Virata Parva: Chapter 9

ವಿರಾಟ ಪರ್ವ: ವೈರಾಟ ಪರ್ವ 

ವಿರಾಟನ ಆಸ್ಥಾನದಲ್ಲಿ ಸಹದೇವನ ಆಗಮನ

ಸಹದೇವನು ವಿರಾಟನಲ್ಲಿ ಗೋಪಾಲಕನಾಗಿ ನೇಮಕಗೊಂಡಿದುದು (೧-೧೫).

Image result for sahadev in virata04009001 ವೈಶಂಪಾಯನ ಉವಾಚ|

04009001a ಸಹದೇವೋಽಪಿ ಗೋಪಾನಾಂ ಕೃತ್ವಾ ವೇಷಮನುತ್ತಮಂ|

04009001c ಭಾಷಾಂ ಚೈಷಾಂ ಸಮಾಸ್ಥಾಯ ವಿರಾಟಮುಪಯಾದಥ||

ವೈಶಂಪಾಯನನು ಹೇಳಿದನು: “ಸಹದೇವನೂ ಕೂಡ ಅತ್ಯುತ್ತಮವಾಗಿ ಗೋಪಾಲಕನ ವೇಷವನ್ನು ಮಾಡಿಕೊಂಡು ಅವರದೇ ಭಾಷೆಯನ್ನು ಬಳಸುತ್ತಾ ವಿರಾಟನ ಬಳಿ ಬಂದನು.

04009002a ತಮಾಯಾಂತಮಭಿಪ್ರೇಕ್ಷ್ಯ ಭ್ರಾಜಮಾನಂ ನರರ್ಷಭಂ|

04009002c ಸಮುಪಸ್ಥಾಯ ವೈ ರಾಜಾ ಪಪ್ರಚ್ಛ ಕುರುನಂದನಂ||

ಬಂದಿರುವ ಆ ಹೊಳೆಯುತ್ತಿರುವ ನರರ್ಷಭ ಕುರುನಂದನನನ್ನು ನೋಡಿ ರಾಜನು ಅವನ ಹತ್ತಿರ ಹೋಗಿ ಕೇಳಿದನು:

04009003a ಕಸ್ಯ ವಾ ತ್ವಂ ಕುತೋ ವಾ ತ್ವಂ ಕಿಂ ವಾ ತಾತ ಚಿಕೀರ್ಷಸಿ|

04009003c ನ ಹಿ ಮೇ ದೃಷ್ಟಪೂರ್ವಸ್ತ್ವಂ ತತ್ತ್ವಂ ಬ್ರೂಹಿ ನರರ್ಷಭ||

“ಮಗೂ! ನೀನು ಯಾರವನು? ಎಲ್ಲಿಂದ ಬಂದೆ? ಏನು ಮಾಡುತ್ತೀಯೆ? ನರರ್ಷಭ! ನಿನ್ನನ್ನು ನಾನು ಈ ಹಿಂದೆ ನೋಡಿದಂತಿಲ್ಲ. ಸತ್ಯವನ್ನು ಹೇಳು.”

04009004a ಸ ಪ್ರಾಪ್ಯ ರಾಜಾನಮಮಿತ್ರತಾಪನಸ್|

         ತತೋಽಬ್ರವೀನ್ಮೇಘಮಹೌಘನಿಹ್ಸ್ವನಃ|

04009004c ವೈಶ್ಯೋಽಸ್ಮಿ ನಾಂನಾಹಮರಿಷ್ಟನೇಮಿರ್|

         ಗೋಸಂಖ್ಯ ಆಸಂ ಕುರುಪುಂಗವಾನಾಂ||

ಆ ಅಮಿತ್ರತಾಪನನು ರಾಜನ ಬಳಿ ಬಂದು ಮಹಾಮೇಘದ ಗುಡುಗಿನಂತಿರುವ ಧ್ವನಿಯಲ್ಲಿ ನುಡಿದನು: “ನಾನು ಅರಿಷ್ಟನೇಮಿ ಎಂಬ ಹೆಸರಿನ ವೈಶ್ಯ. ಗುರುಪುಂಗವನ ಗೋಶಾಸ್ತ್ರಜ್ಞನಾಗಿದ್ದೆ.

04009005a ವಸ್ತುಂ ತ್ವಯೀಚ್ಛಾಮಿ ವಿಶಾಂ ವರಿಷ್ಠ|

         ತಾನ್ರಾಜಸಿಂಹಾನ್ನ ಹಿ ವೇದ್ಮಿ ಪಾರ್ಥಾನ್|

04009005c ನ ಶಕ್ಯತೇ ಜೀವಿತುಮನ್ಯಕರ್ಮಣಾ|

         ನ ಚ ತ್ವದನ್ಯೋ ಮಮ ರೋಚತೇ ನೃಪಃ||

ವರಿಷ್ಠ! ನಿನ್ನಲ್ಲಿ ಉಳಿದುಕೊಳ್ಳಲು ಬಯಸುತ್ತೇನೆ. ಆ ರಾಜಸಿಂಹ ಪಾರ್ಥರು ಎಲ್ಲಿದ್ದಾರೆಂದು ತಿಳಿಯೆನು. ಬೇರೆ ಕೆಲಸಗಳನ್ನು ಮಾಡಿಕೊಂಡು ನಾನು ಜೀವಿಸಲಾರೆ. ರಾಜ! ನೀನಲ್ಲದೇ ಬೇರೆಯವರಲ್ಲಿ ನನಗೆ ಇಷ್ಟವಿಲ್ಲ.”

04009006 ವಿರಾಟ ಉವಾಚ|

04009006a ತ್ವಂ ಬ್ರಾಹ್ಮಣೋ ಯದಿ ವಾ ಕ್ಷತ್ರಿಯೋಽಸಿ|

         ಸಮುದ್ರನೇಮೀಶ್ವರರೂಪವಾನಸಿ|

04009006c ಆಚಕ್ಷ್ವ ಮೇ ತತ್ತ್ವಮಮಿತ್ರಕರ್ಶನ|

         ನ ವೈಶ್ಯಕರ್ಮ ತ್ವಯಿ ವಿದ್ಯತೇ ಸಮಂ||

ವಿರಾಟನು ಹೇಳಿದನು: “ನೀನು ಬ್ರಾಹ್ಮಣ ಅಥವಾ ಕ್ಷತ್ರಿಯನಾಗಿರುವೆ. ಇಡೀ ಭೂಮಿಯ ಒಡೆಯನಂಥ ರೂಪವನ್ನು ಹೊಂದಿರುವೆ. ಅಮಿತ್ರಕರ್ಶನ! ನನಗೆ ಸತ್ಯವೇನೆಂಬುದನ್ನು ಹೇಳು. ಈ ವೈಶ್ಯರ ಕೆಲಸವು ನಿನಗೆ ಸರಿಯಾಗಿ ಕಾಣುವುದಿಲ್ಲ.

04009007a ಕಸ್ಯಾಸಿ ರಾಜ್ಞೋ ವಿಷಯಾದಿಹಾಗತಃ|

         ಕಿಂ ಚಾಪಿ ಶಿಲ್ಪಂ ತವ ವಿದ್ಯತೇ ಕೃತಂ|

04009007c ಕಥಂ ತ್ವಮಸ್ಮಾಸು ನಿವತ್ಸ್ಯಸೇ ಸದಾ|

         ವದಸ್ವ ಕಿಂ ಚಾಪಿ ತವೇಹ ವೇತನಂ||

ಯಾವ ರಾಜನ ನಾಡಿನಿಂದ ಇಲ್ಲಿಗೆ ಬಂದಿರುವೆ? ನಿನಗೆ ಯಾವ ಕೆಲಸದಲ್ಲಿ ಕುಶಲತೆ ಇದೆ? ನೀನು ನಮ್ಮಲ್ಲಿ ಹೇಗೆ ಸದಾ ವಾಸಿಸುವೆ? ನಿನ್ನ ಸಂಬಳ ಏನೆಂಬುದನ್ನೂ ಹೇಳು.”

04009008 ಸಹದೇವ ಉವಾಚ|

04009008a ಪಂಚಾನಾಂ ಪಾಂಡುಪುತ್ರಾಣಾಂ ಜ್ಯೇಷ್ಠೋ ರಾಜಾ ಯುಧಿಷ್ಠಿರಃ|

04009008c ತಸ್ಯಾಷ್ಟಶತಸಾಹಸ್ರಾ ಗವಾಂ ವರ್ಗಾಃ ಶತಂ ಶತಾಃ||

04009009a ಅಪರೇ ದಶಸಾಹಸ್ರಾ ದ್ವಿಸ್ತಾವಂತಸ್ತಥಾಪರೇ|

04009009c ತೇಷಾಂ ಗೋಸಂಖ್ಯ ಆಸಂ ವೈ ತಂತಿಪಾಲೇತಿ ಮಾಂ ವಿದುಃ||

ಸಹದೇವನು ಹೇಳಿದನು: “ಐವರು ಪಾಂಡುಪುತ್ರರಲ್ಲಿ ರಾಜಾ ಯುಧಿಷ್ಠಿರನು ಹಿರಿಯವನು. ಅವನಲ್ಲಿ ನೂರುನೂರರ ಗುಂಪಿನಂತೆ ಎಂಟು ಲಕ್ಷ ಹಸುಗಳಿದ್ದವು. ಇನ್ನೊಂದರಲ್ಲಿ ಒಂದು ಲಕ್ಷ, ಮತ್ತೊಂದರಲ್ಲಿ ಅದೇ ರೀತಿ ಎರಡು ಲಕ್ಷ ಹಸುಗಳಿದ್ದವು. ನಾನು ಅವುಗಳ ಗೋಶಾಸ್ತ್ರಜ್ಞನಾಗಿದ್ದೆ. ನನ್ನನ್ನು ತಂತಿಪಾಲನೆಂದು ಕರೆಯುತ್ತಿದ್ದರು.

04009010a ಭೂತಂ ಭವ್ಯಂ ಭವಿಷ್ಯಚ್ಚ ಯಚ್ಚ ಸಂಖ್ಯಾಗತಂ ಕ್ವ ಚಿತ್|

04009010c ನ ಮೇಽಸ್ತ್ಯವಿದಿತಂ ಕಿಂ ಚಿತ್ಸಮಂತಾದ್ದಶಯೋಜನಂ||

ಸುತ್ತ ಹತ್ತು ಯೋಜನೆಯೊಳಗೆ ನಡೆದದ್ದು, ನಡೆಯುತ್ತಿರುವುದು, ನಡೆಯಬಹುದಾದದ್ದು ಮತ್ತು ಸಂಖ್ಯೆಯಾಗಲೀ ನನಗೆ ತಿಳಿಯದೇ ಇದ್ದುದು ಯಾವುದೂ ಇಲ್ಲ.

04009011a ಗುಣಾಃ ಸುವಿದಿತಾ ಹ್ಯಾಸನ್ಮಮ ತಸ್ಯ ಮಹಾತ್ಮನಃ|

04009011c ಆಸೀಚ್ಚ ಸ ಮಯಾ ತುಷ್ಟಃ ಕುರುರಾಜೋ ಯುಧಿಷ್ಠಿರಃ||

ಆ ಮಹಾತ್ಮನಿಗೆ ನನ್ನ ಗುಣಗಳು ಚೆನ್ನಾಗಿ ತಿಳಿದಿದ್ದವು. ಕುರುರಾಜ ಯುಧಿಷ್ಠಿರನು ನನ್ನಿಂದ ಸಂತುಷ್ಟನಾಗಿದ್ದನು.

04009012a ಕ್ಷಿಪ್ರಂ ಹಿ ಗಾವೋ ಬಹುಲಾ ಭವಂತಿ|

         ನ ತಾಸು ರೋಗೋ ಭವತೀಹ ಕಶ್ಚಿತ್|

04009012c ತೈಸ್ತೈರುಪಾಯೈರ್ವಿದಿತಂ ಮಯೈತದ್|

         ಏತಾನಿ ಶಿಲ್ಪಾನಿ ಮಯಿ ಸ್ಥಿತಾನಿ||

ಬಹುಬೇಗ ಗೋವುಗಳು ಹೆಚ್ಚಾಗುವಂತೆ ಮತ್ತು ಅವುಗಳಿಗೆ ಯಾವುದೇ ರೀತಿಯ ರೋಗಗಳು ಬಾರದಂತೆ ಮಾಡುವ ಉಪಾಯಗಳನ್ನು ನಾನು ಬಲ್ಲೆ. ಈ ಕೌಶಲಗಳು ನನ್ನಲ್ಲಿವೆ.

04009013a ವೃಷಭಾಂಶ್ಚಾಪಿ ಜಾನಾಮಿ ರಾಜನ್ಪೂಜಿತಲಕ್ಷಣಾನ್|

04009013c ಯೇಷಾಂ ಮೂತ್ರಮುಪಾಘ್ರಾಯ ಅಪಿ ವಂಧ್ಯಾ ಪ್ರಸೂಯತೇ||

ರಾಜನ್! ಯಾವಹೋರಿಗಳ ಮೂತ್ರವನ್ನು ಮೂಸಿ ಬಂಜೆಹಸುಗಳೂ ಕೂಡ ಈಯುತ್ತವೋ ಅಂಥಹ ಶ್ರೇಷ್ಠ ಹೋರಿಗಳನ್ನೂ ಕೂಡ ಗುರುತಿಸಬಲ್ಲೆ.”

04009014 ವಿರಾಟ ಉವಾಚ|

04009014a ಶತಂ ಸಹಸ್ರಾಣಿ ಸಮಾಹಿತಾನಿ|

         ವರ್ಣಸ್ಯ ವರ್ಣಸ್ಯ ವಿನಿಶ್ಚಿತಾ ಗುಣೈಃ|

04009014c ಪಶೂನ್ಸಪಾಲಾನ್ಭವತೇ ದದಾಮ್ಯಹಂ|

         ತ್ವದಾಶ್ರಯಾ ಮೇ ಪಶವೋ ಭವಂತ್ವಿಹ||

ವಿರಾಟನು ಹೇಳಿದನು: “ಬೇರೆ ಬೇರೆ ಥಳಿಗಳ ಗುಣಗಳಿಂದೊಡಗೂಡಿದ ನೂರು ಸಾವಿರ ಗೋವುಗಳು ನನ್ನಲ್ಲಿವೆ. ಆ ಪಶುಗಳನ್ನು ಅವುಗಳ ಪಾಲಕರೊಡನೆ ನಿನಗೊಪ್ಪಿಸುತ್ತಿದ್ದೇನೆ. ಇನ್ನು ನನ್ನ ಹಸುಗಳು ನಿನ್ನ ಆಶ್ರಯದಲ್ಲಿರಲಿ.””

04009015 ವೈಶಂಪಾಯನ ಉವಾಚ|

04009015a ತಥಾ ಸ ರಾಜ್ಞೋಽವಿದಿತೋ ವಿಶಾಂ ಪತೇ|

         ಉವಾಸ ತತ್ರೈವ ಸುಖಂ ನರೇಶ್ವರಃ|

04009015c ನ ಚೈನಮನ್ಯೇಽಪಿ ವಿದುಃ ಕಥಂ ಚನ|

         ಪ್ರಾದಾಚ್ಚ ತಸ್ಮೈ ಭರಣಂ ಯಥೇಪ್ಸಿತಂ||

ವೈಶಂಪಾಯನನು ಹೇಳಿದನು: “ವಿಶಾಂಪತೇ! ಹಾಗೆ ಆ ನರೇಶ್ವರನು ರಾಜನಿಗೆ ಗುರುತು ಸಿಗದಂತೆ ಅಲ್ಲಿಯೇ ಸುಖವಾಗಿ ವಾಸಿಸುತ್ತಿದ್ದನು. ಬೇರೆ ಯಾರೂ ಕೂಡ ಅವನನ್ನು ಯಾವರೀತಿಯಿಂದಲೂ ಗುರುತಿಸಲಿಲ್ಲ. ಅವನು ಬಯಸಿದಷ್ಟು ಭತ್ಯವು ಅವನಿಗೆ ದೊರೆಯುತ್ತಿತ್ತು.”

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ಸಹದೇವಪ್ರವೇಶೋ ನಾಮ ನವಮೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ಸಹದೇವಪ್ರವೇಶವೆನ್ನುವ ಒಂಭತ್ತನೆಯ ಅಧ್ಯಾಯವು.

Related image

Comments are closed.