Udyoga Parva: Chapter 15

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೫

ಇಂದ್ರನ ಸೂಚನೆಯಂತೆ ಶಚಿಯು ನಹುಷನಿಗೆ ಋಷಿಯಾನದಲ್ಲಿ ಬಂದು ನನ್ನನ್ನು ಸೇರು ಎಂದು ಕೇಳಿಕೊಳ್ಳುವುದು, ಅದರಂತೆ ನಹುಷನು ಋಷಿಯಾನವನ್ನೇರುವುದು (೧-೨೧). ಇಂದ್ರನನ್ನು ಹುಡುಕಲು ಬೃಹಸ್ಪತಿಯು ಅಗ್ನಿಯನ್ನು ನಿಯೋಜಿಸಿದುದು (೨೨-೩೨).

05015001 ಶಲ್ಯ ಉವಾಚ|

05015001a ಏವಮುಕ್ತಃ ಸ ಭಗವಾನ್ ಶಚ್ಯಾ ಪುನರಥಾಬ್ರವೀತ್|

05015001c ವಿಕ್ರಮಸ್ಯ ನ ಕಾಲೋಽಯಂ ನಹುಷೋ ಬಲವತ್ತರಃ||

ಶಲ್ಯನು ಹೇಳಿದನು: “ಶಚಿಯು ಹೀಗೆ ಹೇಳಲು ಭಗವಾನನು ಪುನಃ ಹೇಳಿದನು: “ವಿಕ್ರಮದ ಕಾಲವಿದಲ್ಲ. ನಹುಷನು ನನಗಿಂತ ಬಲಶಾಲಿಯು.

05015002a ವಿವರ್ಧಿತಶ್ಚ ಋಷಿಭಿರ್ಹವ್ಯೈಃ ಕವ್ಯೈಶ್ಚ ಭಾಮಿನಿ|

05015002c ನೀತಿಮತ್ರ ವಿಧಾಸ್ಯಾಮಿ ದೇವಿ ತಾಂ ಕರ್ತುಮರ್ಹಸಿ||

ಭಾಮಿನೀ! ಋಷಿಗಳ ಹವ್ಯ-ಕವ್ಯಗಳಿಂದ ಅವನು ವರ್ಧಿಸಿದ್ದಾನೆ. ದೇವಿ! ನಾನೊಂದು ಉಪಾಯವನ್ನು ಹೇಳುತ್ತೇನೆ. ನೀನು ಅದನ್ನು ಮಾಡಬೇಕು.

05015003a ಗುಹ್ಯಂ ಚೈತತ್ತ್ವಯಾ ಕಾರ್ಯಂ ನಾಖ್ಯಾತವ್ಯಂ ಶುಭೇ ಕ್ವ ಚಿತ್|

05015003c ಗತ್ವಾ ನಹುಷಮೇಕಾಂತೇ ಬ್ರವೀಹಿ ತನುಮಧ್ಯಮೇ||

ಶುಭೇ! ಇದನ್ನು ನೀನು ಗುಪ್ತವಾಗಿ ನೆರವೇರಿಸಬೇಕು. ಇದನ್ನು ಯಾರಿಗೂ ಹೇಳಬಾರದು. ತನುಮಧ್ಯಮೇ! ಏಕಾಂತದಲ್ಲಿ ನಹುಷನಲ್ಲಿಗೆ ಹೋಗಿ ಹೇಳು.

05015004a ಋಷಿಯಾನೇನ ದಿವ್ಯೇನ ಮಾಮುಪೈಹಿ ಜಗತ್ಪತೇ|

05015004c ಏವಂ ತವ ವಶೇ ಪ್ರೀತಾ ಭವಿಷ್ಯಾಮೀತಿ ತಂ ವದ||

ಜಗತ್ಪತೇ! ದಿವ್ಯವಾದ ಋಷಿಯಾನದಲ್ಲಿ ನನ್ನ ಬಳಿ ಬಾ. ಈ ರೀತಿಯಲ್ಲಿ ನಾನು ನಿನ್ನನ್ನು ಪ್ರೀತಿಸಿ ವಶದಲ್ಲಿ ಬರುತ್ತೇನೆ ಎಂದು ಹೇಳು.”

05015005a ಇತ್ಯುಕ್ತಾ ದೇವರಾಜೇನ ಪತ್ನೀ ಸಾ ಕಮಲೇಕ್ಷಣಾ|

05015005c ಏವಮಸ್ತ್ವಿತ್ಯಥೋಕ್ತ್ವಾ ತು ಜಗಾಮ ನಹುಷಂ ಪ್ರತಿ||

ದೇವರಾಜನು ಹೀಗೆ ಹೇಳಲು ಅವನ ಪತ್ನಿ ಕಮಲೇಕ್ಷಣೆಯು “ಹೀಗೆಯೇ ಆಗುತ್ತದೆ” ಎಂದು ಹೇಳಿ ನಹುಷನ ಬಳಿ ಹೋದಳು.

05015006a ನಹುಷಸ್ತಾಂ ತತೋ ದೃಷ್ಟ್ವಾ ವಿಸ್ಮಿತೋ ವಾಕ್ಯಮಬ್ರವೀತ್|

05015006c ಸ್ವಾಗತಂ ತೇ ವರಾರೋಹೇ ಕಿಂ ಕರೋಮಿ ಶುಚಿಸ್ಮಿತೇ||

ಆಗ ನಹುಷನು ಅವಳನ್ನು ಕಂಡು ವಿಸ್ಮಿತನಾಗಿ ಹೇಳಿದನು: “ವರಾರೋಹೇ! ನಿನಗೆ ಸ್ವಾಗತ! ಶುಚಿಸ್ಮಿತೇ! ನಿನಗೆ ಏನು ಮಾಡಲಿ?

05015007a ಭಕ್ತಂ ಮಾಂ ಭಜ ಕಲ್ಯಾಣಿ ಕಿಮಿಚ್ಚಸಿ ಮನಸ್ವಿನಿ|

05015007c ತವ ಕಲ್ಯಾಣಿ ಯತ್ಕಾರ್ಯಂ ತತ್ಕರಿಷ್ಯೇ ಸುಮಧ್ಯಮೇ||

ಕಲ್ಯಾಣೀ! ಭಕ್ತನಾದ ನನ್ನನ್ನು ಭಜಿಸು. ಮನಸ್ವಿನಿ! ಏನನ್ನು ಬಯಸುತ್ತೀಯೆ. ಕಲ್ಯಾಣೀ! ಸುಮಧ್ಯಮೇ! ಮಾಡುವುದೇನೇ ಇದ್ದರೂ ಅದನ್ನು ಮಾಡುತ್ತೇನೆ.

05015008a ನ ಚ ವ್ರೀಡಾ ತ್ವಯಾ ಕಾರ್ಯಾ ಸುಶ್ರೋಣಿ ಮಯಿ ವಿಶ್ವಸ|

05015008c ಸತ್ಯೇನ ವೈ ಶಪೇ ದೇವಿ ಕರ್ತಾಸ್ಮಿ ವಚನಂ ತವ||

ಸುಶ್ರೋಣೀ! ನಾಚದಿರು! ನನ್ನ ಮೇಲೆ ವಿಶ್ವಾಸವಿಡು ದೇವೀ! ಸತ್ಯದಲ್ಲಿ ಶಪಥ ಮಾಡಿ ಮಾಡುತ್ತೇನೆ ಎಂದು ವಚನವನ್ನು ನೀಡುತ್ತೇನೆ.”

05015009 ಇಂದ್ರಾಣ್ಯುವಾಚ|

05015009a ಯೋ ಮೇ ತ್ವಯಾ ಕೃತಃ ಕಾಲಸ್ತಮಾಕಾಂಕ್ಷೇ ಜಗತ್ಪತೇ|

05015009c ತತಸ್ತ್ವಮೇವ ಭರ್ತಾ ಮೇ ಭವಿಷ್ಯಸಿ ಸುರಾಧಿಪ||

ಇಂದ್ರಾಣಿಯು ಹೇಳಿದಳು: “ಜಗತ್ಪತೇ! ಬಯಸಿದಂತೆ ನನಗೆ ಸಮಯವನ್ನು ಮಾಡಿಕೊಟ್ಟಿದ್ದೀಯೆ. ಸುರಾಧಿಪ! ಇದರ ನಂತರ ನೀನೇ ನನ್ನ ಪತಿಯಾಗುತ್ತೀಯೆ.

05015010a ಕಾರ್ಯಂ ಚ ಹೃದಿ ಮೇ ಯತ್ತದ್ದೇವರಾಜಾವಧಾರಯ|

05015010c ವಕ್ಷ್ಯಾಮಿ ಯದಿ ಮೇ ರಾಜನ್ಪ್ರಿಯಮೇತತ್ಕರಿಷ್ಯಸಿ|

ದೇವರಾಜ! ನನ್ನ ಹೃದಯದಲ್ಲಿ ಒಂದು ಬಯಕೆಯಿದೆ. ರಾಜನ್! ಚಿತ್ತವಿಟ್ಟು ಕೇಳು. ನನ್ನ ಪ್ರೀತಿಯ ಅದನ್ನು ಮಾಡುವೆಯಾದರೆ ಹೇಳುತ್ತೇನೆ.

05015010e ವಾಕ್ಯಂ ಪ್ರಣಯಸಂಯುಕ್ತಂ ತತಃ ಸ್ಯಾಂ ವಶಗಾ ತವ||

05015011a ಇಂದ್ರಸ್ಯ ವಾಜಿನೋ ವಾಹಾ ಹಸ್ತಿನೋಽಥ ರಥಾಸ್ತಥಾ|

05015011c ಇಚ್ಚಾಮ್ಯಹಮಿಹಾಪೂರ್ವಂ ವಾಹನಂ ತೇ ಸುರಾಧಿಪ||

05015011e ಯನ್ನ ವಿಷ್ಣೋರ್ನ ರುದ್ರಸ್ಯ ನಾಸುರಾಣಾಂ ನ ರಕ್ಷಸಾಂ||

ಈ ಮಾತನ್ನು ನಡೆಸಿಕೊಟ್ಟರೆ ನಾನು ನಿನ್ನ ವಶದಲ್ಲಿ ಬರುತ್ತೇನೆ. ಇಂದ್ರನು ವಾಹನವಾಗಿ ಕುದುರೆಗಳನ್ನು, ಆನೆಗಳನ್ನು ಮತ್ತು ರಥಗಳನ್ನು ಹೊಂದಿದ್ದನು. ಸುರಾಧಿಪ! ಈ ಮೊದಲು ವಿಷ್ಣುವಿನಲ್ಲಿಯಾಗಲೀ, ರುದ್ರನಲ್ಲಿಯಾಗಲೀ, ಅಸುರರಲ್ಲಿಯಾಗಲೀ ರಾಕ್ಷಸರಲ್ಲಿಯಾಗಲೀ ಇಲ್ಲದೇ ಇರುವ ವಾಹನವು ನಿನ್ನದಾಗಬೇಕೆಂದು ನನಗೆ ಬಯಕೆಯಿದೆ.

05015012a ವಹಂತು ತ್ವಾಂ ಮಹಾರಾಜ ಋಷಯಃ ಸಂಗತಾ ವಿಭೋ|

05015012c ಸರ್ವೇ ಶಿಬಿಕಯಾ ರಾಜನ್ನೇತದ್ಧಿ ಮಮ ರೋಚತೇ||

ಮಹಾರಾಜ! ವಿಭೋ! ಋಷಿಗಳು ಒಟ್ಟಾಗಿ ಎಲ್ಲರೂ ನಿನ್ನನ್ನು ಪಲ್ಲಕ್ಕಿಯಲ್ಲಿ ಹೊರಬೇಕು. ರಾಜನ್! ಇದು ನನಗೆ ಇಷ್ಟವಾಗುತ್ತದೆ.

05015013a ನಾಸುರೇಷು ನ ದೇವೇಷು ತುಲ್ಯೋ ಭವಿತುಮರ್ಹಸಿ|

05015013c ಸರ್ವೇಷಾಂ ತೇಜ ಆದತ್ಸ್ವ ಸ್ವೇನ ವೀರ್ಯೇಣ ದರ್ಶನಾತ್|

05015013e ನ ತೇ ಪ್ರಮುಖತಃ ಸ್ಥಾತುಂ ಕಶ್ಚಿದಿಚ್ಚತಿ ವೀರ್ಯವಾನ್||

ಅಸುರರಲ್ಲಿ ಮತ್ತು ದೇವತೆಗಳಲ್ಲಿ ನಿನ್ನ ಸರಿಸಮನಾದವರು ಯಾರೂ ಇರಬಾರದು. ನಿನ್ನನ್ನು ನೋಡಿದವರೆಲ್ಲರ ತೇಜಸ್ಸನ್ನು ನಿನ್ನದೇ ವೀರ್ಯದಿಂದ ಆಕರ್ಶಿಸಿಕೊಳ್ಳುತ್ತೀಯೆ.  ನಿನ್ನನ್ನು ಎದುರಿಸಿ ನಿಲ್ಲುವವನು ಯಾರೂ ಇಲ್ಲ.””

05015014 ಶಲ್ಯ ಉವಾಚ|

05015014a ಏವಮುಕ್ತಸ್ತು ನಹುಷಃ ಪ್ರಾಹೃಷ್ಯತ ತದಾ ಕಿಲ|

05015014c ಉವಾಚ ವಚನಂ ಚಾಪಿ ಸುರೇಂದ್ರಸ್ತಾಮನಿಂದಿತಾಂ||

ಶಲ್ಯನು ಹೇಳಿದನು: “ಹೀಗೆ ಹೇಳಲು ನಹುಷನು ತುಂಬಾ ಹರ್ಷಿತನಾದನು. ಆಗ ಸುರೇಂದ್ರನು ಆ ಅನಿಂದಿತೆಗೆ ಹೇಳಿದನು:

05015015a ಅಪೂರ್ವಂ ವಾಹನಮಿದಂ ತ್ವಯೋಕ್ತಂ ವರವರ್ಣಿನಿ|

05015015c ದೃಢಂ ಮೇ ರುಚಿತಂ ದೇವಿ ತ್ವದ್ವಶೋಽಸ್ಮಿ ವರಾನನೇ||

“ವರವರ್ಣಿನೀ! ನೀನು ಹೇಳಿದ ಈ ವಾಹನವು ಅಪೂರ್ವವಾದುದು. ವರಾನನೇ! ನಾನು ನಿನ್ನ ವಶದಲ್ಲಿದ್ದೇನೆ ಎಂದು ತುಂಬಾ ಸಂತೋಷವಾಗುತ್ತಿದೆ.

05015016a ನ ಹ್ಯಲ್ಪವೀರ್ಯೋ ಭವತಿ ಯೋ ವಾಹಾನ್ಕುರುತೇ ಮುನೀನ್|

05015016c ಅಹಂ ತಪಸ್ವೀ ಬಲವಾನ್ಭೂತಭವ್ಯಭವತ್ಪ್ರಭುಃ||

ಮುನಿಗಳನ್ನು ವಾಹನವಾಗಿ ಮಾಡಿಕೊಳ್ಳವನು ಅಲ್ಪವೀರ್ಯನಾಗಿರುವುದಿಲ್ಲ. ನಾನು ತಪಸ್ವಿ, ಬಲವಂತ ಮತ್ತು ಆಗಿದುದರ, ಆಗುತ್ತಿರುವುದರ ಮತ್ತು ಆಗುವುದರ ಪ್ರಭು.

05015017a ಮಯಿ ಕ್ರುದ್ಧೇ ಜಗನ್ನ ಸ್ಯಾನ್ಮಯಿ ಸರ್ವಂ ಪ್ರತಿಷ್ಠಿತಂ|

05015017c ದೇವದಾನವಗಂಧರ್ವಾಃ ಕಿನ್ನರೋರಗರಾಕ್ಷಸಾಃ||

05015018a ನ ಮೇ ಕ್ರುದ್ಧಸ್ಯ ಪರ್ಯಾಪ್ತಾಃ ಸರ್ವೇ ಲೋಕಾಃ ಶುಚಿಸ್ಮಿತೇ|

05015018c ಚಕ್ಷುಷಾ ಯಂ ಪ್ರಪಶ್ಯಾಮಿ ತಸ್ಯ ತೇಜೋ ಹರಾಮ್ಯಹಂ||

ನಾನು ಸಿಟ್ಟಾದರೆ ಜಗತ್ತು ಇರುವುದಿಲ್ಲ. ಎಲ್ಲವೂ ನನ್ನನ್ನು ಆಧರಿಸಿವೆ. ಶುಚಿಸ್ಮಿತೇ!  ದೇವ, ದಾನವ, ಗಂಧರ್ವ, ಕಿನ್ನರ, ಉರಗ ರಾಕ್ಷಸರು - ಸರ್ವ ಲೋಕಗಳೂ ಕ್ರುದ್ಧನಾದ ನನ್ನನ್ನು ಎದುರಿಸಲಾರರು. ಯಾರ ಮೇಲೆ ನನ್ನ ಕಣ್ಣನ್ನು ಹಾಯಿಸುತ್ತೇನೋ ಅವರ ತೇಜಸ್ಸನ್ನು ಅಪಹರಿಸುತ್ತೇನೆ.

05015019a ತಸ್ಮಾತ್ತೇ ವಚನಂ ದೇವಿ ಕರಿಷ್ಯಾಮಿ ನ ಸಂಶಯಃ|

05015019c ಸಪ್ತರ್ಷಯೋ ಮಾಂ ವಕ್ಷ್ಯಂತಿ ಸರ್ವೇ ಬ್ರಹ್ಮರ್ಷಯಸ್ತಥಾ|

05015019e ಪಶ್ಯ ಮಾಹಾತ್ಮ್ಯಮಸ್ಮಾಕಮೃದ್ಧಿಂ ಚ ವರವರ್ಣಿನಿ||

ಆದುದರಿಂದ ದೇವೀ! ನಿನ್ನ ಮಾತಿನಂತೆ ಮಾಡುತ್ತೇನೆ. ಸಂಶಯವಿಲ್ಲ. ಬ್ರಹ್ಮರ್ಷಿಗಳಾದ ಸಪ್ತ ಋಷಿಗಳು ನನ್ನನ್ನು ಹೊರುತ್ತಾರೆ. ವರವರ್ಣಿನೀ! ನಮ್ಮ ಮಹಾತ್ಮೆ ಮತ್ತು ಅಭಿವೃದ್ಧಿಯನ್ನು ನೋಡು.”

05015020a ಏವಮುಕ್ತ್ವಾ ತು ತಾಂ ದೇವೀಂ ವಿಸೃಜ್ಯ ಚ ವರಾನನಾಂ|

05015020c ವಿಮಾನೇ ಯೋಜಯಿತ್ವಾ ಸ ಋಷೀನ್ನಿಯಮಮಾಸ್ಥಿತಾನ್||

ಹೀಗೆ ಹೇಳಿ ಅವನು ಆ ವರಾನನೆ ದೇವಿಯನ್ನು ಕಳುಹಿಸಿ, ನಿಯಮದಲ್ಲಿರುವ ಋಷಿಗಳನ್ನು ವಿಮಾನಕ್ಕೆ ಹೂಡಿದನು.

05015021a ಅಬ್ರಹ್ಮಣ್ಯೋ ಬಲೋಪೇತೋ ಮತ್ತೋ ವರಮದೇನ ಚ|

05015021c ಕಾಮವೃತ್ತಃ ಸ ದುಷ್ಟಾತ್ಮಾ ವಾಹಯಾಮಾಸ ತಾನೃಷೀನ್||

ಆ ಅಬ್ರಾಹ್ಮಣ್ಯ, ಬಲೋಪೇತ, ವರಮದದಿಂದ ಮತ್ತನಾದ ಕಾಮವೃತ್ತನಾದ ಆ ದುಷ್ಟಾತ್ಮನು ಋಷಿಗಳನ್ನು ಏರಿದನು.

05015022a ನಹುಷೇಣ ವಿಸೃಷ್ಟಾ ಚ ಬೃಹಸ್ಪತಿಮುವಾಚ ಸಾ|

05015022c ಸಮಯೋಽಲ್ಪಾವಶೇಷೋ ಮೇ ನಹುಷೇಣೇಹ ಯಃ ಕೃತಃ|

05015022e ಶಕ್ರಂ ಮೃಗಯ ಶೀಘ್ರಂ ತ್ವಂ ಭಕ್ತಾಯಾಃ ಕುರು ಮೇ ದಯಾಂ||

ನಹುಷನಿಂದ ಕಳುಹಿಸಲ್ಪಟ್ಟ ಅವಳು ಬೃಹಸ್ಪತಿಗೆ ಹೇಳಿದಳು: “ನಹುಷನು ನನಗಿಟ್ಟಿದ್ದ ಸಮಯವು ಸ್ವಲ್ಪವೇ ಉಳಿದಿದೆ. ಶೀಘ್ರದಲ್ಲಿಯೇ ಶಕ್ರನನ್ನು ಹುಡುಕಿ ಭಕ್ತರಿಗೆ ದಯೆಯನ್ನು ಮಾಡು.”

05015023a ಬಾಢಮಿತ್ಯೇವ ಭಗವಾನ್ಬೃಹಸ್ಪತಿರುವಾಚ ತಾಂ|

05015023c ನ ಭೇತವ್ಯಂ ತ್ವಯಾ ದೇವಿ ನಹುಷಾದ್ದುಷ್ಟಚೇತಸಃ||

ಭಗವಾನ್ ಬೃಹಸ್ಪತಿಯು ಅವಳಿಗೆ ಹೇಳಿದನು: “ಒಳ್ಳೆಯದಾಯಿತು. ದೇವಿ! ದುಷ್ಟಚೇತಸ ನಹುಷನಿಗೆ ನೀನು ಹೆದರಬಾರದು.

05015024a ನ ಹ್ಯೇಷ ಸ್ಥಾಸ್ಯತಿ ಚಿರಂ ಗತ ಏಷ ನರಾಧಮಃ|

05015024c ಅಧರ್ಮಜ್ಞೋ ಮಹರ್ಷೀಣಾಂ ವಾಹನಾಚ್ಚ ಹತಃ ಶುಭೇ||

ಆ ನರಾಧಮನು ಬಹಳ ಕಾಲ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಿಲ್ಲ. ಶುಭೇ! ಆ ಅಧರ್ಮಜ್ಞನು ಮಹರ್ಷಿಗಳನ್ನು ವಾಹನವನ್ನಾಗಿ ಬಳಸುತ್ತಿದ್ದಾನೆಂದರೆ ಹತನಾಗುತ್ತಾನೆ.

05015025a ಇಷ್ಟಿಂ ಚಾಹಂ ಕರಿಷ್ಯಾಮಿ ವಿನಾಶಾಯಾಸ್ಯ ದುರ್ಮತೇಃ|

05015025c ಶಕ್ರಂ ಚಾಧಿಗಮಿಷ್ಯಾಮಿ ಮಾ ಭೈಸ್ತ್ವಂ ಭದ್ರಮಸ್ತು ತೇ||

ಈ ದುರ್ಮತಿಯ ವಿನಾಶಕ್ಕಾಗಿ ಇಷ್ಟಿಯನ್ನು ಮಾಡುತ್ತೇನೆ. ಶಕ್ರನನ್ನೂ ಹುಡುಕುತ್ತೇನೆ. ಹೆದರಬೇಡ! ನಿನಗೆ ಮಂಗಳವಾಗಲಿ!”

05015026a ತತಃ ಪ್ರಜ್ವಾಲ್ಯ ವಿಧಿವಜ್ಜುಹಾವ ಪರಮಂ ಹವಿಃ|

05015026c ಬೃಹಸ್ಪತಿರ್ಮಹಾತೇಜಾ ದೇವರಾಜೋಪಲಬ್ಧಯೇ||

ಆಗ ಮಹಾತೇಜಸ್ವಿ ಬೃಹಸ್ಪತಿಯು ದೇವರಾಜನನ್ನು ಪಡೆಯಲು ವಿಧಿವತ್ತಾಗಿ ಅಗ್ನಿಯನ್ನು ಪ್ರಜ್ವಲಿಸಿ ಪರಮ ಹವಿಸ್ಸನ್ನು ಯಜಿಸಿದನು.

05015027a ತಸ್ಮಾಚ್ಚ ಭಗವಾನ್ದೇವಃ ಸ್ವಯಮೇವ ಹುತಾಶನಃ|

05015027c ಸ್ತ್ರೀವೇಷಮದ್ಭುತಂ ಕೃತ್ವಾ ಸಹಸಾಂತರಧೀಯತ||

ಆಗ ಸ್ವಯಂ ದೇವ ಭಗವಾನ್ ಹುತಾಶನನು ಅದ್ಭುತವಾದ ಸ್ತ್ರೀವೇಷವನ್ನು ಮಾಡಿಕೊಂಡು ತಕ್ಷಣ ಅಲ್ಲಿಯೇ ಅಂತರ್ಧಾನನಾದನು.

05015028a ಸ ದಿಶಃ ಪ್ರದಿಶಶ್ಚೈವ ಪರ್ವತಾಂಶ್ಚ ವನಾನಿ ಚ|

05015028c ಪೃಥಿವೀಂ ಚಾಂತರಿಕ್ಷಂ ಚ ವಿಚೀಯಾತಿಮನೋಗತಿಃ|

05015028e ನಿಮೇಷಾಂತರಮಾತ್ರೇಣ ಬೃಹಸ್ಪತಿಮುಪಾಗಮತ್||

ಅವನು ದಿಕ್ಕುಗಳನ್ನು ಪರ್ವತಗಳನ್ನು ವನಗಳನ್ನು ಪೃಥ್ವಿ ಅಂತರಿಕ್ಷಗಳನ್ನು ಮನೋವೇಗಗತಿಯಲ್ಲಿ ಹೋಗಿ ಹುಡುಕಿದನು. ಕಣ್ಣುರೆಪ್ಪೆ ಬಡಿಯುವಷ್ಟರಲ್ಲಿ ಬೃಹಸ್ಪತಿಯಿದ್ದಲ್ಲಿಗೆ ಹಿಂದಿರುಗಿದನು.

05015029 ಅಗ್ನಿರುವಾಚ|

05015029a ಬೃಹಸ್ಪತೇ ನ ಪಶ್ಯಾಮಿ ದೇವರಾಜಮಹಂ ಕ್ವ ಚಿತ್|

05015029c ಆಪಃ ಶೇಷಾಃ ಸದಾ ಚಾಪಃ ಪ್ರವೇಷ್ಟುಂ ನೋತ್ಸಹಾಮ್ಯಹಂ|

05015029e ನ ಮೇ ತತ್ರ ಗತಿರ್ಬ್ರಹ್ಮನ್ಕಿಮನ್ಯತ್ಕರವಾಣಿ ತೇ||

ಅಗ್ನಿಯು ಹೇಳಿದನು: “ಬೃಹಸ್ಪತೇ! ನಾನು ದೇವರಾಜನನ್ನು ಎಲ್ಲಿಯೂ ಕಾಣಲಿಲ್ಲ. ನೀರಿನಲ್ಲಿ ಹುಡುಕುವುದು ಮಾತ್ರ ಉಳಿದಿದೆ. ನೀರನ್ನು ಪ್ರವೇಶಿಸಲು ನನಗೆ ಉತ್ಸಾಹವಿಲ್ಲ. ಬ್ರಹ್ಮನ್! ಅಲ್ಲಿಗೆ ನನಗೆ ದಾರಿಯಿಲ್ಲ. ನಿನಗೆ ಇನ್ನೇನು ಮಾಡಬೇಕು?””

05015030 ಶಲ್ಯ ಉವಾಚ|

05015030a ತಮಬ್ರವೀದ್ದೇವಗುರುರಪೋ ವಿಶ ಮಹಾದ್ಯುತೇ|

ಶಲ್ಯನು ಹೇಳಿದನು: “ಅವನಿಗೆ ದೇವಗುರುವು ಹೇಳಿದನು: “ಮಹಾದ್ಯುತೇ! ನೀರನ್ನು ಪ್ರವೇಶಿಸು!”

05015031 ಅಗ್ನಿರುವಾಚ|

05015031a ನಾಪಃ ಪ್ರವೇಷ್ಟುಂ ಶಕ್ಷ್ಯಾಮಿ ಕ್ಷಯೋ ಮೇಽತ್ರ ಭವಿಷ್ಯತಿ|

05015031c ಶರಣಂ ತ್ವಾಂ ಪ್ರಪನ್ನೋಽಸ್ಮಿ ಸ್ವಸ್ತಿ ತೇಽಸ್ತು ಮಹಾದ್ಯುತೇ||

ಅಗ್ನಿಯು ಹೇಳಿದನು: “ನೀರನ್ನು ಪ್ರವೇಶಿಸಲು ನನಗೆ ಶಕ್ಯವಿಲ್ಲ. ಅಲ್ಲಿ ನಾನು ನಾಶವಾಗುತ್ತೇನೆ. ನಿನ್ನ ಶರಣು ಹೊಗುತ್ತೇನೆ. ಮಹಾದ್ಯುತೇ! ನಿನಗೆ ಮಂಗಳವಾಗಲಿ!

05015032a ಅದ್ಭ್ಯೋಽಗ್ನಿರ್ಬ್ರಹ್ಮತಃ ಕ್ಷತ್ರಮಶ್ಮನೋ ಲೋಹಮುತ್ಥಿತಂ|

05015032c ತೇಷಾಂ ಸರ್ವತ್ರಗಂ ತೇಜಃ ಸ್ವಾಸು ಯೋನಿಷು ಶಾಮ್ಯತಿ||

ನೀರಿನಿಂದ ಅಗ್ನಿಯು ಉದ್ಭವಿಸಿದೆ; ಕಲ್ಲಿನಿಂದ ಲೋಹವು ಹುಟ್ಟಿತು. ಎಲ್ಲೆಡೆಯೂ ಹೋಗಬಲ್ಲ ಅವರ ತೇಜಸ್ಸು ಅವು ಎಲ್ಲಿಂದ ಹುಟ್ಟಿಬಂದವೋ ಅಲ್ಲಿ ಶಮಿಸಿಹೋಗುತ್ತದೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಬೃಹಸ್ಪತ್ಯಗ್ನಿಸಂವಾದೇ ಪಂಚದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಬೃಹಸ್ಪತ್ಯಗ್ನಿಸಂವಾದದಲ್ಲಿ ಹದಿನೈದನೆಯ ಅಧ್ಯಾಯವು|

Related image

Comments are closed.