Udyoga Parva: Chapter 190

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೯೦

ಹಿರಣ್ಯವರ್ಮನ ಕನ್ಯೆಯೊಡನೆ ಕನ್ಯೆ ಶಿಖಂಡಿಯ ವಿವಾಹ

ಶಿಖಂಡಿಯು ಯೌವನಾವಸ್ಥೆಯನ್ನು ಪಡೆಯಲು ದ್ರುಪದನಿಗೆ ತನ್ನ ಮಗನೆಂದು ತಿಳಿದುಕೊಂಡಿರುವವನು ಸ್ತ್ರೀಯೆಂದು ತಿಳಿದು ಚಿಂತಿಸಲು, ಪತ್ನಿಯ ಸೂಚನೆಯಂತೆ ಅವಳಿಗೆ ವಿವಾಹಯೋಗ್ಯ ಕನ್ಯೆಯನ್ನು ಹುಡುಕಿ, ದಾಶಾರ್ಣಕನ ಮಗಳನ್ನು ಸೊಸೆಯನ್ನಾಗಿ ಸ್ವೀಕರಿಸಿದುದು (೧-೧೧). ವಿವಾಹದ ನಂತರ ತಾನು ಮದುವೆಯಾದ ವ್ಯಕ್ತಿಯು ಗಂಡಲ್ಲ, ಹೆಣ್ಣು ಎಂದು ತಿಳಿದ ದಾಶಾರ್ಣಕನ ಮಗಳು ತಂದೆಗೆ ವಿಷಯವನ್ನ್ನು ಹೇಳಿ ಕಳುಹಿಸಲು ದಾಶಾರ್ಣಕನು ಕೋಪಗೊಂಡು ದ್ರುಪದನನ್ನು ನಿಂದಿಸಿ ಯುದ್ಧದ ಬೆದರಿಕೆಯನ್ನು ಹಾಕಿದುದು (೧೨-೨೩).

05190001 ಭೀಷ್ಮ ಉವಾಚ|

05190001a ಚಕಾರ ಯತ್ನಂ ದ್ರುಪದಃ ಸರ್ವಸ್ಮಿನ್ಸ್ವಜನೇ ಮಹತ್|

05190001c ತತೋ ಲೇಖ್ಯಾದಿಷು ತಥಾ ಶಿಲ್ಪೇಷು ಚ ಪರಂ ಗತಾ||

05190001e ಇಷ್ವಸ್ತ್ರೇ ಚೈವ ರಾಜೇಂದ್ರ ದ್ರೋಣಶಿಷ್ಯೋ ಬಭೂವ ಹ||

ಭೀಷ್ಮನು ಹೇಳಿದನು: “ರಾಜೇಂದ್ರ! ದ್ರುಪದನು ತನ್ನ ಸ್ವಜನರಲ್ಲಿ ಬಹಳ ಸರ್ವ ಯತ್ನಗಳನ್ನೂ ಮಾಡಿದನು. ಆಗ ಅವನು ಚಿತ್ರಕಲೆಯಲ್ಲಿ ಮತ್ತು ಶಿಲ್ಪಕಲೆಯಲ್ಲಿ ಪಾರಂಗತನಾದನು. ಅವನು ಅಸ್ತ್ರಗಳನ್ನು ಕಲಿಯಲು ದ್ರೋಣನ ಶಿಷ್ಯನೂ ಆದನು.

05190002a ತಸ್ಯ ಮಾತಾ ಮಹಾರಾಜ ರಾಜಾನಂ ವರವರ್ಣಿನೀ|

05190002c ಚೋದಯಾಮಾಸ ಭಾರ್ಯಾರ್ಥಂ ಕನ್ಯಾಯಾಃ ಪುತ್ರವತ್ತದಾ||

ಮಹಾರಾಜ! ಅವನ ತಾಯಿ ವರವರ್ಣಿನಿಯು ರಾಜನಲ್ಲಿ ತನ್ನ ಪುತ್ರನಂತಿದ್ದ ಕನ್ಯೆಗೆ ಪತ್ನಿಯನ್ನು ಹುಡುಕಲು ಒತ್ತಾಯಿಸಿದಳು.

05190003a ತತಸ್ತಾಂ ಪಾರ್ಷತೋ ದೃಷ್ಟ್ವಾ ಕನ್ಯಾಂ ಸಂಪ್ರಾಪ್ತಯೌವನಾಂ|

05190003c ಸ್ತ್ರಿಯಂ ಮತ್ವಾ ತದಾ ಚಿಂತಾಂ ಪ್ರಪೇದೇ ಸಹ ಭಾರ್ಯಯಾ||

ಆಗ ತನ್ನ ಕನ್ಯೆಯು ಯೌವನವನ್ನು ಪಡೆದುದನ್ನು ನೋಡಿ ಪಾರ್ಷತನು ಆಗ ಅವಳನ್ನು ಸ್ತ್ರೀಯೆಂದು ತಿಳಿದು ತನ್ನ ಪತ್ನಿಯೊಂದಿಗೆ ಚಿಂತಿಸತೊಡಗಿದನು.

05190004 ದ್ರುಪದ ಉವಾಚ|

05190004a ಕನ್ಯಾ ಮಮೇಯಂ ಸಂಪ್ರಾಪ್ತಾ ಯೌವನಂ ಶೋಕವರ್ಧಿನೀ|

05190004c ಮಯಾ ಪ್ರಚ್ಚಾದಿತಾ ಚೇಯಂ ವಚನಾಚ್ಚೂಲಪಾಣಿನಃ||

ದ್ರುಪದನು ಹೇಳಿದನು: “ನನ್ನ ಮಗಳು ಯೌವನವನ್ನು ಪಡೆದು ನನ್ನ ಶೋಕವನ್ನು ಹೆಚ್ಚಿಸಿದ್ದಾಳೆ. ಶೂಲಪಾಣಿಯ ವಚನದಂತೆ ನಾನು ಇವಳನ್ನು ಅಡಗಿಸಿಟ್ಟೆ.

05190005a ನ ತನ್ಮಿಥ್ಯಾ ಮಹಾರಾಜ್ಞೈ ಭವಿಷ್ಯತಿ ಕಥಂ ಚನ|

05190005c ತ್ರೈಲೋಕ್ಯಕರ್ತಾ ಕಸ್ಮಾದ್ಧಿ ತನ್ಮೃಷಾ ಕರ್ತುಮರ್ಹತಿ||

ಮಹಾರಾಜ್ಞಿ! ಅದು ಎಂದೂ ಸುಳ್ಳಾಗುವುದಿಲ್ಲ! ಹೇಗೆ ತಾನೇ ತ್ರೈಲೋಕ್ಯಕರ್ತನು ಸುಳ್ಳು ಹೇಳಿಯಾನು?”

05190006 ಭಾರ್ಯೋವಾಚ|

05190006a ಯದಿ ತೇ ರೋಚತೇ ರಾಜನ್ವಕ್ಷ್ಯಾಮಿ ಶೃಣು ಮೇ ವಚಃ|

05190006c ಶ್ರುತ್ವೇದಾನೀಂ ಪ್ರಪದ್ಯೇಥಾಃ ಸ್ವಕಾರ್ಯಂ ಪೃಷತಾತ್ಮಜ||

ಭಾರ್ಯೆಯು ಹೇಳಿದಳು: “ರಾಜನ್! ಇಷ್ಟವಾದರೆ ನಾನು ಹೇಳುವುದನ್ನು ಕೇಳು. ಪೃಷತಾತ್ಮಜ! ನನ್ನ ಮಾತನ್ನು ಕೇಳಿ ನಿನ್ನ ಕಾರ್ಯವನ್ನು ಮಾಡಬೇಕು.

05190007a ಕ್ರಿಯತಾಮಸ್ಯ ನೃಪತೇ ವಿಧಿವದ್ದಾರಸಂಗ್ರಹಃ|

05190007c ಸತ್ಯಂ ಭವತಿ ತದ್ವಾಕ್ಯಮಿತಿ ಮೇ ನಿಶ್ಚಿತಾ ಮತಿಃ||

ನೃಪತೇ! ಇವನಿಗೆ ವಿಧಿವತ್ತಾಗಿ ಪತ್ನಿಯನ್ನು ಪಡೆಯುವ ಕಾರ್ಯವನ್ನು ಮಾಡೋಣ. ಆಗ ಶಿವನ ಮಾತು ಸತ್ಯವಾಗುತ್ತದೆ ಎಂದು ನನ್ನ ಬುದ್ಧಿಯು ನಿಶ್ಚಯಿಸಿದೆ.””

05190008 ಭೀಷ್ಮ ಉವಾಚ|

05190008a ತತಸ್ತೌ ನಿಶ್ಚಯಂ ಕೃತ್ವಾ ತಸ್ಮಿನ್ಕಾರ್ಯೇಽಥ ದಂಪತೀ|

05190008c ವರಯಾಂ ಚಕ್ರತುಃ ಕನ್ಯಾಂ ದಶಾರ್ಣಾಧಿಪತೇಃ ಸುತಾಂ||

ಭೀಷ್ಮನು ಹೇಳಿದನು: “ಹೀಗೆ ಆ ಕಾರ್ಯದ ಕುರಿತು ನಿಶ್ಚಯ ಮಾಡಿದ ದಂಪತಿಗಳು ದಶಾರ್ಣಾಧಿಪತಿಯ ಮಗಳನ್ನು ಕನ್ಯೆಯನ್ನಾಗಿ ಆರಿಸಿದರು.

05190009a ತತೋ ರಾಜಾ ದ್ರುಪದೋ ರಾಜಸಿಂಹಃ

         ಸರ್ವಾನ್ರಾಜ್ಞಾಃ ಕುಲತಃ ಸಂನಿಶಾಮ್ಯ|

05190009c ದಾಶಾರ್ಣಕಸ್ಯ ನೃಪತೇಸ್ತನೂಜಾಂ

         ಶಿಖಂಡಿನೇ ವರಯಾಮಾಸ ದಾರಾನ್||

ಆಗ ರಾಜಾ ರಾಜಸಿಂಹ ದ್ರುಪದನು ಎಲ್ಲ ರಾಜಕುಲಗಳನ್ನು ವಿಚಾರಿಸಿ ದಾಶಾರ್ಣಕ ನೃಪನ ತನುಜೆಯನ್ನು ಶಿಖಂಡಿಯ ಪತ್ನಿಯನ್ನಾಗಿ ವರಿಸಿದನು.

05190010a ಹಿರಣ್ಯವರ್ಮೇತಿ ನೃಪೋ ಯೋಽಸೌ ದಾಶಾರ್ಣಕಃ ಸ್ಮೃತಃ|

05190010c ಸ ಚ ಪ್ರಾದಾನ್ ಮಹೀಪಾಲಃ ಕನ್ಯಾಂ ತಸ್ಮೈ ಶಿಖಂಡಿನೇ||

ದಾಶಾರ್ಣಕ ನೃಪನು ಹಿರಣ್ಯವರ್ಮನೆಂದು ಖ್ಯಾತನಾಗಿದ್ದನು. ಆ ಮಹೀಪಾಲನು ತನ್ನ ಕನ್ಯೆಯನ್ನು ಶಿಖಂಡಿಗೆ ಕೊಟ್ಟನು.

05190011a ಸ ಚ ರಾಜಾ ದಶಾರ್ಣೇಷು ಮಹಾನಾಸೀನ್ಮಹೀಪತಿಃ|

05190011c ಹಿರಣ್ಯವರ್ಮಾ ದುರ್ಧರ್ಷೋ ಮಹಾಸೇನೋ ಮಹಾಮನಾಃ||

ಆ ರಾಜನು ದಶಾರ್ಣರಿಗೆ ಮಹಾ ಮಹೀಪತಿಯಾಗಿದ್ದನು. ಹಿರಣ್ಯವರ್ಮನು ದುರ್ಧರ್ಷನೂ, ಮಹಾಸೇನನೂ, ಮಹಾಮನಸ್ವಿಯೂ ಆಗಿದ್ದನು.

05190012a ಕೃತೇ ವಿವಾಹೇ ತು ತದಾ ಸಾ ಕನ್ಯಾ ರಾಜಸತ್ತಮ|

05190012c ಯೌವನಂ ಸಮನುಪ್ರಾಪ್ತಾ ಸಾ ಚ ಕನ್ಯಾ ಶಿಖಂಡಿನೀ||

ರಾಜಸತ್ತಮ! ವಿವಾಹವು ಮುಗಿದನಂತರ ಆ ಕನ್ಯೆಯು ಕನ್ಯೆ ಶಿಖಂಡಿನಿಯಂತೆ ಯೌವನವನ್ನು ಪಡೆದಳು.

05190013a ಕೃತದಾರಃ ಶಿಖಂಡೀ ತು ಕಾಂಪಿಲ್ಯಂ ಪುನರಾಗಮತ್|

05190013c ನ ಚ ಸಾ ವೇದ ತಾಂ ಕನ್ಯಾಂ ಕಂ ಚಿತ್ಕಾಲಂ ಸ್ತ್ರಿಯಂ ಕಿಲ||

ಪತ್ನಿಯನ್ನು ಮಾಡಿಕೊಂಡು ಶಿಖಂಡಿಯು ಕಾಂಪಿಲ್ಯ ನಗರಕ್ಕೆ ಹಿಂದಿರುಗಿದನು. ಆದರೆ ಕೆಲ ಸಮಯ ಆ ಕನ್ಯೆಯು ಅವನು ಸ್ತ್ರೀಯೆಂದು ತಿಳಿಯಲೇ ಇಲ್ಲ.

05190014a ಹಿರಣ್ಯವರ್ಮಣಃ ಕನ್ಯಾ ಜ್ಞಾತ್ವಾ ತಾಂ ತು ಶಿಖಂಡಿನೀಂ|

05190014c ಧಾತ್ರೀಣಾಂ ಚ ಸಖೀನಾಂ ಚ ವ್ರೀಡಮಾನಾ ನ್ಯವೇದಯತ್|

05190014e ಕನ್ಯಾಂ ಪಂಚಾಲರಾಜಸ್ಯ ಸುತಾಂ ತಾಂ ವೈ ಶಿಖಂಡಿನೀಂ||

ಶಿಖಂಡಿನಿಯ ಕುರಿತು ಗೊತ್ತಾದ ನಂತರ ಹಿರಣ್ಯವರ್ಮನ ಕನ್ಯೆಯು ನಾಚಿಕೊಳ್ಳುತ್ತಾ ಶಿಖಂಡಿನಿಯು ಪಂಚಾಲರಾಜನ ಮಗಳೆಂದು ತನ್ನ ದಾಸಿಯರಿಗೂ ಸಖಿಗಳಿಗೂ ಹೇಳಿದಳು.

05190015a ತತಸ್ತಾ ರಾಜಶಾರ್ದೂಲ ಧಾತ್ರ್ಯೋ ದಾಶಾರ್ಣಿಕಾಸ್ತದಾ|

05190015c ಜಗ್ಮುರಾರ್ತಿಂ ಪರಾಂ ದುಃಖಾತ್ಪ್ರೇಷಯಾಮಾಸುರೇವ ಚ||

ರಾಜಶಾರ್ದೂಲ! ಆಗ ದಾಶಾರ್ಣಿಕ ದಾಸಿಯರು ಪರಮ ದುಃಖಿತರಾಗಿ ಆರ್ತರಾಗಿ ವಿಷಯವನ್ನು ಅಲ್ಲಿಗೆ ಹೇಳಿಕಳುಹಿಸಿದರು.

05190016a ತತೋ ದಶಾರ್ಣಾಧಿಪತೇಃ ಪ್ರೇಷ್ಯಾಃ ಸರ್ವಂ ನ್ಯವೇದಯನ್|

05190016c ವಿಪ್ರಲಂಭಂ ಯಥಾವೃತ್ತಂ ಸ ಚ ಚುಕ್ರೋಧ ಪಾರ್ಥಿವಃ||

ಕಳುಹಿಸಿದವರು ಎಲ್ಲವನ್ನು ಮೋಸವು ಹೇಗೆ ನಡೆಯಿತೋ ಹಾಗೆ - ನಿವೇದಿಸಿದರು. ಆಗ ಪಾರ್ಥಿವನು ಕುಪಿತನಾದನು.

05190017a ಶಿಖಂಡ್ಯಪಿ ಮಹಾರಾಜ ಪುಂವದ್ರಾಜಕುಲೇ ತದಾ|

05190017c ವಿಜಹಾರ ಮುದಾ ಯುಕ್ತಃ ಸ್ತ್ರೀತ್ವಂ ನೈವಾತಿರೋಚಯನ್||

ಮಹಾರಾಜ! ಆದರೆ ಶಿಖಂಡಿಯು ಪುರುಷನಂತೆಯೇ ರಾಜಕುಲದಲ್ಲಿ ಸ್ತ್ರೀತ್ವವನ್ನು ಉಲ್ಲಂಘಿಸಿ ಸಂತೋಷದಿಂದ ಓಡಾಡಿಕೊಂಡಿದ್ದನು.

05190018a ತತಃ ಕತಿಪಯಾಹಸ್ಯ ತಚ್ಚ್ರುತ್ವಾ ಭರತರ್ಷಭ|

05190018c ಹಿರಣ್ಯವರ್ಮಾ ರಾಜೇಂದ್ರ ರೋಷಾದಾರ್ತಿಂ ಜಗಾಮ ಹ||

ಭರತರ್ಷಭ! ಇದನ್ನು ಕೇಳಿದ ರಾಜೇಂದ್ರ ಹಿರಣ್ಯವರ್ಮನು ರೋಷದಿಂದ ಆರ್ತನಾದನು.

05190019a ತತೋ ದಾಶಾರ್ಣಕೋ ರಾಜಾ ತೀವ್ರಕೋಪಸಮನ್ವಿತಃ|

05190019c ದೂತಂ ಪ್ರಸ್ಥಾಪಯಾಮಾಸ ದ್ರುಪದಸ್ಯ ನಿವೇಶನೇ||

ತೀವ್ರಕೋಪಸಮನ್ವಿತನಾದ ರಾಜಾ ದಾಶಾರ್ಣಕನು ದ್ರುಪದನ ನಿವೇಶನಕ್ಕೆ ದೂತನನ್ನು ಕಳುಹಿಸಿಕೊಟ್ಟನು.

05190020a ತತೋ ದ್ರುಪದಮಾಸಾದ್ಯ ದೂತಃ ಕಾಂಚನವರ್ಮಣಃ|

05190020c ಏಕ ಏಕಾಂತಮುತ್ಸಾರ್ಯ ರಹೋ ವಚನಮಬ್ರವೀತ್||

ಹಿರಣ್ಯವರ್ಮನ ದೂತನು ದ್ರುಪದನ ಬಳಿ ಬಂದು, ಒಬ್ಬನನ್ನೇ ಏಕಾಂತದಲ್ಲಿ ಕರೆದು ರಹಸ್ಯದಲ್ಲಿ ಈ ಮಾತನ್ನಾಡಿದನು:

05190021a ದಶಾರ್ಣರಾಜೋ ರಾಜಂಸ್ತ್ವಾಮಿದಂ ವಚನಮಬ್ರವೀತ್|

05190021c ಅಭಿಷಂಗಾತ್ಪ್ರಕುಪಿತೋ ವಿಪ್ರಲಬ್ಧಸ್ತ್ವಯಾನಘ|

“ರಾಜನ್! ಅನಘ! ನಿನ್ನಿಂದ ಮೋಸಗೊಂಡು, ಅಪಮಾನಿತನಾಗಿ ದಾಶಾರ್ಣರಾಜನು ನಿನಗೆ ಈ ಮಾತನ್ನು ಹೇಳಿಕಳುಹಿಸಿದ್ದಾನೆ.

05190022a ಅವಮನ್ಯಸೇ ಮಾಂ ನೃಪತೇ ನೂನಂ ದುರ್ಮಂತ್ರಿತಂ ತವ|

05190022c ಯನ್ಮೇ ಕನ್ಯಾಂ ಸ್ವಕನ್ಯಾರ್ಥೇ ಮೋಹಾದ್ಯಾಚಿತವಾನಸಿ||

“ನೃಪತೇ! ನನ್ನನ್ನು ನೀನು ಅಪಮಾನಗೊಳಿಸಿದ್ದೀಯೆ. ನೀನು ಕೆಟ್ಟ ಸಲಹೆಗಳನ್ನು ಕೊಟ್ಟಿದ್ದೀಯೆ. ನನ್ನ ಕನ್ಯೆಯನ್ನು ನಿನ್ನ ಕನ್ಯೆಗೋಸ್ಕರ ಮೋಸಗೊಳಿಸಿ ತೆಗೆದುಕೊಂಡಿದ್ದೀಯೆ.

05190023a ತಸ್ಯಾದ್ಯ ವಿಪ್ರಲಂಭಸ್ಯ ಫಲಂ ಪ್ರಾಪ್ನುಹಿ ದುರ್ಮತೇ|

05190023c ಏಷ ತ್ವಾಂ ಸಜನಾಮಾತ್ಯಮುದ್ಧರಾಮಿ ಸ್ಥಿರೋ ಭವ||

ದುರ್ಮತೇ! ಇಂದು ಆ ಮೋಸದ ಫಲವನ್ನು ನೀನು ಪಡೆಯುತ್ತೀಯೆ! ನಿನ್ನನ್ನು ನಿನ್ನ ಜನರು ಅಮಾತ್ಯರೊಂದಿಗೆ ಮುಗಿಸಿಬಿಡುತ್ತೇನೆ. ಸ್ಥಿರನಾಗು!”””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಹಿರಣ್ಯವರ್ಮದೂತಾಗಮನೇ ನವತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಹಿರಣ್ಯವರ್ಮದೂತಾಗಮನದಲ್ಲಿ ನೂರಾತೊಂಭತ್ತನೆಯ ಅಧ್ಯಾಯವು.

Image result for indian motifs

Comments are closed.