Udyoga Parva: Chapter 184

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೪

ಒಂದು ರಾತ್ರಿ ವಸುಗಳು ಕನಸಿನಲ್ಲಿ ಬಂದು ಭೀಷ್ಮನಿಗೆ ಪ್ರಸ್ವಾಪವೆಂಬ ಅಸ್ತ್ರವನ್ನು ಬಳಸೆಂದು ಸೂಚಿಸಿದುದು (೧-೧೮).

05184001 ಭೀಷ್ಮ ಉವಾಚ|

05184001a ತತೋಽಹಂ ನಿಶಿ ರಾಜೇಂದ್ರ ಪ್ರಣಮ್ಯ ಶಿರಸಾ ತದಾ|

05184001c ಬ್ರಾಹ್ಮಣಾನಾಂ ಪಿತೄಣಾಂ ಚ ದೇವತಾನಾಂ ಚ ಸರ್ವಶಃ||

05184002a ನಕ್ತಂಚರಾಣಾಂ ಭೂತಾನಾಂ ರಜನ್ಯಾಶ್ಚ ವಿಶಾಂ ಪತೇ|

05184002c ಶಯನಂ ಪ್ರಾಪ್ಯ ರಹಿತೇ ಮನಸಾ ಸಮಚಿಂತಯಂ||

ಭೀಷ್ಮನು ಹೇಳಿದನು: “ರಾಜೇಂದ್ರ! ವಿಶಾಂಪತೇ! ಆ ರಾತ್ರಿ ನಾನು ಬ್ರಾಹ್ಮಣರಿಗೆ, ಪಿತೃಗಳಿಗೆ, ದೇವತೆಗಳೆಲ್ಲರಿಗೂ, ರಾತ್ರಿ ಸಂಚರಿಸುವ ಎಲ್ಲ ಭೂತಗಳಿಗೂ, ರಾತ್ರಿಗೂ ತಲೆಬಾಗಿ ನಮಸ್ಕರಿಸಿ, ಏಕಾಂತದ ಶಯನವನ್ನು ತಲುಪಿ ಮನಸ್ಸಿನಲ್ಲಿಯೇ ಚಿಂತಿಸಿದೆನು.

05184003a ಜಾಮದಗ್ನ್ಯೇನ ಮೇ ಯುದ್ಧಮಿದಂ ಪರಮದಾರುಣಂ|

05184003c ಅಹಾನಿ ಸುಬಹೂನ್ಯದ್ಯ ವರ್ತತೇ ಸುಮಹಾತ್ಯಯಂ||

“ಜಾಮದಗ್ನಿ ಮತ್ತು ನನ್ನ ಈ ಪರಮದಾರುಣ ಮತ್ತು ಮಹಾತ್ಯಯ ಯುದ್ಧವು ಈಗ ಬಹಳ ದಿನಗಳಿಂದ ನಡೆಯುತ್ತಿದೆ.

05184004a ನ ಚ ರಾಮಂ ಮಹಾವೀರ್ಯಂ ಶಕ್ನೋಮಿ ರಣಮೂರ್ಧನಿ|

05184004c ವಿಜೇತುಂ ಸಮರೇ ವಿಪ್ರಂ ಜಾಮದಗ್ನ್ಯಂ ಮಹಾಬಲಂ||

ನಾನು ಮಹಾವೀರ್ಯ, ಮಹಾಬಲ, ವಿಪ್ರ ಜಾಮದಗ್ನಿ ರಾಮನನ್ನು ಸಮರ ರಣದಲ್ಲಿ ಜಯಿಸಲು ಸಾದ್ಯನಾಗಿಲ್ಲ.

05184005a ಯದಿ ಶಕ್ಯೋ ಮಯಾ ಜೇತುಂ ಜಾಮದಗ್ನ್ಯಃ ಪ್ರತಾಪವಾನ್|

05184005c ದೈವತಾನಿ ಪ್ರಸನ್ನಾನಿ ದರ್ಶಯಂತು ನಿಶಾಂ ಮಮ||

ಪ್ರತಾಪವಾನ್ ಜಾಮದಗ್ನಿಯನ್ನು ನಾನು ಜಯಿಸಲು ಶಕ್ಯನೆಂದಾದರೆ ಪ್ರಸನ್ನರಾಗಿ ದೇವತೆಗಳು ಈ ರಾತ್ರಿ ನನಗೆ ಕಾಣಿಸಿಕೊಳ್ಳಲಿ.”

05184006a ತತೋಽಹಂ ನಿಶಿ ರಾಜೇಂದ್ರ ಪ್ರಸುಪ್ತಃ ಶರವಿಕ್ಷತಃ|

05184006c ದಕ್ಷಿಣೇನೈವ ಪಾರ್ಶ್ವೇನ ಪ್ರಭಾತಸಮಯೇ ಇವ||

05184007a ತತೋಽಹಂ ವಿಪ್ರಮುಖ್ಯೈಸ್ತೈರ್ಯೈರಸ್ಮಿ ಪತಿತೋ ರಥಾತ್|

05184007c ಉತ್ಥಾಪಿತೋ ಧೃತಶ್ಚೈವ ಮಾ ಭೈರಿತಿ ಚ ಸಾಂತ್ವಿತಃ||

05184008a ತ ಏವ ಮಾಂ ಮಹಾರಾಜ ಸ್ವಪ್ನದರ್ಶನಮೇತ್ಯ ವೈ|

05184008c ಪರಿವಾರ್ಯಾಬ್ರುವನ್ವಾಕ್ಯಂ ತನ್ನಿಬೋಧ ಕುರೂದ್ವಹ||

ಮಹಾರಾಜ! ಆಗ ನಾನು ಬಾಣಗಳಿಂದ ಗಾಯಗೊಂಡ ಬಲಭಾಗದಲ್ಲಿ ರಾತ್ರಿ ಮಲಗಿದೆನು. ಬೆಳಗಾಗುತ್ತದೆ ಎನ್ನುವ ಸಮಯದಲ್ಲಿ ನಾನು ರಥದಿಂದ ಬಿದ್ದಾಗ ಮೇಲೆತ್ತಿ ಹೆದರಬೇಡ ಎಂದು ಸಂತವಿಸಿ ಧೈರ್ಯವನ್ನಿತ್ತಿದ್ದ ಆ ವಿಪ್ರರೇ ಸ್ವಪ್ನದಲ್ಲಿ ಕಾಣಿಸಿಕೊಂಡರು. ನನ್ನನ್ನು ಸುತ್ತುವರೆದು ಹೇಳಿದ ಮಾತುಗಳನ್ನು ಕೇಳು ಕುರೂದ್ವಹ!

05184009a ಉತ್ತಿಷ್ಠ ಮಾ ಭೈರ್ಗಾಂಗೇಯ ಭಯಂ ತೇ ನಾಸ್ತಿ ಕಿಂ ಚನ|

05184009c ರಕ್ಷಾಮಹೇ ನರವ್ಯಾಘ್ರ ಸ್ವಶರೀರಂ ಹಿ ನೋ ಭವಾನ್||

“ಎದ್ದೇಳು! ಗಾಂಗೇಯ! ಭಯಪಡಬೇಡ! ನಿನಗೆ ಯಾವ ರೀತಿಯ ಭಯವೂ ಇಲ್ಲ. ನರವ್ಯಾಘ್ರ! ನಮ್ಮದೇ ಶರೀರವಾಗಿರುವ ನಿನ್ನನ್ನು ನಾವು ರಕ್ಷಿಸುತ್ತೇವೆ!

05184010a ನ ತ್ವಾಂ ರಾಮೋ ರಣೇ ಜೇತಾ ಜಾಮದಗ್ನ್ಯಃ ಕಥಂ ಚನ|

05184010c ತ್ವಮೇವ ಸಮರೇ ರಾಮಂ ವಿಜೇತಾ ಭರತರ್ಷಭ||

ಜಾಮದಗ್ನಿ ರಾಮನು ರಣದಲ್ಲಿ ಎಂದೂ ನಿನ್ನನ್ನು ಗೆಲ್ಲಲಾರನು. ಭರತರ್ಷಭ! ನೀನೇ ಸಮರದಲ್ಲಿ ರಾಮನನ್ನು ಗೆಲ್ಲುತ್ತೀಯೆ.

05184011a ಇದಮಸ್ತ್ರಂ ಸುದಯಿತಂ ಪ್ರತ್ಯಭಿಜ್ಞಾಸ್ಯತೇ ಭವಾನ್|

05184011c ವಿದಿತಂ ಹಿ ತವಾಪ್ಯೇತತ್ಪೂರ್ವಸ್ಮಿನ್ದೇಹಧಾರಣೇ||

ನೀನು ಈ ಪ್ರಿಯವಾದ ಅಸ್ತ್ರವನ್ನು ಗುರುತಿಸುತ್ತೀಯೆ. ಏಕೆಂದರೆ ನಿನ್ನ ಪೂರ್ವ ದೇಹಧಾರಣೆಯಲ್ಲಿ ಇದನ್ನು ನೀನು ತಿಳಿದಿದ್ದೆ.

05184012a ಪ್ರಾಜಾಪತ್ಯಂ ವಿಶ್ವಕೃತಂ ಪ್ರಸ್ವಾಪಂ ನಾಮ ಭಾರತ|

05184012c ನ ಹೀದಂ ವೇದ ರಾಮೋಽಪಿ ಪೃಥಿವ್ಯಾಂ ವಾ ಪುಮಾನ್ಕ್ವ ಚಿತ್||

ಭಾರತ! ಪ್ರಸ್ವಾಪವೆಂಬ ಹೆಸರಿನ ಇದನ್ನು ಪ್ರಜಾಪತಿಗಾಗಿ ವಿಶ್ವಕರ್ಮನು ನಿರ್ಮಿಸಿದನು. ಇದು ರಾಮನಿಗೂ ಅಥವಾ ಭೂಮಿಯಲ್ಲಿರುವ ಯಾವ ಪುರುಷನಿಗೂ ಗೊತ್ತಿಲ್ಲ.

05184013a ತತ್ಸ್ಮರಸ್ವ ಮಹಾಬಾಹೋ ಭೃಶಂ ಸಮ್ಯೋಜಯಸ್ವ ಚ|

05184013c ನ ಚ ರಾಮಃ ಕ್ಷಯಂ ಗಂತಾ ತೇನಾಸ್ತ್ರೇಣ ನರಾಧಿಪ||

ಮಹಾಬಾಹೋ! ನರಾಧಿಪ! ಅದನ್ನು ಸ್ಮರಿಸಿಕೊಂಡು ಚೆನ್ನಾಗಿ ಪ್ರಯೋಗಿಸು. ಈ ಅಸ್ತ್ರದಿಂದ ರಾಮನು ಸಾಯುವುದಿಲ್ಲ.

05184014a ಏನಸಾ ಚ ನ ಯೋಗಂ ತ್ವಂ ಪ್ರಾಪ್ಸ್ಯಸೇ ಜಾತು ಮಾನದ|

05184014c ಸ್ವಪ್ಸ್ಯತೇ ಜಾಮದಗ್ನ್ಯೋಽಸೌ ತ್ವದ್ಬಾಣಬಲಪೀಡಿತಃ||

ಮಾನದ! ಇದರಿಂದ ನೀನು ಯಾವುದೇ ಪಾಪವನ್ನೂ ಹೊಂದುವುದಿಲ್ಲ. ಈ ಬಾಣದ ಬಲದಿಂದ ಪೀಡಿತನಾಗಿ ಜಾಮದಗ್ನಿಯು ನಿದ್ದೆಮಾಡುತ್ತಾನೆ ಅಷ್ಟೆ.

05184015a ತತೋ ಜಿತ್ವಾ ತ್ವಮೇವೈನಂ ಪುನರುತ್ಥಾಪಯಿಷ್ಯಸಿ|

05184015c ಅಸ್ತ್ರೇಣ ದಯಿತೇನಾಜೌ ಭೀಷ್ಮ ಸಂಬೋಧನೇನ ವೈ||

ಭೀಷ್ಮ! ಇದರಿಂದ ಅವನನ್ನು ಸೋಲಿಸಿ ನಿನಗೆ ಪ್ರಿಯವಾದ ಸಂಬೋದನಾಸ್ತ್ರದಿಂದ ಅವನನ್ನು ಪುನಃ ಎಚ್ಚರಿಸಬಲ್ಲೆ.

05184016a ಏವಂ ಕುರುಷ್ವ ಕೌರವ್ಯ ಪ್ರಭಾತೇ ರಥಮಾಸ್ಥಿತಃ|

05184016c ಪ್ರಸುಪ್ತಂ ವಾ ಮೃತಂ ವಾಪಿ ತುಲ್ಯಂ ಮನ್ಯಾಮಹೇ ವಯಂ||

ಕೌರವ್ಯ! ಪ್ರಭಾತದಲ್ಲಿ ರಥದಲ್ಲಿದ್ದು ಹೀಗೆ ಮಾಡು. ಮಲಗಿರುವ ಅಥವಾ ಸತ್ತಿರುವವರನ್ನು ನಾವು ಸಮನಾಗಿ ಕಾಣುತ್ತೇವಲ್ಲವೇ?

05184017a ನ ಚ ರಾಮೇಣ ಮರ್ತವ್ಯಂ ಕದಾ ಚಿದಪಿ ಪಾರ್ಥಿವ|

05184017c ತತಃ ಸಮುತ್ಪನ್ನಮಿದಂ ಪ್ರಸ್ವಾಪಂ ಯುಜ್ಯತಾಮಿತಿ||

ಪಾರ್ಥಿವ! ರಾಮನು ಎಂದೂ ಸಾಯುವುದಿಲ್ಲ. ಆದನ್ನು ನೆನಪಿಗೆ ತಂದುಕೊಂಡು ಈ ಪ್ರಸ್ವಾಪವನ್ನು ಬಳಸು.”

05184018a ಇತ್ಯುಕ್ತ್ವಾಂತರ್ಹಿತಾ ರಾಜನ್ಸರ್ವ ಏವ ದ್ವಿಜೋತ್ತಮಾಃ|

05184018c ಅಷ್ಟೌ ಸದೃಶರೂಪಾಸ್ತೇ ಸರ್ವೇ ಭಾಸ್ವರಮೂರ್ತಯಃ||

ರಾಜನ್! ಹೀಗೆ ಹೇಳಿ ಆ ಎಂಟು ಒಂದೇ ರೂಪದವರಾದ, ಭಾಸ್ವರಮೂರ್ತರಾದ ದ್ವಿಜೋತ್ತಮರೆಲ್ಲರೂ ಅಂತರ್ಹಿತರಾದರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಭೀಷ್ಮಪ್ರಸ್ವಾಪನಾಸ್ತ್ರಲಾಭೇ ಚತುರಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಭೀಷ್ಮಪ್ರಸ್ವಾಪನಾಸ್ತ್ರಲಾಭದಲ್ಲಿ ನೂರಾಎಂಭತ್ನಾಲ್ಕನೆಯ ಅಧ್ಯಾಯವು.

Image result for flowers against white background"

Comments are closed.