Udyoga Parva: Chapter 59

ಉದ್ಯೋಗ ಪರ್ವ: ಯಾನಸಂಧಿ ಪರ್ವ

೫೯

ಧೃತರಾಷ್ಟ್ರನು ಪರಸ್ಪರರ ಶಕ್ತಿಯನ್ನು ವಿಶ್ಲೇಷಿಸಿ ದೇವ-ಮನುಷ್ಯರ ಸಹಾಯಶಕ್ತಿ ಮತ್ತು ತೇಜಸ್ಸಿನಲ್ಲಿ ಪಾಂಡವರಿಗಿಂತ ಕುರುಗಳ ಶಕ್ತಿಯು ಕಡಿಮೆಯಾದುದು ಎಂದು ಯೋಚಿಸಿ ದುರ್ಯೋಧನನಿಗೆ ಕುರುಗಳಿಗಿಂತ “ಪಾಂಡವರೇ ಹೆಚ್ಚು ಶಕ್ತಿವಂತರೆಂದು ಸದಾ ಅಭಿಪ್ರಾಯಪಡುತ್ತೇನೆ” ಮತ್ತು ಅದಕ್ಕಾಗಿ ಅವರೊಂದಿಗೆ ಸಂಧಿಯನ್ನು ಮಾಡಿಕೊಳ್ಳಬೇಕು ಎನ್ನುವುದು (೧-೨೩).

05059001 ವೈಶಂಪಾಯನ ಉವಾಚ|

05059001a ಸಂಜಯಸ್ಯ ವಚಃ ಶ್ರುತ್ವಾ ಪ್ರಜ್ಞಾಚಕ್ಷುರ್ನರೇಶ್ವರಃ|

05059001c ತತಃ ಸಂಖ್ಯಾತುಮಾರೇಭೇ ತದ್ವಚೋ ಗುಣದೋಷತಃ||

ವೈಶಂಪಾಯನನು ಹೇಳಿದನು: “ಸಂಜಯನ ಮಾತನ್ನು ಕೇಳಿ ಪ್ರಜ್ಞಾಚಕ್ಷು ನರೇಶ್ವರನು ಅವನ ಮಾತುಗಳ ಗುಣದೋಷಗಳನ್ನು ವಿಮರ್ಷಿಸಲು ಪ್ರಾರಂಭಿಸಿದನು.

05059002a ಪ್ರಸಂಖ್ಯಾಯ ಚ ಸೌಕ್ಷ್ಮ್ಯೇಣ ಗುಣದೋಷಾನ್ವಿಚಕ್ಷಣಃ|

05059002c ಯಥಾವನ್ಮತಿತತ್ತ್ವೇನ ಜಯಕಾಮಃ ಸುತಾನ್ಪ್ರತಿ||

ಸೂಕ್ಷ್ಮವಾಗಿ ವಿಶ್ಲೇಷಣೆಯನ್ನು ಮಾಡಿ, ಗುಣದೋಷಗಳನ್ನು ಪರೀಕ್ಷಿಸಿ, ತನ್ನ ಮಕ್ಕಳ ಜಯವನ್ನು ಬಯಸಿ ಅದರಂತೆ ಅಭಿಪ್ರಾಯಪಟ್ಟನು.

05059003a ಬಲಾಬಲೇ ವಿನಿಶ್ಚಿತ್ಯ ಯಾಥಾತಥ್ಯೇನ ಬುದ್ಧಿಮಾನ್|

05059003c ಶಕ್ತಿಂ ಸಂಖ್ಯಾತುಮಾರೇಭೇ ತದಾ ವೈ ಮನುಜಾಧಿಪಃ||

ಎರಡೂ ಪಕ್ಷಗಳ ಬಲಾಬಲಗಳನ್ನು ಯಥಾತಥ್ಯವಾಗಿ ನಿಶ್ಚಯಿಸಿ ಆ ಬುದ್ಧಿಮಾನ್ ಮನುಜಾಧಿಪನು ಪರಸ್ಪರರ ಶಕ್ತಿಯನ್ನು ವಿಶ್ಲೇಷಿಸ ತೊಡಗಿದನು.

05059004a ದೇವಮಾನುಷಯೋಃ ಶಕ್ತ್ಯಾ ತೇಜಸಾ ಚೈವ ಪಾಂಡವಾನ್|

05059004c ಕುರೂಂ ಶಕ್ತ್ಯಾಲ್ಪತರಯಾ ದುರ್ಯೋಧನಮಥಾಬ್ರವೀತ್||

ದೇವ-ಮನುಷ್ಯರ ಸಹಾಯಶಕ್ತಿ ಮತ್ತು ತೇಜಸ್ಸಿನಲ್ಲಿ ಪಾಂಡವರಿಗಿಂತ ಕುರುಗಳ ಶಕ್ತಿಯು ಕಡಿಮೆಯಾದುದು ಎಂದು ಯೋಚಿಸಿ ದುರ್ಯೋಧನನಿಗೆ ಹೇಳಿದನು:

05059005a ದುರ್ಯೋಧನೇಯಂ ಚಿಂತಾ ಮೇ ಶಶ್ವನ್ನಾಪ್ಯುಪಶಾಮ್ಯತಿ|

05059005c ಸತ್ಯಂ ಹ್ಯೇತದಹಂ ಮನ್ಯೇ ಪ್ರತ್ಯಕ್ಷಂ ನಾನುಮಾನತಃ||

“ದುರ್ಯೋಧನ! ನನ್ನ ಈ ಚಿಂತೆಯು ಶಾಶ್ವತವಾಗಿ ಇಲ್ಲವಾಗುತ್ತಿಲ್ಲ. ಇದು ಸತ್ಯವಾದುದು ಎಂದು ತಿಳಿಯುತ್ತೇನೆ. ಇದು ಪ್ರತ್ಯಕ್ಷವಾದುದು. ಅನುಮಾನಿತವಾದುದಲ್ಲ.

05059006a ಆತ್ಮಜೇಷು ಪರಂ ಸ್ನೇಹಂ ಸರ್ವಭೂತಾನಿ ಕುರ್ವತೇ|

05059006c ಪ್ರಿಯಾಣಿ ಚೈಷಾಂ ಕುರ್ವಂತಿ ಯಥಾಶಕ್ತಿ ಹಿತಾನಿ ಚ||

ಇರುವ ಎಲ್ಲವೂ ತಮ್ಮಲ್ಲಿ ಹುಟ್ಟಿದವುಗಳಲ್ಲಿ ಪರಮ ಸ್ನೇಹವನ್ನು ಮಾಡಿಕೊಳ್ಳುತ್ತವೆ. ಅವುಗಳಿಗೆ ಪ್ರಿಯವಾದುದನ್ನು, ಯಥಾಶಕ್ತಿ ಹಿತವಾದುವನ್ನು ಮಾಡುತ್ತವೆ.

05059007a ಏವಮೇವೋಪಕತೄಣಾಂ ಪ್ರಾಯಶೋ ಲಕ್ಷಯಾಮಹೇ|

05059007c ಇಚ್ಚಂತಿ ಬಹುಲಂ ಸಂತಃ ಪ್ರತಿಕರ್ತುಂ ಮಹತ್ಪ್ರಿಯಂ||

ಇದನ್ನೂ ಕೂಡ ಸಾಧಾರಣವಾಗಿ ನಾವು ಕಾಣುತ್ತೇವೆ - ಯಾರಿಂದ ಉಪಕೃತ್ಯರಾಗಿದ್ದೇವೋ ಅವರಿಗೆ ಮಹಾ ಪ್ರಿಯವಾದುದನ್ನು ಮಾಡಿ ಪ್ರತೀಕಾರ ಮಾಡಬೇಕೆಂದು ಸಂತರು ಬಯಸುತ್ತಾರೆ.

05059008a ಅಗ್ನಿಃ ಸಾಚಿವ್ಯಕರ್ತಾ ಸ್ಯಾತ್ಖಾಂಡವೇ ತತ್ಕೃತಂ ಸ್ಮರನ್|

05059008c ಅರ್ಜುನಸ್ಯಾತಿಭೀಮೇಽಸ್ಮಿನ್ಕುರುಪಾಂಡುಸಮಾಗಮೇ||

ಖಾಂಡವದಲ್ಲಿ ಅರ್ಜುನನು ಮಾಡಿದ ಕೆಲಸಗಳನ್ನು ನೆನಪಿನಲ್ಲಿಟ್ಟುಕೊಂಡು ಕುರುಪಾಂಡವರ ಈ ಯುದ್ಧದಲ್ಲಿ ಅಗ್ನಿಯು ಅವನಿಗೆ ಸಹಾಯ ಮಾಡುತ್ತಾನೆ.

05059009a ಜಾತಗೃಧ್ಯಾಭಿಪನ್ನಾಶ್ಚ ಪಾಂಡವಾನಾಮನೇಕಶಃ|

05059009c ಧರ್ಮಾದಯೋ ಭವಿಷ್ಯಂತಿ ಸಮಾಹೂತಾ ದಿವೌಕಸಃ||

ಮಕ್ಕಳ ಮೇಲಿನ ಪ್ರೀತಿಯಿಂದ ಕೂಡ ಧರ್ಮಾದಿ ಅನೇಕ ದಿವೌಕಸರು ಪಾಂಡವರ ಪಕ್ಷವನ್ನು ಸೇರುತ್ತಾರೆ.

05059010a ಭೀಷ್ಮದ್ರೋಣಕೃಪಾದೀನಾಂ ಭಯಾದಶನಿಸಮ್ಮಿತಂ|

05059010c ರಿರಕ್ಷಿಷಂತಃ ಸಂರಂಭಂ ಗಮಿಷ್ಯಂತೀತಿ ಮೇ ಮತಿಃ|

ಭೀಷ್ಮ-ದ್ರೋಣ-ಕೃಪಾದಿಗಳ ಭಯದಿಂದ ಅವರನ್ನು ರಕ್ಷಿಸಲು ಮಿಂಚಿನಂತೆ ಬರುತ್ತಾರೆಂದು ನನಗನ್ನಿಸುತ್ತದೆ.

05059011a ತೇ ದೇವಸಹಿತಾಃ ಪಾರ್ಥಾ ನ ಶಕ್ಯಾಃ ಪ್ರತಿವೀಕ್ಷಿತುಂ|

05059011c ಮಾನುಷೇಣ ನರವ್ಯಾಘ್ರಾ ವೀರ್ಯವಂತೋಽಸ್ತ್ರಪಾರಗಾಃ||

ದೇವಸಹಿತರಾದ ಆ ವೀರ್ಯವಂತ ಅಸ್ತ್ರಪಾರಗ ನರವ್ಯಾಘ್ರ ಪಾರ್ಥರನ್ನು ಮನುಷ್ಯರು ಎದುರಿಸಲು ಶಕ್ಯವಿರುವುದಿಲ್ಲ.

05059012a ದುರಾಸದಂ ಯಸ್ಯ ದಿವ್ಯಂ ಗಾಂಡೀವಂ ಧನುರುತ್ತಮಂ|

05059012c ವಾರುಣೌ ಚಾಕ್ಷಯೌ ದಿವ್ಯೌ ಶರಪೂರ್ಣೌ ಮಹೇಷುಧೀ||

05059013a ವಾನರಶ್ಚ ಧ್ವಜೋ ದಿವ್ಯೋ ನಿಃಸಂಗೋ ಧೂಮವದ್ಗತಿಃ|

05059013c ರಥಶ್ಚ ಚತುರಂತಾಯಾಂ ಯಸ್ಯ ನಾಸ್ತಿ ಸಮಸ್ತ್ವಿಷಾ||

05059014a ಮಹಾಮೇಘನಿಭಶ್ಚಾಪಿ ನಿರ್ಘೋಷಃ ಶ್ರೂಯತೇ ಜನೈಃ|

05059014c ಮಹಾಶನಿಸಮಃ ಶಬ್ದಃ ಶಾತ್ರವಾಣಾಂ ಭಯಂಕರಃ||

05059015a ಯಂ ಚಾತಿಮಾನುಷಂ ವೀರ್ಯೇ ಕೃತ್ಸ್ನೋ ಲೋಕೋ ವ್ಯವಸ್ಯತಿ|

05059015c ದೇವಾನಾಮಪಿ ಜೇತಾರಂ ಯಂ ವಿದುಃ ಪಾರ್ಥಿವಾ ರಣೇ||

05059016a ಶತಾನಿ ಪಂಚ ಚೈವೇಷೂನುದ್ವಪನ್ನಿವ ದೃಶ್ಯತೇ|

05059016c ನಿಮೇಷಾಂತರಮಾತ್ರೇಣ ಮುಂಚನ್ದೂರಂ ಚ ಪಾತಯನ್||

05059017a ಯಮಾಹ ಭೀಷ್ಮೋ ದ್ರೋಣಶ್ಚ ಕೃಪೋ ದ್ರೌಣಿಸ್ತಥೈವ ಚ|

05059017c ಮದ್ರರಾಜಸ್ತಥಾ ಶಲ್ಯೋ ಮಧ್ಯಸ್ಥಾ ಯೇ ಚ ಮಾನವಾಃ||

05059018a ಯುದ್ಧಾಯಾವಸ್ಥಿತಂ ಪಾರ್ಥಂ ಪಾರ್ಥಿವೈರತಿಮಾನುಷೈಃ|

05059018c ಅಶಕ್ಯಂ ರಥಶಾರ್ದೂಲಂ ಪರಾಜೇತುಮರಿಂದಮಂ||

05059019a ಕ್ಷಿಪತ್ಯೇಕೇನ ವೇಗೇನ ಪಂಚ ಬಾಣಶತಾನಿ ಯಃ|

05059019c ಸದೃಶಂ ಬಾಹುವೀರ್ಯೇಣ ಕಾರ್ತವೀರ್ಯಸ್ಯ ಪಾಂಡವಂ||

05059020a ತಮರ್ಜುನಂ ಮಹೇಷ್ವಾಸಂ ಮಹೇಂದ್ರೋಪೇಂದ್ರರಕ್ಷಿತಂ|

05059020c ನಿಘ್ನಂತಮಿವ ಪಶ್ಯಾಮಿ ವಿಮರ್ದೇಽಸ್ಮಿನ್ಮಹಾಮೃಧೇ||

ಯಾರ ಧನುಸ್ಸು ದಿವ್ಯ ಉತ್ತಮ ದುರಾಸದ ಗಾಂಡೀವವೋ, ಯಾರು ವರುಣನು ಕೊಟ್ಟ ಎರಡು ಅಕ್ಷಯ, ದಿವ್ಯ, ಶರಪೂರ್ಣ ಭತ್ತಳಿಕೆಗಳನ್ನು ಹೊಂದಿರುವನೋ. ಯಾರಲ್ಲಿ ನಿಃಸಂಗವಾಗಿ ಹೊಗೆಯಂತೆ ಹಾರಡುವ ದಿವ್ಯ ವಾನರಧ್ವಜವಿದೆಯೋ, ಯಾರ ರಥವು ಚತುರಾಯಾಂತದಲ್ಲಿ ಅಂಥಹ ಕಾಂತಿಯನ್ನು ಹೊಂದಿಲ್ಲವೋ ಮತ್ತು ಮಳೆಗಾಳದ ಮೋಡಗಳಂತೆ ಗುಡುಗಿ ಶತ್ರುಗಳಲ್ಲಿ ಭಯವನ್ನುಂಟುಮಾಡುತ್ತದೆಯೋ, ಯಾರ ವೀರ್ಯವನ್ನು ಇಡೀ ಲೋಕವೇ ಅಮಾನುಷವಾದುದೆಂದು ತಿಳಿದಿದೆಯೋ, ಯಾರನ್ನು ಪಾರ್ಥಿವರು ದೇವತೆಗಳಿಗೂ ಅಜೇಯನೆಂದು ತಿಳಿದುಕೊಂಡಿದ್ದಾರೋ, ಕಣ್ಣುಮುಚ್ಚಿ ತೆರೆಯುವುದರೊಳಗೆ ಯಾರು ಐದುನೂರು ಬಾಣಗಳನ್ನು ಬಿಡುವುದನ್ನು, ದೂರದಲ್ಲಿ ಹೋಗಿ ಬೀಳುವುದನ್ನು ಎಲ್ಲರೂ ನೋಡಿದ್ದಾರೋ, ಯಾವ ಪಾರ್ಥನನ್ನು ಭೀಷ್ಮ, ದ್ರೋಣ, ಕೃಪ, ದ್ರೌಣಿ, ಮದ್ರರಾಜ ಶಲ್ಯ ಮತ್ತು ಮಧ್ಯಸ್ಥರಾಗಿರುವ ಮಾನವರು ಯುದ್ಧದಲ್ಲಿ ಅತಿಮಾನುಷನೆಂದೂ, ಪರಾಜಯಗೊಳಿಸಲು ಅಶಕ್ಯನಾದ ರಥಶಾರ್ದೂಲನೆಂದೂ ಅರಿಂದಮನೆಂದೂ ಹೇಳುತ್ತಾರೋ, ಒಂದೇ ಎಸೆತದಲ್ಲಿ ಒಂದೇ ವೇಗದ ಐನೂರು ಬಾಣಗಳನ್ನು ಬಿಡುವ, ಬಾಹುವೀರ್ಯದಲ್ಲಿ ಕಾರ್ತವೀರ್ಯನಂತಿರುವ ಪಾಂಡವ, ಆ ಅರ್ಜುನ, ಮಹೇಷ್ವಾಸ, ಮಹೇಂದ್ರ-ಉಪೇಂದ್ರರಿಂದ ರಕ್ಷಿತನಾದವನು ಮಹಾಯುದ್ಧದಲ್ಲಿ ನಮ್ಮನ್ನು ಸಂಹರಿಸುತ್ತಿರುವುದನ್ನು, ಸದೆಬಡಿಯುತ್ತಿರುವುದನ್ನು ಕಾಣುತ್ತೇನೆ.

05059021a ಇತ್ಯೇವಂ ಚಿಂತಯನ್ಕೃತ್ಸ್ನಮಹೋರಾತ್ರಾಣಿ ಭಾರತ|

05059021c ಅನಿದ್ರೋ ನಿಃಸುಖಶ್ಚಾಸ್ಮಿ ಕುರೂಣಾಂ ಶಮಚಿಂತಯಾ||

ಭಾರತ! ಹೀಗೆ ಇಡೀ ಹಗಲು ರಾತ್ರಿಗಳಲ್ಲಿ ಚಿಂತಿಸುತ್ತೇನೆ. ಕುರುಗಳ ಶಾಂತಿಯ ಕುರಿತು ಚಿಂತಿಸುತ್ತ ನಿದ್ರೆಯಿಲ್ಲದವನಾಗಿದ್ದೇನೆ. ನಿಃಸುಖಿಯಾಗಿದ್ದೇನೆ.

05059022a ಕ್ಷಯೋದಯೋಽಯಂ ಸುಮಹಾನ್ಕುರೂಣಾಂ ಪ್ರತ್ಯುಪಸ್ಥಿತಃ|

05059022c ಅಸ್ಯ ಚೇತ್ಕಲಹಸ್ಯಾಂತಃ ಶಮಾದನ್ಯೋ ನ ವಿದ್ಯತೇ||

ಕುರುಗಳ ಮಹಾ ನಾಶವು ಪ್ರಾರಂಭವಾದಂತಿದೆ. ಸಂಧಿಯಲ್ಲದೇ ಈ ಕಲಹಕ್ಕೆ ಬೇರೆ ಯಾವ ಅಂತ್ಯವನ್ನೂ ತಿಳಿಯಲಿಕ್ಕಾಗುತ್ತಿಲ್ಲ.

05059023a ಶಮೋ ಮೇ ರೋಚತೇ ನಿತ್ಯಂ ಪಾರ್ಥೈಸ್ತಾತ ನ ವಿಗ್ರಹಃ|

05059023c ಕುರುಭ್ಯೋ ಹಿ ಸದಾ ಮನ್ಯೇ ಪಾಂಡವಾಂ ಶಕ್ತಿಮತ್ತರಾನ್||

ಮಗೂ! ಪಾರ್ಥರೊಂದಿಗೆ ಸಂಧಿಯು ನನಗೆ ಯಾವಾಗಲೂ ಇಷ್ಟವಾಗುತ್ತದೆ. ಜಗಳವಲ್ಲ. ಕುರುಗಳಿಗಿಂತ ಪಾಂಡವರೇ ಹೆಚ್ಚು ಶಕ್ತಿವಂತರೆಂದು ಸದಾ ಅಭಿಪ್ರಾಯಪಡುತ್ತೇನೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಯಾನಸಂಧಿ ಪರ್ವಣಿ ಧೃತರಾಷ್ಟ್ರವಿವೇಚನೇ ಏಕೋನಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಯಾನಸಂಧಿ ಪರ್ವದಲ್ಲಿ ಧೃತರಾಷ್ಟ್ರವಿವೇಚನೆಯಲ್ಲಿ ಐವತ್ತೊಂಭತ್ತನೆಯ ಅಧ್ಯಾಯವು.

Image result for flowers against white background

Comments are closed.