Shanti Parva: Chapter 333

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೩೩

ನರನಾರಾಯಣರು ನಾರದನಿಗೆ ವರಾಹಸ್ವಾಮಿಯು ಪಿತೃಪೂಜೆಯ ನಿಯಮವನ್ನು ಸ್ಥಾಪಿಸಿದುದರ ಕುರಿತು ಹೇಳಿದುದು (1-25).

12333001 ವೈಶಂಪಾಯನ ಉವಾಚ|

12333001a ಕಸ್ಯ ಚಿತ್ತ್ವಥ ಕಾಲಸ್ಯ ನಾರದಃ ಪರಮೇಷ್ಠಿಜಃ|

12333001c ದೈವಂ ಕೃತ್ವಾ ಯಥಾನ್ಯಾಯಂ ಪಿತ್ರ್ಯಂ ಚಕ್ರೇ ತತಃ ಪರಮ್||

ವೈಶಂಪಾಯನನು ಹೇಳಿದನು: “ಒಮ್ಮೆ ಪರಮೇಷ್ಠಿಜ ನಾರದನು ಯಥಾನ್ಯಾಯವಾಗಿ ದೇವಕಾರ್ಯಗಳನ್ನು ಮಾಡಿ ಅನಂತರ ಪಿತೃಕಾರ್ಗಗಳನ್ನು ಪೂರೈಸಿದನು.

12333002a ತತಸ್ತಂ ವಚನಂ ಪ್ರಾಹ ಜ್ಯೇಷ್ಠೋ ಧರ್ಮಾತ್ಮಜಃ ಪ್ರಭುಃ|

12333002c ಕ ಇಜ್ಯತೇ ದ್ವಿಜಶ್ರೇಷ್ಠ ದೈವೇ ಪಿತ್ರ್ಯೇ ಚ ಕಲ್ಪಿತೇ||

ಆಗ ಧರ್ಮಾತ್ಮಜ ಜ್ಯೇಷ್ಠ ಪ್ರಭುವು ಅವನಿಗೆ ಹೀಗೆ ಹೇಳಿದನು: “ದ್ವಿಜಶ್ರೇಷ್ಠ! ನೀನು ಕಲ್ಪಿಸಿರುವ ಈ ದೇವ-ಪಿತೃಕಾರ್ಯಗಳಲ್ಲಿ ಯಾರನ್ನು ಪೂಜಿಸುತ್ತೀಯೆ?

12333003a ತ್ವಯಾ ಮತಿಮತಾಂ ಶ್ರೇಷ್ಠ ತನ್ಮೇ ಶಂಸ ಯಥಾಗಮಮ್|

12333003c ಕಿಮೇತತ್ಕ್ರಿಯತೇ ಕರ್ಮ ಫಲಂ ಚಾಸ್ಯ ಕಿಮಿಷ್ಯತೇ||

ಮತಿವಂತರಲ್ಲಿ ಶ್ರೇಷ್ಠ! ಈ ಕರ್ಮಗಳನ್ನು ಏಕೆ ಮಾಡಬೇಕು? ಇವುಗಳಿಂದ ಯಾವ ಫಲವು ದೊರಕುತ್ತದೆ? ಆಗಮಗಳಲ್ಲಿರುವಂತೆ ನನಗೆ ಹೇಳು.”

12333004 ನಾರದ ಉವಾಚ|

12333004a ತ್ವಯೈತತ್ಕಥಿತಂ ಪೂರ್ವಂ ದೈವಂ ಕರ್ತವ್ಯಮಿತ್ಯಪಿ|

12333004c ದೈವತಂ ಚ ಪರೋ ಯಜ್ಞಃ ಪರಮಾತ್ಮಾ ಸನಾತನಃ||

ನಾರದನು ಹೇಳಿದನು: “ದೇವಕಾರ್ಯವನ್ನು ಮಾಡುವುದು ಪ್ರತಿಯೊಬ್ಬನ ಕರ್ತವ್ಯವೂ ಆಗಿದೆ ಎಂದು ಹಿಂದೆ ನೀನೇ ನನಗೆ ಹೇಳಿರುವೆ. ದೇವಕಾರ್ಯವು ಪರಮ ಯಜ್ಞ. ಆ ಯಜ್ಞವೇ ಸನಾತನ ಪರಮಾತ್ಮ ಸ್ವರೂಪ.

12333005a ತತಸ್ತದ್ಭಾವಿತೋ ನಿತ್ಯಂ ಯಜೇ ವೈಕುಂಠಮವ್ಯಯಮ್|

12333005c ತಸ್ಮಾಚ್ಚ ಪ್ರಸೃತಃ ಪೂರ್ವಂ ಬ್ರಹ್ಮಾ ಲೋಕಪಿತಾಮಹಃ||

ಅದರಿಂದಲೇ ಪ್ರಭಾವಿತನಾದ ನನು ನಿತ್ಯವೂ ಅವ್ಯಯ ವೈಕುಂಠನನ್ನು ಪೂಜಿಸುತ್ತೇನೆ. ಅವನಿಂದಲೇ ಪೂರ್ವದಲ್ಲಿ ಲೋಕಪಿತಾಮಹ ಬ್ರಹ್ಮನು ಹುಟ್ಟಿದನು.

12333006a ಮಮ ವೈ ಪಿತರಂ ಪ್ರೀತಃ ಪರಮೇಷ್ಠ್ಯಪ್ಯಜೀಜನತ್|

12333006c ಅಹಂ ಸಂಕಲ್ಪಜಸ್ತಸ್ಯ ಪುತ್ರಃ ಪ್ರಥಮಕಲ್ಪಿತಃ||

ಪರಮೇಷ್ಠಿಯು ಪ್ರೀತನಾದ ನನ್ನ ತಂದೆ ಪ್ರಜಾಪತಿಯನು ಹುಟ್ಟಿಸಿದನು. ನಾನು ಅವನಿಗೆ ಸಂಕಲ್ಪದಿಂದಲೇ ಹುಟ್ಟಿದ ಮೊದಲ ಮಗನಾಗಿದ್ದೇನೆ.

12333007a ಯಜಾಮ್ಯಹಂ ಪಿತೃನ್ಸಾಧೋ ನಾರಾಯಣವಿಧೌ ಕೃತೇ|

12333007c ಏವಂ ಸ ಏವ ಭಗವಾನ್ಪಿತಾ ಮಾತಾ ಪಿತಾಮಹಃ|

12333007e ಇಜ್ಯತೇ ಪಿತೃಯಜ್ಞೇಷು ಮಯಾ ನಿತ್ಯಂ ಜಗತ್ಪತಿಃ||

ನಾರಾಯಣನನ್ನು ಪೂಜಿಸಿದ ನಂತರ ನಾನು ಪಿತೃಗಳ ಪೂಜೆಯನ್ನು ಮಾಡುತ್ತೇನೆ. ಹೀಗೆ ಆ ಭಗವಂತನೇ ನನ್ನ ಪಿತ, ಮಾತಾ ಮತ್ತು ಪಿತಾಮಹನು. ನಿತ್ಯ ಪಿತೃಯಜ್ಞಗಳಲ್ಲಿಯೂ ನಾನು ಆ ಜಗತ್ಪತಿಯನ್ನೇ ಪೂಜಿಸುತ್ತೇನೆ.

12333008a ಶ್ರುತಿಶ್ಚಾಪ್ಯಪರಾ ದೇವ ಪುತ್ರಾನ್ ಹಿ ಪಿತರೋಽಯಜನ್|

12333008c ವೇದಶ್ರುತಿಃ ಪ್ರಣಷ್ಟಾ ಚ ಪುನರಧ್ಯಾಪಿತಾ ಸುತೈಃ|

12333008e ತತಸ್ತೇ ಮಂತ್ರದಾಃ ಪುತ್ರಾಃ ಪಿತೃತ್ವಮುಪಪೇದಿರೇ||

ದೇವ! ಪಿತೃಗಳೇ ಪುತ್ರರನ್ನು ಪೂಜಿಸಿದರೆಂದು ಮತ್ತೊಂದು ಶ್ರುತಿಯು ಹೇಳುತ್ತದೆ. ವೇದಶ್ರುತಿಗಳು ನಾಶವಾದಾಗ ಸುತರೇ ಅದನ್ನು ಪುನಃ ಕಲಿತುಕೊಂಡರು. ಆಗ ಮಂತ್ರಗಳನ್ನು ಕಲಿತ ಪುತ್ರರೇ ಪಿತೃಗಳಿಗೆ ಅವುಗಳನ್ನು ಉಪದೇಶಿಸಿದರು.

12333009a ನೂನಂ ಪುರೈತದ್ವಿದಿತಂ ಯುವಯೋರ್ಭಾವಿತಾತ್ಮನೋಃ|

12333009c ಪುತ್ರಾಶ್ಚ ಪಿತರಶ್ಚೈವ ಪರಸ್ಪರಮಪೂಜಯನ್||

ಭಾವಿತಾತ್ಮರಾದ ನಿಮಗೆ ಹಿಂದೆ ಪುತ್ರರು ಮತ್ತು ಪಿತೃಗಳು ಪರಸ್ಪರರನ್ನು ಪೂಜಿಸಿದರು ಎಂಬ ವಿಷಯವು ತಿಳಿದಿದೆಯಲ್ಲವೇ?

12333010a ತ್ರೀನ್ಪಿಂಡಾನ್ನ್ಯಸ್ಯ ವೈ ಪೃಥ್ವ್ಯಾಂ ಪೂರ್ವಂ ದತ್ತ್ವಾ ಕುಶಾನಿತಿ|

12333010c ಕಥಂ ತು ಪಿಂಡಸಂಜ್ಞಾಂ ತೇ ಪಿತರೋ ಲೇಭಿರೇ ಪುರಾ||

ಹಿಂದೆ ನೆಲದ ಮೇಲೆ ದರ್ಭೆಗಳನ್ನು ಹಾಸಿ ಅವುಗಳ ಮೇಲೆ ಮೂರು ಪಿಂಡಗಳನ್ನಿತ್ತು ಪೂಜಿಸುವುದರ ಕಾರಣವೇನು? ಹಿಂದೆ ಪಿತೃಗಳು ಪಿಂಡಸಂಜ್ಞೆಯನ್ನು ಹೇಗೆ ಪಡೆದುಕೊಂಡರು?”

12333011 ನರನಾರಾಯಣಾವೂಚತುಃ|

12333011a ಇಮಾಂ ಹಿ ಧರಣೀಂ ಪೂರ್ವಂ ನಷ್ಟಾಂ ಸಾಗರಮೇಖಲಾಮ್|

12333011c ಗೋವಿಂದ ಉಜ್ಜಹಾರಾಶು ವಾರಾಹಂ ರೂಪಮಾಶ್ರಿತಃ||

ನರನಾರಾಯಣರು ಹೇಳಿದರು: “ಹಿಂದೆ ಸಾಗರಮೇಖಲೆ ಧರಣಿಯು ನಷ್ಟವಾದಾಗ ಗೋವಿಂದನು ವರಾಹ ರೂಪವನ್ನು ತಾಳಿ ಬಹಳ ಬೇಗ ಮೇಲೆತ್ತಿದನು.

12333012a ಸ್ಥಾಪಯಿತ್ವಾ ತು ಧರಣೀಂ ಸ್ವೇ ಸ್ಥಾನೇ ಪುರುಷೋತ್ತಮಃ|

12333012c ಜಲಕರ್ದಮಲಿಪ್ತಾಂಗೋ ಲೋಕಕಾರ್ಯಾರ್ಥಮುದ್ಯತಃ||

ಆ ಪುರುಷೋತ್ತಮನು ಧರಣಿಯನ್ನು ಅದರ ಸ್ಥಾನದಲ್ಲಿ ಸ್ಥಾಪಿಸಿ ನೀರು-ಕೆಸರುಗಳಿಂದ ಲಿಪ್ತಾಂಗನಾಗಿ ಲೋಕಕಾರ್ಯವನ್ನು ಪ್ರಾರಂಭಿಸಿದನು.

12333013a ಪ್ರಾಪ್ತೇ ಚಾಹ್ನಿಕಕಾಲೇ ಸ ಮಧ್ಯಂದಿನಗತೇ ರವೌ|

12333013c ದಂಷ್ಟ್ರಾವಿಲಗ್ನಾನ್ಮೃತ್ಪಿಂಡಾನ್ವಿಧೂಯ ಸಹಸಾ ಪ್ರಭುಃ|

12333013e ಸ್ಥಾಪಯಾಮಾಸ ವೈ ಪೃಥ್ವ್ಯಾಂ ಕುಶಾನಾಸ್ತೀರ್ಯ ನಾರದ||

ನಾರದ! ಸೂರ್ಯನು ಹಗಲಿನ ಮಧ್ಯಭಾಗಕ್ಕೆ ಬಂದು ಮಧ್ಯಾಹ್ನಿಕದ ಕಾಲವು ಪ್ರಾಪ್ತವಾಗಲು ಪ್ರಭು ವರಾಹನು ತನ್ನ ಕೋರೆದಾಡೆಗಳಿಗೆ ಮೆತ್ತಿದ್ದ ಮಣ್ಣಿನಿಂದ ಮೂರು ಪಿಂಡಗಳನ್ನು ಮಾಡಿ, ನೆಲದ ಮೇಲೆ ದರ್ಬೆಗಳನ್ನು ಹಾಸಿ ಅದರ ಮೇಲೆ ಆ ಮೂರು ಪಿಂಡಗಳನ್ನು ಸ್ಥಾಪಿಸಿದನು.

12333014a ಸ ತೇಷ್ವಾತ್ಮಾನಮುದ್ದಿಶ್ಯ ಪಿತ್ರ್ಯಂ ಚಕ್ರೇ ಯಥಾವಿಧಿ|

12333014c ಸಂಕಲ್ಪಯಿತ್ವಾ ತ್ರೀನ್ಪಿಂಡಾನ್ ಸ್ವೇನೈವ ವಿಧಿನಾ ಪ್ರಭುಃ||

12333015a ಆತ್ಮಗಾತ್ರೋಷ್ಮಸಂಭೂತೈಃ ಸ್ನೇಹಗರ್ಭೈಸ್ತಿಲೈರಪಿ|

12333015c ಪ್ರೋಕ್ಷ್ಯಾಪವರ್ಗಂ ದೇವೇಶಃ ಪ್ರಾಙ್ಮುಖಃ ಕೃತವಾನ್ಸ್ವಯಮ್||

12333016a ಮರ್ಯಾದಾಸ್ಥಾಪನಾರ್ಥಂ ಚ ತತೋ ವಚನಮುಕ್ತವಾನ್|

ಅನಂತರ ಅವನು ತನ್ನನ್ನೇ ಉದ್ದೇಶಿಸಿ ಯಥಾವಿಧಿಯಾಗಿ ಪಿತೃಕಾರ್ಯವನ್ನು ನಡೆಸಿದನು. ಪ್ರಭುವು ತನ್ನದೇ ವಿಧಿಯಿಂದ ಸಂಕಲ್ಪಮಾಡಿ ತನ್ನ ಶರೀರಶಾಖದಿಂದ ಹುಟ್ಟಿದ ಎಣ್ಣೆಯಿಂದ ಕೂಡಿದ ಎಳ್ಳುಗಳಿಂದ ಮೂರು ಪಿಂಡಗಳನ್ನೂ ಅಪ್ರದಕ್ಷಿಣವಾಗಿ ಪ್ರೋಕ್ಷಿಸಿದನು. ಇದರ ಕುರಿತು ಒಂದು ನಿಯಮವನ್ನು ಸ್ಥಾಪಿಸುವ ಸಲುವಾಗಿ ದೇವೇಶನು ಪೂರ್ವಾಭಿಮುಖವಾಗಿ ಕುಳಿದು ಈ ಮಾತುಗಳನ್ನಾಡಿದನು:

12333016c ಅಹಂ ಹಿ ಪಿತರಃ ಸ್ರಷ್ಟುಮುದ್ಯತೋ ಲೋಕಕೃತ್ ಸ್ವಯಮ್||

12333017a ತಸ್ಯ ಚಿಂತಯತಃ ಸದ್ಯಃ ಪಿತೃಕಾರ್ಯವಿಧಿಂ ಪರಮ್|

12333017c ದಂಷ್ಟ್ರಾಭ್ಯಾಂ ಪ್ರವಿನಿರ್ಧೂತಾ ಮಮೈತೇ ದಕ್ಷಿಣಾಂ ದಿಶಮ್|

12333017e ಆಶ್ರಿತಾ ಧರಣೀಂ ಪಿಂಡಾಸ್ತಸ್ಮಾತ್ಪಿತರ ಏವ ತೇ||

“ನಾನೇ ಎಲ್ಲ ಲೋಕಗಳ ಸೃಷ್ಟಿಕರ್ತ ಪಿತ. ಪರಮ ವಿತೃಕಾರ್ಯವಿಧಿಯನ್ನು ಚಿಂತಿಸಿತ್ತಿದ್ದಾಗ ನನ್ನ ಕೋರೆ ದಾಡೆಗಳಿಂದ ಮೂರು ಪಿಂಡಗಳು ದಕ್ಷಿಣದಿಕ್ಕಿನೆಡೆಗೆ ಭೂಮಿಯ ಮೇಲೆ ಬಿದ್ದವು. ಆದುದರಿಂದ ಈ ಮೂರು ಪಿಂಡಗಳೂ ಪಿತೃಸ್ವರೂಪಗಳೇ ಆಗಿವೆ.

12333018a ತ್ರಯೋ ಮೂರ್ತಿವಿಹೀನಾ ವೈ ಪಿಂಡಮೂರ್ತಿಧರಾಸ್ತ್ವಿಮೇ|

12333018c ಭವಂತು ಪಿತರೋ ಲೋಕೇ ಮಯಾ ಸೃಷ್ಟಾಃ ಸನಾತನಾಃ||

ಮೂರ್ತಿವಿಹೀನರಾದ ಪಿತೃಗಳು ನಾನು ಮಾಡಿದ ಈ ಮೂರು ಪಿಂಡಗಳ ರೂಪವನ್ನು ಧರಿಸಿದ್ದಾರೆ. ನಾನು ಸೃಷ್ಟಿಸಿದ ಇವರು ಲೋಕದಲ್ಲಿ ಸನಾತನ ಪಿತೃಗಳು ಎಂದೆನಿಸಿಕೊಳ್ಳಲಿ.

12333019a ಪಿತಾ ಪಿತಾಮಹಶ್ಚೈವ ತಥೈವ ಪ್ರಪಿತಾಮಹಃ|

12333019c ಅಹಮೇವಾತ್ರ ವಿಜ್ಞೇಯಸ್ತ್ರಿಷು ಪಿಂಡೇಷು ಸಂಸ್ಥಿತಃ||

ಈ ಮೂರು ಪಿಂಡಗಳಲ್ಲಿಯೂ ಪಿತ, ಪಿತಾಮಹ ಮತ್ತು ಪ್ರಪಿತಾಮಹನಾಗಿ ನಾನೇ ಇರುತ್ತೇನೆ ಎಂದು ತಿಳಿಯಬೇಕು.

12333020a ನಾಸ್ತಿ ಮತ್ತೋಽಧಿಕಃ ಕಶ್ಚಿತ್ಕೋ ವಾಭ್ಯರ್ಚ್ಯೋ ಮಯಾ ಸ್ವಯಮ್|

12333020c ಕೋ ವಾ ಮಮ ಪಿತಾ ಲೋಕೇ ಅಹಮೇವ ಪಿತಾಮಹಃ||

12333021a ಪಿತಾಮಹಪಿತಾ ಚೈವ ಅಹಮೇವಾತ್ರ ಕಾರಣಮ್|

ನನಗಿಂತಲೂ ಅಧಿಕನಾದವನು ಯಾರೂ ಇಲ್ಲ. ನನ್ನಿಂದಲೇ ಪೂಜಿಸಲ್ಪಡುವವನು ಯಾರಿದ್ದಾನೆ? ಈ ಲೋಕದಲ್ಲಿ ನನ್ನ ಪಿತನಾರು? ನಾನೇ ಪಿತಾಮಹ. ಪಿತಾಮಹನ ಪಿತನೂ ನಾನೇ. ನಾನೇ ಎಲ್ಲವಕ್ಕೂ ಕಾರಣನು.”

12333021c ಇತ್ಯೇವಮುಕ್ತ್ವಾ ವಚನಂ ದೇವದೇವೋ ವೃಷಾಕಪಿಃ||

12333022a ವರಾಹಪರ್ವತೇ ವಿಪ್ರ ದತ್ತ್ವಾ ಪಿಂಡಾನ್ಸವಿಸ್ತರಾನ್|

12333022c ಆತ್ಮಾನಂ ಪೂಜಯಿತ್ವೈವ ತತ್ರೈವಾದರ್ಶನಂ ಗತಃ||

ವಿಪ್ರ! ಈ ಮಾತನ್ನು ಹೇಳಿ ದೇವದೇವ ವೃಷಾಕಪಿಯು ವರಾಹಪರ್ವತದ ಮೇಲೆ ವಿಸ್ತಾರ ಪಿಂಡಗಳನ್ನು ನೀಡಿ ತನ್ನನ್ನೇ ಪೂಜಿಸಿಕೊಂಡು ಅಲ್ಲಿಯೇ ಅಂತರ್ಧಾನನಾದನು.

12333023a ಏತದರ್ಥಂ ಶುಭಮತೇ ಪಿತರಃ ಪಿಂಡಸಂಜ್ಞಿತಾಃ|

12333023c ಲಭಂತೇ ಸತತಂ ಪೂಜಾಂ ವೃಷಾಕಪಿವಚೋ ಯಥಾ||

ಶುಭಮತೇ! ಪಿಂಡಸಂಜ್ಞಿತರಾದ ಪಿತೃಗಳ ಅರ್ಥವೇ ಇದು. ವೃಷಾಕಪಿಯ ವಚನದಂತೆ ಪಿತೃಗಳು ಸತತವೂ ಪೂಜಿಸಲ್ಪಡುತ್ತಾರೆ.

12333024a ಯೇ ಯಜಂತಿ ಪಿತೃನ್ದೇವಾನ್ಗುರೂಂಶ್ಚೈವಾತಿಥೀಂಸ್ತಥಾ|

12333024c ಗಾಶ್ಚೈವ ದ್ವಿಜಮುಖ್ಯಾಂಶ್ಚ ಪೃಥಿವೀಂ ಮಾತರಂ ತಥಾ|

12333024e ಕರ್ಮಣಾ ಮನಸಾ ವಾಚಾ ವಿಷ್ಣುಮೇವ ಯಜಂತಿ ತೇ||

ಯಾರು ಕರ್ಮ, ಮನಸ್ಸು ಮತ್ತು ಮಾತುಗಳ ಮೂಲಕ ಪಿತೃಗಳನ್ನೂ, ದೇವತೆಗಳನ್ನೂ, ಗುರುಗಳನ್ನೂ, ಅತಿಥಿಗಳನ್ನೂ, ಗೋವುಗಳನ್ನು, ದ್ವಿಜಮುಖ್ಯರನ್ನೂ, ಪೃಥ್ವಿಯನ್ನೂ, ತಾಯಿಯನ್ನೂ ಆರಾಧಿಸುವರೋ ಅವರು ವಿಷ್ಣುವನ್ನೇ ಪೂಜಿಸಿದಂತೆ.

12333025a ಅಂತರ್ಗತಃ ಸ ಭಗವಾನ್ಸರ್ವಸತ್ತ್ವಶರೀರಗಃ|

12333025c ಸಮಃ ಸರ್ವೇಷು ಭೂತೇಷು ಈಶ್ವರಃ ಸುಖದುಃಖಯೋಃ|

12333025e ಮಹಾನ್ಮಹಾತ್ಮಾ ಸರ್ವಾತ್ಮಾ ನಾರಾಯಣ ಇತಿ ಶ್ರುತಃ||

ಆ ಭಗವಾನನು ಸತ್ತ್ವನಾಗಿ ಸರ್ವ ಶರೀರಗಳಲ್ಲಿ ಅಂತರ್ಗತನಾಗಿದ್ದಾನೆ. ಸುಖದುಃಖಗಳಿಗೆ ಈಶ್ವರನಾದ ಅವನು ಸರ್ವಪ್ರಾಣಿಗಳಲ್ಲಿಯೂ ಸಮರೂಪಿಯಾಗಿದ್ದಾನೆ. ನಾರಾಯಣನು ಮಹಾನ್ ಮಹಾತ್ಮನೆಂದೂ ಸರ್ವಾತ್ಮನೆಂದು ಶ್ರುತಿಯು ಹೇಳುತ್ತದೆ.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ತ್ರಿತ್ರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ಮೂರನೇ ಅಧ್ಯಾಯವು.

Peacock Feathers White Background — Stock Photo © calvste #191541982

Comments are closed.