ಛಾಂದೋಗ್ಯೋಪನಿಷತ್: ಷಷ್ಠೋಽಧ್ಯಾಯಃ ದಶಮಃ ಖಂಡಃ
ಇಮಾಃ ಸೋಮ್ಯ ನದ್ಯಃ ಪುರಸ್ತಾತ್ಪ್ರಾಚ್ಯಃ ಸ್ಯಂದಂತೇ ಪಶ್ಚಾತ್ಪ್ರತೀಚ್ಯಸ್ತಾಃ ಸಮುದ್ರಾತ್ಸಮುದ್ರಮೇವಾಪಿಯಂತಿ ಸ ಸಮುದ್ರ ಏವ ಭವತಿ ತಾ ಯಥಾ ತತ್ರ ನ ವಿದುರಿಯಮಹಮಸ್ಮೀಯಮಹಮಸ್ಮೀತಿ ।। 1 ।। ಏವಮೇವ ಖಲು ಸೋಮ್ಯೇಮಾಃ ಸರ್ವಾಃ ಪ್ರಜಾಃ ಸತ ಆಗಮ್ಯ ನ ವಿದುಃ ಸತ ಆಗಚ್ಛಾಮಹ ಇತಿ ತ ಇಹ ವ್ಯಾಘ್ರೋ ವಾ ಸಿಂಹೋ ವಾ ವೃಕೋ ವಾ ವರಾಹೋ ವಾ ಕೀಟೋ ವಾ ಪತಂಗೋ ವಾ ದಶೋ ವಾ ಮಶಕೋ ವಾ ಯದ್ಯದ್ಭವಂತಿ ತದಾಭವಂತಿ ।। 2 ।। ಸ ಯ ಏಷೋಽಣಿಮೈತದಾತ್ಮ್ಯಮಿದ ಸರ್ವಂ ತತ್ಸತ್ಯ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ಞಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ ।। 3 ।।
ಸೋಮ್ಯ! ಈ ನದಿಗಳು ಪೂರ್ವಕ್ಕೆ ಪೂರ್ವವಾಹಿನಿಗಳಾಗಿ, ಪಶ್ಚಿಮಕ್ಕೆ ಪಶ್ಚಿಮವಾಹಿನಿಗಳಾಗಿ ಹರಿಯುತ್ತವೆ. ಅವು ಸಮುದ್ರದಿಂದ ಹೊರಟು ಸಮುದ್ರಕ್ಕೇ ಹೋಗಿ ಸೇರುತ್ತವೆ. ಸಮುದ್ರವೇ ಆಗುತ್ತವೆ. ಅವು ಆ ಸಮುದ್ರದಲ್ಲಿ “ನಾನು ಇಂಥಹ ನದಿಯು. ನಾನು ಇಂಥಹ ನದಿಯು” ಎನ್ನುವುದನ್ನು ಹೇಗೆ ಅರಿಯುವದಿಲ್ಲವೋ ಹಾಗೆ ಈ ಪ್ರಜೆಳು ಸತ್ತಿನಿಂದ ಹುಟ್ಟಿ ಸತ್ತಿಗೇ ಹೋಗುತ್ತವೆ ಎನ್ನುವುದನ್ನು ಅವು ಅರಿತಿರುವುದಿಲ್ಲ. ಅವು ಹುಲಿ, ಸಿಂಹ, ತೋಳ, ವರಾಹ, ಕೀಟ, ಜಿಗಳೆ, ಸೊಳ್ಳೆ ಮೊದಲಾದವುಗಳಲ್ಲೇ ಯಾವುದೋ ಒಂದಾಗಿ ಮೊದಲು ಯಾವ ರೂಪದಲ್ಲಿದ್ದವೋ ಅದೇ ರೂಪವನ್ನು ಪುನಃ ಧರಿಸುತ್ತವೆ. ಈ ಸತ್ತೆಂಬುದು ಅತ್ಯಂತ ಸೂಕ್ಷ್ಮವು. ಇವೆಲ್ಲವೂ ಆತ್ಮಸ್ವರೂಪವು. ಅದು ಸತ್ಯ. ಅದೇ ಆತ್ಮವು. ಶ್ವೇತಕೇತೋ! ನೀನೂ ಅದೇ ಆಗಿರುವೆ!” ಇದನ್ನು ಕೇಳಿ ಮಗನು “ನನಗೆ ಇನ್ನೂ ಜ್ಞಾನವನ್ನು ನೀಡಬೇಕು” ಎಂದು ಕೇಳಲು “ಆಯಿತು, ಮಗನೇ!” ಎಂದು ತಂದೆಯು ಒಪ್ಪಿಕೊಂಡನು.
ಇತಿ ದಶಮಃ ಖಂಡಃ ।।