ಶ್ರೀನಾರದೀಯಮಹಾಪುರಾಣ

ವಂದೇ ವೃಂದಾವನಾಸೀನಮಿಂದಿರಾನಂದಮಂದಿರಮ್ । ಉಪೇಂದ್ರಂ ಸಾಂದ್ರಕಾರುಣ್ಯಂ ಪರಾನಂದಂ ಪರಾತ್ಪರಮ್ ।।

[ನಾರದೀಯಮಹಾಪುರಾಣಂ (ಕನ್ನಡ ಅರ್ಥಾನುವಾದ ವಿವರಣೆಗಳ ಸಹಿತ, 10 ಭಾಗಗಳಲ್ಲಿ), ಅನುವಾದಕ ದೊಡ್ಡಬಳ್ಳಾಪುರಂ ವಾಸುದೇವಾಚಾರ್ಯ, ಶ್ರೀಜಯಚಾಮರಾಜೇಂದ್ರ ಗ್ರಂಥರತ್ನಮಾಲಾ. ಸಂಖ್ಯೆ 39, ಮೈಸೂರು, ಶ್ರೀಚಾಮುಂಡೇಶ್ವರೀ ಎಲೆಕ್ಟ್ರಿಕ್ ಪ್ರೆಸ್, 1946]

ಮತ್ಸ್ಯಪುರಾಣದ 53ನೇ ಅಧ್ಯಾಯದ 23ನೇ ಶ್ಲೋಕದ ಪ್ರಕಾರ ಯತ್ರಾಹ ನಾರದೋ ಧರ್ಮಾನ್ ಬೃಹತ್ಕಲ್ಪಾಶ್ರಯಾಣಿ ಚ ಪಂಚವಿಂಶತ್ಸಹಸ್ರಾ-ಣಿ ನಾರದೀಯಂ ತದುಚ್ಯತೇ ।। ಅರ್ಥಾತ್: ಬೃಹತ್ಕಲ್ಪಕ್ಕೆ ಸಂಬಂಧಿಸಿದ ಧರ್ಮಗಳನ್ನು ನಾರದನು ಹೇಳಿರುವ ಪುರಾಣವು ನಾರದೀಯವೆನಿಸು-ತ್ತದೆ. ಇದರಲ್ಲಿ 25,000 ಶ್ಲೋಕಗಳಿವೆ. ನಾರದೀಯಪುರಾಣವನ್ನು ಪೂರ್ವಭಾಗ (125 ಅಧ್ಯಾಯಗಳು) ಮತ್ತು ಉತ್ತರಭಾಗ (82 ಅಧ್ಯಾಯಗಳು) ಗಳನ್ನಾಗಿ ವಿಂಗಡಿಸಿದೆ. ಪೂರ್ವಭಾಗದಲ್ಲಿ ನಾರದನಿಗೆ ಸನಕ, ಸನಂದನ, ಸನತ್ಕುಮಾರ ಮತ್ತು ಸನಾತನ ಋಷಿಗಳ ಉಪದೇಶಗಳಿರುವ ನಾಲ್ಕು ಪಾದಗಳಿವೆ. ಉತ್ತರಭಾಗವು ಮಾಂಧಾತ ಮತ್ತು ವಸಿಷ್ಠರ ಸಂವಾದರೂಪವಾಗಿದೆ.

ಪೂರ್ವಭಾಗ, ಪ್ರಥಮಪಾದ (41 ಅಧ್ಯಾಯಗಳು): ಬ್ರಹ್ಮಸದನಕ್ಕೆ ಹೊರಟಿದ್ದ ಸನಕಾದಿ ನಾಲ್ವರು ಮುನಿಗಳು ದಾರಿಯಲ್ಲಿ ಗಂಗಾನದಿಯಲ್ಲಿ ಸ್ನಾನಮಾಡುತ್ತಿದ್ದಾಗ ನಾರದನ ಸಮಾಗಮವಾದುದು, ತತ್ತ್ವವಿಚಾರದಲ್ಲಿ ನಾರದನು ಸನಕಾದಿಗಳನ್ನು ಪ್ರಶ್ನಿಸುವುದು, ನಾರಾಯಣನ ಮಹಿಮೆ, ಪ್ರಪಂಚ ಸೃಷ್ಟಿಕ್ರಮ, ಭೂಗೋಳಸಂಗ್ರಹ, ಭರತಖಂಡ, ಸತ್ಕರ್ಮ ಮತ್ತು ಭಕ್ತಿಗಳ ಪ್ರಶಂಸೆ, ಮಾರ್ಕಂಡೇಯ ಚರಿತ್ರೆ, ಪ್ರಯಾಗ ಮತ್ತು ಗಂಗೆಯ ಮಹಿಮೆ, ಸಗರಚರಿತ್ರೆ, ಮಿತ್ರಸಹನ ಚರಿತ್ರೆ, ಗಂಗಾವತರಣ (ತ್ರಿವಿಕ್ರಮನ ಪಾದದಿಂದ ಗಂಗೆಯು ಬಂದುದು, ಭಗೀರಥ-ಧರ್ಮರಾಜರ ಸಂವಾದ, ಗಂಗೋದಕದಿಂದ ಸಗರಪುತ್ರರು ಮುಕ್ತಿಯನ್ನು ಪಡೆದುದು), ದ್ವಾದಶೀ ವ್ರತಗಳು, ಪೂರ್ಣಿಮಾ ವ್ರತಗಳು, ವಿಷ್ಣುಪಂಚಕವ್ರತವಿಧಾನ, ಮಾಸೋಪವಾಸವ್ರತ ವಿಧಾನಗಳು, ಏಕಾದಶೀವ್ರತದ ಮಹಿಮೆ, ವರ್ಣಾಶ್ರಮಧರ್ಮ, ಆಪದ್ಧರ್ಮ, ಸುವರ್ಣ ಮೊದಲಾದ ಅಳತೆಗಳ ವಿವರಣೆ, ಯಮಮಾರ್ಗವಿವರಣೆ, ಜೀವರಿಗೆ ನಾನಾಜನ್ಮಗಳು, ಅನಂತರ ಮನುಷ್ಯಜನ್ಮ, ಆಯಾಯಾ ಜನ್ಮಗಳಲ್ಲಿ ಆಗುವ ಅನುಭವ, ಮರಣಕಾಲದಲ್ಲಿ ಆಗುವ ಯಾತನೆ, ಸಾಂಸಾರನಿವೃತ್ಯುಪಾಯ, ಸಂಸಾರಿಗಳು ಮುಕ್ತರಾಗುವ ಬಗೆ, ಕರ್ಮ-ಜ್ಞಾನ-ಭಕ್ತಿಯೋಗಗಳ ನಿರೂಪಣೆ, ಪ್ರಣವಸ್ವರೂಪ, ಭಕ್ತಿಯ ಲಕ್ಷಣ, ಉತ್ತಂಕಮುನಿಯ ಚರಿತ್ರೆ, ಮನ್ವಂತರ ಮತ್ತು ಯುಗಗಳ ವರ್ಣನೆ, ಸನಕಮುನಿಯ ಉಪದೇಶಸಮಾಪ್ತಿ.

ಪೂರ್ವಭಾಗ, ದ್ವಿತೀಯಪಾದ (21 ಅಧ್ಯಾಯಗಳು): ಸೃಷ್ಟಿಯ ವಿಚಾರ-ವಾಗಿ ಭರದ್ವಾಜ-ಭೃಗುಸಂವಾದ (ಪಂಚಭೂತಸ್ಥಿತಿ, ದೇಹದಲ್ಲಿ ಜೀವರ ಆವಶ್ಯಕತೆ, ಸತ್ತ ಮೇಲೆ ಜೀವನ ಸ್ಥಿತಿ, ಪರಲೋಕವಿರುವ ಸ್ಥಾನ, ಈ ಲೋಕ ಪರಲೋಕಗಳ ವ್ಯತ್ಯಾಸ), ಜನಕ-ಕಾಪಿಲೇಯ ಸಂವಾದ (ನಾಸ್ತಿಕ-ವಾದ, ಅದರ ಖಂಡನೆ, ಮೋಕ್ಷಸಾಧನ, ತತ್ತ್ವಜ್ಞಾನಸ್ವರೂಪವರ್ಣನೆ), ಖಾಂಡಿಕ್ಯ-ಕೇಶಿಧ್ವಜರ ಯೋಗವಿಷಯ ಸಂವಾದ (ಮನಸ್ಸೇ ಬಂಧಮೋ-ಕ್ಷಗಳಿಗೆ ಕಾರಣ, ನಿಷ್ಕಾಮಕರ್ಮ, ತ್ರಿವಿಧ ಭಾವನೆಗಳು), ಜಡಭರತನ ಕಥೆ ಮತ್ತು ತತ್ತ್ವೋಪದೇಶ, ವೇದಾಂಗಗಳಾದ ಶಿಕ್ಷೆ, ಕಲ್ಪ, ವ್ಯಾಕರಣ, ನಿರುಕ್ತ, ಜ್ಯೋತಿಷ, ಮತ್ತು ಛಂದಸ್ಸುಗಳ ಪ್ರತ್ಯೇಕ ವಿಸ್ತೃತ ನಿರೂಪಣೆಗಳು, ಶುಕೋತ್ಪತ್ತಿ, ಶುಕ-ಜನಕರ ವೃತ್ತಾಂತ, ಶುಕಾಧ್ಯಯನ, ಕಾಮ್ಯಕರ್ಮದಿಂ-ದಾಗುವ ಸಂಸಾರದುಃಖದ ವಿವರಣೆ, ನಿವೃತ್ತಧರ್ಮಸ್ವರೂಪದ ವರ್ಣನೆ, ಶುಕನ ವೈಕುಂಠಗಮನ ವೃತ್ತಾಂತ.

ಪೂರ್ವಭಾಗ, ತೃತೀಯಪಾದ (21 ಅಧ್ಯಾಯಗಳು): ಅನೇಕ ಮಂತ್ರವಿ-ಧಾನಗಳು ಇಲ್ಲಿ ಉದಾಹರಿಸಲ್ಪಟ್ಟಿರುವುದರಿಂದ ಇದು ಸಂಪೂರ್ಣ ಮಂತ್ರಶಾಸ್ತ್ರವು. ಮಹಾತಂತ್ರಸ್ವರೂಪ, ದೀಕ್ಷೆಯ ವಿಧಾನ, ನಿತ್ಯಾಹ್ನಿಕ, ದೇವಪೂಜಾ, ಗಣೇಶಮಂತ್ರ, ಸೂರ್ಯಮಂತ್ರ, ಮಹಾವಿಷ್ಣುಮಂತ್ರ, ನರಸಿಂಹಮಂತ್ರ, ದಧಿವಾಮನಮಂತ್ರ, ರಾಮಮಂತ್ರ, ಹನುಮನ್ಮಂತ್ರ, ಹನುಮದ್ದೀಪ ವಿಧಾನ, ಕಾರ್ತವೀರ್ಯಾರ್ಜುನಮಂತ್ರ, ಕಾರ್ತವೀ-ರ್ಯಾರ್ಜುನ ಕವಚ, ಹನುಮಂತನ ಕವಚ, ಕೃಷ್ಣಮಂತ್ರ, ಭುವನೇಶ್ವ-ರೀಮಂತ್ರ, ಕಾಳಿಕಾಮಂತ್ರ, ಛಿನ್ನಮಸ್ತಾಮಂತ್ರ, ರಾಧಾವತಾರವೈಭವ, ನಿತ್ಯಾಪಟಲ, ಮತ್ತು ಮಹೇಶ್ವರಮಂತ್ರ.

ಪೂರ್ವಭಾಗ, ಚತುರ್ಥಪಾದ (34 ಅಧ್ಯಾಯಗಳು): ಪುರಾಣಸಂಖ್ಯೆ, ಗ್ರಂಥಪರಿಮಾಣ, ವಿಷಯಸಂಗ್ರಹ, ಪುರಾಣರಚನಾಕ್ರಮ, ಹದಿನೆಂಟು ಪುರಾಣಗಳ ವಿಸ್ತಾರ ಪರಿಚಯ (ಬ್ರಹ್ಮ, ಪದ್ಮ, ವಿಷ್ಣು, ವಾಯು, ಭಾಗವತ, ನಾರದೀಯ, ಮಾರ್ಕಂಡೇಯ, ಆಗ್ನೇಯ, ಭವಿಷ್ಯ, ಬ್ರಹ್ಮವೈವರ್ತ, ಲಿಂಗ, ವರಾಹ, ವಾಮನ, ಕೂರ್ಮ, ಮತ್ಸ್ಯ, ಗರುಡ, ಬ್ರಹ್ಮಾಂಡ), ವರ್ಷದಲ್ಲಿ 24 ಬಾರಿ ಬರುವ ಪ್ರತಿಪದೆ, ಬಿದಿಗೆ, ಮೊದಲಾದ ಪ್ರತಿಯೊಂದು ತಿಥಿಯಲ್ಲಿ ಮಾಡಬೇಕಾದ ವ್ರತವಿಧಾನ, ಪೂಜೆ, ದಾನಗಳು.

ಉತ್ತರಭಾಗ (82 ಅಧ್ಯಾಯಗಳು): ರುಕ್ಮಾಂಗದಚರಿತ್ರೆ (ಅಧ್ಯಾಯ 1-37), ತೀರ್ಥಕ್ಷೇತ್ರಮಹಾತ್ಮೆಗಳು – ಗಂಗಾಮಹಾತ್ಮೆ, ಗಯಾಮಹಾತ್ಮೆ, ಕಾಶೀಮಹಿಮೆ, ಜಗನ್ನಾಥ ಕ್ಷೇತ್ರಮಹಿಮೆ, ಇಂದ್ರದ್ರ್ಯುಮ್ನನ ಕಥೆ, ಪ್ರಯಾಗಕ್ಷೇತ್ರಮಹಿಮೆ, ಕುರುಕ್ಷೇತ್ರದ ಮಹಿಮೆ, ಹರಿದ್ವಾರಮಹಿಮೆ, ಬದರಿಕಾಶ್ರಮ ಮಹಿಮೆ, ಕಾಮೋದಾದೇವಿಯ ಮಹಿಮೆ, ಕಾಮಾಕ್ಷಾದೇವಿಯ ಮಹಿಮೆ, ಪ್ರಭಾಸಕ್ಷೇತ್ರ ಮಹಾತ್ಮೆ, ಪುಷ್ಕರಕ್ಷೇತ್ರಮಹಾತ್ಮೆ, ಗೌತಮಾಶ್ರಮ ಮಹಿಮೆ, ಪುಂಡರೀಕಕ್ಷೇತ್ರಮಹಿಮೆ, ಗೋಕರ್ಣ ಮಹಿಮೆ, ಲಕ್ಷ್ಮಣಾಚಲ ಮಹಿಮೆ, ಸೇತು ಮಹಿಮೆ, ನರ್ಮದಾತೀರ್ಥ ಮಹಾತ್ಮೆ, ಅವಂತಿಯ ಮಹಿಮೆ, ಮಥುರಾಮಹಾತ್ಮೆ, ವೃಂದಾವನಮಹಾತ್ಮೆ (38-82).

 

Leave a Reply

Your email address will not be published. Required fields are marked *