Udyoga Parva: Chapter 19

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೯

ಪಾಂಡವ-ಕೌರವರಲ್ಲಿ ಬಂದು ಸೇರಿದ ಸೇನೆಗಳು

ಸಾತ್ಯಕಿ, ಚೇದಿಯ ಧೃಷ್ಟಕೇತು, ಮಾಗಧ ಜಯತ್ಸೇನ ಇವರ ಒಂದೊಂದು ಅಕ್ಷೋಹಿಣೀ ಸೇನೆಗಳು, ಪಾಂಡ್ಯರು, ಪಾಂಚಾಲರು, ಮತ್ತು ಮತ್ಸ್ಯರು ಒಟ್ಟು ಏಳು ಅಕ್ಷೋಹಿಣೀ ಸೇನೆಗಳು ಪಾಂಡವರನ್ನು ಸೇರಿದುದು (೧-೧೩). ಭಗದತ್ತ, ಭೂರಿಶ್ರವ, ಶಲ್ಯ, ಕೃತವರ್ಮ, ಜಯದ್ರಥ, ಕಾಂಬೋಜದ ಸುದಕ್ಷಿಣ, ಅವಂತಿಯ ಇಬ್ಬರು ಮಹೀಪಾಲರು, ಕೇಕಯ ಸಹೋದರರು ಒಂದೊಂದು ಅಕ್ಷೋಹಿಣಿಗಳನ್ನೂ ತಂದು, ಒಟ್ಟಾರೆ ಹನ್ನೊಂದು ಅಕ್ಷೋಹಿಣೀ ಸೇನೆಯು ದುರ್ಯೋಧನನಲ್ಲಿಗೆ ಬಂದು ಸೇರಿದುದು (೧೪-೩೨).

05019001 ವೈಶಂಪಾಯನ ಉವಾಚ|

05019001a ಯುಯುಧಾನಸ್ತತೋ ವೀರಃ ಸಾತ್ವತಾನಾಂ ಮಹಾರಥಃ|

05019001c ಮಹತಾ ಚತುರಂಗೇಣ ಬಲೇನಾಗಾದ್ಯುಧಿಷ್ಠಿರಂ||

ವೈಶಂಪಾಯನನು ಹೇಳಿದನು: “ಆಗ ವೀರ ಸಾತ್ವತರ ಮಹಾರಥಿ ಯುಯುಧಾನನು ಮಹಾ ಚತುರಂಗ ಬಲದೊಂದಿಗೆ ಯುಧಿಷ್ಠಿರನಲ್ಲಿಗೆ ಬಂದನು.

05019002a ತಸ್ಯ ಯೋಧಾ ಮಹಾವೀರ್ಯಾ ನಾನಾದೇಶಸಮಾಗತಾಃ|

05019002c ನಾನಾಪ್ರಹರಣಾ ವೀರಾಃ ಶೋಭಯಾಂ ಚಕ್ರಿರೇ ಬಲಂ||

ನಾನಾದೇಶಗಳಿಂದ ಬಂದು ಸೇರಿದ್ದ ಅವನ ಆ ಮಹಾವೀರ, ನಾನಾಪ್ರಹರಣಗಳಲ್ಲಿ ವೀರ ಯೋಧರು ಸೇನೆಗೆ ಶೋಭೆಯನ್ನು ತಂದರು.

05019003a ಪರಶ್ವಧೈರ್ಭಿಂಡಿಪಾಲೈಃ ಶಕ್ತಿತೋಮರಮುದ್ಗರೈಃ|

05019003c ಶಕ್ತ್ಯೃಷ್ಟಿಪರಶುಪ್ರಾಸೈಃ ಕರವಾಲೈಶ್ಚ ನಿರ್ಮಲೈಃ||

05019004a ಖಡ್ಗಕಾರ್ಮುಕನಿರ್ಯೂಹೈಃ ಶರೈಶ್ಚ ವಿವಿಧೈರಪಿ|

05019004c ತೈಲಧೌತೈಃ ಪ್ರಕಾಶದ್ಭಿಸ್ತದಶೋಭತ ವೈ ಬಲಂ||

ಆ ಬಲವು ಪರಶು, ಭಿಂಡಿಪಾಲ, ಶಕ್ತಿ, ತೋಮರ, ಮುದ್ಗರ, ಶಕ್ತಿ, ಮುಷ್ಟಿ, ಪರಶು, ಪ್ರಾಸ, ನಿರ್ಮಲ ಕರವಾಲ, ಖಡ್ಗ, ಕಾರ್ಮುಕ, ವಿವಿಧ ಶರಗಳು, ತೈಲಧೌತಗಳು, ಮತ್ತು ಪ್ರಕಾಶಗಳಿಂದ ಶೋಭಿಸಿತು.

05019005a ತಸ್ಯ ಮೇಘಪ್ರಕಾಶಸ್ಯ ಶಸ್ತ್ರೈಸ್ತೈಃ ಶೋಭಿತಸ್ಯ ಚ|

05019005c ಬಭೂವ ರೂಪಂ ಸೈನ್ಯಸ್ಯ ಮೇಘಸ್ಯೇವ ಸವಿದ್ಯುತಃ||

ಶಸ್ತ್ರಸ್ತ್ರಗಳಿಂದ ಶೋಭಿಸುತ್ತಿದ್ದ ಮೇಘಭರಿತ ಆಕಾಶದ ಬಣ್ಣವನ್ನು ತಳೆದ ಅವನ ಸೇನೆಯು ಮಿಂಚಿನಿಂದ ಕೂಡಿದ ಮೇಘದಂತೆ ಕಂಡಿತು.

05019006a ಅಕ್ಷೌಹಿಣೀ ಹಿ ಸೇನಾ ಸಾ ತದಾ ಯೌಧಿಷ್ಠಿರಂ ಬಲಂ|

05019006c ಪ್ರವಿಶ್ಯಾಂತರ್ದಧೇ ರಾಜನ್ಸಾಗರಂ ಕುನದೀ ಯಥಾ||

ಅವನ ಸೇನೆಯು ಒಂದು ಅಕ್ಷೌಹಿಣಿಯದಾಗಿತ್ತು. ಯುಧಿಷ್ಠಿರನ ಬಲವು ಅದನ್ನು ಪ್ರವೇಶಿಸಿದಾಗ ಸಾಗರವನ್ನು ಸೇರುವ ಸಣ್ಣ ನದಿಯಂತೆ ಕಾಣದಾಯಿತು.

05019007a ತಥೈವಾಕ್ಷೌಹಿಣೀಂ ಗೃಹ್ಯ ಚೇದೀನಾಮೃಷಭೋ ಬಲೀ|

05019007c ಧೃಷ್ಟಕೇತುರುಪಾಗಚ್ಚತ್ಪಾಂಡವಾನಮಿತೌಜಸಃ||

ಹಾಗೆಯೇ ಚೇದಿಗಳ ರಾಜ ಬಲಶಾಲಿ ಧೃಷ್ಟಕೇತುವು ಅಕ್ಷೌಹಿಣೀ ಸೇನೆಯನ್ನು ತೆಗೆದುಕೊಂಡು ಅಮಿತೌಜಸ ಪಾಂಡವನಲ್ಲಿಗೆ ಆಗಮಿಸಿದನು.

05019008a ಮಾಗಧಶ್ಚ ಜಯತ್ಸೇನೋ ಜಾರಾಸಂಧಿರ್ಮಹಾಬಲಃ|

05019008c ಅಕ್ಷೌಹಿಣ್ಯೈವ ಸೈನ್ಯಸ್ಯ ಧರ್ಮರಾಜಮುಪಾಗಮತ್||

ಜರಾಸಂಧನ ಮಗ ಮಹಾಬಲ ಮಾಗಧ ಜಯತ್ಸೇನನು ಅಕ್ಷೌಹಿಣೀ ಸೇನೆಯೊಂದಿಗೆ ಧರ್ಮರಾಜನಲ್ಲಿಗೆ ಬಂದನು.

05019009a ತಥೈವ ಪಾಂಡ್ಯೋ ರಾಜೇಂದ್ರ ಸಾಗರಾನೂಪವಾಸಿಭಿಃ|

05019009c ವೃತೋ ಬಹುವಿಧೈರ್ಯೋಧೈರ್ಯುಧಿಷ್ಠಿರಮುಪಾಗಮತ್||

ಹಾಗೆಯೇ ಸಾಗರ ತೀರದಲ್ಲಿ ವಾಸಿಸುವ ರಾಜೇಂದ್ರ ಪಾಂಡ್ಯನು ಬಹುವಿಧದ ಯೋಧರಿಂದ ಆವೃತನಾಗಿ ಯುಧಿಷ್ಠಿರನ ಬಳಿ ಬಂದನು.

05019010a ತಸ್ಯ ಸೈನ್ಯಮತೀವಾಸೀತ್ತಸ್ಮಿನ್ಬಲಸಮಾಗಮೇ|

05019010c ಪ್ರೇಕ್ಷಣೀಯತರಂ ರಾಜನ್ಸುವೇಷಂ ಬಲವತ್ತದಾ||

ರಾಜನ್! ಸೇನೆಗಳು ಸೇರಿ ಅವನ ಸೇನೆಯು ಸುಂದರವೂ, ಬಲಶಾಲಿಯೂ, ಪ್ರೇಕ್ಷಣೀಯವೂ ಆಗಿತ್ತು.

05019011a ದ್ರುಪದಸ್ಯಾಪ್ಯಭೂತ್ಸೇನಾ ನಾನಾದೇಶಸಮಾಗತೈಃ|

05019011c ಶೋಭಿತಾ ಪುರುಷೈಃ ಶೂರೈಃ ಪುತ್ರೈಶ್ಚಾಸ್ಯ ಮಹಾರಥೈಃ||

ನಾನಾ ದೇಶಗಳಿಂದ ಬಂದು ಸೇರಿದ್ದ ದ್ರುಪದನ ಸೇನೆಯು ಶೂರ ಪುರುಷರಿಂದ ಮತ್ತು ಮಹಾರಥಿ ಪುತ್ರರಿಂದ ಶೋಭಿಸುತ್ತಿತ್ತು.

05019012a ತಥೈವ ರಾಜಾ ಮತ್ಸ್ಯಾನಾಂ ವಿರಾಟೋ ವಾಹಿನೀಪತಿಃ|

05019012c ಪಾರ್ವತೀಯೈರ್ಮಹೀಪಾಲೈಃ ಸಹಿತಃ ಪಾಂಡವಾನಿಯಾತ್||

ಹಾಗೆಯೇ ವಾಹಿನೀಪತಿ ಮತ್ಸ್ಯರ ರಾಜ ವಿರಾಟನು ಪರ್ವತವಾಸೀ ಮಹೀಪಾಲರೊಂದಿಗೆ ಪಾಂಡವರಲ್ಲಿಗೆ ಬಂದನು.

05019013a ಇತಶ್ಚೇತಶ್ಚ ಪಾಂಡೂನಾಂ ಸಮಾಜಗ್ಮುರ್ಮಹಾತ್ಮನಾಂ|

05019013c ಅಕ್ಷೌಹಿಣ್ಯಸ್ತು ಸಪ್ತೈವ ವಿವಿಧಧ್ವಜಸಂಕುಲಾಃ|

05019013e ಯುಯುತ್ಸಮಾನಾಃ ಕುರುಭಿಃ ಪಾಂಡವಾನ್ಸಮಹರ್ಷಯನ್||

ಮಹಾತ್ಮ ಪಾಂಡವರಲ್ಲಿಗೆ ಇವರು ಮತ್ತು ಇತರ ವಿವಿಧ ಧ್ವಜ ಸಂಕುಲಗಳ ಏಳು ಅಕ್ಷೌಹಿಣೀಗಳು ಬಂದು ಸೇರಿದವು. ಕುರುಗಳೊಂದಿಗೆ ಹೋರಾಡಲು ಉತ್ಸಾಹಿತರಾದ ಅವರು ಪಾಂಡವರನ್ನು ಸಂತೋಷಗೊಳಿಸಿದರು.

05019014a ತಥೈವ ಧಾರ್ತರಾಷ್ಟ್ರಸ್ಯ ಹರ್ಷಂ ಸಮಭಿವರ್ಧಯನ್|

05019014c ಭಗದತ್ತೋ ಮಹೀಪಾಲಃ ಸೇನಾಮಕ್ಷೌಹಿಣೀಂ ದದೌ||

ಹಾಗೆಯೇ ಮಹೀಪಾಲ ಭಗದತ್ತನು ಒಂದು ಅಕ್ಷೌಹಿಣೀ ಸೇನೆಯನ್ನಿತ್ತು ಧಾರ್ತರಾಷ್ಟ್ರನ ಹರ್ಷವನ್ನು ಹೆಚ್ಚಿಸಿದನು.

05019015a ತಸ್ಯ ಚೀನೈಃ ಕಿರಾತೈಶ್ಚ ಕಾಂಚನೈರಿವ ಸಂವೃತಂ|

05019015c ಬಭೌ ಬಲಮನಾಧೃಷ್ಯಂ ಕರ್ಣಿಕಾರವನಂ ಯಥಾ||

ಬಂಗಾರದಂತೆ ಹೊಳೆಯುತ್ತಿದ್ದ ಚೀನ-ಕಿರಾತರಿಂದ ಕೂಡಿದ್ದ ಅವನ ಸೇನೆಯು ಕರ್ಣಿಕಾರವನದಂತೆ ತೋರಿತು.

05019016a ತಥಾ ಭೂರಿಶ್ರವಾಃ ಶೂರಃ ಶಲ್ಯಶ್ಚ ಕುರುನಂದನ|

05019016c ದುರ್ಯೋಧನಮುಪಾಯಾತಾವಕ್ಷೌಹಿಣ್ಯಾ ಪೃಥಕ್ ಪೃಥಕ್||

ಕುರುನಂದನ! ಹಾಗೆಯೇ ಭೂರಿಶ್ರವ ಮತ್ತು ಶೂರ ಶಲ್ಯರು ಪ್ರತ್ಯೇಕ ಪ್ರತ್ಯೇಕವಾಗಿ ಒಂದೊಂದು ಅಕ್ಷೌಹಿಣಿಯನ್ನು ದುರ್ಯೋಧನನಿಗೆ ನೀಡಿದರು.

05019017a ಕೃತವರ್ಮಾ ಚ ಹಾರ್ದಿಕ್ಯೋ ಭೋಜಾಂಧಕಬಲೈಃ ಸಹ|

05019017c ಅಕ್ಷೌಹಿಣ್ಯೈವ ಸೇನಾಯಾ ದುರ್ಯೋಧನಮುಪಾಗಮತ್||

ಹಾರ್ದಿಕ್ಯ ಕೃತವರ್ಮನು ಭೋಜ-ಅಂಧಕರ ಸೇನೆಯೊಂದಿಗೆ ಒಂದು ಅಕ್ಷೌಹಿಣೀ ಸೇನೆಯೊಂದಿಗೆ ದುರ್ಯೋಧನನಲ್ಲಿಗೆ ಬಂದನು.

05019018a ತಸ್ಯ ತೈಃ ಪುರುಷವ್ಯಾಘ್ರೈರ್ವನಮಾಲಾಧರೈರ್ಬಲಂ|

05019018c ಅಶೋಭತ ಯಥಾ ಮತ್ತೈರ್ವನಂ ಪ್ರಕ್ರೀಡಿತೈರ್ಗಜೈಃ||

ವನಮಾಲೆಗಳನ್ನು ಧರಿಸಿದ್ದ ಪುರುಷವ್ಯಾಘ್ರರಿಂದ ತುಂಬಿದ ಅವನ ಆ ಸೇನೆಯು ಮತ್ತ ಗಜಗಳು ಆಡುತ್ತಿರುವ ವನದಂತೆ ಶೋಭಿಸಿತು.

05019019a ಜಯದ್ರಥಮುಖಾಶ್ಚಾನ್ಯೇ ಸಿಂಧುಸೌವೀರವಾಸಿನಃ|

05019019c ಆಜಗ್ಮುಃ ಪೃಥಿವೀಪಾಲಾಃ ಕಂಪಯಂತ ಇವಾಚಲಾನ್||

ಜಯದ್ರಥನ ಮುಂದಾಳುತ್ವದಲ್ಲಿ ಇತರ ಸಿಂಧು ಸೌವೀರ ವಾಸಿ ಪೃಥ್ವೀಪಾಲರು ಪರ್ವತಗಳನ್ನು ನಡುಗಿಸುವಂತೆ ಆಗಮಿಸಿದರು.

05019020a ತೇಷಾಮಕ್ಷೌಹಿಣೀ ಸೇನಾ ಬಹುಲಾ ವಿಬಭೌ ತದಾ|

05019020c ವಿಧೂಯಮಾನಾ ವಾತೇನ ಬಹುರೂಪಾ ಇವಾಂಬುದಾಃ||

ಅವರ ಅಕ್ಷೌಹಿಣೀ ಸೇನೆಯು ಗಾಳಿಯಿಂದ ತೂರಿಸಿಕೊಂಡು ಬಂದ ಬಹುರೂಪದ ಮೋಡಗಳಂತೆ ತೋರಿತು.

05019021a ಸುದಕ್ಷಿಣಶ್ಚ ಕಾಂಬೋಜೋ ಯವನೈಶ್ಚ ಶಕೈಸ್ತಥಾ|

05019021c ಉಪಾಜಗಾಮ ಕೌರವ್ಯಮಕ್ಷೌಹಿಣ್ಯಾ ವಿಶಾಂ ಪತೇ||

ವಿಶಾಂಪತೇ! ಕಾಂಬೋಜ ಸುದಕ್ಷಿಣ, ಯವನ ಮತ್ತು ಶಕರು ಅಕ್ಷೌಹಿಣಿಯೊಂದಿಗೆ ಕೌರವನಲ್ಲಿಗೆ ಬಂದರು.

05019022a ತಸ್ಯ ಸೇನಾಸಮಾವಾಹ್ಯ ಶಲಭಾನಾಮಿವಾಬಭೌ|

05019022c ಸ ಚ ಸಂಪ್ರಾಪ್ಯ ಕೌರವ್ಯಂ ತತ್ರೈವಾಂತರ್ದಧೇ ತದಾ||

ಶಲಭಗಳ ಗುಂಪಿನಂತಿದ್ದ ಅವನ ಸೇನೆಯು ಕೌರವನ ಸೇನೆಯನ್ನು ಸೇರಿ ಅಲ್ಲಿಯೇ ಅಂತರ್ಧಾನವಾಯಿತು.

05019023a ತಥಾ ಮಾಹಿಷ್ಮತೀವಾಸೀ ನೀಲೋ ನೀಲಾಯುಧೈಃ ಸಹ|

05019023c ಮಹೀಪಾಲೋ ಮಹಾವೀರ್ಯೈರ್ದಕ್ಷಿಣಾಪಥವಾಸಿಭಿಃ||

05019024a ಆವಂತ್ಯೌ ಚ ಮಹೀಪಾಲೌ ಮಹಾಬಲಸುಸಂವೃತೌ|

05019024c ಪೃಥಗಕ್ಷೌಹಿಣೀಭ್ಯಾಂ ತಾವಭಿಯಾತೌ ಸುಯೋಧನಂ||

ಹಾಗೆಯೇ ಮಾಹಿಷ್ಮತೀ ವಾಸಿಗಳಾದ ನೀಲರು ನೀಲಾಯುಧಗಳೊಂದಿಗೆ, ದಕ್ಷಿಣಾಪಥವಾಸಿಗಳಾದ ಮಹಾವೀರ ಮಹೀಪಾಲರು, ಮಹಾಬಲ ಸಂವೃತರಾದ ಅವಂತಿಯ ಮಹೀಪಾಲರಿಬ್ಬರು ಪ್ರತ್ಯೇಕ ಅಕ್ಷೌಹಿಣೀಗಳೊಂದಿಗೆ ಸುಯೋಧನನಲ್ಲಿಗೆ ಆಗಮಿಸಿದರು.

05019025a ಕೇಕಯಾಶ್ಚ ನರವ್ಯಾಘ್ರಾಃ ಸೋದರ್ಯಾಃ ಪಂಚ ಪಾರ್ಥಿವಾಃ|

05019025c ಸಂಹರ್ಷಯಂತಃ ಕೌರವ್ಯಮಕ್ಷೌಹಿಣ್ಯಾ ಸಮಾದ್ರವನ್||

ನರವ್ಯಾಘ್ರ ಪಾರ್ಥಿವ ಕೇಕಯ ಸಹೋದರರೈವರು ಅಕ್ಷೌಹಿಣಿಗಳಿಂದ ಕೌರವ್ಯನನ್ನು ಸಂತೋಷಗೊಳಿಸಿದರು.

05019026a ಇತಶ್ಚೇತಶ್ಚ ಸರ್ವೇಷಾಂ ಭೂಮಿಪಾನಾಂ ಮಹಾತ್ಮನಾಂ|

05019026c ತಿಸ್ರೋಽನ್ಯಾಃ ಸಮವರ್ತಂತ ವಾಹಿನ್ಯೋ ಭರತರ್ಷಭ||

ಭರತರ್ಷಭ! ಇವರು ಮತ್ತು ಇತರ ಮಹಾತ್ಮ ಭೂಮಿಪರೆಲ್ಲರ ಮೂರು ಭಾಗಗಳ ವಾಹಿನಿಯೂ ಬಂದು ಸೇರಿತು.

05019027a ಏವಮೇಕಾದಶಾವೃತ್ತಾಃ ಸೇನಾ ದುರ್ಯೋಧನಸ್ಯ ತಾಃ|

05019027c ಯುಯುತ್ಸಮಾನಾಃ ಕೌಂತೇಯಾನ್ನಾನಾಧ್ವಜಸಮಾಕುಲಾಃ||

ಹೀಗೆ ದುರ್ಯೋಧನನಲ್ಲಿ ಹನ್ನೊಂದು ಅಕ್ಷೌಹಿಣೀ ಸೇನೆಯು ಬಂದು ಸೇರಿತು. ನಾನಾಧ್ವಜ ಸಮಾಕುಲರಾದ ಅವರು ಕೌಂತೇಯರೊಡನೆ ಯುದ್ಧಮಾಡಲು ಉತ್ಸುಕರಾಗಿದ್ದರು.

05019028a ನ ಹಾಸ್ತಿನಪುರೇ ರಾಜನ್ನವಕಾಶೋಽಭವತ್ತದಾ|

05019028c ರಾಜ್ಞಾಂ ಸಬಲಮುಖ್ಯಾನಾಂ ಪ್ರಾಧಾನ್ಯೇನಾಪಿ ಭಾರತ||

ಭಾರತ! ರಾಜನ್! ಹಸ್ತಿನಾಪುರದಲ್ಲಿ ರಾಜನ ಸಬಲಮುಖ್ಯರಿಗೆ ಮತ್ತು ಪ್ರಧಾನರಿಗೆ ಕೂಡ ಸ್ಥಳವಿಲ್ಲದಂತಾಯಿತು.

05019029a ತತಃ ಪಂಚನದಂ ಚೈವ ಕೃತ್ಸ್ನಂ ಚ ಕುರುಜಾಂಗಲಂ|

05019029c ತಥಾ ರೋಹಿತಕಾರಣ್ಯಂ ಮರುಭೂಮಿಶ್ಚ ಕೇವಲಾ||

05019030a ಅಹಿಚ್ಚತ್ರಂ ಕಾಲಕೂಟಂ ಗಂಗಾಕೂಲಂ ಚ ಭಾರತ|

05019030c ವಾರಣಾ ವಾಟಧಾನಂ ಚ ಯಾಮುನಶ್ಚೈವ ಪರ್ವತಃ||

05019031a ಏಷ ದೇಶಃ ಸುವಿಸ್ತೀರ್ಣಃ ಪ್ರಭೂತಧನಧಾನ್ಯವಾನ್|

05019031c ಬಭೂವ ಕೌರವೇಯಾಣಾಂ ಬಲೇನ ಸುಸಮಾಕುಲಃ||

ಭಾರತ! ಆಗ ಐದುನದಿಗಳ ಮತ್ತು ಕುರುಜಾಂಗಲವೆಲ್ಲವೂ, ಹಾಗೆಯೇ ಸಮಭೂಮಿಯ ರೋಹಿತಾರಣ್ಯವೂ, ಅಹಿಚ್ಛತ್ರ, ಕಾಲಕೂಟ, ಗಂಗಾಕೂಲ, ವಾರಣ, ವಾಟಧಾನ, ಯಮುನಾ ಪರ್ವತವೂ, ಧನಧಾನ್ಯಗಳಿಂದ ಸಮೃದ್ಧವಾದ ಈ ಎಲ್ಲ ಸುವಿಸ್ತೀರ್ಣ ಪ್ರದೇಶಗಳೂ ಕೌರವ ಸೇನೆಯ ಸಮಾಕುಲದಿಂದ ತುಂಬಿಹೋದವು.

05019032a ತತ್ರ ಸೈನ್ಯಂ ತಥಾಯುಕ್ತಂ ದದರ್ಶ ಸ ಪುರೋಹಿತಃ|

05019032c ಯಃ ಸ ಪಾಂಚಾಲರಾಜೇನ ಪ್ರೇಷಿತಃ ಕೌರವಾನ್ಪ್ರತಿ||

ಯಥಾಯುಕ್ತವಾಗಿ ಕೌರವರ ಕಡೆ ಪಾಂಚಾಲರಾಜನಿಂದ ಕಳುಹಿಸಲ್ಪಟ್ಟಿದ್ದ ಪುರೋಹಿತನು ಆ ಸೇನೆಯನ್ನು ನೋಡಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಪುರೋಹಿತಸೈನ್ಯದರ್ಶನೇ ಏಕೋನವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಪುರೋಹಿತಸೈನ್ಯದರ್ಶನದಲ್ಲಿ ಹತ್ತೊಂಭತ್ತನೆಯ ಅಧ್ಯಾಯವು.

Related image

Comments are closed.