Udyoga Parva: Chapter 147

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೪೭

ಕೃಷ್ಣನು ಕುರುಸಂಸದಿಯಲ್ಲಿ ದುರ್ಯೋಧನನಿಗೆ ಧೃತರಾಷ್ಟ್ರನು ನುಡಿದ ಹಿತವಚನಗಳನ್ನು ವರದಿಮಾಡಿದುದು (೧-೩೫).

05147001 ವಾಸುದೇವ ಉವಾಚ|

05147001a ಏವಮುಕ್ತೇ ತು ಗಾಂಧಾರ್ಯಾ ಧೃತರಾಷ್ಟ್ರೋ ಜನೇಶ್ವರಃ|

05147001c ದುರ್ಯೋಧನಮುವಾಚೇದಂ ನೃಪಮಧ್ಯೇ ಜನಾಧಿಪ||

ವಾಸುದೇವನು ಹೇಳಿದನು: “ಜನಾಧಿಪ! ಗಾಂಧಾರಿಯು ಹೀಗೆ ಹೇಳಲು ಜನೇಶ್ವರ ಧೃತರಾಷ್ಟ್ರನು ನೃಪರ ಮಧ್ಯದಲ್ಲಿ ದುರ್ಯೋಧನನಿಗೆ ಹೀಗೆ ಹೇಳಿದನು:

05147002a ದುರ್ಯೋಧನ ನಿಬೋಧೇದಂ ಯತ್ತ್ವಾಂ ವಕ್ಷ್ಯಾಮಿ ಪುತ್ರಕ|

05147002c ತಥಾ ತತ್ಕುರು ಭದ್ರಂ ತೇ ಯದ್ಯಸ್ತಿ ಪಿತೃಗೌರವಂ||

“ಪುತ್ರಕ! ದುರ್ಯೋಧನ! ಈಗ ನಾನು ನಿನಗೆ ಏನು ಹೇಳುತ್ತೇನೋ ಅದನ್ನು ಕೇಳಿ, ನಿನಗೆ ತಂದೆಯ ಮೇಲೆ ಗೌರವವಿದೆಯಂತಾದರೆ ಅದರಂತೆ ನಡೆದುಕೋ! ನಿನಗೆ ಮಂಗಳವಾಗಲಿ!

05147003a ಸೋಮಃ ಪ್ರಜಾಪತಿಃ ಪೂರ್ವಂ ಕುರೂಣಾಂ ವಂಶವರ್ಧನಃ|

05147003c ಸೋಮಾದ್ಬಭೂವ ಷಷ್ಠೋ ವೈ ಯಯಾತಿರ್ನಹುಷಾತ್ಮಜಃ||

ಹಿಂದೆ ಪ್ರಜಾಪತಿ ಸೋಮನು ಕುರುಗಳ ವಂಶವನ್ನು ಸ್ಥಾಪಿಸಿದನು. ಸೋಮನಿಂದ ಆರನೆಯವನು ನಹುಷಾತ್ಮಜ ಯಯಾತಿಯಾಗಿದ್ದನು.

05147004a ತಸ್ಯ ಪುತ್ರಾ ಬಭೂವುಶ್ಚ ಪಂಚ ರಾಜರ್ಷಿಸತ್ತಮಾಃ|

05147004c ತೇಷಾಂ ಯದುರ್ಮಹಾತೇಜಾ ಜ್ಯೇಷ್ಠಃ ಸಮಭವತ್ಪ್ರಭುಃ||

ಅವನಿಗೆ ಐವರು ರಾಜರ್ಷಿಸತ್ತಮ ಮಕ್ಕಳಿದ್ದರು. ಅವರಲ್ಲಿ ಮಹಾತೇಜಸ್ವಿ ಪ್ರಭು ಯದುವು ಜ್ಯೇಷ್ಠನಾಗಿದ್ದನು.

05147005a ಪೂರುರ್ಯವೀಯಾಂಶ್ಚ ತತೋ ಯೋಽಸ್ಮಾಕಂ ವಂಶವರ್ಧನಃ|

05147005c ಶರ್ಮಿಷ್ಠಾಯಾಃ ಸಂಪ್ರಸೂತೋ ದುಹಿತುರ್ವೃಷಪರ್ವಣಃ||

ನಮ್ಮ ವಂಶವನ್ನು ಬೆಳೆಸಿದ, ಕಿರಿಯವ ಪುರುವು ವೃಷಪರ್ವಣನ ಮಗಳು ಶರ್ಮಿಷ್ಠೆಯಲ್ಲಿ ಜನಿಸಿದ್ದನು.

05147006a ಯದುಶ್ಚ ಭರತಶ್ರೇಷ್ಠ ದೇವಯಾನ್ಯಾಃ ಸುತೋಽಭವತ್|

05147006c ದೌಹಿತ್ರಸ್ತಾತ ಶುಕ್ರಸ್ಯ ಕಾವ್ಯಸ್ಯಾಮಿತತೇಜಸಃ||

ಭರತಶ್ರೇಷ್ಠ! ಯದುವಾದರೋ ಅಮಿತ ತೇಜಸ್ವಿ ಕಾವ್ಯ ಶುಕ್ರನ ಮಗಳು ದೇವಯಾನಿಯ ಮಗನಾಗಿದ್ದನು.

05147007a ಯಾದವಾನಾಂ ಕುಲಕರೋ ಬಲವಾನ್ವೀರ್ಯಸಮ್ಮತಃ|

05147007c ಅವಮೇನೇ ಸ ತು ಕ್ಷತ್ರಂ ದರ್ಪಪೂರ್ಣಃ ಸುಮಂದಧೀಃ||

ಯಾದವರ ಕುಲಕರ ಬಲವಾನ್ ವೀರ್ಯಸಮ್ಮತನು ದರ್ಪದಿಂದ ತುಂಬಿ, ಮಂದಬುದ್ಧಿಯುಳ್ಳವನಾಗಿ ಕ್ಷತ್ರಿಯತ್ವವನ್ನು ಕೀಳಾಗಿ ಕಂಡನು.

05147008a ನ ಚಾತಿಷ್ಠತ್ಪಿತುಃ ಶಾಸ್ತ್ರೇ ಬಲದರ್ಪವಿಮೋಹಿತಃ|

05147008c ಅವಮೇನೇ ಚ ಪಿತರಂ ಭ್ರಾತೄಂಶ್ಚಾಪ್ಯಪರಾಜಿತಃ||

ಬಲದರ್ಪವಿಮೋಹಿತನಾದ ಅವನು ತಂದೆಯ ಶಾಸನದಂತೆ ನಡೆದುಕೊಳ್ಳಲಿಲ್ಲ. ಆ ಅಪರಾಜಿತನು ತಂದೆಯನ್ನೂ ಸಹೋದರರನ್ನೂ ಅವಮಾನಿಸಿದನು.

05147009a ಪೃಥಿವ್ಯಾಂ ಚತುರಂತಾಯಾಂ ಯದುರೇವಾಭವದ್ಬಲೀ|

05147009c ವಶೇ ಕೃತ್ವಾ ಸ ನೃಪತೀನವಸನ್ನಾಗಸಾಹ್ವಯೇ||

ಭೂಮಿಯ ನಾಲ್ಕೂ ಕಡೆಗಳಲ್ಲಿಯೂ ಯದುವು ಬಲಶಾಲಿಯಾಗಿದ್ದನು. ನೃಪತಿಗಳನ್ನು ವಶಪಡಿಸಿಕೊಂಡು ನಾಗಸಾಹ್ವಯದಲ್ಲಿ ವಾಸಿಸುತ್ತಿದ್ದನು.

05147010a ತಂ ಪಿತಾ ಪರಮಕ್ರುದ್ಧೋ ಯಯಾತಿರ್ನಹುಷಾತ್ಮಜಃ|

05147010c ಶಶಾಪ ಪುತ್ರಂ ಗಾಂಧಾರೇ ರಾಜ್ಯಾಚ್ಚ ವ್ಯಪರೋಪಯತ್||

ಗಾಂಧಾರೇ! ಅವನ ತಂದೆ ನಹುಷಾತ್ಮಜ ಯಯಾತಿಯು ಅವನನ್ನು ಶಪಿಸಿ ರಾಜ್ಯದಿಂದ ಹೊರಹಾಕಿದನು.

05147011a ಯ ಚೈನಮನ್ವವರ್ತಂತ ಭ್ರಾತರೋ ಬಲದರ್ಪಿತಂ|

05147011c ಶಶಾಪ ತಾನಪಿ ಕ್ರುದ್ಧೋ ಯಯಾತಿಸ್ತನಯಾನಥ||

ಬಲದರ್ಪಿತನಾದ ಆ ಅಣ್ಣನನ್ನು ಅನುಸರಿಸಿದ ತನ್ನ ಇತರ ಮಕ್ಕಳನ್ನೂ ಕೂಡ ಕ್ರುದ್ಧನಾದ ಯಯಾತಿಯು ಶಪಿಸಿದನು.

05147012a ಯವೀಯಾಂಸಂ ತತಃ ಪೂರುಂ ಪುತ್ರಂ ಸ್ವವಶವರ್ತಿನಂ|

05147012c ರಾಜ್ಯೇ ನಿವೇಶಯಾಮಾಸ ವಿಧೇಯಂ ನೃಪಸತ್ತಮಃ||

ಆ ನೃಪಸತ್ತಮನು ತನ್ನಂತೆ ನಡೆದುಕೊಂಡ ಕಿರಿಯ ಪುತ್ರ ವಿಧೇಯ ಪುರುವನ್ನು ರಾಜ್ಯದಲ್ಲಿರಿಸಿಕೊಂಡನು.

05147013a ಏವಂ ಜ್ಯೇಷ್ಠೋಽಪ್ಯಥೋತ್ಸಿಕ್ತೋ ನ ರಾಜ್ಯಮಭಿಜಾಯತೇ|

05147013c ಯವೀಯಾಂಸೋಽಭಿಜಾಯಂತೇ ರಾಜ್ಯಂ ವೃದ್ಧೋಪಸೇವಯಾ||

ಹೀಗೆ ಜ್ಯೇಷ್ಠನಾದರೂ ಜಂಬಪಡುತ್ತಿದ್ದವನು ರಾಜ್ಯವನ್ನು ಪಡೆಯಲಿಲ್ಲ. ಆದರೆ ಕಿರಿಯವನಾಗಿದ್ದರೂ ವೃದ್ಧರ ಸೇವೆಯನ್ನು ಮಾಡುವವನು ರಾಜ್ಯವನ್ನು ಪಡೆದನು.

05147014a ತಥೈವ ಸರ್ವಧರ್ಮಜ್ಞಾಃ ಪಿತುರ್ಮಮ ಪಿತಾಮಹಃ|

05147014c ಪ್ರತೀಪಃ ಪೃಥಿವೀಪಾಲಸ್ತ್ರಿಷು ಲೋಕೇಷು ವಿಶ್ರುತಃ||

ಹೀಗೆಯೇ ನನ್ನ ತಂದೆಯ ಅಜ್ಜ ಪ್ರತೀಪನು ಸರ್ವಧರ್ಮಜ್ಞನಾಗಿದ್ದು ಮೂರು ಲೋಕಗಳಲ್ಲಿಯೂ ವಿಶ್ರುತನಾದ ರಾಜನಾಗಿದ್ದನು.

05147015a ತಸ್ಯ ಪಾರ್ಥಿವಸಿಂಹಸ್ಯ ರಾಜ್ಯಂ ಧರ್ಮೇಣ ಶಾಸತಃ|

05147015c ತ್ರಯಃ ಪ್ರಜಜ್ಞೈರೇ ಪುತ್ರಾ ದೇವಕಲ್ಪಾ ಯಶಸ್ವಿನಃ||

ರಾಜ್ಯವನ್ನು ಧರ್ಮದಿಂದ ಶಾಸನಮಾಡುತ್ತಿದ್ದ ಆ ಪಾರ್ಥಿವಸಿಂಹನಿಗೆ ಮೂವರು ದೇವಕಲ್ಪರಾದ ಯಶಸ್ವೀ ಪುತ್ರರು ಜನಿಸಿದರು.

05147016a ದೇವಾಪಿರಭವಜ್ಜ್ಯೇಷ್ಠೋ ಬಾಹ್ಲೀಕಸ್ತದನಂತರಂ|

05147016c ತೃತೀಯಃ ಶಂತನುಸ್ತಾತ ಧೃತಿಮಾನ್ಮೇ ಪಿತಾಮಹಃ||

ದೇವಾಪಿಯು ಜ್ಯೇಷ್ಠನಾಗಿದ್ದನು. ಬಾಹ್ಲೀಕನು ಅವನ ನಂತರದವನು. ಮಗೂ! ಮೂರನೆಯವನು ನನ್ನ ಅಜ್ಜ ಧೃತಿಮಾನ್ ಶಂತನುವು.

05147017a ದೇವಾಪಿಸ್ತು ಮಹಾತೇಜಾಸ್ತ್ವಗ್ದೋಷೀ ರಾಜಸತ್ತಮಃ|

05147017c ಧಾರ್ಮಿಕಃ ಸತ್ಯವಾದೀ ಚ ಪಿತುಃ ಶುಶ್ರೂಷಣೇ ರತಃ||

ಮಹಾತೇಜಸ್ವಿ, ರಾಜಸತ್ತಮ, ಧಾರ್ಮಿಕ, ಸತ್ಯವಾದೀ, ಪಿತುಶುಶ್ರೂಷಣರತನಾಗಿದ್ದ ದೇವಾಪಿಯಾದರೋ ಚರ್ಮರೋಗಿಯಾಗಿದ್ದನು.

05147018a ಪೌರಜಾನಪದಾನಾಂ ಚ ಸಮ್ಮತಃ ಸಾಧುಸತ್ಕೃತಃ|

05147018c ಸರ್ವೇಷಾಂ ಬಾಲವೃದ್ಧಾನಾಂ ದೇವಾಪಿರ್ಹೃದಯಂಗಮಃ||

ಅವನು ಪೌರ-ಜಾನಪದಗಳಿಗೆ ಸಮ್ಮತನಾಗಿದ್ದನು. ಸಾಧು ಸತ್ಕೃತನಾಗಿದ್ದನು. ಎಲ್ಲರ - ಬಾಲಕ-ವೃದ್ಧರ ಮತ್ತು ದೇವತೆಗಳ ಹೃದಯಂಗಮನಾಗಿದ್ದನು.

05147019a ಪ್ರಾಜ್ಞಾಶ್ಚ ಸತ್ಯಸಂಧಶ್ಚ ಸರ್ವಭೂತಹಿತೇ ರತಃ|

05147019c ವರ್ತಮಾನಃ ಪಿತುಃ ಶಾಸ್ತ್ರೇ ಬ್ರಾಹ್ಮಣಾನಾಂ ತಥೈವ ಚ||

05147020a ಬಾಹ್ಲೀಕಸ್ಯ ಪ್ರಿಯೋ ಭ್ರಾತಾ ಶಂತನೋಶ್ಚ ಮಹಾತ್ಮನಃ|

05147020c ಸೌಭ್ರಾತ್ರಂ ಚ ಪರಂ ತೇಷಾಂ ಸಹಿತಾನಾಂ ಮಹಾತ್ಮನಾಂ||

ಪ್ರಾಜ್ಞನೂ, ಸತ್ಯಸಂಧನೂ, ಸರ್ವಭೂತಹಿತರತನೂ ಆಗಿದ್ದ ಅವನು ತಂದೆ, ಶಾಸ್ತ್ರ ಮತ್ತು ಬ್ರಾಹ್ಮಣರ ಪ್ರಕಾರ ನಡೆದುಕೊಳ್ಳುತ್ತಿದ್ದನು. ಬಾಹ್ಲೀಕನ ಮತ್ತು ಮಹಾತ್ಮ ಶಂತನುವಿನ ಪ್ರಿಯ ಅಣ್ಣನಾಗಿದ್ದನು. ಆ ಮಹಾತ್ಮರ ಒಟ್ಟಿಗಿದ್ದ ಸೌಭ್ರಾತೃತ್ವವು ಉದಾಹರಣೀಯವಾಗಿತ್ತು.

05147021a ಅಥ ಕಾಲಸ್ಯ ಪರ್ಯಾಯೇ ವೃದ್ಧೋ ನೃಪತಿಸತ್ತಮಃ|

05147021c ಸಂಭಾರಾನಭಿಷೇಕಾರ್ಥಂ ಕಾರಯಾಮಾಸ ಶಾಸ್ತ್ರತಃ|

05147021e ಮಂಗಲಾನಿ ಚ ಸರ್ವಾಣಿ ಕಾರಯಾಮಾಸ ಚಾಭಿಭೂಃ||

ಆಗ ಕಾಲವು ಪ್ರಾಪ್ತವಾದಾಗ ವೃದ್ಧ ನೃಪತಿಸತ್ತಮ ವಿಭುವು ಅವನ ಅಭಿಷೇಕಕ್ಕಾಗಿ ಶಾಸ್ತ್ರೋಕ್ತ ಸಾಮಗ್ರಿಗಳನ್ನು ಸಂಗ್ರಹಿಸಿ ಎಲ್ಲ ಮಂಗಲ ಕಾರ್ಯಗಳನ್ನೂ ಮಾಡತೊಡಗಿದನು.

05147022a ತಂ ಬ್ರಾಹ್ಮಣಾಶ್ಚ ವೃದ್ಧಾಶ್ಚ ಪೌರಜಾನಪದೈಃ ಸಹ|

05147022c ಸರ್ವೇ ನಿವಾರಯಾಮಾಸುರ್ದೇವಾಪೇರಭಿಷೇಚನಂ||

ಆಗ ಬ್ರಾಹ್ಮಣರು, ಹಿರಿಯರು ನಗರ-ಗ್ರಾಮಗಳೊಂದಿಗೆ ಎಲ್ಲರೂ ದೇವಾಪಿಯ ಅಭಿಷೇಕವನ್ನು ನಿಲ್ಲಿಸಿದರು.

05147023a ಸ ತಚ್ಚ್ರುತ್ವಾ ತು ನೃಪತಿರಭಿಷೇಕನಿವಾರಣಂ|

05147023c ಅಶ್ರುಕಂಠೋಽಭವದ್ರಾಜಾ ಪರ್ಯಶೋಚತ ಚಾತ್ಮಜಂ||

ಅವರು ಅಭಿಷೇಕವನ್ನು ನಿಲ್ಲಿಸುತ್ತಿದ್ದಾರೆ ಎಂದು ಕೇಳಿದ ರಾಜಾ ನೃಪತಿಯ ಗಂಟಲಿನಲ್ಲಿ ಕಣ್ಣೀರು ತುಂಬಿಕೊಂಡಿತು ಮತ್ತು ತನ್ನ ಮಗನಿಗಾಗಿ ಬಹಳ ಶೋಕಿಸಿದನು.

05147024a ಏವಂ ವದಾನ್ಯೋ ಧರ್ಮಜ್ಞಾಃ ಸತ್ಯಸಂಧಶ್ಚ ಸೋಽಭವತ್|

05147024c ಪ್ರಿಯಃ ಪ್ರಜಾನಾಮಪಿ ಸಂಸ್ತ್ವಗ್ದೋಷೇಣ ಪ್ರದೂಷಿತಃ||

ಹೀಗೆ ದಾನಿ, ಧರ್ಮಜ್ಞ, ಸತ್ಯಸಂಧನು ಪ್ರಜೆಗಳಿಗೆ ಪ್ರಿಯನಾಗಿದ್ದರೂ ಚರ್ಮದ ದೋಷದಿಂದ ಪ್ರದೂಷಿತನಾದನು.

05147025a ಹೀನಾಂಗಂ ಪೃಥಿವೀಪಾಲಂ ನಾಭಿನಂದಂತಿ ದೇವತಾಃ|

05147025c ಇತಿ ಕೃತ್ವಾ ನೃಪಶ್ರೇಷ್ಠಂ ಪ್ರತ್ಯಷೇಧನ್ದ್ವಿಜರ್ಷಭಾಃ||

ಹೀನಾಂಗನನ್ನು ರಾಜನನ್ನಾಗಿ ದೇವತೆಗಳು ಆನಂದಿಸುವುದಿಲ್ಲ. ಆದುದರಿಂದ ದ್ವಿಜರ್ಷಭರು ಆ ನೃಪಶ್ರೇಷ್ಠನನ್ನು ತಡೆದರು.

05147026a ತತಃ ಪ್ರವ್ಯಥಿತಾತ್ಮಾಸೌ ಪುತ್ರಶೋಕಸಮನ್ವಿತಃ|

05147026c ಮಮಾರ ತಂ ಮೃತಂ ದೃಷ್ಟ್ವಾ ದೇವಾಪಿಃ ಸಂಶ್ರಿತೋ ವನಂ||

ಆಗ ಅತ್ಯಂತ ವ್ಯಥಿತನಾದ ಪುತ್ರಶೋಕಸಮನ್ವಿತನಾದ ಅವನು ಮರಣಹೊಂದಲು, ಅದನ್ನು ನೋಡಿ ದೇವಾಪಿಯು ವನವನ್ನು ಸೇರಿದನು.

05147027a ಬಾಹ್ಲೀಕೋ ಮಾತುಲಕುಲೇ ತ್ಯಕ್ತ್ವಾ ರಾಜ್ಯಂ ವ್ಯವಸ್ಥಿತಃ|

05147027c ಪಿತೃಭ್ರಾತೄನ್ಪರಿತ್ಯಜ್ಯ ಪ್ರಾಪ್ತವಾನ್ಪುರಮೃದ್ಧಿಮತ್||

ಬಾಹ್ಲೀಕನು ರಾಜ್ಯವನ್ನು ತ್ಯಜಿಸಿ ಅವನ ಸೋದರ ಮಾವನ ಕುಲದಲ್ಲಿ ನೆಲೆಸಿದನು. ತಂದೆ-ತಮ್ಮರನ್ನು ಪರಿತ್ಯಜಿಸಿ ಅಭಿವೃದ್ಧಿ ಹೊಂದಿದ ಪುರವನ್ನು ಪಡೆದನು.

05147028a ಬಾಹ್ಲೀಕೇನ ತ್ವನುಜ್ಞಾತಃ ಶಂತನುರ್ಲೋಕವಿಶ್ರುತಃ|

05147028c ಪಿತರ್ಯುಪರತೇ ರಾಜನ್ರಾಜಾ ರಾಜ್ಯಮಕಾರಯತ್||

ರಾಜನ್! ತಂದೆಯ ಮರಣದ ನಂತರ ಬಾಹ್ಲೀಕನು ಹೊರಟುಹೋಗಲು ಲೋಕವಿಶ್ರುತ ಶಂತನುವು ರಾಜನಾಗಿ ರಾಜ್ಯವನ್ನಾಳಿದನು.

05147029a ತಥೈವಾಹಂ ಮತಿಮತಾ ಪರಿಚಿಂತ್ಯೇಹ ಪಾಂಡುನಾ|

05147029c ಜ್ಯೇಷ್ಠಃ ಪ್ರಭ್ರಂಶಿತೋ ರಾಜ್ಯಾದ್ ಹೀನಾಂಗ ಇತಿ ಭಾರತ||

ಭಾರತ! ಹಾಗೆಯೇ ಜ್ಯೇಷ್ಠನಾದ ನಾನೂ ಕೂಡ ಹೀನಾಂಗನೆಂದು ಮತಿಮತನಾದ ಪಾಂಡುವಿನಿಂದ, ತುಂಬಾ ಆಲೋಚನೆಗಳ ನಂತರ, ರಾಜ್ಯದಿಂದ ಪರಿಭ್ರಂಷಿತನಾದೆ.

05147030a ಪಾಂಡುಸ್ತು ರಾಜ್ಯಂ ಸಂಪ್ರಾಪ್ತಃ ಕನೀಯಾನಪಿ ಸನ್ನೃಪಃ|

05147030c ವಿನಾಶೇ ತಸ್ಯ ಪುತ್ರಾಣಾಮಿದಂ ರಾಜ್ಯಮರಿಂದಮ|

05147030e ಮಯ್ಯಭಾಗಿನಿ ರಾಜ್ಯಾಯ ಕಥಂ ತ್ವಂ ರಾಜ್ಯಮಿಚ್ಚಸಿ||

ಕಿರಿಯವನಾಗಿದ್ದರೂ ಪಾಂಡುವು ರಾಜ್ಯವನ್ನು ಪಡೆದು ರಾಜನಾದನು. ಅರಿಂದಮ! ಅವನ ಮರಣದ ನಂತರ ಈ ರಾಜ್ಯವು ಅವನ ಮಕ್ಕಳದ್ದಾಯಿತು. ಈ ರಾಜ್ಯಕ್ಕೆ ನಾನೇ ಭಾಗಿಯಾಗಿರದಿರುವಾಗ ನೀನು ಹೇಗೆ ಅದನ್ನು ಬಯಸುತ್ತೀಯೆ?

05147031a ಯುಧಿಷ್ಠಿರೋ ರಾಜಪುತ್ರೋ ಮಹಾತ್ಮಾ

         ನ್ಯಾಯಾಗತಂ ರಾಜ್ಯಮಿದಂ ಚ ತಸ್ಯ|

05147031c ಸ ಕೌರವಸ್ಯಾಸ್ಯ ಜನಸ್ಯ ಭರ್ತಾ

         ಪ್ರಶಾಸಿತಾ ಚೈವ ಮಹಾನುಭಾವಃ||

ನ್ಯಾಯಗತವಾಗಿ ಈ ರಾಜ್ಯವು ರಾಜಪುತ್ರ, ಮಹಾತ್ಮ ಯುಧಿಷ್ಠಿರನದ್ದು. ಅವನು ಕೌರವ ಜನರ ಒಡೆಯ. ಆ ಮಹಾನುಭಾವನೇ ಇದನ್ನು ಆಳುವವನು.

05147032a ಸ ಸತ್ಯಸಂಧಃ ಸತತಾಪ್ರಮತ್ತಃ

         ಶಾಸ್ತ್ರೇ ಸ್ಥಿತೋ ಬಂಧುಜನಸ್ಯ ಸಾಧುಃ|

05147032c ಪ್ರಿಯಃ ಪ್ರಜಾನಾಂ ಸುಹೃದಾನುಕಂಪೀ

         ಜಿತೇಂದ್ರಿಯಃ ಸಾಧುಜನಸ್ಯ ಭರ್ತಾ||

ಅವನು ಸತ್ಯಸಂಧ. ಸತತವೂ ಅಪ್ರಮತ್ತನಾಗಿ, ಶಾಸ್ತ್ರಗಳಲ್ಲಿ ನೆಲೆಸಿದ್ದಾನೆ. ಬಂಧುಜನರ ಸಾಧು. ಪ್ರಜೆಗಳ ಪ್ರಿಯ. ಸುಹೃದಯರ ಅನುಕಂಪಿ. ಜಿತೇಂದ್ರಿಯ ಮತ್ತು ಸಾಧುಜನರ ನಾಯಕ.

05147033a ಕ್ಷಮಾ ತಿತಿಕ್ಷಾ ದಮ ಆರ್ಜವಂ ಚ

         ಸತ್ಯವ್ರತತ್ವಂ ಶ್ರುತಮಪ್ರಮಾದಃ|

05147033c ಭೂತಾನುಕಂಪಾ ಹ್ಯನುಶಾಸನಂ ಚ

         ಯುಧಿಷ್ಠಿರೇ ರಾಜಗುಣಾಃ ಸಮಸ್ತಾಃ||

ಕ್ಷಮೆ, ತಿತಿಕ್ಷಾ, ದಮ, ಆರ್ಜವ, ಸತ್ಯವ್ರತತ್ವ, ಶ್ರುತ, ಅಪ್ರಮಾದ, ಭೂತಾನುಕಂಪನೆ, ಅನುಶಾಸನ ಈ ಸಮಸ್ತ ರಾಜಗುಣಗಳೂ ಯುಧಿಷ್ಠಿರನಲ್ಲಿವೆ.

05147034a ಅರಾಜಪುತ್ರಸ್ತ್ವಮನಾರ್ಯವೃತ್ತೋ

         ಲುಬ್ಧಸ್ತಥಾ ಬಂಧುಷು ಪಾಪಬುದ್ಧಿಃ|

05147034c ಕ್ರಮಾಗತಂ ರಾಜ್ಯಮಿದಂ ಪರೇಷಾಂ

         ಹರ್ತುಂ ಕಥಂ ಶಕ್ಷ್ಯಸಿ ದುರ್ವಿನೀತಃ||

ರಾಜನ ಮಗನಲ್ಲದ, ಅನಾರ್ಯನಂತೆ ನಡೆದುಕೊಳ್ಳುವ, ಲುಬ್ಧನಾದ, ಬಂಧುಗಳಲ್ಲಿ ಪಾಪಬುದ್ಧಿಯನ್ನು ತೋರಿಸುವ, ದುರ್ವಿನೀತನಾದ ನೀನು ಹೇಗೆ ತಾನೇ ಕ್ರಮಾಗತವಾಗಿ ಬೇರೆಯವರದ್ದಾಗಿರುವ ಈ ರಾಜ್ಯವನ್ನು ಅಪಹರಿಸಲು ಸಾಧ್ಯ?

05147035a ಪ್ರಯಚ್ಚ ರಾಜ್ಯಾರ್ಧಮಪೇತಮೋಹಃ

         ಸವಾಹನಂ ತ್ವಂ ಸಪರಿಚ್ಚದಂ ಚ|

05147035c ತತೋಽವಶೇಷಂ ತವ ಜೀವಿತಸ್ಯ

         ಸಹಾನುಜಸ್ಯೈವ ಭವೇನ್ನರೇಂದ್ರ||

ಹುಚ್ಚನ್ನು ತೊರೆದು ವಾಹನ ಪರಿಚಾರಕರೊಂದಿಗೆ ಅರ್ಧರಾಜ್ಯವನ್ನು ಬಿಟ್ಟುಕೊಡು. ನರೇಂದ್ರ! ಹಾಗೆ ಮಾಡಿದರೆ ಮಾತ್ರ ನೀನು ಮತ್ತು ನಿನ್ನ ಅನುಜರು ಉಳಿದ ಆಯುಸ್ಸನ್ನು ಜೀವಿಸಬಲ್ಲಿರಿ!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಧೃತರಾಷ್ಟ್ರವಾಕ್ಯಕಥನೇ ಸಪ್ತಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ಧೃತರಾಷ್ಟ್ರವಾಕ್ಯಕಥನದಲ್ಲಿ ನೂರಾನಲ್ವತ್ತೇಳನೆಯ ಅಧ್ಯಾಯವು.

Image result for indian motifs

Comments are closed.