Shanti Parva: Chapter 345

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೪೫

12345001 ಭೀಷ್ಮ ಉವಾಚ|

12345001a ಸ ವನಾನಿ ವಿಚಿತ್ರಾಣಿ ತೀರ್ಥಾನಿ ಚ ಸರಾಂಸಿ ಚ|

12345001c ಅಭಿಗಚ್ಚನ್ ಕ್ರಮೇಣ ಸ್ಮ ಕಂ ಚಿನ್ಮುನಿಮುಪಸ್ಥಿತಃ||

ಭೀಷ್ಮನು ಹೇಳಿದನು: “ಅವನು ವಿಚಿತ್ರ ವನಗಳನ್ನೂ, ತೀರ್ಥಗಳನ್ನೂ, ಸರೋವರಗಳನ್ನು ದಾಟಿ ಕ್ರಮೇಣವಾಗಿ ಓರ್ವ ಮುನಿಯ ಬಳಿ ಹೋದನು.

12345002a ತಂ ಸ ತೇನ ಯಥೋದ್ದಿಷ್ಟಂ ನಾಗಂ ವಿಪ್ರೇಣ ಬ್ರಾಹ್ಮಣಃ|

12345002c ಪರ್ಯಪೃಚ್ಚದ್ಯಥಾನ್ಯಾಯಂ ಶ್ರುತ್ವೈವ ಚ ಜಗಾಮ ಸಃ||

ಬ್ರಾಹ್ಮಣನು ತನಗೆ ಆ ವಿಪ್ರನು ಹೇಳಿದ್ದ ನಾಗನ ಕುರಿತು ಅವನಲ್ಲಿ ಕೇಳಿದನು. ಯಥಾನ್ಯಾಯವಾಗಿ ಅವನನ್ನು ಕೇಳಿ ಅಲ್ಲಿಗೆ ಹೋದನು.

12345003a ಸೋಽಭಿಗಮ್ಯ ಯಥಾಖ್ಯಾತಂ ನಾಗಾಯತನಮರ್ಥವಿತ್|

12345003c ಪ್ರೋಕ್ತವಾನಹಮಸ್ಮೀತಿ ಭೋಃಶಬ್ದಾಲಂಕೃತಂ ವಚಃ||

ಅವನು ಹೇಳಿದಂತಲ್ಲಿಗೇ ನಾಗನ ಮನೆಗೆ ಹೋಗಿ ಆ ಅರ್ಥವಿದುವು “ಭೋ!” ಎಂಬ ಶಬ್ದದಿಂದ ಸಮಲಂಕೃತವಾದ “ಅಹಮಸ್ಮಿ” ಎಂದು ಹೇಳಿದನು.

12345004a ತತಸ್ತಸ್ಯ ವಚಃ ಶ್ರುತ್ವಾ ರೂಪಿಣೀ ಧರ್ಮವತ್ಸಲಾ|

12345004c ದರ್ಶಯಾಮಾಸ ತಂ ವಿಪ್ರಂ ನಾಗಪತ್ನೀ ಪತಿವ್ರತಾ||

ಅವನ ಆ ಮಾತನ್ನು ಕೇಳಿ ರೂಪಿಣೀ ಧರ್ಮವತ್ಸಲೆ ಪತಿವ್ರತೆ ನಾಗಪತ್ನಿಯು ಆ ವಿಪ್ರನಿಗೆ ಕಾಣಿಸಿಕೊಂಡಳು.

12345005a ಸಾ ತಸ್ಮೈ ವಿಧಿವತ್ಪೂಜಾಂ ಚಕ್ರೇ ಧರ್ಮಪರಾಯಣಾ|

12345005c ಸ್ವಾಗತೇನಾಗತಂ ಕೃತ್ವಾ ಕಿಂ ಕರೋಮೀತಿ ಚಾಬ್ರವೀತ್||

ಆ ಧರ್ಮಪರಾಯಣೆಯು ವಿಧಿವತ್ತಾಗಿ ಅವನನ್ನು ಪೂಜಿಸಿ ಸ್ವಾಗತಿಸಿ ಮನೆಯೊಳಗೆ ಬರಮಾಡಿಕೊಂಡು “ಏನು ಮಾಡಲಿ?” ಎಂದು ಕೇಳಿದಳು.

12345006 ಬ್ರಾಹ್ಮಣ ಉವಾಚ|

12345006a ವಿಶ್ರಾಂತೋಽಭ್ಯರ್ಚಿತಶ್ಚಾಸ್ಮಿ ಭವತ್ಯಾ ಶ್ಲಕ್ಷ್ಣಯಾ ಗಿರಾ|

12345006c ದ್ರಷ್ಟುಮಿಚ್ಚಾಮಿ ಭವತಿ ತಂ ದೇವಂ ನಾಗಮುತ್ತಮಮ್||

ಬ್ರಾಹ್ಮಣನು ಹೇಳಿದನು: “ನೀನು ಮಧುರ ಮಾತಿನಿಂದ ನನ್ನನ್ನು ಅರ್ಚಿಸಿದ್ದೀಯೆ ಮತ್ತು ನಾನು ವಿಶ್ರಾಂತನಾಗಿದ್ದೇನೆ. ಉತ್ತಮ ನಾಗದೇವನನ್ನು ನೋಡಲು ಬಯಸಿದ್ದೇನೆ.

12345007a ಏತದ್ಧಿ ಪರಮಂ ಕಾರ್ಯಮೇತನ್ಮೇ ಫಲಮೀಪ್ಸಿತಮ್|

12345007c ಅನೇನಾರ್ಥೇನ ಚಾಸ್ಮ್ಯದ್ಯ ಸಂಪ್ರಾಪ್ತಃ ಪನ್ನಗಾಲಯಮ್||

ಇದೇ ನನ್ನ ಪರಮ ಕಾರ್ಯವಾಗಿದೆ. ಇದನ್ನೇ ಬಯಸಿ ಬಂದಿದ್ದೇನೆ. ಈ ಉದ್ದೇಶದಿಂದಲೇ ನಾನು ಇಂದು ನಾಗರಾಜನ ಆಲಯಕ್ಕೆ ಬಂದಿದ್ದೇನೆ.”

12345008 ನಾಗಭಾರ್ಯೋವಾಚ|

12345008a ಆರ್ಯ ಸೂರ್ಯರಥಂ ವೋಢುಂ ಗತೋಽಸೌ ಮಾಸಚಾರಿಕಃ|

12345008c ಸಪ್ತಾಷ್ಟಭಿರ್ದಿನೈರ್ವಿಪ್ರ ದರ್ಶಯಿಷ್ಯತ್ಯಸಂಶಯಮ್||

ನಾಗಭಾರ್ಯೆಯು ಹೇಳಿದಳು: “ವಿಪ್ರ! ಆರ್ಯನು ಸೂರ್ಯರಥವನ್ನು ಹೊರಲು ಹೋಗಿದ್ದಾನೆ. ಒಂದು ತಿಂಗಳು ಈ ಕಾರ್ಯವನ್ನು ಅವನು ಮಾಡಬೇಕಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಅವನು ನಿನಗೆ ದರ್ಶನವನ್ನೀಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12345009a ಏತದ್ವಿದಿತಮಾರ್ಯಸ್ಯ ವಿವಾಸಕರಣಂ ಮಮ|

12345009c ಭರ್ತುರ್ಭವತು ಕಿಂ ಚಾನ್ಯತ್ ಕ್ರಿಯತಾಂ ತದ್ವದಸ್ವ ಮೇ||

ಇಗೋ ಅವನು ಮನೆಯಲ್ಲಿ ಇಲ್ಲದಿರುವುದಕ್ಕೆ ಕಾರಣವನ್ನು ಹೇಳಿದ್ದೇನೆ. ಪತಿಯು ಬರುವವರೆಗೆ ಅನ್ಯ ಯಾವ ಕೆಲಸವನ್ನು ಮಾಡಬೇಕು ಎಂದು ನನಗೆ ಹೇಳು.”

12345010 ಬ್ರಾಹ್ಮಣ ಉವಾಚ|

12345010a ಅನೇನ ನಿಶ್ಚಯೇನಾಹಂ ಸಾಧ್ವಿ ಸಂಪ್ರಾಪ್ತವಾನಿಹ|

12345010c ಪ್ರತೀಕ್ಷನ್ನಾಗಮಂ ದೇವಿ ವತ್ಸ್ಯಾಮ್ಯಸ್ಮಿನ್ಮಹಾವನೇ||

ಬ್ರಾಹ್ಮಣನು ಹೇಳಿದನು: “ಸಾಧ್ವಿ! ಅವನನ್ನು ಭೇಟಿಯಾಗುವ ನಿಶ್ಚಯದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ದೇವಿ! ಅವನ ಆಗಮನವನ್ನೇ ಕಾಯುತ್ತಾ ಈ ಮಹಾವನದಲ್ಲಿ ನಾನು ವಾಸಿಸಿಕೊಂಡಿರುತ್ತೇನೆ.

12345011a ಸಂಪ್ರಾಪ್ತಸ್ಯೈವ ಚಾವ್ಯಗ್ರಮಾವೇದ್ಯೋಽಹಮಿಹಾಗತಃ|

12345011c ಮಮಾಭಿಗಮನಂ ಪ್ರಾಪ್ತೋ ವಾಚ್ಯಶ್ಚ ವಚನಂ ತ್ವಯಾ||

ಅವನು ಬಂದೊಡನೆಯೇ ಅವ್ಯಗ್ರಳಾಗಿ ನಾನು ಇಲ್ಲಿಗೆ ಬಂದಿರುವ ವಿಷಯವನ್ನು ಅವನಿಗೆ ತಿಳಿಸಬೇಕು. ಮತ್ತು ಅವನು ನನ್ನ ಬಳಿ ಬಂದು ದರ್ಶನವನ್ನೀಯುವಂತೆ ನಿನ್ನ ಪತಿಗೆ ಹೇಳಬೇಕು.

12345012a ಅಹಮಪ್ಯತ್ರ ವತ್ಸ್ಯಾಮಿ ಗೋಮತ್ಯಾಃ ಪುಲಿನೇ ಶುಭೇ|

12345012c ಕಾಲಂ ಪರಿಮಿತಾಹಾರೋ ಯಥೋಕ್ತಂ ಪರಿಪಾಲಯನ್||

ನಾನು ಗೋಮತೀ ನದಿಯ ಶುಭ ತೀರದಲ್ಲಿ ಮಿತಾಹಾರನಾಗಿ ನೀನು ಹೇಳಿರುವ ಕಾಲವನ್ನು ಕಾಯುತ್ತಿರುತ್ತೇನೆ.””

12345013 ಭೀಷ್ಮ ಉವಾಚ|

12345013a ತತಃ ಸ ವಿಪ್ರಸ್ತಾಂ ನಾಗೀಂ ಸಮಾಧಾಯ ಪುನಃ ಪುನಃ|

12345013c ತದೇವ ಪುಲಿನಂ ನದ್ಯಾಃ ಪ್ರಯಯೌ ಬ್ರಾಹ್ಮಣರ್ಷಭಃ||

ಭೀಷ್ಮನು ಹೇಳಿದನು: “ಆಗ ಆ ವಿಪ್ರ ಬ್ರಾಹ್ಮಣರ್ಷಭನು ನಾಗಪತ್ನಿಯನ್ನು ಪುನಃ ಪುನಃ ಸಮಾಧಾನಗೊಳಿಸುತ್ತಾ ನದಿಯ ತಟಪ್ರದೇಶಕ್ಕೆ ಹೊರಟುಹೋದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಪಂಚಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೈದನೇ ಅಧ್ಯಾಯವು.

Bird White Background Images, Stock Photos & Vectors | Shutterstock

Comments are closed.