ಅಗ್ನಿ ಪುರಾಣ

ಶ್ರಿಯಂಸರಸ್ವತೀಂ ಗೌರೀಂ ಗಣೇಶಂ ಸ್ಕಂದಮೀಶ್ವರಮ್ । ಬ್ರಹ್ಮಾಣಂವಹ್ನಿಮಿಂದ್ರಾದೀನ್ ವಾಸುದೇವಂ ನಮಾಮ್ಯಹಮ್ ।।

ಮತ್ಸ್ಯಪುರಾಣದ 53ನೇ ಅಧ್ಯಾಯದ 28ನೇ ಶ್ಲೋಕದ ಪ್ರಕಾರ ಯತ್ತದೀಶಾನಕಂ ಕಲ್ಪಂ ವೃತ್ತಾಂತಮಧಿಕೃತ್ಯ ಚ ವಸಿಷ್ಠಾಯಾಗ್ನಿನಾ ಪ್ರೋಕ್ತಮಾಗ್ನೇಯಂ ತತ್ಪ್ರಚಕ್ಷತೇ ।। ಅರ್ಥಾತ್: ಈಶಾನ ಕಲ್ಪದ ವೃತ್ತಾತವನ್ನು ಅಗ್ನಿಯು ವಸಿಷ್ಠನೆಗೆ ಹೇಳಿದುದೇ ಆಗ್ನೇಯ ಪುರಾಣವು.

ಈ ಪುರಾಣದಲ್ಲಿ ಒಟ್ಟು 382 ಅಧ್ಯಾಯಗಳಿವೆ ಮತ್ತು 11,170 ಶ್ಲೋಕಗಳಿವೆ. ಈ ಪುರಾಣದಲ್ಲಿ ಬರುವ ಮುಖ್ಯ ವಿಷಯಗಳು ಈ ಕೆಳಗಿನಂತಿವೆ: ಮತ್ಸ್ಯಾವತಾರವರ್ಣನೆ, ಕೂರ್ಮಾವತಾರವರ್ಣನೆ, ವರಾಹಾದಿ ಅವತಾರವರ್ಣನೆ, ರಾಮಾವತಾರವರ್ಣನೆ, ಹರಿವಂಶವರ್ಣನೆ, ಪಾಂಡವಚರಿತವರ್ಣನೆ, ಬುದ್ಧಾವತಾರವರ್ಣನೆ, ಸೃಷ್ಟಿವಿಷಯವರ್ಣನೆ, ಸ್ವಾಯಂಭುವವಂಶವರ್ಣನೆ, ಕಶ್ಯಪವಂಶವರ್ಣನೆ, ಪೂಜಾವಿಧಿಕಥನ, ಮುದ್ರಾಲಕ್ಷಣಕಥನ, ಅಭಿಷೇಕವಿಧಾನ, ಮಂಡಲವಿಧಿ, ಸಂಸ್ಕಾರಕಥನ, ಅರ್ಘ್ಯದಾನವಿಧಿ, ಶಾಲಗ್ರಾಮಾದಿ ಮೂರ್ತಿಲಕ್ಷಣ, ಶಾಲಗ್ರಾಮಾದಿಪೂಜಾಕಥನ, ಪ್ರತಿಮಾಲಕ್ಷಣ, ಲಿಂಗಲಕ್ಷಣ, ಕೂಪಾದಿಪ್ರತಿಷ್ಠಾಕಥನ, ಸಭಾಸ್ಥಾಪನಕಥನ, ವಾಸ್ತುಪೂಜಾವಿಧಿ, ನಗರಾದಿವಾಸ್ತುಕಥನ, ಭುವನಕೋಶ, ತೀರ್ಥಮಾಹಾತ್ಮೆ, ಶ್ರಾದ್ಧಕಲ್ಪ, ಭಾರತವರ್ಷ, ಜ್ಯೋತಿಃಶಾಸ್ತ್ರ, ಕಾಲಗಣನೆ, ಯುದ್ಧಜಯನಿರ್ಣಯ, ನಕ್ಷತ್ರನಿರ್ಣಯ, ವಿವಿಧವಿದ್ಯೆಗಳು, ಮನ್ವಂತರಗಳು, ವರ್ಣೇತರಧರ್ಮಗಳು, ಆಶ್ರಮಧರ್ಮಗಳು, ಪ್ರಾಯಶ್ಚಿತ್ತಗಳು, ವ್ರತಗಳು, ದಾನಗಳು, ರಾಜಧರ್ಮಗಳು, ಸ್ವಪ್ನಾಧ್ಯಾಯ, ಧನುರ್ವೇದ, ರಾಜವಂಶವರ್ಣನ, ಔಷಧಗಳು, ಗಜಚಿಕಿತ್ಸೆ, ಅಶ್ವಚಿಕಿತ್ಸೆ, ವಿವಿಧ ಮಂತ್ರಗಳು, ಕಾವ್ಯ-ನಾಟಕ-ನೃತ್ಯ-ಅಭಿನಯಾದಿ ನಿರೂಪಣೆ, ಅಷ್ಟಾಂಗಯೋಗ, ಅದ್ವೈತಬ್ರಹ್ಮವಿದ್ಯಾ, ಗೀತಾಸಾರ, ಮತ್ತು ಯಮಗೀತಾ.

 

Leave a Reply

Your email address will not be published. Required fields are marked *