Udyoga Parva: Chapter 171

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೧

ಅಂಬೆಯು ಶಾಲ್ವನ ಬಳಿ ಹೋಗಲು ಭೀಷ್ಮನಲ್ಲಿ ಅನುಮತಿಯನ್ನು ಕೇಳಿದುದು

ರಾಜಕುಮಾರಿಯರೊಡನೆ ವಿಚಿತ್ರವೀರ್ಯನ ವಿವಾಹವನ್ನು ಏರ್ಪಡಿಸುವಾಗ, ಹಿರಿಯ ರಾಜಕುಮಾರಿ ಅಂಬೆಯು ತಾನು ಶಾಲ್ವಪತಿಯನ್ನು ಮನಸಾರೆ ವರಿಸಿದ್ದರಿಂದ ಅವನ ಬಳಿ ಹೋಗಲು ಅನುಮತಿಯನ್ನು ಕೇಳಿದುದು (೧-೯).

05171001 ಭೀಷ್ಮ ಉವಾಚ|

05171001a ತತೋಽಹಂ ಭರತಶ್ರೇಷ್ಠ ಮಾತರಂ ವೀರಮಾತರಂ|

05171001c ಅಭಿಗಮ್ಯೋಪಸಂಗೃಹ್ಯ ದಾಶೇಯೀಮಿದಮಬ್ರುವಂ||

ಭೀಷ್ಮನು ಹೇಳಿದನು: “ಭರತಶ್ರೇಷ್ಠ! ಆಗ ನಾನು ತಾಯಿ, ವೀರರ ತಾಯಿ, ದಾಶೇಯಿಯ ಬಳಿಹೋಗಿ ನಮಸ್ಕರಿಸಿ ಹೇಳಿದೆನು:

05171002a ಇಮಾಃ ಕಾಶಿಪತೇಃ ಕನ್ಯಾ ಮಯಾ ನಿರ್ಜಿತ್ಯ ಪಾರ್ಥಿವಾನ್|

05171002c ವಿಚಿತ್ರವೀರ್ಯಸ್ಯ ಕೃತೇ ವೀರ್ಯಶುಲ್ಕಾ ಉಪಾರ್ಜಿತಾಃ||

“ಪಾರ್ಥಿವರನ್ನು ಸೋಲಿಸಿ ವೀರ್ಯ ಶುಲ್ಕವಾಗಿ ಈ ಕಾಶೀಪತಿಯ ಕನ್ಯೆಯರನ್ನು ವಿಚಿತ್ರವೀರ್ಯನಿಗೆಂದು ಗಳಿಸಿದ್ದೇನೆ.”

05171003a ತತೋ ಮೂರ್ಧನ್ಯುಪಾಘ್ರಾಯ ಪರ್ಯಶ್ರುನಯನಾ ನೃಪ|

05171003c ಆಹ ಸತ್ಯವತೀ ಹೃಷ್ಟಾ ದಿಷ್ಟ್ಯಾ ಪುತ್ರ ಜಿತಂ ತ್ವಯಾ||

ನೃಪ! ಆಗ ನೆತ್ತಿಯನ್ನು ಆಘ್ರಾಣಿಸಿ ಕಣ್ಣಲ್ಲಿ ನೀರನ್ನು ತುಂಬಿಸಿಕೊಂಡು ಸತ್ಯವತಿಯು ಹೇಳಿದಳು: “ಪುತ್ರ! ನೀನು ಗೆದ್ದು ಬಂದುದು ಒಳ್ಳೆಯದಾಯಿತು. ಹರ್ಷವಾಯಿತು.”

05171004a ಸತ್ಯವತ್ಯಾಸ್ತ್ವನುಮತೇ ವಿವಾಹೇ ಸಮುಪಸ್ಥಿತೇ|

05171004c ಉವಾಚ ವಾಕ್ಯಂ ಸವ್ರೀಡಾ ಜ್ಯೇಷ್ಠಾ ಕಾಶಿಪತೇಃ ಸುತಾ||

ಸತ್ಯವತಿಯ ಅನುಮತಿಯಂತೆ ವಿವಾಹವನ್ನಿಟ್ಟುಕೊಳ್ಳಲಾಯಿತು. ಆಗ ಕಾಶಿಪತಿಯ ಹಿರಿಯ ಮಗಳು ನಾಚಿಕೊಂಡು ಈ ಮಾತನ್ನಾಡಿದಳು:

05171005a ಭೀಷ್ಮ ತ್ವಮಸಿ ಧರ್ಮಜ್ಞಾಃ ಸರ್ವಶಾಸ್ತ್ರವಿಶಾರದಃ|

05171005c ಶ್ರುತ್ವಾ ಚ ಧರ್ಮ್ಯಂ ವಚನಂ ಮಹ್ಯಂ ಕರ್ತುಮಿಹಾರ್ಹಸಿ||

“ಭೀಷ್ಮ! ನೀನು ಧರ್ಮಜ್ಞನಾಗಿದ್ದೀಯೆ. ಸರ್ವಶಾಸ್ತ್ರವಿಶಾರದನಾಗಿದ್ದೀಯೆ. ನನ್ನ ಈ ಧರ್ಮದ ಮಾತುಗಳನ್ನು ಕೇಳಿ ಅಗತ್ಯವಾದುದನ್ನು ಮಾಡಬೇಕು.

05171006a ಮಯಾ ಶಾಲ್ವಪತಿಃ ಪೂರ್ವಂ ಮನಸಾಭಿವೃತೋ ವರಃ|

05171006c ತೇನ ಚಾಸ್ಮಿ ವೃತಾ ಪೂರ್ವಂ ರಹಸ್ಯವಿದಿತೇ ಪಿತುಃ||

ಹಿಂದೆಯೇ ನಾನು ಶಾಲ್ವಪತಿಯನ್ನು ಮನಸಾರೆ ವರನೆಂದು ಆರಿಸಿಕೊಂಡಿದ್ದೆ. ಅವನೂ ಕೂಡ ನನ್ನನ್ನು ಹಿಂದೆ ವರಿಸಿದ್ದನು. ಆದರೆ ಇದು ತಂದೆಗೆ ತಿಳಿಯದೇ ರಹಸ್ಯವಾಗಿಯೇ ಇತ್ತು.

05171007a ಕಥಂ ಮಾಮನ್ಯಕಾಮಾಂ ತ್ವಂ ರಾಜಂ ಶಾಸ್ತ್ರಮಧೀತ್ಯ ವೈ|

05171007c ವಾಸಯೇಥಾ ಗೃಹೇ ಭೀಷ್ಮ ಕೌರವಃ ಸನ್ವಿಶೇಷತಃ||

ಭೀಷ್ಮ! ರಾಜನ್! ಶಾಸ್ತ್ರಗಳನ್ನು ತಿಳಿದಿರುವ ನೀನು ಹೇಗೆ ತಾನೇ ಇನ್ನೊಬ್ಬನನ್ನು ಬಯಸುವವಳನ್ನು ಮನೆಯಲ್ಲಿ, ವಿಶೇಷವಾಗಿ ಕೌರವರ ಮನೆಯಲ್ಲಿ, ವಾಸಿಸಲು ಬಿಡಬಲ್ಲೆ?

05171008a ಏತದ್ಬುದ್ಧ್ಯಾ ವಿನಿಶ್ಚಿತ್ಯ ಮನಸಾ ಭರತರ್ಷಭ|

05171008c ಯತ್ಕ್ಷಮಂ ತೇ ಮಹಾಬಾಹೋ ತದಿಹಾರಬ್ಧುಮರ್ಹಸಿ||

ಭರತರ್ಷಭ! ಮಹಾಬಾಹೋ! ಇದನ್ನು ತಿಳಿದು ಯೋಚಿಸಿ ನಿಶ್ಚಯಿಸಿ ಮಾಡಬೇಕಾದುದನ್ನು ಮಾಡಬೇಕು.

05171009a ಸ ಮಾಂ ಪ್ರತೀಕ್ಷತೇ ವ್ಯಕ್ತಂ ಶಾಲ್ವರಾಜೋ ವಿಶಾಂ ಪತೇ|

05171009c ಕೃಪಾಂ ಕುರು ಮಹಾಬಾಹೋ ಮಯಿ ಧರ್ಮಭೃತಾಂ ವರ|

05171009e ತ್ವಂ ಹಿ ಸತ್ಯವ್ರತೋ ವೀರ ಪೃಥಿವ್ಯಾಮಿತಿ ನಃ ಶ್ರುತಂ||

ವಿಶಾಂಪತೇ! ಶಾಲ್ವರಾಜನು ನನಗೆ ನಿಶ್ಚಿತನಾದವನೆಂದು ತೋರುತ್ತದೆ. ಹೋಗಲು ಬಿಡು! ಮಹಾಬಾಹೋ! ಧರ್ಮಭೃತರಲ್ಲಿ ಶ್ರೇಷ್ಠ! ನನ್ನ ಮೇಲೆ ಕೃಪೆ ಮಾಡು. ನೀನು ಭೂಮಿಯಲ್ಲಿಯೇ ಸತ್ಯವ್ರತನೂ ವೀರನೂ ಎಂದು ನಾನು ಕೇಳಿದ್ದೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಅಂಬಾವಾಕ್ಯೇ ಏಕಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಅಂಬಾವಾಕ್ಯದಲ್ಲಿ ನೂರಾಎಪ್ಪತ್ತತ್ತೊಂದನೆಯ ಅಧ್ಯಾಯವು.

Image result for indian motifs"

Comments are closed.