Udyoga Parva: Chapter 183

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೩

ಪರಶುರಾಮನ ಬಾಣಗಳಿಂದ ಭೀಷ್ಮನು ಮೂರ್ಛಿತನಾದುದು (೧-೧೦). ವಸುಗಳು ಭೀಷ್ಮನನ್ನು ಉಪಚರಿಸಿದುದು, ಗಂಗೆಯು ಅವನ ರಥವನ್ನು ನಡೆಸಿದುದು (೧೧-೧೭). ರಾಮನು ಮೂರ್ಛಿತನಾದುದು, ನಾಲ್ಕನೆಯ ದಿನದ ಯುದ್ಧವು ಮುಗಿದು, ಹಾಗೆ ಒಟ್ಟು ೨೩ ದಿನಗಳ ಯುದ್ಧವು ನಡೆದುದು (೧೮-೨೭).

05183001 ಭೀಷ್ಮ ಉವಾಚ|

05183001a ತತಃ ಪ್ರಭಾತೇ ರಾಜೇಂದ್ರ ಸೂರ್ಯೇ ವಿಮಲ ಉದ್ಗತೇ|

05183001c ಭಾರ್ಗವಸ್ಯ ಮಯಾ ಸಾರ್ಧಂ ಪುನರ್ಯುದ್ಧಮವರ್ತತ||

ಭೀಷ್ಮನು ಹೇಳಿದನು: “ರಾಜೇಂದ್ರ! ಪ್ರಭಾತದಲ್ಲಿ ವಿಮಲ ಸೂರ್ಯನು ಉದಯವಾಗಲು ಪುನಃ ನನ್ನೊಡನೆ ಭಾರ್ಗವನ ಯುದ್ಧವು ನಡೆಯಿತು.

05183002a ತತೋ ಭ್ರಾಂತೇ ರಥೇ ತಿಷ್ಠನ್ರಾಮಃ ಪ್ರಹರತಾಂ ವರಃ|

05183002c ವವರ್ಷ ಶರವರ್ಷಾಣಿ ಮಯಿ ಶಕ್ರ ಇವಾಚಲೇ||

ಆಗ ಬೆಳಗುತ್ತಾ ನಿಂತಿದ್ದ ಪ್ರಹರಿಗಳಲ್ಲಿ ಶ್ರೇಷ್ಠ ರಾಮನು ನನ್ನ ಮೇಲೆ ಶಕ್ರನು ಪರ್ವತಗಳ ಮೇಲೆ ಹೇಗೋ ಹಾಗೆ ಶರವರ್ಷಗಳನ್ನು ಸುರಿಸಿದನು.

05183003a ತೇನ ಸೂತೋ ಮಮ ಸುಹೃಚ್ಚರವರ್ಷೇಣ ತಾಡಿತಃ|

05183003c ನಿಪಪಾತ ರಥೋಪಸ್ಥೇ ಮನೋ ಮಮ ವಿಷಾದಯನ್||

ಆ ಶರವರ್ಷದಿಂದ ಹೊಡೆಯಲ್ಪಟ್ಟ ನನ್ನ ಸೂತನು ರಥದಲ್ಲಿಯೇ ಕುಸಿದು ಬಿದ್ದು ನನ್ನ ಮನಸ್ಸನ್ನು ದುಃಖಗೊಳಿಸಿದನು.

05183004a ತತಃ ಸೂತಃ ಸ ಮೇಽತ್ಯರ್ಥಂ ಕಶ್ಮಲಂ ಪ್ರಾವಿಶನ್ಮಹತ್|

05183004c ಪೃಥಿವ್ಯಾಂ ಚ ಶರಾಘಾತಾನ್ನಿಪಪಾತ ಮುಮೋಹ ಚ||

ಆಗ ಅವನಲ್ಲಿ ಮಹಾ ಕಶ್ಮಲವು ಪ್ರವೇಶಿಸಿ ನನ್ನ ಸೂತನು ಶರಘಾತದಿಂದ ಮೂರ್ಛೆಗೊಂಡು ಭೂಮಿಯ ಮೇಲೆ ಬಿದ್ದನು.

05183005a ತತಃ ಸೂತೋಽಜಹಾತ್ಪ್ರಾಣಾನ್ರಾಮಬಾಣಪ್ರಪೀಡಿತಃ|

05183005c ಮುಹೂರ್ತಾದಿವ ರಾಜೇಂದ್ರ ಮಾಂ ಚ ಭೀರಾವಿಶತ್ತದಾ||

ರಾಮಬಾಣಪೀಡಿತನಾಗಿ ಅವನು ಅಸುವನ್ನು ನೀಗಿದನು. ರಾಜೇಂದ್ರ! ಒಂದು ಕ್ಷಣ ನನ್ನಲ್ಲಿ ಭೀತಿಯು ಆವೇಶಗೊಂಡಿತು.

05183006a ತತಃ ಸೂತೇ ಹತೇ ರಾಜನ್ ಕ್ಷಿಪತಸ್ತಸ್ಯ ಮೇ ಶರಾನ್|

05183006c ಪ್ರಮತ್ತಮನಸೋ ರಾಮಃ ಪ್ರಾಹಿಣೋನ್ಮೃತ್ಯುಸಮ್ಮಿತಾನ್||

ರಾಜನ್! ಸೂತನು ಹತನಾಗಲು ನಾನು ಪ್ರಮತ್ತಮನಸ್ಕನಾಗಿದ್ದಾಗ ರಾಮನು ನನ್ನ ಮೇಲೆ ಮೃತ್ಯುಸಮ್ಮಿತ ಶರಗಳನ್ನು ಎಸೆದನು.

05183007a ತತಃ ಸೂತವ್ಯಸನಿನಂ ವಿಪ್ಲುತಂ ಮಾಂ ಸ ಭಾರ್ಗವಃ|

05183007c ಶರೇಣಾಭ್ಯಹನದ್ಗಾಢಂ ವಿಕೃಷ್ಯ ಬಲವದ್ಧನುಃ||

ಸೂತನ ವ್ಯಸನದಿಂದ ತತ್ತರಿಸುತ್ತಿದ್ದ ನನ್ನ ಮೇಲೆ ಆ ಭಾರ್ಗವನು ಬಲವಾದ ಧನುಸ್ಸನ್ನು ಜೋರಾಗಿ ಎಳೆದು ಬಾಣಗಳಿಂದ ಹೊಡೆದನು.

05183008a ಸ ಮೇ ಜತ್ರ್ವಂತರೇ ರಾಜನ್ನಿಪತ್ಯ ರುಧಿರಾಶನಃ|

05183008c ಮಯೈವ ಸಹ ರಾಜೇಂದ್ರ ಜಗಾಮ ವಸುಧಾತಲಂ||

ರಾಜನ್! ರಾಜೇಂದ್ರ! ರಕ್ತಕುಡಿಯುವ ಆ ಶರವು ನನ್ನನ್ನು ಚುಚ್ಚಿ ಹೊರಬಂದು ನನ್ನೊಂದಿಗೇ ನೆಲದ ಮೇಲೆ ಬಿದ್ದಿತು.

05183009a ಮತ್ವಾ ತು ನಿಹತಂ ರಾಮಸ್ತತೋ ಮಾಂ ಭರತರ್ಷಭ|

05183009c ಮೇಘವದ್ವ್ಯನದಚ್ಚೋಚ್ಚೈರ್ಜಹೃಷೇ ಚ ಪುನಃ ಪುನಃ||

ಭರತರ್ಷಭ! ನಾನು ನಿಹತನಾದೆನೆಂದು ತಿಳಿದು ರಾಮನು ಮೇಘದಂತೆ ಜೋರಾಗಿ ಪುನಃ ಪುನಃ ಹರ್ಷೋದ್ಗಾರ ಮಾಡಿದನು.

05183010a ತಥಾ ತು ಪತಿತೇ ರಾಜನ್ಮಯಿ ರಾಮೋ ಮುದಾ ಯುತಃ|

05183010c ಉದಕ್ರೋಶನ್ಮಹಾನಾದಂ ಸಹ ತೈರನುಯಾಯಿಭಿಃ||

ರಾಜನ್! ನಾನು ಹಾಗೆ ಬೀಳಲು ರಾಮನು ಸಂತೋಷಗೊಂಡು ಅವನ ಅನುಯಾಯಿಗಳೊಂದಿಗೆ ಮಹಾನಾದವನ್ನು ಕೂಗಿದನು.

05183011a ಮಮ ತತ್ರಾಭವನ್ಯೇ ತು ಕೌರವಾಃ ಪಾರ್ಶ್ವತಃ ಸ್ಥಿತಾಃ|

05183011c ಆಗತಾ ಯೇ ಚ ಯುದ್ಧಂ ತಜ್ಜನಾಸ್ತತ್ರ ದಿದೃಕ್ಷವಃ||

05183011e ಆರ್ತಿಂ ಪರಮಿಕಾಂ ಜಗ್ಮುಸ್ತೇ ತದಾ ಮಯಿ ಪಾತಿತೇ||

ಆದರೆ ಯುದ್ಧವನ್ನು ನೋಡಲು ಬಂದಿದ್ದ ಕೌರವರು ನನ್ನ ಪಕ್ಕದಲ್ಲಿ ನಿಂತು ನಾನು ಬಿದ್ದುದನ್ನು ನೋಡಿ ಆರ್ತರಾದರು.

05183012a ತತೋಽಪಶ್ಯಂ ಪಾತಿತೋ ರಾಜಸಿಂಹ

         ದ್ವಿಜಾನಷ್ಟೌ ಸೂರ್ಯಹುತಾಶನಾಭಾನ್|

05183012c ತೇ ಮಾಂ ಸಮಂತಾತ್ಪರಿವಾರ್ಯ ತಸ್ಥುಃ

         ಸ್ವಬಾಹುಭಿಃ ಪರಿಗೃಹ್ಯಾಜಿಮಧ್ಯೇ||

ರಾಜಸಿಂಹ! ಅಲ್ಲಿ ಬಿದ್ದಾಗ ಸೂರ್ಯ-ಹುತಾಶನರಂತೆ ಹೊಳೆಯುತ್ತಿದ್ದ ಎಂಟು ದ್ವಿಜರನ್ನು ನೋಡಿದೆನು. ಅವರು ನನ್ನನ್ನು ರಣದ ಮಧ್ಯದಲ್ಲಿ ತಮ್ಮ ಬಾಹುಗಳಿಂದ ಮೇಲೆತ್ತಿ ಹಿಡಿದು ನಿಲ್ಲಿಸಿದರು.

05183013a ರಕ್ಷ್ಯಮಾಣಶ್ಚ ತೈರ್ವಿಪ್ರೈರ್ನಾಹಂ ಭೂಮಿಮುಪಾಸ್ಪೃಶಂ|

05183013c ಅಂತರಿಕ್ಷೇ ಸ್ಥಿತೋ ಹ್ಯಸ್ಮಿ ತೈರ್ವಿಪ್ರೈರ್ಬಾಂಧವೈರಿವ|

05183013e ಸ್ವಪನ್ನಿವಾಂತರಿಕ್ಷೇ ಚ ಜಲಬಿಂದುಭಿರುಕ್ಷಿತಃ||

ಆ ವಿಪ್ರರಿಂದ ಹಿಡಿಯಲ್ಪಟ್ಟ ನಾನು ನೆಲವನ್ನು ಮುಟ್ಟಲಿಲ್ಲ. ಆ ವಿಪ್ರ ಬಾಂಧವರ ಬೆಂಬಲದಿಂದ ಅಂತರಿಕ್ಷದಲ್ಲಿಯೇ ನಿಂತಿದ್ದೆನು. ಅವರು ಅಂತರಿಕ್ಷದಿಂದ ನೀರಿನ ಹನಿಗಳನ್ನು ಚುಮುಕಿಸಿದರು.

05183014a ತತಸ್ತೇ ಬ್ರಾಹ್ಮಣಾ ರಾಜನ್ನಬ್ರುವನ್ಪರಿಗೃಹ್ಯ ಮಾಂ|

05183014c ಮಾ ಭೈರಿತಿ ಸಮಂ ಸರ್ವೇ ಸ್ವಸ್ತಿ ತೇಽಸ್ತ್ವಿತಿ ಚಾಸಕೃತ್||

ರಾಜನ್! ಆಗ ಆ ಬ್ರಾಹ್ಮಣರು ನನ್ನನ್ನು ಹಿಡಿದು “ಹೆದರಬೇಡ! ಎಲ್ಲವೂ ಸರಿಯಾಗುತ್ತದೆ!” ಎಂದು ಉಪಚರಿಸಿದರು.

05183015a ತತಸ್ತೇಷಾಮಹಂ ವಾಗ್ಭಿಸ್ತರ್ಪಿತಃ ಸಹಸೋತ್ಥಿತಃ|

05183015c ಮಾತರಂ ಸರಿತಾಂ ಶ್ರೇಷ್ಠಾಮಪಶ್ಯಂ ರಥಮಾಸ್ಥಿತಾಂ||

ಆಗ ಅವರ ಮಾತುಗಳಿಂದ ತೃಪ್ತನಾಗಿ ನಾನು ಒಮ್ಮೆಲೇ ಮೇಲೆದ್ದೆನು. ರಥದಲ್ಲಿದ್ದ ಮಾತೆ ಶ್ರೇಷ್ಠ ಸರಿತೆಯನ್ನು ನೋಡಿದೆನು.

05183016a ಹಯಾಶ್ಚ ಮೇ ಸಂಗೃಹೀತಾಸ್ತಯಾ ವೈ

         ಮಹಾನದ್ಯಾ ಸಮ್ಯತಿ ಕೌರವೇಂದ್ರ|

05183016c ಪಾದೌ ಜನನ್ಯಾಃ ಪ್ರತಿಪೂಜ್ಯ ಚಾಹಂ

         ತಥಾರ್ಷ್ಟಿಷೇಣಂ ರಥಮಭ್ಯರೋಹಂ||

ಕೌರವೇಂದ್ರ! ಯುದ್ಧದಲ್ಲಿ ಆ ಮಹಾನದಿಯೇ ನನ್ನ ಕುದುರೆಗಳ ಕಡಿವಾಣಗಳನ್ನು ಹಿಡಿದು ನಡೆಸುತ್ತಿದ್ದಳು. ನಾನಾದರೋ ಅರ್ಷ್ಟಿಷೇಣನನ್ನು ಹೇಗೋ ಹಾಗೆ ಜನನಿಯ ಪಾದಗಳನ್ನು ಪೂಜಿಸಿ ರಥವನ್ನೇರಿದೆನು.

05183017a ರರಕ್ಷ ಸಾ ಮಮ ರಥಂ ಹಯಾಂಶ್ಚೋಪಸ್ಕರಾಣಿ ಚ|

05183017c ತಾಮಹಂ ಪ್ರಾಂಜಲಿರ್ಭೂತ್ವಾ ಪುನರೇವ ವ್ಯಸರ್ಜಯಂ||

ಅವಳು ನನ್ನ ರಥವನ್ನೂ ಕುದುರೆಗಳನ್ನೂ ಉಪಕರಣಗಳನ್ನೂ ರಕ್ಷಿಸಿದ್ದಳು. ಕೈಮುಗಿದು ನಮಸ್ಕರಿಸಿ ಪುನಃ ಅವಳನ್ನು ಕಳುಹಿಸಿಕೊಟ್ಟೆನು.

05183018a ತತೋಽಹಂ ಸ್ವಯಮುದ್ಯಮ್ಯ ಹಯಾಂಸ್ತಾನ್ವಾತರಂಹಸಃ|

05183018c ಅಯುಧ್ಯಂ ಜಾಮದಗ್ನ್ಯೇನ ನಿವೃತ್ತೇಽಹನಿ ಭಾರತ||

ಭಾರತ! ಆಗ ನಾನು ಆ ಗಾಳಿಯ ವೇಗವುಳ್ಳ ಕುದುರೆಗಳನ್ನು ಸ್ವಯಂ ನಿಯಂತ್ರಿಸುತ್ತಾ ದಿನವು ಕಳೆಯುವವರೆಗೆ ಜಾಮದಗ್ನಿಯೊಂದಿಗೆ ಯುದ್ಧ ಮಾಡಿದೆನು.

05183019a ತತೋಽಹಂ ಭರತಶ್ರೇಷ್ಠ ವೇಗವಂತಂ ಮಹಾಬಲಂ|

05183019c ಅಮುಂಚಂ ಸಮರೇ ಬಾಣಂ ರಾಮಾಯ ಹೃದಯಚ್ಚಿದಂ||

ಭರತಶ್ರೇಷ್ಠ! ಆಗ ನಾನು ಸಮರದಲ್ಲಿ ವೇಗವಂತ ಮಹಾಬಲಶಾಲಿ ಬಾಣವನ್ನು ಬಿಟ್ಟು ರಾಮನ ಹೃದಯವನ್ನು ಚುಚ್ಚಿದೆನು.

05183020a ತತೋ ಜಗಾಮ ವಸುಧಾಂ ಬಾಣವೇಗಪ್ರಪೀಡಿತಃ|

05183020c ಜಾನುಭ್ಯಾಂ ಧನುರುತ್ಸೃಜ್ಯ ರಾಮೋ ಮೋಹವಶಂ ಗತಃ||

ಆಗ ಬಾಣದ ವೇಗದಿಂದ ಪೀಡಿತನಾದ ರಾಮನು ಧನುವನ್ನು ಬಿಟ್ಟು ತೊಡೆಗಳನ್ನೂರಿ ನೆಲದ ಮೇಲೆ ಬಿದ್ದು ಮೋಹವಶನಾದನು.

05183021a ತತಸ್ತಸ್ಮಿನ್ನಿಪತಿತೇ ರಾಮೇ ಭೂರಿಸಹಸ್ರದೇ|

05183021c ಆವವ್ರುರ್ಜಲದಾ ವ್ಯೋಮ ಕ್ಷರಂತೋ ರುಧಿರಂ ಬಹು||

ಸಹಸ್ರಭೂರಿಗಳನ್ನಿತ್ತ ರಾಮನು ಹಾಗೆ ಬೀಳಲು ಮೋಡಗಳು ಆಕಾಶವನ್ನು ಕವಿದು ರಕ್ತದ ಮಳೆಯನ್ನು ಸುರಿಸಿದವು.

05183022a ಉಲ್ಕಾಶ್ಚ ಶತಶಃ ಪೇತುಃ ಸನಿರ್ಘಾತಾಃ ಸಕಂಪನಾಃ|

05183022c ಅರ್ಕಂ ಚ ಸಹಸಾ ದೀಪ್ತಂ ಸ್ವರ್ಭಾನುರಭಿಸಂವೃಣೋತ್||

ಭಿರುಗಾಳಿ ಮತ್ತು ಭೂಕಂಪಗಳೊಡನೆ ನೂರಾರು ಉಲ್ಕೆಗಳು ಬಿದ್ದವು. ಒಮ್ಮಿಂದೊಮ್ಮೆಲೇ ಸ್ವರ್ಭಾನುವು ಉರಿಯುತ್ತಿರುವ ಸೂರ್ಯನನ್ನು ಮುಚ್ಚಿದನು.

05183023a ವವುಶ್ಚ ವಾತಾಃ ಪರುಷಾಶ್ಚಲಿತಾ ಚ ವಸುಂಧರಾ|

05183023c ಗೃಧ್ರಾ ಬಡಾಶ್ಚ ಕಂಕಾಶ್ಚ ಪರಿಪೇತುರ್ಮುದಾ ಯುತಾಃ||

ಚಂಡಮಾರುತವು ಬೀಸಿತು. ಭೂಮಿಯು ನಡುಗಿತು. ಹದ್ದು, ಕಾಗೆಗಳು ಮತ್ತು ಬಕಪಕ್ಷಿಗಳು ಗುಂಪಾಗಿ ಸಂತೋಷದಿಂದ ಹಾರಾಡತೊಡಗಿದವು.

05183024a ದೀಪ್ತಾಯಾಂ ದಿಶಿ ಗೋಮಾಯುರ್ದಾರುಣಂ ಮುಹುರುನ್ನದತ್|

05183024c ಅನಾಹತಾ ದುಂದುಭಯೋ ವಿನೇದುರ್ಭೃಶನಿಸ್ವನಾಃ||

ಕೆಂಪಾಗಿದ್ದ ದಿಗಂತದಲ್ಲಿ ನರಿಗಳು ದಾರುಣವಾಗಿ ಮತ್ತೆ ಮತ್ತೆ ಕೂಗಿದವು. ಬಾರಿಸದೆಯೇ ದುಂದುಭಿಗಳು ಅತಿ ಜೋರಾಗಿ ಶಬ್ಧಮಾಡಿದವು.

05183025a ಏತದೌತ್ಪಾತಿಕಂ ಘೋರಮಾಸೀದ್ಭರತಸತ್ತಮ|

05183025c ವಿಸಂಜ್ಞಾಕಲ್ಪೇ ಧರಣೀಂ ಗತೇ ರಾಮೇ ಮಹಾತ್ಮನಿ||

ಭರತಸತ್ತಮ! ಮಹಾತ್ಮ ರಾಮನು ಮೂರ್ಛಿತನಾಗಿ ನೆಲದ ಮೇಲೆ ಬೀಳಲು ಈ ಘೋರ ಉತ್ಪಾತಗಳು ನಡೆದವು.

05183026a ತತೋ ರವಿರ್ಮಂದಮರೀಚಿಮಂಡಲೋ

         ಜಗಾಮಾಸ್ತಂ ಪಾಂಸುಪುಂಜಾವಗಾಢಃ|

05183026c ನಿಶಾ ವ್ಯಗಾಹತ್ಸುಖಶೀತಮಾರುತಾ

         ತತೋ ಯುದ್ಧಂ ಪ್ರತ್ಯವಹಾರಯಾವಃ||

ಕೋಮಲ ಕಿರಣಗಳು ಮುಸುಕಿದ ರವಿಯು ಮರೀಚಿಮಂಡಲದಲ್ಲಿ ಅಸ್ತನಾದನು. ಸುಖ ಶೀತ ಮಾರುತಗಳೊಂದಿಗೆ ರಾತ್ರಿಯು ಪಸರಿಸಿತು. ಆಗ ನಾವು ಯುದ್ಧದಿಂದ ಹಿಂದೆ ಸರಿದೆವು.

05183027a ಏವಂ ರಾಜನ್ನವಹಾರೋ ಬಭೂವ

         ತತಃ ಪುನರ್ವಿಮಲೇಽಭೂತ್ಸುಘೋರಂ|

05183027c ಕಾಲ್ಯಂ ಕಾಲ್ಯಂ ವಿಂಶತಿಂ ವೈ ದಿನಾನಿ

         ತಥೈವ ಚಾನ್ಯಾನಿ ದಿನಾನಿ ತ್ರೀಣಿ||

ರಾಜನ್! ಹೀಗೆ ಯುದ್ಧಕ್ಕೆ ವಿರಾಮವಾಯಿತು. ಬೆಳಗಾಗಲು ಪುನಃ ಘೋರಯುದ್ಧವು ನಡೆಯಿತು. ಹೀಗೆ ಕಾಲ ಕಾಲದಲ್ಲಿ ಇಪ್ಪತ್ತು ಮತ್ತು ಅನ್ಯ ಮೂರು ದಿನಗಳು ಯುದ್ಧವು ನಡೆಯಿತು.”

ಇತಿ ಶ್ರೀ ಮಹಾಭಾರತೇ ಉದ್ಯೋಗ  ಪರ್ವಣಿ ಅಂಬೋಽಪಾಖ್ಯಾನಪರ್ವಣಿ ರಾಮಭೀಷ್ಮಯುದ್ಧೇ ತ್ರ್ಯಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ಮೂರನೆಯ ಅಧ್ಯಾಯವು.

Image result for indian motifs

Comments are closed.