ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ತ್ರಯೋದಶಃ ಖಂಡಃ

 

ಲವಣಮೇತದುದಕೇಽವಧಾಯಾಥ ಮಾ ಪ್ರಾತರುಪಸೀದಥಾ ಇತಿ ಸ ಹ ತಥಾ ಚಕಾರ ತ ಹೋವಾಚ ಯದ್ದೋಷಾ ಲವಣಮುದಕೇಽವಾಧಾ ಅಂಗ ತದಾಹರೇತಿ ತದ್ಧಾವಮೃಶ್ಯ ನ ವಿವೇದ ।। 1 ।। ಯಥಾ ವಿಲೀನಮೇವಾಂಗಾಸ್ಯಾಂತಾದಾಚಾಮೇತಿ ಕಥಮಿತಿ ಲವಣಮಿತಿ ಮಧ್ಯಾದಾಚಾಮೇತಿ ಕಥಮಿತಿ ಲವಣಮಿತ್ಯಂತಾದಾಚಾಮೇತಿ ಕಥಮಿತಿ ಲವಣಮಿತ್ಯಭಿಪ್ರಾಸ್ಯೈತದಥ ಮೋಪಸೀದಥಾ ಇತಿ ತದ್ಧ ತಥಾ ಚಕಾರ ತಚ್ಛಶ್ವತ್ಸಂವರ್ತತೇ ತ ಹೋವಾಚಾತ್ರ ವಾವ ಕಿಲ ತತ್ಸೋಮ್ಯ ನ ನಿಭಾಲಯಸೇಽತ್ರೈವ ಕಿಲೇತಿ ।। 2 ।। ಸ ಯ ಏಷೋಽಣಿಮೈತದಾತ್ಮ್ಯಮಿದ ಸರ್ವಂ ತತ್ಸತ್ಯ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 3 ।।

“ಈ ಉಪ್ಪನ್ನು ಈಗ ನೀರಿನಲ್ಲಿ ಹಾಕಿ ಬೆಳಿಗ್ಗೆ ನನ್ನ ಬಳಿ ಬಾ” ಎಂದು ತಂದೆಯು ಸಂಜೆಯಲ್ಲಿ ಒಂದು ಉಪ್ಪಿನ ಹರಳನ್ನು ಕೊಟ್ಟು ಮಗನಿಗೆ ಹೇಳಿದನು. ಅವನು ಅದರಂತೆ ಮಾಡಿದನು. “ಮಗನೇ! ರಾತ್ರಿ ನೀನು ನೀರಲ್ಲಿ ಹಾಕಿದ್ದ ಉಪ್ಪನ್ನು ತೆಗೆದು ಕೊಡು” ಎಂದು ತಂದೆಯು ಹೇಳಲು ಮಗನು ಅದನ್ನು ಹುಡುಕಿದನು. ಅದು ದೊರೆಯಲಿಲ್ಲ. “ಮಗನೇ! ಅದು ಬೆರೆತು ಹೋಗಿದೆ. ನೀನು ನೀರಿನ ಮೇಲ್ಭಾಗದ ರುಚಿ ನೋಡು. ಅದು ಹೇಗಿದೆ?” “ಅದು ಉಪ್ಪುಪ್ಪಾಗಿದೆ.” “ನೀರಿನ ಕೆಳಭಾಗದ ರುಚಿಯನ್ನು ನೋಡು. ಅದು ಹೇಗಿದೆ?” “ಅದೂ ಉಪ್ಪುಪ್ಪಾಗಿದೆ.” “ಈ ನೀರು ಚೆಲ್ಲಿ ನನ್ನಬಳಿ ಬಾ.” ಹೀಗೆ ತಂದೆ-ಮಗನ ಸಂವಾದದ ನಂತರ ಮಗನು ನೀರನ್ನು ಚೆಲ್ಲಿ ಉಪ್ಪು ನೀರಲ್ಲ ಎಲ್ಲೆಲ್ಲಿಯೂ ಬೆರೆತಿದೆ ಅಂದುಕೊಂಡನು. ಮಗನಿಗೆ ತಂದೆಯು ಹೇಳಿದನು: “ಮಗನೇ! ಆ ಉಪ್ಪು ನೀರಲ್ಲಿದ್ದರೂ ನೀನು ಅದನ್ನು ಹೇಗೆ ಕಾಣದೇ ಹೋದೆಯೋ  ಹಾಗೆ ಅದು (ಸತ್) ಇಲ್ಲಿ (ಶರೀರದಲ್ಲಿ) ಇದೆ. ಅದು ಇದ್ದರೂ ಕಾಣದು. ಅದು ಅತ್ಯಂತ ಸೂಕ್ಷ್ಮವು. ಇವೆಲ್ಲವೂ ಆತ್ಮಮಯವು. ಅದು ಸತ್ಯವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ಇದನ್ನು ಕೇಳಿ ಮಗನು “ನನಗೆ ಇನ್ನೂ ಜ್ಞಾನವನ್ನು ನೀಡಬೇಕು” ಎಂದು ಕೇಳಲು “ಆಯಿತು, ಮಗನೇ!” ಎಂದು ತಂದೆಯು ಒಪ್ಪಿಕೊಂಡನು.

ಇತಿ  ತ್ರಯೋದಶಃ ಖಂಡಃ ।।

Leave a Reply

Your email address will not be published. Required fields are marked *