Udyoga Parva: Chapter 185

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೫

ಪರಶುರಾಮ-ಭೀಷ್ಮರಿಬ್ಬರೂ ಬ್ರಹ್ಮಾಸ್ತ್ರವನ್ನು ಹೂಡಿದುದು (೧-೨೩).

05185001 ಭೀಷ್ಮ ಉವಾಚ|

05185001a ತತೋ ರಾತ್ರ್ಯಾಂ ವ್ಯತೀತಾಯಾಂ ಪ್ರತಿಬುದ್ಧೋಽಸ್ಮಿ ಭಾರತ|

05185001c ತಂ ಚ ಸಂಚಿಂತ್ಯ ವೈ ಸ್ವಪ್ನಮವಾಪಂ ಹರ್ಷಮುತ್ತಮಂ||

ಭೀಷ್ಮನು ಹೇಳಿದನು: “ಭಾರತ! ರಾತ್ರಿಯು ಕಳೆದು ನಾನು ಎಚ್ಚೆತ್ತೆನು. ಕಂಡ ಸ್ವಪ್ನದ ಕುರಿತು ಯೋಚಿಸಿ ಉತ್ತಮ ಹರ್ಷವಾಯಿತು.

05185002a ತತಃ ಸಮಭವದ್ಯುದ್ಧಂ ಮಮ ತಸ್ಯ ಚ ಭಾರತ|

05185002c ತುಮುಲಂ ಸರ್ವಭೂತಾನಾಂ ಲೋಮಹರ್ಷಣಮದ್ಭುತಂ||

ಭಾರತ! ಆಗ ಸರ್ವಭೂತಗಳ ರೋಮಹರ್ಷಣವನ್ನುಂಟುಮಾಡುವ ನನ್ನ ಮತ್ತು ಅವನ ಅದ್ಭುತ ತುಮುಲ ಯುದ್ಧವು ನಡೆಯಿತು.

05185003a ತತೋ ಬಾಣಮಯಂ ವರ್ಷಂ ವವರ್ಷ ಮಯಿ ಭಾರ್ಗವಃ|

05185003c ನ್ಯವಾರಯಮಹಂ ತಂ ಚ ಶರಜಾಲೇನ ಭಾರತ||

ಆಗ ಭಾರ್ಗವನು ನನ್ನ ಮೇಲೆ ಬಾಣಮಯ ಮಳೆಯನ್ನು ಸುರಿಸಿದನು. ಭಾರತ! ನಾನು ಅದನ್ನು ಶರಜಾಲದಿಂದ ತಡೆದೆನು.

05185004a ತತಃ ಪರಮಸಂಕ್ರುದ್ಧಃ ಪುನರೇವ ಮಹಾತಪಾಃ|

05185004c ಹ್ಯಸ್ತನೇನೈವ ಕೋಪೇನ ಶಕ್ತಿಂ ವೈ ಪ್ರಾಹಿಣೋನ್ಮಯಿ||

ಆಗ ಪರಮಸಂಕ್ರುದ್ಧನಾದ ಆ ಮಹಾತಪಸ್ವಿಯು ಪುನಃ ನನ್ನ ಮೇಲೆ ಶಕ್ತಿಯನ್ನು ಎಸೆದನು.

05185005a ಇಂದ್ರಾಶನಿಸಮಸ್ಪರ್ಶಾಂ ಯಮದಂಡೋಪಮಪ್ರಭಾಂ|

05185005c ಜ್ವಲಂತೀಮಗ್ನಿವತ್ಸಂಖ್ಯೇ ಲೇಲಿಹಾನಾಂ ಸಮಂತತಃ||

ಇಂದ್ರನ ವಜ್ರದಂತೆ ಕಠಿನವಾಗಿದ್ದ, ಯಮದಂಡದಂತೆ ಪ್ರಭೆಯಿದ್ದ, ಅಗ್ನಿಯಂತೆ ಜ್ವಲಿಸುತ್ತಿದ್ದ ಅದು ರಣಭೂಮಿಯನ್ನು ಎಲ್ಲಕಡೆಯಿಂದಲೂ ಕಬಳಿಸುವಂತಿತ್ತು.

05185006a ತತೋ ಭರತಶಾರ್ದೂಲ ಧಿಷ್ಣ್ಯಮಾಕಾಶಗಂ ಯಥಾ|

05185006c ಸಾ ಮಾಮಭ್ಯಹನತ್ತೂರ್ಣಮಂಸದೇಶೇ ಚ ಭಾರತ||

ಭರತಶಾರ್ದೂಲ! ಭಾರತ! ಆಗ ಅದು ಆಕಾಶದಲ್ಲಿ ಸಂಚರಿಸುವ ಮಿಂಚಿನಂತೆ ನನ್ನ ಭುಜದ ಮೇಲೆ ಬಿದ್ದಿತು.

05185007a ಅಥಾಸೃಂ ಮೇಽಸ್ರವದ್ಘೋರಂ ಗಿರೇರ್ಗೈರಿಕಧಾತುವತ್|

05185007c ರಾಮೇಣ ಸುಮಹಾಬಾಹೋ ಕ್ಷತಸ್ಯ ಕ್ಷತಜೇಕ್ಷಣ||

ಸುಮಹಾಬಾಹೋ! ಕೆಂಪುಕಣ್ಣಿನವನೇ! ರಾಮನಿಂದ ಹೊಡೆಯಲ್ಪಟ್ಟ ಅದರ ಪ್ರಹಾರದಿಂದಾಗಿ ನನ್ನ ದೇಹದಿಂದ ಗಿರಿಯಿಂದ ಖನಿಜಗಳು ಸುರಿಯುವಂತೆ ಕೆಂಪು ರಕ್ತವು ಸುರಿಯಿತು.

05185008a ತತೋಽಹಂ ಜಾಮದಗ್ನ್ಯಾಯ ಭೃಶಂ ಕ್ರೋಧಸಮನ್ವಿತಃ|

05185008c ಪ್ರೇಷಯಂ ಮೃತ್ಯುಸಂಕಾಶಂ ಬಾಣಂ ಸರ್ಪವಿಷೋಪಮಂ||

ಆಗ ನಾನು ಜಾಮದಗ್ನಿಯ ಮೇಲೆ ತುಂಬಾ ಕೋಪಗೊಂಡು ಸರ್ಪವಿಷೋಪಮ ಮೃತ್ಯುಸಂಕಾಶ ಬಾಣವನ್ನು ಕಳುಹಿಸಿದೆನು.

05185009a ಸ ತೇನಾಭಿಹತೋ ವೀರೋ ಲಲಾಟೇ ದ್ವಿಜಸತ್ತಮಃ|

05185009c ಅಶೋಭತ ಮಹಾರಾಜ ಸಶೃಂಗ ಇವ ಪರ್ವತಃ||

ಮಹಾರಾಜ! ಅದು ಅವನ ಹಣೆಯನ್ನು ಹೊಡೆಯಲು ಆ ವೀರ ದ್ವಿಜಸತ್ತಮನು ಶೃಂಗವಿರುವ ಪರ್ವತದಂತೆ ಶೋಭಿಸಿದನು.

05185010a ಸ ಸಂರಬ್ಧಃ ಸಮಾವೃತ್ಯ ಬಾಣಂ ಕಾಲಾಂತಕೋಪಮಂ|

05185010c ಸಂದಧೇ ಬಲವತ್ಕೃಷ್ಯ ಘೋರಂ ಶತ್ರುನಿಬರ್ಹಣಂ||

ಅವನು ಬಲವನ್ನುಪಯೋಗಿಸಿ ಅದನ್ನು ಕಿತ್ತೊಗೆದು ಕಾಲಾಂತಕನಂತಿರುವ ಘೋರ ಶತ್ರುನಿಬರ್ಹಣ ಬಾಣವನ್ನು ಬಲವಾಗಿ ಎಳೆದು ಹೂಡಿದನು.

05185011a ಸ ವಕ್ಷಸಿ ಪಪಾತೋಗ್ರಃ ಶರೋ ವ್ಯಾಲ ಇವ ಶ್ವಸನ್|

05185011c ಮಹೀಂ ರಾಜಂಸ್ತತಶ್ಚಾಹಮಗಚ್ಚಂ ರುಧಿರಾವಿಲಃ||

ಹಾವಿನಂತೆ ಭುಸುಗುಟ್ಟುತ್ತ ಬಂದು ಅದು ನನ್ನ ಎದೆಯಮೇಲೆ ಬಿದ್ದಿತು. ರಾಜನ್! ಆಗ ನಾನು ರಕ್ತವನ್ನು ಕಾರುತ್ತಾ ಮೂರ್ಛೆಹೊಂದಿ ನೆಲದ ಮೇಲೆ ಬಿದ್ದೆನು.

05185012a ಅವಾಪ್ಯ ತು ಪುನಃ ಸಂಜ್ಞಾಂ ಜಾಮದಗ್ನ್ಯಾಯ ಧೀಮತೇ|

05185012c ಪ್ರಾಹಿಣ್ವಂ ವಿಮಲಾಂ ಶಕ್ತಿಂ ಜ್ವಲಂತೀಮಶನೀಮಿವ||

ಪುನಃ ಎಚ್ಚೆತ್ತು ನಾನು ಧೀಮತ ಜಾಮದಗ್ನಿಯ ಮೇಲೆ ವಿಮಲ ಅಗ್ನಿಯಂತೆ ಉರಿಯುತ್ತಿದ್ದ ಶಕ್ತಿಯನ್ನು ಎಸೆದೆನು.

05185013a ಸಾ ತಸ್ಯ ದ್ವಿಜಮುಖ್ಯಸ್ಯ ನಿಪಪಾತ ಭುಜಾಂತರೇ|

05185013c ವಿಹ್ವಲಶ್ಚಾಭವದ್ರಾಜನ್ವೇಪಥುಶ್ಚೈನಮಾವಿಶತ್||

ರಾಜನ್! ಅದು ಆ ದ್ವಿಜಮುಖ್ಯನ ಎದೆಯ ಮೇಲೆ ಬಿದ್ದಿತು. ವಿಹ್ವಲನಾದ ಅವನು ನಡುಗಿದನು.

05185014a ತತ ಏನಂ ಪರಿಷ್ವಜ್ಯ ಸಖಾ ವಿಪ್ರೋ ಮಹಾತಪಾಃ|

05185014c ಅಕೃತವ್ರಣಃ ಶುಭೈರ್ವಾಕ್ಯೈರಾಶ್ವಾಸಯದನೇಕಧಾ||

ಆಗ ಅವನ ಸಖ, ವಿಪ್ರ, ಮಹಾತಪಸ್ವಿ ಅಕೃತವ್ರಣನು ಅವನನ್ನು ಅಪ್ಪಿಕೊಂಡು ಶುಭವಾಕ್ಯಗಳಿಂದ ಆಶ್ವಾಸನೆಗಳನ್ನಿತ್ತನು.

05185015a ಸಮಾಶ್ವಸ್ತಸ್ತದಾ ರಾಮಃ ಕ್ರೋಧಾಮರ್ಷಸಮನ್ವಿತಃ|

05185015c ಪ್ರಾದುಶ್ಚಕ್ರೇ ತದಾ ಬ್ರಾಹ್ಮಂ ಪರಮಾಸ್ತ್ರಂ ಮಹಾವ್ರತಃ||

ಆಗ ಕ್ರೋಧಾಮರ್ಷಸಮನ್ವಿತನಾದ ಮಹಾವ್ರತ ರಾಮನು ಪರಮಾಸ್ತ್ರ ಬ್ರಹ್ಮವನ್ನು ಪ್ರಯೋಗಿಸತೊಡಗಿದನು.

05185016a ತತಸ್ತತ್ಪ್ರತಿಘಾತಾರ್ಥಂ ಬ್ರಾಹ್ಮಮೇವಾಸ್ತ್ರಮುತ್ತಮಂ|

05185016c ಮಯಾ ಪ್ರಯುಕ್ತಂ ಜಜ್ವಾಲ ಯುಗಾಂತಮಿವ ದರ್ಶಯತ್||

ಅದನ್ನು ಎದುರಿಸಲು ನಾನೂ ಕೂಡ ಆ ಉತ್ತಮ ಬ್ರಹ್ಮಾಸ್ತ್ರವನ್ನು ಹೂಡಿದೆನು. ಅದು ಯುಗಾಂತದ ಜ್ವಾಲೆಗಳಂತೆ ತೋರಿತು.

05185017a ತಯೋರ್ಬ್ರಹ್ಮಾಸ್ತ್ರಯೋರಾಸೀದಂತರಾ ವೈ ಸಮಾಗಮಃ|

05185017c ಅಸಂಪ್ರಾಪ್ಯೈವ ರಾಮಂ ಚ ಮಾಂ ಚ ಭಾರತಸತ್ತಮ||

ಭರತಸತ್ತಮ! ನನ್ನನ್ನಾಗಲೀ ರಾಮನನ್ನಾಗಲೀ ತಾಗಲು ಅಸಮರ್ಥರಾಗಿ ಆ ಎರಡು ಬ್ರಹ್ಮಾಸ್ತ್ರಗಳು ಮಧ್ಯದಲ್ಲಿಯೇ ಕೂಡಿದವು.

05185018a ತತೋ ವ್ಯೋಮ್ನಿ ಪ್ರಾದುರಭೂತ್ತೇಜ ಏವ ಹಿ ಕೇವಲಂ|

05185018c ಭೂತಾನಿ ಚೈವ ಸರ್ವಾಣಿ ಜಗ್ಮುರಾರ್ತಿಂ ವಿಶಾಂ ಪತೇ||

ಆಗ ಇಡೀ ಆಕಾಶವೇ ಹತ್ತಿ ಉರಿಯುತ್ತಿರುವಂತೆ ತೋರಿತು. ವಿಶಾಂಪತೇ! ಎಲ್ಲ ಭೂತಗಳೂ ಆರ್ತರಾದರು.

05185019a ಋಷಯಶ್ಚ ಸಗಂಧರ್ವಾ ದೇವತಾಶ್ಚೈವ ಭಾರತ|

05185019c ಸಂತಾಪಂ ಪರಮಂ ಜಗ್ಮುರಸ್ತ್ರತೇಜೋಭಿಪೀಡಿತಾಃ||

ಭಾರತ! ಅಸ್ತ್ರತೇಜದಿಂದ ಪೀಡಿತರಾದ ಋಷಿಗಳು, ಗಂಧರ್ವರು ಮತ್ತು ದೇವತೆಗಳು ಕೂಡ ಪರಮ ಸಂತಾಪವನ್ನು ಹೊಂದಿದರು.

05185020a ತತಶ್ಚಚಾಲ ಪೃಥಿವೀ ಸಪರ್ವತವನದ್ರುಮಾ|

05185020c ಸಂತಪ್ತಾನಿ ಚ ಭೂತಾನಿ ವಿಷಾದಂ ಜಗ್ಮುರುತ್ತಮಂ||

ಆಗ ಪರ್ವತ-ವನ-ವೃಕ್ಷಗಳಿಂದ ಕೂಡಿದ ಭೂಮಿಯು ನಡುಗಿತು. ಸಂತಪ್ತರಾದ ಭೂತಗಳು ಉತ್ತಮ ವಿಷಾದವನ್ನೂ ಹೊಂದಿದವು.

05185021a ಪ್ರಜಜ್ವಾಲ ನಭೋ ರಾಜನ್ಧೂಮಾಯಂತೇ ದಿಶೋ ದಶ|

05185021c ನ ಸ್ಥಾತುಮಂತರಿಕ್ಷೇ ಚ ಶೇಕುರಾಕಾಶಗಾಸ್ತದಾ||

ರಾಜನ್! ದಶ ದಿಕ್ಕುಗಳಲ್ಲಿ ಹೊಗೆಯು ತುಂಬಿ ಆಕಾಶವು ಹತ್ತಿ ಉರಿಯತೊಡಗಿತು. ಆಕಾಶಗಾಮಿಗಳು ಆಕಾಶದಲ್ಲಿ ನಿಲ್ಲದಂತಾದರು.

05185022a ತತೋ ಹಾಹಾಕೃತೇ ಲೋಕೇ ಸದೇವಾಸುರರಾಕ್ಷಸೇ|

05185022c ಇದಮಂತರಮಿತ್ಯೇವ ಯೋಕ್ತುಕಾಮೋಽಸ್ಮಿ ಭಾರತ||

05185023a ಪ್ರಸ್ವಾಪಮಸ್ತ್ರಂ ದಯಿತಂ ವಚನಾದ್ಬ್ರಹ್ಮವಾದಿನಾಂ|

05185023c ಚಿಂತಿತಂ ಚ ತದಸ್ತ್ರಂ ಮೇ ಮನಸಿ ಪ್ರತ್ಯಭಾತ್ತದಾ||

ಭಾರತ! ಆಗ ದೇವಾಸುರರಾಕ್ಷಸರಿಂದ ಕೂಡಿದ ಲೋಕಗಳು ಹಾಹಾಕಾರ ಮಾಡುತ್ತಿರಲು ಇದೇ ಸಮಯವೆಂದು ಬ್ರಹ್ಮವಾದಿಗಳು ಹೇಳಿದ ಪ್ರಿಯವಾದ ಪ್ರಸ್ವಾಪ ಅಸ್ತ್ರವನ್ನು ಹೂಡಲು ಬಯಸಿದೆನು. ಹೀಗೆ ಯೋಚಿಸಲು ಆ ಅಸ್ತ್ರವೂ ಕೂಡ ನನ್ನ ಮನಸ್ಸಿನಲ್ಲಿ ಹೊಳೆಯಿತು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಪರಸ್ಪರಬ್ರಹ್ಮಾಸ್ತ್ರಪ್ರಯೋಗೇ ಪಂಚಾಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಪರಸ್ಪರಬ್ರಹ್ಮಾಸ್ತ್ರಪ್ರಯೋಗದಲ್ಲಿ ನೂರಾಎಂಭತ್ತೈದನೆಯ ಅಧ್ಯಾಯವು.

Image result for indian motifs"

Comments are closed.