Udyoga Parva: Chapter 186

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೬

ಪರಶುರಾಮ-ಭೀಷ್ಮರು ಯುದ್ಧದಿಂದ ಹಿಂದೆಸರಿದುದು

ಭೀಷ್ಮನು ಪ್ರಸ್ವಾಪವನ್ನು ಪ್ರಯೋಗಿಸಬೇಕೆಂದಿರುವಾಗ ವಸುಗಳೊಂದಿಗೆ ನಾರದನು ಅವನನ್ನು ತಡೆದು, ಭೀಷ್ಮನೂ ಪರಶುರಾಮನೂ ಯುದ್ಧದಿಂದ ಹಿಂದೆ ಸರಿಯುವಂತೆ ಮಾಡಿದುದು (೧-೩೬).

The sage Narada and the gods stop Bhishma's battle with Parashurama.05186001 ಭೀಷ್ಮ ಉವಾಚ|

05186001a ತತೋ ಹಲಹಲಾಶಬ್ದೋ ದಿವಿ ರಾಜನ್ಮಹಾನಭೂತ್|

05186001c ಪ್ರಸ್ವಾಪಂ ಭೀಷ್ಮ ಮಾ ಸ್ರಾಕ್ಷೀರಿತಿ ಕೌರವನಂದನ||

ಭೀಷ್ಮನು ಹೇಳಿದನು: “ರಾಜನ್! ಆಗ “ಕೌರವನಂದನ! ಭೀಷ್ಮ! ಪ್ರಸ್ವಾಪವನ್ನು ಪ್ರಯೋಗಿಸಬೇಡ!” ಎಂದು ದಿವಿಯಲ್ಲಿ ಮಹಾ ಹಲಹಲ ಶಬ್ಧವು ಕೇಳಿಬಂದಿತು.

05186002a ಅಯುಂಜಮೇವ ಚೈವಾಹಂ ತದಸ್ತ್ರಂ ಭೃಗುನಂದನೇ|

05186002c ಪ್ರಸ್ವಾಪಂ ಮಾಂ ಪ್ರಯುಂಜಾನಂ ನಾರದೋ ವಾಕ್ಯಮಬ್ರವೀತ್||

ಹೀಗೆ ಹೇಳಿದರೂ ನಾನು ಆ ಅಸ್ತ್ರವನ್ನು ಭೃಗುನಂದನನ ಮೇಲೆ ಗುರಿಯಿಟ್ಟೆನು. ನಾನು ಪ್ರಸ್ವಾಪವನ್ನು ಪ್ರಯೋಗಿಸುವುದರಲ್ಲಿರುವಾಗ ನಾರದನು ಹೇಳಿದನು:

05186003a ಏತೇ ವಿಯತಿ ಕೌರವ್ಯ ದಿವಿ ದೇವಗಣಾಃ ಸ್ಥಿತಾಃ|

05186003c ತೇ ತ್ವಾಂ ನಿವಾರಯಂತ್ಯದ್ಯ ಪ್ರಸ್ವಾಪಂ ಮಾ ಪ್ರಯೋಜಯ||

“ಕೌರವ್ಯ! ಯೋಚಿಸು! ದೇವಗಣಗಳು ದಿವಿಯಲ್ಲಿ ನಿಂತಿರುವರು. ಇಂದು ಅವರೂ ಕೂಡ ನಿನ್ನನ್ನು ತಡೆಯುತ್ತಿದ್ದಾರೆ. ಪ್ರಸ್ವಾಪವನ್ನು ಪ್ರಯೋಗಿಸಬೇಡ!

05186004a ರಾಮಸ್ತಪಸ್ವೀ ಬ್ರಹ್ಮಣ್ಯೋ ಬ್ರಾಹ್ಮಣಶ್ಚ ಗುರುಶ್ಚ ತೇ|

05186004c ತಸ್ಯಾವಮಾನಂ ಕೌರವ್ಯ ಮಾ ಸ್ಮ ಕಾರ್ಷೀಃ ಕಥಂ ಚನ||

ಕೌರವ್ಯ! ರಾಮನು ತಪಸ್ವೀ, ಬ್ರಹ್ಮಣ್ಯ, ಬ್ರಾಹ್ಮಣ ಮತ್ತು ನಿನ್ನ ಗುರು. ಎಂದೂ ಅವನ ಅಪಮಾನವನ್ನು ಮಾಡಬೇಡ!”

05186005a ತತೋಽಪಶ್ಯಂ ದಿವಿಷ್ಠಾನ್ವೈ ತಾನಷ್ಟೌ ಬ್ರಹ್ಮವಾದಿನಃ|

05186005c ತೇ ಮಾಂ ಸ್ಮಯಂತೋ ರಾಜೇಂದ್ರ ಶನಕೈರಿದಮಬ್ರುವನ್||

ಆಗ ನಾನು ದಿವಿಯಲ್ಲಿದ್ದ ಆ ಎಂಟು ಬ್ರಹ್ಮವಾದಿಗಳನ್ನು ನೋಡಿದೆನು. ರಾಜೇಂದ್ರ! ಅವರು ಮುಗುಳ್ನಗುತ್ತಾ ಮೆಲ್ಲನೆ ನನಗೆ ಹೇಳಿದರು:

05186006a ಯಥಾಹ ಭರತಶ್ರೇಷ್ಠ ನಾರದಸ್ತತ್ತಥಾ ಕುರು|

05186006c ಏತದ್ಧಿ ಪರಮಂ ಶ್ರೇಯೋ ಲೋಕಾನಾಂ ಭರತರ್ಷಭ||

 “ಭರತಶ್ರೇಷ್ಠ! ಭರತರ್ಷಭ! ನಾರದನು ಹೇಳಿದಂತೆಯೇ ಮಾಡು. ಇದು ಲೋಕಗಳಿಗೆ ಪರಮ ಶ್ರೇಯಸ್ಸನ್ನು ತರುತ್ತದೆಯೆಂದು ತಿಳಿ.”

05186007a ತತಶ್ಚ ಪ್ರತಿಸಂಹೃತ್ಯ ತದಸ್ತ್ರಂ ಸ್ವಾಪನಂ ಮೃಧೇ|

05186007c ಬ್ರಹ್ಮಾಸ್ತ್ರಂ ದೀಪಯಾಂ ಚಕ್ರೇ ತಸ್ಮಿನ್ಯುಧಿ ಯಥಾವಿಧಿ||

ಆಗ ನಾನು ಸ್ವಾಪನವನ್ನು ಹಿಂದೆ ತೆಗೆದುಕೊಂಡೆನು. ಆ ಯುದ್ಧದಲ್ಲಿ ಯಥಾವಿಧಿಯಾಗಿ ಬ್ರಹ್ಮಾಸ್ತ್ರವನ್ನು ಬೆಳಗಿಸಿದೆನು.

05186008a ತತೋ ರಾಮೋ ರುಷಿತೋ ರಾಜಪುತ್ರ

         ದೃಷ್ಟ್ವಾ ತದಸ್ತ್ರಂ ವಿನಿವರ್ತಿತಂ ವೈ|

05186008c ಜಿತೋಽಸ್ಮಿ ಭೀಷ್ಮೇಣ ಸುಮಂದಬುದ್ಧಿರ್

         ಇತ್ಯೇವ ವಾಕ್ಯಂ ಸಹಸಾ ವ್ಯಮುಂಚತ್||

ರಾಜಪುತ್ರ! ಆ ಅಸ್ತ್ರವನ್ನು ಹಿಂದೆ ತೆಗೆದುಕೊಂಡುದುದನ್ನು ನೋಡಿದ ರಾಮನು ರೋಷಗೊಂಡು “ಮಂದಬುದ್ಧಿಯವನಾದ ನಾನು ಭೀಷ್ಮನಿಂದ ಗೆಲ್ಲಲ್ಪಟ್ಟೆ!” ಎಂದು ಹೇಳಿ ಒಮ್ಮೆಲೇ ಯುದ್ಧವನ್ನು ತ್ಯಜಿಸಿದನು.

05186009a ತತೋಽಪಶ್ಯತ್ಪಿತರಂ ಜಾಮದಗ್ನ್ಯಃ

         ಪಿತುಸ್ತಥಾ ಪಿತರಂ ತಸ್ಯ ಚಾನ್ಯಂ|

05186009c ತ ಏವೈನಂ ಸಂಪರಿವಾರ್ಯ ತಸ್ಥುರ್

         ಊಚುಶ್ಚೈನಂ ಸಾಂತ್ವಪೂರ್ವಂ ತದಾನೀಂ||

ಆಗ ಜಾಮದಗ್ನಿಯು ತನ್ನ ತಂದೆಯನ್ನೂ ಇತರ ಪಿತೃಗಳನ್ನೂ ನೋಡಿದನು. ಅವರು ಅವನನ್ನು ಸುತ್ತುವರೆದು ನಿಂತು ಈ ಸಾಂತ್ವನದ ಮಾತುಗಳನ್ನಾಡಿದರು:

05186010a ಮಾ ಸ್ಮೈವಂ ಸಾಹಸಂ ವತ್ಸ ಪುನಃ ಕಾರ್ಷೀಃ ಕಥಂ ಚನ|

05186010c ಭೀಷ್ಮೇಣ ಸಮ್ಯುಗಂ ಗಂತುಂ ಕ್ಷತ್ರಿಯೇಣ ವಿಶೇಷತಃ||

“ವತ್ಸ! ಸಾಹಸಿಯೊಂದಿಗೆ ಇಂತಹ ಸಾಹಸವನ್ನು – ವಿಶೇಷತಃ ಭೀಷ್ಮನಂತಹ ಕ್ಷತ್ರಿಯನೊಂದಿಗೆ ಯುದ್ಧ ಮಾಡಲು - ಎಂದೂ ಮಾಡಬೇಡ!

05186011a ಕ್ಷತ್ರಿಯಸ್ಯ ತು ಧರ್ಮೋಽಯಂ ಯದ್ಯುದ್ಧಂ ಭೃಗುನಂದನ|

05186011c ಸ್ವಾಧ್ಯಾಯೋ ವ್ರತಚರ್ಯಾ ಚ ಬ್ರಾಹ್ಮಣಾನಾಂ ಪರಂ ಧನಂ||

ಭೃಗುನಂದನ! ಯುದ್ಧಮಾಡುವುದಾದರೋ ಕ್ಷತ್ರಿಯರ ಧರ್ಮ. ಸ್ವಾಧ್ಯಾಯ ವ್ರತಚರ್ಯೆಗಳು ಬ್ರಾಹ್ಮಣರ ಪರಮ ಧನ.

05186012a ಇದಂ ನಿಮಿತ್ತೇ ಕಸ್ಮಿಂಶ್ಚಿದಸ್ಮಾಭಿರುಪಮಂತ್ರಿತಂ|

05186012c ಶಸ್ತ್ರಧಾರಣಮತ್ಯುಗ್ರಂ ತಚ್ಚ ಕಾರ್ಯಂ ಕೃತಂ ತ್ವಯಾ||

ಹಿಂದೆ ಯಾವುದೋ ಕಾರಣದಿಂದ ನಾವು ನಿನಗೆ ಶಸ್ತ್ರಧಾರಣದ ಉಪದೇಶವನ್ನು ನೀಡಿದ್ದೆವು. ಅದರಿಂದ ನೀನು ಉಗ್ರ ಕಾರ್ಯವನ್ನು ಎಸಗಿದ್ದೀಯೆ.

05186013a ವತ್ಸ ಪರ್ಯಾಪ್ತಮೇತಾವದ್ಭೀಷ್ಮೇಣ ಸಹ ಸಂಯುಗೇ|

05186013c ವಿಮರ್ದಸ್ತೇ ಮಹಾಬಾಹೋ ವ್ಯಪಯಾಹಿ ರಣಾದಿತಃ||

ವತ್ಸ! ಭೀಷ್ಮನೊಡನೆ ಮಾಡಿದ ಈ ಯುದ್ಧದೊಂದಿಗೆ ನಿನ್ನ ಯುದ್ಧಗಳನ್ನು ಮುಗಿಸು. ಮಹಾಬಾಹೋ! ಸಾಕಷ್ಟು ಯುದ್ಧ ಮಾಡಿದ್ದೀಯೆ. ಇನ್ನು ನಿಲ್ಲಿಸು!

05186014a ಪರ್ಯಾಪ್ತಮೇತದ್ಭದ್ರಂ ತೇ ತವ ಕಾರ್ಮುಕಧಾರಣಂ|

05186014c ವಿಸರ್ಜಯೈತದ್ದುರ್ಧರ್ಷ ತಪಸ್ತಪ್ಯಸ್ವ ಭಾರ್ಗವ||

ನಿನಗೆ ಮಂಗಳವಾಗಲಿ! ಇದನ್ನು ಸಮಾಪ್ತಗೊಳಿಸು. ದುರ್ಧರ್ಷ! ಭಾರ್ಗವ! ಧನುರ್ಧಾರಣೆಯನ್ನು ವಿಸರ್ಜಿಸಿ ತಪಸ್ಸನ್ನು ತಪಿಸು!

05186015a ಏಷ ಭೀಷ್ಮಃ ಶಾಂತನವೋ ದೇವೈಃ ಸರ್ವೈರ್ನಿವಾರಿತಃ|

05186015c ನಿವರ್ತಸ್ವ ರಣಾದಸ್ಮಾದಿತಿ ಚೈವ ಪ್ರಚೋದಿತಃ||

ಈ ಶಾಂತನವ ಭೀಷ್ಮನನ್ನು ಎಲ್ಲ ದೇವತೆಗಳೂ ತಡೆಯುತ್ತಿದ್ದಾರೆ. ಈ ರಣದಿಂದ ಹಿಂದಿರುಗು ಎಂದು ಪ್ರಚೋದಿಸುತ್ತಿದ್ದಾರೆ.

05186016a ರಾಮೇಣ ಸಹ ಮಾ ಯೋತ್ಸೀರ್ಗುರುಣೇತಿ ಪುನಃ ಪುನಃ|

05186016c ನ ಹಿ ರಾಮೋ ರಣೇ ಜೇತುಂ ತ್ವಯಾ ನ್ಯಾಯ್ಯಃ ಕುರೂದ್ವಹ|

05186016e ಮಾನಂ ಕುರುಷ್ವ ಗಾಂಗೇಯ ಬ್ರಾಹ್ಮಣಸ್ಯ ರಣಾಜಿರೇ||

ಪುನಃ ಪುನಃ “ರಾಮನೊಂದಿಗೆ ಹೋರಾಡಬೇಡ. ಅವನು ನಿನ್ನ ಗುರು” ಎಂದೂ, “ಕುರೂದ್ವಹ! ರಾಮನನ್ನು ರಣದಲ್ಲಿ ಗೆಲ್ಲಲು ನಿನಗೆ ಅಥವಾ ಅನ್ಯರಿಗೆ ಸಾಧ್ಯವಿಲ್ಲ! ಗಾಂಗೇಯ! ರಣದಲ್ಲಿ ಬ್ರಾಹ್ಮಣನನ್ನು ಗೌರವಿಸು!” ಎಂದೂ ಹೇಳುತ್ತಿದ್ದಾರೆ.

05186017a ವಯಂ ತು ಗುರವಸ್ತುಭ್ಯಂ ತತಸ್ತ್ವಾಂ ವಾರಯಾಮಹೇ|

05186017c ಭೀಷ್ಮೋ ವಸೂನಾಮನ್ಯತಮೋ ದಿಷ್ಟ್ಯಾ ಜೀವಸಿ ಪುತ್ರಕ||

ನಿನಗೆ ನಾವು ಗುರುಗಳು. ಆದುದರಿಂದ ನಿನ್ನನ್ನು ತಡೆಯುತ್ತಿದ್ದೇವೆ. ಪುತ್ರಕ! ಭೀಷ್ಮನು ವಸುಗಳಲ್ಲಿಯೇ ಶ್ರೇಷ್ಠನಾದವನು. ಅದೃಷ್ಟ! ನೀನು ಬದುಕಿರುವೆ.

05186018a ಗಾಂಗೇಯಃ ಶಂತನೋಃ ಪುತ್ರೋ ವಸುರೇಷ ಮಹಾಯಶಾಃ|

05186018c ಕಥಂ ತ್ವಯಾ ರಣೇ ಜೇತುಂ ರಾಮ ಶಕ್ಯೋ ನಿವರ್ತ ವೈ||

ಶಂತನು ಪುತ್ರ ಗಾಂಗೇಯನು ಮಹಾಯಶಸ್ವಿ ವಸುಗಳಲ್ಲೊಬ್ಬನು. ರಾಮ! ಅವನನ್ನು ನೀನು ಹೇಗೆ ರಣದಲ್ಲಿ ಗೆಲ್ಲಲು ಶಕ್ಯ? ಹಿಂದೆ ಸರಿ.

05186019a ಅರ್ಜುನಃ ಪಾಂಡವಶ್ರೇಷ್ಠಃ ಪುರಂದರಸುತೋ ಬಲೀ|

05186019c ನರಃ ಪ್ರಜಾಪತಿರ್ವೀರಃ ಪೂರ್ವದೇವಃ ಸನಾತನಃ||

05186020a ಸವ್ಯಸಾಚೀತಿ ವಿಖ್ಯಾತಸ್ತ್ರಿಷು ಲೋಕೇಷು ವೀರ್ಯವಾನ್|

05186020c ಭೀಷ್ಮಮೃತ್ಯುರ್ಯಥಾಕಾಲಂ ವಿಹಿತೋ ವೈ ಸ್ವಯಂಭುವಾ||

ಪಾಂಡವಶ್ರೇಷ್ಠ, ಪುರಂದರಸುತ, ಬಲೀ, ನರ, ಪಜಾಪತಿ, ವೀರ, ಪೂರ್ವದೇವ, ಸನಾತನ, ಸವ್ಯಸಾಚಿ, ಮೂರು ಕಾಲಬಂದಾಗ ಲೋಕಗಳಲ್ಲಿಯೂ ವೀರ್ಯವಂತನೆಂದು ವಿಖ್ಯಾತನಾದ ಅರ್ಜುನನು ಇವನ ಮೃತ್ಯುವಾಗುತ್ತಾನೆ ಎಂದು ಸ್ವಯಂಭುವು ವಿಹಿಸಿದ್ದಾನೆ[1].”

05186021a ಏವಮುಕ್ತಃ ಸ ಪಿತೃಭಿಃ ಪಿತೄನ್ರಾಮೋಽಬ್ರವೀದಿದಂ|

05186021c ನಾಹಂ ಯುಧಿ ನಿವರ್ತೇಯಮಿತಿ ಮೇ ವ್ರತಮಾಹಿತಂ||

ಹೀಗೆ ಹೇಳಿದ ತಂದೆ ಮತ್ತು ಪಿತೃಗಳಿಗೆ ರಾಮನು ಹೇಳಿದನು: “ನಾನು ಯುದ್ಧದಿಂದ ಹಿಂದೆ ಸರಿಯುವುದಿಲ್ಲವೆಂದು ವ್ರತವನ್ನಿಟ್ಟುಕೊಂಡಿದ್ದೇನೆ.

05186022a ನ ನಿವರ್ತಿತಪೂರ್ವಂ ಚ ಕದಾ ಚಿದ್ರಣಮೂರ್ಧನಿ|

05186022c ನಿವರ್ತ್ಯತಾಮಾಪಗೇಯಃ ಕಾಮಂ ಯುದ್ಧಾತ್ಪಿತಾಮಹಾಃ|

05186022e ನ ತ್ವಹಂ ವಿನಿವರ್ತಿಷ್ಯೇ ಯುದ್ಧಾದಸ್ಮಾತ್ಕಥಂ ಚನ||

ಈ ಹಿಂದೆ ನಾನು ಎಂದೂ ರಣದ ನೆತ್ತಿಯಿಂದ ಹಿಂಜರಿದಿರಲಿಲ್ಲ. ಬೇಕಾದರೆ ಪಿತಾಮಹರು ಆಪಗೇಯನನ್ನು ಯುದ್ಧದಿಂದ ಹಿಂದೆಸರಿಸಿ. ನಾನು ಮಾತ್ರ ಎಂದೂ ಯುದ್ಧದಿಂದ ಹಿಂದೆಸರಿಯುವುದಿಲ್ಲ.”

05186023a ತತಸ್ತೇ ಮುನಯೋ ರಾಜನ್ನೃಚೀಕಪ್ರಮುಖಾಸ್ತದಾ|

05186023c ನಾರದೇನೈವ ಸಹಿತಾಃ ಸಮಾಗಮ್ಯೇದಮಬ್ರುವನ್||

ರಾಜನ್! ಆಗ ಋಚೀಕನ ಮುಂದಾಳುತ್ವದಲ್ಲಿ ನಾರದನೂ ಸೇರಿ ಮುನಿಗಳು ಒಟ್ಟಾಗಿ ಬಂದು ನನಗೆ ಹೇಳಿದರು:

05186024a ನಿವರ್ತಸ್ವ ರಣಾತ್ತಾತ ಮಾನಯಸ್ವ ದ್ವಿಜೋತ್ತಮಾನ್|

05186024c ನೇತ್ಯವೋಚಮಹಂ ತಾಂಶ್ಚ ಕ್ಷತ್ರಧರ್ಮವ್ಯಪೇಕ್ಷಯಾ||

“ಮಗೂ! ರಣದಿಂದ ಹಿಂದೆಸರಿ. ದ್ವಿಜೋತ್ತಮನನ್ನು ಗೌರವಿಸು.” “ಇಲ್ಲ” ಎಂದು ನಾನು ಕ್ಷತ್ರಧರ್ಮವನ್ನು ಅಪೇಕ್ಷಿಸದೆಯೇ ಅವರಿಗೆ ಹೇಳಿದೆನು.

05186025a ಮಮ ವ್ರತಮಿದಂ ಲೋಕೇ ನಾಹಂ ಯುದ್ಧಾತ್ಕಥಂ ಚನ|

05186025c ವಿಮುಖೋ ವಿನಿವರ್ತೇಯಂ ಪೃಷ್ಠತೋಽಭ್ಯಾಹತಃ ಶರೈಃ||

“ಲೋಕದಲ್ಲಿ ಇದು ನನ್ನ ವ್ರತ! ನಾನು ಎಂದೂ ಯುದ್ಧದಿಂದ ಬೆನ್ನಮೇಲೆ ಬಾಣಗಳಿಂದ ಪೆಟ್ಟು ತಿನ್ನದೇ ವಿಮುಖನಾಗಿ ಹಿಂದಿರುಗುವುದಿಲ್ಲವೆಂದು!

05186026a ನಾಹಂ ಲೋಭಾನ್ನ ಕಾರ್ಪಣ್ಯಾನ್ನ ಭಯಾನ್ನಾರ್ಥಕಾರಣಾತ್|

05186026c ತ್ಯಜೇಯಂ ಶಾಶ್ವತಂ ಧರ್ಮಮಿತಿ ಮೇ ನಿಶ್ಚಿತಾ ಮತಿಃ||

ಇದನ್ನು ನಾನು ಶಾಶ್ವತವಾಗಿ ಲೋಭಕ್ಕಾಗಲೀ, ಕಾರ್ಪಣ್ಯದಿಂದಾಗಲೀ, ಭಯದಿಂದಾಗಲೀ, ಅರ್ಥಕ್ಕಾಗಲೀ ತ್ಯಜಿಸುವುದಿಲ್ಲ ಎಂದು ನನ್ನ ಬುದ್ಧಿಯು ನಿಶ್ಚಯಿಸಿದೆ.”

05186027a ತತಸ್ತೇ ಮುನಯಃ ಸರ್ವೇ ನಾರದಪ್ರಮುಖಾ ನೃಪ|

05186027c ಭಾಗೀರಥೀ ಚ ಮೇ ಮಾತಾ ರಣಮಧ್ಯಂ ಪ್ರಪೇದಿರೇ||

ಆಗ ನೃಪ! ನಾರದಪ್ರಮುಖ ಮುನಿಗಳೆಲ್ಲರೂ ಮತ್ತು ನನ್ನ ಮಾತೆ ಭಾಗೀರಥಿಯೂ ರಣಮಧ್ಯವನ್ನು ಪ್ರವೇಶಿಸಿದರು.

05186028a ತಥೈವಾತ್ತಶರೋ ಧನ್ವೀ ತಥೈವ ದೃಢನಿಶ್ಚಯಃ|

05186028c ಸ್ಥಿತೋಽಹಮಾಹವೇ ಯೋದ್ಧುಂ ತತಸ್ತೇ ರಾಮಮಬ್ರುವನ್|

05186028e ಸಮೇತ್ಯ ಸಹಿತಾ ಭೂಯಃ ಸಮರೇ ಭೃಗುನಂದನಂ||

ಆಗಲೂ ನಾನು ಮೊದಲಿನಂತೆ ಶರವನ್ನು ಧನುಸ್ಸಿಗೆ ಹೂಡಿದ್ದೆ, ದೃಢನಿಶ್ಚಯನಾಗಿ ಆಹವದಲ್ಲಿ ಯುದ್ಧಮಾಡಲು ನಿಂತಿದ್ದೆ. ಆಗ ಅವರು ಎಲ್ಲರೂ ಒಟ್ಟಿಗೆ ಇನ್ನೊಮ್ಮೆ ಭೃಗುನಂದನ ರಾಮನಿಗೆ ಹೇಳಿದರು:

05186029a ನಾವನೀತಂ ಹಿ ಹೃದಯಂ ವಿಪ್ರಾಣಾಂ ಶಾಮ್ಯ ಭಾರ್ಗವ|

05186029c ರಾಮ ರಾಮ ನಿವರ್ತಸ್ವ ಯುದ್ಧಾದಸ್ಮಾದ್ದ್ವಿಜೋತ್ತಮ|

05186029e ಅವಧ್ಯೋ ಹಿ ತ್ವಯಾ ಭೀಷ್ಮಸ್ತ್ವಂ ಚ ಭೀಷ್ಮಸ್ಯ ಭಾರ್ಗವ||

“ಭಾರ್ಗವ! ವಿಪ್ರರ ಹೃದಯವು ಬೆಣ್ಣೆಯಿಂದ್ದಂತೆ. ಶಾಂತನಾಗು! ರಾಮ! ರಾಮ! ದ್ವಿಜೋತ್ತಮ! ಈ ಯುದ್ಧದಿಂದ ಹಿಂದೆಸರಿ! ಭಾರ್ಗವ! ಭೀಷ್ಮನಿಂದ ನೀನು ಅವಧ್ಯ. ಭೀಷ್ಮನೂ ನಿನ್ನಿಂದ ಅವಧ್ಯ.”

05186030a ಏವಂ ಬ್ರುವಂತಸ್ತೇ ಸರ್ವೇ ಪ್ರತಿರುಧ್ಯ ರಣಾಜಿರಂ|

05186030c ನ್ಯಾಸಯಾಂ ಚಕ್ರಿರೇ ಶಸ್ತ್ರಂ ಪಿತರೋ ಭೃಗುನಂದನಂ||

ಹೀಗೆ ಅವರೆಲ್ಲರೂ ಯುದ್ಧವನ್ನು ತಡೆದರು ಮತ್ತು ಪಿತೃಗಳು ಭೃಗುನಂದನನನ್ನು ಶಸ್ತ್ರವನ್ನು ಕೆಳಗಿಡುವಂತೆ ಮಾಡಿದರು.

05186031a ತತೋಽಹಂ ಪುನರೇವಾಥ ತಾನಷ್ಟೌ ಬ್ರಹ್ಮವಾದಿನಃ|

05186031c ಅದ್ರಾಕ್ಷಂ ದೀಪ್ಯಮಾನಾನ್ವೈ ಗ್ರಹಾನಷ್ಟಾವಿವೋದಿತಾನ್||

ಆಗ ನಾನು ಪುನಃ ಮೇಲೇರುತ್ತಿರುವ ದೀಪ್ಯಮಾನ ಗ್ರಹಗಳಂತಿದ್ದ ಆ ಎಂಟು ಬ್ರಹ್ಮವಾದಿಗಳನ್ನು ನೋಡಿದೆನು.

05186032a ತೇ ಮಾಂ ಸಪ್ರಣಯಂ ವಾಕ್ಯಮಬ್ರುವನ್ಸಮರೇ ಸ್ಥಿತಂ|

05186032c ಪ್ರೈಹಿ ರಾಮಂ ಮಹಾಬಾಹೋ ಗುರುಂ ಲೋಕಹಿತಂ ಕುರು||

ಆಗ ಸಮರದಲ್ಲಿ ನಿಂತಿದ್ದ ನನಗೆ ಪ್ರೀತಿಯಿಂದ ಹೇಳಿದರು: “ಮಹಾಬಾಹೋ! ಗುರು ರಾಮನಲ್ಲಿಗೆ ಹೋಗಿ ಲೋಕಕ್ಕೆ ಹಿತವಾದುದನ್ನು ಮಾಡು.”

05186033a ದೃಷ್ಟ್ವಾ ನಿವರ್ತಿತಂ ರಾಮಂ ಸುಹೃದ್ವಾಕ್ಯೇನ ತೇನ ವೈ|

05186033c ಲೋಕಾನಾಂ ಚ ಹಿತಂ ಕುರ್ವನ್ನಹಮಪ್ಯಾದದೇ ವಚಃ||

ಸುಹೃದಯರ ಮಾತಿನಂತೆ ರಾಮನು ಹಿಂದೆಸರಿದುದನ್ನು ನೋಡಿ ಲೋಕಗಳ ಹಿತವನ್ನು ಮಾಡಲೋಸುಗ ನನಗೆ ಹೇಳಿದ ಮಾತನ್ನು ಅನುಸರಿಸಿದೆನು.

05186034a ತತೋಽಹಂ ರಾಮಮಾಸಾದ್ಯ ವವಂದೇ ಭೃಶವಿಕ್ಷತಃ|

05186034c ರಾಮಶ್ಚಾಭ್ಯುತ್ಸ್ಮಯನ್ಪ್ರೇಮ್ಣಾ ಮಾಮುವಾಚ ಮಹಾತಪಾಃ||

ಆಗ ತುಂಬಾ ಗಾಯಗೊಂಡಿದ್ದ ನಾನು ರಾಮನ ಬಳಿ ಹೋಗಿ ವಂದಿಸಿದೆನು. ಮಹಾತಪಸ್ವಿ ರಾಮನಾದರೋ ಪ್ರೀತಿಯಿಂದ ಮುಗುಳ್ನಗುತ್ತಾ ನನಗೆ ಹೇಳಿದನು:

05186035a ತ್ವತ್ಸಮೋ ನಾಸ್ತಿ ಲೋಕೇಽಸ್ಮಿನ್ ಕ್ಷತ್ರಿಯಃ ಪೃಥಿವೀಚರಃ|

05186035c ಗಮ್ಯತಾಂ ಭೀಷ್ಮ ಯುದ್ಧೇಽಸ್ಮಿಂಸ್ತೋಷಿತೋಽಹಂ ಭೃಶಂ ತ್ವಯಾ||

“ನಿನ್ನಂಥಹ ಕ್ಷತ್ರಿಯನು ಭೂಮಿಯ ಮೇಲೆ ನಡೆಯುವವ ಯಾರೂ ಲೋಕದಲ್ಲಿಯೇ ಇಲ್ಲ. ಭೀಷ್ಮ! ಹೋಗುವವನಾಗು! ನಿನ್ನಿಂದ ಈ ಯುದ್ಧದಲ್ಲಿ ನಾನು ತುಂಬಾ ತೃಪ್ತನಾಗಿದ್ದೇನೆ.”

05186036a ಮಮ ಚೈವ ಸಮಕ್ಷಂ ತಾಂ ಕನ್ಯಾಮಾಹೂಯ ಭಾರ್ಗವಃ|

05186036c ಉವಾಚ ದೀನಯಾ ವಾಚಾ ಮಧ್ಯೇ ತೇಷಾಂ ತಪಸ್ವಿನಾಂ||

ನನ್ನ ಸಮಕ್ಷಮದಲ್ಲಿಯೇ ಆ ಕನ್ಯೆಯನ್ನು ಕರೆದು ಭಾರ್ಗವನು ತಪಸ್ವಿಗಳ ಮಧ್ಯೆ ಈ ದೀನ ಮಾತುಗಳನ್ನಾಡಿದನು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಯುದ್ಧನಿವೃತ್ತೌ ಷಡಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಯುದ್ಧನಿವೃತ್ತದಲ್ಲಿ ನೂರಾಎಂಭತ್ತಾರನೆಯ ಅಧ್ಯಾಯವು.

Image result for flowers against white background"

[1] ಅರ್ಜುನನು ತನಗೆ ಮೃತ್ಯುವಾಗುತ್ತಾನೆಂದು ಯುದ್ಧದ ಮೊದಲೇ ಭೀಷ್ಮನಿಗೆ ತಿಳಿದಿತ್ತು!

Comments are closed.