ಶ್ರೀಬ್ರಹ್ಮಮಹಾಪುರಾಣ

ಯಸ್ಮಾತ್ಸರ್ವಮಿದಂ ಪ್ರಪಂಚರಚಿತಂ ಮಾಯಾಜಗಜ್ಜಾಯತೇ । ಯಸ್ಮಿಂಸ್ತಿಷ್ಠತಿ ಯಾತಿ ಚಾಂತಸಮಯೇ ಕಲ್ಪಾನುಕಲ್ಪೇ ಪುನಃ । ಯಂ ಧ್ಯಾತ್ವಾ ಮುನಯಃ ಪ್ರಪಂಚರಹಿತಂ ವಿಂದಂತಿ ಮೋಕ್ಷಂ ಧ್ರುವಂ। ತಂ ವಂದೇ ಪುರುಷೋತ್ತಮಾಖ್ಯಮಮಲಂ ನಿತ್ಯಂ ವಿಭುಂ  ನಿಶ್ಚಲಮ್ ।।

[ಬ್ರಹ್ಮಮಹಾಪುರಾಣಂ (ಸಂಸ್ಕೃತಮೂಲ, ಕನ್ನಡ ಅರ್ಥಾನುವಾದ ವಿವರಣೆಗಳೊಂದಿಗೆ, 6 ಭಾಗಗಳಲ್ಲಿ), ಅನುವಾದಕ ಹಾಸನದ ಪಂಡಿತ ವೆಂಕಟರಾವ್, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 30, ಮೈಸೂರು, ಶ್ರೀಚಾಮುಂಡೇಶ್ವರೀ ಎಲೆಕ್ಟ್ರಿಕ್ ಪ್ರೆಸ್, 1946]

ಬ್ರಾಹ್ಮಂ ತ್ರಿದಶಸಾಹಸ್ರಂ ಪುರಾಣಂ ಪರಿಕೀರ್ತ್ಯತೇ ಎಂಬ ಮತ್ಸ್ಯ-ಪುರಾಣದ 53ನೇ ಅಧ್ಯಾಯದ 13ನೇ ಶ್ಲೋಕದಂತೆ ಬ್ರಹ್ಮಪುರಾಣದಲ್ಲಿ 30,000 ಶ್ಲೋಕಗಳಿವೆಯೆಂದು ತಿಳಿಯುತ್ತದೆ. ನಾರದೀಯ ಪುರಾಣದ ಪ್ರಕಾರ ಬ್ರಹ್ಮಪುರಾಣದಲ್ಲಿ 10,000 ಶ್ಲೋಕಗಳಿವೆ.[1] ಆದರೆ  ಈಗ ಇರುವ ಈ ಪುರಾಣದಲ್ಲಿ ಒಟ್ಟು 246 ಅಧ್ಯಾಯಗಳಿವೆ ಮತ್ತು 13,773 ಶ್ಲೋಕಗಳಿವೆ. ಅಷ್ಟಾದಶಮಹಾಪುರಾಣಗಳಲ್ಲಿ ಬ್ರಹ್ಮಪುರಾಣವೇ ಮೊದಲನೆಯದು. ಇದರಲ್ಲಿ ಸೃಷ್ಟಿಕಥನವೂ, ತೀರ್ಥಕ್ಷೇತ್ರಮಾಹಾತ್ಮೆಗಳೂ, ಸಂದರ್ಭಾನುಸಾರ ಉಪಾಖ್ಯಾನಗಳು ಮತ್ತು ಇನ್ನೂ ನಾನಾ ವಿಷಯಗಳೂ ಉಕ್ತವಾಗಿವೆ. ಈ ಪುರಾಣದಲ್ಲಿ ಬರುವ ಮುಖ್ಯ ವಿಷಯಗಳು ಈ ಕೆಳಗಿನಂತಿವೆ:

ಸೃಷ್ಟಿಕಥನ, ದೇವಾಸುರರ ಉತ್ಪತ್ತಿ, ಪೃಥು ಚರಿತ್ರೆ, ಮನ್ವಂತರಗಳು, ಆದಿತ್ಯೋತ್ಪತ್ತಿ ಮತ್ತು ಸೂರ್ಯವಂಶವರ್ಣನೆ, ಸೋಮೋತ್ಪತ್ತಿ ಮತ್ತು ಸೋಮವಂಶ ವರ್ಣನೆ, ಭುವನಕೋಶದ್ವೀಪವರ್ಣನೆ, ಸೂರ್ಯ ಅಷ್ಟೋತ್ತರಶತನಾಮಗಳು, ಉಮಾ-ಮಹೇಶ್ವರ ವಿವಾಹ, ದಕ್ಷಯಜ್ಞವಿಧ್ವಂಸ, ತೀರ್ಥಮಾಹಾತ್ಮ್ಯವರ್ಣನೆ, ಮಾರ್ಕಂಡೇಯನ ಪ್ರಲಯದರ್ಶನ, ಗಂಗೋತ್ಪತ್ತಿ, ಗಂಗಾಮಹಾತ್ಮೆ, ಕಂಡುಮಹರ್ಷಿಯ ಕಥೆ, ಕೃಷ್ಣಬಾಲಚರಿತ್ರೆ, ರುಕ್ಮಿವಧ, ನರಕವಧ, ಪಾರಿಜಾತಹರಣ, ಬಾಣಯುದ್ಧ, ಪೌಂಡ್ರಕವಧ, ಸಂಸಾರಚಕ್ರನಿರೂಪಣೆ, ಶ್ರಾದ್ಧವಿಧಿಕಲ್ಪ, ವರ್ಣಾಶ್ರಮಧರ್ಮವರ್ಣನೆ, ಭವಿಷ್ಯಕಥನ, ಲಯಗಳು, ಸಾಂಖ್ಯಯೋಗನಿರೂಪಣೆ, ವಸಿಷ್ಠ-ಕರಾಲಜನಕ ಸಂವಾದ.

ನಾರದೀಯಪುರಾಣದ ಪ್ರಕಾರ ಬ್ರಹ್ಮಪುರಾಣದಲ್ಲಿ ಬರುವ ವಿಷಯಗಳು ಹೀಗಿವೆ: ದೇವಾನಾಂ ಚ ಸುರಾಣಾಂ ಚ ಯತ್ರೋತ್ಪತ್ತಿಃ ಪ್ರಕೀರ್ತಿತಾ ಪ್ರಜಾಪತೀನಾಂ ಚ ತಥಾ ದಕ್ಷಾದೀನಾಂ ಮುನೀಶ್ವರ ।। 32 ।। ತತೋ ಲೋಕೇಶ್ವರಸ್ಯಾತ್ರ ಸೂರ್ಯಸ್ಯ ಪರಮಾತ್ಮನಃ ವಂಶಾನುಕೀರ್ತನಂ ಪುಣ್ಯಂ ಮಹಾಪಾತಕನಾಶನಮ್ ।। 33 ।। ಯತ್ರಾವತಾರಃ ಕಥಿತಃ ಪರಮಾನಂದರೂಪಿಣಃ ಶ್ರೀಮತೋ ರಾಮಚಂದ್ರಸ್ಯ ಚತುರ್ವ್ಯೂಹಾವತಾರಿಣಃ ।। 34 ।। ತತಶ್ಚ ಸೋಮವಂಶಸ್ಯಂ ಕೀರ್ತನಂ ಯತ್ರ ವರ್ಣಿತಮ್ ಕೃಷ್ಣಸ್ಯ ಜಗದೀಶಸ್ಯ ಚರಿತಂ ಕಲ್ಮಷಾಪಹಮ್ ।। 35 ।। ದ್ವೀಪಾನಾಂ ಚೈವ ಸರ್ವೇಷಾಂ ವರ್ಷಾಣಾಂ ಚಾಪ್ಯಶೇಷತಃ ವರ್ಣನಂ ಯತ್ರ ಪಾತಾಲಸ್ವರ್ಗಾಣಾಂ ಚ ಪ್ರದೃಶ್ಯತೇ ।। 36 ।। ನರಕಾಣಾಂ ಸಮಾಖ್ಯಾನಂ ಸೂರ್ಯಸ್ತುತಿಕಥಾನಕಮ್ ಪಾರ್ವತ್ಯಾಶ್ಚ ತಥಾ ಜನ್ಮ ವಿವಾಹಶ್ಚ ನಿಗದ್ಯತೇ ।। 37 ।। ದಕ್ಷಾಖ್ಯಾನಂ ತತಃ ಪ್ರೋಕ್ತಮೇಕಾಮ್ರಕ್ಷೇತ್ರವರ್ಣ-ನಮ್ ಪೂರ್ವಭಾಗೋಽಯಮುದಿತಃ ಪುರಾಣಸ್ಯಾಸ್ಯ ನಾರದ ।। 38 ।। ಅಸ್ಯೋತ್ತರೇ ವಿಭಾಗೇ ತು ಪುರುಷೋತ್ತಮವರ್ಣನಮ್ ವಿಸ್ತರೇಣ ಸಮಾಖ್ಯಾತಂ ತೀರ್ಥಯಾತ್ರಾವಿಧಾನತಃ ।। 39 ।। ಅತ್ರೈವ ಕೃಷ್ಣಚರಿತಂ ವಿಸ್ತರಾತ್ಸಮುದೀರಿತಮ್ ವರ್ಣನಂ ಯಮಲೋಕಸ್ಯ ಪಿತೃಶ್ರಾದ್ಧವಿಧಿ-ಸ್ತಥಾ ।। 40 ।। ವರ್ಣಾಶ್ರಮಾಣಾಂ ಧರ್ಮಾಶ್ಚ ಕೀರ್ತಿತಾ ಯತ್ರ ವಿಸ್ತರಾತ್ ವಿಷ್ಣುಧರ್ಮಯುಗಾಖ್ಯಾನಂ ಪ್ರಲಯಸ್ಯ ಚ ವರ್ಣನಮ್ ।। 41 ।। ಯೋಗಾನಾಂ ಚ ಸಮಾಖ್ಯಾನಂ ಸಾಂಖ್ಯಾನಾಂ ಚಾಪಿ ವರ್ಣನಮ್ ಬ್ರಹ್ಮವಾದಸಮುದ್ದೇಶಃ ಪುರಾಣಸ್ಯ ಪ್ರಶಂಸನಮ್ ।। 42 ।। ಏತದ್ಬ್ರಹ್ಮಪುರಾಣಂ ತು ಭಾಗದ್ವಯಸಮನ್ವಿತಮ್ ವರ್ಣಿತಂ ಸರ್ವಪಾಪಘ್ನಂ ಸರ್ವಸೌಖ್ಯಪ್ರದಾಯಕಮ್ ।। 43 ।। ಸೂತಶೌನಕಸಂವಾದಂ ಭುಕ್ತಿಮುಕ್ತಿಪ್ರದಾಯಕಮ್ ಅರ್ಥಾತ್: ದೇವತೆಗಳು, ಅಸುರರು ಮತ್ತು ದಕ್ಷಾದಿ ಪ್ರಜಾಪತಿಗಳ ಉತ್ಪತ್ತಿ, ಸೂರ್ಯವಂಶಾನುಕೀರ್ತನೆ, ಆ ವಂಶದಲ್ಲಿಯೇ ಶ್ರೀರಾಮಚಂದ್ರನ ಅವತಾರವರ್ಣನೆ, ಚಂದ್ರವಂಶಕಥನ, ಅದರಲ್ಲಿ ಕೃಷ್ಣನ ಅವತಾರದ ವಿವರಣೆ, ದ್ವೀಪ-ಸಮುದ್ರ-ಖಂಡ-ಪಾತಾಲ-ಸ್ವರ್ಗ-ನರಕಗಳ ವರ್ಣನೆ, ಸೂರ್ಯಸ್ತುತಿ, ಪಾರ್ವತ್ಯವತಾರ ಮತ್ತು ವಿವಾಹ, ದಕ್ಷಪ್ರಜಾಪತಿಯ ಕಥೆ, ಏಕಾಮ್ರಕ್ಷೇತ್ರವರ್ಣನೆ – ಇವು ಪೂರ್ವಭಾಗದಲ್ಲಿ ಹೇಳಿರುವ ವಿಷಯಗಳು. ಉತ್ತರಭಾಗದಲ್ಲಿ ತೀರ್ಥಾಯಾತ್ರಾ-ವಿಧಾನ, ಪುರುಷೋತ್ತಮವರ್ಣನೆ, ವಿಸ್ತಾರದಲ್ಲಿ ಕೃಷ್ಣಚರಿತ್ರೆ, ಯಮ-ಲೋಕ ವರ್ಣನೆ, ಪಿತೃಶ್ರಾದ್ಧವಿಧಾನ, ವರ್ಣಾಶ್ರಮಧರ್ಮ, ನಿವೃತ್ತ-ಧರ್ಮ, ಯುಗವರ್ಣನೆ, ಪ್ರಲಯವರ್ಣನೆ, ಸಾಂಖ್ಯಯೋಗನಿರೂಪಣೆ, ಬ್ರಹ್ಮವಿಚಾರ, ಮತ್ತು ಪುರಾಣಪ್ರಶಂಸೆಗಳು ಹೇಳಲ್ಪಟ್ಟಿವೆ.

  1. ಅಧ್ಯಾಯ 1: ಸೃಷ್ಟಿಕಥನವರ್ಣನಮ್
  2. ಅಧ್ಯಾಯ 2: ಸೃಷ್ಟಿಕಥನವರ್ಣನಮ್
  3. ಅಧ್ಯಾಯ 3: ದೇವಾಸುರಾಣಾಮುತ್ಪತ್ತಿಕಥನಮ್

 

[1] ಬ್ರಾಹ್ಮಂ ಪುರಾಣಂ ತತ್ರಾದೌ ಸರ್ವಲೋಕಹಿತಾಯ ವೈ ವ್ಯಾಸೇನ ವೇದವಿದುಷಾ ಸಮಾಖ್ಯಾತಂ ಮಹಾತ್ಮನಾ ।। 30 ।। ತದ್ವೈ ಸರ್ವಪುರಾಣಾಗ್ರ್ಯಂ ಧರ್ಮಕಾಮಾರ್ಥಮೋಕ್ಷದಮ್ ।। ನಾನಾಖ್ಯಾನೇತಿಹಾಸಾಢ್ಯಂ ದಶಸಾಹಸ್ರಮುಚ್ಯತೇ ।। 31 ।। (ನಾರದೀಯಪುರಾಣ, ಪೂರ್ವಭಾಗ, 92ನೇ ಅಧ್ಯಾಯ)

Leave a Reply

Your email address will not be published. Required fields are marked *