Shanti Parva: Chapter 85

ಶಾಂತಿ ಪರ್ವ: ರಾಜಧರ್ಮ ಪರ್ವ

೮೫

ಸಾಂತ್ವನದ ಮಹತ್ವವನ್ನು ಪ್ರತಿಪಾದಿಸುವ ಶಕ್ರ-ಬೃಹಸ್ಪತಿ ಸಂವಾದ (೧-೧೧).

12085001 ಭೀಷ್ಮ ಉವಾಚ|

12085001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12085001c ಬೃಹಸ್ಪತೇಶ್ಚ ಸಂವಾದಂ ಶಕ್ರಸ್ಯ ಚ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಬೃಹಸ್ಪತಿಯೊಡನೆ ಶಕ್ರನ ಸಂವಾದವನ್ನು ಉದಾಹರಿಸುತ್ತಾರೆ.

12085002 ಶಕ್ರ ಉವಾಚ|

12085002a ಕಿಂ ಸ್ವಿದೇಕಪದಂ ಬ್ರಹ್ಮನ್ಪುರುಷಃ ಸಮ್ಯಗಾಚರನ್|

12085002c ಪ್ರಮಾಣಂ ಸರ್ವಭೂತಾನಾಂ ಯಶಶ್ಚೈವಾಪ್ನುಯಾನ್ಮಹತ್||

ಶಕ್ರನು ಹೇಳಿದನು: “ಬ್ರಹ್ಮನ್! ಪುರುಷನು ಯಾವುದನ್ನು ಚೆನ್ನಾಗಿ ಆಚರಿಸಿ ಸರ್ವಪ್ರಾಣಿಗಳಿಗೂ ಪ್ರಿಯನಾಗುವನೋ ಮತ್ತು ಶಾಶ್ವತ ಮಹಾ ಯಶಸ್ಸನ್ನು ಗಳಿಸುವನೋ ಅಂಥಹ ಒಂದು ಪದವು ಯಾವುದಿರಬಹುದು?”

12085003 ಬೃಹಸ್ಪತಿರುವಾಚ|

12085003a ಸಾಂತ್ವಮೇಕಪದಂ ಶಕ್ರ ಪುರುಷಃ ಸಮ್ಯಗಾಚರನ್|

12085003c ಪ್ರಮಾಣಂ ಸರ್ವಭೂತಾನಾಂ ಯಶಶ್ಚೈವಾಪ್ನುಯಾನ್ಮಹತ್||

ಬೃಹಸ್ಪತಿಯು ಹೇಳಿದನು: “ಶಕ್ರ! ’ಸಾಂತ್ವನ’ ಎನ್ನುವುದೇ ಆ ಒಂದು ಪದವು ಯಾವುದರನ್ನು ಚೆನ್ನಾಗಿ ಆಚರಿಸುವುದರಿಂದ ಪುರುಷನು ಸರ್ವಪ್ರಾಣಿಗಳ ಪ್ರಿಯನಾಗುತ್ತಾನೆ ಮತ್ತು ಶಾಶ್ವತ ಮಹಾಯಶಸ್ಸನ್ನು ಗಳಿಸುತ್ತಾನೆ.

12085004a ಏತದೇಕಪದಂ ಶಕ್ರ ಸರ್ವಲೋಕಸುಖಾವಹಮ್|

12085004c ಆಚರನ್ಸರ್ವಭೂತೇಷು ಪ್ರಿಯೋ ಭವತಿ ಸರ್ವದಾ||

ಶಕ್ರ! ಈ ಒಂದು ಪದವೇ ಸರ್ವಲೋಕಗಳಿಗೂ ಸುಖದಾಯಕವಾಗಿದೆ. ಎಲ್ಲಪ್ರಾಣಿಗಳೊಡನೆಯೂ ಅದೊಂದನ್ನು ಆಚರಿಸಿದ್ದೇ ಆದರೆ ಅಂಥವನು ಸರ್ವದಾ ಪ್ರಿಯನಾಗುತ್ತಾನೆ.

12085005a ಯೋ ಹಿ ನಾಭಾಷತೇ ಕಿಂ ಚಿತ್ಸತತಂ ಭ್ರುಕುಟೀಮುಖಃ|

12085005c ದ್ವೇಷ್ಯೋ ಭವತಿ ಭೂತಾನಾಂ ಸ ಸಾಂತ್ವಮಿಹ ನಾಚರನ್||

ಸತತವೂ ಮುಖಗಂಟಿಕ್ಕಿಕೊಂಡು ಏನನ್ನೂ ಮಾತನಾಡದವನು ಸಾಂತ್ವನವನ್ನು ಆಚರಿಸದೇ ಇರುವುದರಿಂದ ಸರ್ವಜೀವಿಗಳಿಗಳ ದ್ವೇಷಿಯಾಗುತ್ತಾನೆ.

12085006a ಯಸ್ತು ಪೂರ್ವಮಭಿಪ್ರೇಕ್ಷ್ಯ ಪೂರ್ವಮೇವಾಭಿಭಾಷತೇ|

12085006c ಸ್ಮಿತಪೂರ್ವಾಭಿಭಾಷೀ ಚ ತಸ್ಯ ಲೋಕಃ ಪ್ರಸೀದತಿ||

ಮೊದಲು ನೋಡಿ ಮೊದಲು ಮಾತನಾಡಿಸುವ ಮತ್ತು ನಸುನಗುತ್ತಾ ಮಾತನಾಡುವವನನ ಕುರಿತು ಲೋಕವು ಪ್ರಸನ್ನವಾಗಿರುತ್ತದೆ.

12085007a ದಾನಮೇವ ಹಿ ಸರ್ವತ್ರ ಸಾಂತ್ವೇನಾನಭಿಜಲ್ಪಿತಮ್|

12085007c ನ ಪ್ರೀಣಯತಿ ಭೂತಾನಿ ನಿರ್ವ್ಯಂಜನಮಿವಾಶನಮ್||

ಉಪ್ಪಿನಕಾಯಿ, ಪಲ್ಯ ಮೊದಲಾದ ವ್ಯಂಜನಗಳಿಲ್ಲದೇ ಊಟವು ಹೇಗೆ ಋಚಿಸುವುದಿಲ್ಲವೋ ಹಾಗೆ ಸಾಂತ್ವನದ ಮಾತುಗಳಿಲ್ಲದ ದಾನವು ಯಾರಿಗೂ ಸಂತೋಷವನ್ನುಂಟುಮಾಡುವುದಿಲ್ಲ.

12085008a ಅದಾತಾ ಹ್ಯಪಿ ಭೂತಾನಾಂ[1] ಮಧುರಾಮೀರಯನ್ಗಿರಮ್|

12085008c ಸರ್ವಲೋಕಮಿಮಂ ಶಕ್ರ ಸಾಂತ್ವೇನ ಕುರುತೇ ವಶೇ||

ಶಕ್ರ! ದಾನಮಾಡದಿದ್ದರೂ ಜೀವಿಗಳೊಡನೆ ಮಧುರ ಸ್ವರದಲ್ಲಿ ಮಾತನಾಡುವವನು ಈ ಸರ್ವ ಲೋಕಗಳನ್ನೂ ಸಾಂತ್ವನದಿಂದ ಗೆಲ್ಲುತ್ತಾನೆ.

12085009a ತಸ್ಮಾತ್ಸಾಂತ್ವಂ ಪ್ರಕರ್ತವ್ಯಂ ದಂಡಮಾಧಿತ್ಸತಾಮಿಹ|

12085009c ಫಲಂ ಚ ಜನಯತ್ಯೇವಂ ನ ಚಾಸ್ಯೋದ್ವಿಜತೇ ಜನಃ||

ಆದುದರಿಂದ ಶಿಕ್ಷೆಯನ್ನು ವಿಧಿಸಲು ಬಯಸಿದರೂ ತಪ್ಪಿತಸ್ಥನಿಗೆ ರಾಜನು ಸಾಂತ್ವನವನ್ನು ನೀಡಬೇಕು. ಇದರಿಂದ ಫಲವಿದೆ. ಅಂಥವನಿಂದ ಜನರು ಉದ್ವಿಗ್ನರಾಗುವುದಿಲ್ಲ.

12085010a ಸುಕೃತಸ್ಯ ಹಿ ಸಾಂತ್ವಸ್ಯ ಶ್ಲಕ್ಷ್ಣಸ್ಯ ಮಧುರಸ್ಯ ಚ|

12085010c ಸಮ್ಯಗಾಸೇವ್ಯಮಾನಸ್ಯ ತುಲ್ಯಂ ಜಾತು ನ ವಿದ್ಯತೇ||

ಸಾಂತ್ವನ ಮತ್ತು ಸ್ನೇಹಪೂರ್ವಕ ಮಧುರ ಮಾತು ಇವೆರಡು ಸುಕೃತಗಳು. ಬೇರೆಯಾವುದರಿಂದಲೂ ಜನರನ್ನು ಸಂಗ್ರಹಿಸಲು ಸಾಧ್ಯವಿಲ್ಲ.””

12085011 ಭೀಷ್ಮ ಉವಾಚ|

12085011a ಇತ್ಯುಕ್ತಃ ಕೃತವಾನ್ಸರ್ವಂ ತಥಾ ಶಕ್ರಃ ಪುರೋಧಸಾ|

12085011c ತಥಾ ತ್ವಮಪಿ ಕೌಂತೇಯ ಸಮ್ಯಗೇತತ್ಸಮಾಚರ||

ಭೀಷ್ಮನು ಹೇಳಿದನು: “ಇದನ್ನು ಕೇಳಿ ಶಕ್ರನು ಪುರೋಹಿತನು ಹೇಳಿದುದೆಲ್ಲವನ್ನೂ ಮಾಡಿದನು. ಕೌಂತೇಯ! ನೀನೂ ಕೂಡ ಹಾಗೆಯೇ ಇದನ್ನು ಚೆನ್ನಾಗಿ ಆಚರಿಸು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಇಂದ್ರಬೃಹಸ್ಪತಿಸಂವಾದೇ ಪಂಚಾಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಇಂದ್ರಬೃಹಸ್ಪತಿಸಂವಾದ ಎನ್ನುವ ಎಂಭತ್ತೈದನೇ ಅಧ್ಯಾಯವು.

Blue Flower On White Background Images, Stock Photos & Vectors ...

[1] ಅದಾನಾದಪಿ ಭೂತಾನಾಂ ಎಂಬ ಪಾಠಾಂತರವಿದೆ.

Comments are closed.