ಸೌಪ್ತಿಕಪರ್ವದ ವಿಷಯಸಂಗ್ರಹ
[ಆದಿಪರ್ವದ 2ನೇ ಅಧ್ಯಾಯದ 180ನೇ ಶ್ಲೋಕದ ನಂತರ ಕೆ3,4,6 ವಿ1 ಬಿ ಮತ್ತು ಡಿ ಗಳಲ್ಲಿರುವ ಅಧಿಕ ಶ್ಲೋಕಗಳು]
ಯತ್ರೈವಮುಕ್ತ್ವಾ ರಾಜಾನಮಪಕ್ರಮ್ಯ ತ್ರಯೋ ರಥಾಃ ।
ಸೂರ್ಯಾಸ್ತಮನವೇಲಾಯಾಮಾಸೇದುಸ್ತೇ ಮಹದ್ವನಮ್ ।
ನ್ಯಗ್ರೋಧಸ್ಯಾತ್ರ ಮಹತೋ ಯತ್ರಾಧಸ್ತಾದ್ಯವಸ್ಥಿತಾಃ ।
ತತಃ ಕಾಕಾನ್ಬಹೂನ್ರಾತ್ರೌ ದೃಷ್ಟ್ವೋಲೂಕೇನ ಹಿಂಸಿತಾನ್ ।
ದ್ರೌಣಿಃ ಕ್ರೋಧಸಮಾವಿಷ್ಟಃ ಪಿತುರ್ವಧಮನುಸ್ಮರನ್ । [5]
ಪಾಂಚಾಲಾನಾಂ ಪ್ರಸುಪ್ತಾನಾಂ ವಧಂ ಪ್ರತಿ ಮನೋ ದಧೇ ।
ಗತ್ವಾ ಚ ಶಿಬಿರದ್ವಾರಿ ದುರ್ದರ್ಶ ಯತ್ರ ರಾಕ್ಷಸಮ್ ।
ಘೋರರೂಪಮಪಶ್ಯತ್ಸ ದಿವಮಾವೃತ್ಯ ಧಿಷ್ಠಿತಮ್ ।
ತೇನ ವ್ಯಾಘಾಗಮಸ್ತ್ರಾಣಾಂ ಕ್ರಿಯಮಾಣಮವೇಕ್ಷ್ಯ ಚ ।
ದ್ರೌಣಿರ್ಯತ್ರ ವಿರೂಪಾಕ್ಷಂ ರುದ್ರಮಾರಾಧ್ಯ ಸತ್ವರಃ । [10]
ಇದರಲ್ಲಿ ರಾಜ ದುರ್ಯೋಧನನನ್ನು ಅಲ್ಲಿಯೇ ಬಿಟ್ಟು ಆ ಮೂವರು ಮಹಾರಥರು (ಕೃಪ, ಅಶ್ವತ್ಥಾಮ ಮತ್ತು ಕೃತವರ್ಮ) ಸೂರ್ಯಾಸ್ತದ ವೇಳೆಯಲ್ಲಿ ಮಹಾ ವನವನ್ನು ಪ್ರವೇಶಿಸಿದುದು, ಅಲ್ಲಿ ಒಂದು ದೊಡ್ಡ ಆಲದ ಮರದ ಕೆಳಗೆ ಕುಳಿತುಕೊಂಡಿದ್ದಾಗ ರಾತ್ರಿಯಲ್ಲಿ ಮರದಮೇಲಿದ್ದ ಅನೇಕ ಕಾಗೆಗಳನ್ನು ಗೂಬೆಯೊಂದು ಬಂದು ಕೊಂದುದನ್ನು ಅವರು ನೋಡಿದುದು, ಪಿತೃವಧೆಯನ್ನು ಸ್ಮರಿಸಿಕೊಂಡ ದ್ರೌಣಿಯು ಕ್ರೋಧಸಮಾವಿಷ್ಟನಾಗಿ ಮಲಗಿದ್ದ ಪಾಂಚಾಲರನ್ನು ವಧಿಸುವ ಮನಸ್ಸುಮಾಡಿದುದು, ಶಿಬಿರದ್ವಾರಕ್ಕೆ ಹೋಗಿ ಅಲ್ಲಿ ಅವನು ಆಕಾಶವನ್ನೇ ಆವರಿಸಿ ನಿಂತಿದ್ದ ದುರ್ದರ್ಶ ರಾಕ್ಷಸನೋರ್ವನನ್ನು ಕಂಡಿದುದು, ಅವನು ತನ್ನ ಅಸ್ತ್ರಗಳನ್ನು ಅಮೋಘವನ್ನಾಗಿಸಿದುದನ್ನು ಕಂಡು ಸತ್ವರ ದ್ರೌಣಿಯು ವಿರೂಪಾಕ್ಷ ರುದ್ರನನ್ನು ಆರಾಧಿಸಿದುದು – ಈ ವಿಷಯಗಳು ಉಕ್ತವಾಗಿವೆ.