ಮಹಾಭಾರತ ಪ್ರಶಂಸೆ
Contents
Toggle[ಆದಿಪರ್ವದ 1ನೇ ಅಧ್ಯಾಯದ ಅಂತ್ಯದಲ್ಲಿ ಜಿ2,3ಗಳಲ್ಲಿರುವ ಅಧಿಕ ಶ್ಲೋಕಗಳು]
ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ವಿಭುಮ್ । ಕೋ ಹ್ಯನ್ಯಃ ಪುಂಡರೀಕಾಕ್ಷಾನ್ಮಹಾಭಾರತಕೃದ್ಭವೇತ್ । ಮತಿಮಂಥಾನಮಾವಿಧ್ಯ ಯೇನ ವೇದಮಹಾರ್ಣವಾತ್ । ಜಗದ್ಧಿತಾಯ ಜನಿತೋ ಮಹಾಭಾರತಚಂದ್ರಮಾಃ । ಸ್ತುತ್ಯಂ ತಸ್ಯಾಸ್ತಿ ಕಿಂ ಚಾನ್ಯತ್ಸರ್ವಲೋಕಹಿತೈಷಿಣಃ । [5] ವೇದಾಃ ವ್ಯಸ್ತಾಃ ಕೃತಂ ತೇನ ಮಹಾಭಾರತಮದ್ಭುತಮ್ । ಸರ್ವೇ ತರಂತು ದುರ್ಗಾಣಿ ಸರ್ವೇ ಭದ್ರಾಣಿ ಪಶ್ಯತು । ಇತ್ಯುಕ್ತ್ವಾ ಸರ್ವವೇದಾರ್ಥಾನ್ಭಾರತೇ ತೇನ ದರ್ಶಿತಾಃ । ಶ್ರೂಯತಾಂ ಸಿಂಹನಾದೋಽಯಮೃಷಭಸ್ಯ ಮಹಾತ್ಮನಃ । ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಪರಮರ್ಷಭ । [10] ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ ।
ಕೃಷ್ಣದ್ವೈಪಾಯನ ವ್ಯಾಸನನ್ನು ವಿಭು ನಾರಾಯಣನೆಂದು ತಿಳಿ. ಏಕೆಂದರೆ ಪುಂಡರೀಕಾಕ್ಷ ನಾರಾಯಣನಲ್ಲದೇ ಬೇರೆ ಯಾರು ತಾನೇ ಮಹಾಭಾರತವನ್ನು ರಚಿಸಿಯಾರು? ಜಗತ್ತಿನ ಹಿತಕ್ಕಾಗಿ ವೇದವೆಂಬ ಮಹಾಸಾಗರವನ್ನು ಬುದ್ಧಿಯೆಂಬ ಕಡೆಗೋಲಿನಿಂದ ಮಥಿಸಿದಾಗ ಮಹಾಭಾರತವೆಂಬ ಚಂದ್ರವು ಉದಯಿಸಿತು. ವೇದಗಳನ್ನು ವಿಭಜಿಸಿದ ಸರ್ವಲೋಕಹಿತೈಷಿಣಿ ವ್ಯಾಸನಿಂದ ಈ ಅಧ್ಭುತ ಮಹಾಭಾರತವು ರಚಿತಗೊಂಡಿಗೆ ಎಂದರೆ ಅದಕ್ಕಿಂತ ಬೇರೆ ಯಾವು ಸ್ತುತಿಯು ಬೇಕಾಗುತ್ತದೆ? ಎಲ್ಲರೂ ಕಷ್ಟಗಳನ್ನು ಪಾರುಮಾಡಲಿ ಮತ್ತು ಎಲ್ಲರೂ ಮಂಗಳವಾದದ್ದನ್ನೇ ಕಾಣಲಿ ಎಂದು ಹೇಳಿ ಸರ್ವ ವೇದಾರ್ಥಗಳನ್ನೂ ಅವನು ಭಾರತದಲ್ಲಿ ತೋರಿಸಿದ್ದಾನೆ. ಪರಮರ್ಷಭ! ಇದರಲ್ಲಿ ಆ ಮಹಾತ್ಮ ವೃಷಭನ ಸಿಂಹನಾದವನ್ನು ಕೇಳುತ್ತೇವೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಕುರಿತು ಇಲ್ಲಿ ಏನಿದೆಯೋ ಅದು ಬೇರೆಡೆಯಲ್ಲಿದೆ. ಇಲ್ಲಿ ಏನಿಲ್ಲವೋ ಅದು ಬೇರೆ ಎಲ್ಲಿಯೂ ಇಲ್ಲ.
ಯೇಷ ಪ್ರಕೃತ್ಯೈವ ಯತೋ ಲೋಕಃ ಸಕ್ತೋಽರ್ಥಕಾಮಯೋಃ । ಧರ್ಮಮೋಕ್ಷಪರಂ ತಸ್ಮಾತ್ಕರಿಷ್ಯೇಽಹಂ ಸಮುಚ್ಚಯಮ್ । ಕಾಮಿನೋ ವರ್ಣಯಾನ್ಕಾಮಂ ಲೋಭಂ ಲುಬ್ಧಸ್ಯ ವರ್ಣಯನ್ । ನರಃ ಕಿಂ ಫಲಮಾಪ್ನೋತಿ ಕೂಪೇಽಂಧಮಿವ ಪಾತಯನ್ । [15] ಮುನಿನಾಪಿ ಚ ಕಾಮಾರ್ಥೌ ಮತ್ವಾ ಲೋಕಮನೋಹರೌ । ನಿಂಧ್ಯಾವಪಿ ಸ್ಥಿತಾವೇತೌ ಧರ್ಮಮೋಕ್ಷವಿವಕ್ಷಯಾ । ಅನ್ಯಥಾ ಘೋರಸಂಸಾರಬಂಧಹೇತೂ ಜನಸ್ಯ ತೌ । ವರ್ಣಯೇತ ಕಥಂ ಧೀಮಾನ್ಮಹಾನ್ಕಾರುಣಿಕೋ ಮುನಿಃ । ಲೋಕಚಿಂತಾವತಾರಾರ್ಥಂ ವರ್ಣಯಿತ್ವಾ ಚ ತೇನ ತೌ । [20] ಇತಿಹಾಸೈರ್ವಿಚಿತ್ರಾರ್ಥೈಃ ಪುನರತ್ರೈವ ನಿಂದಿತೌ । ಭಾರತಂ ಭಾನುಮಾನಿಂದುರ್ಯದಿ ನ ಸ್ಯುರಮೀ ತ್ರಯಃ । ಅಜ್ಞಾನತಿಮಿರಾಂಧೇ ಕಾ ವ್ಯವಸ್ಥಾ ಜಗತೋ ಭವೇತ್ । ಏತದ್ವಿಜ್ಞಾಯ ವಿದ್ವದ್ಭಿರ್ನಿತ್ಯಂ ಶ್ರದ್ಧಾಸಮನ್ವಿತೈಃ । ಅಧ್ಯೇಯೋ ಭಾರತೀಯೋಽಯಮಿತಿಹಾಸಸಮುಚ್ಚಯಃ । [25]
ಭಾರತ, ಭಾನು ಮತ್ತು ಚಂದ್ರ ಈ ಮೂರೂ ಬೆಳಗದೇ ಇದ್ದಿದ್ದರೆ ಅಜ್ಞಾನವೆಂಬ ಘೋರ ಕತ್ತಲೆಯಲ್ಲಿರುವ ಜಗತ್ತಿನ ವ್ಯವಸ್ಥೆಯು ಏನಾಗುತ್ತಿತ್ತು? ಇದನ್ನು ತಿಳಿದು ವಿದ್ವಜ್ಜನರು ನಿತ್ಯವೂ ಶ್ರದ್ಧಾಸಮನ್ವಿತರಾಗಿ ಈ ಇತಿಹಾಸಸಮುಚ್ಛಯ ಭಾರತವನ್ನು ಅಧ್ಯಯನಮಾಡಬೇಕು. (ಜಿ-2,3)
ಶ್ಲೋಕಾ ಯೇ ಭಾರತೇ ವಾಪಿ ಕ್ವಚಿತ್ಕೇಚಿದ್ವ್ಯವಸ್ಥಿತಾಃ । ತುಲ್ಯಾರ್ಥಾಸ್ಸಂಹಿತಾಂ ಪುಣ್ಯಾಂ ಯೋಜಯಿಷ್ಯೇ ತು ತಾಮಹಮ್ ।
ಇದನ್ನು ತಿಳಿದು ವಿದ್ವಜ್ಜನರು ನಿತ್ಯವೂ ಶ್ರದ್ಧಾಸಮನ್ವಿತರಾಗಿ ಇತಿಹಾಸಸಮುಚ್ಛಯವಾದ ಈ ಭಾರತವನ್ನು ಅಧ್ಯಯನಮಾಡಬೇಕು.
ತಚ್ಛ್ಲೋಕಾಂಶ್ಚ ಸಮುದ್ಧರ್ತುಂ ಕಃ ಕೃತ್ಸ್ನಾನ್ಭಾರತೇ ಕ್ಷಮಃ । ಯೋಗತಃ ಸರ್ವರತ್ನಾನಿ ಸಮುದ್ಧರ್ತುಂ ಮಹಾರ್ಣವಾತ್ । ನ ಚ ಪ್ರಜ್ಞಾಭಿಮಾನೇನ ಯದಯಂ ಕರ್ತುಮುದ್ಯತಃ । ಕಿಂ ತು ಭಾರತಭಕ್ತಿರ್ಮಾಂ ವಿವಶಂ ಸಮಚೂಚುದತ್ । (ಜಿ-2)