ಸೃಷ್ಟಿ-ಲಯಗಳು

 

ಸೃಷ್ಟಿ ಮತ್ತು ಲಯಗಳ ವಿಷಯವನ್ನೊಳಗೊಂಡಿರುವ ವೇದ-ಉಪನಿಷತ್ತುಗಳು ಮತ್ತು ಪುರಾಣಗಳು

  1. ಋಗ್ವೇದಸಂಹಿತೆ
    1. ಮಂಡಲ 10, ಅನುವಾಕ 6, ಸೂಕ್ತ 81
    2. ಮಂಡಲ 10, ಅನುವಾಕ6, ಸೂಕ್ತ 82
    3. ಮಂಡಲ 10, ಅನುವಾಕ 7, ಸೂಕ್ತ 90
    4. ಮಂಡಲ 10, ಅನುವಾಕ 11, ಸೂಕ್ತ 129
    5. ಮಂಡಲ 10, ಅನುವಾಕ 11, ಸೂಕ್ತ 130
    6. ಮಂಡಲ 10, ಅನುವಾಕ 11, ಸೂಕ್ತ 190
  2. ಐತರೇಯೋಪನಿಷತ್
    1. ಪ್ರಥಮೋಧ್ಯಾಯೇ ಪ್ರಥಮ ಖಂಡಃ
    2. ಪ್ರಥಮೋಧ್ಯಾಯೇ ದ್ವಿತೀಯ ಖಂಡಃ
    3. ಪ್ರಥಮೋಧ್ಯಾಯೇ ತೃತೀಯ ಖಂಡಃ
  3. ತೈತ್ತಿರೀಯೋಪನಿಷತ್
    1. ದ್ವಿತೀಯಾ ಬ್ರಹ್ಮಾನಂದವಲ್ಲೀ
      1. ಪ್ರಥಮೋಽನುವಾಕಃ
      2. ದ್ವಿತೀಯೋಽನುವಾಕಃ
      3. ತೃತೀಯೋಽನುವಾಕಃ
      4. ಚತುರ್ಥೋಽನುವಾಕಃ
      5. ಪಂಚಮೋಽನುವಾಕಃ
      6. ಷಷ್ಠೋಽನುವಾಕಃ
      7. ಸಪ್ತಮೋಽನುವಾಕಃ
      8. ಅಷ್ಟಮೋಽನುವಾಕಃ
      9. ನಮವೋಽನುವಾಕಃ
  4. ಛಾಂದೋಗ್ಯೋಪನಿಷತ್
    1. ಷಷ್ಠೋಽಧ್ಯಾಯಃ
      1. ಪ್ರಥಮಃ ಖಂಡಃ
      2. ದ್ವಿತೀಯಃ ಖಂಡಃ
      3. ತೃತೀಯಃ ಖಂಡಃ
      4. ಚತುರ್ಥಃ ಖಂಡಃ
      5. ಪಂಚಮಃ ಖಂಡಃ
      6. ಷಷ್ಠಃ ಖಂಡಃ
      7. ಸಪ್ತಮಃ ಖಂಡಃ
      8. ಅಷ್ಟಮಃ ಖಂಡಃ
      9. ನವಮಃ ಖಂಡಃ
      10. ದಶಮಃ ಖಂಡಃ
      11. ಏಕಾದಶಃ ಖಂಡಃ
      12. ದ್ವಾದಶಃ ಖಂಡಃ
      13. ತ್ರಯೋದಶಃ ಖಂಡಃ
      14. ಚತುರ್ದಶಃ ಖಂಡಃ
      15. ಪಂಚದಶಃ ಖಂಡಃ
      16. ಷೋಡಶಃ ಖಂಡಃ
  5. ಬೃಹದಾರಣ್ಯಕೋಪನಿಷತ್
    1. ಪ್ರಥಮೋಧ್ಯಾಯಃ
      1. ದ್ವಿತೀಯಂ ಬ್ರಾಹ್ಮಣಮ್ (ಅಗ್ನ್ಯೋತ್ಪತ್ತಿಃ)
      2. ಚತುರ್ಥಂ ಬ್ರಾಹ್ಮಣಮ್
    2. ತೃತೀಯೋಽಧ್ಯಾಯಃ
      1. ಅಷ್ಟಮಂ ಬ್ರಾಹ್ಮಣಮ್
    3. ಷಷ್ಠೋಽಧ್ಯಾಯಃ
      1. ದ್ವಿತೀಯಂ ಬ್ರಾಹ್ಮಣಮ್
  6. ಪ್ರಶ್ನೋಪನಿಷತ್
  7. ಶ್ರೀಬ್ರಹ್ಮಮಹಾಪುರಾಣ
    1. ಅಧ್ಯಾಯ 1: ಸೃಷ್ಟಿಕಥನವರ್ಣನಮ್
    2. ಅಧ್ಯಾಯ 2: ಸೃಷ್ಟಿಕಥನವರ್ಣನಮ್
    3. ಅಧ್ಯಾಯ 3: ದೇವಾಸುರಾಣಾಮುತ್ಪತ್ತಿಕಥನಮ್
  8. ಶ್ರೀಪದ್ಮಪುರಾಣ
    1. ಆದಿಖಂಡ, ಅಧ್ಯಾಯ 2
    2. ಸೃಷ್ಟಿಖಂಡ, ಅಧ್ಯಾಯ 2
    3. ಸೃಷ್ಟಿಖಂಡ, ಅಧ್ಯಾಯ 3
  9. ಶ್ರೀವಿಷ್ಣುಮಹಾಪುರಾಣ
    1. ಪ್ರಥಮಾಂಶ, ಅಧ್ಯಾಯ 1
    2. ಪ್ರಥಮಾಂಶ, ಅಧ್ಯಾಯ 2
    3. ಪ್ರಥಮಾಂಶ, ಅಧ್ಯಾಯ 3
    4. ಪ್ರಥಮಾಂಶ, ಅಧ್ಯಾಯ 4
    5. ಪ್ರಥಮಾಂಶ, ಅಧ್ಯಾಯ 5
    6. ಪ್ರಥಮಾಂಶ, ಅಧ್ಯಾಯ 6
    7. ಪ್ರಥಮಾಂಶ, ಅಧ್ಯಾಯ 7
    8. ಪ್ರಥಮಾಂಶ, ಅಧ್ಯಾಯ 8
  10. ಶ್ರೀಶಿವಮಹಾಪುರಾಣ
  11. ಶ್ರೀಮದ್ಭಾಗವತಮಹಾಪುರಾಣ
    1. ದ್ವಿತೀಯ ಸ್ಕಂಧಃ, ಅಧ್ಯಾಯ 5: ಬ್ರಹ್ಮನಾರದಸಂವಾದಃ
    2. ದ್ವಿತೀಯ ಸ್ಕಂಧಃ, ಅಧ್ಯಾಯ 6: ವಿರಾಡ್ವಿಭೂತಿವರ್ಣನಮ್
    3. ತೃತೀಯ ಸ್ಕಂಧಃ, ಅಧ್ಯಾಯ 5: ವಿದುರನ ಪ್ರಶ್ನೆ; ಮೈತ್ರೇಯನು ಸೃಷ್ಟಿಕ್ರಮವನ್ನು ವರ್ಣಿಸಿದುದು
    4. ತೃತೀಯ ಸ್ಕಂಧಃ, ಅಧ್ಯಾಯ 6: ವಿರಾಟ್ ಶರೀರದ ಉತ್ಪತ್ತಿ
    5. ತೃತೀಯ ಸ್ಕಂಧಃ, ಅಧ್ಯಾಯ 7: ಮೈತ್ರೇಯ-ವಿದುರ ಸಂವಾದ
    6. ತೃತೀಯ ಸ್ಕಂಧಃ, ಅಧ್ಯಾಯ 8: ಬ್ರಹ್ಮನ ಉತ್ಪತ್ತಿ
    7. ತೃತೀಯ ಸ್ಕಂಧಃ, ಅಧ್ಯಾಯ 9: ಬ್ರಹ್ಮನ ಭಗವತ್ಸ್ತೋತ್ರ
    8. ತೃತೀಯ ಸ್ಕಂಧಃ, ಅಧ್ಯಾಯ 10: ಹತ್ತುವಿಧದ ಸೃಷ್ಟಿ
    9. ತೃತೀಯ ಸ್ಕಂಧಃ, ಅಧ್ಯಾಯ 11: ಕಾಲವಿಭಾಗ ವರ್ಣನೆ
    10. ತೃತೀಯ ಸ್ಕಂಧಃ, ಅಧ್ಯಾಯ 12: ಸೃಷ್ಟಿಯ ವಿಸ್ತಾರ
    11. ತೃತೀಯ ಸ್ಕಂಧಃ, ಅಧ್ಯಾಯ 13: ವರಾಹಪ್ರಾದುರ್ಭಾವನುವರ್ಣನ
    12. ತೃತೀಯ ಸ್ಕಂಧಃ, ಅಧ್ಯಾಯ 20: ಬ್ರಹ್ಮಸೃಷ್ಟಿಯ ವಿಸ್ತಾರ
    13. ತೃತೀಯ ಸ್ಕಂಧಃ, ಅಧ್ಯಾಯ 26: ಮಹತ್ತಾದಿ ತತ್ತ್ವಗಳ ಉತ್ಪತ್ತಿ
  12. ಶ್ರೀಮಾರ್ಕಂಡೇಯಮಹಾಪುರಾಣ
  13. ಶ್ರೀಅಗ್ನಿಮಹಾಪುರಾಣ
  14. ಶ್ರೀಭವಿಷ್ಯಮಹಾಪುರಾಣ
  15. ಶ್ರೀಬ್ರಹ್ಮವೈವರ್ತಮಹಾಪುರಾಣ
  16. ಶ್ರೀಲಿಂಗಪುರಾಣ
  17. ಶ್ರೀವರಾಹಪುರಾಣ
  18. ಶ್ರೀಸ್ಕಂದಪುರಾಣ
  19. ಶ್ರೀವಾಮನಪುರಾಣ
  20. ಶ್ರೀಕೂರ್ಮಮಹಾಪುರಾಣ
    1. ಅಧ್ಯಾಯ 4: ಪ್ರಾಕೃತಸರ್ಗಃ
    2. ಅಧ್ಯಾಯ 5: ಕಾಲಸಂಖ್ಯಾವಿವರಣಮ್
    3. ಅಧ್ಯಾಯ 6: ಪೃಥಿವ್ಯುದ್ಧಾರಃ
    4. ಅಧ್ಯಾಯ 7: ಸೃಷ್ಟಿವರ್ಣನಮ್
    5. ಅಧ್ಯಾಯ 8: ಮುಖ್ಯಾದಿಸರ್ಗಕಥನಮ್
    6. ಅಧ್ಯಾಯ 9: ಪದ್ಮೋದ್ಭವಪ್ರಾದುರ್ಭಾವಃ
    7. ಅಧ್ಯಾಯ 10: ರುದ್ರಸೃಷ್ಟಿಃ
    8. ಅಧ್ಯಾಯ 11
    9. ಅಧ್ಯಾಯ 98: ನೈಮಿತ್ತಿಕಪ್ರಲಯವರ್ಣನಮ್ 
    10. ಅಧ್ಯಾಯ 99: ಪ್ರಾಕೃತಪ್ರಲಯವರ್ಣನಮ್
  21. ಶ್ರೀಮತ್ಸ್ಯಮಹಾಪುರಾಣ
    1. ಅಧ್ಯಾಯ 1: ಮನುವಿಷ್ಣುಸಂವಾದಃ
    2. ಅಧ್ಯಾಯ 2: ಬ್ರಹ್ಮಾಂಡದಲನಂ
    3. ಅಧ್ಯಾಯ 3: ಮುಖೋತ್ಪತ್ತಿಃ
    4. ಅಧ್ಯಾಯ 4
    5. ಅಧ್ಯಾಯ 5: ವಸುರುದ್ರಾನ್ವವಾಯಃ
    6. ಅಧ್ಯಾಯ 6: ಕಶ್ಯಪಾನ್ವಯಃ
    7. ಅಧ್ಯಾಯ 7: ಮರುದುತ್ಪತ್ತೌ ಮದನದ್ವಾದಶೀವ್ರತಂ
    8. ಅಧ್ಯಾಯ 8: ಆಧಿಪತ್ಯಾಭಿಷೇಚನಂ
  22. ಶ್ರೀಗರುಡಮಹಾಪುರಾಣ
    1. ಅಧ್ಯಾಯ 4: ಸೃಷ್ಟಿವರ್ಣನಂ
    2. ಅಧ್ಯಾಯ 5: ಪ್ರಜಾಕರ್ತ್ರಾದಿಸೃಷ್ಟಿಃ
    3. ಅಧ್ಯಾಯ 6: ಉತ್ತಾನಪಾದವಂಶಾದಿವರ್ಣನಂ
  23. ಶ್ರೀಬ್ರಹ್ಮಾಂಡಮಹಾಪುರಾಣ
    1. ಅಧ್ಯಾಯ 3: ಹಿರಣ್ಯಗರ್ಭೋತ್ಪತ್ತಿಪರ್ವಣನಂ
    2. ಅಧ್ಯಾಯ 4: ಲೋಕಕಲ್ಪನಂ
    3. ಅಧ್ಯಾಯ 5: ಲೋಕಕಲ್ಪನಂ
    4. ಅಧ್ಯಾಯ 6: ಕಲ್ಪಮನ್ವಂತರಾಖ್ಯಾನವರ್ಣನಂ
    5. ಅಧ್ಯಾಯ 7: ಲೋಕಜ್ಞಾನವರ್ಣನಂ
    6. ಅಧ್ಯಾಯ 8: ಮಾನಸಸೃಷ್ಟಿವರ್ಣನಂ
    7. ಅಧ್ಯಾಯ 9:
    8. ಅಧ್ಯಾಯ 10:
    9. ಅಧ್ಯಾಯ 11: 
    10. ಅಧ್ಯಾಯ 12
    11. ಅಧ್ಯಾಯ 75:
  24. ಶ್ರೀವಾಯುಪುರಾಣ

 

 

ಯಾವುದರಿಂದ ಈ ಜಗತ್ತೆಲ್ಲವೂ ಹುಟ್ಟಿದೆಯೋ, ಯಾವುದರ ಜ್ಞಾನದಿಂದ ಆತ್ಮವಂತರು ಪರಮಪದವನ್ನು ಪಡೆಯುತ್ತಾರೋ ಮತ್ತು ಯಾವುದನ್ನು ಮಂತ್ರಶಬ್ದಗಳೂ ಸಂಪೂರ್ಣವಾಗಿ ತೋರಿಸಲಾರವೋ ಆ ಪರಮ ವಸ್ತು ಬ್ರಹ್ಮವಸ್ತುವು ವಿವಿಧ ರಸಗಳಿಂದಲೂ ವಿವಿಧ ಗಂಧಗಳಿಂದಲೂ ವಿಯುಕ್ತವಾಗಿದೆ. ಅದಕ್ಕೆ ಶಬ್ದವಿಲ್ಲ, ಸ್ಪರ್ಶವಿಲ್ಲ ಮತ್ತು ರೂಪವೂ ಇಲ್ಲ. ಅದನ್ನು ಗ್ರಹಿಸಲು ಸಾಧ್ಯವಿಲ್ಲ. ಅದು ಅವ್ಯಕ್ತವು. ಅವರ್ಣನೀಯವು. ಆ ಬ್ರಹ್ಮವಸ್ತುವು ಸ್ತ್ರೀಯೂ ಅಲ್ಲ ಪುರುಷನೂ ಅಲ್ಲ, ನಪುಂಸಕನೂ ಅಲ್ಲ. ಅದು ಇದೆ. ಅದು ಇಲ್ಲ ಕೂಡ. ಮನುಷ್ಯರು ತಮ್ಮಲ್ಲಿಯೇ ಕಾಣುವ ಆ ಬ್ರಹ್ಮವಸ್ತುವು ಅಕ್ಷರವಾದುದು. ಅದಕ್ಕೆ ನಾಶವೆನ್ನುವುದಿಲ್ಲ. ಆ ಪರಮತತ್ತ್ವವು ಸ್ವಾಭಾವಿಕವಾಗಿ ಬಿಸಿಯಾಗಿರುವುದಿಲ್ಲ, ತಣ್ಣಗಾಗಿಯೂ ಇರುವುದಿಲ್ಲ, ಮೃದುವಾಗಿರುವುದಿಲ್ಲ ಅಥವಾ ತೀಕ್ಷ್ಣವೂ ಆಗಿರುವುದಿಲ್ಲ. ಅದರ ರುಚಿಯು ಆಮ್ಲವಾಗಿಯೂ, ಕಷಾಯವಾಗಿಯೂ, ಸಿಹಿಯಾಗಿಯೂ ಅಥವಾ ಖಾರವಾಗಿಯೂ ಇಲ್ಲ. ಅದಕ್ಕೆ ಶಬ್ದವೂ ಇಲ್ಲ. ವಾಸನೆಯೂ ಇಲ್ಲ. ಅದಕ್ಕೆ ರೂಪವೂ ಇಲ್ಲ. (ಮಹಾಭಾರತ, ಶಾಂತಿಪರ್ವ, ಮೋಕ್ಷಧರ್ಮಪರ್ವ, ಮನುಬೃಹಸ್ಪತಿಸಂವಾದ, ಅಧ್ಯಾಯ 194-195).

ಋತುಗಳು ಬದಲಾಗುತ್ತಿದ್ದಂತೆ ಹೇಗೆ ಹಿಂದಿನ ವರ್ಷದಲ್ಲಿದ್ದಂತೆಯೇ ಬೇರೆ ಬೇರೆ ಋತುಲಕ್ಷಣ-ರೂಪಗಳು ಮೂಡಿಬರುತ್ತವೆಯೋ ಹಾಗೆಯೇ ಬ್ರಹ್ಮನ ಹಗಲು-ರಾತ್ರಿಗಳು ಹಿಂದಿನ ದಿನದ ಹಗಲು-ರಾತ್ರಿಗಳಂತೆಯೇ ಅಭಿವ್ಯಕ್ತವಾಗುತ್ತವೆ. ಒಂದು ದೀಪದಿಂದ ಸಹಸ್ರಾರು ಅನ್ಯ ದೀಪಗಳು ಹೊತ್ತಿಕೊಳ್ಳುವಂತೆ ಮತ್ತು ಸಾವಿರ ದೀಪಗಳನ್ನು ಹೊತ್ತಿಸಿದರೂ ಮೊದಲಿದ್ದ ದೀಪವು ತನ್ನ ಪೂರ್ಣಸ್ವರೂಪವನ್ನು ಕಳೆದುಕೊಳ್ಳದೇ ಇರುವಂತೆ, ಒಂದೇ ಪ್ರಕೃತಿಯು ಅಸಂಖ್ಯಾತ ಪದಾರ್ಥಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಆದರೂ ಅದು ತನ್ನ ಪೂರ್ಣಸ್ವರೂಪದಲ್ಲಿ ನ್ಯೂನತೆಯನ್ನು ಹೊಂದುವುದಿಲ್ಲ. ಅವ್ಯಕ್ತ ಪ್ರಕೃತಿಯ ಕರ್ಮದಿಂದ ಹುಟ್ಟಿದ ಬುದ್ಧಿಯು ಅಹಂಕಾರವನ್ನು ಹುಟ್ಟಿಸುತ್ತದೆ. ಆಕಾಶವು ಅಹಂಕಾರದಿಂದ ಹುಟ್ಟುತ್ತದೆ. ವಾಯುವು ಆಕಾಶದಿಂದ ಹುಟ್ಟುತ್ತದೆ. ವಾಯುವಿನಿಂದ ತೇಜಸ್ಸೂ, ಅದರಿಂದ ಆಪವೂ ಮತ್ತು ಆಪದಿಂದ ವಸುಧೆಯೂ ಹುಟ್ಟಿಕೊಳ್ಳುತ್ತದೆ. ಯಾವುದರಲ್ಲಿ ಜಗತ್ತೆಲ್ಲವೂ ವ್ಯವಸ್ಥಿತವಾಗಿರುವುದೋ ಈ ಎಂಟನ್ನು ಮೂಲಪ್ರಕೃತಿಗಳು ಎನ್ನುತ್ತಾರೆ. ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು. ಐದು ವಿಷಯಗಳು ಮತ್ತು ಹದಿನಾರನೆಯ ಮನಸ್ಸು – ಈ ಹದಿನಾರನ್ನು ಮೂಲಪ್ರಕೃತಿಗಳ ವಿಕಾರಗಳೆಂದು ಹೇಳುತ್ತಾರೆ. ಈ ಹದಿನಾರರಲ್ಲಿ ಮನಸ್ಸು ಅಹಂಕಾರದ ವಿಕಾರವು. ಉಳಿದ ಹದಿನೈದು ಅವುಗಳ ಉತ್ಪತ್ತಿಗೆ ಕಾರಣವಾದ ಪಂಚಮಹಾಭೂತಗಳ ವಿಕಾರಗಳು. ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು – ಈ ಐದು ಜ್ಞಾನೇಂದ್ರಿಯಗಳು. ಪಾದಗಳು, ಗುದ, ಜನನೇಂದ್ರಿಯ, ಕೈಗಳು ಮತ್ತು ಮಾತು – ಈ ಐದು ಕರ್ಮೇಂದ್ರಿಯಗಳು. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಇವು ಇಂದ್ರಿಯಾರ್ಥ ವಿಷಯಗಳು. ಈ ಹದಿನೈದರಲ್ಲಿಯೂ ಚಿತ್ತವು ವ್ಯಾಪಿಸಿದೆ ಎಂದು ತಿಳಿಯಬೇಕು. ಮನಸ್ಸು ಅವೆಲ್ಲವುಗಳನ್ನೂ ಪ್ರವೇಶಿಸುವಂಥಹುದು (ಮಹಾಭಾರತ, ಶಾಂತಿಪರ್ವ, ಮೋಕ್ಷಧರ್ಮಪರ್ವ, ಅಧ್ಯಾಯ 203).

ಶ್ರೀಮದ್ಭಾಗವತ ಪುರಾಣವು ಹತ್ತು ಬಗೆಯ ಸೃಷ್ಟಿಯನ್ನೂ ಮೂರು ಬಗೆಯ ಲಯವನ್ನೂ ವರ್ಣಿಸುತ್ತದೆ. ಸೃಷ್ಟಿಯ ಹತ್ತು ಬಗೆಗಳು ಈ ಕೆಳಗಿನಂತಿವೆ. ಈ ಹತ್ತರಲ್ಲಿ ಮೊದಲನೆಯ ಆರು ಪ್ರಾಕೃತ ಸೃಷ್ಟಿಯೆಂದೆನಿಸಿಕೊಂಡಿದೆ.

  1. ಮಹತ್ತತ್ತ್ವದ ಸೃಷ್ಟಿ: ಪ್ರಕೃತಿಯ ಗುಣಗಳಾದ ಸತ್ತ್ವ, ರಜಸ್ ಮತ್ತು ತಮಸ್ಸುಗಳಲ್ಲಿ ವಿಷಮತೆಯುಂಟಾಗುವುದೇ ಮಹತ್ತತ್ತ್ವದ ಸೃಷ್ಟಿ.
  2. ಅಹಂಕಾರದ ಸೃಷ್ಟಿ: ಮಹತ್ತತ್ತ್ವದಿಂದ ಪೃಥ್ವಿಯೇ ಮೊದಲಾದ ಪಂಚಭೂತಗಳು ಉತ್ಪತ್ತಿಯಾಗುತ್ತವೆ. ಅಕ್ಷರವಾದ ಬ್ರಹ್ಮವಸ್ತುವಿನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ ಮತ್ತು ಜಲದಿಂದ ಪೃಥ್ವಿಯೂ ಹುಟ್ಟಿವೆ (ಮಹಾಭಾರತ, ಶಾಂತಿಪರ್ವ, ಮೋಕ್ಷಧರ್ಮಪರ?ವ, ಅಧ್ಯಾಯ 195). ಇವುಗಳಿಗೆ ಮಿತಿಯೇ ಇಲ್ಲದಿರುವುದರಿಂದ ಇವುಗಳಿಗೆ ಮಹಾ ಎಂಬ ಶಬ್ದವನ್ನು ಜೋಡಿಸಲಾಗಿದೆ. ಇವುಗಳಿಂದಲೇ ಭೂತಗಳ ಉತ್ಪತ್ತಿಯಾಗುತ್ತದೆ. ಆದುದರಿಂದ ಇವುಗಳು ಮಹಾಭೂತಗಳೆನಿಸಿಕೊಳ್ಳುತ್ತವೆ. “ಪೂರ್ವಕಾಲದಲ್ಲಿ ಅನಂತ ಆಕಾಶವು ಪರ್ವತದಂತೆ ನಿಶ್ಚಲವಾಗಿತ್ತು. ಅದರಲ್ಲಿ ಚಂದ್ರ, ಸೂರ್ಯ, ವಾಯು ಯಾರೂ ಕಾಣುತ್ತಿರಲಿಲ್ಲ. ಎಲ್ಲವೂ ನಿದ್ರಿಸುತ್ತಿದ್ದಂತೆ ತೋರುತ್ತಿತ್ತು. ಆಗ ಅಂಧಕಾರದಿಂದ ಇನ್ನೊಂದು ಅಂಧಕಾರವು ಪ್ರಕಟಗೊಂಡಂತೆ ಆಕಾಶದಿಂದ ಜಲವು ಉತ್ಪನ್ನವಾಯಿತು. ಆ ಜಲಪ್ರವಾಹದಿಂದ ವಾಯುವು ಮೇಲೆದ್ದನು. ಆಗ ಅಂಧಕಾರದಿಂದ ಇನ್ನೊಂದು ಅಂಧಕಾರವು ಪ್ರಕಟಗೊಂಡಂತೆ ಆಕಾಶದಿಂದ ಜಲವು ಉತ್ಪನ್ನವಾಯಿತು. ಆ ಜಲಪ್ರವಾಹದಿಂದ ವಾಯುವು ಮೇಲೆದ್ದನು. ರಂಧ್ರವಿಲ್ಲದ ಪಾತ್ರೆಯು ಹೇಗೆ ನಿಃಶಬ್ದವಾಗಿರುವಂತೆ ತೋರುತ್ತದೆಯೋ ಮತ್ತು ಅದರಲ್ಲಿ ನೀರನ್ನು ತುಂಬಿಸುವಾಗ ಹೇಗೆ ವಾಯುವು ಶಬ್ದಮಾಡುತ್ತದೆಯೋ ಹಾಗೆ ನೀರಿನ ಪ್ರವಾಹದಿಂದ ವಾಯುವು ಚಲಿಸತೊಡಗಿತು. ಹೀಗೆ ಆಕಾಶದ ಕೊನೆಯವರೆಗೂ ನಿರಂತರವಾಗಿ, ಸ್ವಲ್ಪವೂ ಜಾಗವಿಲ್ಲದೇ ನೀರೇ ತುಂಬಿಕೊಂಡಿತ್ತು. ಆಗ ಆ ಏಕಾರ್ಣವ ಜಲಪ್ರದೇಶವನ್ನು ಭೇದಿಸಿ ಅತಿ ದೊಡ್ಡ ಶಬ್ದದೊಂದಿಗೆ ವಾಯುವು ಪ್ರಕಟಗೊಂಡಿತು. ಹೀಗೆ ಸಮುದ್ರದ ಜಲಸಮುದಾಯದಿಂದ ಪ್ರಕಟವಾದ ವಾಯುವು ಸರ್ವತ್ರ ಸಂಚರಿಸತೊಡಗಿತು ಮತ್ತು ಆಕಾಶದಲ್ಲಿ ಎಲ್ಲಿ ತಲುಪಿದರೂ ಅದು ಶಾಂತವಾಗಲಿಲ್ಲ. ವಾಯು ಮತ್ತು ಜಲದ ಆ ಸಂಘರ್ಷದಿಂದ ಅತ್ಯಂತ ತೇಜೋಮಯ ಮಹಾಬಲೀ ಅಗ್ನಿದೇವನ ಉತ್ಪನ್ನವಾಯಿತು. ಅವನ ಜ್ವಾಲೆಗಳು ಮೇಲ್ಮುಖವಾಗಿದ್ದವು. ಆ ಅಗ್ನಿಯು ಆಕಾಶದ ಎಲ್ಲ ಅಂಧಕಾರವನ್ನೂ ನಾಶಗೊಳಿಸಿ ಪ್ರಕಟವಾಯಿತು. ವಾಯುವಿನ ಸಂಯೋಗವನ್ನು ಪಡೆದುಕೊಂಡು ಅಗ್ನಿಯು ಜಲವನ್ನು ಆಕಾಶಕ್ಕೆ ಬೀಸತೊಡಗಿತು. ಅನಂತರ ಅದೇ ಜಲ, ಅಗ್ನಿ ಮತ್ತು ವಾಯುಗಳ ಸಂಯೋಗದಿಂದ ಘನೀಭೂತವಾಯಿತು. ಅದರ ಆ ತೇವವು ಆಕಾಶದಲ್ಲಿ ಬಿದ್ದಾಗ ಅದೇ ಘನೀಭೂತವಾಗಿ ಪೃಥ್ವಿಯ ರೂಪದಲ್ಲಿ ಬದಲಾಯಿತು. ಈ ಪೃಥ್ವಿಯನ್ನೇ ಸಂಪೂರ್ಣ ರಸ, ಗಂಧ, ಸ್ನೇಹ ಮತ್ತು ಪ್ರಾಣಿಗಳ ಕಾರಣವೆಂದು ತಿಳಿಯಬೇಕು. ಇದರಿಂದಲೇ ಎಲ್ಲವುಗಳ ಉತ್ಪತ್ತಿಯಾಯಿತು.” (ಮಹಾಭಾರತ, ಶಾಂತಿಪರ್ವ, ಮೋಕ್ಷಧರ್ಮಪರ್ವ, ಭೃಗು-ಭರದ್ವಾಜ ಸಂವಾದ, ಅಧ್ಯಾಯ 176).
  3. ಭೂತಸೃಷ್ಟಿ: ಪಂಚಮಹಾಭೂತಗಳಿಂದಾದ ತನ್ಮಾತ್ರಗಳ ಉತ್ಪತ್ತಿ. ತನ್ಮಾತ್ರಗಳು ಐದು: ಆಕಾಶದಿಂದ ಶಬ್ದ, ವಾಯುವಿನಿಂದ ಸ್ಪರ್ಶ, ಅಗ್ನಿಯಿಂದ ರೂಪ, ಜಲದಿಂದ ರಸ ಮತ್ತು ಪೃಥ್ವಿಯಿಂದ ಗಂಧ. ಗಂಧ, ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ಪೃಥ್ವಿಯ ಗುಣಗಳು. ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ಜಲದ ಗುಣಗಳು. ಶಬ್ದ, ಸ್ಪರ್ಶ ಮತ್ತು ರೂಪಗಳು ಅಗ್ನಿಯ ಗುಣಗಳು. ಶಬ್ದ ಮತು ಸ್ಪರ್ಶಗಳು ವಾಯುವಿನ ಗುಣಗಳು. ಆಕಾಶದ ಗುಣ ಶಬ್ದವು ಮಾತ್ರ. ವಾಯುವು ಐದು ಪ್ರಕಾರಗಳಲ್ಲಿದೆ: ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ. ಪ್ರಾಣದಿಂದ ಪ್ರಾಣಿಯು ಚಲಿಸುತ್ತವೆ. ವ್ಯಾನದಿಂದ ವ್ಯಾಯಾಮವನ್ನು ಮಾಡುತ್ತವೆ. ಅಪಾನ ವಾಯುವು ಮೇಲಿಂದ ಕೆಳಗೆ ಹೋಗುತ್ತದೆ. ಸಮಾನ ವಾಯುವು ಹೃದಯದಲ್ಲಿ ನೆಲೆಸಿರುತ್ತದೆ. ಉದಾನದಿಂದ ಪ್ರಾಣಿಯು ಉಚ್ಛ್ವಾಸವನ್ನು ತೆಗೆದುಕೊಳ್ಳುತ್ತದೆ ಹಾಗೂ ಕಂಠ-ತಾಲುಗಳ ಭೇದದಿಂದ ಶಬ್ದ-ಅಕ್ಷರಗಳ ಉಚ್ಛಾರಣೆಯಾಗುತ್ತದೆ. ಹೀಗೆ ಈ ಐದು ವಾಯುಗಳು ದೇಹಿಯು ಚಲಿಸುವಂತೆ ಮಾಡುತ್ತವೆ. ಇಷ್ಟ-ಅನಿಷ್ಟ ಗಂಧಗಳು, ಮಧುರ-ಕಟು ಗಂಧಗಳು, ನಿರ್ಹಾರೀ, ಸಂಹತ, ಸ್ನಿಗ್ಧ, ರೂಕ್ಷ, ವಿಶದ – ಹೀಗೆ ಭೂಸಂಬಂಧವಾದ ಒಂಬತ್ತು ಬಗೆಯ ಗಂಧಗಳಿವೆ. ಸಿಹಿ, ಉಪ್ಪು, ಕಹಿ, ಒಗರು, ಹುಳಿ ಮತ್ತು ಖಾರ – ಈ ಆರು ಜಲಮಯ ರಸಗಳು. ಹೃಸ್ವ, ದೀರ್ಘ, ಸ್ಥೂಲ, ಚಚ್ಚೌಕ, ಅಣು, ವೃತ್ತ, ಬಿಳಿಪು, ಕಪ್ಪು, ಕೆಂಪು, ನೀಲಿ, ಹಳದಿ ಮತ್ತು ಆಕಾಶನೀಲಿ ಬಣ್ಣ – ಹೀಗೆ ಜ್ಯೋತಿಯ ರೂಪಗುಣಗಳು ಹನ್ನೆರಡು. ಕಠಿನ, ನುಣುಪು, ತೆಳವು, ಜಿಡ್ಡು, ಮೃದು, ದಾರುಣ, ಉಷ್ಣ, ಶೀತ, ಸುಖ, ದುಃಖ, ಸ್ನಿಗ್ಧ, ವಿಶದ – ಹೀಗೆ ವಾಯುವಿನ ಗುಣಗಳು ಹನ್ನೆರಡು. ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ – ಇವು ಆಕಾಶದ ಏಳು ಗುಣ ಲಕ್ಷಣಗಳು.
  4. ಇಂದ್ರಿಯಗಳ ಸೃಷ್ಟಿ: ಜ್ಞಾನ ಮತ್ತು ಕ್ರಿಯಾಶಕ್ತಿಗಳಿಂದ ಸಂಪನ್ನವಾದ ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳ ಉತ್ಪತ್ತಿ. “ಪ್ರಾಣಿಗಳ ಶರೀರವು ಪಂಚ ಮಹಾಭೂತಗಳ ಸಂಘಾತವೇ ಆಗಿದೆ. ಚೇಷ್ಟೆಯು ವಾಯುವಿನ ಭಾಗ, ಉದರವು ಆಕಾಶದ ಅಂಶ, ಉಷ್ಣವು ಅಗ್ನಿಯ ಅಂಶ, ದ್ರವಗಳು ಜಲದ ಅಂಶಗಳು ಮತ್ತು ಎಲುಬು-ಮಾಂಸಗಳು ಪೃಥ್ವಿಯ ಅಂಶಗಳು. ಶರೀರದಲ್ಲಿ ಚರ್ಮ, ಮಾಂಸ, ಎಲುಬು, ಮಜ್ಜೆ ಮತ್ತು ಸ್ನಾಯು – ಈ ಐದು ವಸ್ತುಗಳ ಸಮುದಾಯವು ಪೃಥ್ವೀಮಯವು. ತೇಜಸ್ಸು, ಕ್ರೋಧ, ನೇತ್ರ, ಉಷ್ಣತೆ ಮತ್ತು ಜಠರಾನಲ – ಶರೀರದಲ್ಲಿರುವ ಈ ಐದು ವಸ್ತುಗಳು ಅಗ್ನಿಮಯವು. ಕಿವಿಗಳು, ಮೂಗು, ಮುಖ, ಹೃದಯ ಮತ್ತು ಹೊಟ್ಟೆ – ಪ್ರಾಣಿಗಳ ಶರೀರದಲ್ಲಿರುವ ಈ ಐದು ಧಾತುಗಳು ಆಕಾಶದಿಂದ ಉತ್ಪನ್ನವಾದವುಗಳು. ಕಫ, ಪಿತ್ತ, ಬೆವರು, ಕೊಬ್ಬು ಮತ್ತು ರಕ್ತ – ಪ್ರಾಣಿಗಳ ಶರೀರದಲ್ಲಿರುವ ಈ ಐದು ವಸ್ತುಗಳು ಜಲರೂಪಗಳು. ” ಆಕಾಶದಿಂದ ಶ್ರೋತ್ರೇಂದ್ರಿಯ (ಮತ್ತು ಅದರ ವಿಷಯವಾದ ಶಬ್ದ) ಮತ್ತು ಪೃಥ್ವಿಯಿಂದ ಘ್ರಾಣೇಂದ್ರಿಯ (ಮತ್ತು ಅದರ ವಿಷಯವಾದ ವಾಸನೆ) ಗಳುಂಟಾಗುತ್ತವೆ. ಮತ್ತು ರೂಪ-ವಿಪಾಕಗಳು ತೇಜೋಮಯವು. ಬೆವರು ಮತ್ತು ರಸ ಇವು ಜಲಾಶ್ರಯವೆಂದು ಹೇಳುತ್ತಾರೆ. ಹಾಗೂ ಸ್ಪರ್ಶಗುಣವು ವಾಯ್ವಾತ್ಮಕವು. ಪಂಚೇಂದ್ರಿಯಗಳು ಅವುಗಳ ವಿಷಯಗಳೊಂದಿಗೆ ಐದು ಮಹಾಭೂತಗಳಲ್ಲಿ ನಿವಾಸಿಸಿರುತ್ತವೆ. ಆದರೆ ಇವೆಲ್ಲವೂ ಮನಸ್ಸಿನ ಅನುಗಾಮಿಗಳು. ಮನಸ್ಸು ಬುದ್ಧಿಯನ್ನು ಅನುಸರಿಸುತ್ತದೆ ಮತ್ತು ಬುದ್ಧಿಯು ಆತ್ಮವನ್ನು ಅನುಸರಿಸುತ್ತದೆ.
  5. ಅಧಿಷ್ಟಾತೃ ಸೃಷ್ಟಿ: ಮನಸ್ಸನ್ನೂ ಸೇರಿ ಇಂದ್ರಯಗಳಿಗೆ ಅಧಿಷ್ಟಾತೃ ದೇವತೆಗಳ ಉತ್ಪತ್ತಿ.
  6. ಅವಿದ್ಯೆಯ ಸೃಷ್ಟಿ: ಇಲ್ಲಿ ತಾಮಿಸ್ರ, ಅಂಧತಾಮಿಸ್ರ, ತಮ, ಮೋಹ ಮತ್ತು ಮಹಾಮೋಹ ಎನ್ನುವ ಐದು ಗಂಟುಗಳಿಂದ ಕೂಡಿದ್ದು ಜೀವಿಗಳ ಬುದ್ಧಿಯನ್ನು ಆವರಣ ಮತ್ತು ವಿಕ್ಷೇಪಗೊಳಿಸುತ್ತದೆ.
  7. ಸ್ಥಾವರ ಸೃಷ್ಟಿ: ರಜೋಗುಣದಿಂದ ಆರು ವಿಧದ ಸ್ಥಾವರಗಳ ಸೃಷ್ಟಿ - ವನಸ್ಪತಿಗಳು, ಔಷಧಿಗಳು, ಲತೆಗಳು, ಬಿದಿರು ಮೊದಲಾದ ತ್ವಕ್ ಸಾರಗಳು, ವೀರುಧಗಳು ಮತ್ತು ದ್ರುಮಗಳು. ಇವುಗಳಲ್ಲಿ ಕೆಳಭಾಗದಿಂದ ಮೇಲ್ಗಡೆಗೆ ಆಹಾರಸಂಚಾರವಾಗುತ್ತದೆ. ಸಾಮಾನ್ಯವಾಗಿ ಇವುಗಳಲ್ಲಿ ಜ್ಞಾನಶಕ್ತಿಯು ಪ್ರಕಟವಾಗಿರುವುದಿಲ್ಲ.
  8. ತಿರ್ಯಕ್ ಸೃಷ್ಟಿ: ತಿರ್ಯಕ್ ಅಥವಾ ಪಶು-ಪಕ್ಷಿಗಳ ಸೃಷ್ಟಿಯಲ್ಲಿ 28 ಜಾತಿಯ ಪ್ರಾಣಿಗಳು ಜನಿಸುತ್ತವೆ. ಇವುಗಳಿಗೆ ಇಂದು-ನಾಳೆ ಎಂಬ ಕಾಲಜ್ಞಾನವಿರುವುದಿಲ್ಲ. ತಮೋಗುಣದ ಹೆಚ್ಚಳದಿಂದ ಇವು ಕೇವಲ ತಿಂದು-ಕುಡಿಯುವುದು, ಮೈಥುನ, ಮಲಗುವುದು ಇಷ್ಟನ್ನೇ ತಿಳಿದಿರುತ್ತವೆ. ಮೂಸಿನೋಡಿಯೇ ಇವುಗಳಲ್ಲಿ ಜ್ಞಾನವಾಗುತ್ತದೆ. ಇವುಗಳ ಹೃದಯದಲ್ಲಿ ವಿಚಾರಶಕ್ತಿ ಅಥವಾ ದೂರದರ್ಶಿತ್ವ ಇರುವುದಿಲ್ಲ. ತಿರ್ಯಕ್ ಪ್ರಾಣಿ-ಪಕ್ಷಿಗಳಲ್ಲಿ ದ್ವಿಶಫ (ಎರಡು ಗೊರಸೆಗಳುಳ್ಳವುಗಳು – ಹಸು, ಆಡು, ಕೋಣ, ಜಿಂಕೆ, ಹಂದಿ, ಗವಯ, ರುರು, ಟಗರು, ಒಂಟೆ ಇತ್ಯಾದಿ), ಏಕಶಫ (ಒಂದು ಗೊರಸುಳ್ಳವುಗಳು – ಕತ್ತೆ, ಕುದುರೆ, ಹೇಸರಗತ್ತೆ, ಗೌರಮೃಗ, ಶರಭ, ಚಮರೀಮೃಗ, ಇತ್ಯಾದಿ), ಪಂಚನಖ (ಐದು ಉಗುರುಗಳುಳ್ಳವುಗಳು – ನಾಯಿ, ನರಿ, ತೋಳ, ಹುಲಿ, ಬೆಕ್ಕು, ಮೊಲ, ಮುಳ್ಳುಹಂದಿ, ಸಿಂಹ, ಕಪಿ, ಆನೆ, ಆಮೆ, ಉಡ, ಮೊಸಳೆ, ಇತ್ಯಾದಿ) ಮತ್ತು ಹಾರುವ ಪಕ್ಷಿಗಳೆಂಬ ನಾಲ್ಕು ಬಗೆಗಳಿವೆ.
  9. ಮನುಷ್ಯಸೃಷ್ಟಿ: ಇವರಲ್ಲಿ ಆಹಾರದ ಸ್ರೋತವು ಮೇಲಿನಿಂದ ಕೆಳಕ್ಕೆ ಹರಿಯುತ್ತದೆ. ಮನುಷ್ಯರು ರಜೋಗುಣ ಪ್ರಧಾನರಾಗಿದ್ದು ಕರ್ಮಪರಾಯಣರಾಗಿರೂ ದುಃಖರೂಪೀ ವಿಷಯಗಳಲ್ಲಿಯೇ ಸುಖವನ್ನು ಅನುಭವಿಸುವವರೂ ಆಗಿರುತ್ತಾರೆ.
  10. ದೇವಸೃಷ್ಟಿ: ಇದು ಎಂಟು ಪ್ರಕಾರದ್ದು – ದೇವತೆಗಳು, ಪಿತೃಗಳು, ಅಸುರರು, ಗಂಧರ್ವರು, ಅಪ್ಸರೆಯರು, ಯಕ್ಷ-ರಾಕ್ಷಸರು, ಸಿದ್ಧರು, ಚಾರಣ-ವಿದ್ಯಾಧರರು, ಭೂತ-ಪ್ರೇತ-ಪಿಶಾಚಿಗಳು, ಕಿನ್ನರ-ಕಿಂಪುರುಷ-ಅಶ್ವಮುಖರು.

ಋಗ್ವೇದ ಸಂಹಿತೆಯ ಹತ್ತನೇ ಮಂಡಲದ 81, 82, 90, 129, 130 ಮತ್ತು 190 ಸೂಕ್ತಗಳಲ್ಲಿ ಸೃಷ್ಟಿ ವಿಷಯಕ ವರ್ಣನೆಗಳಿವೆ. ಉಪನಿಷತ್ತುಗಳಲ್ಲಿಯೂ ವೇದಾಂತ ಗ್ರಂಥಗಳಲ್ಲಿಯೂ ಹೇಳಲ್ಪಟ್ಟಿರುವ ತತ್ತ್ವಗಳಿಗೂ ವೇದಾಂತ ವಿಷಯಗಳಿಗೂ ಈ ಸೂಕ್ತಗಳೇ ಆಧಾರವಾಗಿವೆ. ಇವುಗಳ ಆಧಾರದ ಮೇಲೆಯೇ ಪರಬ್ರಹ್ಮವಸ್ತುವನ್ನು ವರ್ಣಿಸುವ ಉಪನಿಷತ್ತುಗಳು – ಅದರಲ್ಲಿಯೂ ಮುಖ್ಯವಾಗಿ ದಶೋಪನಿಷತ್ತುಗಳು ರಚಿತವಾಗಿವೆ. ಈ ಉಪನಿಷತ್ತುಗಳಲ್ಲಿ ಬ್ರಹ್ಮದ ಸ್ವರೂಪ, ಅಸತ್, ಸತ್, ಪ್ರಕೃತಿ, ಪುರುಷ, ಆತ್ಮ, ಪರಮಾತ್ಮ, ಜಗತ್ ಸೃಷ್ಟಿಗೆ ಪೂರ್ವದಲ್ಲಿದ್ದ ಸ್ಥಿತಿ, ನಂತರ ಜಗತ್ಸೃಷ್ಟಿಯ ಕಾರಣ, ಜಗತ್ಸೃಷ್ಟಿಯಾದ ವಿಚಾರ, ಸ್ಥಿತಿ, ಲಯ, ಇತ್ಯಾದಿ ವಿಷಯಗಳು ನಾನಾ ರೀತಿಗಳಲ್ಲಿ ವರ್ಣಿಸಲ್ಪಟ್ಟಿವೆ.

 

ಸೃಷ್ಟಿಯು ಒಂದೇ ಸಾರಿ ಆಗುವುದಲ್ಲ. ಸೃಷ್ಟಿಯ ನಂತರ ಸ್ಥಿತಿ ಅಂದರೆ ಸೃಷ್ಟಿಸಲ್ಪಟ್ಟ ಜಗದಾದಿಗಳು ಕೆಲವು ಕಾಲ ಅದೇ ಸ್ಥಿತಿಯಲ್ಲಿರುತ್ತವೆ. ನಂತರ ಅವು ನಾಶವಾಗಿ ಸೃಷ್ಟಿಯ ಪೂರ್ವದಲ್ಲಿ ಯಾವ ಸ್ಥಿತಿಯಲ್ಲಿದ್ದವೋ ಅದೇ ಸ್ಥಿತಿಗೆ ಬರುತ್ತವೆ. ಕೆಲವು ಕಾಲ ಅದೇ ಸ್ಥಿತಿಯಲ್ಲಿದ್ದು ಪುನಃ ಸೃಷ್ಟಿ, ಪುನಃ ಸ್ಥಿತಿ, ಪುನಃ ನಾಶ (ಲಯ) ವು ನಡೆಯುತ್ತದೆ. ಅಂದರೆ ಸೃಷ್ಟಿ-ಸ್ಥಿತಿ-ಲಯಗಳು ಒಂದಾವರ್ತಿ ಮಾತ್ರ ನಡೆಯುವುದಿಲ್ಲ. ಚಕ್ರಪರಿಭ್ರಮಣದಂತೆ ಒಂದಾಗುತ್ತಲೊಂದು ಎಡೆಬಿಡದೇ ನಡೆದುಕೊಂಡು ಬರುತ್ತಿರುತ್ತವೆ. ಆದ್ದರಿಂದ ಇಲ್ಲಿ ವರ್ಣಿಸಿದ ಜಗತ್ಸೃಷ್ಟಿಯು ಹಿಂದೆ ಅನೇಕಾವರ್ತಿ ಸಂಭವಿಸಿದೆ. ಮುಂದೆಯೂ ಸಂಭವಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ ಮತ್ತು ಲಯದ ನಂತರ ಸ್ಥಿತಿ, ಪುನಃ ಸೃಷ್ಟಿ ಇವೆಲ್ಲವೂ ಒಂದಾಗುತ್ತಲೊಂದರಂತೆ ಅಸಂಖ್ಯಾತವಾಗಿ ನಡೆದು ಬರುತ್ತಿದೆ. ಇದಕ್ಕೆ ಆದಿಯೂ ಇಲ್ಲ. ಅಂತ್ಯವೂ ಇಲ್ಲ. ಅಂತಹ ಅಸಂಖ್ಯಾತವಾದ ಸ್ಥಿತಿಗಳಲ್ಲಿ ಇಲ್ಲಿ ವರ್ಣಿಸಿರುವ ಸ್ಥಿತಿಯು ಒಂದು ಸಲ ನಡೆದ ಸ್ಥಿತಿಮಾತ್ರ. ಇವೆಲ್ಲವೂ ಒಂದೇ ವಿಧವಾಗಿರುವುದರಿಂದ ಒಂದಾವರ್ತಿ ನಡೆದುದನ್ನು ವರ್ಣಿಸಿದುದರಿಂದ ಎಲ್ಲವನ್ನೂ ವರ್ಣಿಸಿದಂತಾಗುತ್ತದೆ.

 

ಸೃಷ್ಟಿ ವಿಚಾರವು ಈ ಕೆಳಗಿನ ಮುಖ್ಯ ಉಪನಿಷತ್ತುಗಳಲ್ಲಿ ಕಂಡುಬರುತ್ತವೆ:

  • ಐತರೇಯ ಉಪನಿಷತ್ತು (ಋಗ್ವೇದ): ಸೃಷ್ಟಿಯ ಪ್ರಾರಂಭವು ದಿವ್ಯ ಚೇತನದಿಂದ ಆಗಿರುವುದಾಗಿ ವಿವರಿಸುತ್ತದೆ. “ಆತ್ಮಾ ವಾ ಇದಮೇಕ ಏವಾಗ್ರ ಆಸೀನ್ನಾನ್ಯತ್ಕಿಂಚನ ಮಿಷತ್” (ಪ್ರಥಮ ಅಧ್ಯಾಯ)
  • ತೈತ್ತರೀಯ ಉಪನಿಷತ್ತು (ಯಜುರ್ವೇದ) “ಅಸತ್ಸೋಮಾಸದಜಾಯತ,ತ್ದ್ವೈತತ್ಸತೋಽಭವತ್” (ಬ್ರಹ್ಮಾನಂದವಲ್ಲೀ). ಜಗತ್ತು ಪ್ರಥಮದಲ್ಲಿ ಅಸತ್ (ಅವ್ಯಕ್ತ) ಸ್ಥಿತಿಯಲ್ಲಿತ್ತು. ನಂತರ ಅದು ಸತ್ಪದಾರ್ಥ (ವ್ಯಕ್ತಪ್ರಪಂಚ) ವಾಯಿತು. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಮತ್ತು ಆನಂದಮಯ ಈ ಪಂಚಕೋಶಗಳ ಮೂಲಕ ಜೀವರ ತತ್ತ್ವವನ್ನು ವಿವರಿಸುತ್ತದೆ. ಅನುವಾಕ 1-7
  • ಛಾಂದೋಗ್ಯೋಪನಿಷತ್ತು (ಸಾಮವೇದ): “ಸದೇವ ಸೋಮ್ಯ ಇದಮಗ್ರ ಆಸೀದೇಕಮೇವಾದ್ವಿತೀಯಮ್”, “ತತ್ಪ್ರಜಾ ಸೃಜೇಯ ಇತಿ” (ಅಧ್ಯಾಯ 6), ಉದ್ದಾಲಕನು ಶ್ವೇತಕೇತುವಿಗೆ ಬೋಧಿಸುವುದು
  • ಬೃಹದಾರಣ್ಯಕೋಪನಿಷತ್ತು (ಶುಕ್ಲ ಯಜುರ್ವೇದ) “ಸ ಏಕಾಕೀ ನ ರಾಮತೇ”
  • ಮುಂಡಕೋಪನಿಷತ್ತು: “ಯಥಾ ಸುದೀಪ್ತಾತ್ ಪಾವಕಾದಿ ಸ್ಫುಲಿಂಗಾಃ..ಏವನೇವಾಸ್ನಾದಾತ್ನಬಘ್ ಸರ್ವಾಣಿ ಭೂತಾನಿ...ಸೃಜ್ಯಂತೇ” – ಚೆನ್ನಾಗಿ ಉರಿಯುತ್ತಿರುವ ಬೆಂಕಿಯಿಂದ ನೂರಾರು ಕಿಡಿಗಳು ಹೊರಬೀಳುವಂತೆ ಪರಬ್ರಹ್ಮನಿಂದ ಎಲ್ಲ ಜೀವಿಗಳು, ವಿಶ್ವದ ಅಂಶಗಳು ಉದ್ಭವಿಸುತ್ತವೆ.
  • ಪ್ರಶ್ನೋಪನಿಷತ್ತು: ಪ್ರಾಣ, ರಶ್ಮಿ, ಅಗ್ನಿ, ಶೀತ, ಜಲ ಈ ಎಲ್ಲ ಸೃಷ್ಟಿಕ್ರಮ ಜೀವಗಳ ಉತ್ಸವ ಮತ್ತು ಇಂದ್ರಿಯಗಳ ಕುರಿತಾದ ವರ್ಣನೆಗಳಿವೆ

 

Leave a Reply

Your email address will not be published. Required fields are marked *