇ? ಯಾಕೆಂದರೆ ಈ ವೀರ ಬಾಹುಕನಲ್ಲಿ ಅದೇ ಮಾಹಾ ಲಕ್ಷಣಗಳು ಕಾಣುತ್ತಿವೆ.

03069025a ಶಾಲಿಹೋತ್ರೋಽಥ ಕಿಂ ನು ಸ್ಯಾದ್ಧಯಾನಾಂ ಕುಲತತ್ತ್ವವಿತ್|

03069025c ಮಾನುಷಂ ಸಮನುಪ್ರಾಪ್ತೋ ವಪುಃ ಪರಮಶೋಭನಂ||

ಅಥವಾ ಇವನು ಅಶ್ವಗಳ ಕುಲತತ್ವವನ್ನು ಅರಿತ, ಈಗ ಇಷ್ಟು ಕುರೂಪಿಯಾದ ಮನುಷ್ಯನ ದೇಹವನ್ನು ಹೊಂದಿರುವ ಶಾಲಿಹೋತ್ರನೇ?

03069026a ಉತಾಹೋ ಸ್ವಿದ್ಭವೇದ್ರಾಜಾ ನಲಃ ಪರಪುರಂಜಯಃ|

03069026c ಸೋಽಯಂ ನೃಪತಿರಾಯಾತ ಇತ್ಯೇವಂ ಸಮಚಿಂತಯತ್||

ಅಥವಾ ಇವನು ಪರಪುರಂಜಯ ರಾಜ ನಲನಾಗಿರಬಹುದೇ? ಆ ನೃಪತಿಯು ಇಲ್ಲಿಗೆ ಬಂದಿರಬಹುದೇ?” ಎಂದು ಅವನು ಯೋಚಿಸಿದನು.

03069027a ಅಥ ವಾ ಯಾಂ ನಲೋ ವೇದ ವಿದ್ಯಾಂ ತಾಮೇವ ಬಾಹುಕಃ|

03069027c ತುಲ್ಯಂ ಹಿ ಲಕ್ಷಯೇ ಜ್ಞಾನಂ ಬಾಹುಕಸ್ಯ ನಲಸ್ಯ ಚ||

03069028a ಅಪಿ ಚೇದಂ ವಯಸ್ತುಲ್ಯಮಸ್ಯ ಮನ್ಯೇ ನಲಸ್ಯ ಚ|

03069028c ನಾಯಂ ನಲೋ ಮಹಾವೀರ್ಯಸ್ತದ್ವಿದ್ಯಸ್ತು ಭವಿಷ್ಯತಿ||

03069029a ಪ್ರಚ್ಚನ್ನಾ ಹಿ ಮಹಾತ್ಮಾನಶ್ಚರಂತಿ ಪೃಥಿವೀಮಿಮಾಂ|

03069029c ದೈವೇನ ವಿಧಿನಾ ಯುಕ್ತಾಃ ಶಾಸ್ತ್ರೋಕ್ತೈಶ್ಚ ವಿರೂಪಣೈಃ||

03069030a ಭವೇತ್ತು ಮತಿಭೇದೋ ಮೇ ಗಾತ್ರವೈರೂಪ್ಯತಾಂ ಪ್ರತಿ|

03069030c ಪ್ರಮಾಣಾತ್ಪರಿಹೀನಸ್ತು ಭವೇದಿತಿ ಹಿ ಮೇ ಮತಿಃ||

“ನಲನಿಗೆ ತಿಳಿದಿದ್ದ ವಿದ್ಯೆ ಬಾಹುಕನಿಗೂ ತಿಳಿದಂತಿದೆ. ಬಾಹುಕ ಮತ್ತು ನಲನ ಜ್ಞಾನವು ಸರಿಸಮನಾಗಿ ತೋರುತ್ತಿದೆ. ಇವನ ಮತ್ತು ನಲನ ವಯಸ್ಸು ಕೂಡ ಒಂದೇ ಇರಬಹುದು ಎಂದು ನನಗನ್ನಿಸುತ್ತದೆ. ಇವನು ಮಹಾವೀರ ನಲನಲ್ಲ; ಆದರೂ ಇವನಲ್ಲಿ ಆ ವಿದ್ವತ್ತು ಇದೆ. ಶಾಸ್ತ್ರಗಳಲ್ಲಿ ಹೇಳಿರುವಂತೆ ಮಹಾತ್ಮರು ದೈವ ವಿಧಿಗಳೆರಡರಿಂದಲೂ ಕೂಡಿ ಈ ಪೃಥಿವಿಯನ್ನು ತಿರುಗಿಸುತ್ತಿರುತ್ತಾರೆ ಎಂದು ಕೇಳಿದ್ದೇನೆ. ಆದರೂ ಈ ಅಕಾರ ವಿರೂಪಗಳ ಕುರಿತು ಸಂದಿಗ್ಧನಾಗಿದ್ದೇನೆ. ನನ್ನ ಮತಕ್ಕೆ ಪ್ರಮಾಣಗಳಿಲ್ಲ ಎಂದನ್ನಿಸುತ್ತದೆ.

03069031a ವಯಃಪ್ರಮಾಣಂ ತತ್ತುಲ್ಯಂ ರೂಪೇಣ ತು ವಿಪರ್ಯಯಃ|

03069031c ನಲಂ ಸರ್ವಗುಣೈರ್ಯುಕ್ತಂ ಮನ್ಯೇ ಬಾಹುಕಮಂತತಃ||

ವಯಸ್ಸಿನಲ್ಲಿ ಅವನ ಸರಿಸಮಾನನಾಗಿದ್ದಾನೆ ಆದರೆ ರೂಪದಲ್ಲಿ ವಿಪರ್ಯನಾಗಿದ್ದಾನೆ. ಆದರೂ ಕೊನೆಯಲ್ಲಿ ಬಾಹುಕನೇ ಸರ್ವಗುಣಯುಕ್ತ ನಲನೆಂದು ತೀರ್ಮಾನಿಸುತ್ತೇನೆ.”

03069032a ಏವಂ ವಿಚಾರ್ಯ ಬಹುಶೋ ವಾರ್ಷ್ಣೇಯಃ ಪರ್ಯಚಿಂತಯತ್|

03069032c ಹೃದಯೇನ ಮಹಾರಾಜ ಪುಣ್ಯಶ್ಲೋಕಸ್ಯ ಸಾರಥಿಃ||

ಈ ರೀತಿ ಮಹಾರಾಜ ಪುಣ್ಯಶ್ಲೋಕನ ಸಾರಥಿ ವಾರ್ಷ್ಣೇಯನು ಬಹಳಷ್ಟು ವಿಚಾರಿಸಿ ತನ್ನ ಹೃದಯದಲ್ಲಿ ಚಿಂತಿಸತೊಡಗಿದನು.

03069033a ಋತುಪರ್ಣಸ್ತು ರಾಜೇಂದ್ರ ಬಾಹುಕಸ್ಯ ಹಯಜ್ಞತಾಂ|

03069033c ಚಿಂತಯನ್ಮುಮುದೇ ರಾಜಾ ಸಹವಾರ್ಷ್ಣೇಯಸಾರಥಿಃ||

ಆದರೆ ರಾಜೇಂದ್ರ ಋತುಪರ್ಣನು ಬಾಹುಕನ ಹಯಜ್ಞಾನದ ಕುರಿತು ಯೋಚಿಸಿ ಸಾರಥಿ ವಾರ್ಷ್ಣೇಯನೊಂದಿಗೆ ಹರ್ಷಿತನಾದನು.

03069034a ಬಲಂ ವೀರ್ಯಂ ತಥೋತ್ಸಾಹಂ ಹಯಸಂಗ್ರಹಣಂ ಚ ತತ್|

03069034c ಪರಂ ಯತ್ನಂ ಚ ಸಂಪ್ರೇಕ್ಷ್ಯ ಪರಾಂ ಮುದಮವಾಪ ಹ||

ಅವನ ಬಲ, ವೀರ್ಯ, ಉತ್ಸಾಹ, ಹಯಗಳ ಮೇಲಿದ್ದ ನಿಯಂತ್ರಣ ಮತ್ತು ಪರಮ ಯತ್ನವನ್ನು ನೋಡಿ ಅವನು ಅತೀವ ಸಂತಸಗೊಂಡನು.”

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಇಂದ್ರಲೋಕಾಭಿಗಮನಪರ್ವಣಿ ನಲೋಪಾಖ್ಯಾನೇ ಋತುಪರ್ಣವಿದರ್ಭಗಮನೇ ಏಕೋನಸಪ್ತತಿತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಇಂದ್ರಲೋಕಾಭಿಗಮನಪರ್ವದಲ್ಲಿ ನಲೋಪಾಖ್ಯಾನದಲ್ಲಿ ಋತುಪರ್ಣನ ವಿದರ್ಭಗಮನ ಎನ್ನುವ ಅರವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.