ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ದ್ವಾದಶಃ ಖಂಡಃ

 

ನ್ಯಗ್ರೋಧಫಲಮತ ಆಹರೇತೀದಂ ಭಗವ ಇತಿ ಭಿಂಧೀತಿ ಭಿನ್ನಂ ಭಗವ ಇತಿ ಕಿಮತ್ರ ಪಶ್ಯಸೀತ್ಯಣ್ವ್ಯ ಇವೇಮಾ ಧಾನಾ ಭಗವ ಇತ್ಯಾಸಾಮಂಗೈಕಾಂ ಭಿಂಧೀತಿ ಭಿನ್ನಾ ಭಗವ ಇತಿ ಕಿಮತ್ರ ಪಶ್ಯಸೀತಿ ನ ಕಿಂಚನ ಭಗವ ಇತಿ ।। 1 ।। ಗಂ ಹೋವಾಚ ಯಂ ವೈ ಸೋಮ್ಯೈತಮಣಿಮಾನಂ ನ ನಿಭಾಲಯಸ ಏತಸ್ಯ ವೈ ಸೋಮ್ಯೈಷೋಽಣಿಮ್ನ ಏವಂ ಮಹಾನ್ಯಗ್ರೋಧಸ್ತಿಷ್ಠತಿ ಶ್ರದ್ಧತ್ಸ್ವ ಸೋಮ್ಯೇತಿ ।। 2 ।। ಸ ಯ ಏಷೋಽಣಿಮೈತದಾತ್ಮ್ಯಮಿದಗಂ ಸರ್ವಂ ತತ್ಸತ್ಯಗಂ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 3 ।।

ತಂದೆಯು ಹೇಳಿದನು: “ಒಂದು ಆಲದ ಹಣ್ಣನ್ನು ಇಲ್ಲಿ ತಾ!” ಮಗನು ಅದನ್ನು ತಂದು “ಭಗವನ್! ಇದೋ ಇಲ್ಲಿರುವುದು” ಎಂದನು. “ಅದನ್ನು ಒಡೆ” ಎಂದು ತಂದೆಯು ಹೇಳಲು ಮಗನು “ಭಗವನ್! ಇದೋ ಒಡೆದೆನು” ಎಂದನು. “ಇದರಲ್ಲಿ ಏನು ಕಾಣುತ್ತದೆ?” ಎಂದು ಪ್ರಶ್ನಿಸಲು ಮಗನು “ಭಗವನ್! ಅತ್ಯಂತ ಸೂಕ್ಷ್ಮವಾದ ಬೀಜದ ಕಾಳುಗಳಿವೆ” ಎಂದನು. “ಮಗನೇ ಇವುಗಳಲ್ಲಿ ಒಂದನ್ನು ಸೀಳು” ಎನ್ನಲು ಮಗನು “ಭಗವನ್! ಇದೋ ಸೀಳಿದೆನು” ಎಂದನು. “ಅದರಲ್ಲಿ ಏನು ಕಾಣುತ್ತದೆ?” ಎಂದು ಕೇಳಲು ಮಗನು “ಭಗವನ್! ಏನೂ ಇಲ್ಲ” ಎಂದನು. ಆಗ ತಂದೆಯು ಹೇಳಿದನು: “ಸೋಮ್ಯ! ಯಾವ ಅತ್ಯಂತ ಸೂಕ್ಷ್ಮವಸ್ತುವನ್ನು ನೀನು ಕಾಣಲಾರೆಯೋ ಅದರಿಂದಲೇ ಈ ದೊಡ್ಡ ಆಲದ ಮರವು ಆಗಿದೆ. ಈ ಸತ್ಯದಲ್ಲಿ ಶ್ರದ್ಧೆಯನ್ನಿಡು. ಆ ಸತ್ತ ಅತ್ಯಂತ ಸೂಕ್ಷ್ಮವು. ಇವೆಲ್ಲವೂ ಆತ್ಮಮಯವು. ಅದು ಸತ್ಯವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ಇದನ್ನು ಕೇಳಿ ಮಗನು “ನನಗೆ ಇನ್ನೂ ಜ್ಞಾನವನ್ನು ನೀಡಬೇಕು” ಎಂದು ಕೇಳಲು “ಆಯಿತು, ಮಗನೇ!” ಎಂದು ತಂದೆಯು ಒಪ್ಪಿಕೊಂಡನು.   

ಇತಿ  ದ್ವಾದಶಃ ಖಂಡಃ ।।

Leave a Reply

Your email address will not be published. Required fields are marked *