Udyoga Parva: Chapter 12

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೨

ಕುಪಿತನಾದ ನಹುಷನನ್ನು ಪ್ರಸನ್ನಗೊಳಿಸಲು “ನೀನು ಇಚ್ಛಿಸಿದಂತೆ ಇಂದ್ರಾಣಿಯನ್ನು ಕರೆತರುತ್ತೇವೆ” ಎಂದು ದೇವತೆಗಳು ಭರವಸೆಯನ್ನು ನೀಡಿದುದು (೧-೯). ಇಂದ್ರಾಣಿಯನ್ನು ಬಿಟ್ಟುಕೊಡೆಂದು ದೇವತೆಗಳು ಬೃಹಸ್ಪತಿಯಲ್ಲಿ ಕೇಳಲು, ಅವನು ಅದಕ್ಕೆ ಒಪ್ಪಿಕೊಳ್ಳದೇ, ಶಚಿಯು ನಹುಷನಿಂದ ಕೆಲವೇ ಸಮಯವನ್ನು ಯಾಚಿಸಲಿ ಇಂದು ಸೂಚಿಸಿದುದು (೧೦-೨೬). ದೇವತೆಗಳ ಪ್ರಾರ್ಥನೆಯಂತೆ ಶಚಿಯು ನಹುಷನನ್ನು ಭೇಟಿಯಾದುದು (೨೭-೩೨).

05012001 ಶಲ್ಯ ಉವಾಚ|

05012001a ಕ್ರುದ್ಧಂ ತು ನಹುಷಂ ಜ್ಞಾತ್ವಾ ದೇವಾಃ ಸರ್ಷಿಪುರೋಗಮಾಃ|

05012001c ಅಬ್ರುವನ್ದೇವರಾಜಾನಂ ನಹುಷಂ ಘೋರದರ್ಶನಂ||

ಶಲ್ಯನು ಹೇಳಿದನು: “ನಹುಷನು ಸಿಟ್ಟಾಗಿದ್ದಾನೆಂದು ತಿಳಿದ ದೇವತೆಗಳು ಋಷಿಗಳನ್ನು ಮುಂದಿಟ್ಟುಕೊಂಡು ಘೋರವಾಗಿ ಕಾಣುತ್ತಿದ್ದ ದೇವರಾಜ ನಹುಷನಿಗೆ ಹೇಳಿದರು:

05012002a ದೇವರಾಜ ಜಹಿ ಕ್ರೋಧಂ ತ್ವಯಿ ಕ್ರುದ್ಧೇ ಜಗದ್ವಿಭೋ|

05012002c ತ್ರಸ್ತಂ ಸಾಸುರಗಂಧರ್ವಂ ಸಕಿನ್ನರಮಹೋರಗಂ||

“ದೇವರಾಜ! ಕ್ರೋಧವನ್ನು ತ್ಯಜಿಸು. ವಿಭೋ! ನಿನ್ನ ಸಿಟ್ಟಿನಿಂದ ಅಸುರ, ಗಂಧರ್ವ, ಮಹೋರಗಗಳೊಂದಿಗೆ ಜಗತ್ತೇ ಕಂಪಿಸುತ್ತಿದೆ.

05012003a ಜಹಿ ಕ್ರೋಧಮಿಮಂ ಸಾಧೋ ನ ಕ್ರುಧ್ಯಂತಿ ಭವದ್ವಿಧಾಃ|

05012003c ಪರಸ್ಯ ಪತ್ನೀ ಸಾ ದೇವೀ ಪ್ರಸೀದಸ್ವ ಸುರೇಶ್ವರ||

ಈ ಕ್ರೋಧವನ್ನು ಬಿಡು. ನಿನ್ನಂಥಹ ಸಾಧುಗಳು ಸಿಟ್ಟಾಗುವುದಿಲ್ಲ. ಸುರೇಶ್ವರ! ಆ ದೇವಿಯು ಪರನ ಪತ್ನಿ. ಪ್ರಸೀದನಾಗು.

05012004a ನಿವರ್ತಯ ಮನಃ ಪಾಪಾತ್ಪರದಾರಾಭಿಮರ್ಶನಾತ್|

05012004c ದೇವರಾಜೋಽಸಿ ಭದ್ರಂ ತೇ ಪ್ರಜಾ ಧರ್ಮೇಣ ಪಾಲಯ||

ಇನ್ನೊಬ್ಬನ ಪತ್ನಿಯನ್ನು ಆಸೆಪಡುವ ಈ ಪಾಪದಿಂದ ನಿನ್ನ ಮನಸ್ಸನ್ನು ಹಿಂದೆ ತೆಗೆದುಕೋ. ನಿನಗೆ ಮಂಗಳವಾಗಲಿ! ದೇವರಾಜನಾಗಿದ್ದೀಯೆ. ಪ್ರಜೆಗಳನ್ನು ಧರ್ಮದಿಂದ ಪಾಲಿಸು!”

05012005a ಏವಮುಕ್ತೋ ನ ಜಗ್ರಾಹ ತದ್ವಚಃ ಕಾಮಮೋಹಿತಃ|

05012005c ಅಥ ದೇವಾನುವಾಚೇದಮಿಂದ್ರಂ ಪ್ರತಿ ಸುರಾಧಿಪಃ||

ಹೇಳಿದ ಈ ಮಾತುಗಳು ಕಾಮಮೋಹಿತನಾದ ಅವನಿಗೆ ಹಿಡಿಸಲಿಲ್ಲ. ಆಗ ಸುರಾಧಿಪನು ಇಂದ್ರನ ಕುರಿತಾಗಿ ದೇವತೆಗಳಿಗೆ ಹೀಗೆ ಹೇಳಿದನು:

05012006a ಅಹಲ್ಯಾ ಧರ್ಷಿತಾ ಪೂರ್ವಮೃಷಿಪತ್ನೀ ಯಶಸ್ವಿನೀ|

05012006c ಜೀವತೋ ಭರ್ತುರಿಂದ್ರೇಣ ಸ ವಃ ಕಿಂ ನ ನಿವಾರಿತಃ|

“ಹಿಂದೆ ಋಷಿಪತ್ನೀ ಯಶಸ್ವಿನೀ ಅಹಲ್ಯೆಯನ್ನು ಅವಳ ಪತಿಯು ಜೀವಿಸಿರುವಾಗಲೇ ಅವನು ಬಲಾತ್ಕರಿಸಿದ್ದನು. ಆಗ ನೀವು ಅವನನ್ನು ಏಕೆ ತಡೆಯಲಿಲ್ಲ?

05012007a ಬಹೂನಿ ಚ ನೃಶಂಸಾನಿ ಕೃತಾನೀಂದ್ರೇಣ ವೈ ಪುರಾ|

05012007c ವೈಧರ್ಮ್ಯಾಣ್ಯುಪಧಾಶ್ಚೈವ ಸ ವಃ ಕಿಂ ನ ನಿವಾರಿತಃ||

ಹಿಂದೆ ಇಂದ್ರನು ಬಹಳಷ್ಟು ಧರ್ಮಕ್ಕೆ ವಿರುದ್ಧವಾದ ಮೋಸದ, ಒಳ್ಳೆಯದಲ್ಲದ ಕೃತ್ಯಗಳನ್ನು ಮಾಡಿದ್ದಾನೆ. ಆಗ ಅವನನ್ನು ಏಕೆ ತಡೆಯಲಿಲ್ಲ?

05012008a ಉಪತಿಷ್ಠತು ಮಾಂ ದೇವೀ ಏತದಸ್ಯಾ ಹಿತಂ ಪರಂ|

05012008c ಯುಷ್ಮಾಕಂ ಚ ಸದಾ ದೇವಾಃ ಶಿವಮೇವಂ ಭವಿಷ್ಯತಿ|

ದೇವಿಯು ನನ್ನ ಬಳಿ ಬರಲಿ. ಅವಳಿಗೆ ಇದೇ ಪರಮ ಹಿತವಾದುದು. ದೇವತೆಗಳೇ! ಇದು ನಿಮಗೂ ಕೂಡ ಮಂಗಳಕರವಾಗುತ್ತದೆ!”

05012009 ದೇವಾ ಊಚುಃ|

05012009a ಇಂದ್ರಾಣೀಮಾನಯಿಷ್ಯಾಮೋ ಯಥೇಚ್ಚಸಿ ದಿವಸ್ಪತೇ|

05012009c ಜಹಿ ಕ್ರೋಧಮಿಮಂ ವೀರ ಪ್ರೀತೋ ಭವ ಸುರೇಶ್ವರ||

ದೇವತೆಗಳು ಹೇಳಿದರು: “ದಿವಸ್ಪತೇ! ನೀನು ಇಚ್ಛಿಸಿದಂತೆ ಇಂದ್ರಾಣಿಯನ್ನು ಕರೆತರುತ್ತೇವೆ. ವೀರ! ಸುರೇಶ್ವರ! ಈ ಕ್ರೋಧವನ್ನು ಬಿಡು. ಪ್ರೀತನಾಗು!””

05012010 ಶಲ್ಯ ಉವಾಚ|

05012010a ಇತ್ಯುಕ್ತ್ವಾ ತೇ ತದಾ ದೇವಾ ಋಷಿಭಿಃ ಸಹ ಭಾರತ|

05012010c ಜಗ್ಮುರ್ಬೃಹಸ್ಪತಿಂ ವಕ್ತುಮಿಂದ್ರಾಣೀಂ ಚಾಶುಭಂ ವಚಃ||

ಶಲ್ಯನು ಹೇಳಿದನು: “ಭಾರತ! ಹೀಗೆ ಹೇಳಿ ದೇವತೆಗಳು ಋಷಿಗಳೊಂದಿಗೆ ಇಂದ್ರಾಣಿಗೆ ಅಶುಭವಾದ ಮಾತುಗಳನ್ನು ಹೇಳಲು ಬೃಹಸ್ಪತಿಯಲ್ಲಿಗೆ ಹೋದರು.

05012011a ಜಾನೀಮಃ ಶರಣಂ ಪ್ರಾಪ್ತಮಿಂದ್ರಾಣೀಂ ತವ ವೇಶ್ಮನಿ|

05012011c ದತ್ತಾಭಯಾಂ ಚ ವಿಪ್ರೇಂದ್ರ ತ್ವಯಾ ದೇವರ್ಷಿಸತ್ತಮ||

“ವಿಪ್ರೇಂದ್ರ! ದೇವರ್ಷಿಸತ್ತಮ! ಇಂದ್ರಾಣಿಯು ನಿನ್ನ ಮನೆಯಲ್ಲಿ ಶರಣು ಬಂದಿದ್ದಾಳೆಂದೂ ನೀನು ಅವಳಿಗೆ ಅಭಯವನ್ನಿತ್ತಿದ್ದೀಯೆ ಎಂದೂ ತಿಳಿದಿದ್ದೇವೆ.

05012012a ತೇ ತ್ವಾಂ ದೇವಾಃ ಸಗಂಧರ್ವಾ ಋಷಯಶ್ಚ ಮಹಾದ್ಯುತೇ|

05012012c ಪ್ರಸಾದಯಂತಿ ಚೇಂದ್ರಾಣೀ ನಹುಷಾಯ ಪ್ರದೀಯತಾಂ||

ಆದರೆ ಮಹಾದ್ಯುತೇ! ಗಂಧರ್ವ ಋಷಿಗಳೊಂದಿಗೆ ನಾವು ದೇವತೆಗಳು ನಹುಷನಿಗಾಗಿ ಇಂದ್ರಾಣಿಯನ್ನು ಬಿಟ್ಟುಕೊಡಲು ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ.

05012013a ಇಂದ್ರಾದ್ವಿಶಿಷ್ಟೋ ನಹುಷೋ ದೇವರಾಜೋ ಮಹಾದ್ಯುತಿಃ|

05012013c ವೃಣೋತ್ವಿಯಂ ವರಾರೋಹಾ ಭರ್ತೃತ್ವೇ ವರವರ್ಣಿನೀ||

ಮಹಾದ್ಯುತಿ ದೇವರಾಜ ನಹುಷನು ಇಂದ್ರನಿಗಿಂತಲೂ ವಿಶಿಷ್ಟನು. ವರವರ್ಣಿನೀ ವರಾರೋಹೆಯು ಅವನನ್ನು ಪತಿಯನ್ನಾಗಿ ವರಿಸಲಿ.”

05012014a ಏವಮುಕ್ತೇ ತು ಸಾ ದೇವೀ ಬಾಷ್ಪಮುತ್ಸೃಜ್ಯ ಸಸ್ವರಂ|

05012014c ಉವಾಚ ರುದತೀ ದೀನಾ ಬೃಹಸ್ಪತಿಮಿದಂ ವಚಃ||

ಇದನ್ನು ಕೇಳಿದ ಆ ದೇವಿಯು ಕಣ್ಣೀರು ಸುರಿಸಿ ಜೋರಾಗಿ ರೋದಿಸುತ್ತಾ ದೀನಳಾಗಿ ಬೃಹಸ್ಪತಿಗೆ ಹೇಳಿದಳು:

05012015a ನಾಹಮಿಚ್ಚಾಮಿ ನಹುಷಂ ಪತಿಮನ್ವಾಸ್ಯ ತಂ ಪ್ರಭುಂ|

05012015c ಶರಣಾಗತಾಸ್ಮಿ ತೇ ಬ್ರಹ್ಮಂಸ್ತ್ರಾಹಿ ಮಾಂ ಮಹತೋ ಭಯಾತ್||

“ಬ್ರಹ್ಮನ್! ಪ್ರಭು ನಹುಷನನ್ನು ನನ್ನ ಪತಿಯನ್ನಾಗಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನಿನ್ನ ಶರಣು ಬಂದಿದ್ದೇನೆ. ಈ ಮಹಾಭಯದಿಂದ ನನ್ನನ್ನು ಪಾರುಮಾಡು!”

05012016 ಬೃಹಸ್ಪತಿರುವಾಚ|

05012016a ಶರಣಾಗತಾಂ ನ ತ್ಯಜೇಯಮಿಂದ್ರಾಣಿ ಮಮ ನಿಶ್ಚಿತಂ|

05012016c ಧರ್ಮಜ್ಞಾಂ ಧರ್ಮಶೀಲಾಂ ಚ ನ ತ್ಯಜೇ ತ್ವಾಮನಿಂದಿತೇ||

ಬೃಹಸ್ಪತಿಯು ಹೇಳಿದನು: “ಇಂದ್ರಾಣಿ! ಶರಣಾಗತರನ್ನು ತ್ಯಜಿಸುವುದಿಲ್ಲ. ಇದು ನನ್ನ ನಿಶ್ಚಯ. ಅನಿಂದಿತೇ! ಧರ್ಮಜ್ಞೆ ಧರ್ಮಶೀಲೆ ನಿನ್ನನ್ನು ನಾನು ತ್ಯಜಿಸುವುದಿಲ್ಲ.

05012017a ನಾಕಾರ್ಯಂ ಕರ್ತುಮಿಚ್ಚಾಮಿ ಬ್ರಾಹ್ಮಣಃ ಸನ್ವಿಶೇಷತಃ|

05012017c ಶ್ರುತಧರ್ಮಾ ಸತ್ಯಶೀಲೋ ಜಾನನ್ಧರ್ಮಾನುಶಾಸನಂ||

ಅದರಲ್ಲೂ ಬ್ರಾಹ್ಮಣನಾಗಿರುವ, ಧರ್ಮವನ್ನು ಕೇಳಿ ತಿಳಿದುಕೊಂಡಿರುವ, ಸತ್ಯಶೀಲನಾಗಿರುವ, ಧರ್ಮದ ಅನುಶಾಸನವನ್ನು ತಿಳಿದಿರುವ ನಾನು ಅಕಾರ್ಯವನ್ನು ಮಾಡಲು ಬಯಸುವುದಿಲ್ಲ.

05012018a ನಾಹಮೇತತ್ಕರಿಷ್ಯಾಮಿ ಗಚ್ಚಧ್ವಂ ವೈ ಸುರೋತ್ತಮಾಃ|

05012018c ಅಸ್ಮಿಂಶ್ಚಾರ್ಥೇ ಪುರಾ ಗೀತಂ ಬ್ರಹ್ಮಣಾ ಶ್ರೂಯತಾಮಿದಂ||

ಸುರೋತ್ತಮರೇ! ನಾನು ಇದನ್ನು ಮಾಡುವುದಿಲ್ಲ! ಹೊರಟು ಹೋಗಿ! ಇದರ ಕುರಿತು ಹಿಂದಿನ ಬ್ರಹ್ಮನ ಈ ಗೀತೆಯನ್ನು ಕೇಳಬೇಕು.

05012019a ನ ತಸ್ಯ ಬೀಜಂ ರೋಹತಿ ಬೀಜಕಾಲೇ|

        ನ ಚಾಸ್ಯ ವರ್ಷಂ ವರ್ಷತಿ ವರ್ಷಕಾಲೇ|

05012019c ಭೀತಂ ಪ್ರಪನ್ನಂ ಪ್ರದದಾತಿ ಶತ್ರವೇ|

        ನ ಸೋಽಂತರಂ ಲಭತೇ ತ್ರಾಣಮಿಚ್ಚನ್||

ಭೀತರಾಗಿ ಶರಣು ಬಂದಿರುವವರನ್ನು ಶತ್ರುಗಳಿಗೆ ಕೊಡುವವನು ತನಗೇ ಬೇಕೆಂದಾಗ ರಕ್ಷಣೆಯನ್ನು ಪಡೆಯುವುದಿಲ್ಲ. ಅವನ ಬೀಜವು ಬೀಜಕಾಲದಲ್ಲಿ ಬೆಳೆಯುವುದಿಲ್ಲ. ಮತ್ತು ಅಂಥಹವನಲ್ಲಿ ಮಳೆಗಾಲದಲ್ಲಿಯೂ ಮಳೆಯು ಬೀಳುವುದಿಲ್ಲ.

05012020a ಮೋಘಮನ್ನಂ ವಿಂದತಿ ಚಾಪ್ಯಚೇತಾಃ|

        ಸ್ವರ್ಗಾಲ್ಲೋಕಾದ್ಭ್ರಶ್ಯತಿ ನಷ್ಟಚೇಷ್ಟಃ|

05012020c ಭೀತಂ ಪ್ರಪನ್ನಂ ಪ್ರದದಾತಿ ಯೋ ವೈ|

        ನ ತಸ್ಯ ಹವ್ಯಂ ಪ್ರತಿಗೃಹ್ಣಂತಿ ದೇವಾಃ||

ಭೀತರಾಗಿ ಶರಣು ಬಂದಿರುವವರನ್ನು ಬಿಟ್ಟುಕೊಡುವವನ ಹವಿಸ್ಸನ್ನು ದೇವತೆಗಳು ಸ್ವೀಕರಿಸುವುದಿಲ್ಲ. ಅವನು ಹಿಡಿಯುವ ಯಾವುದೂ ಯಶಸ್ವಿಯಾಗುವುದಿಲ್ಲ. ಚೇಷ್ಟೆಗಳನ್ನು ಕಳೆದುಕೊಂಡು ಅವನು ಸ್ವರ್ಗಲೋಕದಿಂದ ಬೀಳುತ್ತಾನೆ.

05012021a ಪ್ರಮೀಯತೇ ಚಾಸ್ಯ ಪ್ರಜಾ ಹ್ಯಕಾಲೇ|

        ಸದಾ ವಿವಾಸಂ ಪಿತರೋಽಸ್ಯ ಕುರ್ವತೇ|

05012021c ಭೀತಂ ಪ್ರಪನ್ನಂ ಪ್ರದದಾತಿ ಶತ್ರವೇ|

        ಸೇಂದ್ರಾ ದೇವಾಃ ಪ್ರಹರಂತ್ಯಸ್ಯ ವಜ್ರಂ|

ಭೀತರಾಗಿ ಶರಣು ಬಂದಿರುವವರನ್ನು ಶತ್ರುಗಳಿಗೆ ಕೊಡುವವನ ಮಕ್ಕಳು ಅಕಾಲದಲ್ಲಿ ಸಾಯುತ್ತಾರೆ. ಅವನ ಪಿತ್ರುಗಳು ಸದಾ ಜಗಳವಾಡುತ್ತಾರೆ. ಇಂದ್ರನೊಂದಿಗೆ ದೇವತೆಗಳು ಅವನ ಮೇಲೆ ವಜ್ರಪ್ರಹಾರ ಮಾಡುತ್ತಾರೆ.

05012022a ಏತದೇವಂ ವಿಜಾನನ್ವೈ ನ ದಾಸ್ಯಾಮಿ ಶಚೀಮಿಮಾಂ|

05012022c ಇಂದ್ರಾಣೀಂ ವಿಶ್ರುತಾಂ ಲೋಕೇ ಶಕ್ರಸ್ಯ ಮಹಿಷೀಂ ಪ್ರಿಯಾಂ|

ಇದನ್ನು ತಿಳಿದ ನಾನು ಇಂದ್ರಾಣೀ, ಶಕ್ರನ ಪ್ರಿಯ ಮಹಿಷಿಯೆಂದು ಲೋಕಗಳಲ್ಲಿ ವಿಶ್ರುತಳಾದ ಈ ಶಚಿಯನ್ನು ಕೊಡುವುದಿಲ್ಲ.

05012023a ಅಸ್ಯಾ ಹಿತಂ ಭವೇದ್ಯಚ್ಚ ಮಮ ಚಾಪಿ ಹಿತಂ ಭವೇತ್|

05012023c ಕ್ರಿಯತಾಂ ತತ್ಸುರಶ್ರೇಷ್ಠಾ ನ ಹಿ ದಾಸ್ಯಾಮ್ಯಹಂ ಶಚೀಂ||

ಸುರಶ್ರೇಷ್ಠರೇ! ಇವಳಿಗೆ ಹಿತವಾಗುವ ನನಗೂ ಹಿತವಾಗುವ ಕಾರ್ಯವನ್ನು ಮಾಡಿ. ಶಚಿಯನ್ನು ನಾನು ಕೊಡುವುದೇ ಇಲ್ಲ!””

05012024 ಶಲ್ಯ ಉವಾಚ|

05012024a ಅಥ ದೇವಾಸ್ತಮೇವಾಹುರ್ಗುರುಮಂಗಿರಸಾಂ ವರಂ|

05012024c ಕಥಂ ಸುನೀತಂ ತು ಭವೇನ್ಮಂತ್ರಯಸ್ವ ಬೃಹಸ್ಪತೇ||

ಶಲ್ಯನು ಹೇಳಿದನು: “ಆಗ ದೇವತೆಗಳು ಅಂಗಿರಸರಲ್ಲಿ ಶ್ರೇಷ್ಠ ಗುರುವಿಗೆ ಹೇಳಿದರು: “ಬೃಹಸ್ಪತೇ! ಹೇಗೆ ಒಳಿತನ್ನು ತರಬಹುದು ಎಂದು ನೀನೇ ಆಲೋಚಿಸು.”

05012025 ಬೃಹಸ್ಪತಿರುವಾಚ|

05012025a ನಹುಷಂ ಯಾಚತಾಂ ದೇವೀ ಕಿಂ ಚಿತ್ಕಾಲಾಂತರಂ ಶುಭಾ|

05012025c ಇಂದ್ರಾಣೀಹಿತಮೇತದ್ಧಿ ತಥಾಸ್ಮಾಕಂ ಭವಿಷ್ಯತಿ||

ಬೃಹಸ್ಪತಿಯು ಹೇಳಿದನು: “ಈ ಶುಭೆ ದೇವಿ ಇಂದ್ರಾಣಿಯು ನಹುಷನಲ್ಲಿ ಕೆಲವೇ ಸಮಯವನ್ನು ಯಾಚಿಸಲಿ. ಇದರಿಂದ ಇಂದ್ರಾಣಿಗೂ ನಮಗೂ ಹಿತವಾಗುತ್ತದೆ.

05012026a ಬಹುವಿಘ್ನಕರಃ ಕಾಲಃ ಕಾಲಃ ಕಾಲಂ ನಯಿಷ್ಯತಿ|

05012026c ದರ್ಪಿತೋ ಬಲವಾಂಶ್ಚಾಪಿ ನಹುಷೋ ವರಸಂಶ್ರಯಾತ್||

ಕಾಲವು ಬಹಳಷ್ಟು ವಿಘ್ನಗಳನ್ನುಂಟುಮಾಡುತ್ತದೆ. ಕಾಲವು ಕಾಲವನ್ನು ತಳ್ಳುತ್ತದೆ. ಬಲವಾನ್ ನಹುಷನು ವರವನ್ನಾಶ್ರಯಿಸಿ ದರ್ಪಿತನಾಗಿದ್ದಾನೆ.””

05012027 ಶಲ್ಯ ಉವಾಚ|

05012027a ತತಸ್ತೇನ ತಥೋಕ್ತೇ ತು ಪ್ರೀತಾ ದೇವಾಸ್ತಮಬ್ರುವನ್|

05012027c ಬ್ರಹ್ಮನ್ಸಾಧ್ವಿದಮುಕ್ತಂ ತೇ ಹಿತಂ ಸರ್ವದಿವೌಕಸಾಂ|

05012027e ಏವಮೇತದ್ದ್ವಿಜಶ್ರೇಷ್ಠ ದೇವೀ ಚೇಯಂ ಪ್ರಸಾದ್ಯತಾಂ||

ಶಲ್ಯನು ಹೇಳಿದನು: “ಅವನು ಹಾಗೆ ಹೇಳಲು ಪ್ರೀತರಾದ ದೇವತೆಗಳು ಅವನಿಗೆ ಹೇಳಿದರು: “ಬ್ರಹ್ಮನ್! ಒಳ್ಳೆಯದನ್ನೇ ಹೇಳಿದ್ದೀಯೆ. ಇದು ಎಲ್ಲ ದಿವೌಕಸರಿಗೂ ಹಿತವಾದುದು. ದ್ವಿಜಶ್ರೇಷ್ಠ! ಇದು ಹೀಗೆಯೇ ಆಗಲಿ. ಈ ದೇವಿಯನ್ನು ಸಂತವಿಸು.”

05012028a ತತಃ ಸಮಸ್ತಾ ಇಂದ್ರಾಣೀಂ ದೇವಾಃ ಸಾಗ್ನಿಪುರೋಗಮಾಃ|

05012028c ಊಚುರ್ವಚನಮವ್ಯಗ್ರಾ ಲೋಕಾನಾಂ ಹಿತಕಾಮ್ಯಯಾ||

ಆಗ ಅಗ್ನಿಯನ್ನು ಮುಂದಿಟ್ಟುಕೊಂಡು ಸಮಸ್ತ ದೇವತೆಗಳೂ ಲೋಕಗಳ ಹಿತವನ್ನು ಬಯಸಿ ಇಂದ್ರಾಣಿಗೆ ಮೆಲ್ಲನೆ ಹೇಳಿದರು:

05012029a ತ್ವಯಾ ಜಗದಿದಂ ಸರ್ವಂ ಧೃತಂ ಸ್ಥಾವರಜಂಗಮಂ|

05012029c ಏಕಪತ್ನ್ಯಸಿ ಸತ್ಯಾ ಚ ಗಚ್ಚಸ್ವ ನಹುಷಂ ಪ್ರತಿ||

“ಸ್ಥಾವರ-ಜಂಗಮಗಳ ಈ ಜಗತ್ತನ್ನು ನೀನು ಪೊರೆಯುತ್ತಿರುವೆ. ನೀನು ಪತಿವ್ರತೆ ಮುತ್ತು ಸತ್ಯೆ. ನಹುಷನಲ್ಲಿಗೆ ಹೋಗು.

05012030a ಕ್ಷಿಪ್ರಂ ತ್ವಾಮಭಿಕಾಮಶ್ಚ ವಿನಶಿಷ್ಯತಿ ಪಾರ್ಥಿವಃ|

05012030c ನಹುಷೋ ದೇವಿ ಶಕ್ರಶ್ಚ ಸುರೈಶ್ವರ್ಯಮವಾಪ್ಸ್ಯತಿ||

ನಿನ್ನನ್ನು ಅಭಿಕಾಮಿಸುವ ಆ ಪಾರ್ಥಿವ ನಹುಷನು ಬೇಗನೇ ವಿನಾಶಗೊಳ್ಳುತ್ತಾನೆ. ದೇವೀ! ಶಕ್ರನು ಸುರೈಶ್ವರ್ಯವನ್ನು ಪುನಃ ಪಡೆಯುತ್ತಾನೆ.”

05012031a ಏವಂ ವಿನಿಶ್ಚಯಂ ಕೃತ್ವಾ ಇಂದ್ರಾಣೀ ಕಾರ್ಯಸಿದ್ಧಯೇ|

05012031c ಅಭ್ಯಗಚ್ಚತ ಸವ್ರೀಡಾ ನಹುಷಂ ಘೋರದರ್ಶನಂ||

ಈ ರೀತಿಯ ನಿಶ್ಚಯ ಮಾಡಿಕೊಂಡು ಇಂದ್ರಾಣಿಯು ಕಾರ್ಯಸಿದ್ಧಿಗಾಗಿ ನಾಚಿಕೊಂಡವಳಂತೆ ಘೋರದರ್ಶನ ನಹುಷನಲ್ಲಿಗೆ ಹೋದಳು.

05012032a ದೃಷ್ಟ್ವಾ ತಾಂ ನಹುಷಶ್ಚಾಪಿ ವಯೋರೂಪಸಮನ್ವಿತಾಂ|

05012032c ಸಮಹೃಷ್ಯತ ದುಷ್ಟಾತ್ಮಾ ಕಾಮೋಪಹತಚೇತನಃ||

ಕಾಮದಿಂದ ಚೇತನವನ್ನು ಕಳೆದುಕೊಂಡ ಆ ದುಷ್ಟಾತ್ಮ ನಹುಷನಾದರೋ ವಯೋರೂಪಸಮನ್ವಿತಳಾದ ಅವಳನ್ನು ಕಂಡು ಸಂತೋಷಭರಿತನಾದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಇಂದ್ರಾಣೀಕಾಲಾವಧಿಯಾಚನೇ ದ್ವಾದಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಇಂದ್ರಾಣೀಕಾಲಾವಧಿಯಾಚನೆಯಲ್ಲಿ ಹನ್ನೆರಡನೆಯ ಅಧ್ಯಾಯವು|

Image result for flowers against white background

Comments are closed.