Udyoga Parva: Chapter 148

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೪೮

ಕುರುಸಂಸದಿಯಲ್ಲಿ ತಾನು ಹೇಗೆ ಸಾಮ-ದಾನ-ಬೇಧ-ದಂಡೋಪಾಯಗಳನ್ನು ಬಳಸಿ ಶಾಂತಿಯನ್ನು ತರಲು ಪ್ರಯತ್ನಿಸಿದೆನೆಂದು ಕೃಷ್ಣನು ಯುಧಿಷ್ಠಿರನಲ್ಲಿ ಹೇಳಿಕೊಳ್ಳುವುದು (೧-೧೯).

05148001 ವಾಸುದೇವ ಉವಾಚ|

05148001a ಏವಮುಕ್ತೇ ತು ಭೀಷ್ಮೇಣ ದ್ರೋಣೇನ ವಿದುರೇಣ ಚ|

05148001c ಗಾಂಧಾರ್ಯಾ ಧೃತರಾಷ್ಟ್ರೇಣ ನ ಚ ಮಂದೋಽನ್ವಬುಧ್ಯತ||

ವಾಸುದೇವನು ಹೇಳಿದನು: “ಭೀಷ್ಮ, ದ್ರೋಣ, ವಿದುರರು, ಗಾಂಧಾರಿ ಮತ್ತು ಧೃತರಾಷ್ಟ್ರರು ಹೀಗೆ ಹೇಳಿದರೂ ಆ ಮಂದನು ತನ್ನ ಬುದ್ಧಿಯನ್ನು ಬದಲಿಸಲಿಲ್ಲ.

05148002a ಅವಧೂಯೋತ್ಥಿತಃ ಕ್ರುದ್ಧೋ ರೋಷಾತ್ಸಂರಕ್ತಲೋಚನಃ|

05148002c ಅನ್ವದ್ರವಂತ ತಂ ಪಶ್ಚಾದ್ರಾಜಾನಸ್ತ್ಯಕ್ತಜೀವಿತಾಃ||

ಅವರನ್ನು ಕಡೆಗಣಿಸಿ, ರೋಷದಿಂದ ರಕ್ತಲೋಚನನಾಗಿ ಸಿಟ್ಟಿನಿಂದ ಮೇಲೆದ್ದನು. ಅವನ ಹಿಂದೆ ಜೀವಿತವನ್ನು ತೊರೆದ ಇತರ ರಾಜರು ಹಿಂಬಾಲಿಸಿದರು.

05148003a ಅಜ್ಞಾಪಯಚ್ಚ ರಾಜ್ಞಾಸ್ತಾನ್ಪಾರ್ಥಿವಾನ್ದುಷ್ಟಚೇತಸಃ|

05148003c ಪ್ರಯಾಧ್ವಂ ವೈ ಕುರುಕ್ಷೇತ್ರಂ ಪುಷ್ಯೋಽದ್ಯೇತಿ ಪುನಃ ಪುನಃ||

ಆ ದುಷ್ಟಚೇತಸನು ಅಲ್ಲಿದ್ದ ರಾಜ ಪಾರ್ಥಿವರಿಗೆ “ಇಂದು ಪುಷ್ಯ. ಕುರುಕ್ಷೇತ್ರಕ್ಕೆ ಪ್ರಯಾಣಿಸಿ!” ಎಂದು ಪುನಃ ಪುನಃ ಅಜ್ಞಾಪಿಸಿದನು.

05148004a ತತಸ್ತೇ ಪೃಥಿವೀಪಾಲಾಃ ಪ್ರಯಯುಃ ಸಹಸೈನಿಕಾಃ|

05148004c ಭೀಷ್ಮಂ ಸೇನಾಪತಿಂ ಕೃತ್ವಾ ಸಂಹೃಷ್ಟಾಃ ಕಾಲಚೋದಿತಾಃ||

ಆಗ ಕಾಲಚೋದಿತರರಾದ ಆ ಪೃಥಿವೀ ಪಾಲಕರು ಸೈನಿಕರೊಂದಿಗೆ ಭೀಷ್ಮನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಹೊರಟರು.

05148005a ಅಕ್ಷೌಹಿಣ್ಯೋ ದಶೈಕಾ ಚ ಪಾರ್ಥಿವಾನಾಂ ಸಮಾಗತಾಃ|

05148005c ತಾಸಾಂ ಪ್ರಮುಖತೋ ಭೀಷ್ಮಸ್ತಾಲಕೇತುರ್ವ್ಯರೋಚತ||

ಹನ್ನೊಂದು ಅಕ್ಷೌಹಿಣೀ ಸೇನೆ ಮತ್ತು ಪಾರ್ಥಿವರು ಸಮಾಗತರಾಗಿದ್ದರು. ಅವರ ಪ್ರಮುಖನಾಗಿ ತಾಲಕೇತು ಭೀಷ್ಮನು ಮಿಂಚಿದನು.

05148005e ಯದತ್ರ ಯುಕ್ತಂ ಪ್ರಾಪ್ತಂ ಚ ತದ್ವಿಧತ್ಸ್ವ ವಿಶಾಂ ಪತೇ||

05148006a ಉಕ್ತಂ ಭೀಷ್ಮೇಣ ಯದ್ವಾಕ್ಯಂ ದ್ರೋಣೇನ ವಿದುರೇಣ ಚ|

05148006c ಗಾಂಧಾರ್ಯಾ ಧೃತರಾಷ್ಟ್ರೇಣ ಸಮಕ್ಷಂ ಮಮ ಭಾರತ||

05148006e ಏತತ್ತೇ ಕಥಿತಂ ರಾಜನ್ಯದ್ವೃತ್ತಂ ಕುರುಸಂಸದಿ||

ವಿಶಾಂಪತೇ! ಈಗ ಅಲ್ಲಿ ಹೋಗಿ ಯುಕ್ತವಾದುದು ಏನೆಂದು ತಿಳಿದಿದ್ದೀಯೋ ಅದನ್ನು ಮಾಡು. ಭಾರತ! ನನ್ನ ಸಮಕ್ಷಮದಲ್ಲಿ ಭೀಷ್ಮ, ದ್ರೋಣ, ವಿದುರ, ಗಾಂಧಾರಿ ಮತ್ತು ಧೃತರಾಷ್ಟ್ರನು ಹೇಳಿದ ಮಾತನ್ನು ಮತ್ತು ಕುರುಸಂಸದಿಯಲ್ಲಿ ನಡೆದುದನ್ನು ರಾಜನ್! ನಿನಗೆ ಹೇಳಿದ್ದೇನೆ.

05148007a ಸಾಮ ಆದೌ ಪ್ರಯುಕ್ತಂ ಮೇ ರಾಜನ್ಸೌಭ್ರಾತ್ರಮಿಚ್ಚತಾ|

05148007c ಅಭೇದಾತ್ಕುರುವಂಶಸ್ಯ ಪ್ರಜಾನಾಂ ಚ ವಿವೃದ್ಧಯೇ||

ರಾಜನ್! ಮೊದಲು ನಾನು ಸೌಭ್ರಾತೃತ್ವವನ್ನು ಇಚ್ಛಿಸಿ, ಕುರುವಂಶದಲ್ಲಿ ಒಡಕು ಬರಬಾರದೆಂದು, ಪ್ರಜೆಗಳ ಅಭಿವೃದ್ಧಿಗಾಗಿ ಸಾಮವನ್ನು ಬಳಸಿದೆನು.

05148008a ಪುನರ್ಭೇದಶ್ಚ ಮೇ ಯುಕ್ತೋ ಯದಾ ಸಾಮ ನ ಗೃಹ್ಯತೇ|

05148008c ಕರ್ಮಾನುಕೀರ್ತನಂ ಚೈವ ದೇವಮಾನುಷಸಂಹಿತಂ||

ಯಾವಾಗ ಸಾಮವು ಸೋತಿತೋ ಆಗ ಪುನಃ ಭೇದವನ್ನು ಬಳಸಿದೆನು. ನಿಮ್ಮ ದೇವ ಮಾನುಷ ಸಂಹಿತ ಕರ್ಮಗಳನ್ನು ವರ್ಣಿಸಿದೆನು.

05148009a ಯದಾ ನಾದ್ರಿಯತೇ ವಾಕ್ಯಂ ಸಾಮಪೂರ್ವಂ ಸುಯೋಧನಃ|

05148009c ತದಾ ಮಯಾ ಸಮಾನೀಯ ಭೇದಿತಾಃ ಸರ್ವಪಾರ್ಥಿವಾಃ||

ಯಾವಾಗ ಸುಯೋಧನನು ನನ್ನ ಸಾಮಪೂರ್ವಕ ವಾಕ್ಯವನ್ನು ಕೇಳಲಿಲ್ಲವೋ ಆಗ ಸರ್ವಪಾರ್ಥಿವರಲ್ಲಿ ಭೇದವನ್ನು ಬಿತ್ತಲು ಪ್ರಯತ್ನಿಸಿದೆ.

05148010a ಅದ್ಭುತಾನಿ ಚ ಘೋರಾಣಿ ದಾರುಣಾನಿ ಚ ಭಾರತ|

05148010c ಅಮಾನುಷಾಣಿ ಕರ್ಮಾಣಿ ದರ್ಶಿತಾನಿ ಚ ಮೇ ವಿಭೋ||

ಭಾರತ! ವಿಭೋ! ನಾನು ಅದ್ಭುತ, ಘೋರ, ದಾರುಣ ಅಮಾನುಷ ಕರ್ಮಗಳನ್ನು ತೋರಿಸಿದೆನು.

05148011a ಭರ್ತ್ಸಯಿತ್ವಾ ತು ರಾಜ್ಞಾಸ್ತಾಂಸ್ತೃಣೀಕೃತ್ಯ ಸುಯೋಧನಂ|

05148011c ರಾಧೇಯಂ ಭೀಷಯಿತ್ವಾ ಚ ಸೌಬಲಂ ಚ ಪುನಃ ಪುನಃ||

ರಾಜರನ್ನು ಹೆದರಿಸಿದೆನು; ಸುಯೋಧನನನ್ನು ತೃಣೀಕರಿಸಿದೆನು, ಮತ್ತು ರಾಧೇಯ-ಸೌಬಲರನ್ನು ಪುನಃ ಪುನಃ ಹಳಿದೆನು.

05148012a ನ್ಯೂನತಾಂ ಧಾರ್ತರಾಷ್ಟ್ರಾಣಾಂ ನಿಂದಾಂ ಚೈವ ಪುನಃ ಪುನಃ|

05148012c ಭೇದಯಿತ್ವಾ ನೃಪಾನ್ಸರ್ವಾನ್ವಾಗ್ಭಿರ್ಮಂತ್ರೇಣ ಚಾಸಕೃತ್||

ನಾನು ಪುನಃ ಪುನಃ ಧಾರ್ತರಾಷ್ಟ್ರರ ನ್ಯೂನತೆಗಳನ್ನು ತೋರಿಸಿ ನಿಂದಿಸಿದೆನು. ಸರ್ವ ನೃಪರನ್ನೂ ಮಾತು ಮತ್ತು ಸಲಹೆಗಳಿಂದ ಭೇದಿಸಲು ಪ್ರಯತ್ನಿಸಿದೆ.

05148013a ಪುನಃ ಸಾಮಾಭಿಸಂಯುಕ್ತಂ ಸಂಪ್ರದಾನಮಥಾಬ್ರುವಂ|

05148013c ಅಭೇದಾತ್ಕುರುವಂಶಸ್ಯ ಕಾರ್ಯಯೋಗಾತ್ತಥೈವ ಚ||

ಪುನಃ ಸಾಮವನ್ನು ಬಳಸಿ, ಕುರುವಂಶದಲ್ಲಿ ಭೇದವುಂಟಾಗಬಾರದೆಂದು, ಕಾರ್ಯಸಿದ್ಧಿಯಾಗಬೇಕೆಂದು ಈ ಲಾಭಗಳ ಕುರಿತು ಹೇಳಿದೆನು.

05148014a ತೇ ಬಾಲಾ ಧೃತರಾಷ್ಟ್ರಸ್ಯ ಭೀಷ್ಮಸ್ಯ ವಿದುರಸ್ಯ ಚ|

05148014c ತಿಷ್ಠೇಯುಃ ಪಾಂಡವಾಃ ಸರ್ವೇ ಹಿತ್ವಾ ಮಾನಮಧಶ್ಚರಾಃ||

“ಈ ಬಾಲಕ ಪಾಂಡವರು ಮಾನ, ಮದಗಳನ್ನು ತೊರೆದು ಧೃತರಾಷ್ಟ್ರ, ಭೀಷ್ಮ ಮತ್ತು ವಿದುರರಿಗೆ ಶರಣು ಬರುತ್ತಾರೆ.

05148015a ಪ್ರಯಚ್ಚಂತು ಚ ತೇ ರಾಜ್ಯಮನೀಶಾಸ್ತೇ ಭವಂತು ಚ|

05148015c ಯಥಾಹ ರಾಜಾ ಗಾಂಗೇಯೋ ವಿದುರಶ್ಚ ತಥಾಸ್ತು ತತ್||

ಅವರು ರಾಜ್ಯವನ್ನು ನಿಮಗೆ ಒಪ್ಪಿಸಿ, ಅವರ ಈಶತ್ವವನ್ನು ತೊರೆಯುತ್ತಾರೆ. ರಾಜ, ಗಾಂಗೇಯ ಮತ್ತು ವಿದುರರು ಹೇಳಿದಂತಾಗಲಿ.

05148016a ಸರ್ವಂ ಭವತು ತೇ ರಾಜ್ಯಂ ಪಂಚ ಗ್ರಾಮಾನ್ವಿಸರ್ಜಯ|

05148016c ಅವಶ್ಯಂ ಭರಣೀಯಾ ಹಿ ಪಿತುಸ್ತೇ ರಾಜಸತ್ತಮ||

ರಾಜಸತ್ತಮ! ಎಲ್ಲವೂ ನಿನ್ನ ರಾಜ್ಯವಾಗಲಿ. ಐದು ಗ್ರಾಮಗಳನ್ನು ಬಿಟ್ಟುಕೊಡು. ನಿನ್ನ ತಂದೆಯು ಅವಶ್ಯವಾಗಿ ಅವರನ್ನು ಪೋಷಿಸಬಲ್ಲನು.”

05148017a ಏವಮುಕ್ತಸ್ತು ದುಷ್ಟಾತ್ಮಾ ನೈವ ಭಾವಂ ವ್ಯಮುಂಚತ|

05148017c ದಂಡಂ ಚತುರ್ಥಂ ಪಶ್ಯಾಮಿ ತೇಷು ಪಾಪೇಷು ನಾನ್ಯಥಾ||

ಇಷ್ಟು ಹೇಳಿದರೂ ಆ ದುಷ್ಟಾತ್ಮನು ತನ್ನ ಭಾವವನ್ನು ಬದಲಾಯಿಸಲಿಲ್ಲ. ಈಗ ನನಗೆ ಅವರ ಪಾಪಗಳಿಗೆ ನಾಲ್ಕನೆಯದಾದ ದಂಡವಲ್ಲದೇ ಬೇರೆ ಏನೂ ಕಾಣುತ್ತಿಲ್ಲ.

05148018a ನಿರ್ಯಾತಾಶ್ಚ ವಿನಾಶಾಯ ಕುರುಕ್ಷೇತ್ರಂ ನರಾಧಿಪಾಃ|

05148018c ಏತತ್ತೇ ಕಥಿತಂ ಸರ್ವಂ ಯದ್ವೃತ್ತಂ ಕುರುಸಂಸದಿ||

ಅವರದೇ ವಿನಾಶಕ್ಕೆ ನರಾಧಿಪರು ಕುರುಕ್ಷೇತ್ರಕ್ಕೆ ಹೊರಟಿದ್ದಾರೆ. ಕುರುಸಂಸದಿಯಲ್ಲಿ ನಡೆದುದೆಲ್ಲವನ್ನೂ ನಿನಗೆ ಹೇಳಿದ್ದೇನೆ.

05148019a ನ ತೇ ರಾಜ್ಯಂ ಪ್ರಯಚ್ಚಂತಿ ವಿನಾ ಯುದ್ಧೇನ ಪಾಂಡವ|

05148019c ವಿನಾಶಹೇತವಃ ಸರ್ವೇ ಪ್ರತ್ಯುಪಸ್ಥಿತಮೃತ್ಯವಃ||

ಪಾಂಡವ! ಯುದ್ಧವಿಲ್ಲದೇ ಅವರು ನಿನಗೆ ರಾಜ್ಯವನ್ನು ಹಿಂದಿರುಗಿಸುವುದಿಲ್ಲ. ವಿನಾಶಕ್ಕೆ ಕಾರಣರಾಗುವ ಅವರು ಮೃತ್ಯುವನ್ನು ಎದುರಿಸಿದ್ದಾರೆ!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಕೃಷ್ಣವಾಕ್ಯೇ ಅಷ್ಟಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾನಲ್ವತ್ತೆಂಟನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೫/೧೦೦, ಅಧ್ಯಾಯಗಳು-೮೧೧/೧೯೯೫, ಶ್ಲೋಕಗಳು-೨೬೩೯೬/೭೩೭೮೪

Image result for flowers against white background

Comments are closed.