ಸ್ವರ್ಗಾರೋಹಣಪರ್ವದ ವಿಷಯಸಂಗ್ರಹ
[ಆದಿಪರ್ವದ 2ನೇ ಅಧ್ಯಾಯದ ಶ್ಲೋಕ 232ಎಬಿ ಯ ನಂತರ ಕೆ3,4,6 ವಿ1 ಬಿ ಮತ್ತು ಡಿ ಗಳಲ್ಲಿರುವ ಅಧಿಕ ಶ್ಲೋಕಗಳು]
ಪ್ರಾಪ್ತಂ ದೇವರಥಂ ಸ್ವರ್ಗಾನ್ನೋಷ್ಟವಾನ್ಯತ್ರ ಧರ್ಮರಾಟ್ ।
ಆರೋಢುಂ ಸುಮಹಾಪ್ರಾಜ್ಞ ಆನೃಶಂಸ್ಯಾಚ್ಛುನಾ ವಿನಾ ।
ತಾಮಸ್ಯಾವಿಚಲಾಂ ಜ್ಞಾತ್ವಾ ಸ್ಥಿತಿಂ ಧರ್ಮೇ ಮಹಾತ್ಮನಾ ।
ಸ್ವರೂಪಂ ಯತ್ರ ತತ್ತ್ಯಕ್ತ್ವಾ ಧರ್ಮೇಣಾಸೌ ಸಮನ್ವಿತಃ ।
ಸ್ವರ್ಗಂ ಪ್ರಾಪ್ತಃ ಸ ಚ ತಥಾ ಯಾತನಾ ವಿಪುಲಾ ಭೃಶಮ್ । [5]
ದೇವದೂತೇನ ನರಕಂ ಯತ್ರ ವ್ಯಾಜೇನ ದರ್ಶಿತಮ್ ।
ಶುಶ್ರಾವ ಯತ್ರ ಧರ್ಮಾತ್ಮಾ ಭ್ರಾತೄಣಾಂ ಕರುಣಾ ಗಿರಃ ।
ನಿದೇಶೇ ವರ್ತಮಾನಾನಾಂ ದೇಶೇ ತತ್ರೈವ ವರ್ತತಾಮ್ ।
ಅನುದರ್ಶಿತಶ್ಚ ಧರ್ಮೇಣ ದೇವರಾಜ್ಞಾ ಚ ಪಾಂಡವಃ ।
ಆಪ್ಲುತ್ಯಾಕಾಶಗಂಗಾಯಾಂ ದೇಹಂ ತ್ಯಕ್ತ್ವಾ ಸ ಮಾನುಷಮ್ । [10]
ಸ್ವಧರ್ಮನಿರ್ಜಿತಂ ಸ್ಥಾನಂ ಸ್ವರ್ಗೇ ಪ್ರಾಪ್ಯ ಸ ಧರ್ಮರಾಟ್ ।
ಮುಮುದೇ ಪೂಜಿತಃ ಸರ್ವೈಃ ಸೇಂದ್ರೈಃ ಸುರಗಣೈಃ ಸಹ । (ಕೆ3,4,6 ವಿ1 ಬಿ ಡಿ)
ಕರ್ಣಸ್ಯ ನರಕಪ್ರಾಪ್ತಿಃ ಪ್ರಮೋಕ್ಷಶ್ಚಾತ್ರ ಕೀರ್ತ್ಯತೇ ।
ಸಮಾಗಮಶ್ಚ ವೀರಾಣಾಂ ಸ್ವರ್ಗಲೋಕೇ ಮಹಾತ್ಮನಾಮ್ ।
ಕೀರ್ತ್ಯತೇ ಯತ್ರ ವಿಧಿವತ್ಸ್ವರ್ಗಸಂವಾದ ಏವ ಚ । [15]
ಸ್ವಾನಿ ಸ್ಥಾನಾನಿ ಚ ಪ್ರಾಪ್ತಾ ಯತ್ರ ತೇ ಪುರುಷರ್ಷಭಾಃ । (ಕೆ5 ಡಿಆರ್ ಡಿ4)
ಏತದಷ್ಟಾದಶಂ ಪರ್ವ ಪ್ರೋಕ್ತಂ ವ್ಯಾಸೇನ ಧೀಮತಾ । (ಕೆ3,4,6 ವಿ1 ಬಿ ಡಿ)
ಇದರಲ್ಲಿ ಸರ್ಗದಿಂದ ದೇವರಥವು ಬಂದುದು, ಆದರೆ ಮಹಾಪ್ರಾಜ್ಞ ಧರ್ಮರಾಜನು ದಯಾವಶನಾಗಿ ಜೊತೆಗೆ ಬಂದಿದ್ದ ನಾಯಿಯನ್ನು ಬಿಟ್ಟು ರಥವನ್ನು ಏರಲು ನಿರಾಕರಿಸಿದುದು, ಧರ್ಮದಲ್ಲಿ ಆ ಮಹಾತ್ಮನ ಅಚಲ ಸ್ಥಿತಿಯನ್ನು ತಿಳಿದು ನಾಯಿಯ ರೂಪವನ್ನು ತೊರೆದು ಧರ್ಮದೇವನು ತನ್ನ ಸ್ವರೂಪವನ್ನು ತೋರಿಸಿದುದು, ಧರ್ಮನೊಡನೆ ಯುಧಿಷ್ಠಿರನು ಸ್ವರ್ಗಕ್ಕೆ ಹೋದುದು, ಅಲ್ಲಿ ಧರ್ಮದೂತನು ಅವನಿಗೆ ನರಕದ ವಿಪುಲ ಯಾತನೆಗಳನ್ನು ತೋರಿಸಿದುದು, ಅಲ್ಲಿಯೇ ಧರ್ಮಾತ್ಮಾ ಯುಧಿಷ್ಠಿರನು ಯಮನ ನಿರ್ದೇಶನದಂತೆ ಆ ಪ್ರದೇಶದಲ್ಲಿದ್ದ ಸಹೋದರರ ಕರುಣಾಜನಕ ಧ್ವನಿಯನ್ನು ಕೇಳಿದುದು, ನಂತರ ಧರ್ಮದೇವ ಮತ್ತು ದೇವರಾಜ ಇಂದ್ರರು ಪಾಂಡವ ಯುಧಿಷ್ಠಿರನಿಗೆ ವಾಸ್ತವದಲ್ಲಿ ಅವನ ಸಹೋದರರು ಸದ್ಗತಿಯನ್ನು ಪಡೆದುದನ್ನು ತೋರಿಸಿದುದು, ನಂತರ ಧರ್ಮರಾಜನು ಆಕಾಶಗಂಗೆಯಲ್ಲಿ ಮುಳುಗಿ ಮಾನವ ಶರೀರವನ್ನು ತ್ಯಜಿಸಿ ಸ್ವಧರ್ಮದಿಂದ ಗೆದ್ದಿದ್ದ ಸ್ವರ್ಗಸ್ಥಾನವನ್ನು ಪಡೆದು ಧರ್ಮರಾಜನು ಸರ್ವ ಸುರಗಣಗಳ ಸಮೇತ ಪೂಜಿತನಾಗಿ ಮೋದಿಸಿದುದರ ವರ್ಣನೆಯಿದೆ. ಕರ್ಣನ ನರಕಪ್ರಾಪ್ತಿ ಮತ್ತು ಅಲ್ಲಿಂದ ಬಿಡುಗಡೆ, ಸ್ವರ್ಗಲೋಕದಲ್ಲಿ ಮಹಾತ್ಮಾ ವೀರರ ಸಮಾಗಮ, ವಿಧಿವತ್ತಾದ ಸ್ವರ್ಗಸಂವಾದ ಮತ್ತು ಆ ಪುರುಷರ್ಷಭರು ತಮ್ಮ ಸ್ಥಾನಗಳಿಗೆ ತೆರಳಿದುದನ್ನು ಇಲ್ಲಿ ವರ್ಣಿಸಿದೆ. ಇದು ಧೀಮತ ವ್ಯಾಸನು ಹೇಳಿರುವ 18ನೇ ಪರ್ವ.