Udyoga Parva: Chapter 169

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೯

ಪಾಂಡವರ ಸೇನೆಯಲ್ಲಿರುವ ಕುಂತಿಭೋಜ, ಘಟೋತ್ಕಚ ಮತ್ತು ಇತರರ ಪರಾಕ್ರಮವನ್ನು ವರ್ಣಿಸಿ ಭೀಷ್ಮನು ಶಿಖಂಡಿಯನ್ನು ನೋಡಿ ಅವನನ್ನು ಕೊಲ್ಲುವುದಿಲ್ಲ ಎನ್ನುವುದು (೧-೨೧).

05169001 ಭೀಷ್ಮ ಉವಾಚ|

05169001a ರೋಚಮಾನೋ ಮಹಾರಾಜ ಪಾಂಡವಾನಾಂ ಮಹಾರಥಃ|

05169001c ಯೋತ್ಸ್ಯತೇಽಮರವತ್ಸಂಖ್ಯೇ ಪರಸೈನ್ಯೇಷು ಭಾರತ||

ಭೀಷ್ಮನು ಹೇಳಿದನು: “ಭಾರತ! ಮಹಾರಾಜ! ಪಾಂಡವರ ಮಹಾರಥಿ ರೋಚಮಾನನು ರಣದಲ್ಲಿ ಶತ್ರುಸೇನೆಯೊಂದಿಗೆ ಅಮರನಂತೆ ಹೋರಾಡುತ್ತಾನೆ.

05169002a ಪುರುಜಿತ್ಕುಂತಿಭೋಜಶ್ಚ ಮಹೇಷ್ವಾಸೋ ಮಹಾಬಲಃ|

05169002c ಮಾತುಲೋ ಭೀಮಸೇನಸ್ಯ ಸ ಚ ಮೇಽತಿರಥೋ ಮತಃ||

ಮಹೇಷ್ವಾಸ, ಮಹಾಬಲಿ, ಭೀಮಸೇನನ ಸೋದರಮಾವ, ಪುರುಜಿತ್ ಕುಂತಿಭೋಜನು ಅತಿರಥನೆಂದು ನನ್ನ ಅಭಿಪ್ರಾಯ.

05169003a ಏಷ ವೀರೋ ಮಹೇಷ್ವಾಸಃ ಕೃತೀ ಚ ನಿಪುಣಶ್ಚ ಹ|

05169003c ಚಿತ್ರಯೋಧೀ ಚ ಶಕ್ತಶ್ಚ ಮತೋ ಮೇ ರಥಪುಂಗವಃ||

ಈ ಮಹೇಷ್ವಾಸನು ವೀರ, ಅನುಭವಿ ಮತ್ತು ನಿಪುಣ, ಚಿತ್ರಯೋಧಿ, ಶಕ್ತ ಮತ್ತು ರಥಪುಂಗವನೆಂದು ನನ್ನ ಅಭಿಪ್ರಾಯ.

05169004a ಸ ಯೋತ್ಸ್ಯತಿ ಹಿ ವಿಕ್ರಮ್ಯ ಮಘವಾನಿವ ದಾನವೈಃ|

05169004c ಯೋಧಾಶ್ಚಾಸ್ಯ ಪರಿಖ್ಯಾತಾಃ ಸರ್ವೇ ಯುದ್ಧವಿಶಾರದಾಃ||

ಮಘವತನು ದಾನವರೊಂದಿಗೆ ಹೇಗೋ ಹಾಗೆ ಅವನು ವಿಕ್ರಮದಿಂದ ಯುದ್ಧಮಾಡುತ್ತಾನೆ. ಅವನ ಯೋಧರೆಲ್ಲರೂ ವಿಖ್ಯಾತರು ಮತ್ತು ಯುದ್ಧ ವಿಶಾರದರು.

05169005a ಭಾಗಿನೇಯಕೃತೇ ವೀರಃ ಸ ಕರಿಷ್ಯತಿ ಸಂಗರೇ|

05169005c ಸುಮಹತ್ಕರ್ಮ ಪಾಂಡೂನಾಂ ಸ್ಥಿತಃ ಪ್ರಿಯಹಿತೇ ನೃಪಃ||

ತನ್ನ ತಂಗಿಗೆ ಒಳಿತನ್ನು ಮಾಡಲು, ಪಾಂಡವರ ಪ್ರಿಯಹಿತನಿರತನಾಗಿರುವ ಆ ವೀರ ನೃಪನು ಸಂಗರದಲ್ಲಿ ಮಹಾಕಾರ್ಯಗಳನ್ನೆಸಗುತ್ತಾನೆ.

05169006a ಭೈಮಸೇನಿರ್ಮಹಾರಾಜ ಹೈಡಿಂಬೋ ರಾಕ್ಷಸೇಶ್ವರಃ|

05169006c ಮತೋ ಮೇ ಬಹುಮಾಯಾವೀ ರಥಯೂಥಪಯೂಥಪಃ||

ಮಹಾರಾಜ! ಭೀಮಸೇನನ ಮಗ ಹೈಡಿಂಬಿ ರಾಕ್ಷಸೇಶ್ವರನು ಬಹುಮಾಯಾವಿಯೂ ಕೂಡ. ಅವನು ರಥಯೂಥಪಯೂಥಪ.

05169007a ಯೋತ್ಸ್ಯತೇ ಸಮರೇ ತಾತ ಮಾಯಾಭಿಃ ಸಮರಪ್ರಿಯಃ|

05169007c ಯೇ ಚಾಸ್ಯ ರಾಕ್ಷಸಾಃ ಶೂರಾಃ ಸಚಿವಾ ವಶವರ್ತಿನಃ||

ಮಗೂ! ಆ ಸಮರಪ್ರಿಯನು ಸಮರದಲ್ಲಿ ಮಾಯೆಯಿಂದ ಯುದ್ಧಮಾಡುತ್ತಾನೆ. ಅವನ ವಶವರ್ತಿ ಸಚಿವ ರಾಕ್ಷಸರೂ ಕೂಡ ಶೂರರು.

05169008a ಏತೇ ಚಾನ್ಯೇ ಚ ಬಹವೋ ನಾನಾಜನಪದೇಶ್ವರಾಃ|

05169008c ಸಮೇತಾಃ ಪಾಂಡವಸ್ಯಾರ್ಥೇ ವಾಸುದೇವಪುರೋಗಮಾಃ||

ಇವರು ಮತ್ತು ಇತರ ನಾನಾ ಜನಪದೇಶ್ವರರು ಬಹುಸಂಖ್ಯೆಗಳಲ್ಲಿ ವಾಸುದೇವನ ನಾಯಕತ್ವದಲ್ಲಿ ಪಾಂಡವರಿಗಾಗಿ ಸೇರಿದ್ದಾರೆ.

05169009a ಏತೇ ಪ್ರಾಧಾನ್ಯತೋ ರಾಜನ್ಪಾಂಡವಸ್ಯ ಮಹಾತ್ಮನಃ|

05169009c ರಥಾಶ್ಚಾತಿರಥಾಶ್ಚೈವ ಯೇ ಚಾಪ್ಯರ್ಧರಥಾ ಮತಾಃ||

ರಾಜನ್! ಇವರು ಮಹಾತ್ಮ ಪಾಂಡವರ ಪ್ರಧಾನ ರಥಿಗಳು, ಅತಿರಥಿಗಳು, ಅರ್ಧರಥಿಗಳು ಎಂದು ಎನಿಸಿಕೊಂಡವರು.

05169010a ನೇಷ್ಯಂತಿ ಸಮರೇ ಸೇನಾಂ ಭೀಮಾಂ ಯೌಧಿಷ್ಠಿರೀಂ ನೃಪ|

05169010c ಮಹೇಂದ್ರೇಣೇವ ವೀರೇಣ ಪಾಲ್ಯಮಾನಾಂ ಕಿರೀಟಿನಾ||

ನೃಪ! ಇವರು ಮಹೇಂದ್ರನಂತಿರುವ ವೀರ ಕಿರೀಟಿಯಿಂದ ಪಾಲಿಸಲ್ಪಟ್ಟ ಯುಧಿಷ್ಠಿರನ ಭಯಂಕರ ಸೇನೆಯನ್ನು ನಡೆಸುವರು.

05169011a ತೈರಹಂ ಸಮರೇ ವೀರ ತ್ವಾಮಾಯದ್ಭಿರ್ಜಯೈಷಿಭಿಃ|

05169011c ಯೋತ್ಸ್ಯಾಮಿ ಜಯಮಾಕಾಂಕ್ಷನ್ನಥ ವಾ ನಿಧನಂ ರಣೇ||

ವೀರ! ನಿನ್ನ ವಿರುದ್ಧ ಜಯವನ್ನು ಬಯಸಿ ಸಮರಕ್ಕೆ ಬಂದಿರುವ ಇವರೊಂದಿಗೆ ನಾನು ನಿನಗಾಗಿ ರಣದಲ್ಲಿ ಜಯವನ್ನು ಅಥವಾ ಮರಣವನ್ನು ಬಯಸಿ ಹೋರಾಡುತ್ತೇನೆ.

05169012a ಪಾರ್ಥಂ ಚ ವಾಸುದೇವಂ ಚ ಚಕ್ರಗಾಂಡೀವಧಾರಿಣೌ|

05169012c ಸಂಧ್ಯಾಗತಾವಿವಾರ್ಕೇಂದೂ ಸಮೇಷ್ಯೇ ಪುರುಷೋತ್ತಮೌ||

ಚಕ್ರ-ಗಾಂಡೀವಧಾರಿಗಳಾದ ಪುರುಷೋತ್ತಮರಾದ ಪಾರ್ಥ-ವಾಸುದೇವರನ್ನು ಸಂಧ್ಯಾಸಮಯದಲ್ಲಿ ಸೂರ್ಯ-ಚಂದ್ರರನ್ನು ಎದುರಾಗುವಂತೆ ಎದುರಿಸುತ್ತೇನೆ.

05169013a ಯೇ ಚೈವ ತೇ ರಥೋದಾರಾಃ ಪಾಂಡುಪುತ್ರಸ್ಯ ಸೈನಿಕಾಃ|

05169013c ಸಹಸೈನ್ಯಾನಹಂ ತಾಂಶ್ಚ ಪ್ರತೀಯಾಂ ರಣಮೂರ್ಧನಿ||

ಸೇನೆಯೊಂದಿಗೆ ನಿನ್ನ ರಣದ ಮೂರ್ಧನಿಯಲ್ಲಿದ್ದುಕೊಂಡು ರಥೋದಾರ ಪಾಂಡುಪುತ್ರರ ಸೈನಿಕರನ್ನು ಎದುರಿಸುತ್ತೇನೆ.

05169014a ಏತೇ ರಥಾಶ್ಚಾತಿರಥಾಶ್ಚ ತುಭ್ಯಂ

         ಯಥಾಪ್ರಧಾನಂ ನೃಪ ಕೀರ್ತಿತಾ ಮಯಾ|

05169014c ತಥಾ ರಾಜನ್ನರ್ಧರಥಾಶ್ಚ ಕೇ ಚಿತ್

         ತಥೈವ ತೇಷಾಮಪಿ ಕೌರವೇಂದ್ರ||

ಕೌರವೇಂದ್ರ! ನೃಪ! ಪ್ರಧಾನರಾದ ಈ ರಥ-ಅತಿರಥರ ಕುರಿತು ನಾನು ನಿನಗೆ ಹೇಳಿದ್ದೇನೆ. ರಾಜನ್! ಅರ್ಧರಥರೆನಿಸಿಕೊಂಡಿರುವ ಕೆಲವರ ಕುರಿತೂ ಕೂಡ ನಿನಗೆ ಹೇಳಿದ್ದೇನೆ.

05169015a ಅರ್ಜುನಂ ವಾಸುದೇವಂ ಚ ಯೇ ಚಾನ್ಯೇ ತತ್ರ ಪಾರ್ಥಿವಾಃ|

05169015c ಸರ್ವಾನಾವಾರಯಿಷ್ಯಾಮಿ ಯಾವದ್ದ್ರಕ್ಷ್ಯಾಮಿ ಭಾರತ||

ಭಾರತ! ಅರ್ಜುನ, ವಾಸುದೇವ ಮತ್ತು ಅಲ್ಲಿರುವ ಅನ್ಯ ಪಾರ್ಥಿವರೆಲ್ಲರನ್ನೂ ತಡೆದು ನಿನ್ನ ಸೇನೆಯನ್ನು ರಕ್ಷಿಸುತ್ತೇನೆ.

05169016a ಪಾಂಚಾಲ್ಯಂ ತು ಮಹಾಬಾಹೋ ನಾಹಂ ಹನ್ಯಾಂ ಶಿಖಂಡಿನಂ|

05169016c ಉದ್ಯತೇಷುಮಭಿಪ್ರೇಕ್ಷ್ಯ ಪ್ರತಿಯುಧ್ಯಂತಮಾಹವೇ||

ಮಹಾಬಾಹೋ! ಆದರೆ ಬಾಣಗಳನ್ನು ಹಿಡಿದು ನನ್ನನ್ನು ಎದುರಿಸಿ ಬರುವ ಪಾಂಚಾಲ್ಯ ಶಿಖಂಡಿಯನ್ನು ನೋಡಿ ನಾನು ಅವನನ್ನು ಕೊಲ್ಲುವುದಿಲ್ಲ.

05169017a ಲೋಕಸ್ತದ್ವೇದ ಯದಹಂ ಪಿತುಃ ಪ್ರಿಯಚಿಕೀರ್ಷಯಾ|

05169017c ಪ್ರಾಪ್ತಂ ರಾಜ್ಯಂ ಪರಿತ್ಯಜ್ಯ ಬ್ರಹ್ಮಚರ್ಯೇ ಧೃತವ್ರತಃ||

ತಂದೆಗೆ ಪ್ರಿಯವಾದುದನ್ನು ಮಾಡಲೋಸುಗ ಹೇಗೆ ನಾನು ರಾಜ್ಯಪ್ರಾಪ್ತಿಯನ್ನು ಪರಿತ್ಯಜಿಸಿ ಬ್ರಹ್ಮಚರ್ಯದಲ್ಲಿ ಧೃತವ್ರತನಾದೆ ಎಂದು ಲೋಕಕ್ಕೇ ತಿಳಿದಿದೆ.

05169018a ಚಿತ್ರಾಂಗದಂ ಕೌರವಾಣಾಮಹಂ ರಾಜ್ಯೇಽಭ್ಯಷೇಚಯಂ|

05169018c ವಿಚಿತ್ರವೀರ್ಯಂ ಚ ಶಿಶುಂ ಯೌವರಾಜ್ಯೇಽಭ್ಯಷೇಚಯಂ||

ಚಿತ್ರಾಂಗದನನ್ನು ಕೌರವರ ರಾಜ್ಯಕ್ಕೆ ಅಭಿಷೇಕಿಸಿ, ಬಾಲಕ ವಿಚಿತ್ರವೀರ್ಯನನ್ನು ಯುವರಾಜನಾಗಿ ಅಭಿಷೇಕಿಸಿದೆನು.

05169019a ದೇವವ್ರತತ್ವಂ ವಿಖ್ಯಾಪ್ಯ ಪೃಥಿವ್ಯಾಂ ಸರ್ವರಾಜಸು|

05169019c ನೈವ ಹನ್ಯಾಂ ಸ್ತ್ರಿಯಂ ಜಾತು ನ ಸ್ತ್ರೀಪೂರ್ವಂ ಕಥಂ ಚನ||

ಪೃಥ್ವಿಯಲ್ಲಿ ಎಲ್ಲ ರಾಜರುಗಳಲ್ಲಿ ನನ್ನ ದೇವವ್ರತತ್ವವನ್ನು ಪಸರಿಸಿ ನಾನು ಸ್ತ್ರೀಯನ್ನು ಅಥವಾ ಹಿಂದೆ ಸ್ತ್ರೀಯಾಗಿದ್ದನೆಂದು ತಿಳಿದಿರುವವನನ್ನು ಎಂದೂ ಕೊಲ್ಲುವುದಿಲ್ಲ.

05169020a ಸ ಹಿ ಸ್ತ್ರೀಪೂರ್ವಕೋ ರಾಜಂ ಶಿಖಂಡೀ ಯದಿ ತೇ ಶ್ರುತಃ|

05169020c ಕನ್ಯಾ ಭೂತ್ವಾ ಪುಮಾಂ ಜಾತೋ ನ ಯೋತ್ಸ್ಯೇ ತೇನ ಭಾರತ||

ಭಾರತ! ರಾಜನ್! ಶಿಖಂಡಿಯು ಮೊದಲು ಹೆಣ್ಣಾಗಿದ್ದ ಎಂದು ನೀನು ಕೇಳಿರಬಹುದು. ಹೆಣ್ಣಾಗಿ ಹುಟ್ಟಿ ನಂತರ ಗಂಡಾದ ಅವನೊಡನೆ ನಾನು ಯುದ್ಧಮಾಡುವುದಿಲ್ಲ.

05169021a ಸರ್ವಾಂಸ್ತ್ವನ್ಯಾನ್ ಹನಿಷ್ಯಾಮಿ ಪಾರ್ಥಿವಾನ್ಭರತರ್ಷಭ|

05169021c ಯಾನ್ಸಮೇಷ್ಯಾಮಿ ಸಮರೇ ನ ತು ಕುಂತೀಸುತಾನ್ನೃಪ||

ಭರತರ್ಷಭ! ನೃಪ! ಕುಂತೀಸುತರನ್ನು ಬಿಟ್ಟು ಸಮರದಲ್ಲಿ ಎದುರಾಗುವ ಅನ್ಯ ಎಲ್ಲ ಪಾರ್ಥಿವರನ್ನೂ ಸಂಹರಿಸುತ್ತೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಏಕೋನಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ನೂರಾಅರವತ್ತೊಂಭತ್ತನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೯/೧೦೦, ಅಧ್ಯಾಯಗಳು-೮೩೨/೧೯೯೫, ಶ್ಲೋಕಗಳು-೨೭೦೧೯/೭೩೭೮೪

Image result for indian motifs"

Comments are closed.