ಆರಣ್ಯಕಪರ್ವದ ವಿಷಯಸಂಗ್ರಹ
[ಆದಿಪರ್ವದ 2ನೇ ಅಧ್ಯಾಯದ 105ನೇ ಶ್ಲೋಕದ ನಂತರ ಡಿ14 ಕೆ2,4,5 ವಿ1 ಬಿ ಡಿ ಮತ್ತು ಜಿ7ಗಳಲ್ಲಿರುವ ಅಧಿಕ ಶ್ಲೋಕಗಳು]
ಯತ್ರಾದಿತ್ಯಾದ್ವರಪ್ರಾಪ್ತಿರ್ಧರ್ಮರಾಜಸ್ಯ ಧೀಮತಃ । (ಡಿ14)
ಅನ್ನೌಷಧೀನಾಂ ಚ ಕೃತೇ ಪಾಂಡವೇನ ಮಹಾತ್ಮನಾ ।
ದ್ವಿಜಾನಾಂ ಭರಣಾರ್ಥಂ ಕೃತಮಾರಾಧನಂ ರವೇಃ ।
ಹಿತಂ ಚ ಬ್ರುವತಃ ಕ್ಷತ್ತುಃ ಪರಿತ್ಯಾಗೋಂಽಬಿಕಾಸುತಾತ್ ।
ತ್ಯಕ್ತಸ್ಯ ಪಾಂಡುಪುತ್ರಾಣಾಂ ಸಮೀಪಗಮನಂ ತಥಾ । [5]
ಪುನರಾಗಮನಂ ಚೈವ ಧೃತರಾಷ್ಟ್ರಸ್ಯ ಶಾಸನಾತ್ ।
ಕರ್ಣಪ್ರೋತ್ಸಾಹನಂ ಚೈವ ಧಾರ್ತರಾಷ್ಟ್ರಸ್ಯ ದುರ್ಮತೇಃ ।
ವನಸ್ಥಾನ್ಪಾಂಡವಾನ್ಹಂತುಂ ಮಂತ್ರೋ ದುರ್ಯೋಧನಸ್ಯ ಚ ।
ತಂ ದುಷ್ಟಭಾವಂ ವಿಜ್ಞಾಯ ವ್ಯಾಸಸ್ಯಾಗಮನಂ ದ್ರುತಮ್ ।
ನಿರ್ಯಾಣಪ್ರತಿಷೇಧಶ್ಚ ಸುರಭ್ಯಾಖ್ಯಾನಮೇವ ಚ । [10]
ಮೈತ್ರೇಯಾಗಮನಂ ಚಾತ್ರ ರಾಜ್ಞಶ್ಚೈವಾನುಶಾಸನಮ್ ।
ಶಾಪೋತಸರ್ಗಶ್ಚ ತೇನೈವ ರಾಜ್ಞೋ ದುರ್ಯೋಧನಸ್ಯ ಚ ।
ಕಿರ್ಮೀರಸ್ಯ ವಧಶ್ಚಾತ್ರ ಭೀಮಸೇನೇನ ಸಂಯುಗೇ ।
ಅಲ್ಲಿ ಧೀಮತ ಧರ್ಮರಾಜನಿಗೆ ಆದಿತ್ಯನಿಂದ ವರಪ್ರಾಪ್ತಿ, ಮಹಾತ್ಮಾ ಪಾಂಡವನು ದ್ವಿಜರ ಭರಣಕ್ಕಾಗಿ ರವಿಯನ್ನು ಆರಾಧಿಸಿ ಅನ್ನೌಷಧಿಗಳನ್ನು ನೆರವೇರಿಸಿದುದು, ಹಿತವನ್ನು ನುಡಿಯುತ್ತಿದ್ದ ಕ್ಷತ್ತ ವಿದುರನನ್ನು ಅಂಬಿಕಾಸುತ ಧೃತರಾಷ್ಟ್ರನು ತ್ಯಜಿಸಿದುದು, ತ್ಯಕ್ತನಾದ ವಿದುರನು ಪಾಂಡುಪುತ್ರರ ಬಳಿ ಹೋದುದು, ಧೃತರಾಷ್ಟ್ರನ ಶಾಸನದಂತೆ ವಿದುರನು ಹಿಂದಿರುಗಿದುದು, ದುರ್ಮತಿ ಧಾರ್ತರಾಷ್ಟ್ರ ದುರ್ಯೋಧನನನ್ನು ಕರ್ಣನು ಪ್ರೋತ್ಸಾಹಿಸಿದುದು, ವನದಲ್ಲಿದ್ದ ಪಾಂಡವರನ್ನು ಕೊಲ್ಲಲು ದುರ್ಯೋಧನನು ಮಂತ್ರಾಲೋಚನೆಗೈದುದು, ಅವನ ದುಷ್ಟಭಾವವನ್ನು ಅರಿತು ವ್ಯಾಸನು ತ್ವರೆಮಾಡಿ ಆಗಮಿಸಿದುದು, ಸುರಭಿಯ ಆಖ್ಯಾನವನ್ನು ಮತ್ತು ದುರ್ಯೋಧನನನ್ನು ತಡೆಯಲು ಹೇಳಿ ಹೊರಟುಹೋದುದು, ಅಲ್ಲಿಯೇ ಮೈತ್ರೇಯನ ಆಗಮನ ಮತ್ತು ರಾಜನಿಗೆ ಉಪದೇಶಿಸಿದುದು, ರಾಜಾ ದುರ್ಯೋಧನನಿಗೆ ಮೈತ್ರೇಯನಿಂದ ಶಾಪವುಂಟಾದುದು, ಹೋರಾಟದಲ್ಲಿ ಭೀಮನು ಕಿರ್ಮೀರನನ್ನು ವಧಿಸಿದ್ದುದು - ಇವುಗಳ ವರ್ಣನೆಗಳಿವೆ.