Udyoga Parva: Chapter 196

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೯೬

ಕೌರವಸೇನಾನಿರ್ಯಾಣ

ಹಸ್ತಿನಾಪುರದಿಂದ ಕೌರವ ಸೇನೆಯು ಹೊರಟು ಕುರುಕ್ಷೇತ್ರದ ಅರ್ಧಭಾಗದಲ್ಲಿ ಬೀಡು ಬಿಟ್ಟಿದುದು (೧-೧೯).

05196001 ವೈಶಂಪಾಯನ ಉವಾಚ|

05196001a ತತಃ ಪ್ರಭಾತೇ ವಿಮಲೇ ಧಾರ್ತರಾಷ್ಟ್ರೇಣ ಚೋದಿತಾಃ|

05196001c ದುರ್ಯೋಧನೇನ ರಾಜಾನಃ ಪ್ರಯಯುಃ ಪಾಂಡವಾನ್ಪ್ರತಿ||

ವೈಶಂಪಾಯನನು ಹೇಳಿದನು: “ಆಗ ವಿಮಲ ಪ್ರಭಾತದಲ್ಲಿ ಧಾರ್ತರಾಷ್ಟ್ರ ದುರ್ಯೋಧನನಿಂದ ಪ್ರಚೋದಿತರಾಗಿ ರಾಜರು ಪಾಂಡವರ ಕಡೆ ಪ್ರಯಾಣಿಸಿದರು.

05196002a ಆಪ್ಲಾವ್ಯ ಶುಚಯಃ ಸರ್ವೇ ಸ್ರಗ್ವಿಣಃ ಶುಕ್ಲವಾಸಸಃ|

05196002c ಗೃಹೀತಶಸ್ತ್ರಾ ಧ್ವಜಿನಃ ಸ್ವಸ್ತಿ ವಾಚ್ಯ ಹುತಾಗ್ನಯಃ||

ಎಲ್ಲರೂ ಸ್ನಾನಮಾಡಿ ಶುಚಿಯಾಗಿದ್ದರು. ಎಲ್ಲರೂ ಮಾಲೆಗಳನ್ನು ಧರಿಸಿದ್ದರು, ಬಿಳಿಯ ವಸ್ತ್ರಗಳನ್ನುಟ್ಟಿದ್ದರು, ಶಸ್ತ್ರಗಳನ್ನು ಹಿಡಿದಿದ್ದರು, ಧ್ವಜಗಳನ್ನು ಹೊಂದಿದ್ದರು, ಸ್ವಸ್ತಿ ವಾಚನಗಳನ್ನು ಕೇಳಿದ್ದರು ಮತ್ತು ಅಗ್ನಿಗಳಲ್ಲಿ ಆಹುತಿಗಳನ್ನಿತ್ತಿದ್ದರು.

05196003a ಸರ್ವೇ ವೇದವಿದಃ ಶೂರಾಃ ಸರ್ವೇ ಸುಚರಿತವ್ರತಾಃ|

05196003c ಸರ್ವೇ ಕರ್ಮಕೃತಶ್ಚೈವ ಸರ್ವೇ ಚಾಹವಲಕ್ಷಣಾಃ||

ಎಲ್ಲರೂ ವೇದವಿದರಾಗಿದ್ದರು, ಎಲ್ಲರೂ ಶೂರರೂ, ಸುಚರಿತವ್ರತರೂ ಆಗಿದ್ದರು. ಎಲ್ಲರೂ ಕರ್ಮಗಳನ್ನು ಮಾಡಿಮುಗಿಸಿದ್ದರು. ಎಲ್ಲರೂ ಯುದ್ಧಕ್ಕೆ ಲಕ್ಷಣರಾಗಿದ್ದರು.

05196004a ಆಹವೇಷು ಪರಾಽಲ್ಲೋಕಾಂ ಜಿಗೀಷಂತೋ ಮಹಾಬಲಾಃ|

05196004c ಏಕಾಗ್ರಮನಸಃ ಸರ್ವೇ ಶ್ರದ್ದಧಾನಾಃ ಪರಸ್ಯ ಚ||

ಯುದ್ಧದಲ್ಲಿ ಪರಮ ಲೋಕಗಳನ್ನು ಗೆಲ್ಲುವ ಉದ್ದೇಶವನ್ನಿಟ್ಟುಕೊಂಡಿದ್ದ ಆ ಮಹಾಬಲರು ಎಲ್ಲರೂ ಏಕಾಗ್ರಮನಸ್ಕರಾಗಿದ್ದರು ಮತ್ತು ಪರಸ್ಪರರಲ್ಲಿ ಶ್ರದ್ಧೆಯನ್ನಿಟ್ಟಿದ್ದರು.

05196005a ವಿಂದಾನುವಿಂದಾವಾವಂತ್ಯೌ ಕೇಕಯಾ ಬಾಹ್ಲಿಕೈಃ ಸಹ|

05196005c ಪ್ರಯಯುಃ ಸರ್ವ ಏವೈತೇ ಭಾರದ್ವಾಜಪುರೋಗಮಾಃ||

ಮೊದಲು ಅವಂತಿಯ ವಿಂದಾನುವಿಂದರಿಬ್ಬರೂ ಕೇಕಯ ಮತ್ತು ಬಾಹ್ಲೀಕರೊಂದಿಗೆ ಎಲ್ಲರೂ ಭಾರದ್ವಾಜನನ್ನು ಮುಂದಿಟ್ಟುಕೊಂಡು ಹೊರಟರು.

05196006a ಅಶ್ವತ್ಥಾಮಾ ಶಾಂತನವಃ ಸೈಂಧವೋಽಥ ಜಯದ್ರಥಃ|

05196006c ದಾಕ್ಷಿಣಾತ್ಯಾಃ ಪ್ರತೀಚ್ಯಾಶ್ಚ ಪಾರ್ವತೀಯಾಶ್ಚ ಯೇ ರಥಾಃ||

05196007a ಗಾಂಧಾರರಾಜಃ ಶಕುನಿಃ ಪ್ರಾಚ್ಯೋದೀಚ್ಯಾಶ್ಚ ಸರ್ವಶಃ|

05196007c ಶಕಾಃ ಕಿರಾತಾ ಯವನಾಃ ಶಿಬಯೋಽಥ ವಸಾತಯಃ||

05196008a ಸ್ವೈಃ ಸ್ವೈರನೀಕೈಃ ಸಹಿತಾಃ ಪರಿವಾರ್ಯ ಮಹಾರಥಂ|

05196008c ಏತೇ ಮಹಾರಥಾಃ ಸರ್ವೇ ದ್ವಿತೀಯೇ ನಿರ್ಯಯುರ್ಬಲೇ||

ಅನಂತರ ಅಶ್ವತ್ಥಾಮ, ಶಾಂತನವ, ಸೈಂಧವ ಜಯದ್ರಥ, ದಕ್ಷಿಣದವರು, ಪಶ್ಚಿಮದವರು, ಪರ್ವತವಾಸಿ ರಥರು, ಗಾಂಧಾರರಾಜ ಶಕುನಿ, ಪೂರ್ವದೇಶದವರೆಲ್ಲರೂ, ಶಕರು, ಕಿರಾತರು, ಯವನರು, ಶಿಬಿಗಳು, ವಸಾತರು ತಮ್ಮ ತಮ್ಮ ಸೇನೆಗಳಿಂದ ಸುತ್ತುವರೆಯಲ್ಪಟ್ಟು ಒಟ್ಟಿಗೇ ಹೊರಟರು. ಈ ಮಹಾರಥಿಗಳು ಎಲ್ಲರೂ ಎರಡನೆಯ ಸೇನೆಯಾಗಿ ಹೊರಟರು.

05196009a ಕೃತವರ್ಮಾ ಸಹಾನೀಕಸ್ತ್ರಿಗರ್ತಾಶ್ಚ ಮಹಾಬಲಾಃ|

05196009c ದುರ್ಯೋಧನಶ್ಚ ನೃಪತಿರ್ಭ್ರಾತೃಭಿಃ ಪರಿವಾರಿತಃ||

05196010a ಶಲೋ ಭೂರಿಶ್ರವಾಃ ಶಲ್ಯಃ ಕೌಸಲ್ಯೋಽಥ ಬೃಹದ್ಬಲಃ|

05196010c ಏತೇ ಪಶ್ಚಾದವರ್ತಂತ ಧಾರ್ತರಾಷ್ಟ್ರಪುರೋಗಮಾಃ||

ಅನಂತರ ಸೇನೆಯೊಂದಿಗೆ ಕೃತವರ್ಮ, ಮಹಾಬಲಿಗಳಾದ ತ್ರಿಗರ್ತರು, ಭ್ರಾತೃಗಳಿಂದ ಪರಿವೃತನಾದ ನೃಪತಿ ದುರ್ಯೋಧನ, ಶಲ, ಭೂರಿಶ್ರವ, ಶಲ್ಯ, ಕೌಸಲ್ಯ ಬೃಹದ್ಬಲ ಇವರು ಧಾರ್ತರಾಷ್ಟ್ರನನ್ನು ಮುಂದಿಟ್ಟುಕೊಂಡು ಹಿಂದಿನಿಂದ ಹೊರಟರು.

05196011a ತೇ ಸಮೇನ ಪಥಾ ಯಾತ್ವಾ ಯೋತ್ಸ್ಯಮಾನಾ ಮಹಾರಥಾಃ|

05196011c ಕುರುಕ್ಷೇತ್ರಸ್ಯ ಪಶ್ಚಾರ್ಧೇ ವ್ಯವತಿಷ್ಠಂತ ದಂಶಿತಾಃ||

ಯುದ್ಧಮಾಡಲಿರುವ ಈ ಕವಚಧಾರೀ ಮಹಾರಥಿಗಳು ಸಮನಾದ ಪಥದಲ್ಲಿ ಪ್ರಯಾಣಿಸಿ ಕುರುಕ್ಷೇತ್ರದ ಇನ್ನೊಂದು ಅರ್ಧದಲ್ಲಿ ವಸತಿಮಾಡಿಕೊಂಡರು.

05196012a ದುರ್ಯೋಧನಸ್ತು ಶಿಬಿರಂ ಕಾರಯಾಮಾಸ ಭಾರತ|

05196012c ಯಥೈವ ಹಾಸ್ತಿನಪುರಂ ದ್ವಿತೀಯಂ ಸಮಲಂಕೃತಂ||

ಭಾರತ! ದುರ್ಯೋಧನನಾದರೋ ಎಂಥಹ ಶಿಬಿರಗಳನ್ನು ಮಾಡಿಸಿದ್ದನೆಂದರೆ ಅವು ಎರಡನೆಯ ಹಸ್ತಿನಾಪುರವೋ ಎಂಬಂತೆ ಸಮಲಂಕೃತವಾಗಿದ್ದವು.

05196013a ನ ವಿಶೇಷಂ ವಿಜಾನಂತಿ ಪುರಸ್ಯ ಶಿಬಿರಸ್ಯ ವಾ|

05196013c ಕುಶಲಾ ಅಪಿ ರಾಜೇಂದ್ರ ನರಾ ನಗರವಾಸಿನಃ||

ರಾಜೇಂದ್ರ! ನಗರವಾಸಿ ಕುಶಲ ಜನರಿಗೂ ಕೂಡ ತಮ್ಮ ನಗರ ಮತ್ತು ಶಿಬಿರದ ವ್ಯತ್ಯಾಸವನ್ನು ತಿಳಿಯಲಿಕ್ಕಾಗಲಿಲ್ಲ.

05196014a ತಾದೃಶಾನ್ಯೇವ ದುರ್ಗಾಣಿ ರಾಜ್ಞಾಮಪಿ ಮಹೀಪತಿಃ|

05196014c ಕಾರಯಾಮಾಸ ಕೌರವ್ಯಃ ಶತಶೋಽಥ ಸಹಸ್ರಶಃ||

ಮಹೀಪತಿ ಕೌರವ್ಯನು ತನಗಿದ್ದ ಹಾಗಿನ ನೂರಾರು ಸಹಸ್ರಾರು ದುರ್ಗಗಳನ್ನು ಇತರ ರಾಜರಿಗೂ ಮಾಡಿಸಿದನು.

05196015a ಪಂಚಯೋಜನಮುತ್ಸೃಜ್ಯ ಮಂಡಲಂ ತದ್ರಣಾಜಿರಂ|

05196015c ಸೇನಾನಿವೇಶಾಸ್ತೇ ರಾಜನ್ನಾವಿಶಂ ಶತಸಂಘಶಃ||

ರಾಜನ್! ಆ ರಣಾಂಗಣದಲ್ಲಿ ಐದು ಯೋಜನ ವಿಸ್ತೀರ್ಣದಲ್ಲಿ ನೂರಾರು ಗುಂಪು ಸೇನಾನಿವೇಶಗಳನ್ನು ಕಟ್ಟಲಾಗಿತ್ತು.

05196016a ತತ್ರ ತೇ ಪೃಥಿವೀಪಾಲಾ ಯಥೋತ್ಸಾಹಂ ಯಥಾಬಲಂ|

05196016c ವಿವಿಶುಃ ಶಿಬಿರಾಣ್ಯಾಶು ದ್ರವ್ಯವಂತಿ ಸಹಸ್ರಶಃ||

ಅಲ್ಲಿ ಆ ಪೃಥಿವೀಪಾಲರು ಅವರವರ ಉತ್ಸಾಹ ಮತ್ತು ಬಲಕ್ಕೆ ತಕ್ಕಂತೆ ದ್ರವ್ಯಗಳಿಂದ ತುಂಬಿದ ಸಹಸ್ರಾರು ಶಿಬಿರಗಳನ್ನು ಪ್ರವೇಶಿಸಿದರು.

05196017a ತೇಷಾಂ ದುರ್ಯೋಧನೋ ರಾಜಾ ಸಸೈನ್ಯಾನಾಂ ಮಹಾತ್ಮನಾಂ|

05196017c ವ್ಯಾದಿದೇಶ ಸಬಾಹ್ಯಾನಾಂ ಭಕ್ಷ್ಯಭೋಜ್ಯಮನುತ್ತಮಂ||

ರಾಜ ದುರ್ಯೋಧನನು ಸೈನ್ಯದೊಂದಿಗಿರುವ ಆ ಮಹಾತ್ಮರಿಗೆ ಅನುತ್ತಮ ಭಕ್ಷ್ಯ ಭೋಜ್ಯಗಳ ವ್ಯವಸ್ಥೆಯನ್ನೂ ಮಾಡಿಸಿದ್ದನು.

05196018a ಸಗಜಾಶ್ವಮನುಷ್ಯಾಣಾಂ ಯೇ ಚ ಶಿಲ್ಪೋಪಜೀವಿನಃ|

05196018c ಯೇ ಚಾನ್ಯೇಽನುಗತಾಸ್ತತ್ರ ಸೂತಮಾಗಧಬಂದಿನಃ||

05196019a ವಣಿಜೋ ಗಣಿಕಾ ವಾರಾ ಯೇ ಚೈವ ಪ್ರೇಕ್ಷಕಾ ಜನಾಃ|

05196019c ಸರ್ವಾಂಸ್ತಾನ್ಕೌರವೋ ರಾಜಾ ವಿಧಿವತ್ಪ್ರತ್ಯವೈಕ್ಷತ||

ಜೊತೆಗಿರುವ ಆನೆಗಳು, ಕುದುರೆಗಳು, ಮನುಷ್ಯರು, ಶಿಲ್ಪಿಗಳು, ಉಪಜೀವಿಗಳು, ಹಿಂಬಾಲಿಸಿ ಬಂದಿರುವ ಸೂತ, ಮಾಗಧ, ಬಂದಿಗಳು, ವರ್ತಕರು, ಲೆಕ್ಕ ಮಾಡುವವರು, ವೇಶ್ಯೆಯರು, ಮತ್ತು ಪ್ರೇಕ್ಷಕ ಜನರು ಎಲ್ಲರನ್ನೂ ರಾಜ ಕೌರವನು ವಿಧಿವತ್ತಾಗಿ ನೋಡಿಕೊಂಡನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಕೌರವಸೈನ್ಯನಿರ್ಯಾಣೇ ಷಣ್ಣಾವತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಕೌರವಸೈನ್ಯನಿರ್ಯಾಣದಲ್ಲಿ ನೂರಾತೊಂಭತ್ತಾರನೆಯ ಅಧ್ಯಾಯವು.

Image result for indian motifs

Comments are closed.