Udyoga Parva: Chapter 17

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೭

ಆಗ ಅಲ್ಲಿಗೆ ಆಗಮಿಸಿದ ಅಗಸ್ತ್ಯನು ಇಂದ್ರಾದಿ ದೇವತೆಗಳಿಗೆ ನಹುಷನು ದೇವರಾಜ್ಯದಿಂದ ಭ್ರಷ್ಟನಾದುದನ್ನು ತಿಳಿಸುವುದು (೧-೬). ಹೇಗೆಂದು ಕೇಳಲು, ಅಗಸ್ತ್ಯನು ನಹುಷನು ತನ್ನನ್ನು ಒದೆದುದನ್ನೂ, ತಾನು ಅವನಿಗೆ ಭೂಮಿಯಲ್ಲಿ ಹಾವಾಗಿ ಹತ್ತು ಸಾವಿರ ವರ್ಷಗಳು ಸಂಚರಿಸುತ್ತೀಯೆ ಎಂದು ಶಾಪವಿತ್ತುದನ್ನೂ ಹೇಳಿದುದು (೭-೨೦).

05017001 ಶಲ್ಯ ಉವಾಚ|

05017001a ಅಥ ಸಂಚಿಂತಯಾನಸ್ಯ ದೇವರಾಜಸ್ಯ ಧೀಮತಃ|

05017001c ನಹುಷಸ್ಯ ವಧೋಪಾಯಂ ಲೋಕಪಾಲೈಃ ಸಹೈವ ತೈಃ||

05017001e ತಪಸ್ವೀ ತತ್ರ ಭಗವಾನಗಸ್ತ್ಯಃ ಪ್ರತ್ಯದೃಶ್ಯತ||

ಶಲ್ಯನು ಹೇಳಿದನು: “ಧೀಮತ ದೇವರಾಜನು ನಹುಷನ ವಧೆಯ ಉಪಾಯವನ್ನು ಲೋಕಪಾಲಕರೊಡನೆ ಸಮಾಲೋಚಿಸುತ್ತಿರಲು ಅಲ್ಲಿ ತಪಸ್ವೀ ಭಗವಾನ್ ಅಗಸ್ತ್ಯನು ಕಾಣಿಸಿಕೊಂಡನು.

05017002a ಸೋಽಬ್ರವೀದರ್ಚ್ಯ ದೇವೇಂದ್ರಂ ದಿಷ್ಟ್ಯಾ ವೈ ವರ್ಧತೇ ಭವಾನ್|

05017002c ವಿಶ್ವರೂಪವಿನಾಶೇನ ವೃತ್ರಾಸುರವಧೇನ ಚ||

ಅವನು ಇಂದ್ರನನ್ನು ಅರ್ಚಿಸಿ ಹೇಳಿದನು: “ಒಳ್ಳೆಯದಾಯಿತು! ನೀನು ವಿಶ್ವರೂಪನ ವಿನಾಶ ಮತ್ತು ವೃತ್ರಾಸುರನ ವಧೆಯ ನಂತರ ವೃದ್ಧಿಸಿದ್ದೀಯೆ.

05017003a ದಿಷ್ಟ್ಯಾ ಚ ನಹುಷೋ ಭ್ರಷ್ಟೋ ದೇವರಾಜ್ಯಾತ್ಪುರಂದರ|

05017003c ದಿಷ್ಟ್ಯಾ ಹತಾರಿಂ ಪಶ್ಯಾಮಿ ಭವಂತಂ ಬಲಸೂದನ||

ಪುರಂದರ! ಒಳ್ಳೆಯದಾಯಿತು! ದೇವರಾಜ್ಯದಿಂದ ನಹುಷನು ಭ್ರಷ್ಟನಾಗಿದ್ದಾನೆ. ಬಲಸೂದನ! ಒಳ್ಳೆಯದಾಯಿತು! ನಿನ್ನ ಶತ್ರುಗಳು ನಾಶವಾಗಿ ನಿನ್ನನ್ನು ನಾನು ನೋಡುತ್ತಿದ್ದೇನೆ.”

05017004 ಇಂದ್ರ ಉವಾಚ|

05017004a ಸ್ವಾಗತಂ ತೇ ಮಹರ್ಷೇಽಸ್ತು ಪ್ರೀತೋಽಹಂ ದರ್ಶನಾತ್ತವ|

05017004c ಪಾದ್ಯಮಾಚಮನೀಯಂ ಚ ಗಾಮರ್ಘ್ಯಂ ಚ ಪ್ರತೀಚ್ಚ ಮೇ||

ಇಂದ್ರನು ಹೇಳಿದನು: “ಮಹರ್ಷೇ! ನಿನಗೆ ಸ್ವಾಗತ. ನಿನ್ನ ದರ್ಶನದಿಂದ ನಾನು ಪ್ರೀತನಾಗಿದ್ದೇನೆ. ನನ್ನಿಂದ ಈ ಪಾದ್ಯ, ಆಚಮನೀಯ ಮತ್ತು ಅರ್ಘ್ಯವನ್ನು ಸ್ವೀಕರಿಸು!””

05017005 ಶಲ್ಯ ಉವಾಚ|

05017005a ಪೂಜಿತಂ ಚೋಪವಿಷ್ಟಂ ತಮಾಸನೇ ಮುನಿಸತ್ತಮಂ|

05017005c ಪರ್ಯಪೃಚ್ಚತ ದೇವೇಶಃ ಪ್ರಹೃಷ್ಟೋ ಬ್ರಾಹ್ಮಣರ್ಷಭಂ||

05017006a ಏತದಿಚ್ಚಾಮಿ ಭಗವನ್ಕಥ್ಯಮಾನಂ ದ್ವಿಜೋತ್ತಮ|

05017006c ಪರಿಭ್ರಷ್ಟಃ ಕಥಂ ಸ್ವರ್ಗಾನ್ನಹುಷಃ ಪಾಪನಿಶ್ಚಯಃ||

ಶಲ್ಯನು ಹೇಳಿದನು: “ಆ ಮುನಿಸತ್ತಮನನ್ನು ಪೂಜಿಸಿ ಆಸನದಲ್ಲಿ ಕುಳ್ಳಿರಿಸಿ ಸಂತೋಷಗೊಂಡ ದೇವೇಶನು ಬ್ರಾಹ್ಮಣರ್ಷಭನನ್ನು ಕೇಳಿದನು: “ಭಗವನ್! ದ್ವಿಜೋತ್ತಮ! ಪಾಪನಿಶ್ಚಯ ನಹುಷನು ಸ್ವರ್ಗದಿಂದ ಹೇಗೆ ಪರಿಭ್ರಷ್ಟನಾದ ಎಂದು ಕೇಳಲು ಬಯಸುತ್ತೇನೆ.”

05017007 ಅಗಸ್ತ್ಯ ಉವಾಚ|

05017007a ಶೃಣು ಶಕ್ರ ಪ್ರಿಯಂ ವಾಕ್ಯಂ ಯಥಾ ರಾಜಾ ದುರಾತ್ಮವಾನ್|

05017007c ಸ್ವರ್ಗಾದ್ಭ್ರಷ್ಟೋ ದುರಾಚಾರೋ ನಹುಷೋ ಬಲದರ್ಪಿತಃ||

ಅಗಸ್ತ್ಯನು ಹೇಳಿದನು: “ಶಕ್ರ! ದುರಾತ್ಮ, ರಾಜಾ, ದುರಾಚಾರಿ, ಬಲದರ್ಪಿತ ನಹುಷನು ಸ್ವರ್ಗದಿಂದ ಹೇಗೆ ಭ್ರಷ್ಟನಾದ ಎನ್ನುವ ಪ್ರಿಯ ವಾರ್ತೆಯನ್ನು ಕೇಳು.

05017008a ಶ್ರಮಾರ್ತಾಸ್ತು ವಹಂತಸ್ತಂ ನಹುಷಂ ಪಾಪಕಾರಿಣಂ|

05017008c ದೇವರ್ಷಯೋ ಮಹಾಭಾಗಾಸ್ತಥಾ ಬ್ರಹ್ಮರ್ಷಯೋಽಮಲಾಃ||

05017008e ಪಪ್ರಚ್ಚುಃ ಸಂಶಯಂ ದೇವ ನಹುಷಂ ಜಯತಾಂ ವರ||

05017009a ಯ ಇಮೇ ಬ್ರಹ್ಮಣಾ ಪ್ರೋಕ್ತಾ ಮಂತ್ರಾ ವೈ ಪ್ರೋಕ್ಷಣೇ ಗವಾಂ|

05017009c ಏತೇ ಪ್ರಮಾಣಂ ಭವತ ಉತಾಹೋ ನೇತಿ ವಾಸವ||

05017009e ನಹುಷೋ ನೇತಿ ತಾನಾಹ ತಮಸಾ ಮೂಢಚೇತನಃ||

ದೇವ! ವಿಜಯಿಗಳಲ್ಲಿ ಶ್ರೇಷ್ಠ! ಪಾಪಕಾರಿಣಿ ನಹುಷನನ್ನು ಹೊತ್ತು ಆಯಾಸಗೊಂಡ ಮಹಾಭಾಗ, ಅಮಲ ಬ್ರಹ್ಮರ್ಷಿ ದೇವರ್ಷಿಗಳು ನಹುಷನನ್ನು ಕೇಳಿದರು: “ಹಸುಗಳಿಗೆ ಪ್ರೋಕ್ಷಣೆ ಮಾಡುವಾಗ ಹೇಳುವ ಮಂತ್ರಗಳು ವೇದಗಳಲ್ಲಿ ಇವೆಯಷ್ಟೇ! ಅವುಗಳಿಗೆ ಪ್ರಮಾಣಗಳಿವೆಯೇ ಹೇಳು!” ವಾಸವ! ತಮಸ್ಸಿನಿಂದ ಮೂಢಚೇತನನಾಗಿದ್ದ ನಹುಷನು ಇಲ್ಲವೆಂದು ಹೇಳಿದನು.

05017010 ಋಷಯ ಊಚುಃ|

05017010a ಅಧರ್ಮೇ ಸಂಪ್ರವೃತ್ತಸ್ತ್ವಂ ಧರ್ಮಂ ನ ಪ್ರತಿಪದ್ಯಸೇ|

05017010c ಪ್ರಮಾಣಮೇತದಸ್ಮಾಕಂ ಪೂರ್ವಂ ಪ್ರೋಕ್ತಂ ಮಹರ್ಷಿಭಿಃ||

ಋಷಿಗಳು ಹೇಳಿದರು: “ನೀನು ಅಧರ್ಮದಲ್ಲಿ ನಡೆದುಕೊಳ್ಳುತ್ತಿದ್ದೀಯೆ. ಧರ್ಮದಲ್ಲಿ ನಡೆಯುತ್ತಿಲ್ಲ. ಹಿಂದೆ ಮಹರ್ಷಿಗಳು ಇವಕ್ಕೆ ಪ್ರಮಾಣಗಳಿವೆಯೆಂದು ಹೇಳಿದ್ದಾರೆ.””

05017011 ಅಗಸ್ತ್ಯ ಉವಾಚ|

05017011a ತತೋ ವಿವದಮಾನಃ ಸ ಮುನಿಭಿಃ ಸಹ ವಾಸವ|

05017011c ಅಥ ಮಾಮಸ್ಪೃಶನ್ಮೂರ್ಧ್ನಿ ಪಾದೇನಾಧರ್ಮಪೀಡಿತಃ||

ಅಗಸ್ತ್ಯನು ಹೇಳಿದನು: “ವಾಸವ! ಹೀಗೆ ಮುನಿಗಳೊಂದಿಗೆ ವಾದಿಸುತ್ತಿರಲು ಅಧರ್ಮಪೀಡಿತನಾದ ಅವನು ಪಾದದಿಂದ ನನ್ನ ನೆತ್ತಿಯನ್ನು ಮುಟ್ಟಿದನು.

05017012a ತೇನಾಭೂದ್ಧತತೇಜಾಃ ಸ ನಿಃಶ್ರೀಕಶ್ಚ ಶಚೀಪತೇ|

05017012c ತತಸ್ತಮಹಮಾವಿಗ್ನಮವೋಚಂ ಭಯಪೀಡಿತಂ||

05017013a ಯಸ್ಮಾತ್ಪೂರ್ವೈಃ ಕೃತಂ ಬ್ರಹ್ಮ ಬ್ರಹ್ಮರ್ಷಿಭಿರನುಷ್ಠಿತಂ|

05017013c ಅದುಷ್ಟಂ ದೂಷಯಸಿ ವೈ ಯಚ್ಚ ಮೂರ್ಧ್ನ್ಯಸ್ಪೃಶಃ ಪದಾ||

05017014a ಯಚ್ಚಾಪಿ ತ್ವಮೃಷೀನ್ಮೂಢ ಬ್ರಹ್ಮಕಲ್ಪಾನ್ದುರಾಸದಾನ್|

05017014c ವಾಹಾನ್ಕೃತ್ವಾ ವಾಹಯಸಿ ತೇನ ಸ್ವರ್ಗಾದ್ಧತಪ್ರಭಃ||

ಶಚೀಪತೇ! ಆಗ ಅವನು ತೇಜಸ್ಸನ್ನು ಕಳೆದುಕೊಂಡು ಭಯಭೀತನಾದನು. ಆ ಭಯಪೀಡಿತ ಅವಿಗ್ನನಿಗೆ ನಾನು ಹೇಳಿದೆನು: “ಪೂರ್ವದಲ್ಲಿ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಬ್ರಹ್ಮರ್ಷಿಗಳು ಅನುಷ್ಠಾನ ಮಾಡುತ್ತಿರುವುದನ್ನು ಅದುಷ್ಟವೆಂದು ದೂಷಿಸುತ್ತಿದ್ದೀಯೆ ಮತ್ತು ಪಾದದಿಂದ ನನ್ನನ್ನು ಸ್ಪರ್ಷಿಸಿದ್ದೀಯೆ. ಮೂಢ! ಬ್ರಹ್ಮನ ಸಮಾನರಾದ ದುರಾಸದರಾದ ಈ ಋಷಿಗಳನ್ನು ವಾಹನಗಳನ್ನಾಗಿಸಿ ಪ್ರಯಾಣಿಸುತ್ತಿದ್ದೀಯಲ್ಲ! ನೀನು ಸ್ವರ್ಗದಿಂದ ಪ್ರಭೆಯನ್ನು ಕಳೆದುಕೊಂಡು ಬೀಳು.

Image result for indra and brihaspati05017015a ಧ್ವಂಸ ಪಾಪ ಪರಿಭ್ರಷ್ಟಃ ಕ್ಷೀಣಪುಣ್ಯೋ ಮಹೀತಲಂ|

05017015c ದಶ ವರ್ಷಸಹಸ್ರಾಣಿ ಸರ್ಪರೂಪಧರೋ ಮಹಾನ್|

05017015e ವಿಚರಿಷ್ಯಸಿ ಪೂರ್ಣೇಷು ಪುನಃ ಸ್ವರ್ಗಮವಾಪ್ಸ್ಯಸಿ||

ಪುಣ್ಯವನ್ನು ಕಳೆದುಕೊಂಡು ಮಹೀತಲದಲ್ಲಿ ಪರಿಭ್ರಷ್ಟನಾಗಿ ಹತ್ತು ಸಾವಿರ ವರ್ಷಗಳು ಮಹಾ ಸರ್ಪದ ರೂಪವನ್ನು ಧರಿಸಿ ಸಂಚರಿಸುತ್ತೀಯೆ. ಪಾಪವು ಸಂಪೂರ್ಣವಾಗಿ ಧ್ವಂಸವಾದ ನಂತರ ಪುನಃ ಸ್ವರ್ಗವನ್ನು ಪಡೆಯುತ್ತೀಯೆ.

05017016a ಏವಂ ಭ್ರಷ್ಟೋ ದುರಾತ್ಮಾ ಸ ದೇವರಾಜ್ಯಾದರಿಂದಮ|

05017016c ದಿಷ್ಟ್ಯಾ ವರ್ಧಾಮಹೇ ಶಕ್ರ ಹತೋ ಬ್ರಾಹ್ಮಣಕಂಟಕಃ||

ಅರಿಂದಮ! ಈ ರೀತಿ ಆ ದುರಾತ್ಮನು ದೇವರಾಜ್ಯದಿಂದ ಭ್ರಷ್ಟನಾದನು. ಶಕ್ರ! ಆ ಬ್ರಾಹ್ಮಣಕಂಟಕನು ಹತನಾದುದು ಮತ್ತು ನೀನು ವೃದ್ಧಿಹೊಂದಿದುದು ಒಳ್ಳೆಯದೇ ಆಯಿತು.

05017017a ತ್ರಿವಿಷ್ಟಪಂ ಪ್ರಪದ್ಯಸ್ವ ಪಾಹಿ ಲೋಕಾಂ ಶಚೀಪತೇ|

05017017c ಜಿತೇಂದ್ರಿಯೋ ಜಿತಾಮಿತ್ರಃ ಸ್ತೂಯಮಾನೋ ಮಹರ್ಷಿಭಿಃ||

ಶಚೀಪತೇ! ತ್ರಿವಿಷ್ಟಪವನ್ನು ಸೇರಿ ಲೋಕಗಳನ್ನು ಪಾಲಿಸು. ಜಿತೇಂದ್ರಿಯರೂ ಶತ್ರುಗಳನ್ನು ಗೆದ್ದವರೂ ಆದ ಮಹರ್ಷಿಗಳಿಂದ ಸ್ತುತಿಸಿಕೊಳ್ಳು.””

05017018 ಶಲ್ಯ ಉವಾಚ|

05017018a ತತೋ ದೇವಾ ಭೃಶಂ ತುಷ್ಟಾ ಮಹರ್ಷಿಗಣಸಂವೃತಾಃ|

05017018c ಪಿತರಶ್ಚೈವ ಯಕ್ಷಾಶ್ಚ ಭುಜಗಾ ರಾಕ್ಷಸಾಸ್ತಥಾ||

05017019a ಗಂಧರ್ವಾ ದೇವಕನ್ಯಾಶ್ಚ ಸರ್ವೇ ಚಾಪ್ಸರಸಾಂ ಗಣಾಃ|

ಶಲ್ಯನು ಹೇಳಿದನು: “ಆಗ ದೇವತೆಗಳು ತುಂಬಾ ಸಂತೋಷಗೊಂಡು ಮಹರ್ಷಿಗಣಗಳಿಂದ, ಪಿತೃಗಳು, ಯಕ್ಷರು, ಭುಜಗರು, ರಾಕ್ಷಸರು, ಗಂಧರ್ವರು, ದೇವಕನ್ಯೆಯರು ಮತ್ತು ಅಪ್ಸರ ಗಣಗಳಿಂದ ಸುತ್ತುವರೆಯಲ್ಪಟ್ಟರು.

05017019c ಸರಾಂಸಿ ಸರಿತಃ ಶೈಲಾಃ ಸಾಗರಾಶ್ಚ ವಿಶಾಂ ಪತೇ||

05017020a ಉಪಗಮ್ಯಾಬ್ರುವನ್ಸರ್ವೇ ದಿಷ್ಟ್ಯಾ ವರ್ಧಸಿ ಶತ್ರುಹನ್|

ವಿಶಾಂಪತೇ! ಸರೋವರಗಳು, ನದಿಗಳು, ಪರ್ವತಗಳು, ಸಾಗರಗಳು ಎಲ್ಲರೂ ಹತ್ತಿರಬಂದು ಹೇಳಿದರು: “ಶತ್ರುಹನ್! ನೀನು ವರ್ಧಿಸುತ್ತಿರುವುದು ಒಳ್ಳೆಯದಾಯಿತು!

05017020c ಹತಶ್ಚ ನಹುಷಃ ಪಾಪೋ ದಿಷ್ಟ್ಯಾಗಸ್ತ್ಯೇನ ಧೀಮತಾ|

05017020e ದಿಷ್ಟ್ಯಾ ಪಾಪಸಮಾಚಾರಃ ಕೃತಃ ಸರ್ಪೋ ಮಹೀತಲೇ||

ಧೀಮಂತ ಅಗಸ್ತ್ಯನಿಂದ ಆ ಪಾಪಿ ನಹುಷನು ಹತನಾದುದೂ ಒಳ್ಳೆಯದೇ ಆಯಿತು. ಒಳ್ಳೆಯದಾಯಿತು ಆ ಪಾಪಿಯನ್ನು ಮಹೀತಲದಲ್ಲಿ ಸರ್ಪವಾಗಿ ಸಂಚರಿಸುವಂತೆ ಮಾಡಲಾಯಿತು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಇಂದ್ರಾಗಸ್ತ್ಯಸಂವಾದೇ ಸಪ್ತದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಇಂದ್ರಾಗಸ್ತ್ಯಸಂವಾದದಲ್ಲಿ ಹದಿನೇಳನೆಯ ಅಧ್ಯಾಯವು|

Related image

Comments are closed.