Shanti Parva: Chapter 353

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೫೩

12353001 ಭೀಷ್ಮ ಉವಾಚ|

12353001a ಸ ಚಾಮಂತ್ರ್ಯೋರಗಶ್ರೇಷ್ಠಂ ಬ್ರಾಹ್ಮಣಃ ಕೃತನಿಶ್ಚಯಃ|

12353001c ದೀಕ್ಷಾಕಾಂಕ್ಷೀ ತದಾ ರಾಜಂಶ್ಚ್ಯವನಂ ಭಾರ್ಗವಂ ಶ್ರಿತಃ||

ಭೀಷ್ಮನು ಹೇಳಿದನು: “ರಾಜನ್! ಆ ಉರಗಶ್ರೇಷ್ಠನಿಂದ ಅನುಮತಿಯನ್ನು ಪಡೆದು ಕೃತನಿಶ್ಚಯನಾದ ಬ್ರಾಹ್ಮಣನು ದೀಕ್ಷಾಕಾಂಕ್ಷಿಯಾಗಿ ಚ್ಯವನ ಭಾರ್ಗವನ ಮೊರೆಹೊಕ್ಕನು.

12353002a ಸ ತೇನ ಕೃತಸಂಸ್ಕಾರೋ ಧರ್ಮಮೇವೋಪತಸ್ಥಿವಾನ್|

12353002c ತಥೈವ ಚ ಕಥಾಮೇತಾಂ ರಾಜನ್ಕಥಿತವಾಂಸ್ತದಾ||

ರಾಜನ್! ಅವನಿಂದ ಸಂಸ್ಕಾರವನ್ನು ಪಡೆದು ಅವನು ಧರ್ಮದಲ್ಲಿಯೇ ನೆಲೆಗೊಂಡನು. ಈ ಕಥೆಯನ್ನು ಅವನು ಚ್ಯವನನಿಗೂ ಹೇಳಿದನು.

12353003a ಭಾರ್ಗವೇಣಾಪಿ ರಾಜೇಂದ್ರ ಜನಕಸ್ಯ ನಿವೇಶನೇ|

12353003c ಕಥೈಷಾ ಕಥಿತಾ ಪುಣ್ಯಾ ನಾರದಾಯ ಮಹಾತ್ಮನೇ||

ರಾಜೇಂದ್ರ! ಭಾರ್ಗವನೂ ಕೂಡ ಜನಕನ ನಿವೇಶನದಲ್ಲಿ ಈ ಪುಣ್ಯ ಕಥೆಯನ್ನು ಮಹಾತ್ಮ ನಾರದನಿಗೆ ಹೇಳಿದನು.

12353004a ನಾರದೇನಾಪಿ ರಾಜೇಂದ್ರ ದೇವೇಂದ್ರಸ್ಯ ನಿವೇಶನೇ|

12353004c ಕಥಿತಾ ಭರತಶ್ರೇಷ್ಠ ಪೃಷ್ಟೇನಾಕ್ಲಿಷ್ಟಕರ್ಮಣಾ||

ಭರತಶ್ರೇಷ್ಠ! ರಾಜೇಂದ್ರ! ನಾರದನು ದೇವೇಂದ್ರನ ನಿವೇಶನದಲ್ಲಿ ಆ ಅಕ್ಲಿಷ್ಟಕರ್ಮಿಯು ಕೇಳಲು ಅವನಿಗೆ ಈ ಕಥೆಯನ್ನು ಹೇಳಿದನು.

12353005a ದೇವರಾಜೇನ ಚ ಪುರಾ ಕಥೈಷಾ ಕಥಿತಾ ಶುಭಾ|

12353005c ಸಮಸ್ತೇಭ್ಯಃ ಪ್ರಶಸ್ತೇಭ್ಯೋ ವಸುಭ್ಯೋ ವಸುಧಾಧಿಪ||

ವಸುಧಾಧಿಪ! ಹಿಂದೆ ದೇವರಾಜನು ಈ ಶುಭ ಕಥೆಯನ್ನು ಸಮಸ್ಥ ವಸುಗಳಿಗೆ ಹೇಳಿದನು.

12353006a ಯದಾ ಚ ಮಮ ರಾಮೇಣ ಯುದ್ಧಮಾಸೀತ್ಸುದಾರುಣಮ್|

12353006c ವಸುಭಿಶ್ಚ ತದಾ ರಾಜನ್ಕಥೇಯಂ ಕಥಿತಾ ಮಮ||

ರಾಜನ್! ರಾಮನೊಂದಿಗೆ ನನ್ನ ದಾರುಣ ಯುದ್ಧವು ನಡೆಯುತ್ತಿದ್ದಾಗ ವಸುಗಳು ನನಗೆ ಈ ಕಥೆಯನ್ನು ಹೇಳಿದರು.

12353007a ಪೃಚ್ಚಮಾನಾಯ ತತ್ತ್ವೇನ ಮಯಾ ತುಭ್ಯಂ ವಿಶಾಂ ಪತೇ|

12353007c ಕಥೇಯಂ ಕಥಿತಾ ಪುಣ್ಯಾ ಧರ್ಮ್ಯಾ ಧರ್ಮಭೃತಾಂ ವರ||

ವಿಶಾಂಪತೇ! ಧರ್ಮಭೃತರಲ್ಲಿ ಶ್ರೇಷ್ಠ! ನೀನು ಕೇಳಲು ಈ ಪುಣ್ಯ ಧರ್ಮದ ಕಥೆಯನ್ನು ನಾನು ನಿನಗೆ ಇದ್ದಹಾಗೆ ಹೇಳಿದ್ದೇನೆ.

12353008a ತದೇಷ ಪರಮೋ ಧರ್ಮೋ ಯನ್ಮಾಂ ಪೃಚ್ಚಸಿ ಭಾರತ|

12353008c ಅಸನ್ನಧೀರನಾಕಾಂಕ್ಷೀ ಧರ್ಮಾರ್ಥಕರಣೇ ನೃಪ||

ಭಾರತ! ನೃಪ! ನೀನು ಕೇಳಿದ ಪರಮ ಧರ್ಮವೇ ಇದು. ಆ ಧೀರ ಬ್ರಾಹ್ಮಣನು ಅನಾಕಾಂಕ್ಷಿಯಾಗಿ ಧರ್ಮಾರ್ಥಗಳಲ್ಲಿ ನಿರತನಾಗಿದ್ದನು.

12353009a ಸ ಚ ಕಿಲ ಕೃತನಿಶ್ಚಯೋ ದ್ವಿಜಾಗ್ರ್ಯೋ

ಭುಜಗಪತಿಪ್ರತಿದೇಶಿತಾರ್ಥಕೃತ್ಯಃ|

12353009c ಯಮನಿಯಮಸಮಾಹಿತೋ ವನಾಂತಂ

ಪರಿಗಣಿತೋಂಚಶಿಲಾಶನಃ ಪ್ರವಿಷ್ಟಃ||

ಭುಜಗಪತಿಯು ಉಪದೇಶಿಸಿದನ್ನು ಆಚರಿಸುವುದೇ ತನ್ನ ಕರ್ತವ್ಯವೆಂದು ಭಾವಿಸಿ ಅವನು ಉಂಚವೃತ್ತಿಯನ್ನು ಆಚರಿಸಲು ದೃಢನಿಶ್ಚಯವನ್ನು ಮಾಡಿದನು. ನಂತರ ಅವನು ಇನ್ನೊಂದು ವನಕ್ಕೆ ಹೋಗಿ ಯಮನಿಯಮ ಸಮಾಹಿತನಾಗಿ ಉಂಚಶಿಲಾವ್ರತದ ಪ್ರಕಾರ ನಿಯಮಿತ ಆಹಾರವನ್ನು ಭುಂಜಿಸುತ್ತಿದ್ದು ಅದರಿಂದಲೇ ಸಿದ್ಧಿಯನ್ನು ಪಡೆದುಕೊಂಡನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ತ್ರಿಪಂಚಾಶದಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾಐವತ್ಮೂರನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವವು|

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವವು||

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೨/೧೮, ಉಪಪರ್ವಗಳು-೮೬/೧೦೦, ಅಧ್ಯಾಯಗಳು-೧೬೮೧/೧೯೯೫, ಶ್ಲೋಕಗಳು-೬೨೮೭೩/೭೩೭೮೪

Bird White Background Images, Stock Photos & Vectors | Shutterstock

 

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.