ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಏಕಾದಶಃ ಖಂಡಃ

 

ಅಸ್ಯ ಸೋಮ್ಯ ಮಹತೋ ವೃಕ್ಷಸ್ಯ ಯೋ ಮೂಲೇಽಭ್ಯಾಹನ್ಯಾಜ್ಜೀವನ್ಸ್ರವೇದ್ಯೋ ಮಧ್ಯೇಽಭ್ಯಾಹನ್ಯಾಜ್ಜೀವನ್ಸ್ರವೇದ್ಯೋಽಗ್ರೇಽಭ್ಯಾಹನ್ಯಾಜ್ಜೀವನ್ಸ್ರವೇತ್ಸ ಏಷ ಜೀವೇನಾತ್ಮನಾನುಪ್ರಭೂತಃ ಪೇಪೀಯಮಾನೋ ಮೋದಮಾನಸ್ತಿಷ್ಠತಿ ।। 1 ।। ಅಸ್ಯ ಯದೇಕಾ ಶಾಖಾಂ ಜೀವೋ ಜಹಾತ್ಯಥ ಸಾ ಶುಷ್ಯತಿ ದ್ವಿತೀಯಾಂ ಜಹಾತ್ಯಥ ಸಾ ಶುಷ್ಯತಿ ತೃತೀಯಾಂ ಜಹಾತ್ಯಥ ಸಾ ಶುಷ್ಯತಿ ಸರ್ವಂ ಜಹಾತಿ ಸರ್ವಃ ಶುಷ್ಯತಿ ।। 2 ।। ಏವಮೇವ ಖಲು ಸೋಮ್ಯ ವಿದ್ಧೀತಿ ಹೋವಾಚ ಜೀವಾಪೇತಂ ವಾವ ಕಿಲೇದಂ ಮ್ರಿಯತೇ ನ ಜೀವೋ ಮ್ರಿಯತೇ ಇತಿ ಸ ಯ ಏಷೋಽಣಿಮೈತದಾತ್ಮ್ಯಮಿದ ಸರ್ವಂ ತತ್ಸತ್ಯ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 3 ।।

“ಸೋಮ್ಯ! ಈ ಮಹಾನ್ ವೃಕ್ಷದ ಬುಡಕ್ಕೆ ಪೆಟ್ಟು ಹಾಕಿದರೆ ಅದು ಜೀವಂತ ಉಳಿದು ರಸವನ್ನು ಸ್ರವಿಸುತ್ತದೆ. ನಡುವೆ ಪೆಟ್ಟುಹಾಕಿದರೆ ಅದು ಜೀವಂತ ಉಳಿದು ರಸವನ್ನು ಸ್ರವಿಸುತ್ತದೆ. ಹಾಗೆಯೇ ತುದಿಗೆ ಪೆಟ್ಟುಹಾಕಿದರೆ ಅದು ಜೀವಂತ ಉಳಿದು ರಸವನ್ನು ಸ್ರವಿಸುತ್ತದೆ. ಈ ವೃಕ್ಷವು ಜೀವದಿಂದ ಅಂದರೆ ಆತ್ಮನಿಂದ ವ್ಯಾಪ್ತವಾಗಿದೆ. ಅದು ನೀರನ್ನು ಕುಡಿಯುತ್ತಾ ಆನಂದಿಸುತ್ತಾ ನಿಂತಿದೆ. ಜೀವವು ಇದರ ಒಂದು ಟೊಂಗೆಯನ್ನು ಬಿಟ್ಟುಹೋಯಿತೆಂದರೆ ಆ ಟೊಂಗೆಯು ಒಣಗುತ್ತದೆ. ಎರಡನೇ ಟೊಂಗೆಯನ್ನು ಬಿಟ್ಟುಹೋಯಿತೆಂದರೆ ಆ ಟೊಂಗೆಯು ಒಣಗುತ್ತದೆ. ಇಡೀ ಗಿಡವನ್ನು ಬಿಟ್ಟುಹೋಯಿತೆಂದರೆ ಇಡೀ ಗಿಡವು ಒಣಗಿ ಹೋಗುತ್ತದೆ. ಇದು ಹೀಗೆಯೇ ಇರುವುದೆಂದು ತಿಳಿ. ಜೀವದಿಂದ ರಹಿತವಾಯಿಗೆಂದರೆ ಈ ದೇಹವು ಸಾಯುತ್ತದೆ. ಆದರೆ ಜೀವವು ಸಾಯುವುದಿಲ್ಲ. ಅದು ಅತ್ಯಂತ ಸೂಕ್ಷ್ಮವು. ಇವೆಲ್ಲವೂ ಆತ್ಮಮಯವು. ಅದು ಸತ್ಯವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ಇದನ್ನು ಕೇಳಿ ಮಗನು “ನನಗೆ ಇನ್ನೂ ಜ್ಞಾನವನ್ನು ನೀಡಬೇಕು” ಎಂದು ಕೇಳಲು “ಆಯಿತು, ಮಗನೇ!” ಎಂದು ತಂದೆಯು ಒಪ್ಪಿಕೊಂಡನು.


ಇತಿ  ಏಕಾದಶಃ ಖಂಡಃ ।।

Leave a Reply

Your email address will not be published. Required fields are marked *