Shanti Parva: Chapter 341

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೪೧

12341001 ಭೀಷ್ಮ ಉವಾಚ|

12341001a ಆಸೀತ್ಕಿಲ ಕುರುಶ್ರೇಷ್ಠ ಮಹಾಪದ್ಮೇ ಪುರೋತ್ತಮೇ|

12341001c ಗಂಗಾಯಾ ದಕ್ಷಿಣೇ ತೀರೇ ಕಶ್ಚಿದ್ವಿಪ್ರಃ ಸಮಾಹಿತಃ||

ಭೀಷ್ಮನು ಹೇಳಿದನು: “ಕುರುಶ್ರೇಷ್ಠ! ಗಂಗೆಯ ದಕ್ಷಿಣ ತೀರದಲ್ಲಿ ಉತ್ತಮ ಪುರವಾದ ಮಹಾಪದ್ಮದಲ್ಲಿ ಓರ್ವ ಸಮಾಹಿತ ವಿಪ್ರನಿದ್ದನು.

12341002a ಸೌಮ್ಯಃ ಸೋಮಾನ್ವಯೇ ವೇದೇ ಗತಾಧ್ವಾ ಚಿನ್ನಸಂಶಯಃ|

12341002c ಧರ್ಮನಿತ್ಯೋ ಜಿತಕ್ರೋಧೋ ನಿತ್ಯತೃಪ್ತೋ ಜಿತೇಂದ್ರಿಯಃ||

ಸೋಮನ ಕುಲದಲ್ಲಿ ಹುಟ್ಟಿದ್ದ ಅವನು ಸೌಮ್ಯನು ವೇದಗಳಲ್ಲಿ ಪಾರಂಗತನೂ ಆಗಿದ್ದನು. ಆ ಜಿತೇಂದ್ರಿಯನು ಧರ್ಮನಿತ್ಯನೂ, ಜಿತಕ್ರೋಧನೂ ಮತ್ತು ನಿತ್ಯತೃಪ್ತನೂ ಆಗಿದ್ದನು.

12341003a ಅಹಿಂಸಾನಿರತೋ ನಿತ್ಯಂ ಸತ್ಯಃ ಸಜ್ಜನಸಂಮತಃ|

12341003c ನ್ಯಾಯಪ್ರಾಪ್ತೇನ ವಿತ್ತೇನ ಸ್ವೇನ ಶೀಲೇನ ಚಾನ್ವಿತಃ||

ನಿತ್ಯವೂ ಅಹಿಂಸಾನಿರತನಾಗಿದ್ದ ಅವನು ಸತ್ಯವಂತನೂ ಸಜ್ಜನರ ಸಮ್ಮತಿಗೆ ಪಾತ್ರನೂ ಆಗಿದ್ದನು. ನ್ಯಾಯವಾಗಿ ದೊರಕಿದ ಸ್ವಂತ ಧನದಿಂದಲೇ ಜೀವನವನ್ನು ನಿರ್ವಹಿಸುತ್ತಿದ್ದನು. ಉತ್ತಮ ಶೀಲವಂತನೂ ಆಗಿದ್ದನು.

12341004a ಜ್ಞಾತಿಸಂಬಂಧಿವಿಪುಲೇ ಮಿತ್ರಾಪಾಶ್ರಯಸಂಮತೇ|

12341004c ಕುಲೇ ಮಹತಿ ವಿಖ್ಯಾತೇ ವಿಶಿಷ್ಟಾಂ ವೃತ್ತಿಮಾಸ್ಥಿತಃ||

ಮಿತ್ರಾಪಾಶ್ರಯಸಂಮತವಾದ ವಿಪುಲ ಜ್ಞಾತಿಬಾಂಧವರಿಂದ ಕೂಡಿದ ಅತಿದೊಡ್ಡ ವಿಖ್ಯಾತ ಕುಲದಲ್ಲಿ ಹುಟ್ಟಿದ್ದ ಅವನು ತನ್ನ ವಿಶೇಷವೃತ್ತಿಯನ್ನು ಮಾಡಿಕೊಂಡಿದ್ದನು.

12341005a ಸ ಪುತ್ರಾನ್ಬಹುಲಾನ್ದೃಷ್ಟ್ವಾ ವಿಪುಲೇ ಕರ್ಮಣಿ ಸ್ಥಿತಃ|

12341005c ಕುಲಧರ್ಮಾಶ್ರಿತೋ ರಾಜನ್ಧರ್ಮಚರ್ಯಾಪರೋಽಭವತ್||

ರಾಜನ್! ವಿಪುಲ ಕರ್ಮಗಳನ್ನು ಮಾಡುತ್ತಿದ್ದ ಅವನು ಅನೇಕ ಪುತ್ರ-ಪೌತ್ರರನ್ನು ನೋಡಿದನು. ಕುಲಧರ್ಮಾಶ್ರಿತನಾಗಿದ್ದ ಅವನು ಧರ್ಮಾಚರಣೆಯಲ್ಲಿಯೇ ನಿರತನಾಗಿದ್ದನು.

12341006a ತತಃ ಸ ಧರ್ಮಂ ವೇದೋಕ್ತಂ ಯಥಾಶಾಸ್ತ್ರೋಕ್ತಮೇವ ಚ|

12341006c ಶಿಷ್ಟಾಚೀರ್ಣಂ ಚ ಧರ್ಮಂ ಚ ತ್ರಿವಿಧಂ ಚಿಂತ್ಯ ಚೇತಸಾ||

ಆಗ ಅವನು ವೇದೋಕ್ತ ಧರ್ಮ, ಶಾಸ್ತ್ರೋಕ್ತ ಧರ್ಮ ಮತ್ತು ಶಿಷ್ಟಾಚಾರದಿಂದ ಅನುಮೋದಿತ ಧರ್ಮ – ಈ ಮೂರು ವಿಧದ ಧರ್ಮಗಳ ಕುರಿತು ಆಲೋಚಿಸತೊಡಗಿದನು.

12341007a ಕಿಂ ನು ಮೇ ಸ್ಯಾಚ್ಚುಭಂ ಕೃತ್ವಾ ಕಿಂ ಕ್ಷಮಂ ಕಿಂ ಪರಾಯಣಮ್|

12341007c ಇತ್ಯೇವಂ ಖಿದ್ಯತೇ ನಿತ್ಯಂ ನ ಚ ಯಾತಿ ವಿನಿಶ್ಚಯಮ್||

“ಇವುಗಳಲ್ಲಿ ಯಾವುದನ್ನು ಆಚರಿಸುವುದರಿಂದ ಶುಭವಾಗುತ್ತದೆ? ಯಾವುದನ್ನು ಮಾಡಬೇಕು? ಯಾವುದನ್ನು ಆಶ್ರಯಿಸಬೇಕು?” ಹೀಗೆ ನಿತ್ಯವೂ ಯೋಚಿಸಿ ಖಿನ್ನನಾಗುತ್ತಿದ್ದ ಅವನು ಯಾವ ನಿಶ್ಚಯಕ್ಕೂ ಬರಲಿಲ್ಲ.

12341008a ತಸ್ಯೈವಂ ಖಿದ್ಯಮಾನಸ್ಯ ಧರ್ಮಂ ಪರಮಮಾಸ್ಥಿತಃ|

12341008c ಕದಾ ಚಿದತಿಥಿಃ ಪ್ರಾಪ್ತೋ ಬ್ರಾಹ್ಮಣಃ ಸುಸಮಾಹಿತಃ||

ಹೀಗೆ ಅವನು ಯೋಚಿಸಿ ಖಿನ್ನನಾಗಿದ್ದಾಗ ಒಮ್ಮೆ ಅವನಲ್ಲಿಗೆ ಪರಮಧರ್ಮಾತ್ಮ, ಏಕಾಗ್ರಚಿತ್ತ ಬ್ರಾಹ್ಮಣನೋರ್ವನು ಅತಿಥಿಯಾಗಿ ಆಗಮಿಸಿದನು.

12341009a ಸ ತಸ್ಮೈ ಸತ್ಕ್ರಿಯಾಂ ಚಕ್ರೇ ಕ್ರಿಯಾಯುಕ್ತೇನ ಹೇತುನಾ|

12341009c ವಿಶ್ರಾಂತಂ ಚೈನಮಾಸೀನಮಿದಂ ವಚನಮಬ್ರವೀತ್||

ಅವನನ್ನು ಶಾಸ್ತ್ರೋಕ್ತ ವಿಧಿಯಿಂದ ಸತ್ಕರಿಸಿ, ಅವನು ಕುಳಿತು ವಿಶ್ರಾಂತನಾಗಲು ಅವನಿಗೆ ಈ ಮಾತನ್ನಾಡಿದನು.

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಏಕಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತೊಂದನೇ ಅಧ್ಯಾಯವು.

Orange Flowers Against White Background Photograph by Panoramic Images

Comments are closed.