Udyoga Parva: Chapter 197

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೯೭

ಪಾಂಡವಸೇನಾನಿರ್ಯಾಣ

ಪಾಂಡವ ಸೇನೆಯು ಕುರುಕ್ಷೇತ್ರಕ್ಕೆ ಪ್ರಯಾಣಿಸಿದುದು (೧-೨೧).

05197001 ವೈಶಂಪಾಯನ ಉವಾಚ|

05197001a ತಥೈವ ರಾಜಾ ಕೌಂತೇಯೋ ಧರ್ಮಪುತ್ರೋ ಯುಧಿಷ್ಠಿರಃ|

05197001c ಧೃಷ್ಟದ್ಯುಮ್ನಮುಖಾನ್ವೀರಾಂಶ್ಚೋದಯಾಮಾಸ ಭಾರತ||

ವೈಶಂಪಾಯನನು ಹೇಳಿದನು: “ಭಾರತ! ಹಾಗೆಯೇ ರಾಜ ಕೌಂತೇಯ ಧರ್ಮಪುತ್ರ ಯುಧಿಷ್ಠಿರನೂ ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ವೀರರನ್ನು ಪ್ರಚೋದಿಸಿದನು.

05197002a ಚೇದಿಕಾಶಿಕರೂಷಾಣಾಂ ನೇತಾರಂ ದೃಢವಿಕ್ರಮಂ|

05197002c ಸೇನಾಪತಿಮಮಿತ್ರಘ್ನಂ ಧೃಷ್ಟಕೇತುಮಥಾದಿಶತ್||

05197003a ವಿರಾಟಂ ದ್ರುಪದಂ ಚೈವ ಯುಯುಧಾನಂ ಶಿಖಂಡಿನಂ|

05197003c ಪಾಂಚಾಲ್ಯೌ ಚ ಮಹೇಷ್ವಾಸೌ ಯುಧಾಮನ್ಯೂತ್ತಮೌಜಸೌ||

ಚೇದಿ, ಕಾಶಿ ಮತ್ತು ಕರೂಷಣರ ನೇತಾರ ದೃಢವಿಕ್ರಮಿ ಸೇನಾಪತಿ ಅಮಿತ್ರಘ್ನ ಧೃಷ್ಟಕೇತು, ವಿರಾಟ, ದ್ರುಪದ, ಯುಯುಧಾನ, ಶಿಖಂಡಿ, ಮತ್ತು ಮಹೇಷ್ವಾಸರಾದ ಪಾಂಚಾಲರಿಬ್ಬರು ಯುಧಾಮನ್ಯು-ಉತ್ತಮೌಜಸರು ಹೊರಟರು.

05197004a ತೇ ಶೂರಾಶ್ಚಿತ್ರವರ್ಮಾಣಸ್ತಪ್ತಕುಂಡಲಧಾರಿಣಃ|

05197004c ಆಜ್ಯಾವಸಿಕ್ತಾ ಜ್ವಲಿತಾ ಧಿಷ್ಣ್ಯೇಷ್ವಿವ ಹುತಾಶನಾಃ|

05197004e ಅಶೋಭಂತ ಮಹೇಷ್ವಾಸಾ ಗ್ರಹಾಃ ಪ್ರಜ್ವಲಿತಾ ಇವ||

ವಿಚಿತ್ರ ಕವಚಗಳನ್ನು ಧರಿಸಿದ್ದ, ಬೆಳಗುತ್ತಿರುವ ಕುಂಡಲಗಳನ್ನು ಧರಿಸಿದ, ಅರಳಿನಿಂದ ಅವಸಿಕ್ತರಾಗಿದ್ದ ಆ ಶೂರ ಮಹೇಷ್ವಾಸರು ತುಪ್ಪವನ್ನು ಸುರಿಸಿ ಭುಗಿಲೆದ್ದ ಅಗ್ನಿಗಳಂತೆ ಮತ್ತು ಪ್ರಜ್ವಲಿಸುತ್ತಿರುವ ಗ್ರಹಗಳಂತೆ ಶೋಭಿಸಿದರು.

05197005a ಸೋಽಥ ಸೈನ್ಯಂ ಯಥಾಯೋಗಂ ಪೂಜಯಿತ್ವಾ ನರರ್ಷಭಃ|

05197005c ದಿದೇಶ ತಾನ್ಯನೀಕಾನಿ ಪ್ರಯಾಣಾಯ ಮಹೀಪತಿಃ||

ಮಹೀಪತಿ ನರರ್ಷಭನು ಸೈನ್ಯವನ್ನು ಯಥಾಯೋಗವಾಗಿ ಪೂಜಿಸಿ ಆ ಸೇನೆಗಳಿಗೆ ಪ್ರಯಾಣಿಸಲು ಆಜ್ಞೆಯನ್ನಿತ್ತನು.

05197006a ಅಭಿಮನ್ಯುಂ ಬೃಹಂತಂ ಚ ದ್ರೌಪದೇಯಾಂಶ್ಚ ಸರ್ವಶಃ|

05197006c ಧೃಷ್ಟದ್ಯುಮ್ನಮುಖಾನೇತಾನ್ಪ್ರಾಹಿಣೋತ್ಪಾಂಡುನಂದನಃ||

ಮೊದಲು ಪಾಂಡುನಂದನನು ಅಭಿಮನ್ಯು, ಬೃಹಂತ ಮತ್ತು ದ್ರೌಪದೇಯರೆಲ್ಲರನ್ನೂ ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ಕಳುಹಿಸಿದನು.

05197007a ಭೀಮಂ ಚ ಯುಯುಧಾನಂ ಚ ಪಾಂಡವಂ ಚ ಧನಂಜಯಂ|

05197007c ದ್ವಿತೀಯಂ ಪ್ರೇಷಯಾಮಾಸ ಬಲಸ್ಕಂಧಂ ಯುಧಿಷ್ಠಿರಃ||

ಎರಡನೆಯ ಸೇನೆಯಾಗಿ ಯುಧಿಷ್ಠಿರನು ಭೀಮ, ಯುಯುಧಾನ, ಮತ್ತು ಪಾಂಡವ ಧನಂಜಯರನ್ನು ಕಳುಹಿಸಿದನು.

05197008a ಭಾಂಡಂ ಸಮಾರೋಪಯತಾಂ ಚರತಾಂ ಸಂಪ್ರಧಾವತಾಂ|

05197008c ಹೃಷ್ಟಾನಾಂ ತತ್ರ ಯೋಧಾನಾಂ ಶಬ್ದೋ ದಿವಮಿವಾಸ್ಪೃಶತ್||

ಸಂತೋಷದಿಂದ ಧ್ವಜಗಳನ್ನು ಏರಿಸುವ, ಅಲ್ಲಲ್ಲಿ ಓಡಾಡುತ್ತಿರುವ ಯೋಧರ ಶಬ್ಧವು ಆಕಾಶವನ್ನು ಮುಟ್ಟಿತು.

05197009a ಸ್ವಯಮೇವ ತತಃ ಪಶ್ಚಾದ್ವಿರಾಟದ್ರುಪದಾನ್ವಿತಃ|

05197009c ತಥಾನ್ಯೈಃ ಪೃಥಿವೀಪಾಲೈಃ ಸಹ ಪ್ರಾಯಾನ್ಮಹೀಪತಿಃ||

ಸ್ವಯಂ ಮಹೀಪತಿಯು ವಿರಾಟ ದ್ರುಪದರೇ ಮೊದಲಾದ ಪೃಥಿವೀಪಾಲರೊಂದಿಗೆ ಹಿಂದೆ ನಡೆದನು.

05197010a ಭೀಮಧನ್ವಾಯನೀ ಸೇನಾ ಧೃಷ್ಟದ್ಯುಮ್ನಪುರಸ್ಕೃತಾ|

05197010c ಗಂಗೇವ ಪೂರ್ಣಾ ಸ್ತಿಮಿತಾ ಸ್ಯಂದಮಾನಾ ವ್ಯದೃಶ್ಯತ||

ಧೃಷ್ಟದ್ಯುಮ್ನನು ನಡೆಸುತ್ತಿದ್ದ ಆ ಭೀಮಧನ್ವಿಗಳ ಸೇನೆಯು ಪ್ರವಾಹವಾಗಿ ಮತ್ತು ಸ್ತಿಮಿತಗೊಂಡು ಹರಿಯುತ್ತಿರುವ ಗಂಗೆಯಂತೆ ತೋರಿತು.

05197011a ತತಃ ಪುನರನೀಕಾನಿ ವ್ಯಯೋಜಯತ ಬುದ್ಧಿಮಾನ್|

05197011c ಮೋಹಯನ್ಧೃತರಾಷ್ಟ್ರಸ್ಯ ಪುತ್ರಾಣಾಂ ಬುದ್ಧಿನಿಸ್ರವಂ||

05197012a ದ್ರೌಪದೇಯಾನ್ಮಹೇಷ್ವಾಸಾನಭಿಮನ್ಯುಂ ಚ ಪಾಂಡವಃ|

05197012c ನಕುಲಂ ಸಹದೇವಂ ಚ ಸರ್ವಾಂಶ್ಚೈವ ಪ್ರಭದ್ರಕಾನ್||

ಆಗ ಬುದ್ಧಿವಂತನು ಧೃತರಾಷ್ಟ್ರನ ಪುತ್ರರನ್ನು ಮೋಹಗೊಳಿಸಲು ಬುದ್ಧಿಯನ್ನುಪಯೋಗಿಸಿ ತನ್ನ ಸೇನೆಗಳನ್ನು ವಿಂಗಡಿಸಿದನು. ಮೊದಲನೆಯದರಲ್ಲಿ ಮಹೇಷ್ವಾಸರಾದ ದ್ರೌಪದೇಯರು, ಅಭಿಮನ್ಯು, ಪಾಂಡವ ನಕುಲ ಸಹದೇವರು ಮತ್ತು ಸರ್ವ ಪ್ರಭದ್ರಕರೂ ಇದ್ದರು.

05197013a ದಶ ಚಾಶ್ವಸಹಸ್ರಾಣಿ ದ್ವಿಸಾಹಸ್ರಂ ಚ ದಂತಿನಃ|

05197013c ಅಯುತಂ ಚ ಪದಾತೀನಾಂ ರಥಾಃ ಪಂಚಶತಾಸ್ತಥಾ||

05197014a ಭೀಮಸೇನಂ ಚ ದುರ್ಧರ್ಷಂ ಪ್ರಥಮಂ ಪ್ರಾದಿಶದ್ ಬಲಂ|

ಅವರಲ್ಲಿ ಹತ್ತು ಸಾವಿರ ಕುದುರೆಗಳು, ಎರಡು ಸಾವಿರ ಆನೆಗಳು, ಒಂದು ಲಕ್ಷ ಪದಾತಿಗಳು ಮತ್ತು ಐನೂರು ರಥಗಳಿದ್ದವು. ದುರ್ಧರ್ಷ ಭೀಮಸೇನನು ಈ ಮೊದಲನೆಯ ಸೇನೆಯನ್ನು ನೋಡಿಕೊಂಡನು.

05197014c ಮಧ್ಯಮೇ ತು ವಿರಾಟಂ ಚ ಜಯತ್ಸೇನಂ ಚ ಮಾಗಧಂ||

05197015a ಮಹಾರಥೌ ಚ ಪಾಂಚಾಲ್ಯೌ ಯುಧಾಮನ್ಯೂತ್ತಮೌಜಸೌ|

05197015c ವೀರ್ಯವಂತೌ ಮಹಾತ್ಮಾನೌ ಗದಾಕಾರ್ಮುಕಧಾರಿಣೌ|

05197015e ಅನ್ವಯಾತಾಂ ತತೋ ಮಧ್ಯೇ ವಾಸುದೇವಧನಂಜಯೌ||

ಮಧ್ಯಮ ಸೇನೆಯಲ್ಲಿ ವಿರಾಟ, ಮಾಗಧ ಜಯತ್ಸೇನ, ಮಹಾರಥಿ, ವೀರ್ಯವಂತ, ಮಹಾತ್ಮ, ಗದೆ-ಧನುಸ್ಸುಗಳನ್ನು ಹಿಡಿದ ಪಾಂಚಲರಿಬ್ಬರು - ಯುಧಾಮನ್ಯು, ಉತ್ತಮೌಜ, ಮತ್ತು ಅವರ ಮಧ್ಯೆ ವಾಸುದೇವ-ಧನಂಜಯರಿಬ್ಬರಿದ್ದರು.

05197016a ಬಭೂವುರತಿಸಂರಬ್ಧಾಃ ಕೃತಪ್ರಹರಣಾ ನರಾಃ|

05197016c ತೇಷಾಂ ವಿಂಶತಿಸಾಹಸ್ರಾ ಧ್ವಜಾಃ ಶೂರೈರಧಿಷ್ಠಿತಾಃ||

05197017a ಪಂಚ ನಾಗಸಹಸ್ರಾಣಿ ರಥವಂಶಾಶ್ಚ ಸರ್ವಶಃ|

05197017c ಪದಾತಯಶ್ಚ ಯೇ ಶೂರಾಃ ಕಾರ್ಮುಕಾಸಿಗದಾಧರಾಃ|

05197017e ಸಹಸ್ರಶೋಽನ್ವಯುಃ ಪಶ್ಚಾದಗ್ರತಶ್ಚ ಸಹಸ್ರಶಃ||

ಆ ಸೇನೆಯಲ್ಲಿ ಅತಿ ಉತ್ಸಾಹಿಗಳಾದ ಪ್ರಹರಗಳಲ್ಲಿ ಕುಶಲರಾದ ಇಪ್ಪತ್ತುಸಾವಿರ ಧ್ವಜಗಳನ್ನು ಹಿಡಿದ ಶೂರ ಕವಚಧಾರೀ ನರರಿದ್ದರು. ಐದು ಸಾವಿರ ಆನೆಗಳಿದ್ದವು. ಎಲ್ಲೆಡೆಯಲ್ಲಿಯೂ ರಥಗಳಿದ್ದವು. ಧನುಸ್ಸು, ಖಡ್ಗ ಮತ್ತು ಗದೆಗಳನ್ನು ಧರಿಸಿದ ಶೂರ ಪದಾತಿಗಳಿದ್ದರು. ಮುಂದೆ ಹೋಗುತ್ತಿರುವ ಸಹಸ್ರಗಳನ್ನು ಸಹಸ್ರಗಳು ಹಿಂಬಾಲಿಸಿದವು.

05197018a ಯುಧಿಷ್ಠಿರೋ ಯತ್ರ ಸೈನ್ಯೇ ಸ್ವಯಮೇವ ಬಲಾರ್ಣವೇ|

05197018c ತತ್ರ ತೇ ಪೃಥಿವೀಪಾಲಾ ಭೂಯಿಷ್ಠಂ ಪರ್ಯವಸ್ಥಿತಾಃ||

ಸ್ವಯಂ ಯುಧಿಷ್ಠಿರನಿದ್ದ ಸೇನೆಯಲ್ಲಿ ಸೇನಾಸಾಗರದಲ್ಲಿ ಇನ್ನುಳಿದ ಪೃಥಿವೀಪಾಲಕರು ಸೇರಿಕೊಂಡಿದ್ದರು.

05197019a ತತ್ರ ನಾಗಸಹಸ್ರಾಣಿ ಹಯಾನಾಮಯುತಾನಿ ಚ|

05197019c ತಥಾ ರಥಸಹಸ್ರಾಣಿ ಪದಾತೀನಾಂ ಚ ಭಾರತ||

05197019e ಯದಾಶ್ರಿತ್ಯಾಭಿಯುಯುಧೇ ಧಾರ್ತರಾಷ್ಟ್ರಂ ಸುಯೋಧನಂ||

ಭಾರತ! ಅದರಲ್ಲಿ ಸಹಸ್ರಾರು ಆನೆಗಳು, ಲಕ್ಷಗಟ್ಟಲೆ ಕುದುರೆಗಳು. ಸಹಸ್ರಾರು ರಥಗಳು, ಹಾಗೆಯೇ ಪದಾತಿಗಳಿದ್ದರು. ಅವರನ್ನು ಆಶ್ರಯಿಸಿ ಅವನು ಧಾರ್ತರಾಷ್ಟ್ರ ಸುಯೋಧನನೊಡನೆ ಯುದ್ಧಮಾಡಲು ಹೊರಟನು.

05197020a ತತೋಽನ್ಯೇ ಶತಶಃ ಪಶ್ಚಾತ್ಸಹಸ್ರಾಯುತಶೋ ನರಾಃ|

05197020c ನದಂತಃ ಪ್ರಯಯುಸ್ತೇಷಾಮನೀಕಾನಿ ಸಹಸ್ರಶಃ||

ಅದರ ಹಿಂದಿನಿಂದ ನೂರಾರು ಸಹಸ್ರಾರು ಲಕ್ಷಲಕ್ಷ ಜನರು ಸಾವಿರಾರು ಸೇನೆಗಳಲ್ಲಿ ಜೋರಾಗಿ ಕೂಗುತ್ತಾ ಪ್ರಯಾಣಿಸಿದರು.

05197021a ತತ್ರ ಭೇರೀಸಹಸ್ರಾಣಿ ಶಂಖಾನಾಮಯುತಾನಿ ಚ|

05197021c ವಾದಯಂತಿ ಸ್ಮ ಸಂಹೃಷ್ಟಾಃ ಸಹಸ್ರಾಯುತಶೋ ನರಾಃ||

ಅಲ್ಲಿ ಸಂತೋಷಗೊಂಡ ಸಹಸ್ರಾರು ಲಕ್ಷ ಜನರು ಸಹಸ್ರಾರು ಭೇರಿಗಳನ್ನು ಲಕ್ಷಗಟ್ಟಲೆ ಶಂಖಗಳನ್ನು ಮೊಳಗಿಸಿದರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಪಾಂಡವಸೇನಾನಿರ್ಯಾಣೇ ಸಪ್ತನವತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಪಾಂಡವಸೇನಾನಿರ್ಯಾಣದಲ್ಲಿ ನೂರಾತೊಂಭತ್ತೇಳನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೫/೧೮, ಉಪಪರ್ವಗಳು-೬೦/೧೦೦, ಅಧ್ಯಾಯಗಳು-೮೬೦/೧೯೯೫, ಶ್ಲೋಕಗಳು-೨೭೭೭೪/೭೩೭೮೪

Image result for flowers against white background"

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.