ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ಪಂಚದಶಃ ಖಂಡಃ

 

ಪುರುಷಗಂ ಸೋಮ್ಯೋತೋಪತಾಪಿನಂ ಜ್ಞಾತಯಃ ಪರ್ಯುಪಾಸತೇ ಜಾನಾಸಿ ಮಾಂ ಜಾನಾಸಿ ಮಾಮಿತಿ ತಸ್ಯ ಯಾವನ್ನ ವಾಙ್ಮನಸಿ ಸಂಪದ್ಯತೇ ಮನಃ ಪ್ರಾಣೇ ಪ್ರಾಣಸ್ತೇಜಸಿ ತೇಜಃ ಪರಸ್ಯಾಂ ದೇವತಾಯಾಂ ತಾವಜ್ಜಾನಾತಿ ।। 1 ।। ಅಥ ಯದಾಸ್ಯ ವಾಙ್ಮನಸಿ ಸಂಪದ್ಯತೇ ಮನಃ ಪ್ರಾಣೇ ಪ್ರಾಣಸ್ತೇಜಸಿ ತೇಜಃ ಪರಸ್ಯಾಂ ದೇವತಾಯಾಮಥ ನ ಜಾನಾತಿ ।। 2 ।। ಸ ಯ ಏಷೋಽಣಿಮೈತದಾತ್ಮ್ಯಮಿದಗಂ ಸರ್ವಂ ತತ್ಸತ್ಯಂ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 3 ।।

“ಸೋಮ್ಯ! ರೋಗದಿಂದ ಪೀಡಿತನಾದ (ಆಸನ್ನಮರಣ) ಪುರುಷನ ಸುತ್ತಲೂ ಅವನ ಜ್ಞಾತಿಬಾಂಧವರು ಕೂಡುತ್ತಾರೆ. ಮತ್ತು “ನನ್ನ ಗುರುತಿದೆಯಾ? ನನ್ನ ಗುರುತು ಸಿಗುತ್ತದೆಯಾ?” ಎಂದು ಕೇಳುತ್ತಾರೆ. ಅವನ ವಾಣಿಯು ಮನಸ್ಸಿನಲ್ಲಿ, ಮನಸ್ಸು ಪ್ರಾಣದಲ್ಲಿ, ಪ್ರಾಣವು ತೇಜಸ್ಸಿನಲ್ಲಿ, ಮತ್ತು ತೇಜಸ್ಸು ಪರಾದೇವತೆಗಲ್ಲಿ ಲೀನವಾಗುವವರೆಗೆ ಅವನು ಅವರನ್ನು ಗುರುತು ಹಿಡಿಯುತ್ತಾನೆ. ಅವನ ವಾಣಿಯು ಮನದಲ್ಲಿ, ಮನವು ಪ್ರಾಣದಲ್ಲಿ, ಪ್ರಾಣವು ತೇಜಸ್ಸಿನಲ್ಲಿ ಮತ್ತು ತೇಜಸ್ಸು ಪರಾದೇವತೆಯಲ್ಲಿ ಲೀನವಾಯಿತೆಂದರೆ, ಅವನು ಯಾರನ್ನೂ ಗುರುತಿಸುವುದಿಲ್ಲ. ಅದು ಅತ್ಯಂತ ಸೂಕ್ಷ್ಮವು. ಇವೆಲ್ಲವೂ ಆತ್ಮಮಯವು. ಅದು ಸತ್ಯವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ಇದನ್ನು ಕೇಳಿ ಮಗನು “ನನಗೆ ಇನ್ನೂ ಜ್ಞಾನವನ್ನು ನೀಡಬೇಕು” ಎಂದು ಕೇಳಲು “ಆಯಿತು, ಮಗನೇ!” ಎಂದು ತಂದೆಯು ಒಪ್ಪಿಕೊಂಡನು.

ಇತಿ  ಪಂಚದಶಃ ಖಂಡಃ ।।

Leave a Reply

Your email address will not be published. Required fields are marked *