ನಾರದ ಉವಾಚ ।
ಕಥಂ ಸಸರ್ಜ ಬ್ರಹ್ಮಾದೀನಾದಿದೇವಃ ಪುರಾ ವಿಭುಃ ।
ತನ್ಮಮಾಖ್ಯಾಹಿ ಸನಕ ಸರ್ವಜ್ಞೋಽಸ್ತಿ ಯತೋ ಭವಾನ್ ।। 1 ।।
ನಾರದನು ಹೇಳಿದನು: “ಸನಕ! ನೀನು ಸರ್ವಜ್ಞನು. ಹಿಂದೆ ವಿಭು ದೇವನು ಬ್ರಹ್ಮಾದಿಗಳನ್ನು ಹೇಗೆ ಸೃಷ್ಟಿಸಿದನು? ಅದನ್ನು ನನಗೆ ಹೇಳು.
ಶ್ರೀ ಸನಕ ಉವಾಚ ।
ನಾರಾಯಣೋಽಕ್ಷರೋಽನಂತಃ ಸರ್ವವ್ಯಾಪೀ ನಿರಂಜನಃ ।
ತೇನೇದಮಖಿಲಂ ವ್ಯಾಪ್ತಂ ಜಗತ್ಸ್ಥಾವರಜಂಗಮಮ್ ।। 2 ।।
ಆದಿಸರ್ಗೇ ಮಹಾವಿಷ್ಣುಃ ಸ್ವಪ್ರಕಾಶೋ ಜಗನ್ಮಯಃ ।
ಗುಣಭೇದಮಧಿಷ್ಠಾಯ ಮೂರ್ತಿತ್ರಿಕಮವಾಸೃಜತ್ ।। 3 ।।
ಸೃಷ್ಟ್ಯರ್ಥಂ ತು ಪುರಾ ದೇವೋ ದಕ್ಷಿಣಾಂಗಾತ್ಪ್ರಜಾಪತಿಮ್ ।
ಮಧ್ಯೇ ರುದ್ರಾಖ್ಯಮೀಶಾನಂ ಜಗದಂತಕರಂ ಮುನೇ ।। 4 ।।
ಪಾಲನಾಯಾಸ್ಯ ಜಗತೋ ಸ್ವರೂಪಾದ್ವಿಷ್ಣುಮವ್ಯಯಮ್[1] ।
ತಮಾದಿದೇವಮಜರಂ ಕೇಚಿದಾಹುಃ ಶಿವಾಭಿಧಮ್ ।। 5 ।।
ಕೇಚಿದ್ವಿಷ್ಣುಂ ಸದಾ ಸತ್ಯಂ ಬ್ರಹ್ಮಾಣಂ ಕೇಚಿದೂಚಿರೇ ।
ಶ್ರೀ ಸನಕನು ಹೇಳಿದನು: “ಅಕ್ಷರ, ಅನಂತ, ಸರ್ವವ್ಯಾಪಿ, ನಿರಂಜನ[2] ನಾರಾಯಣನು ಚರಚರಾತ್ಮಕವಾದ ಅಖಿಲ ಜಗತ್ತನ್ನೂ ವ್ಯಾಪಿಸಿದ್ದಾನೆ. ಸ್ವಯಂಪ್ರಕಾಶ ಮಹಾವಿಷ್ಣುವು ಆದಿಸೃಷ್ಟಿಯಲ್ಲಿ ಸತ್ವ, ರಜೋ ಮತ್ತು ತಮೋಗುಣಗಳನ್ನು ಆಧರಿಸಿ ತ್ರಿಮೂರ್ತಿಗಳನ್ನು ಸೃಷ್ಟಿಸಿದನು. ಸೃಷ್ಟಿಮಾಡಲೋಸುಗ ಹಿಂದೆ ದೇವನು ತನ್ನ ಶರೀರದ ಬಲಭಾಗದಿಂದ ಬ್ರಹ್ಮನನ್ನೂ, ಮಧ್ಯಭಾಗದಿಂದ ಜಗತ್ತನ್ನು ಅಂತ್ಯಗೊಳಿಸುವ ರುದ್ರನನ್ನೂ, ತನ್ನ ಸ್ವರೂಪದಿಂದ ಜಗತ್ತನ ಪಾಲನೆಗಾಗಿ ಅವ್ಯಯ ವಿಷ್ಣುವನ್ನೂ ಸೃಷ್ಟಿಸಿದನು. ಅಜರನಾದ ಆ ಆದಿದೇವನನ್ನು ಕೆಲವರು ಶಿವನೆಂಬ ಹೆಸರಿನಿಂದಲೂ, ಕೆಲವರು ಸದಾ ಸತ್ಯನಾದ ವಿಷ್ಣುವೆಂದೂ, ಕೆಲವರು ಬ್ರಹ್ಮನೆಂದೂ ಹೇಳುತ್ತಾರೆ.
ತಸ್ಯ ಶಕ್ತಿಃ ಪರಾ ವಿಷ್ಣೋರ್ಜಗತ್ಕಾರ್ಯಪ್ರವರ್ತಿನೀ ।। 6 ।।
ಭಾವಾಭಾವಸ್ವರೂಪಾ ಸಾ ವಿದ್ಯಾವಿದ್ಯೇತಿ ಗೀಯತೇ ।
ಯದಾ ಶಕ್ತಿಃ[3] ಮಹಾವಿಷ್ಣೋರ್ಭಿನ್ನತ್ವೇನ ಪ್ರತೀಯತೇ ।। 7 ।।
ತದಾ ಹ್ಯವಿದ್ಯಾ ಸಂಸಿದ್ಧಾ ಭವೇದ್ದುಃಖಸ್ಯ ಸಾಧನಮ್ ।
ಜ್ಞಾತೃಜ್ಞೇಯಾದ್ಯುಪಾಧಿಸ್ತೇ ಯದಾ ನಶ್ಯತಿ ನಾರದ ।
ಶಕ್ತೈಕಭಾವನಾ ಬುದ್ಧಿಃ ಸಾ ವಿದ್ಯೇತ್ಯಭಿಧೀಯತೇ ।। 8 ।।
ಏಷಂ ಮಾಯಾ ಮಹಾವಿಷ್ಣೋರ್ಭಿನ್ನಾ ಸಂಸಾರದಾಯಿನೀ ।
ಅಭೇದಬುದ್ಧ್ಯಾ ದೃಷ್ಟಾ ಚೇತ್ಸಂಸಾರಕ್ಷಯಕಾರಿಣೀ ।। 9 ।।
ಜಗತ್ತಿನ ಕಾರ್ಯವನ್ನು ನಡೆಸುವ ಆ ವಿಷ್ಣುವಿನ ಪರಾ ಶಕ್ತಿಯನ್ನು ಭಾವಸ್ವರೂಪದಲ್ಲಿ ವಿದ್ಯೆಯೆಂದೂ ಅಭಾವಸ್ವರೂಪದಲ್ಲಿ ಅವಿದ್ಯೆಯೆಂದೂ ಹೇಳುತ್ತಾರೆ.[4] ಆ ಶಕ್ತಿಯು ಮಹಾವಿಷ್ಣುವಿಗಿಂತ ಭಿನ್ನವೆಂದು ತಿಳಿಯುವುದು ಅವಿದ್ಯೆಯೆನಿಸುತ್ತದೆ. ಅದು ದುಃಖಸಾಧನವು.[5] ನಾರದ! ತಿಳಿಯುವವನು ಮತ್ತು ತಿಳಿಯಲ್ಪಡುವುದು ಇವುಗಳ ಉಪಾಧಿಯು ಯಾವಾಗ ನಾಶವಾಗುತ್ತದೆಯೋ, ಶಕ್ತಿ ಮತ್ತು ವಿಷ್ಣು ಎರಡೂ ಒಂದೇ ಎನ್ನುವ ಬುದ್ಧಿಯು ವಿದ್ಯೆಯೆನಿಸಿಕೊಳ್ಳುತ್ತದೆ.[6] ಹೀಗೆ ವಿಷ್ಣುಮಾಯೆ ಅಥವಾ ಶಕ್ತಿಯು ಮಹಾವಿಷ್ಣುವಿನಿಂದ ಭಿನ್ನ ಎಂದು ತಿಳಿದರೆ ದುಃಖಮಯ ಸಂಸಾರವೂ, ಅಭಿನ್ನ ಎಂದು ತಿಳಿದರೆ ಸಂಸಾರನಾಶ ಅಥವಾ ಮೋಕ್ಷವೂ ಉಂಟಾಗುತ್ತದೆ.
ವಿಷ್ಣುಶಕ್ತಿಸಮುದ್ಭೂತಮೇತತ್ಸರ್ವಂ ಚರಾಚರಮ್ ।
ಯಸ್ಮಾದ್ಭಿನ್ನಮಿದಂ ಸರ್ವಂ ಯಚ್ಚೇಂಗೇದ್ಯಚ್ಚನೇಂಗತಿ ।
ಉಪಾಧಿಭಿರ್ಯಥಾಕಾಶೋ ಭಿನ್ನತ್ವೇನ ಪ್ರತೀಯತೇ ।
ಅವಿದ್ಯೋಪಾಧಿಯೋಗೇನ ತಥೇದಮಖಿಲಂ ಜಗತ್ ।
ಯಥಾ ಹರಿರ್ಜಗದ್ವ್ಯಾಪೀ ತಸ್ಯ ಶಕ್ತಿಸ್ತಥಾ ಮುನೇ ।। 10 ।।
ದಾಹಶಕ್ತಿರ್ಯಥಾಂಗಾರೇ ಸ್ವಾಶ್ರಯಂ ವ್ಯಾಪ್ಯ ತಿಷ್ಟತಿ ।
ಈ ಚರಾಚರ ಸರ್ವವೂ ವಿಷ್ಣುಶಕ್ತಿಯಿಂದ ಉದ್ಭವಿಸಿದೆ. ಚಲಿಸುವ ಮತ್ತು ಚಲಿಸದಿರುವ ಇವೆಲ್ಲವೂ ಆ ವಿಷ್ಣುಶಕ್ತಿಯಿಂದ ಭಿನ್ನವಾಗಿವೆ. ಉಪಾಧಿಗಳಿಂದಾಗಿ ಆಕಾಶವು ಹೇಗೆ ಭಿನ್ನವಾಗಿ ತೋರುತ್ತದೆಯೋ ಹಾಗೆಯೇ ಈ ಅಖಿಲ ಜಗತ್ತೂ ಅವಿದ್ಯೆಯೆಂಬ ಉಪಾಧಿಯಿಂದ ಭಿನ್ನವಾಗಿ ತೋರುತ್ತದೆ. ಮುನೇ! ಹರಿಯು ಹೇಗೆ ಜಗದ್ವ್ಯಾಪಿಯೋ ಹಾಗೆ ಅವನ ಶಕ್ತಿಯೂ ಕೂಡ - ಬೆಂಕಿಯಲ್ಲಿರುವ ದಾಹಶಕ್ತಿಯು ಬೆಂಕಿಗೆ ಆಶ್ರಯವಾದ ಇದ್ದಲಿನಲ್ಲಿ ಹೇಗೆ ವ್ಯಾಪಿಸಿರುತ್ತದೆಯೋ ಹಾಗೆ – ಎಲ್ಲವನ್ನೂ ವ್ಯಾಪಿಸಿದೆ.
ಉಮೇತಿ ಕೇಚಿದಾಹುಸ್ತಾಂ ಶಕ್ತಿಂ ಲಕ್ಷ್ಮೀಂ ತಥಾ ಪರೇ ।। 11 ।।
ಭಾರತೀತ್ಯಪರೇ ಚೈನಾಂ ಗಿರಿಜೇತ್ಯಂಬಿಕೇತಿ ಚ ।
ದುರ್ಗೇತಿ ಭದ್ರಕಾಲೀತಿ ಚಂಡೀ ಮಾಹೇಶ್ವರೀತ್ಯಪಿ ।। 12 ।।
ಕೌಮಾರೀ ವೈಷ್ಣವೀ ಚೇತಿ ವಾರಾಹ್ಯೇಂದ್ರೀ ಚ ಶಾಂಭವೀ ।
ಬ್ರಾಹ್ಮೀತಿ ವಿದ್ಯಾವಿದ್ಯೇತಿ ಮಾಯೇತಿ ಚ ತಥಾ ಪರೇ ।। 13 ।।
ಪ್ರಕೃತಿಶ್ಚ ಪರಾ ಚೇತಿ ವದಂತಿ ಪರಮರ್ಷಯಃ ।
ಸೇಯಂ ಶಕ್ತಿಃ ಪರಾ ವಿಷ್ಣೋರ್ಜಗತ್ಸರ್ಗಾದಿಕಾರಿಣೀ ।। 14 ।।
ವ್ಯಕ್ತಾವ್ಯಕ್ತಸ್ವರೂಪೇಣ ಜಗದ್ವ್ಯಾಪ್ಯ ವ್ಯವಸ್ಥಿತಾ ।
ಪ್ರಕೃತಿಶ್ಚ ಪುಮಾಂಶ್ಚೈವ ಕಾಲಶ್ಚೇತಿ ತ್ರಿಧಾಸ್ಥಿತಾ ।। 15 ।।
ಸೃಷ್ಟಿಸ್ಥಿತಿವಿನಾಶಾನಾಮೇಕಾ ಕಾರಣತಾಂ ಗತಾ ।
ಕೆಲವರು ಆ ಶಕ್ತಿಯನ್ನು ಉಮಾ ಎಂದು ಹೇಳುತ್ತಾರೆ. ಇನ್ನು ಕೆಲವರು ಲಕ್ಷ್ಮೀ ಎಂದೂ, ಅನ್ಯರು ಭಾರತೀ ಎಂದೂ, ಗಿರಿಜಾ, ಅಂಬಿಕೆ, ದುರ್ಗೆ, ಭದ್ರಕಾಲೀ, ಚಂಡೀ, ಮಾಹೇಶ್ವರಿ, ಕೌಮಾರೀ, ವೈಶ್ಣವೀ, ವಾರಾಹಿ, ಐಂದ್ರೀ, ಶಾಂಭವೀ, ಬ್ರಾಹ್ಮೀ, ವಿದ್ಯಾ, ಅವಿದ್ಯಾ, ಮಾಯಾ ಎಂದು ಇತರರು ಹಾಗೂ ಪರಾ ಪ್ರಕೃತಿಯೆಂದು ಪರಮಋಷಿಗಳು ಹೇಳುತ್ತಾರೆ. ವಿಷ್ಣುವಿನ ಈ ಪರಾಶಕ್ತಿಯು ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣವಾಗಿದೆ. ಇವಳು ವ್ಯಕ್ತ ಮತ್ತು ಅವ್ಯಕ್ತರೂಪಗಳಿಂದ ಜಗತ್ತನ್ನು ವ್ಯಾಪಿಸಿ ನೆಲೆಸಿದ್ದಾಳೆ. ಈ ಶಕ್ತಿಯೊಂದೇ ಪ್ರಕೃತಿ, ಪುರುಷ ಮತ್ತು ಕಾಲ ಎಂದು ಮೂರುವಿಧವಾಗಿ ಈ ಜಗತ್ತಿನ ಸೃಷ್ಟಿ-ಸ್ಥಿತಿ-ವಿನಾಶಗಳಿಗೆ ಕಾರಣವಾಗಿದೆ.
ಯೇನೇದಮಖಿಲಂ ಜಾತಂ ಬ್ರಹ್ಮರೂಪಧರೇಣ ವೈ ।। 16 ।।
ತಸ್ಮಾತ್ಪರತರೋ ದೇವೋ ನಿತ್ಯ ಇತ್ಯಭಿಧೀಯತೇ ।
ಯಾರಿಂದ ಈ ಎಲ್ಲವೂ ಹುಟ್ಟಿದೆಯೋ ಆ ಬ್ರಹ್ಮರೂಪಧಾರಿ ಪರತರ ದೇವನನ್ನು ನಿತ್ಯ ಎಂದು ಕರೆಯುತ್ತಾರೆ.
ರಕ್ಷಾಂ ಕರೋತಿ ಯೋ ದೇವೋ ಜಗತಾಂ ಪರಮಃ ಪುಮಾನ್ ।। 17 ।।
ತಸ್ಮಾತ್ಪರತರಂ ಯತ್ತದವ್ಯಯಂ ಪರಮಂ ಪದಮ್ ।
ಅಕ್ಷರೋ ನಿರ್ಗುಣಃ ಶುದ್ಧಃ ಪರಿಪೂರ್ಣಃ ಸನಾತನಃ ।। 18 ।।
ಯಃ ಪರಃ ಕಾಲರೂಪಾಖ್ಯೋ ಯೋಗಿಧ್ಯೇಯಃ ಪರಾತ್ಪರಃ ।
ಪರಮಾತ್ಮಾ ಪರಾನಂದಃ ಸರ್ವೋಪಾಧಿ ವಿವರ್ಜಿತಃ ।। 19 ।।
ಜ್ಞಾನೈಕವೇದ್ಯಃ ಪರಮಃ ಸಚ್ಚಿದಾನಂದವಿಗ್ರಹಃ ।
ಯೋಽಸೌ ಶುದ್ಧೋಽಪಿ ಪರಮೋಹ್ಯಹಂಕಾರೇಣ ಸಂಯುತಃ ।। 20 ।।
ದೇಹೀತಿ ಪ್ರೋಚ್ಯತೇ ಮೂಢೈರಹೋಽಜ್ಞಾನವಿಡಂಬನಮ್ ।
ಸ ದೇವಃ ಪರಮಃ ಶುದ್ಧಃ ಸತ್ತ್ವಾದಿ ಗುಣಭೇದತಃ ।। 21 ।।
ಮೂರ್ತಿತ್ರಯಂ ಸಮಾಪನ್ನಃ ಸೃಷ್ಟಿಸ್ಥಿತ್ಯಂತಕಾರಣಮ್ ।
ಯೋಽಸೌ ಬ್ರಹ್ಮಾ ಜಗತ್ಕರ್ತಾ ಯನ್ನಾಭಿಕಮಲೋದ್ಭವಃ ।। 22 ।।
ಸ ಏವಾನಂದರೂಪಾತ್ಮಾ ತಸ್ಮಾನ್ನಾಸ್ತ್ಯಪರೋ ಮುನೇ ।
ಅಂತರ್ಯಾಮೀ ಜಗದ್ಯಾಪೀ ಸರ್ವಸಾಕ್ಷೀ ನಿರಂಜನಃ ।। 23 ।।
ಭಿನ್ನಾಭಿನ್ನಸ್ವರೂಪೇಣ ಸ್ಥಿತೋ ವೈ ಪರಮೇಶ್ವರಃ ।
ಯಸ್ಯ ಶಕ್ತಿರ್ಮಹಾಮಾಯಾ ಜಗದ್ವಿಸ್ರಂಭಕಾರಿಣೀ ।। 24 ।।
ವಿಶ್ವೋತ್ಪತ್ತೇರ್ನಿದಾನತ್ವಾತ್ಪ್ರಕೃತಿಃ ಪ್ರೋಚ್ಯತೇ ಬುಧೈಃ ।
ಆದಿಸರ್ಗೇ ಮಹಾವಿಷ್ಣೋರ್ಲೋಕಾನ್ಕರ್ತುಂ ಸಮುದ್ಯತಃ ।। 25 ।।
ಪ್ರಕೃತಿಃ ಪುರುಷಶ್ಚೇತಿ ಕಾಲಶ್ಚೇತಿ ತ್ರಿಧಾ ಭವತ್ ।
ಪಶ್ಯಂತಿ ಭಾವಿತಾತ್ಮಾನೋ ಯಂ ಬ್ರಹ್ಮತ್ಯಭಿಸಂಜ್ಞಿತಮ್ ।। 26 ।।
ಶುದ್ಧಂ ಯತ್ಪರಮಂ ಧಾಮ ತದ್ವಿಷ್ಣೋಃ ಪರಮಂ ಪದಮ್ ।
ಏವಂ ಶುದ್ಧೋಽಕ್ಷರೋಽನಂತಃ ಕಾಲರೂಪೀ ಮಹೇಶ್ವರಃ ।। 27 ।।
ಗುಣರೂಪೀ ಗುಣಾಧಾರೋ ಜಗತಾಮಾದಿಕೃದ್ವಿಭುಃ ।
ಪ್ರಕೃತಿಃ ಕ್ಷೋಭಮಾಪನ್ನಾ ಪುರುಷಾಖ್ಯೇ ಜಗದ್ಗುರೌ ।। 28 ।।
ಮಹಾನ್ಪ್ರಾದುರಭೂದ್ಬುದ್ಧಿಸ್ತತೋಽಹಂ ಸಮವರ್ತತ ।
ಅಹಂಕಾರಾಶ್ಚ ಸೂಕ್ಷ್ಮಾಣಿ ತನ್ಮಾತ್ರಾಣೀಂದ್ರಿಯಾಣಿ ಚ ।। 29 ।।
ತನ್ಮಾತ್ರೇಭ್ಯೋ ಹಿ ಜಾತಾನಿ ಭೂತಾನಿ ಜಗತಃ ಕೃತೇ ।
ಆಕಾಶವಾಯ್ವಗ್ನಿಜಲಭೂಮಯೋಽಬ್ಜಭವಾತ್ಮಜ ।। 30 ।।
ಯಥಾಕ್ರಮಂ ಕಾರಣತಾಮೇಕೈಕಸ್ಯೋಪಯಾಂತಿ ಚ ।
ತತೋ ಬ್ರಹ್ಮಾ ಜಗದ್ಧಾತಾ ತಾಮಸಾನಸೃಜತ್ಪ್ರಭುಃ ।। 31 ।।
ತಿರ್ಯಗ್ಯೋನಿ ಗತಾನ್ ಜಂತೂನ್ಪಶುಪಕ್ಷಿಮೃಗಾದಿಕಾನ್ ।
ತಮಪ್ಯಸಾಧಕಂ ಮತ್ವಾ ದೇವಸರ್ಗಂ ಸನಾತನಾತ್ ।। 32 ।।
ತತೋ ವೈ ಮಾನುಷಂ ಸರ್ಗಂ ಕಲ್ಪಯಾಮಾಸ ಪದ್ಮಜಃ ।
ತತೋ ದಕ್ಷಾದಿಕಾನ್ಪುತ್ರಾನ್ಸೃಷ್ಟಿಸಾಧನತತ್ಪರಾನ್ ।। 33 ।।
ಏಭಿಃ ಪುತ್ರೈರಿದಂ ವ್ಯಾಪ್ತಂ ಸದೇವಾಸುರಮಾನುಷಮ್ ।
ಭೂರ್ಭುವಶ್ಚ ತಥಾ ಸ್ವಶ್ಚ ಮಹಶ್ಚೈವ ಜನಸ್ತಥಾ ।। 34 ।।
ತಪಶ್ಚ ಸತ್ಯಮಿತ್ಯೇವಂ ಲೋಕಾಃ ಸಪ್ತೋಪರಿ ಸ್ಥಿತಾಃ ।
ಅತಲಂ ವಿತಲಂ ಚೈವ ಸುತಲಂ ಚ ತಲಾತಲಮ್ ।। 35 ।।
ಮಹಾತಲಂ ಚ ವಿಪ್ರೇಂದ್ರ ತತೋಽಧಚ್ಚ ರಸಾತಲಮ್ ।
ಪಾತಾಲಂ ಚೇತಿ ಸಪ್ತೈವ ಪಾತಾಲಾನಿ ಕ್ರಮಾದಧಃ ।। 36 ।।
ಏಷ ಸರ್ವೇಷು ಲೋಕೇಷು ಲೋಕನಾಥಾಂಶ್ಚ ಸೃಷ್ಟವಾನ್ ।
ಕುಲಾಚಲಾನ್ನದೀಂಶ್ಚಾಸೌ ತತ್ತಲ್ಲೋಕನಿವಾಸಿನಾಮ್ ।। 37 ।।
ವರ್ತನಾದೀನಿ ಸರ್ವಾಣಿ ಯಥಾಯೋಗ್ಯಮಕಲ್ಪಯತ್ ।
ಭೂತಲೇ ಮಧ್ಯಗೋ ಮೇರುಃ ಸರ್ವದೇವ ಸಮಾಶ್ರಯಃ ।। 38 ।।
ಲೋಕಾಲೋಕಶ್ಚ ಭೂಮ್ಯಂತೇ ತನ್ಮಧ್ಯೇ ಸಪ್ತಸಾಗರಾಃ ।
ದ್ವೀಪಾಶ್ಚ ಸಪ್ತ ವಿಪ್ರೇಂದ್ರ ದ್ವೀಪೇ ಸಪ್ತ ಕುಲಾಚಲಾಃ ।। 39 ।।
ಬಾಹ್ಯಾ ನದ್ಯಶ್ಚ ವಿಖ್ಯಾತಾ ಜನಾಶ್ಚಾಮರಸನ್ನಿಭಾಃ ।
ಜಂಬೂಪ್ಲಕ್ಷಾಭಿಧಾನೌ ಚ ಶಾಲ್ಮಲಶ್ಚ ಕುಶಸ್ತಥಾ ।। 40 ।।
ಕ್ರೌಂಚಶಾಕೌ ಪುಷ್ಕರಶ್ಚ ತೇ ಸರ್ವೇ ದೇವಭೂಮಯಃ ।। 43 ।।
ಏತೇ ದ್ವೀಪಾಃ ಸಮುದ್ರೈಸ್ತು ಸಪ್ತಸಪ್ತಭಿರಾವೃತಾಃ ।। 41 ।।
ಲವಣೇಕ್ಷುಸುರಾಸರ್ಪಿರ್ದಧಿಕ್ಷೀರಜಲೈಃ ಸಮಮ್ ।
ಏತೇ ದ್ವೀಪಾಃ ಸಮುದ್ರಾಶ್ಚ ಪೂರ್ವಸ್ಮಾದುತ್ತರೋತ್ತರಾಃ ।। 42 ।।
ಜ್ಞೇಯಾ ದ್ವಿಗುಣವಿಸ್ತರಾ ಲೋಕಾಲೋಕಾಚ್ಚ ಪರ್ವತಾತ್ ।
ಕ್ಷೀರೋದಧೇರುತ್ತರಂ ಯದ್ಧಿ ಮಾರ್ದ್ರೇಶ್ಚೈವ ದಕ್ಷಿಣಮ್ ।। 43 ।।
ಜ್ಞೇಯಂ ತದ್ಭಾರತಂ ವರ್ಷಂ ಸರ್ವಕರ್ಮಫಲಪ್ರದಮ್ ।
ಅತ್ರ ಕರ್ಮಾಣಿ ಕುರ್ವಂತಿ ತ್ರಿವಿಧಾನಿ ತು ನಾರದ ।। 44 ।।
ತತ್ಫಲಂ ಭುಜ್ಯತೇ ಚೈವ ಭೋಗಭೂಮಿಷ್ವನುಕ್ರಮಾತ್ ।
ಭಾರತೇ ತು ಕೃತಂ ಕರ್ಮ ಶುಭಂ ವಾಶುಭಮೇವ ಚ ।। 45 ।।
ತತ್ಫಲಂ ಕ್ಷಯಿ ವಿಪ್ರೇಂದ್ರ ಭುಜ್ಯತೇಽನ್ಯತ್ರಜಂತುಭಿಃ ।
ಅದ್ಯಾಪಿ ದೇವಾ ಇಚ್ಛಂತಿ ಜನ್ಮ ಭಾರತಭೂತಲೇ ।। 46 ।।
ಸಂಚಿತಂ ಸುಮಹತ್ಪುಣ್ಯಮಕ್ಷಯ್ಯಮಮಲಂ ಶುಭಮ್ ।
ಕದಾ ಲಭಾಮಹೇ ಜನ್ಮ ವರ್ಷಭಾರತಭೂಮಿಷು ।। 47 ।।
ಕದಾ ಪುಣ್ಯೇನ ಮಹತಾ ಯಾಸ್ಯಾಮಃ ಪರಮಂ ಪದಮ್ ।
ದಾನೈರ್ವಾ ವಿವಿಧೈರ್ಯಜ್ಞೈಸ್ತಪೋಭಿರ್ವಾಥವಾ ಹರಿಮ್ ।। 48 ।।
ಜಗದೀಶಂ ಸಮೇಷ್ಯಾಮೋ ನಿತ್ಯಾನಂದಮನಾಮಯಮ್ ।
ಯೋ ಭಾರತಭುವಂ ಪ್ರಾಪ್ಯ ವಿಷ್ಣುಪೂಜಾಪರೋ ಭವೇತ್ ।। 49 ।।
ನ ತಸ್ಯ ಸದೃಶೋಽನ್ಯೋಽಸ್ತಿ ತ್ರಿಷು ಲೋಕೇಷು ನಾರದ ।
ಹರಿಕೀರ್ತನಶೀಲೋ ವಾ ತದ್ಭಕ್ತಾನಾಂ ಪ್ರಿಯೋಽಪಿ ವಾ ।। 50 ।।
ಶುಶ್ರೂಷುರ್ವಾಪಿ ಮಹತಃ ಸ ವಂದ್ಯೋ ದಿವಿಜೈರಪಿ ।
ಹರಿಪೂಜಾರತೋ ನಿತ್ಯಂ ಭಕ್ತಃ ಪೂಜಾರತೋಽಪಿ ವಾ ।। 51 ।।
ಭಕ್ತೋಚ್ಚಿಷ್ಟಾನ್ನಸೇವೀ ಚ ಯಾತಿ ವಿಷ್ಣೋಃ ಪರಂ ಪದಮ್ ।
ನಾರಾಯಣೇತಿ ಕೃಷ್ಣೇತಿ ವಾಸುದೇವೇತಿ ಯೋ ವದೇತ್ ।। 52 ।।
ಅಹಿಂಸಾದಿಪರಃ ಶಾಂತಃ ಸೋಽಪಿ ವಂದ್ಯಃ ಸುರೋತ್ತಮೈಃ ।
ಶಿವೇತಿ ನೀಲಕಂಠೇತಿ ಶಂಕರೇತಿ ಚ ಯಃ ಸ್ಮರೇತ್ ।। 53 ।।
ಸರ್ವಭೂತಹಿತೋ ನಿತ್ಯಂ ಸೋಽಭ್ಯರ್ಚ್ಯೋ ದಿವಿಜೈಃ ಸ್ಮೃತಃ ।
ಗುರುಭಕ್ತಃ ಶಿವಧ್ಯಾನೀ ಸ್ವಾಶ್ರಮಾಚಾರತತ್ಪರಃ ।। 54 ।।
ಅನಸೂಯಃ ಶುಚಿರ್ದಕ್ಷೋ ಯಃ ಸೋಽಪ್ಯರ್ಚ್ಯಃ ಸುರೇಶ್ವರೈಃ ।
ಬ್ರಾಹ್ಮಣಾನಾಂ ಹಿತಕರಃ ಶ್ರದ್ಧಾವಾನ್ವರ್ಣಧರ್ಮಯೋಃ ।। 55 ।।
ವೇದವಾದರತೋ ನಿತ್ಯಂ ಸ ಜ್ಞೇಯಃ ಪಂಕ್ತಿಪಾವನಃ ।
ಅಭೇದದರ್ಶೀ ದೇವೇಶೇ ನಾರಾಯಣಶಿವಾತ್ಮಕೇ ।। 56 ।।
ಸ ವಂದ್ಯೋ ಬ್ರಾಹ್ಮಣೋ ನಿತ್ಯಮಸ್ಮದಾದಿಷು ಕಾ ಕಥಾ ।
ಗೋಷು ಕ್ಷಾಂತೋ ಬ್ರಹ್ಮಚಾರೀ ಪರನಿಂದಾವಿವರ್ಜಿತಃ ।। 57 ।।
ಅಪರಿಗ್ರಹಶೀಲಶ್ಚ ದೇವಪೂಜ್ಯಃ ಸ ನಾರದ ।
ಸ್ತೇಯಾದಿದೋಷವಿಮುಖಃ ಕೃತಜ್ಞಃ ಸತ್ಯವಾಕ್ ಶುಚಿಃ ।। 58 ।।
ಪರೋಪಕಾರನಿರತಃ ಪೂಜನೀಯಃ ಸುರಾಸುರೈಃ ।
ವೇದಾರ್ಥಶ್ರವಣೇ ಬುದ್ಧಿಃ ಪುರಾಣಶ್ರವಣೇ ತಥಾ ।। 59 ।।
ಸತ್ಸಂಗೇಽಪಿ ಚ ಯಸ್ಯಾಸ್ತಿ ಸೋಽಪಿ ವಂದ್ಯಃ ಸುರೋತ್ತಮೈಃ ।
ಏವಮಾದೀನ್ಯನೇಕಾನಿ ಕರ್ಮಾಣಿ ಶ್ರದ್ಧಯಾನ್ವಿತಃ ।। 60 ।।
ಕರೋತಿ ಭಾರತೇ ವರ್ಷೇ ಸ ವಂದ್ಯೋಽಸ್ಮಾಭಿರೇವ ಚ ।
ಏತೇಷ್ವನ್ಯತಮೇನಾಪಿ ನಾತ್ಮಾನಂ ಭಾವಯೇನ್ನರಃ ।। 61 ।।
ಸ ಏವ ದುಷ್ಕೃತಿರ್ಮೂಢಃ ಕೋಽನ್ಯಸ್ತಸ್ಮಾದಚೇತನಃ ।
[60]
ಸಂಪ್ರಾಪ್ಯ ಭಾರತೇ ಜನ್ಮ ಸತ್ಕರ್ಮಸು ಪರಾಙ್ಮುಖಃ ।। 62 ।।
ಪೀಯೂಷಕಲಶಂ ಮುಕ್ತ್ವಾ ವಿಷಭಾಂಡಮುಪಾಶ್ರಿತಃ ।
ಭಾರತದಲ್ಲಿ ಜನ್ಮವನ್ನು ಪಡೆದು ಸತ್ಕರ್ಮಗಳಿಂದ ಪರಾಙ್ಮುಖನಾಗುವವನು ಅಮೃತಕಲಶವನ್ನು ಅನಾದರಿಸಿ ವಿಷಪೂರಿತ ಪಾತ್ರೆಯನ್ನು ಸ್ವೀಕರಿಸುವಂತಹ ಮೂಢನು.
ಶ್ರುತಿಸ್ಮೃತ್ಯುದಿತೈರ್ದ್ಧರ್ಮೈರ್ನಾತ್ಮಾನಂ ಪಾವಯೇತ್ತು ಯಃ ।। 63 ।।
ಸ ಏವಾತ್ಮವಿಘಾತೀ ಸ್ಯಾತ್ಪಾಪಿನಾಮಗ್ರಣೀರ್ಮುನೇ ।
ಮುನೇ! ಶ್ರುತಿ-ಸ್ಮೃತಿಗಳು ವಿಧಿಸುವ ಧರ್ಮಾನುಷ್ಠಾನಮಾಡಿ ತನ್ನನ್ನು ಶುದ್ಧಿಮಾಡಿಕೊಳ್ಳದೇ ಇರುವವನು ಆತ್ಮಘಾತಿಯ ಪಾಪಕ್ಕೆ ಭಾಗಿಯಾಗಿ ಪಾಪಿಗಳಲ್ಲಿಯೇ ಅಗ್ರಣಿಯಾಗುತ್ತಾನೆ.
ಕರ್ಮಭೂಮಿಂ ಸಮಾಸಾದ್ಯ ಯೋ ನ ಧರ್ಮಂ ಸಮಾಚರೇತ್ ।। 64 ।।
ಸ ಚ ಸರ್ವಾಧಮಃ ಪ್ರೋಕ್ತೋ ವೇದವಿದ್ಭಿರ್ಮುನೀಶ್ವರ ।
ಮುನೀಶ್ವರ! ಕರ್ಮಭೂಮಿಯಾದ ಭಾರತವರ್ಷದಲ್ಲಿ ಹುಟ್ಟಿ ಧರ್ಮವನ್ನು ಆಚರಿಸದಿರುವವನು ಸರ್ವಾಧಮನೆಂದು ವೇದವಿದುಗಳು ಹೇಳುತ್ತಾರೆ.
ಶುಭಂ ಕರ್ಮ ಸಮುತ್ಸೃಜ್ಯ ದುಷ್ಕರ್ಮಾಣಿ ಕರೋತಿ ಯಃ ।। 65 ।।
ಕಾಮಧೇನುಂ ಪರಿತ್ಯಜ್ಯ ಅರ್ಕಕ್ಷೀರಂ ಸ ಮಾರ್ಗತಿ ।
ಏವಂ ಭಾರತಭೂಭಾಗಂ ಪ್ರಶಂಸಂತಿ ದಿವೌಕಸಃ ।। 66 ।।
ಶುಭಕರ್ಮಗಳನ್ನು ಬಿಟ್ಟು ದುಷ್ಕರ್ಮಗಳನ್ನು ಮಾಡುವವನು ಕಾಮಧೇನುವನ್ನು ಬಿಟ್ಟು ಎಕ್ಕದ ಹಾಲನ್ನು ಹುಡುಕಿಕೊಂಡು ಹೋಗುವವನಂತೆ ದುಃಖಿಯಾಗುತ್ತಾನೆ. ಇಂತಹ ಭಾರತಭೂಭಾಗವನ್ನು ದಿವೌಕಸರೂ ಪ್ರಶಂಸಿಸುತ್ತಾರೆ.
ಬ್ರಹ್ಮಾದ್ಯಾ ಅಪಿ ವಿಪ್ರೇಂದ್ರ ಸ್ವಭೋಗಕ್ಷಯಭೀರವಃ ।
ತಸ್ಮಾತ್ಪುಣ್ಯತಮಂ ಜ್ಞೇಯಂ ಭಾರತಂ ವರ್ಷಮುತ್ತಮಮ್ ।। 67 ।।
ದೇವಾನಾಂ ದುರ್ಲಭಂ ವಾಪಿ ಸರ್ವಕರ್ಮಫಲಪ್ರದಮ್ ।
ವಿಪ್ರೇಂದ್ರ! ತಮ್ಮ ಭೋಗವು ಕ್ಷಯಿಸೀತೆಂದು ಭಯಪಡುವ ಬ್ರಹ್ಮಾದಿ ದೇವತೆಗಳೂ ಕೂಡ ಈ ಉತ್ತಮ ಭಾರತವರ್ಷವನ್ನು ಪುಣ್ಯತಮವೆಂದು ತಿಳಿದಿದ್ದಾರೆ. ಸರ್ವಕರ್ಮಗಳಿಗೂ ಫಲವನ್ನೀಯುವ ಭಾರತ ದೇಶವು ದೇವತೆಗಳಿಗೂ ದುರ್ಲಭವು.
ಅಸ್ಮಿನ್ಪುಣ್ಯೇ ಚ ಭೂಭಾಗೇ ಯಸ್ತು ಸತ್ಕರ್ಮಸೂದ್ಯತಃ ।। 68 ।।
ನ ತಸ್ಯ ಸದೃಶಂ ಕಶ್ಚಿತ್ರಿಷು ಲೋಕೇಶು ವಿದ್ಯತೇ ।
ಈ ಪುಣ್ಯ ಭೂಭಾಗದಲ್ಲಿ ಯಾರು ಸತ್ಕರ್ಮಗಳಲ್ಲಿ ತೊಡಗಿರುತ್ತಾನೋ ಅವನ ಸದೃಶನಾದವನು ಮೂರು ಲೋಕಗಳಲ್ಲಿ ಬೇರೆ ಯಾರೂ ಸಿಗುವುದಿಲ್ಲ.
ಅಸ್ಮಿನ್ಜಾತೋ ನರೋ ಯಸ್ತು ಸ್ವಕರ್ಮಕ್ಷಯಣೋದ್ಯತಃ ।। 69 ।।
ನರರೂಪಪರಿಚ್ಛಿನ್ನಃ ಸ ಹರಿರ್ನಾತ್ರ ಸಂಶಯಃ ।
ಈ ಭರತವರ್ಷದಲ್ಲಿ ಹುಟ್ಟಿದ ಯಾವ ನರನು ಐಹಿಕ ಫಲಾಪೇಕ್ಷೆಯಿಲ್ಲದೇ ಸ್ವಕರ್ಮಾನುಷ್ಠಾನದಲ್ಲಿ ತೊಡಗಿರುತ್ತಾನೋ ಅವನು ನರವೇಶದ ಹರಿ ಎನ್ನುವುದರಲ್ಲಿ ಸಂಶಯವಿಲ್ಲ.
ಪರಂ ಲೋಕಫಲಂ ಪ್ರೇಪ್ಸುಃ ಕುರ್ಯಾತ್ಕರ್ಮಾಣ್ಯತಂದ್ರಿತಃ ।। 70 ।।
ನಿವೇದ್ಯ ಹರಯೇ ಭಕ್ತ್ಯಾ ತತ್ಫಲಂ ಹ್ಯಕ್ಷಯಂ ಸ್ಮೃತಮ್ ।
ವಿರಾಗೀ ಚೇತ್ಕರ್ಮಫಲೇ ಸ್ಪೃಹಾಂ ಕಾಂಚಿನ್ನ ಕಾರಯೇತ್ ।। 71 ।।
ಅರ್ಪಯೇತ್ಸ್ವಕೃತಂ ಕರ್ಮ ಪ್ರೀಯತಾಮಿತಿ ಮೇ ಹರಿಃ ।
ಆಬ್ರಹ್ಮಭುವನಾಲ್ಲೋಕಾಃ ಪುನರುತ್ಪತ್ತಿದಾಯಕಾಃ ।। 72 ।।
ಫಲಾಗೃಧ್ರುಃ ಕರ್ಮಣಾಂ ತತ್ಪ್ರಾಪ್ನೋತಿ ಪರಮಂ ಪದಮ್ ।
ವೇದೋದಿತಾನಿ ಕರ್ಮಾಣಿ ಕುರ್ಯಾದೀಶ್ವರತುಷ್ಟಯೇ ।। 73 ।।
ಯಥಾಶ್ರಮಂ ತ್ಯಕ್ತಕಾಮಃ ಪ್ರಾಪ್ನೋತಿ ಪದಮವ್ಯಯಮ್ ।
ನಿಷ್ಕಾಮೋ ವಾ ಸಕಾಮೋ ವಾ ಕುರ್ಯಾತ್ಕರ್ಮ ಯಥಾವಿಧಿ ।। 74 ।।
ಸ್ವಾಶ್ರಮಾಚಾರಶೂನ್ಯಶ್ಚ ಪತಿತಃ ಪ್ರೋಚ್ಯತೇ ಬುಧೈಃ ।
ವೈಕುಂಠಾದಿ ಪರಲೋಕದ ಫಲವನ್ನು ಅಪೇಕ್ಷಿಸುವವನು ಆಲಸ್ಯವಿಲ್ಲದೇ ವೇದೋಕ್ತ ಕರ್ಮಗಳನ್ನು ಮಾಡಿ ಭಕ್ತಿಯಿಂದ ಅದರ ಫಲವನ್ನು ಹರಿಗೆ ಸಮರ್ಪಿಸಿದರೆ ಆ ಫಲವು ಅಕ್ಷಯವಾಗುವುದು ಎಂಬ ಸ್ಮೃತಿವಾಕ್ಯವಿದೆ. ವಿರಾಗಿಯಾದವನು ಕರ್ಮಫಲದಲ್ಲಿ ಆಸಕ್ತಿಯನ್ನಿಟ್ಟುಕೊಂಡು ಏನನ್ನೂ ಮಾಡಬಾರದು. ಮಾಡಿದ ಕರ್ಮಗಳೆಲ್ಲವನ್ನೂ ಹರಿಯ ಪ್ರೀತ್ಯರ್ಥವಾಗಿ ಎಂದು ಅವನಿಗೇ ಅರ್ಪಿಸಬೇಕು. ಬ್ರಹ್ಮಲೋಕಪರ್ಯಂತವಾಗಿರುವ ಲೋಕಗಳೆಲ್ಲವೂ ಪುನರ್ಜನ್ಮಗಳನ್ನು ನೀಡುತ್ತವೆ. ಆದರೆ ಫಲಾಪೇಕ್ಷೆಯಿಲ್ಲದೇ ಕರ್ಮವನ್ನು ಮಾಡುವವರು ಪರಮಪದವಿಯನ್ನು ಪಡೆಯುತ್ತಾರೆ.[7] ವೇದದಲ್ಲಿ ಹೇಳಿದ ಕರ್ಮಗಳನ್ನು ಈಶ್ವರನ ಪ್ರೀತ್ಯರ್ಥವಾಗಿ ಮಾಡಬೇಕು. ಆಶ್ರಮಕ್ಕನುಗುಣವಾಗಿ ಕಾಮಗಳನ್ನು ತ್ಯಜಿಸುವವನು ಅವ್ಯಯ ಪದವಿಯನ್ನು ಪಡೆಯುತ್ತಾನೆ. ನಿಷ್ಕಾಮದಿಂದಾಗಲೀ ಅಥವಾ ಸಕಾಮದಿಂದಾಗಲೀ ಕರ್ಮಗಳನ್ನು ಯಥಾವಿಧಿಯಾಗಿ ಮಾಡಬೇಕು. ತನ್ನ ವರ್ಣಾಶ್ರಮಧರ್ಮಗಳನ್ನು ಬಿಟ್ಟವನನ್ನು ಜ್ಞಾನಿಗಳು ಪತಿತನೆಂದು ಹೇಳಿದ್ದಾರೆ.
ಸದಾಚಾರಪರೋ ವಿಪ್ರೋ ವರ್ಧತೇ ಬ್ರಹ್ಮತೇಜಸಾ ।। 75 ।।
ತಸ್ಯ ವಿಷ್ಣುಶ್ಚ ತುಷ್ಟಃ ಸ್ಯಾದ್ಭಕ್ತಿಯುಕ್ತಸ್ಯ ನಾರದ ।
ಭಾರತೇ ಜನ್ಮ ಸಂಪ್ರಾಪ್ಯ ನಾತ್ಮಾನಂ ತಾರಯೇತ್ತು ಯಃ ।। 76 ।।
ಪಚ್ಯತೇ ನಿರಯೇ ಘೋರೇ ಸ ತ್ವಾಚಂದ್ರಾರ್ಕತಾರಕಮ್ ।
ಸದಾಚಾರಪರನಾದ ವಿಪ್ರನಿಗೆ ಬ್ರಹ್ಮತೇಜಸ್ಸು ವೃದ್ಧಿಯಾಗುತ್ತದೆ. ನಾರದ! ಭಕ್ತಿಯುತನಾದ ಅವನ ವಿಷಯದಲ್ಲಿ ವಿಷ್ಣುವೂ ಪ್ರಸನ್ನನಾಗುತ್ತಾನೆ. ಭಾರತಭೂಮಿಯಲ್ಲಿ ಜನ್ಮವನ್ನು ಪಡೆದ ಯಾರು ತನ್ನನ್ನು ತಾನು ಉದ್ಧರಿಸಿಕೊಳ್ಳುವುದಿಲ್ಲವೋ ಅವನು ನಕ್ಷತ್ರ-ಚಂದ್ರ-ಸೂರ್ಯರಿರುವ ವರೆಗೆ ಘೋರ ನರಕದಲ್ಲಿ ಬೇಯುತ್ತಾರೆ.
ವಾಸದೇವಪರೋ ಧರ್ಮೋ ವಾಸುದೇವಪರಂ ತಪಃ ।। 77 ।।
ವಾಸುದೇವಪರಂ ಜ್ಞಾನಂ ವಾಸುದೇವಪರಾ ಗತಿಃ ।
ವಾಸುದೇವಾತ್ಮಕಂ ಸರ್ವಂ ಜಗತ್ಸ್ಥಾವರಜಂಗಮಮ್ ।
ಆಬ್ರಹ್ಮಸ್ತಂಬಪರ್ಯಂತಂ ತಸ್ಮಾದನ್ಯಂ ನ ವಿದ್ಯತೇ ।। 78 ।।
ಸ ಏವ ಧಾತಾ ತ್ರಿಪುರಾಂತಕಶ್ಚ
ಸ ಏವ ದೇವಾಸುರಯಕ್ಷರೂಪಃ ।
ಸ ಏವ ಬ್ರಹ್ಮಾಂಡಮಿದಂ ತತೋಽನ್ಯತ್
ನ ಕಿಂಚಿದಸ್ತಿ ವ್ಯತಿರಿಕ್ತರೂಪಮ್ ।। 79 ।।
ಯಸ್ಮಾತ್ಪರಂ ನಾಪರಮಸ್ತಿ ಕಿಂಚಿತ್
ಯಸ್ಮಾದಣೀಯಾನ್ನ ತಥಾ ಮಹೀಯಾನ್ ।
ವ್ಯಾಪ್ತಂ ಹಿ ತೇನೇದಮಿದಂ ವಿಚಿತ್ರಂ
ತಂ ದೇವದೇವಂ ಪ್ರಣಮೇತ್ಸುಖಾರ್ಥೀ ।। 80 ।।
ವಾಸುದೇವನ ಪ್ರೀತ್ಯರ್ಥವಾಗಿ ನಡೆದುಕೊಳ್ಳುವುದೇ ಧರ್ಮ. ವಾಸುದೇವನನ್ನು ಧ್ಯಾನಿಸುವುದುದೇ ತಪಸ್ಸು. ವಾಸುದೇವನ ಮಹಾತ್ಮೆಯನ್ನು ತಿಳಿಯುವುದೇ ಜ್ಞಾನವು. ಈ ಧರ್ಮ-ತಪಸ್ಸು-ಜ್ಞಾನಗಳಿಂದ ಹೊಂದಬೇಕಾದ ಸ್ಥಾನವೂ ವಾಸುದೇವನೇ ಆಗಿರುತ್ತಾನೆ. ಚತುರ್ಮುಖ ಬ್ರಹ್ಮನಿಂದ ಹಿಡಿದು ಅಧಮ ಜೀವಿಯವರೆಗಿನ ಚೇತನ ಸಮುದಾಯ ಮತ್ತು ಚರಾಚರಾತ್ಮ್ಕಾದ ಸಕಲ ಜಗತ್ತು ವಾಸುದೇವಾತ್ಮಕವು. ಅವನಿಂತ ಬೇರೆಯಾದುದು ಯಾವುದೂ ಇಲ್ಲ. ಅವನೇ ಧಾತಾ ಬ್ರಹ್ಮ, ತ್ರಿಪುರಾಂತಕ ಶಿವ, ಅವನೇ ದೇವಾಸುರಯಕ್ಷರೂಪನು. ಅವನೇ ಈ ಬ್ರಹ್ಮಾಂಡವು. ಅವನಿಗಿಂತ ಬೇರೆಯಾದ ಸ್ವತಂತ್ರವಸ್ತುವು ಯಾವುದೂ ಇಲ್ಲ. ಅವನೊಬ್ಬನೇ ಸ್ವತಂತ್ರನಾಗಿ ಎಲ್ಲ ಪದಾರ್ಥಗಳಲ್ಲಿ ಅಂತರ್ಯಾಮಿಯಾಗಿರುವುದರಿಂದ ಅವನೇ ಜಗತ್ತು. ಯಾರಿಗಿಂತಲೂ ಉತ್ತಮವಾದ ಮತ್ತೊಂದು ವಸ್ತುವಿಲ್ಲವೋ, ಯಾರಿಗಿಂತಲೂ ಸೂಕ್ಷ್ಮವಾದ ಮತ್ತು ದೊಡ್ಡದಾದ ಮತ್ತೊಂದು ವಸ್ತುವಿಲ್ಲವೋ ಆ ಭಗವಂತನಿಂದ ಈ ಪ್ರಪಂಚವು ವ್ಯಾಪಿಸಲ್ಪಟ್ಟಿದೆ. ಶಾಶ್ವತ ಸುಖವನ್ನು ಬಯಸುವವನು ದೇವತೆಗಳಿಗೊಡೆಯನಾದ, ವಿಲಕ್ಷಣನಾದ ಆ ಪರಮಾತ್ಮನನ್ನು ನಮಸ್ಕರಿಸಬೇಕು.”
ಇತಿ ಶ್ರೀಬೃಹನ್ನಾರದೀಯಪುರಾಣೇ ಪೂರ್ವಭಾಗೇ ಪ್ರಥಮಪಾದೇ ಸೃಷ್ಟಿ ಭರತಖಂಡಪ್ರಾಶಸ್ತ್ಯ ಭೂಗೋಲಾನಾಂ ವರ್ಣನಂ ನಾಮ ತೃತೀಯೋಽಧ್ಯಾಯಃ ।।
[1] ವಾಮಾಂಗಾದ್ವಿಷ್ಣುಮವ್ಯಯಮ್ ಎಂಬ ಪಾಠಾಂತರವಿದೆ.
[2] ದೋಷರಹಿತ.
[3] ವಿಶ್ವಂ ಎಂಬ ಪಾಠಾಂತರವಿದೆ.
[4] Vishnu’s supreme Shakti (Energy) stimulating the process of the universe is both positive and negative (existent and non-existent) in nature, and is described as “Vidya-avidya” (Spiritucal Knowledge and ignorance or Nescience).
[5] When the universe appears as distinct and separate from Great Vishnu, that is the effect of Nescience which is the cause of misery.
[6] O Narada, when the conditioning factors such as the knower, the knowable etc. fuse together, and cease to exist, the knowledge of the oneness of everything (in the universe) i.e., the existence of only one entity, viz., Brahman, is called Vidya (spiritual knowledge).
[7] ಉತ್ತಮ ಲೋಕಗಳನ್ನು ಬಯಸಿ ವೇದೋಕ್ತ ಕರ್ಮಮಾಡುವವರಿಗೆ ದೊರಕುವ ಬ್ರಹ್ಮಲೋಕಪರ್ಯಂತವಾದ ಲೋಕಗಳು ಶಾಶ್ವತವಲ್ಲ. ಅಲ್ಲಿ ಹೋದವರ ಪುಣ್ಯವು ಕ್ಷೀಣವಾದ ಕೂಡಲೇ ಅವರಿಗೆ ಭೂಮಿಯಲ್ಲಿ ಪುನಃ ಜನ್ಮತಾಳಬೇಕಾಗುತ್ತದೆ. ಆದ್ದರಿಂದ ಅಂತಹ ಲೋಕಪ್ರಾಪ್ತಿಯು ಮಹಾಫಲವೇನೂ ಅಲ್ಲ. ಆದರೆ ಫಲಾಪೇಕ್ಷೆಯಿಲ್ಲದೇ ವೇದೋಕ್ತ ಕರ್ಮಗಳನ್ನು ಮಾಡುವವರಿಗೆ ವೈಕುಂಠಾದಿ ವಿಷ್ಣುಲೋಕವು ಲಭಿಸುತ್ತದೆ. ಅಲ್ಲಿ ಪ್ರವೇಶಮಾಡಿದವರಿಗೆ ಪುನರ್ಜನ್ಮವಿಲ್ಲ.