ಕರ್ಣಪರ್ವದ ವಿಷಯಸಂಗ್ರಹ

[ಆದಿಪರ್ವ3ದ 2ನೇ ಅಧ್ಯಾಯದ 171ಎಬಿಯ ನಂತರ ಕೆ3,4,6 ಡಿ ಡಿಆರ್ ಗಳಲ್ಲಿರುವ ಅಧಿಕ ಶ್ಲೋಕಗಳು]

 

ಯತ್ರೈವಾನುನಯಃ ಪ್ರೋಕ್ತೋ ಮಾಧವೇನಾರ್ಜುನಸ್ಯ ವೈ

ಪ್ರತಿಜ್ಞಾಪೂರ್ವಕಂ ಚಾಪಿ ವಕ್ಷೋ ದುಃಶಾಸನಸ್ಯ ಚ ।

ಭಿತ್ವಾ ವೃಕೋದರೇ ರಕ್ತಂ ಪೀತವಾನ್ಯತ್ರ ಸಂಯುಗೇ । (ಕೆ3,4,6 ಡಿ)

ಯಥಾವದ್ಬಲಸೈನ್ಯಂ ಚ ವರ್ಣಯಾಮಾಸ ವಾಯುಜಃ ।

ಪೂರಯಿತ್ವಾಂಜಲಿಂ ಪೂರ್ಣಂ ದಧ್ನೋ ಹೀದೃಷೋ ರಸಃ । [5]

ಅನ್ಯೇಷಾಂ ಚ ರಸಾನಾಂ ತು ಪ್ರತಿಜ್ಞಾದೃಢನಿಶ್ಚಯಃ ।

ಕರ್ಣಾರ್ಜುನದ್ವರಥೇ ತು ವರ್ತಮಾನೇ ಭಯಾನಕೇ ।

ಶಾಪೇನೈವ ಚ ಕರ್ಣಸ್ಯ ತತಶ್ಚಕ್ರಂ ಮಹೀಗತಮ್ ।

ನಾಗಮಾತ್ರಂ ವಲೀಕಂ ಚ ಕರ್ಣೋಽಮುಂಚತ ಫಾಲ್ಗುನೇ ।

ತದ್ಭಯಾತ್ಕೇಶವೋ ಭೂಮಿಂ ಪ್ರಾವೇಶಯತ ತಂ ರಥಮ್ । [10] (ಕೆ3,4 ಡಿಅರ್ ಡಿ4)

ಅಲ್ಲಿಯೇ ಮಾಧವನು ಅರ್ಜುನನಿಗೆ ಹಿತವಚನವನ್ನು ನುಡಿದು ಸಮಾಧಾನಗೊಳಿಸಿದುದು, ಯುದ್ಧದಲ್ಲಿ ವೃಕೋದರನು ಪ್ರತಿಜ್ಞಾಪೂರ್ವಕವಾಗಿ ದುಃಶಾಸನನ ಎದೆಯನ್ನು ಸೀಳಿ ರಕ್ತವನ್ನು ಕುಡಿದುದು, ಪ್ರತಿಜ್ಞಾದೃಢನಿಶ್ಚಯಿ ವಾಯುಜ ಭೀಮಸೇನನು ತನ್ನ ಕೈಗಳಲ್ಲಿ ದುಃಶಾಸನನ ರಕ್ತವನ್ನು ತುಂಬಿಸಿಕೊಂಡು ಅನ್ಯ ಸೇನೆಗಳ ರಸವನ್ನೇ ಹೀರಿ ಕುಡಿಯುವನೋ ಎಂಬಂತೆ ಕುಡಿದುದು, ಕರ್ಣಾರ್ಜುನರ ಭಯಾನಕ ದ್ವೈರಥಯುದ್ಧವು ನಡೆಯುವಾಗ ಶಾಪದ ಕಾರಣದಿಂದ ಕರ್ಣನ ರಥಚಕ್ರವು ಭೂಮಿಯಲ್ಲಿ ಹೂತುಹೋದುದು, ಕರ್ಣನು ಅರ್ಜುನನಮೇಲೆ ನಾಗಾಸ್ತ್ರವನ್ನು ಪ್ರಯೋಗಿಸಲು ಅದರ ಭಯದಿಂದ ಕೇಶವನು ರಥವನ್ನು ಭೂಮಿಯಲ್ಲಿ ಹುಗಿಸಿದುದು – ಈ ವಿಷಯಗಳು ವರ್ಣಿತಗೊಂಡಿವೆ.

 

Leave a Reply

Your email address will not be published. Required fields are marked *