ಆರಣ್ಯಕ ಪರ್ವ: ಅರಣ್ಯ ಪರ್ವ
Contents
Toggle೯
ಧೃತರಾಷ್ಟ್ರನಿಗೆ ವ್ಯಾಸನ ಸಲಹೆ
ದುರ್ಯೋಧನನು ಒಬ್ಬಂಟಿಗನಾಗಿ ಪಾಂಡವರೊಂದಿಗೆ ವನದಲ್ಲಿ ವಾಸಿಸಬೇಕು; ಅದರಿಂದ ಅವನಿಗೆ ಅವರಲ್ಲಿ ಸ್ನೇಹವು ಬೆಳೆಯುತ್ತದೆ ಎಂದು ವ್ಯಾಸನು ಧೃತರಾಷ್ಟ್ರನಿಗೆ ಸಲಹೆ ನೀಡುವುದು (೧-೧೨).
03009001 ವ್ಯಾಸ ಉವಾಚ|
03009001a ಧೃತರಾಷ್ಟ್ರ ಮಹಾಪ್ರಾಜ್ಞ ನಿಬೋಧ ವಚನಂ ಮಮ|
03009001c ವಕ್ಷ್ಯಾಮಿ ತ್ವಾ ಕೌರವಾಣಾಂ ಸರ್ವೇಷಾಂ ಹಿತಮುತ್ತಮಂ||
ವ್ಯಾಸನು ಹೇಳಿದನು: “ಧೃತರಾಷ್ಟ್ರ! ಮಹಾಪ್ರಾಜ್ಞ! ನನ್ನ ಮಾತನ್ನು ಅರ್ಥಮಾಡಿಕೋ. ಸರ್ವ ಕೌರವರ ಉತ್ತಮ ಹಿತಕ್ಕಾಗಿ ಮಾತನಾಡುತ್ತಿದ್ದೇನೆ.
03009002a ನ ಮೇ ಪ್ರಿಯಂ ಮಹಾಬಾಹೋ ಯದ್ಗತಾಃ ಪಾಂಡವಾ ವನಂ|
03009002c ನಿಕೃತ್ಯಾ ನಿರ್ಜಿತಾಶ್ಚೈವ ದುರ್ಯೋಧನವಶಾನುಗೈಃ||
ಮಹಾಬಾಹೋ! ದುರ್ಯೋಧನ ಮತ್ತು ಅವನ ಅನುಯಾಯಿಗಳಿಂದ ಮೋಸದಲ್ಲಿ ಸೋತು ವನಕ್ಕೆ ಆ ಪಾಂಡವರು ಹೋದುದು ನನಗೆ ಇಷ್ಟವಾಗಲಿಲ್ಲ.
03009003a ತೇ ಸ್ಮರಂತಃ ಪರಿಕ್ಲೇಶಾನ್ವರ್ಷೇ ಪೂರ್ಣೇ ತ್ರಯೋದಶೇ|
03009003c ವಿಮೋಕ್ಷ್ಯಂತಿ ವಿಷಂ ಕ್ರುದ್ಧಾಃ ಕರವೇಯೇಷು ಭಾರತ||
ಭಾರತ! ಹದಿಮೂರು ವರ್ಷಗಳು ಪೂರ್ಣವಾದನಂತರ ಅವರು ತಮ್ಮ ಕಷ್ಟಗಳನ್ನು ನೆನೆಸಿಕೊಂಡು ಕೌರವರ ಮೇಲೆ ಕ್ರೋಧದ ವಿಷವನ್ನು ಬಿಡುಗಡೆಮಾಡುತ್ತಾರೆ.
03009004a ತದಯಂ ಕಿಂ ನು ಪಾಪಾತ್ಮಾ ತವ ಪುತ್ರಃ ಸುಮಂದಧೀಃ|
03009004c ಪಾಂಡವಾನ್ನಿತ್ಯಸಂಕ್ರುದ್ಧೋ ರಾಜ್ಯಹೇತೋರ್ಜಿಘಾಂಸತಿ||
ಏಕೆ ನಿನ್ನ ಈ ಪಾಪಾತ್ಮ, ಅತಿಮಂದಮತಿ ಪುತ್ರನು ಪಾಂಡವರ ಮೇಲೆ ಸದಾ ಸಿಟ್ಟುಮಾಡಿಕೊಂಡು, ಅವರನ್ನು ಸಂಹರಿಸಿ ರಾಜ್ಯವನ್ನು ಅಪಹರಿಸಲು ಬಯಸುತ್ತಾನೆ?
03009005a ವಾರ್ಯತಾಂ ಸಾಧ್ವಯಂ ಮೂಢಃ ಶಮಂ ಗಚ್ಚತು ತೇ ಸುತಃ|
03009005c ವನಸ್ಥಾಂಸ್ತಾನಯಂ ಹಂತುಮಿಚ್ಚನ್ಪ್ರಾಣೈರ್ವಿಮೋಕ್ಷ್ಯತೇ||
ಆ ಮೂಢನನ್ನು ಈಗಲೇ ತಡೆಹಿಡಿಯಬೇಕು. ನಿನ್ನ ಮಗನು ಶಾಂತನಾಗಬೇಕು. ವನದಲ್ಲಿ ಅವರನ್ನು ಕೊಲ್ಲಲ್ಲು ಬಯಸಿದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಾನೆ.
03009006a ಯಥಾಹ ವಿದುರಃ ಪ್ರಾಜ್ಞೋ ಯಥಾ ಭೀಷ್ಮೋ ಯಥಾ ವಯಂ|
03009006c ಯಥಾ ಕೃಪಶ್ಚ ದ್ರೋಣಶ್ಚ ತಥಾ ಸಾಧು ವಿಧೀಯತಾಂ||
ಪ್ರಾಜ್ಞ ವಿದುರನು ಏನು ಹೇಳಿದ್ದಾನೋ, ಭೀಷ್ಮ, ನಾನು, ಕೃಪ ಮತ್ತು ದ್ರೋಣರು ಏನು ಹೇಳುತ್ತಿದ್ದೇವೋ ಅದನ್ನು ಒಳ್ಳೆಯದೆಂದೇ ತಿಳಿ.
03009007a ವಿಗ್ರಹೋ ಹಿ ಮಹಾಪ್ರಾಜ್ಞ ಸ್ವಜನೇನ ವಿಗರ್ಹಿತಃ|
03009007c ಅಧರ್ಮ್ಯಮಯಶಸ್ಯಂ ಚ ಮಾ ರಾಜನ್ಪ್ರತಿಪದ್ಯಥಾಃ||
03009008a ಸಮೀಕ್ಷಾ ಯಾದೃಶೀ ಹ್ಯಸ್ಯ ಪಾಂಡವಾನ್ಪ್ರತಿ ಭಾರತ|
03009008c ಉಪೇಕ್ಷ್ಯಮಾಣಾ ಸಾ ರಾಜನ್ಮಹಾಂತಮನಯಂ ಸ್ಪೃಶೇತ್||
ಮಹಾಪ್ರಾಜ್ಞ! ಸ್ವಜನರೊಂದಿಗೆ ಯುದ್ಧಮಾಡುವುದು ಖಂಡನಾರ್ಹ. ಯಶಸ್ಸನ್ನು ತರದ ಅಧರ್ಮವನ್ನು ಪ್ರತಿಪಾದಿಸಬೇಡ ರಾಜನ್! ಪಾಂಡವರ ಕುರಿತು ಈ ರೀತಿಯ ಸಮೀಕ್ಷೆಯಿದೆ ಭಾರತ! ಅವರನ್ನು ಉಪೇಕ್ಷೆಮಾಡುವುದರಿಂದ ಅನ್ಯಾಯವಾಗಿ ಮಹಾ ಅಂತ್ಯವನ್ನು ತಲುಪಿದ ಹಾಗೆ ರಾಜನ್!
03009009a ಅಥ ವಾಯಂ ಸುಮಂದಾತ್ಮಾ ವನಂ ಗಚ್ಚತು ತೇ ಸುತಃ|
03009009c ಪಾಂಡವೈಃ ಸಹಿತೋ ರಾಜನ್ನೇಕ ಏವಾಸಹಾಯವಾನ್||
ರಾಜನ್! ಈಗ ನಿನ್ನ ಮಂದಾತ್ಮ ಸುತನು ತನ್ನ ಸಹಾಯಕರಿಲ್ಲದೇ ಒಬ್ಬಂಟಿಗನಾಗಿ ವನಕ್ಕೆ ಹೋಗಿ ಪಾಂಡವರ ಸಹಿತ ವಾಸಿಸಲಿ.
03009010a ತತಃ ಸಂಸರ್ಗಜಃ ಸ್ನೇಹಃ ಪುತ್ರಸ್ಯ ತವ ಪಾಂಡವೈಃ|
03009010c ಯದಿ ಸ್ಯಾತ್ಕೃತಕಾರ್ಯೋಽದ್ಯ ಭವೇಸ್ತ್ವಂ ಮನುಜೇಶ್ವರ||
ಮನುಜೇಶ್ವರ! ಈ ಸಂಸರ್ಗದಿಂದ ನಿನ್ನ ಪುತ್ರನಿಗೆ ಪಾಂಡವರೊಡನೆ ಸ್ನೇಹವುಂಟಾದರೆ ನೀನು ಕಾರ್ಯಸಿದ್ಧಿಯನ್ನು ಹೊಂದಿದಂತೆ!
03009011a ಅಥ ವಾ ಜಾಯಮಾನಸ್ಯ ಯಚ್ಶೀಲಮನುಜಾಯತೇ|
03009011c ಶ್ರೂಯತೇ ತನ್ಮಹಾರಾಜ ನಾಮೃತಸ್ಯಾಪಸರ್ಪತಿ||
ಮಹಾರಾಜ! ಆದರೂ ಹುಟ್ಟುವಾಗಲೇ ಇದ್ದ ಶೀಲವು ಅವನು ಮೃತನಾಗುವವರೆಗೆ ಅವನನ್ನು ಬಿಡುವುದಿಲ್ಲ ಎಂದು ಕೇಳಿದ್ದೇವೆ.
03009012a ಕಥಂ ವಾ ಮನ್ಯತೇ ಭೀಷ್ಮೋ ದ್ರೋಣೋ ವಾ ವಿದುರೋಽಪಿ ವಾ|
03009012c ಭವಾನ್ವಾತ್ರ ಕ್ಷಮಂ ಕಾರ್ಯಂ ಪುರಾ ಚಾರ್ಥೋಽತಿವರ್ತತೇ||
ಇದರ ಕುರಿತು ಭೀಷ್ಮ, ದ್ರೋಣ, ವಿದುರ ಮತ್ತು ನಿನ್ನ ವಿಚಾರವೇನು? ವಿಷಯವು ಕೈ ತಪ್ಪಿ ಹೋಗುವುದರ ಮೊದಲೇ ಯಾವುದು ಸರಿಯೋ ಅದನ್ನು ಮಾಡಬೇಕು!”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅರಣ್ಯಪರ್ವಣಿ ವ್ಯಾಸವಾಕ್ಯೇ ನವವೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆರಣ್ಯಕಪರ್ವದಲ್ಲಿ ಅರಣ್ಯಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಒಂಭತ್ತನೆಯ ಅಧ್ಯಾಯವು.
