Udyoga Parva: Chapter 62

ಉದ್ಯೋಗ ಪರ್ವ: ಯಾನಸಂಧಿ ಪರ್ವ

೬೨

ವಿದುರನ ಸಲಹೆ

“ಎಲ್ಲರೂ ಸಮಜಾತೀಯರಾಗಿದ್ದೇವೆ. ಎಲ್ಲರೂ ಮನುಷ್ಯ ಯೋನಿಯಲ್ಲಿಯೇ ಹುಟ್ಟಿದ್ದೇವೆ. ಹೀಗಿರುವಾಗ ಪಿತಾಮಹನು ಪಾರ್ಥರಿಗೇ ವಿಜಯವೆಂದು ಹೇಗೆ ಹೇಳುತ್ತಾನೆ?” ಎಂದು ದುರ್ಯೋಧನನು ಪ್ರಶ್ನಿಸಲು (೧-೫), ವಿದುರನು ದಾಯಾದಿಗಳು ಹೊಡೆದಾಡಬಾರದೆಂದು ಹಕ್ಕಿಹಿಡಿಯುವವನ (೬-೧೯) ಮತ್ತು ಗಿರಿಯಲ್ಲೊಮ್ಮೆ ಕಂಡಿದುದರ ಉದಾಹರಣೆಯನ್ನಿತ್ತು (೨೦-೩೧) ಉಪದೇಶಿಸಿದುದು.

05062001 ದುರ್ಯೋಧನ ಉವಾಚ|

05062001a ಸದೃಶಾನಾಂ ಮನುಷ್ಯೇಷು ಸರ್ವೇಷಾಂ ತುಲ್ಯಜನ್ಮನಾಂ|

05062001c ಕಥಮೇಕಾಂತತಸ್ತೇಷಾಂ ಪಾರ್ಥಾನಾಂ ಮನ್ಯಸೇ ಜಯಂ||

ದುರ್ಯೋಧನನು ಹೇಳಿದನು: “ಮನುಷ್ಯರ ಸದೃಶರಾಗಿರುವ, ಜನ್ಮದಲ್ಲಿ ಎಲ್ಲರ ಸಮನಾಗಿರುವ ಪಾಂಡವರು ಮಾತ್ರ ಜಯವನ್ನು ಪಡೆಯುತ್ತಾರೆ ಎಂದು ಏಕೆ ನಂಬುತ್ತೀಯೆ?

05062002a ಸರ್ವೇ ಸ್ಮ ಸಮಜಾತೀಯಾಃ ಸರ್ವೇ ಮಾನುಷಯೋನಯಃ|

05062002c ಪಿತಾಮಹ ವಿಜಾನೀಷೇ ಪಾರ್ಥೇಷು ವಿಜಯಂ ಕಥಂ||

ಎಲ್ಲರೂ ಸಮಜಾತೀಯರಾಗಿದ್ದೇವೆ. ಎಲ್ಲರೂ ಮನುಷ್ಯ ಯೋನಿಯಲ್ಲಿಯೇ ಹುಟ್ಟಿದ್ದೇವೆ. ಹೀಗಿರುವಾಗ ಪಿತಾಮಹನು ಪಾರ್ಥರಿಗೇ ವಿಜಯವೆಂದು ಹೇಗೆ ಹೇಳುತ್ತಾನೆ?

05062003a ನಾಹಂ ಭವತಿ ನ ದ್ರೋಣೇ ನ ಕೃಪೇ ನ ಚ ಬಾಹ್ಲಿಕೇ|

05062003c ಅನ್ಯೇಷು ಚ ನರೇಂದ್ರೇಷು ಪರಾಕ್ರಮ್ಯ ಸಮಾರಭೇ||

ನನ್ನ ಪರಾಕ್ರಮವು ನಿನ್ನ, ದ್ರೋಣನ, ಕೃಪ, ಬಾಹ್ಲೀಕ, ಮತ್ತು ಇತರ ನರೇಂದ್ರರ ಪರಾಕ್ರಮವನ್ನು ಆಧಾರಿಸಿಲ್ಲ.

05062004a ಅಹಂ ವೈಕರ್ತನಃ ಕರ್ಣೋ ಭ್ರಾತಾ ದುಃಶಾಸನಶ್ಚ ಮೇ|

05062004c ಪಾಂಡವಾನ್ಸಮರೇ ಪಂಚ ಹನಿಷ್ಯಾಮಃ ಶಿತೈಃ ಶರೈಃ||

ನಾನು, ವೈಕರ್ತನ ಕರ್ಣ, ಮತ್ತು ನನ್ನ ತಮ್ಮ ದುಃಶಾಸನರು ಸಮರದಲ್ಲಿ ಪಂಚ ಪಾಂಡವರನ್ನು ಹರಿತ ಬಾಣಗಳಿಂದ ಸಂಹರಿಸುತ್ತೇವೆ.

05062005a ತತೋ ರಾಜನ್ಮಹಾಯಜ್ಞೈರ್ವಿವಿಧೈರ್ಭೂರಿದಕ್ಷಿಣೈಃ|

05062005c ಬ್ರಾಹ್ಮಣಾಂಸ್ತರ್ಪಯಿಷ್ಯಾಮಿ ಗೋಭಿರಶ್ವೈರ್ಧನೇನ ಚ||

ರಾಜನ್! ಆಗ ಮಹಾ ಯಜ್ಞಗಳಿಂದ, ವಿವಿಧ ಭೂರಿದಕ್ಷಿಣೆಗಳಿಂದ, ಗೋ-ಐಶ್ವರ್ಯ ಧನಗಳಿಂದ ಬ್ರಾಹ್ಮಣರನ್ನು ಸಂತುಷ್ಟಗೊಳಿಸುತ್ತೇನೆ.”

05062006 ವಿದುರ ಉವಾಚ|

05062006a ಶಕುನೀನಾಮಿಹಾರ್ಥಾಯ ಪಾಶಂ ಭೂಮಾವಯೋಜಯತ್|

05062006c ಕಶ್ಚಿಚ್ಚಾಕುನಿಕಸ್ತಾತ ಪೂರ್ವೇಷಾಮಿತಿ ಶುಶ್ರುಮ||

ವಿದುರನು ಹೇಳಿದನು: “ಹಿಂದೆ ಓರ್ವ ಹಕ್ಕಿಹಿಡಿಯುವವನು ಹಕ್ಕಿಗಳನ್ನು ಹಿಡಿಯಲು ನೆಲದ ಮೇಲೆ ಬಲೆಯನ್ನು ಬೀಸಿದ ಎಂದು ಕೇಳಿದ್ದೇವೆ.

05062007a ತಸ್ಮಿನ್ದ್ವೌ ಶಕುನೌ ಬದ್ಧೌ ಯುಗಪತ್ಸಮಪೌರುಷೌ|

05062007c ತಾವುಪಾದಾಯ ತಂ ಪಾಶಂ ಜಗ್ಮತುಃ ಖಚರಾವುಭೌ||

ಅವುಗಳಲ್ಲಿ ಬುದ್ಧಿವಂತರಾಗಿದ್ದ, ರೆಕ್ಕೆಗಳ ಬಲದಲ್ಲಿ ಮತ್ತು ಪೌರುಷದಲ್ಲಿ ಸಮನಾಗಿದ್ದ ಎರಡು ಪಕ್ಷಿಗಳು ಒಂದು ಉಪಾಯವನ್ನು ಮಾಡಿ ಆ ಬಲೆಯನ್ನೇ ಎತ್ತಿಕೊಂಡು ಆಕಾಶವನ್ನೇರಿದವು.

05062008a ತೌ ವಿಹಾಯಸಮಾಕ್ರಾಂತೌ ದೃಷ್ಟ್ವಾ ಶಾಕುನಿಕಸ್ತದಾ|

05062008c ಅನ್ವಧಾವದನಿರ್ವಿಣ್ಣೋ ಯೇನ ಯೇನ ಸ್ಮ ಗಚ್ಚತಃ||

ಆ ಪಕ್ಷಿಗಳು ಹಾರಿಹೋದುದನ್ನು ನೋಡಿ ಹಕ್ಕಿಹಿಡಿಯುವವನು ಅನಿರ್ವಿಣ್ಣನಾಗದೇ ಅವು ಹೋದೆಡೆಯಲ್ಲಿಯೇ ಹಿಂಬಾಲಿಸಿದನು.

05062009a ತಥಾ ತಮನುಧಾವಂತಂ ಮೃಗಯುಂ ಶಕುನಾರ್ಥಿನಂ|

05062009c ಆಶ್ರಮಸ್ಥೋ ಮುನಿಃ ಕಶ್ಚಿದ್ದದರ್ಶಾಥ ಕೃತಾಹ್ನಿಕಃ||

ಪಕ್ಷಿಯನ್ನು ಬೇಟೆಯಾಡುವವನು ಹಾಗೆ ಓಡಿ ಹೋಗುತ್ತಿದ್ದುದನ್ನು ಅಲ್ಲಿಯೇ ಆಶ್ರಮದಲ್ಲಿದ್ದ, ಆಹ್ನೀಕವನ್ನು ಮಾಡುತ್ತಿದ್ದ ಮುನಿಯೋರ್ವನು ನೋಡಿದನು.

05062010a ತಾವಂತರಿಕ್ಷಗೌ ಶೀಘ್ರಮನುಯಾಂತಂ ಮಹೀಚರಂ|

05062010c ಶ್ಲೋಕೇನಾನೇನ ಕೌರವ್ಯ ಪಪ್ರಚ್ಚ ಸ ಮುನಿಸ್ತದಾ||

ಕೌರವ್ಯ! ಅಂತರಿಕ್ಷದಲ್ಲಿ ಹಾರಿಹೋಗುತ್ತಿದ್ದ ಅವರನ್ನು ಶೀಘ್ರವಾಗಿ ಭೂಮಿಯುಮೇಲೆ ಓಡಿ ಹೋಗಿ ಅನುಸರಿಸುತ್ತಿದ್ದ ಅವನನ್ನು ಆ ಮುನಿಯು ಈ ಶ್ಲೋಕದಲ್ಲಿ ಪ್ರಶ್ನಿಸಿದನು.

05062011a ವಿಚಿತ್ರಮಿದಮಾಶ್ಚರ್ಯಂ ಮೃಗಹನ್ಪ್ರತಿಭಾತಿ ಮೇ|

05062011c ಪ್ಲವಮಾನೌ ಹಿ ಖಚರೌ ಪದಾತಿರನುಧಾವಸಿ||

“ಮೃಗಹನ್! ಇದು ಆಶ್ಚರ್ಯವಾಗಿ ತೋರುತ್ತಿದೆ. ಪಕ್ಷಿಗಳು ಹಾರಿಕೊಂಡು ಹೋಗತ್ತಿವೆ. ನೀನು ಕಾಲ್ನಡುಗೆಯಲ್ಲಿ ಅನುಸರಿಸುತ್ತಿದ್ದೀಯೆ!”

05062012 ಶಾಕುನಿಕ ಉವಾಚ|

05062012a ಪಾಶಮೇಕಮುಭಾವೇತೌ ಸಹಿತೌ ಹರತೋ ಮಮ|

05062012c ಯತ್ರ ವೈ ವಿವದಿಷ್ಯೇತೇ ತತ್ರ ಮೇ ವಶಮೇಷ್ಯತಃ||

ಹಕ್ಕಿ ಹಿಡಿಯುವವನು ಹೇಳಿದನು: ‘ಇವರಿಬ್ಬರೂ ಒಟ್ಟಾಗಿ ನನ್ನ ಬಲೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಅವರಲ್ಲಿ ಬಿಡುಕು ಬಂದಾಗ ಅವು ನನ್ನ ವಶವಾಗುತ್ತವೆ.””

05062013 ವಿದುರ ಉವಾಚ|

05062013a ತೌ ವಿವಾದಮನುಪ್ರಾಪ್ತೌ ಶಕುನೌ ಮೃತ್ಯುಸಂಧಿತೌ|

05062013c ವಿಗೃಹ್ಯ ಚ ಸುದುರ್ಬುದ್ಧೀ ಪೃಥಿವ್ಯಾಂ ಸಂನ್ನಿಪೇತತುಃ||

ವಿದುರನು ಹೇಳಿದನು: “ಮೃತ್ಯುವನ್ನು ಸಮೀಪಿಸಿದ್ದ ಆ ಎರಡು ಪಕ್ಷಿಗಳು ವಿವಾದಕ್ಕೆ ತೊಡಗಿದವು. ತುಂಬಾ ದುರ್ಬುದ್ಧಿಯಾಗಿದ್ದ ಅವು ಹೊಡೆದಾಡಿ ಭೂಮಿಯ ಮೇಲೆ ಬಿದ್ದವು.

05062014a ತೌ ಯುಧ್ಯಮಾನೌ ಸಂರಬ್ಧೌ ಮೃತ್ಯುಪಾಶವಶಾನುಗೌ|

05062014c ಉಪಸೃತ್ಯಾಪರಿಜ್ಞಾತೋ ಜಗ್ರಾಹ ಮೃಗಯುಸ್ತದಾ||

ಹೊಡೆದಾಟದಲ್ಲಿ ಮಗ್ನರಾಗಿದ್ದ ಆ ಮೃತ್ಯುಪಾಶಗಳಿಗೆ ಸಿಲುಕಿದ ಅವರಿಗೆ ತಿಳಿಯದಂತೆ ಬೇಟೆಗಾರನು ಬಂದು ಅವುಗಳನ್ನು ಹಿಡಿದನು.

05062015a ಏವಂ ಯೇ ಜ್ಞಾತಯೋಽರ್ಥೇಷು ಮಿಥೋ ಗಚ್ಚಂತಿ ವಿಗ್ರಹಂ|

05062015c ತೇಽಮಿತ್ರವಶಮಾಯಾಂತಿ ಶಕುನಾವಿವ ವಿಗ್ರಹಾತ್||

ಹೀಗೆ ಸಂಪತ್ತಿಗೆ ಹೊಡೆದಾಡುವ ದಾಯಾದಿಗಳು ಅವರ ಜಗಳದಿಂದ ಈ ಪಕ್ಷಿಗಳಂತೆ ಅವರ ಶತ್ರುಗಳ ವಶರಾಗುತ್ತಾರೆ.

05062016a ಸಂಭೋಜನಂ ಸಂಕಥನಂ ಸಂಪ್ರಶ್ನೋಽಥ ಸಮಾಗಮಃ|

05062016c ಏತಾನಿ ಜ್ಞಾತಿಕಾರ್ಯಾಣಿ ನ ವಿರೋಧಃ ಕದಾ ಚನ||

ಒಟ್ಟಿಗೇ ಊಟಮಾಡುವುದು, ಒಟ್ಟಿಗೇ ಮಾತುಕಥೆಗಳನ್ನಾಡುವುದು, ಒಟ್ಟಿಗೇ ಕೂಡಿಕೊಂಡಿರುವುದು ದಾಯಾದಿಗಳು ಮಾಡಬೇಕಾದ ಕೆಲಸಗಳು. ಎಂದಿಗೂ ವಿರೋಧವುಂಟಾಗಬಾರದು.

05062017a ಯಸ್ಮಿನ್ಕಾಲೇ ಸುಮನಸಃ ಸರ್ವೇ ವೃದ್ಧಾನುಪಾಸತೇ|

05062017c ಸಿಂಹಗುಪ್ತಮಿವಾರಣ್ಯಮಪ್ರಧೃಷ್ಯಾ ಭವಂತಿ ತೇ||

ಎಲ್ಲಿಯವರೆಗೆ ಅವರು ಎಲ್ಲರೂ ಸುಮನಸ್ಕರಾಗಿ ವೃದ್ಧರನ್ನು ಪೂಜಿಸುತ್ತಾರೋ ಅಲ್ಲಿಯವರೆಗೆ ಅವರು ಸಿಂಹದಿಂದ ರಕ್ಷಿತವಾದ ಕಾಡಿನಂತೆ ಅಗಮ್ಯರಾಗಿರುತ್ತಾರೆ.

05062018a ಯೇಽರ್ಥಂ ಸಂತತಮಾಸಾದ್ಯ ದೀನಾ ಇವ ಸಮಾಸತೇ|

05062018c ಶ್ರಿಯಂ ತೇ ಸಂಪ್ರಯಚ್ಚಂತಿ ದ್ವಿಷದ್ಭ್ಯೋ ಭರತರ್ಷಭ||

ಭರತರ್ಷಭ! ಯಾರು ಉತ್ತಮ ಐಶ್ವರ್ಯವನ್ನು ಪಡೆದೂ ದೀನರಂತೆ ವರ್ತಿಸುತ್ತಾರೋ ಅವರು ಯಾವಾಗಲೂ ತಮ್ಮ ವೈರಿಗಳ ಐಶ್ವರ್ಯವನ್ನು ಹೆಚ್ಚಿಸುತ್ತಾರೆ.

05062019a ಧೂಮಾಯಂತೇ ವ್ಯಪೇತಾನಿ ಜ್ವಲಂತಿ ಸಹಿತಾನಿ ಚ|

05062019c ಧೃತರಾಷ್ಟ್ರೋಲ್ಮುಕಾನೀವ ಜ್ಞಾತಯೋ ಭರತರ್ಷಭ||

ಭರತರ್ಷಭ! ಧೃತರಾಷ್ಟ್ರ! ದಾಯಾದಿಗಳು ಕೆಂಡಗಳಿದ್ದಂತೆ. ಒಟ್ಟಿಗೇ ಇದ್ದರೆ ಉರಿಯುತ್ತವೆ. ಬೇರೆ ಬೇರೆಯಾದರೆ ಕೇವಲ ಹೊಗೆಯನ್ನು ಕೊಡುತ್ತವೆ.

05062020a ಇದಮನ್ಯತ್ಪ್ರವಕ್ಷ್ಯಾಮಿ ಯಥಾ ದೃಷ್ಟಂ ಗಿರೌ ಮಯಾ|

05062020c ಶ್ರುತ್ವಾ ತದಪಿ ಕೌರವ್ಯ ಯಥಾ ಶ್ರೇಯಸ್ತಥಾ ಕುರು||

ಕೌರವ್ಯ! ಗಿರಿಯಲ್ಲಿ ನಾನು ಏನು ಕಂಡೆ ಎನ್ನುವುದನ್ನೂ ಹೇಳುತ್ತೇನೆ. ಅದನ್ನೂ ಕೇಳಿಕೊಂಡು ಹೇಗೆ ಶ್ರೇಯಸ್ಸಾಗುತ್ತದೆಯೋ ಹಾಗೆ ಮಾಡು.

05062021a ವಯಂ ಕಿರಾತೈಃ ಸಹಿತಾ ಗಚ್ಚಾಮೋ ಗಿರಿಮುತ್ತರಂ|

05062021c ಬ್ರಾಹ್ಮಣೈರ್ದೇವಕಲ್ಪೈಶ್ಚ ವಿದ್ಯಾಜಂಭಕವಾತಿಕೈಃ||

05062022a ಕುಂಜಭೂತಂ ಗಿರಿಂ ಸರ್ವಮಭಿತೋ ಗಂಧಮಾದನಂ|

05062022c ದೀಪ್ಯಮಾನೌಷಧಿಗಣಂ ಸಿದ್ಧಗಂಧರ್ವಸೇವಿತಂ||

05062023a ತತ್ರ ಪಶ್ಯಾಮಹೇ ಸರ್ವೇ ಮಧು ಪೀತಮಮಾಕ್ಷಿಕಂ|

05062023c ಮರುಪ್ರಪಾತೇ ವಿಷಮೇ ನಿವಿಷ್ಟಂ ಕುಂಭಸಮ್ಮಿತಂ||

05062024a ಆಶೀವಿಷೈ ರಕ್ಷ್ಯಮಾಣಂ ಕುಬೇರದಯಿತಂ ಭೃಶಂ|

05062024c ಯತ್ಪ್ರಾಶ್ಯ ಪುರುಷೋ ಮರ್ತ್ಯೋ ಅಮರತ್ವಂ ನಿಗಚ್ಚತಿ||

05062025a ಅಚಕ್ಷುರ್ಲಭತೇ ಚಕ್ಷುರ್ವೃದ್ಧೋ ಭವತಿ ವೈ ಯುವಾ|

05062025c ಇತಿ ತೇ ಕಥಯಂತಿ ಸ್ಮ ಬ್ರಾಹ್ಮಣಾ ಜಂಭಸಾಧಕಾಃ||

05062026a ತತಃ ಕಿರಾತಾಸ್ತದ್ದೃಷ್ಟ್ವಾ ಪ್ರಾರ್ಥಯಂತೋ ಮಹೀಪತೇ|

05062026c ವಿನೇಶುರ್ವಿಷಮೇ ತಸ್ಮಿನ್ಸಸರ್ಪೇ ಗಿರಿಗಹ್ವರೇ||

05062027a ತಥೈವ ತವ ಪುತ್ರೋಽಯಂ ಪೃಥಿವೀಮೇಕ ಇಚ್ಚತಿ|

05062027c ಮಧು ಪಶ್ಯತಿ ಸಮ್ಮೋಹಾತ್ಪ್ರಪಾತಂ ನಾನುಪಶ್ಯತಿ||

05062028a ದುರ್ಯೋಧನೋ ಯೋದ್ಧುಮನಾಃ ಸಮರೇ ಸವ್ಯಸಾಚಿನಾ|

05062028c ನ ಚ ಪಶ್ಯಾಮಿ ತೇಜೋಽಸ್ಯ ವಿಕ್ರಮಂ ವಾ ತಥಾವಿಧಂ||

05062029a ಏಕೇನ ರಥಮಾಸ್ಥಾಯ ಪೃಥಿವೀ ಯೇನ ನಿರ್ಜಿತಾ|

05062029c ಪ್ರತೀಕ್ಷಮಾಣೋ ಯೋ ವೀರಃ ಕ್ಷಮತೇ ವೀಕ್ಷಿತಂ ತವ|

05062030a ದ್ರುಪದೋ ಮತ್ಸ್ಯರಾಜಶ್ಚ ಸಂಕ್ರುದ್ಧಶ್ಚ ಧನಂಜಯಃ|

05062030c ನ ಶೇಷಯೇಯುಃ ಸಮರೇ ವಾಯುಯುಕ್ತಾ ಇವಾಗ್ನಯಃ||

05062031a ಅಂಕೇ ಕುರುಷ್ವ ರಾಜಾನಂ ಧೃತರಾಷ್ಟ್ರ ಯುಧಿಷ್ಠಿರಂ|

05062031c ಯುಧ್ಯತೋರ್ಹಿ ದ್ವಯೋರ್ಯುದ್ಧೇ ನೈಕಾಂತೇನ ಭವೇಜ್ಜಯಃ||

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ವಿದುರವಾಕ್ಯೇ ದ್ವಿಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ವಿದುರವಾಕ್ಯದಲ್ಲಿ ಅರವತ್ತೆರಡನೆಯ ಅಧ್ಯಾಯವು.

Related image

Comments are closed.