ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ನವಮಃ ಖಂಡಃ
ಯಥಾ ಸೋಮ್ಯ ಮಧು ಮಧುಕೃತೋ ನಿಸ್ತಿಷ್ಠಂತಿ ನಾನಾತ್ಯಯಾನಾಂ ವೃಕ್ಷಾಣಾರಸಾನ್ಸಮವಹಾರಮೇಕತಾರಸಂ ಗಮಯಂತಿ ।। 1 ।। ತೇ ಯಥಾ ತತ್ರ ನ ವಿವೇಕಂ ಲಭಂತೇಽಮುಷ್ಯಾಹಂ ವೃಕ್ಷಸ್ಯ ರಸೋಽಸ್ಮ್ಯಮುಷ್ಯಾಹಂ ವೃಕ್ಷಸ್ಯ ರಸೋಽಸ್ಮೀತ್ಯೇವಮೇವ ಖಲು ಸೋಮ್ಯೇಮಾಃ ಸರ್ವಾಃ ಪ್ರಜಾಃ ಸತಿ ಸಮ್ಪದ್ಯ ನ ವಿದುಃ ಸತಿ ಸಮ್ಪದ್ಯಾಮಹ ಇತಿ ।। 2 ।। ತ ಇಹ ವ್ಯಾಘ್ರೋ ವಾ ಸಿಂಹೋ ವಾ ವೃಕೋ ವಾ ವರಾಹೋ ವಾ ಕೀಟೋ ವಾ ಪತಂಗೋ ವಾ ದಶೋ ವಾ ಮಶಕೋ ವಾ ಯದ್ಯದ್ಭವಂತಿ ತದಾಭವಂತಿ ।। 3 ।। ಸ ಯ ಏಷೋಽಣಿಮೈತದಾತ್ಮ್ಯಮಿದ ಸರ್ವಂ ತತ್ಸತ್ಯ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 4 ।।
“ಮಗನೇ! ಜೇನುಹುಳುಗಳು ನಾನಾ ದಿಕ್ಕುಗಳಿಂದ ರಸಗಳನ್ನು ಕೂಡಿಸಿ ಹೇಗೆ ಜೇನನ್ನು ಸಿದ್ಧಪಡಿಸುತ್ತವೆಯೋ ಮತ್ತು ಹೇಗೆ ಆ ಜೇನಿನಲ್ಲಿರುವ ರಸಗಳಿಗೆ ನಾನು ಇಂಥ ಗಿಡದ ರಸವು, ನಾನು ಇಂಥ ಗಿಡದ ರಸವು ಎಂಬ ವ್ಯಾತ್ಯಾಸವು ತಿಳಿದಿರುವುದಿಲ್ಲವೋ ಹಾಗೆ ಈ ಎಲ್ಲ ಪ್ರಜೆಗಳೂ “ಸತ್” ದಲ್ಲಿ ಲೀನವಾಗಿ ನಾವು ಸತ್ತಿನಲ್ಲಿ ಲೀನವಾಗಿದ್ದೇವೆ ಎನ್ನುವುದನ್ನು ಅರಿಯುವುದಿಲ್ಲ. ಆ ಪ್ರಜೆಗಳು (ಪ್ರಾಣಿಮಾತ್ರಗಳು) ಇಲ್ಲಿ ಮೊದಲು ಹುಲಿ, ಸಿಂಹ, ತೋಳ, ವರಾಹ, ಕೀಟ, ಜಿಗಳೆ, ಸೊಳ್ಳೆ ಇವುಗಳಲ್ಲಿ ಯಾವುದೋ ಒಂದಾಗಿ ಯಾವ ರೂಪದಿಂದ ಇದ್ದವೋ ಅದೇ ರೂಪವನ್ನು ಪುನಃ ಧರಿಸುತ್ತವೆ. ಆ ಸತ್ (ಪರಾದೇವತೆಯು) ಅತ್ಯಂತ ಸೂಕ್ಷ್ಮವು. ಇವೆಲ್ಲವೂ ಆತ್ಮಸ್ವರೂಪವು. ಅದು ಸತ್ಯ. ಅದೇ ಆತ್ಮವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ಇದನ್ನು ಕೇಳಿ ಮಗನು “ನನಗೆ ಇನ್ನೂ ಜ್ಞಾನವನ್ನು ನೀಡಬೇಕು” ಎಂದು ಕೇಳಲು “ಆಯಿತು, ಮಗನೇ!” ಎಂದು ತಂದೆಯು ಒಪ್ಪಿಕೊಂಡನು.
ಇತಿ ನವಮಃ ಖಂಡಃ ।।