Shanti Parva: Chapter 340

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೪೦

ಉಂಚವೃತ್ಯುಪಾಖ್ಯಾನ

12340001 ಯುಧಿಷ್ಠಿರ ಉವಾಚ|

12340001a ಧರ್ಮಾಃ ಪಿತಾಮಹೇನೋಕ್ತಾ ಮೋಕ್ಷಧರ್ಮಾಶ್ರಿತಾಃ ಶುಭಾಃ|

12340001c ಧರ್ಮಮಾಶ್ರಮಿಣಾಂ ಶ್ರೇಷ್ಠಂ ವಕ್ತುಮರ್ಹತಿ ಮೇ ಭವಾನ್||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮೋಕ್ಷಧರ್ಮಾಶ್ರಿತ ಶುಭ ಧರ್ಮಗಳ ಕುಳಿತು ಹೇಳಿದ್ದೀಯೆ. ಶ್ರೇಷ್ಠ ಆಶ್ರಮಧರ್ಮವನ್ನು ಅನುಸರಿಸುವವರ ಕುರಿತು ನನಗೆ ಹೇಳಬೇಕು.”

12340002 ಭೀಷ್ಮ ಉವಾಚ|

12340002a ಸರ್ವತ್ರ ವಿಹಿತೋ ಧರ್ಮಃ ಸ್ವರ್ಗ್ಯಃ ಸತ್ಯಫಲೋದಯಃ[1]|

12340002c ಬಹುದ್ವಾರಸ್ಯ ಧರ್ಮಸ್ಯ ನೇಹಾಸ್ತಿ ವಿಫಲಾ ಕ್ರಿಯಾ||

ಭೀಷ್ಮನು ಹೇಳಿದನು: “ಎಲ್ಲ ಆಶ್ರಮಿಗಳಿಗೂ ಇಂತಹುದೇ ಎಂಬ ಸ್ವರ್ಗ ಮತ್ತು ಸತ್ಯ ಫಲವನ್ನು ನೀಡುವ ಧರ್ಮಗಳು ವಿಹಿತವಾಗಿವೆ. ಅನೇಕ ದ್ವಾರಗಳಿರುವ ಧರ್ಮದಿಂದ ಮಾಡಿದ ಕ್ರಿಯೆಗಳ್ಯಾವುವೂ ವಿಫಲವಾಗುವುದಿಲ್ಲ.

12340003a ಯಸ್ಮಿನ್ಯಸ್ಮಿಂಸ್ತು ವಿಷಯೇ ಯೋ ಯೋ ಯಾತಿ ವಿನಿಶ್ಚಯಮ್|

12340003c ಸ ತಮೇವಾಭಿಜಾನಾತಿ ನಾನ್ಯಂ ಭರತಸತ್ತಮ||

ಯಾರ್ಯಾರಿಗೆ ಯಾವ ಯಾವ ವಿಷಯದ ಮೇಲೆ ನಿಶ್ಚಯ ಬುದ್ಧಿಯಿರುವುದೋ ಅದೇ ವಿಷಯವನ್ನು ಅವನು ಪರಮಶ್ರೇಷ್ಠವೆಂದು ಭಾವಿಸುತ್ತಾನೆ. ಭರತಸತ್ತಮ! ಇತರ ಧರ್ಮಗಳಿಗೆ ಅವನು ಅಷ್ಟೊಂದು ಮಾನ್ಯತೆಯನ್ನು ಕೊಡುವುದಿಲ್ಲ.

12340004a ಅಪಿ ಚ ತ್ವಂ ನರವ್ಯಾಘ್ರ ಶ್ರೋತುಮರ್ಹಸಿ ಮೇ ಕಥಾಮ್|

12340004c ಪುರಾ ಶಕ್ರಸ್ಯ ಕಥಿತಾಂ ನಾರದೇನ ಸುರರ್ಷಿಣಾ||

ನರವ್ಯಾಘ್ರ! ಹಿಂದೆ ಸುರರ್ಷಿ ನಾರದನು ಶಕ್ರನಿಗೆ ಹೇಳಿದ ಆ ಕಥೆಯನ್ನು ಈಗ ನೀನೂ ಕೂಡ ಕೇಳಲು ಅರ್ಹನಾಗಿರುವೆ.

12340005a ಸುರರ್ಷಿರ್ನಾರದೋ ರಾಜನ್ಸಿದ್ಧಸ್ತ್ರೈಲೋಕ್ಯಸಂಮತಃ|

12340005c ಪರ್ಯೇತಿ ಕ್ರಮಶೋ ಲೋಕಾನ್ವಾಯುರವ್ಯಾಹತೋ ಯಥಾ||

ರಾಜನ್! ತ್ರೈಲೋಕ್ಯ ಪೂಜಿತ ಸಿದ್ಧ ಸುರರ್ಷಿ ನಾರದನು ವಾಯುವು ಹೇಗೆ ಅವ್ಯಾಹಿತನಾಗಿ ಸಂಚರಿಸುತ್ತಾನೋ ಹಾಗೆ ಅಡತಡೆಯಿಲ್ಲದೇ ಸರ್ವತ್ರ ಅನುಕ್ರಮವಾಗಿ ಎಲ್ಲ ಲೋಕಗಳಲ್ಲಿಯೂ ಸಂಚರಿಸುತ್ತಿರುತ್ತಾನೆ.

12340006a ಸ ಕದಾ ಚಿನ್ಮಹೇಷ್ವಾಸ ದೇವರಾಜಾಲಯಂ ಗತಃ|

12340006c ಸತ್ಕೃತಶ್ಚ ಮಹೇಂದ್ರೇಣ ಪ್ರತ್ಯಾಸನ್ನಗತೋಽಭವತ್||

ಮಹೇಷ್ವಾಸ! ಒಮ್ಮೆ ಅವನು ದೇವರಾಜಾಲಯಕ್ಕೆ ಹೋದನು. ಮಹೇಂದ್ರನಿಂದ ಸತ್ಕೃತನಾಗಿ ಅವನ ಹತ್ತಿರವೇ ಕುಳಿತುಕೊಂಡನು.

12340007a ತಂ ಕೃತಕ್ಷಣಮಾಸೀನಂ ಪರ್ಯಪೃಚ್ಚಚ್ಚಚೀಪತಿಃ|

12340007c ಬ್ರಹ್ಮರ್ಷೇ ಕಿಂ ಚಿದಾಶ್ಚರ್ಯಮಸ್ತಿ ದೃಷ್ಟಂ ತ್ವಯಾನಘ||

ಅವನನ್ನು ಕುಳ್ಳಿರಿಸಿದ ನಂತರ ಶಚೀಪತಿಯು ನಾರದನನ್ನು ಕೇಳಿದನು: “ಬ್ರಹ್ಮರ್ಷೇ! ಅನಘ! ನೀನು ನೋಡಿದ ಆಶ್ಚರ್ಯವೇನಾದರೂ ಇದೆಯೇ?

12340008a ಯಥಾ ತ್ವಮಪಿ ವಿಪ್ರರ್ಷೇ ತ್ರೈಲೋಕ್ಯಂ ಸಚರಾಚರಮ್|

12340008c ಜಾತಕೌತೂಹಲೋ ನಿತ್ಯಂ ಸಿದ್ಧಶ್ಚರಸಿ ಸಾಕ್ಷಿವತ್||

ವಿಪ್ರರ್ಷೇ! ನೀನು ಪ್ರಪಂಚದ ಆಗುಹೋಗುಗಳನ್ನು ಅಂತರ್ದೃಷ್ಟಿಯಿಂದಲೇ ಕಾಣುವ ಸಿದ್ಧನಾಗಿದ್ದರೂ ಕುತೂಹಲಕ್ಕಾಗಿ ಮೂರು ಲೋಕಗಳನ್ನು ಸಾಕ್ಶಿಯಂತೆ ಸುತ್ತುತ್ತಿರುತ್ತೀಯೆ.

12340009a ನ ಹ್ಯಸ್ತ್ಯವಿದಿತಂ ಲೋಕೇ ದೇವರ್ಷೇ ತವ ಕಿಂ ಚನ|

12340009c ಶ್ರುತಂ ವಾಪ್ಯನುಭೂತಂ ವಾ ದೃಷ್ಟಂ ವಾ ಕಥಯಸ್ವ ಮೇ||

ದೇವರ್ಷೇ! ನಿನಗೆ ತಿಳಿಯದೇ ಇಲ್ಲದಿರುವುದು ಯಾವುದೂ ಇಲ್ಲ. ನೀನು ಯಾವುದಾದರೂ ಆಶ್ಚರ್ಯಕರ ವಿಷಯವನ್ನು ಕೇಳಿದ್ದರೆ ಅಥವಾ ಅನುಭವಿಸಿದ್ದರೆ ಅಥವಾ ಕಂಡಿದ್ದರೆ ಅದನ್ನು ನನಗೆ ಹೇಳು.”

12340010a ತಸ್ಮೈ ರಾಜನ್ಸುರೇಂದ್ರಾಯ ನಾರದೋ ವದತಾಂ ವರಃ|

12340010c ಆಸೀನಾಯೋಪಪನ್ನಾಯ ಪ್ರೋಕ್ತವಾನ್ವಿಪುಲಾಂ ಕಥಾಮ್||

ರಾಜನ್! ಮಾತನಾಡುವವರಲ್ಲಿ ಶ್ರೇಷ್ಠ ನಾರದನು ಸಮೀಪದಲ್ಲಿಯೇ ಕುಳಿತಿದ್ದ ಸುರೆಂದ್ರನಿಗೆ ವಿಸ್ತಾರವಾದ ಈ ಕಥೆಯನ್ನು ಹೇಳಿದನು.

12340011a ಯಥಾ ಯೇನ ಚ ಕಲ್ಪೇನ ಸ ತಸ್ಮೈ ದ್ವಿಜಸತ್ತಮಃ|

12340011c ಕಥಾಂ ಕಥಿತವಾನ್ ಪೃಷ್ಟಸ್ತಥಾ ತ್ವಮಪಿ ಮೇ ಶೃಣು||

ಯಾವ ಕಲ್ಪವನ್ನು ಅನುಸರಿಸಿ ಆ ದ್ವಿಜಸತ್ತಮನು ಅವನಿಗೆ ಈ ಕಥೆಯನ್ನು ಹೇಳಿದನೋ ಅದನ್ನೇ ಅನುಸರಿಸಿ ನಾನು ಆ ಕಥೆಯನ್ನು ನಿನಗೆ ಹೇಳುತ್ತೇನೆ. ಕೇಳು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಉಂಚವೃತ್ಯುಪಾಖ್ಯಾನೇ ಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತನೇ ಅಧ್ಯಾಯವು.

Pink Dahlia Flower Isolated On White Background Stock Photo ...

[1] ಸತ್ಯಫಲಂ ಮಹತ್ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.