Udyoga Parva: Chapter 181

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೮೧

ದಿವ್ಯಾಸ್ತ್ರಗಳಿಂದ ಹೋರಾಡುವಾಗ ಪರಶುರಾಮನು ಭೀಷ್ಮನ ಬಾಣಗಳಿಗೆ ಸಿಲುಕಿ ಮೂರ್ಛೆಹೋದುದು (೧-೨೩). ಎರಡನೆಯ ದಿನದ ಯುದ್ಧ ಸಮಾಪ್ತಿ (೨೪-೩೬).

05181001 ಭೀಷ್ಮ ಉವಾಚ|

05181001a ಆತ್ಮನಸ್ತು ತತಃ ಸೂತೋ ಹಯಾನಾಂ ಚ ವಿಶಾಂ ಪತೇ|

05181001c ಮಮ ಚಾಪನಯಾಮಾಸ ಶಲ್ಯಾನ್ಕುಶಲಸಮ್ಮತಃ||

ಭೀಷ್ಮನು ಹೇಳಿದನು: “ವಿಶಾಂಪತೇ! ಕುಶಲಸಮ್ಮತನಾದ ಸೂತನು ತನ್ನ, ಕುದುರೆಗಳ ಮತ್ತು ನನ್ನ ದೇಹಗಳಿಂದ ಚುಚ್ಚಿಕೊಂಡಿದ್ದ ಬಾಣಗಳನ್ನು ಕಿತ್ತನು.

05181002a ಸ್ನಾತೋಪವೃತ್ತೈಸ್ತುರಗೈರ್ಲಬ್ಧತೋಯೈರವಿಹ್ವಲೈಃ|

05181002c ಪ್ರಭಾತ ಉದಿತೇ ಸೂರ್ಯೇ ತತೋ ಯುದ್ಧಮವರ್ತತ||

ಪ್ರಭಾತದಲ್ಲಿ ಸೂರ್ಯನು ಉದಯಿಸಲು, ಕುದುರೆಗಳಿಗೆ ಸ್ನಾನಮಾಡಿಸಿ, ಹುಲ್ಲಿನಲ್ಲಿ ಹೊರಳಾಡಿಸಿ, ನೀರು ಕುಡಿಸಿ, ಆಯಾಸವನ್ನು ಕಳೆದುಕೊಂಡು ಯುದ್ಧಕ್ಕೆ ಹಿಂದಿರುಗಿದೆನು.

05181003a ದೃಷ್ಟ್ವಾ ಮಾಂ ತೂರ್ಣಮಾಯಾಂತಂ ದಂಶಿತಂ ಸ್ಯಂದನೇ ಸ್ಥಿತಂ|

05181003c ಅಕರೋದ್ರಥಮತ್ಯರ್ಥಂ ರಾಮಃ ಸಜ್ಜಂ ಪ್ರತಾಪವಾನ್||

ರಥದ ಮೇಲೆ ಕುಳಿತು ಕವಚಗಳನ್ನು ಧರಿಸಿ ಮೊದಲೇ ಬಂದಿದ್ದ ನನ್ನನ್ನು ನೋಡಿ ಪ್ರತಾಪವಾನ್ ರಾಮನು ಸಿದ್ಧತೆಗಳನ್ನು ಮಾಡಿಕೊಂಡನು.

05181004a ತತೋಽಹಂ ರಾಮಮಾಯಾಂತಂ ದೃಷ್ಟ್ವಾ ಸಮರಕಾಂಕ್ಷಿಣಂ|

05181004c ಧನುಃಶ್ರೇಷ್ಠಂ ಸಮುತ್ಸೃಜ್ಯ ಸಹಸಾವತರಂ ರಥಾತ್||

ಆಗ ನಾನು ಸಮರಕಾಂಕ್ಷಿಣಿಯಾಗಿ ಬರುತ್ತಿದ್ದ ರಾಮನನ್ನು ನೋಡಿ ತಕ್ಷಣವೇ ಶ್ರೇಷ್ಠ ಧನುಸ್ಸನ್ನು ಬದಿಗಿಟ್ಟು ರಥದಿಂದ ಕೆಳಗಿಳಿದೆನು.

05181005a ಅಭಿವಾದ್ಯ ತಥೈವಾಹಂ ರಥಮಾರುಹ್ಯ ಭಾರತ|

05181005c ಯುಯುತ್ಸುರ್ಜಾಮದಗ್ನ್ಯಸ್ಯ ಪ್ರಮುಖೇ ವೀತಭೀಃ ಸ್ಥಿತಃ||

ಭಾರತ! ಅವನನ್ನು ನಮಸ್ಕರಿಸಿ ರಥವನ್ನೇರಿ ಯುದ್ಧಮಾಡಲೋಸುಗ ಭಯವಿಲ್ಲದೇ ಜಾಮದಗ್ನಿಯ ಎದಿರು ನಿಂತೆನು.

05181006a ತತೋ ಮಾಂ ಶರವರ್ಷೇಣ ಮಹತಾ ಸಮವಾಕಿರತ್|

05181006c ಅಹಂ ಚ ಶರವರ್ಷೇಣ ವರ್ಷಂತಂ ಸಮವಾಕಿರಂ||

ಆಗ ಅವನು ನನ್ನನ್ನು ಮಹಾ ಶರವರ್ಷದಿಂದ ಮುಚ್ಚಿದನು. ನಾನೂ ಕೂಡ ಶರವರ್ಷವನ್ನು ಸುರಿಸಿ ಅವನನ್ನು ಮುಚ್ಚಿದೆನು.

05181007a ಸಂಕ್ರುದ್ಧೋ ಜಾಮದಗ್ನ್ಯಸ್ತು ಪುನರೇವ ಪತತ್ರಿಣಃ|

05181007c ಪ್ರೇಷಯಾಮಾಸ ಮೇ ರಾಜನ್ದೀಪ್ತಾಸ್ಯಾನುರಗಾನಿವ||

ರಾಜನ್! ಸಂಕ್ರುದ್ಧ ಜಾಮದಗ್ನಿಯು ಪುನಃ ಬೆಂಕಿಯನ್ನು ಕಾರುವ ಸರ್ಪಗಳಂತಿರುವ ಪತತ್ರಿ ಬಾಣಗಳನ್ನು ನನ್ನ ಮೇಲೆ ಪ್ರಯೋಗಿಸಿದನು.

05181008a ತಾನಹಂ ನಿಶಿತೈರ್ಭಲ್ಲೈಃ ಶತಶೋಽಥ ಸಹಸ್ರಶಃ|

05181008c ಅಚ್ಚಿದಂ ಸಹಸಾ ರಾಜನ್ನಂತರಿಕ್ಷೇ ಪುನಃ ಪುನಃ||

ರಾಜನ್! ತಕ್ಷಣವೇ ನಾನು ಅವುಗಳನ್ನು ನೂರಾರು ಸಹಸ್ರ ಹರಿತ ಭಲ್ಲೆಗಳಿಂದ ಅಂತರಿಕ್ಷದಲ್ಲಿಯೇ ಪುನಃ ಪುನಃ ತುಂಡರಿಸಿದನು.

05181009a ತತಸ್ತ್ವಸ್ತ್ರಾಣಿ ದಿವ್ಯಾನಿ ಜಾಮದಗ್ನ್ಯಃ ಪ್ರತಾಪವಾನ್|

05181009c ಮಯಿ ಪ್ರಚೋದಯಾಮಾಸ ತಾನ್ಯಹಂ ಪ್ರತ್ಯಷೇಧಯಂ||

ಆಗ ಪ್ರತಾಪವಾನ್ ಜಾಮದಗ್ನಿಯು ದಿವ್ಯಾಸ್ತ್ರಗಳನ್ನು ನನ್ನ ಮೇಲೆ ಪ್ರಯೋಗಿಸತೊಡಗಿದನು. ಅವುಗಳನ್ನೂ ನಾನು ತಡೆಹಿಡಿದೆನು.

05181010a ಅಸ್ತ್ರೈರೇವ ಮಹಾಬಾಹೋ ಚಿಕೀರ್ಷನ್ನಧಿಕಾಂ ಕ್ರಿಯಾಂ|

05181010c ತತೋ ದಿವಿ ಮಹಾನ್ನಾದಃ ಪ್ರಾದುರಾಸೀತ್ಸಮಂತತಃ||

ಮಹಾಬಾಹೋ! ಅಸ್ತ್ರಗಳಿಂದಲೇ ನನ್ನ ಕ್ರಿಯೆಯು ಅಧಿಕವಾಗಲು ದಿವಿಯಲ್ಲಿ ಎಲ್ಲೆಡೆಯಿಂದ ಮಹಾನಾದವುಂಟಾಯಿತು.

05181011a ತತೋಽಹಮಸ್ತ್ರಂ ವಾಯವ್ಯಂ ಜಾಮದಗ್ನ್ಯೇ ಪ್ರಯುಕ್ತವಾನ್|

05181011c ಪ್ರತ್ಯಾಜಘ್ನೇ ಚ ತದ್ರಾಮೋ ಗುಃಯಕಾಸ್ತ್ರೇಣ ಭಾರತ||

ಭಾರತ! ಆಗ ನಾನು ವಾಯುವ್ಯಾಸ್ತ್ರವನ್ನು ಜಾಮದಗ್ನಿಯ ಮೇಲೆ ಪ್ರಯೋಗಿಸಿದನು. ಗುಹ್ಯಕಾಸ್ತ್ರದಿಂದ ರಾಮನು ಅದನ್ನು ತುಂಡರಿಸಿದನು.

05181012a ತತೋಽಸ್ತ್ರಮಹಮಾಗ್ನೇಯಮನುಮಂತ್ರ್ಯ ಪ್ರಯುಕ್ತವಾನ್|

05181012c ವಾರುಣೇನೈವ ರಾಮಸ್ತದ್ವಾರಯಾಮಾಸ ಮೇ ವಿಭುಃ||

ಆಗ ನಾನು ಆಗ್ನೇಯಾಸ್ತ್ರವನ್ನು ಅನುಮಂತ್ರಿಸಿ ಪ್ರಯೋಗಿಸಲು ನನ್ನ ವಿಭು ರಾಮನು ಅದನ್ನು ವಾರುಣದಿಂದ ತಡೆದನು.

05181013a ಏವಮಸ್ತ್ರಾಣಿ ದಿವ್ಯಾನಿ ರಾಮಸ್ಯಾಹಮವಾರಯಂ|

05181013c ರಾಮಶ್ಚ ಮಮ ತೇಜಸ್ವೀ ದಿವ್ಯಾಸ್ತ್ರವಿದರಿಂದಮಃ||

ಹೀಗೆ ನಾನು ರಾಮನ ದಿವ್ಯಾಸ್ತ್ರಗಳನ್ನು ತಡೆಗಟ್ಟಲು ತೇಜಸ್ವಿ ದಿವ್ಯಾಸ್ತ್ರವಿದು ಅರಿಂದಮ ರಾಮನೂ ಕೂಡ ನನ್ನವನ್ನು ತಡೆದನು.

05181014a ತತೋ ಮಾಂ ಸವ್ಯತೋ ರಾಜನ್ರಾಮಃ ಕುರ್ವನ್ದ್ವಿಜೋತ್ತಮಃ|

05181014c ಉರಸ್ಯವಿಧ್ಯತ್ಸಂಕ್ರುದ್ಧೋ ಜಾಮದಗ್ನ್ಯೋ ಮಹಾಬಲಃ||

ಆಗ ರಾಜನ್! ಆ ದ್ವಿಜೋತ್ತಮ ಜಾಮದಗ್ನ್ಯ ಮಹಾಬಲ ರಾಮನು ಸಂಕ್ರುದ್ಧನಾಗಿ ನನ್ನ ಬಲದಿಯಲ್ಲಿ ಬಂದು ಎದೆಯನ್ನು ಚುಚ್ಚಿದನು.

05181015a ತತೋಽಹಂ ಭರತಶ್ರೇಷ್ಠ ಸಮ್ನ್ಯಷೀದಂ ರಥೋತ್ತಮೇ|

05181015c ಅಥ ಮಾಂ ಕಶ್ಮಲಾವಿಷ್ಟಂ ಸೂತಸ್ತೂರ್ಣಮಪಾವಹತ್|

05181015e ಗೋರುತಂ ಭರತಶ್ರೇಷ್ಠ ರಾಮಬಾಣಪ್ರಪೀಡಿತಂ||

ಭರತಶ್ರೇಷ್ಠ! ಆಗ ನಾನು ನೋವಿನಿಂದ ಬಳಲಿ ಆ ಉತ್ತಮ ರಥದಲ್ಲಿಯೇ ಒರಗಿದೆನು. ಭರತಶ್ರೇಷ್ಠ! ಎದೆಯಲ್ಲಿ ರಾಮಬಾಣಪೀಡಿತನಾಗಿ ನೋವಿನಲ್ಲಿದ್ದ ನನ್ನನ್ನು ಮತ್ತು ರಥವನ್ನು ಸೂತನು ಯುದ್ಧದಿಂದ ದೂರ ಕರೆದೊಯ್ದನು.

05181016a ತತೋ ಮಾಮಪಯಾತಂ ವೈ ಭೃಶಂ ವಿದ್ಧಮಚೇತಸಂ|

05181016c ರಾಮಸ್ಯಾನುಚರಾ ಹೃಷ್ಟಾಃ ಸರ್ವೇ ದೃಷ್ಟ್ವಾ ಪ್ರಚುಕ್ರುಶುಃ|

05181016e ಅಕೃತವ್ರಣಪ್ರಭೃತಯಃ ಕಾಶಿಕನ್ಯಾ ಚ ಭಾರತ||

ಆಗ ನಾನು ಅಚೇತಸನಾಗಿ ಒಯ್ಯಲ್ಪಡುತ್ತಿದ್ದುದನ್ನು ನೋಡಿದ ಅಕೃತವ್ರಣ ಮತ್ತು ಕಾಶಿಕನ್ಯೆಯೇ ಮೊದಲಾದ ರಾಮನ ಅನುಚರರೆಲ್ಲರೂ ಸಂತೋಷಗೊಂಡು ಕೂಗಿದರು.

05181017a ತತಸ್ತು ಲಬ್ಧಸಂಜ್ಞೋಽಹಂ ಜ್ಞಾತ್ವಾ ಸೂತಮಥಾಬ್ರುವಂ|

05181017c ಯಾಹಿ ಸೂತ ಯತೋ ರಾಮಃ ಸಜ್ಜೋಽಹಂ ಗತವೇದನಃ||

ಆಗ ನನಗೆ ಎಚ್ಚರ ಬಂದು ಸೂತನಿಗೆ ಹೇಳಿದೆನು: “ಸೂತ! ರಾಮನಿರುವಲ್ಲಿಗೆ ಕರೆದುಕೊಂಡು ಹೋಗು! ವೇದನೆಯು ಕಳೆದು ನಾನು ಸಿದ್ಧನಾಗಿದ್ದೇನೆ.”

05181018a ತತೋ ಮಾಮವಹತ್ಸೂತೋ ಹಯೈಃ ಪರಮಶೋಭಿತೈಃ|

05181018c ನೃತ್ಯದ್ಭಿರಿವ ಕೌರವ್ಯ ಮಾರುತಪ್ರತಿಮೈರ್ಗತೌ||

ಆಗ ಕೌರವ್ಯ! ಸೂತನು ನನ್ನನ್ನು ಗಾಳಿಯಂತೆ ಹೋಗಬಲ್ಲ ಪರಮ ಶೋಭಿತ ಕುದುರೆಗಳಿಂದ ರಣಕ್ಕೆ ಕರೆದೊಯ್ದನು.

05181019a ತತೋಽಹಂ ರಾಮಮಾಸಾದ್ಯ ಬಾಣಜಾಲೇನ ಕೌರವ|

05181019c ಅವಾಕಿರಂ ಸುಸಂರಬ್ಧಃ ಸಂರಬ್ಧಂ ವಿಜಿಗೀಷಯಾ||

ಕೌರವ! ಆಗ ನಾನು ರಾಮನನ್ನು ಸೇರಿ ಸಿಟ್ಟಿನಿಂದ ಆ ಸಿಟ್ಟಾಗುವವನನ್ನು ಗೆಲ್ಲಲು ಬಯಸಿ ಅವನನ್ನು ಬಾಣಜಾಲಗಳಿಂದ ಮುಚ್ಚಿದೆನು.

05181020a ತಾನಾಪತತ ಏವಾಸೌ ರಾಮೋ ಬಾಣಾನಜಿಹ್ಮಗಾನ್|

05181020c ಬಾಣೈರೇವಾಚ್ಚಿನತ್ತೂರ್ಣಮೇಕೈಕಂ ತ್ರಿಭಿರಾಹವೇ||

ಆದರೆ ರಾಮನು ನನ್ನ ಪ್ರತಿಯೊಂದಕ್ಕೂ ಮೂರು ಬಾಣಗಳನ್ನು ಬಿಟ್ಟು, ನನ್ನವು ಅವನನ್ನು ತಲುಪುವ ಮೊದಲೇ ಕತ್ತರಿಸಿದನು.

05181021a ತತಸ್ತೇ ಮೃದಿತಾಃ ಸರ್ವೇ ಮಮ ಬಾಣಾಃ ಸುಸಂಶಿತಾಃ|

05181021c ರಾಮಬಾಣೈರ್ದ್ವಿಧಾ ಚಿನ್ನಾಃ ಶತಶೋಽಥ ಮಹಾಹವೇ||

ಆ ಮಹಾಹವದಲ್ಲಿ ನನ್ನ ಸುಸಂಶಿತ ನೂರಾರು ಬಾಣಗಳನ್ನು ರಾಮನ ಬಾಣಗಳು ಎರಡಾಗಿ ತುಂಡರಿಸಲು ಅವರೆಲ್ಲರೂ ಸಂತೋಷಗೊಂಡರು.

05181022a ತತಃ ಪುನಃ ಶರಂ ದೀಪ್ತಂ ಸುಪ್ರಭಂ ಕಾಲಸಮ್ಮಿತಂ|

05181022c ಅಸೃಜಂ ಜಾಮದಗ್ನ್ಯಾಯ ರಾಮಾಯಾಹಂ ಜಿಘಾಂಸಯಾ||

ಆಗ ನಾನು ಜಾಮದಗ್ನಿ ರಾಮನನ್ನು ಕೊಲ್ಲಬೇಕೆಂದು ಬಯಸಿ ಉರಿಯುತ್ತಿರುವ ಪ್ರಭೆಯುಳ್ಳ, ಮೃತ್ಯುವನ್ನು ಕೂಡಿರುವ ಶರವನ್ನು ಪ್ರಯೋಗಿಸಿದೆನು.

05181023a ತೇನ ತ್ವಭಿಹತೋ ಗಾಢಂ ಬಾಣಚ್ಚೇದವಶಂ ಗತಃ|

05181023c ಮುಮೋಹ ಸಹಸಾ ರಾಮೋ ಭೂಮೌ ಚ ನಿಪಪಾತ ಹ||

ಆ ಬಾಣದಿಂದ ಗಾಢವಾಗಿ ಹೊಡೆತತಿಂದು ರಾಮನು ತಕ್ಷಣವೇ ಮೂರ್ಛೆಗೊಂಡು ನೆಲದ ಮೇಲೆ ಬಿದ್ದನು.

05181024a ತತೋ ಹಾಹಾಕೃತಂ ಸರ್ವಂ ರಾಮೇ ಭೂತಲಮಾಶ್ರಿತೇ|

05181024c ಜಗದ್ಭಾರತ ಸಂವಿಗ್ನಂ ಯಥಾರ್ಕಪತನೇಽಭವತ್||

ಆಗ ರಾಮನು ನೆಲದ ಮೇಲೆ ಮಲಗಿರಲು ಎಲ್ಲರೂ ಹಾಹಾಕಾರ ಮಾಡಿದರು. ಭಾರತ! ಸೂರ್ಯನೇ ಕೆಳಗೆ ಬಿದ್ದನೋ ಎನ್ನುವಂತೆ ಜಗತ್ತು ಸಂವಿಗ್ನಗೊಂಡಿತು.

05181025a ತತ ಏನಂ ಸುಸಂವಿಗ್ನಾಃ ಸರ್ವ ಏವಾಭಿದುದ್ರುವುಃ|

05181025c ತಪೋಧನಾಸ್ತೇ ಸಹಸಾ ಕಾಶ್ಯಾ ಚ ಭೃಗುನಂದನಂ||

ಆಗ ಸುಸಂವಿಗ್ನರಾದ ಎಲ್ಲ ತಪೋಧರನೂ ಕಾಶ್ಯೆಯೊಂದಿಗೆ ತಕ್ಷಣವೇ ಭೃಗುನಂದನನಲ್ಲಿಗೆ ಧಾವಿಸಿದರು.

05181026a ತ ಏನಂ ಸಂಪರಿಷ್ವಜ್ಯ ಶನೈರಾಶ್ವಾಸಯಂಸ್ತದಾ|

05181026c ಪಾಣಿಭಿರ್ಜಲಶೀತೈಶ್ಚ ಜಯಾಶೀರ್ಭಿಶ್ಚ ಕೌರವ||

ಕೌರವ! ಅವನನ್ನು ಮೆಲ್ಲಗೆ ತಬ್ಬಿಕೊಂಡು, ಕೈಗಳಿಂದ ತಣ್ಣೀರನ್ನು ಚುಮುಕಿಸಿ ಜಯ ಆಶೀರ್ವಚನಗಳಿಂದ ಆಶ್ವಾಸನೆಯನ್ನಿತ್ತರು.

05181027a ತತಃ ಸ ವಿಹ್ವಲೋ ವಾಕ್ಯಂ ರಾಮ ಉತ್ಥಾಯ ಮಾಬ್ರವೀತ್|

05181027c ತಿಷ್ಠ ಭೀಷ್ಮ ಹತೋಽಸೀತಿ ಬಾಣಂ ಸಂಧಾಯ ಕಾರ್ಮುಕೇ||

ಆಗ ವಿಹ್ವಲನಾದ ರಾಮನು ಮೇಲೆದ್ದು ಧನುಸ್ಸಿಗೆ ಬಾಣವನ್ನು ಹೂಡಿ “ಭೀಷ್ಮ! ನಿಲ್ಲು! ನಿನ್ನನ್ನು ಕೊಲ್ಲುತ್ತೇನೆ!” ಎಂದು ಹೇಳಿದನು.

05181028a ಸ ಮುಕ್ತೋ ನ್ಯಪತತ್ತೂರ್ಣಂ ಪಾರ್ಶ್ವೇ ಸವ್ಯೇ ಮಹಾಹವೇ|

05181028c ಯೇನಾಹಂ ಭೃಶಸಂವಿಗ್ನೋ ವ್ಯಾಘೂರ್ಣಿತ ಇವ ದ್ರುಮಃ||

ಮಹಾಹವದಲ್ಲಿ ಬಿಟ್ಟ ಆ ಬಾಣವು ನನ್ನ ಎಡಬದಿಗೆ ಬಂದು ಪೆಟ್ಟುತಿಂದ ಮರದಂತೆ ನನ್ನನ್ನು ಚೆನ್ನಾಗಿ ಗಾಯಗೊಳಿಸಿ ಸಂವಿಗ್ನನನ್ನಾಗಿಸಿತು.

05181029a ಹತ್ವಾ ಹಯಾಂಸ್ತತೋ ರಾಜಂ ಶೀಘ್ರಾಸ್ತ್ರೇಣ ಮಹಾಹವೇ|

05181029c ಅವಾಕಿರನ್ಮಾಂ ವಿಶ್ರಬ್ಧೋ ಬಾಣೈಸ್ತೈರ್ಲೋಮವಾಹಿಭಿಃ||

ರಾಜನ್! ಮಹಾಹವೆಯಲ್ಲಿ ಶೀಘ್ರಾಸ್ತ್ರದಿಂದ ನನ್ನ ಕುದುರೆಗಳನ್ನು ಕೊಂದು ಲೋಮವಾಹಿ ಬಾಣಗಳನ್ನು ನನ್ನ ಮೇಲೆ ಪ್ರಯೋಗಿಸಿದನು.

05181030a ತತೋಽಹಮಪಿ ಶೀಘ್ರಾಸ್ತ್ರಂ ಸಮರೇಽಪ್ರತಿವಾರಣಂ|

05181030c ಅವಾಸೃಜಂ ಮಹಾಬಾಹೋ ತೇಽಂತರಾಧಿಷ್ಠಿತಾಃ ಶರಾಃ|

05181030e ರಾಮಸ್ಯ ಮಮ ಚೈವಾಶು ವ್ಯೋಮಾವೃತ್ಯ ಸಮಂತತಃ||

ಮಹಾಬಾಹು! ಆಗ ನಾನೂ ಕೂಡ ಸಮರದಲ್ಲಿ ತಡೆಯಲಸಾಧ್ಯವಾದ ಶ್ರೀಘ್ರಾಸ್ತ್ರವನ್ನು ಪ್ರಯೋಗಿಸಲು ಆ ಶರಗಳು ಮಧ್ಯದಲ್ಲಿಯೇ ನಿಂತುಕೊಂಡವು. ನನ್ನ ಮತ್ತು ರಾಮನ ಬಾಣಗಳು ಆಕಾಶವನ್ನು ಎಲ್ಲೆಡೆಯಲ್ಲಿಯೂ ಆವೃತಗೊಂಡವು.

05181031a ನ ಸ್ಮ ಸೂರ್ಯಃ ಪ್ರತಪತಿ ಶರಜಾಲಸಮಾವೃತಃ|

05181031c ಮಾತರಿಶ್ವಾಂತರೇ ತಸ್ಮಿನ್ಮೇಘರುದ್ಧ ಇವಾನದತ್||

ಶರಜಾಲದಿಂದ ಸಮಾವೃತನಾದ ಸೂರ್ಯನು ಸುಡಲಿಲ್ಲ. ಮೋಡಗಳೋ ಎನ್ನುವಂತಿರುವ ಅವುಗಳ ಮೂಲಕ ಗಾಳಿಯು ಸುಳಿದಾಡಿ ಶಬ್ಧವನ್ನುಂಟು ಮಾಡಿತು.

05181032a ತತೋ ವಾಯೋಃ ಪ್ರಕಂಪಾಚ್ಚ ಸೂರ್ಯಸ್ಯ ಚ ಮರೀಚಿಭಿಃ|

05181032c ಅಭಿತಾಪಾತ್ಸ್ವಭಾವಾಚ್ಚ ಪಾವಕಃ ಸಮಜಾಯತ||

ಆಗ ಗಾಳಿಯಿಂದಾದ ಘರ್ಷಣೆ ಮತ್ತು ಸೂರ್ಯನ ಕಿರಣಗಳು ಸೇರಿ ಅಲ್ಲಿ ಪ್ರಾಕೃತಿಕವಾಗಿಯೇ ಬೆಂಕಿ ಎದ್ದಿತು.

05181033a ತೇ ಶರಾಃ ಸ್ವಸಮುತ್ಥೇನ ಪ್ರದೀಪ್ತಾಶ್ಚಿತ್ರಭಾನುನಾ|

05181033c ಭೂಮೌ ಸರ್ವೇ ತದಾ ರಾಜನ್ಭಸ್ಮಭೂತಾಃ ಪ್ರಪೇದಿರೇ||

ರಾಜನ್! ತಮ್ಮಲ್ಲಿಯೇ ಉಂಟಾದ ಬೆಂಕಿಯಿಂದ ಸುಟ್ಟು ಆ ಬಾಣಗಳೆಲ್ಲವೂ ಉರಿದು ಭಸ್ಮೀಭೂತವಾಗಿ ಭೂಮಿಯ ಮೇಲೆ ಬಿದ್ದವು.

05181034a ತದಾ ಶತಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ|

05181034c ಅಯುತಾನ್ಯಥ ಖರ್ವಾಣಿ ನಿಖರ್ವಾಣಿ ಚ ಕೌರವ|

05181034e ರಾಮಃ ಶರಾಣಾಂ ಸಂಕ್ರುದ್ಧೋ ಮಯಿ ತೂರ್ಣಮಪಾತಯತ್||

05181035a ತತೋಽಹಂ ತಾನಪಿ ರಣೇ ಶರೈರಾಶೀವಿಷೋಪಮೈಃ|

05181035c ಸಂಚಿದ್ಯ ಭೂಮೌ ನೃಪತೇಽಪಾತಯಂ ಪನ್ನಗಾನಿವ||

ಕೌರವ! ನೃಪತೇ! ಸಂಕ್ರುದ್ಧನಾಗಿ ರಾಮನು ನನ್ನ ಮೇಲೆ ನೂರುಗಟ್ಟಲೆ, ಸಾವಿರಗಟ್ಟಲೆ, ಕೋಟಿಗಟ್ಟಲೆ, ಹತ್ತು ಸಾವಿರ, ನೂರುಕೋಟಿಗಟ್ಟಲೆ ಬಾಣಗಳನ್ನು ಪ್ರಯೋಗಿಸಲು ನಾನು ರಣದಲ್ಲಿ ನಾಗಗಳಂಥಹ ಶರಗಳಿಂದ ಅವುಗಳನ್ನು ಕತ್ತರಿಸಿ ಸರ್ಪಗಳಂತೆ ಅವುಗಳನ್ನು ಭೂಮಿಯ ಮೇಲೆ ಬೀಳಿಸಿದೆನು.

05181036a ಏವಂ ತದಭವದ್ಯುದ್ಧಂ ತದಾ ಭರತಸತ್ತಮ|

05181036c ಸಂಧ್ಯಾಕಾಲೇ ವ್ಯತೀತೇ ತು ವ್ಯಪಾಯಾತ್ಸ ಚ ಮೇ ಗುರುಃ||

ಭರತಸತ್ತಮ! ಹೀಗೆ ಆಗಿನ ಆ ಯುದ್ಧವು ನಡೆಯಿತು. ಸಂಧ್ಯಾಕಾಲವು ಕಳೆಯಲು ನನ್ನ ಗುರುವು ಯುದ್ಧದಿಂದ ಹಿಂದೆಸರಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ರಾಮಭೀಷ್ಮಯುದ್ಧೇ ಏಕಾಶೀತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ರಾಮಭೀಷ್ಮಯುದ್ಧದಲ್ಲಿ ನೂರಾಎಂಭತ್ತೊಂದನೆಯ ಅಧ್ಯಾಯವು.

Image result for indian motifs

Comments are closed.