ಶ್ರೀಗರುಡಮಹಾಪುರಾಣ
ಅಜಮಜರಮನಂತಂ ಜ್ಞಾನರೂಪಂ ಮಹಾಂತಂ ಶಿವಮಮಲಮನಾದಿಂ ಭೂತದೇಹಾದಿಹೀನಮ್ । ಸಕಲಕರಣಹೀನಂ ಸರ್ವಭೂತಸ್ಥಿತಂ ತಂ ಹರಿಮಮಲಮಮಾಯಂ ಸರ್ವಗಂ ವಂದ ಏಕಮ್ ।।
[ಆಧಾರಗ್ರಂಥಗಳು: (1) ಶ್ರೀಗರುಡಮಹಾಪುರಾಣಂ (ಅಧ್ಯಾಯಾಃ 264) ಪಂ. ರಾಮತೇಜಪಾಂಡೇಯೇನ ಸಂಪಾದಿತಮ್, ಪ್ರಕಾಶಕ: ಪಂಡಿತ ಪುಸ್ತಕಾಲಯ, ಕಾಶೀ, 1963 (2) ವೆಂಕಟೇಶ್ವರ ಸ್ಟೀಮ್ ಪ್ರೆಸ್, ಬೋಂಬೇ ಅವರ ಪ್ರಕಾಶನ (3) ಸಟೀಕಾ ಗರುಡಪುರಾಣ – ಪ್ರೇತಕಾಂಡ, ಲೇಖಕರು: ವೇದಮೂರ್ತಿ ಶ್ರಿರಂಗಾಚಾರ್ಯ ಜೋಶಿ (ತೇರದಾಳ), ಸಂಪಾದಕರು: ಚಿದಂಬರ ಶ್ರೀಪಾದರಾವ ಕುಲಕರ್ಣಿ, ಸರಸ್ವತಿ ಪುಸ್ತಕ ಭಂಡಾರ, ಬೆಳಗಾವಿ, 1990. (4) ಗರುಡಪುರಾಣಸಾರೋದ್ಧಾರಃ (ಪ್ರೇತಕಾಂಡ) ಕನ್ನದ ಅನುವಾದ ಸಹಿತ ಸಂಗ್ರಾಹಕ ಮತ್ತು ಪ್ರಕಾಶಕ: ಕಾಪು ಹಯಗ್ರೀವಾಚಾರ್ಯ, ಭಂಡಾರಕೇರಿ ಮಠ, ಉಡುಪಿ, 1983 (5) The Garuda Puranam, Manmatha Nath Dutt, Calcutta Society for the resuscitation of Indian Literature, 1908 (6) The Garuda Purana, in 2 parts, Motilal Banarsidass Publishers Private Limited, Delhi, 1957]
ಮತ್ಸ್ಯಪುರಾಣದ 53ನೇ ಅಧ್ಯಾಯದ 53ನೇ ಶ್ಲೋಕದ ಪ್ರಕಾರ ಯದಾ ಚ ಗಾರುಡೇ ಕಲ್ಪೇ ವಿಶ್ವಾಂಡಾದ್ಗರುಡೋದ್ಭವಮ್ । ಅಧಿಕೃತ್ಯಾಬ್ರವೀತ್ಕೃ-ಷ್ಣೋ ಗಾರುಡಂ ತದಿಹೋಚ್ಯತೇ । ತದಷ್ಟಾದಶಕಂ ಚೈಕಂ ಸಹಸ್ರಾಣೀಹ ಪಠ್ಯತೇ ।। ಅರ್ಥಾತ್: ಗಾರುಡಕಲ್ಪದಲ್ಲಿ ಅಂಡಾಕಾರದ ವಿಶ್ವದಿಂದ ಗರುಡನು ಉದ್ಭವವಾದ ವಿಷಯದ ಕುರಿತು ಕೃಷ್ಣನು ಹೇಳಿದ ಪುರಾಣವು ಗಾರುಡವೆನಿಸುತ್ತದೆ. ಇದರಲ್ಲಿ 18,000 ಶ್ಲೋಕಗಳಿವೆಯೆಂದು ಹೇಳುತ್ತಾರೆ.
ಗರುಡಪುರಾಣದ ಕರ್ಮಕಾಂಡದ ಮೊದಲನೇ ಅಧ್ಯಾಯದಲ್ಲಿ ಸೂತನು ಹೇಳಿದಂತೆ ಪುರಾಣಂ ಗಾರುಡಂ ವಕ್ಷ್ಯೇ ಸಾರಂ ವಿಷ್ಣುಕಥಾಶ್ರಯಮ್ । ಗರುಡೋಕ್ತಂ ಕಶ್ಯಪಾಯ ಪುರಾ ವ್ಯಾಸಾಚ್ಛ್ರುತಂ ಮಯಾ ।। ಗರುಡಪುರಾಣವನ್ನು ಗರುಡನು ಕಶ್ಯಪನಿಗೆ ಹೇಳಿದನು ಮತ್ತು ಕಶ್ಯಪನಿಂದ ವ್ಯಾಸ ಹಾಗೂ ವ್ಯಾಸನಿಂದ ಸೂತನಿಗೆ ದೊರಕಿತು ಎಂದು ತಿಳಿಯುತ್ತದೆ. ಕರ್ಮಕಾಂಡದ ಎರಡನೇ ಅಧ್ಯಾಯದ ಪ್ರಕಾರ ನಾರದ-ದಕ್ಷರೊಂದಿಗೆ ವ್ಯಾಸನು ಗರುಡಪುರಾಣವನ್ನು ಬ್ರಹ್ಮನಿಂದ ಕೇಳಿದನು ಎಂದು ಬರುತ್ತದೆ (ಶೃಣು ಸೂತ ಪ್ರವಕ್ಷ್ಯಾಮಿ ಪುರಾಣಂ ಗಾರುಡಂ ತವ । ಸಹ ನಾರದದಕ್ಷಾದ್ಯೈರ್ಬ್ರಹ್ಮಾ ಮಾಮುಕ್ತವಾನ್ಯಥಾ ।।) ಇದೇ ಅಧ್ಯಾದಲ್ಲಿ ಬ್ರಹ್ಮನು “ಪುರಾಣಂ ಗಾರುಡಂ ಸಾರಂ ರುದ್ರಂ ಚ ಮಾಂ ಯಥಾ । ಸುರೈಃ ಸಹಾಬ್ರವೀದ್ವಿಷ್ಣುಸ್ತಥಾಹಂ ವ್ಯಾಸ ವಚ್ಮಿತೇ ।। ಅರ್ಥಾತ್: ಗರುಡಪುರಾಣದ ಸಾರವನ್ನು ನಾನು ರುದ್ರ ಮತ್ತು ಸುರರೊಂದಿಗೆ ವಿಷ್ಣುವಿನ ಮಾತಿನಿಂದ ಕೇಳಿದೆನು.” ಕೈಲಾಸದಲ್ಲಿ ಬ್ರಹ್ಮನ ಸಮ್ಮುಖದಲ್ಲಿ ರುದ್ರನು ಪ್ರಶ್ನಿಸಿದಾಗ ವಿಷ್ಣುವು “ಪುರಾ ಮಾಂ ಗರುಡಃ ಪಕ್ಷೀ ತಪಸಾರಾಧಯದ್ಭುವಿ । ತುಷ್ಟ ಊಚೇ ವರಂ ಬ್ರೂಹಿ ಮತ್ತೋ ವವ್ರೇ ವರಂ ಸ ತು ।। ಅರ್ಥಾತ್: ಹಿಂದೆ ಭೂವಿಯಲ್ಲಿ ಪಕ್ಷೀ ಗರುಡನು ನನ್ನನ್ನು ತಪಸ್ಸಿನಿಂದ ಆರಾಧಿಸಲು ತುಷ್ಟನಾಗಿ ವರವನ್ನು ಕೇಳು ಎಂದು ಹೇಳಿದನು. ಅವನು ನನ್ನಿಂದ ವರವನ್ನು ಕೇಳಿದನು.” ವಿಷ್ಣುವು ಮುಂದುವರೆದು “ಯಥಾಹಂ ಕೀರ್ತನೀಯೋಽಥ ತಥಾ ತ್ವಂ ಗರುಡಾತ್ಮನಾ । ಮಾಂ ಧ್ಯಾತ್ವಾ ಪಕ್ಷಿಮುಖ್ಯೇದಂ ಪುರಾಣಂ ಗದ ಗಾರುಡಮ್ ।। ಇತ್ಯುಕ್ತೋ ಗರುಡೋ ರುದ್ರ ಕಶ್ಯಪಾಯಾಹ ಪೃಚ್ಛತೇ । ಅರ್ಥಾತ್: ನಾನು ನಿನಗೆ ಹೇಳಿದಂತೆ ಇದನ್ನು ಆತ್ಮನಲ್ಲಿ ನನ್ನನ್ನು ಧ್ಯಾನಸಿ ಈ ಗಾರುಡ ಪುರಾಣವನ್ನು ಹೇಳು. ಕಶ್ಯಪನು ಪ್ರಶ್ನಿಸಲು ಅವನಿಗೆ ಇದನ್ನು ಗರುಡನು ಹೇಳಿದನು.”
ಗರುಡಪುರಾಣದಲ್ಲಿ ಮೂರು ಕಾಂಡಗಳಿವೆ – ಕರ್ಮಕಾಂಡ, ಧರ್ಮ-ಕಾಂಡ ಮತ್ತು ಬ್ರಹ್ಮಕಾಂಡ. ಒಟ್ಟು 319 ಅಧ್ಯಾಯಗಳಿವೆ ಮತ್ತು 30,821 ಶ್ಲೋಕಗಳಿವೆ.
ಕರ್ಮಕಾಂಡ ಅಥವಾ ಆಚಾರಕಾಂಡ (241 ಅಧ್ಯಾಯಗಳು, 7,090 ಶ್ಲೋಕಗಳು): ಸೃಷ್ಟಿವರ್ಣನೆ, ಪ್ರಜಾಕರ್ತ್ರಾದಿಸೃಷ್ಟಿ, ಉತ್ತಾನಪಾದವಂಶವರ್ಣನ, ಪೂಜಾವಿಧಿ, ಧ್ಯಾನಯೋಗ, ವಿಷ್ಣುಸಹಸ್ರನಾಮಸ್ತೋತ್ರ, ಸಂಧ್ಯಾವಿಧಿ, ಗಾಯತ್ರೀ-ಮಂತ್ರನಿರೂಪಣ, ಶಾಲಗ್ರಾಮಮೂರ್ತಿಲಕ್ಷಣ, ವಾಸ್ತುಮಾನಲಕ್ಷಣ, ವರ್ಣಾಶ್ರಮಧರ್ಮನಿರೂಪಣೆ, ನಿತ್ಯಕರ್ಮ ಮತ್ತು ಶೌಚಗಳ ನಿರೂಪಣೆ, ದಾನಧರ್ಮನಿರೂಪಣೆ, ಪ್ರಾಯಶ್ಚಿತ್ತನಿರೂಪಣೆ, ಭುವನಕೋಶವರ್ಣನೆ, ಜ್ಯೋತಿಃಶಾಸ್ತ್ರ, ಸ್ವರಗಳು, ರತ್ನಗಳು, ತೀರ್ಥಮಹಾತ್ಮೆ, ಯಾಜ್ಞವಲ್ಕ್ಯೋಕ್ತ ಧರ್ಮನಿರೂಪಣೆ, ಪರಾಶರೋಕ್ತ ಧರ್ಮನಿರೂಪಣೆ, ಬೃಹಸ್ಪತಿ ಧರ್ಮ-ನಿರೂಪಣೆ, ನೀತಿಸಾರ, ತಿಥಿಗಳ ವ್ರತವರ್ಣನೆ, ತಿಥಿ-ವಾರ-ನಕ್ಷತ್ರವ್ರತ ನಿರೂಪಣೆ, ಸೂರ್ಯವಂಶವರ್ಣನೆ, ಚಂದ್ರವಂಶವರ್ಣನೆ, ಭವಿಷ್ಯರಾಜ-ವಂಶ, ದಶಾವತಾರ, ರಾಮಾಯಣವರ್ಣನೆ, ಹರಿವಂಶವರ್ಣನೆ, ಭರ-ತಾದಿವರ್ಣನೆ, ಧನ್ವಂತರಿಯು ಹೇಳಿದ ಆಯುರ್ವೇದದ ವಿಷಯಗಳು, ವೈದ್ಯಶಾಸ್ತ್ರ, ಗಜ-ಅಶ್ವ ಆಯುರ್ವೇದನಿರೂಪಣ, ವ್ಯಾಕರಣನಿರೂಪಣೆ, ಛಂದಃಶಾಸ್ತ್ರ, ನಿತ್ಯಶ್ರಾದ್ಧಕಥನ, ಶ್ರಾದ್ಧಾನುಷ್ಠಾನ, ಪ್ರಾಯಶ್ಚಿತ್ತಕಥನ, ಯುಗಧರ್ಮಕಥನ, ನೈಮಿತ್ತಿಕಪ್ರಲಯ, ಕರ್ಮವಿಪಾಕಕಥನ, ಅಷ್ಟಾಂಗ-ಯೋಗಕಥನ, ಭಗವದ್ಭಕ್ತಿವಿವರಣ, ದೇವತಾಸ್ತೋತ್ರಗಳು, ಶ್ರೀಮದ್ಭಗ-ವದ್ಗೀತಾಸಾರನಿರೂಪಣೆ, ಮತ್ತು ಬ್ರಹ್ಮಗೀತಾಸಾರವರ್ಣನೆ.
ಧರ್ಮಕಾಂಡ ಅಥವಾ ಪ್ರೇತಕಾಂಡ (49 ಅಧ್ಯಾಯಗಳು, 2,898 ಶ್ಲೋಕಗಳು): ಶ್ರೀಕೃಷ್ಣ-ಗರುಡಸಂವಾದದಲ್ಲಿ ಔರ್ಧ್ವದೇಹಿಕವಿಧಿಕರ್ಮವಿ-ಪಾಕ ವರ್ಣನೆ, ನರಕಪ್ರವೇಶ-ನಿರ್ಗಮನಗಳ ವರ್ಣನೆ, ವೃಷೋತ್ಸರ್ಗ ಮಹಾತ್ಮೆ, ಪ್ರೇತಕಲ್ಪ, ಯಮಲೋಕವಿಸ್ತಾರ, ಪ್ರೇತಯಾತ್ರಾದಿನಿರೂಪಣೆ, ಸ್ವಪ್ನಾಧ್ಯಾಯ, ಸಪಿಂಡನನಿರೂಪಣೆ, ನಾನಾದಾನನಿರೂಪಣೆ, ಸೂತಕಕಾಲಾದಿನಿರೂಪಣೆ, ಶುದ್ಧಿನಿರೂಪಣೆ, ಜೀವದ ಶುಭಾಶುಭಗತಿಗಳ ವರ್ಣನೆ, ಕರ್ಮವಿಪಾಕನಿರೂಪಣೆ, ಮನುಷ್ಯನ ಸುಖದುಃಖಪ್ರಾಪ್ತಕ ಧರ್ಮಾಧರ್ಮನಿರೂಪಣೆ, ಮತ್ತು ಮೋಕ್ಷೋಪಾಯನಿರೂಪಣೆ. ಈ ಪ್ರೇತಕಾಂಡವನ್ನು ಶವಸಂಸ್ಕಾರದ ನಂತರ ಸಪಿಂಡೀಕರಣ ಆಗುವವರೆಗೆ ಅಶೌಚದಲ್ಲಿ ಕೇಳುವ ಸಂಪ್ರದಾಯವಿದೆ. ಜನ್ಮಹೊಂದಿದವನು ಮರಣ ಹೊಂದಲೇ ಬೇಕು. ಆದರೆ ಆ ಜೀವನು ಎಲ್ಲಿ ಹೋಗುತ್ತಾನೆ? ಏನೇನನ್ನು ಅನುಭವಿಸುತ್ತಾನೆ? ಇತ್ಯಾದಿ ಸಂಶಯಗಳು ಮೃತನ ಬಳಗದವೈರ ಉಂಟಾಗುವುದು ಸ್ವಾಭಾವಿಕ. ಆದ್ದರಿಂದ ಮೃತನಾದ ನಂತರ ಈ ಪುರಾಣವನ್ನು ಹೇಳಿಸುತ್ತಾರೆ.
ಬ್ರಹ್ಮಕಾಂಡ ಅಥವಾ ಮೋಕ್ಷಕಾಂಡ (29 ಅಧ್ಯಾಯಗಳು, 1,980 ಶ್ಲೋಕಗಳು): ಶ್ರೀಕೃಷ್ಣ-ಗರುಡಸಂವಾದದಲ್ಲಿ ಸಾತ್ವಿಕಾದಿ ಪುರಾಣ ವಿಭಾಗಕಥನ, ಗುಣತ್ರಯಕ-ಥನ, ತತ್ತ್ವಾಭಿಮಾನಿ ದೇವತಾಕಥನ, ಅಜ್ಞಾನಹೇತುನಿರೂಪಣೆ, ವೈಶ್ವ-ದೇವಾರ್ಥಕಕಥನ, ವಿಷ್ಣೋವತಾರನಿರೂಪಣೆ, ಮಹಾಲಕ್ಷ್ಮ್ಯವತಾರನಿ-ರೂಪಣೆ, ಕಾಲಿಂದೀ ವಿವಾಹ, ಲಕ್ಷ್ಮಣಾವಿವಾಹ, ವೆಂಕಟೇಶಗಿರಿಯಾತ್ರಾ-ನಿರೂಪಣೆ, ಮತ್ತು ತತ್ತ್ವರಹಸ್ಯ.